My Blog List

Sunday, December 30, 2007

"RECHARGE WELLS" Percolating Young Minds

Dr. Rajendra Singh, Magasaysay winner and 'Gandhi of Water' has planned nationwide people's movement to protect and rejuvenate rivers of India. Here is a small report on his plan (See another article below this article).

Paryaya presents one more story of students of a school in Bangalore contributing to conserve water through rain water harvesting.

This report has been contributed by Shree Padre, the 'Rainwater Man of Karnataka and Kerala'.


A far-sighted educational trust is reaping the benefit of digging recharge wells long before the need for them. While its own decision is a lesson in conservation, the institution is also going further, imbibing ecological concerns into the students too.

Shree Padre

Usually, people conserve water when they are forced to, during shortages. It is rare to find those who decide, with foresight, that they will take up conservation long before they are faced with any difficulty. Vagdevi Vilas Educational Institutions at Munne Kolalu, near Bangalore, is one such exception.

The three-year-old institution, with a total student count of 2300, is located on an eight-acre plot. There is a reliable supply of water that is available from the two bore wells that were dug initially. Yet, chairman of the institution, K Harish was not content. He had had five rain pits dug at strategic locations on the premises, to ensure that most of the run-off is returned to the earth's womb. These structures, though they are called rain pits, are in fact a kind of percolation (recharge) wells. Instead of digging an empty well, the school authorities have filled the cavity with layers of filter media. Sixteen feet deep, about four feet in diameter, lined with cement rings. Run-off from the storm water drains is emptied into these wells.

The annual rainfall in this area is 900 mm, meaning that each acre of land receives 36 lakh litres of water every year. Observes Harish, "Six acres of our campus are zero run-off areas. Only when there is an occasional heavy downpour, water flows out from the campus."

The percolation has paid off. This year, five more recharge wells were dug, two of them very near the earlier ones. What surprised everybody was that these two wells struck water at 18 feet. Recalls Harish, "It was 20 May when we started digging these wells. The early summer rains hadn't yet arrived. In one well, we got half a foot and in another there was one and half feet of water." In other words, these recharge wells have touched the water table.

That's remarkable, considering how much recent increases in pumping of groundwater have reduced the overall ground water levels. At the Lakshminarayana temple half a kilometre away, the 30-feet-deep open well has dried up. But here in the school campus, water is available at little more than half the temple well's depth.

Lessons from an earlier battle
Why did a brand new institution still developing necessary facilities like buildings and other amenities decide to harvest rain despite having adequate water? The answer lies in a lesson learned from an earlier battle.

There is a huge, centuries-old tank - kowdenahalli gangadharabhattana kere - in Ramamoorthinagar locality, where Harish lives. To save this tank from encroachment, a long-drawn social and legal battle was fought by the local citizens' committee since the 1990s. Harish was among those who led this agitation. "Thanks to our efforts, if the open wells have water in our Ramamoorthinagar today, it's because of the saved tank," he says. This experience made him very conscious about water conservation, and he decided that he would be fore-armed with reserves of water for the school, and pre-empt any scarcities.

A boom in recharge wells
Though there are thousands of yielding open wells in the city, the habit of digging new open wells had come to a halt in recent years. Now, thanks to the interest in rain harvesting, especially by organisations like locally-based Rainwater Club, many institutions and corporate houses are opting for open wells only meant to put the rainwater in.

S Vishwanath of Rainwater Club, a strong advocate of recharge wells, suggests: "Recharge wells might be included as part of the new construction design itself. Depending on the diameter and depth, digging a new well costs anywhere from Rs.8000 to 12,000. The capacity of a recharge well of one metre diameter and six metres depth is about 5000 litres. In a year, anywhere between one lakh and 10 lakh litres can be recharged by a single well."

Though the initial expenditure appears high, recharge wells are better for bigger premises because they have more recharging capacity. The standing water column inside the well also exerts hydraulic pressure, making the percolation faster. It helps in making bigger premises zero run-off. More than 1500 recharge wells have been dug in the city. They are ideal for big individual households, apartments, layouts, industries and institutions. Members of local Bovi community are experts in digging such wells. Three to four members finish the job in two to three days.

Three years ago, when the boom in recharge wells had just begun, Vishwanath had expressed a hope. "If more and more people make their premises zero run off and the water table is consciously brought up by communities, who knows, why can't a recharge well start acting as a service well too?" He was dreaming of a day when water tables would be high enough that the recharge wells, meant for depositing water into the ground, begin giving back water, even if only for a few months each year.

The dream has now been realised in this sprawling campus of Munne Kolalu. Although it is December now, one of the recharge wells still has about 12 to 18 inches of water, but nobody is regularly using it. Harish has tasted the water; he says, "it tastes like any other soft water from a well."

Reaching even higher
This year, before the monsoon rains arrived, a huge underground rainwater storage tank was built at Vagdevi campus. This is fed with the roof water from the buildings on the campus. The school has distributed handbills on the subject to all the students' homes. On the day the tank was inaugurated, students took a procession in the area shouting slogans on rain harvesting. A slide-show on the subject taught them more. They intend to use the stored water for irrigating the garden and the trees.

The school also gives importance to making the students water-literate. The school prospectus contains a message about rain harvesting. Quiz and elocution competitions are held to sensitise students on the subject. Apart from all these formal efforts, Harish and his wife Vasantha leave no opportunity to teach small student groups the necessity of conserving water. Nor is water the only focus; their aim is to instil a broad eco-literacy in the young minds amidst their hectic school activities. Hundreds of trees are planted in the campus each one carrying its biological name.

Students are also taken to see the cattle sheds, vegetable kitchen garden, and the school's own Butterfly Park. In the near future, the school will also install some rain barrels, to educate and inspire students about the instant use of rainwater.

Vagdevi Vilas School can be reached Munne Kolalu, Marathahalli Post, Bangalore 560037. Ph: 080- 65605850,28495850; email: info@vvi.edu.in mailto: info@vvi.edu.in.

People's movement for Rejuvanate Rivers


Dr. Rajendra Singh, Magasaysay winner and 'Gandhi of Water' has planned nationwide people's movement to protect and rejuvenate rivers of India. Here is a small report on his plan. Paryaya presents one more story of students of a school in Bangalore contributing to conserve water through rain water harvesting. This report has been contributed by Shree Padre, the Rainwater Man of Karnataka and Kerala.

ನದಿ ಸಂರಕ್ಷಣೆ, ಪುನಶ್ಚೇತನಕ್ಕೆ

ಜನಾಂದೋಲನ


ನದಿಗಳನ್ನು ಪರಸ್ಪರ ಜೋಡಿಸುವುದರಿಂದ ಭಾರತವನ್ನು ಪ್ರವಾಹ ಮುಕ್ತ ಹಾಗೂ ಬರಗಾಲಮುಕ್ತ ನಾಡನ್ನಾಗಿ ಮಾಡಬಹುದು ಎಂಬುದು ನಿಜವಲ್ಲ. ಆದರೆ ನದಿ ಸಂರಕ್ಷಣೆಯ ವಿಚಾರಕ್ಕೆ ಜನರ ಮೆದುಳು- ಮನಸ್ಸುಗಳನ್ನು ಜೋಡಿಸುವುದರಿಂದ ನಮ್ಮ ಭೂಮಿ, ಪರಿಸರ ಖಂಡಿತ ಉಳಿಯುತ್ತದೆ.

ನೆತ್ರಕೆರೆ ಉದಯಶಂಕರ

ಭಾರತದ ನದಿಗಳ ಪುನಶ್ಚೇತನ ಹಾಗೂ ರಕ್ಷಣೆಗಾಗಿ 2008ರ ಜನವರಿಯಲ್ಲಿ ಆಂದೋಲನವೊಂದು ಆರಂಭವಾಗಲಿದೆ. ನದಿಗಳ ಸಂರಕ್ಷಣೆ ಸಲುವಾಗಿ ಆರಂಭವಾಗಲಿರುವ 'ಜನಾಂದೋಲನ'ದಲ್ಲಿ ಜನತೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅರಿವು ಮೂಡಿಸುವ ಸಲುವಾಗಿ ದೇಶಾದ್ಯಂತ 14 ತಂಡಗಳು ಪಾದಯಾತ್ರೆ ನಡೆಸಲಿವೆ.

ಈ ಆಂದೋಲನದ ಉದ್ಧೇಶ: ನದಿಗಳಿಗೆ ಪಟ್ಟಣಗಳ ಒಳಚರಂಡಿ ನೀರು ತುಂಬುವುದನ್ನು ತಡೆಗಟ್ಟುವುದು. ಬಹಳಷ್ಟು ನದಿಗಳು ಸತ್ತು ಹೋಗುತ್ತಿರುವುದು ಈ ರೀತಿ ಒಳಚರಂಡಿ ನೀರು, ಕಾರ್ಖಾನೆಗಳ ಮಲಿನ ನೀರನ್ನು ನದಿಗಳಿಗೆ ತುಂಬುವುದರಿಂದಲೇ. ಇದಕ್ಕೆ ಬೆಂಗಳೂರಿನಲ್ಲಿ ಈಗ ಕಣ್ಮರೆಯಾಗಿರುವ ವೃಷಭಾವತಿ ನದಿಯೇ ನಮ್ಮ ಕಣ್ಮುಂದೆ ಇರುವ ಉದಾಹರಣೆ.

ಉತ್ತರ ಭಾರತದಲ್ಲಿ ಹಿಮಾಲಯದಲ್ಲಿ ಹುಟ್ಟುವ 14 ಸಣ್ಣ ನದಿಗಳು ಒಂದಕ್ಕೊಂದು ಜೊತೆಗೂಡುತ್ತಾ ಗಂಗಾ ಹಾಗೂ ಯಮುನಾ ನದಿಗಳಾಗುತ್ತವೆ. ಆದರೆ ಉತ್ತರ ಕಾಶಿ ಬಳಿ ಈ ಭಾಗೀರಥಿ ನದಿಗೆ ಒಳಚರಂಡಿ ನೀರನ್ನು ಸೇರಿಸಲಾಗುತ್ತಿದೆ. ನಂತರ ಹೀಗೆ ಅಲ್ಲಲ್ಲಿ ಮಾಲಿನ್ಯ ಸೇರಿಸಿಕೊಳ್ಳುತ್ತಾ ಸಾಗುವ ಗಂಗಾನದಿ ಎಷ್ಟು ಮಲಿನಯುಕ್ತವಾಗಿದೆ ಎಂದರೆ ಅದನ್ನು ಸ್ವಚ್ಛಗೊಳಿಸಲು ಎರಡು ದಶಕ ಅಂದರೆ 1987ರಷ್ಟು ಹಿಂದೆಯೇ ದೊಡ್ಡ 'ಕ್ರಿಯಾಯೋಜನೆ'ಯನ್ನೇ ರೂಪಿಸಬೇಕಾಯಿತು. ಆದರೆ ಇಂದಿಗೂ ಗಂಗೆ ಸಂಪೂರ್ಣ ಮಲಿನಮುಕ್ತಳಲ್ಲ!

ಇದು ಕೇವಲ ಗಂಗೆಯ ಕಥೆ ಅಲ್ಲ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಬಹುತೇಕ ಎಲ್ಲ ನದಿಗಳ ನೀರನ್ನೂ ಗಟಾರದ ನೀರು ಇಲ್ಲವೇ ಕಾರ್ಖಾನೆಗಳ ನೀರು ಸೇರಿಸಿ ಮಲಿನಗೊಳಿಸುವ ಕೆಲಸ ನಿರಂತರ ನಡೆಯುತ್ತಿದೆ.

ನದಿಗಳನ್ನು ಕೊಲ್ಲುವ ಇಂತಹ ಕೃತ್ಯಗಳನ್ನು ತಡೆಗಟ್ಟಲು ಯತ್ನ ನಡೆಯದೇ ಹೋದರೆ ಭವಿಷ್ಯ ಅಂಧಕಾರಮಯವಾಗುತ್ತದೆ. ಹೀಗಾಗಿ ಯಾವುದೋ ಒಂದು ಹಂತದಲ್ಲಿ ನದಿಗಳ ನೀರಿನ ನೈರ್ಮಲ್ಯ ಕಾಯ್ದುಕೊಳ್ಳುವ ಹಾಗೂ ಅವುಗಳನ್ನು ಪುನಶ್ಚೇತನ ಗೊಳಿಸುವ ಕಾರ್ಯ ಆರಂಭಿಸಲೇ ಬೇಕಾಗುತ್ತದೆ. ಇದೀಗ ಅಂತಹ ಆಂದೋಲನಕ್ಕೆ ಭಾರತ ಸಜ್ಜಾಗುತ್ತಿದೆ.

ಬೆಂಗಳೂರಿನ ಕೆಂಪೇಗೌಡ ನಗರದ ಗವಿಪುರದಲ್ಲಿನ ಭಾರತೀಯ ಭೂವಿಜ್ಞಾನ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ 'ನೀರಿನ ಗಾಂಧಿ' ಎಂದೇ ಖ್ಯಾತಿ ಪಡೆದಿರುವ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ರಾಜೇಂದ್ರ ಸಿಂಗ್ ಈ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ರಾಜಸ್ಥಾನದಲ್ಲಿ ಮಳೆನೀರು ಕೊಯ್ಲು ವಿಧಾನಗಳನ್ನು ಬಳಸಿ ನದಿಗಳಿಗೆ ಮರುಜನ್ಮ ನೀಡಿ ರೈತರ ಬದುಕಿಗೆ ಸಂಜೀವಿನಿಯಾದ ಮಹಾನ್ ಹೋರಾಟಗಾರ ಈ ರಾಜೇಂದ್ರ ಸಿಂಗ್.

ನದಿಗಳ ಪುನಶ್ಚೇತನ ಆಂದೋಲನ ಬಗ್ಗೆ ಜನಜಾಗೃತಿ ಮೂಡಿಸಲು ರಚಿಸಲಾಗಿರುವ ಪ್ರತಿ ತಂಡವೂ ಒಂದೊಂದು ರಾಜ್ಯದ ಒಂದೊಂದು ನದಿಯನ್ನು ಆಯ್ಕೆ ಮಾಡಿಕೊಂಡು ಈ ಬಗ್ಗೆ ಜಾಗೃತಿ ಮೂಡಿಸಲಿದೆ.

ಕಾನೂನನ್ನು ಉಲ್ಲಂಘಿಸಿಯಾದರೂ ಸರಿ ನದಿಗಳ ಸಂರಕ್ಷಣೆ ಅಗತ್ಯ ಎಂಬ ಮನೋಭಾವ ಜನರಲ್ಲಿ ಮೂಡಬೇಕು. ಆಗ ಮಾತ್ರ ನಾವು ಸ್ವಚ್ಛ ನೀರು, ಸುಂದರ ಪರಿಸರ ಹೊಂದಲು ಸಾಧ್ಯ ಎಂಬುದು ರಾಜೇಂದ್ರ ಸಿಂಗ್ ಅಭಿಮತ.

ಸಮಾಜದ ಹಿತಕ್ಕಾಗಿ ಕಾನೂನುಗಳನ್ನು ಉಲ್ಲಂಘಿಸಿದರೆ ತಪ್ಪೇನಿಲ್ಲ. ಅಧಿಕಾರಿಗಳಿಗೆ ಸಮಸ್ಯೆಗಳ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲು ಸಂಘರ್ಷ ಅನಿವಾರ್ಯ. ಒಮ್ಮೆ ಅವರು ನಮ್ಮ ದಾರಿಗೆ ಬಂದ ಮೇಲೆ ಅವರ ಸಹಕಾರದಿಂದಲೇ ಸಮಸ್ಯೆಗಳನ್ನು ಬಗೆಹರಿಸಬಹುದು. ಮಹಾತ್ಮ ಗಾಂಧಿ ಕೂಡಾ ಮೊದಲು ಅಸಹಕಾರ ಚಳವಳಿ ಆರಂಭಿಸಿ ನಂತರ ಬ್ರಿಟಿಷರ ವಿರುದ್ಧ ತಿರುಗಿ ನಿಂತರು ಎನ್ನುವ ಸಿಂಗ್ ಉತ್ತರಕಾಶಿಯಲ್ಲಿ ಗಂಗಾನದಿಗೆ ಒಳಚರಂಡಿ ನೀರನ್ನು ಬಿಡುವ ಸ್ಥಳದಲ್ಲೇ ಮೊದಲ ಹೋರಾಟಕ್ಕೆ ನಾಂದಿ ಆಗಲಿದೆ ಎನ್ನುತ್ತಾರೆ.

ಸ್ಥಳೀಯ ಜನತೆ ಮತ್ತು ಜನ ಪ್ರತಿನಿಧಿಗಳಿಗೆ ನೀರಿನ ಮಹತ್ವ ವಿವರಿಸಿ ನದಿಯನ್ನು ಮಲಿನಗೊಳಿಸಬಾರದು ಎಂದು ಮನವಿ ಮಾಡಲಾಗುವುದು. ಮನವಿಗೆ ಸ್ಪಂದಿಸದೇ ಇದ್ದಲ್ಲಿ ಒಳಚರಂಡಿ ನೀರನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎನ್ನುತ್ತಾರೆ ರಾಜೇಂದ್ರ ಸಿಂಗ್.

`ಹಿಂದಿನ ಕೇಂದ್ರ ಸರ್ಕಾರ ನದಿಗಳ ಜೋಡಣೆ ಮಾಡುವುದಾಗಿ ಘೋಷಿಸಿ ಸುಮ್ಮನಾಯಿತು. ಹೊಸ ಸರ್ಕಾರ ವಿಕೇಂದ್ರಿಕೃತ ನೀರಿನ ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸುವುದಾಗಿ ಪ್ರಕಟಿಸಿತು. ಆದರೆ ಈ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೆಲಸವೂ ಆಗಿಲ್ಲ. ಜಲ ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ಕೇಂದ್ರ ಸರ್ಕಾರ ವೆಚ್ಚ ಮಾಡಿರುವುದು ಕೋಟ್ಯಂತರ ರೂಪಾಯಿ. ಗಂಗಾ ಕ್ರಿಯಾ ಯೋಜನೆಗೆ 1987ರಿಂದ ಈವರೆಗೆ 7000 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಯಮುನಾ ನದಿ ಯೋಜನೆಗೆ ಎರಡು ವರ್ಷಗಳಲ್ಲಿ 2000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರ ಫಲಿತಾಂಶ ಮಾತ್ರ ಸೊನ್ನೆ ಎಂಬುದು ರಾಜೇಂದ್ರ ಅವರ ವಿಷಾದ.

ನದಿಗಳನ್ನು ಪರಸ್ಪರ ಜೋಡಿಸುವುದರಿಂದ ಭಾರತವನ್ನು ಪ್ರವಾಹ ಮುಕ್ತ ಹಾಗೂ ಬರಗಾಲಮುಕ್ತ ನಾಡನ್ನಾಗಿ ಮಾಡಬಹುದು ಎಂಬುದು ನಿಜವಲ್ಲ. ಆದರೆ ನದಿ ಸಂರಕ್ಷಣೆಯ ವಿಚಾರಕ್ಕೆ ಜನರ ಮೆದುಳು- ಮನಸ್ಸುಗಳನ್ನು ಜೋಡಿಸುವುದರಿಂದ ನಮ್ಮ ಭೂಮಿ, ಪರಿಸರ ಖಂಡಿತ ಉಳಿಯುತ್ತದೆ. ಆದ್ದರಿಂದ ನದಿ ಸಂರಕ್ಷಣೆಯ ಆಂದೋಲನದಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳುವಂತೆ ಮಾಡುವುದು ತುರ್ತಿನ ಕಾರ್ಯ. 2008ರ ಇಡೀ ವರ್ಷವನ್ನು ಈ ಕಾರ್ಯಕ್ಕಾಗಿ ಮುಡುಪಾಗಿ ಇಡಲಾಗುವುದು ಎನ್ನುತ್ತಾರೆ ರಾಜೇಂದ್ರಸಿಂಗ್.

ಉತ್ತರ ಭಾರತದಲ್ಲಿ ಮಾಡಿದಂತೆ ದಕ್ಷಿಣ ಭಾರತದ ಪ್ರತಿ ರಾಜ್ಯದಲ್ಲೂ ನದಿ ರಕ್ಷಣೆಗೆ ಆಂದೋಲನ ನಡೆಸಲಾಗುವುದು. ಇದಕ್ಕೆ ಸ್ಥಳೀಯರ ಸಹಕಾರ ಬೇಕು ಎಂಬುದು ಅವರ ಕೋರಿಕೆ.

ದೆಹಲಿಯಲ್ಲಿ ಯಮುನಾ ನದಿಯ ದಡದಲ್ಲಿ ಕ್ರೀಡಾ ಗ್ರಾಮ ನಿರ್ಮಾಣಕ್ಕೂ ವಿರೋಧ ಇದೆ. ಕಳೆದ 150 ದಿನಗಳಿಂದ ಕ್ರೀಡಾ ಗ್ರಾಮ ನಿರ್ಮಾಣ ವಿರೋಧಿಸಿ ನಿರಂತರ ನಿರಶನ ನಡೆದಿದೆ. ನದಿ ದಡವನ್ನು ಆಕ್ರಮಿಸಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಸಂವಿಧಾನದಲ್ಲೂ ಇದಕ್ಕೆ ಅವಕಾಶವಿಲ್ಲ ಎಂಬುದು ಡಾ. ರಾಜೇಂದ್ರಸಿಂಗ್ ಪ್ರತಿಪಾದನೆ.

ಬೆಂಗಳೂರಿನ ಸ್ವರಾಜ್ ಸಂಸ್ಥೆಯು ಡಾ. ರಾಜೇಂದ್ರ ಸಿಂಗ್ ಅವರೊಂದಿಗಿನ ಸಂವಾದ ಕಾರ್ಯಕ್ರಮವನ್ನು (29-12-2007ರಂದು) ಸಂಘಟಿಸಿತ್ತು.

ಮಾಜಿ ಶಾಸಕ ಡಿ.ಆರ್. ಪಾಟೀಲ್, ಸ್ವರಾಜ್ ಸಂಸ್ಥೆಯ ನಿರ್ದೇಶಕಿ ಭಾರತಿ ಪಟೇಲ್, ಭಾರತೀಯ ಭೂವಿಜ್ಞಾನ ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಶ್ರೀಕಂಠಯ್ಯ, ಕಾರ್ಯದರ್ಶಿ ಸಾವ್ಕಾರ್ ಮತ್ತಿತರರು, ಭೂಗರ್ಭ ತಜ್ಞರು, ಪರಿಸರ ತಜ್ಞರು, ಜಲ ಸಂರಕ್ಷಣಾ ಕಾರ್ಯಕರ್ತರು 'ಸಂವಾದ'ದಲ್ಲಿ ಪಾಲ್ಗೊಂಡಿದ್ದರು.

(ಚಿತ್ರ: ಡಾ. ರಾಜೇಂದ್ರಸಿಂಗ್ ನದಿ ಸಂರಕ್ಷಣಾ ಆಂದೋಲನ ಬಗ್ಗೆ ವಿವರಣೆ ನೀಡುತ್ತಿರುವುದು.)

Tuesday, December 25, 2007

Is this type of cruel death Justified ?

Seven Judge Constitutional Bench of Supreme Court of India headed by Chief Justice R.C. Lahoti, in its judgement upholding the ban on cow slaughter on 26-10-2005 has discussed and noted that In India’s 6.30 lakh villages, five crore employment opportunities can be generated by cow.

Nethrakere Udaya Shankara

First of all I must thank all readers of this blog, like Jayakishore Bhat, Dr. Jayagovinda (Sahasraksha Vaidya Shala Ukkinadka), Shree Padre, Shreevatsa Joshi, Shreedhar Nayak, Ganadalu Shreekanta, Rajesh Hegade, Radhakrishna Bhadti, Girish and others who responded through E-mail, Telephone or by recording their feelings in the comments section of the blog. Dr. Jayagovinda has recorded his appreciation saying that ‘a great work, let the farmers find solution to their severe problems they are facing now a days, through Paryaya.’ I thank all of you once again for your responses.

Mr. Jayakishor Bhat has recorded his valuable thought provoking comment on the article "Manavanaguveya Illa Danavanaguveya?'. Definitely such comments will lead us to think deeply on the issues which our society could take note of and act suitably.

I will give the comment of Mr. Jayakishor Bhat here and record my opinion on the subject. I also request you to join the discussion:

Dear Nethrakere, Article is indeed thought provoking. But there are some other issues as well; that you might have known if you are into cow rearing...The management of "unproductive" animals itself is a big issue with small farmers. Some times it accounts for heavy loss rather than profits...When you say about nature, natural living and all, one should live as per the laws of nature and all...More precisely according to me rearing cow is itself against nature. Coz you just do not have right to tie ropes to these innocent animals in a shed and...Using them for our own personal needs...and indeed you must have to drink milk only if cow gives it to you..!!!Is this practicable?Similarly, what you are saying is also impractical. It’s just ideal kind of situation which doesn't exist at all...What do you say?

-Jayakishore


Yes. Mr. Jayakishor, What you think is correct. But who is responsible for this? Is this problem man made or animal made? Why animals should suffer for greediness of human beings? Why they should be killed in such inhuman way as shown in the picture above?

If you go to the root, definitely one can realize that the whole problem lies with human being and his greediness and not with any animal whether it is a cow, calf, bullock, sheep, chicken or fish.
It is man who is making use or misuse of these animals and nature’s gifts like tree and water. Primarily, Developments or what we 'human beings' call 'Progress' were started with the agriculture and animal husbandry. For cultivation, transportation and to feed milk to our children, we started animal husbandry long ago.

In the early stages, man considered these animals as members of the family and not as slaves. He fed them with all love and affection. He utilized not only the milk of cow but also used cow dung and cow urine as fertilizers to his crops. Cows and bullocks left free to wander in the gomalas and return to homes in the evenings. (They were not tied in a shed for the whole day as you explained, in those days.) People worshipped the cows and trees to express their gratitude towards them. As senior journalist Mr. Nagesh Hegade rightly said in his article in Adike Pathrike (December 2007), at that time farmers had no responsibility of feeding the entire nation. He used to cultivate land just to feed his family and he never considered it as business to gain profit.

But problem started when people became greedy and wanted to gain more. It affected farm sector also. Farmers were forced to cultivate more and produce more. In the name of progress farmer was forced to adopt modern techniques for cultivation. Tractors came to the place of bullocks to plough the fields, and motor bikes, cars came to the place of bullock carts. Animal husbandry or cow rearing also became the business. Foreign/ Jersey Cows came to the place of Indian Cows as they gave more milk and these foreign/ Jersey cows were tied in the sheds for whole day and became the milk giving machines.


These developments led the farmers to think that bullocks are useless and unproductive. They forgot that they treated these animals as their family members since ages! And they started to sell these bullocks to slaughter houses. They began to sell old cows too to slaughter houses as they felt they are useless after becoming old. In the name of development we finished the gomalas also and converted them to sites for constructing buildings or converted them to horticultural farms with the object of gaining more profit.


Due to modernization, our farmers forgot the use of cheap natural fertilizer made of cow dung and urine and started to use chemical fertilizers to their farms. This increased the cost of cultivation. I need not tell more as all of us seeing the impact of this. More than 1.5 lakh farmers committed suicide since a decade due to heavy debt and not getting fair price for their crops. We must note that though the cost of farming increased due to modernization, prices of agricultural products didn't rose proportionately and naturally farmers failed to repay their debts which led them to commit suicides.


Just think, in the process of progress we lost the affection towards the animals which served us for their entire life and we resort to slaughter the cows and bullocks after they become old and if we felt that they are ‘unproductive’. What will happen if same yardstick applied to human beings also?


We claim, old people though they are physically weak, could enrich us by their experience, isn't it?


Then why should we send the cows or bullocks to slaughterhouses? Plenty of researches have shown that Cow / bullock urine has high medicinal properties and cow dung is the best fertilizer to our farms. Getting Bio gas from Cow dung and urine is well known fact to us.

Then why can’t we make use of this? Cow or Ox gives urine and dung till its death. Then why should we think that they are unproductive after certain age?

Don't you think effort of Shree Raghaveshwar Bharathi Swamiji of Ramachandrapura Math to protect and conserve Indian Cows is appreciable in this context?

We can’t go back from the process of development which started with the cultivation making use of cows and bullocks. And after using them as ladder to reach this height of progress, slaughtering them in such a crude way could never be considered as humane. In the changed situation, at least we can use the bullocks to generate electricity using generator, to get natural manure to our fields and to get urine for medical purposes instead of sending them to slaughter houses. (Seven Judge Constitutional Bench of Supreme Court of India headed by Chief Justice R.C. Lahoti, in its judgment upholding the ban on cow slaughter on 26-10-2005 has discussed and noted that In India’s 6.30 lakh villages, five crore employment opportunities can be generated by cow. I will write more about this and some other information on such successful efforts in future to enlighten readers and to carry forward this discussion further.)

Such innovative thinking and works though start in a small way could bring a massive change in the society, because all of us know that every river has the humble beginning.

Thursday, December 20, 2007

This is Tulunadu Panchanga

ಇದು 'ತುಳುನಾಡು

ಪಂಚಾಂಗ'


ದಕ್ಷಿಣ ಕರಾವಳಿಯ ಯಕ್ಷಗಾನ ಪ್ರಭೇದ ತೆಂಕು ತಿಟ್ಟಿನ ಪ್ರಸಂಗಗಳಲ್ಲಿ ಬರುವ ದೇವರ ವೇಷಭೂಷಣ, ಮುಖವರ್ಣಿಕೆಗಳು ಇಲ್ಲಿವೆ. ಶ್ರೀದೇವಿ, ನರಸಿಂಹ, ಈಶ್ವರ, ಶ್ರೀರಾಮ, ವೀರಭದ್ರ, ಅರ್ಧನಾರೀಶ್ವರ, ನಾಗರಾಜ, ಶ್ರೀಕೃಷ್ಣ, ಹನುಮಂತ, ಭೂ ವರಾಹ, ಶನೀಶ್ವರ, ಗರುಡ ವೇಷಗಳ ಮೋಹಕ ಚಿತ್ರಗಳು ಕಣ್ಸೆಳೆಯುತ್ತವೆ
.

ನೆತ್ರಕೆರೆ ಉದಯಶಂಕರ

ಐತಾರ, ಸೋಮಾರ, ಅಂಗಾರೆ, ಬುದಾರ, ಗುರುವಾರ, ಸುಕ್ರಾರ, ಸನಿಯಾರ ಎಂಬುದು ವಾರದ ಏಳು ದಿನಗಳ ಹೆಸರುಗಳು ಎಂಬುದು ನಿಮಗೆ ಗೊತ್ತೆ? ಈ ಹೆಸರುಗಳು ಕರ್ನಾಟಕದ ಭಾಗವೇ ಆಗಿರುವ ಕರಾವಳಿ ಕರ್ನಾಟಕ ತುಳುನಾಡಿನ ನಿತ್ಯ ಬಳಕೆಯ ಶಬ್ಧಗಳು.

ಗರಡಿ ನೇಮ, ಗರಡಿ ಜಾತ್ರೆ, ನಾಗಮಂಡಲ, ಬೆಡಿ ಉತ್ಸವ, ತೇರು, ತೆಂಗಾಯಿ ಉತ್ಸವ- ಹೀಗೆ ವೈವಿಧ್ಯಮಯ ಉತ್ಸವಗಳು ನಡೆಯುವ ನಾಡು ಇದು.

ಕರ್ನಾಟಕದ ಹಬ್ಬ, ಹರಿದಿನಗಳು ಯಾವುವು- ಯಾವಾಗ ಬರುತ್ತವೆ ಎಂದು ಕೇಳಿ. ಅವುಗಳ ವಿವರಗಳನ್ನೆಲ್ಲ ಒದಗಿಸುವ ಪಂಚಾಂಗ ಯಾನೆ ಕ್ಯಾಲೆಂಡರುಗಳು ಬೇಕಾದಷ್ಟು ಸಿಗುತ್ತವೆ. ಆದರೆ ತುಳುವರ ಹಬ್ಬ- ಹರಿದಿನಗಳು, ವಿಶೇಷ ಆಚರಣೆಗಳು ಯಾವುವು ಎಂದು ವಿವರಿಸುವ ಒಂದಾದರೂ ಪಂಚಾಂಗ, ಕ್ಯಾಲೆಂಡರ್ ಕಂಡಿದ್ದೀರಾ?

ಇಲ್ಲ. ತುಳುವರ ಹಬ್ಬ ಹರಿದಿನಗಳು, ವಿಶೇಷ ದಿನಗಳು, ಜಾತ್ರೆ, ಕೋಲ, ಕಂಬಳ ಇತ್ಯಾದಿಗಳು ಯಾವಾಗ ಬರುತ್ತವೆ ಎಂದು ಕೇಳಿದರೆ ಸ್ವತಃ ತುಳುವರೂ ತಡಬಡಾಯಿಸಬೇಕಾಗುತ್ತದೆ.

ಈ ಕೊರತೆಯನ್ನು ಬಹಳಷ್ಟು ಮಟ್ಟಿಗೆ ನಿವಾರಿಸುವ ಕೆಲಸವನ್ನು ಮಾಡುತ್ತಿರುವ ವೈವಿಧ್ಯಮಯ ಪಂಚಾಂಗವೊಂದು ಕಳೆದ ಐದು ವರ್ಷಗಳಿಂದ ಪ್ರಕಟವಾಗುತ್ತಿದೆ.

ಈ ಪಂಚಾಂಗದ ಹೆಸರು 'ಮ್ಯಾಗ್ನಂ ತುಳುನಾಡು ಪಂಚಾಂಗ'. ಮಂಗಳೂರು ಮೂಲದ'ಮ್ಯಾಗ್ನಂ ಇಂಟರ್ ಗ್ರಾಫಿಕ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆ ಇದನ್ನು ಪ್ರಕಟಿಸುತ್ತಿದೆ.

ಕೇರಳದ ಕಾಸರಗೋಡಿನಿಂದ ಹಿಡಿದು ಕರಾವಳಿ ಕರ್ನಾಟಕದುದ್ದಕ್ಕೂ ಹರಡಿರುವ ತುಳುನಾಡಿನ ಸಂಸ್ಕೃತಿಯ ವಿವಿಧ ಮುಖಗಳನ್ನು ಸಮಸ್ತರಿಗೂ ಪರಿಚಯಿಸುವುದು ಈ ಕ್ಯಾಲೆಂಡರಿನ ಉದ್ದೇಶ. ಹಾಗಾಗಿ ಪ್ರತಿವರ್ಷವೂ ಒಂದೊಂದು ಹೊಸ ವಿಷಯದೊಂದಿಗೆ ಈ ಕ್ಯಾಲೆಂಡರ್ ಪ್ರಕಟಿಸುತ್ತಿದ್ದೇವೆ ಎನ್ನುತ್ತಾರೆ ಮ್ಯಾಗ್ನಂ ಮುಖ್ಯಸ್ಥ ಗೌತಮ್ ಘಾಟೆ.

2004ರಲ್ಲಿ 'ತುಳುನಾಡು ಪಂಚಾಂಗ' ಮೊತ್ತ ಮೊದಲಿಗೆ ಬೆಳಕು ಕಂಡಿತು. ಇದರಲ್ಲಿ ತುಳುನಾಡಿನ ಗಣಪತಿ ದೇವಾಲಯಗಳ ಚಿತ್ರಗಳನ್ನು ದಾಖಲಿಸಲಾಯಿತು. ಆಮೇಲೆ 2005ರಲ್ಲಿ ತುಳುನಾಡಿನ ವಿವಿಧ ದೇವಿಯರ ಚಿತ್ರಗಳು, 2006ರಲ್ಲಿ ತುಳುನಾಡಿನ ವಿವಿಧ ದೇವಾಲಯಗಳು, 2007ರಲ್ಲಿ ತುಳುವರ ನಾಗದೇವರುಗಳು- ನಾಗಮಂಡಲ- ನಾಗಶಿಲೆಗಳನ್ನು'ತುಳುನಾಡು ಪಂಚಾಂಗ' ದಾಖಲಿಸಿತು.

ಇದೀಗ 2008ರ 'ತುಳುನಾಡು ಪಂಚಾಂಗ' ತುಳುನಾಡಿನ ಪ್ರಮುಖ ನೃತ್ಯ ನಾಟಕ ಪ್ರಕಾರವಾದ ಯಕ್ಷಗಾನದಲ್ಲಿ ದೇವರುಗಳ ಪಾತ್ರ ಹೇಗಿರುತ್ತದೆ ಎಂಬುದನ್ನು ಪರಿಚಯಿಸಿದೆ.

ದಕ್ಷಿಣ ಕರಾವಳಿಯ ಯಕ್ಷಗಾನ ಪ್ರಭೇದ 'ತೆಂಕು ತಿಟ್ಟಿ'ನ ಪ್ರಸಂಗಗಳಲ್ಲಿ ಬರುವ ದೇವರ ವೇಷಭೂಷಣ, ಮುಖವರ್ಣಿಕೆಗಳು ಇಲ್ಲಿವೆ. ಶ್ರೀದೇವಿ, ನರಸಿಂಹ, ಈಶ್ವರ, ಶ್ರೀರಾಮ, ವೀರಭದ್ರ, ಅರ್ಧನಾರೀಶ್ವರ, ನಾಗರಾಜ, ಶ್ರೀಕೃಷ್ಣ, ಹನುಮಂತ, ಭೂ ವರಾಹ, ಶನೀಶ್ವರ, ಗರುಡ ವೇಷಗಳ ಮೋಹಕ ಚಿತ್ರಗಳು ಕಣ್ಸೆಳೆಯುತ್ತವೆ.

ಈ ಕ್ಯಾಲೆಂಡರಿನಲ್ಲಿ ತುಳುನಾಡಿಗೆ ಸಂಬಂಧಿಸಿದ ಹಬ್ಬ ಹರಿದಿನ, ಜಾತ್ರೆ, ಕೋಲ, ಕಂಬಳ ಇತ್ಯಾದಿ ವಿಶೇಷ ದಿನಗಳ ವಿವರ ಉಂಟು. ಅವುಗಳನ್ನು ತುಳು ಭಾಷೆಯಲ್ಲಿಯೇ ನೀಡಿರುವುದು ತುಳುವರನ್ನು ಆಕರ್ಷಿಸುತ್ತಿದೆ.

ತುಳುನಾಡು ಪಂಚಾಂಗಕ್ಕೆ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ನಾಟಕದ ಪಶ್ಚಿಮ ಕರಾವಳಿ, ಕೇರಳದ ಕಾಸರಗೋಡು ಜಿಲ್ಲೆ, ತುಳುವರು ಬಹು ಸಂಖ್ಯೆಯಲ್ಲಿ ಇರುವ ಮುಂಬೈ, ಬೆಂಗಳೂರು ಮಹಾನಗರಗಳಲ್ಲೂ ಕ್ಯಾಲೆಂಡರ್ ಜನಪ್ರಿಯವಾಗಿದೆ ಎನ್ನುತ್ತಾರೆ ಗೌತಮ್ ಘಾಟೆ.

ಸಂಗ್ರಹ ಯೋಗ್ಯ ಪಂಚಾಂಗವನ್ನು ಬಯಸುವವರು (080) 22380793/ 22380794 ನಂಬರುಗಳನ್ನು ಸಂಪರ್ಕಿಸಬಹುದು ಎನ್ನುತ್ತಾರೆ ಗೌತಮ್.

Friday, December 14, 2007

Manavanaguveya illaa Danavanaguveya ?

During Vijaya Dashami and Deepavali people treat cow as Goddess and worship it. But soon after that during Bakrid and Christmas people kill and ate it. Why? Can't people understand the live cow is more useful and beneficial than dead cow? We must understand that this principle applies to all other animals, birds and trees also.

ದಾನವನಾಗುವೆಯಾ ಇಲ್ಲಾ

ಮಾನವನಾಗುವೆಯಾ..?


ನವೆಂಬರ್ ತಿಂಗಳಿನಲ್ಲಿ ವಿಜಯದಶಮಿ, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಾನವರಿಂದ ಪೂಜಿಸಲ್ಪಡುವ ಗೋವುಗಳು, ಡಿಸೆಂಬರ್ ತಿಂಗಳಿನಲ್ಲಿ ಬಕ್ರೀದ್, ಕ್ರಿಸ್ಮಸ್ ಹಬ್ಬದ ಸಡಗರದಲ್ಲಿ ಕತ್ತರಿಸಲ್ಪಟ್ಟು ಮನುಷ್ಯರ ಹೊಟ್ಟೆ ಸೇರುತ್ತವೆ! ಇದೆಂತಹ ವಿಪರ್ಯಾಸ? ಮಾತು ಬರುತ್ತಿದ್ದರೆ ಗೋವುಗಳು ಏನು ಹೇಳುತ್ತಿದ್ದವು? ಇಲ್ಲಿದೆ ಓದಿ ಗೋವಿನ ಅಳಲು:


ನೆತ್ರಕೆರೆ ಉದಯಶಂಕರ

ಪ್ರೀತಿಯ ಮಾನವ,

ನನ್ನನ್ನು 'ಪುಣ್ಯಕೋಟಿ' ಎಂದಾದರೂ ಕರೆದುಕೊ ಅಥವಾ 'ಕಾಮಧೇನು' ಎಂದಾದರೂ ಕರೆದುಕೋ ಅಥವಾ 'ನಂದಿನಿ' ಎಂದಾದರೂ ಕರೆದುಕೋ. ಹೆಸರಿನಲ್ಲಿ ಏನಿದೆ? ಯಾವ ಹೆಸರು ಇದ್ದರೂ ನನ್ನ ಗುಣ ಸ್ವಭಾವದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ತಾನೆ? ಹೇಗಿದ್ದರೂ 'ನಂದಿನಿ' ಹೆಸರಿನಲ್ಲೇ ಪೊಟ್ಟಣದೊಳಗೆ ನನ್ನ ಸವಿಯಾದ ಹಾಲನ್ನು ನಿನ್ನ ಮನೆ ಮಂದಿಗೆ ಪ್ರತಿನಿತ್ಯವೂ ಒದಗಿಸುತ್ತಿದ್ದೇನಲ್ಲ!

ಮೊನ್ನೆ ಮೊನ್ನೆ ನವೆಂಬರ್ ತಿಂಗಳಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ. ಅರಮನೆ ಮೈದಾನದಲ್ಲಿ ಸಡಗರವೋ ಸಡಗರ. ನನ್ನ ಅನೇಕ ಒಡಹುಟ್ಟಿದ ಅಣ್ಣ ತಮ್ಮಂದಿರು, ಅಕ್ಕತಂಗಿಯರು ನೂರಾರು ಸಂಖ್ಯೆಯಲ್ಲಿ ಅಲ್ಲಿದ್ದರು. ಯಜಮಾನ ಸ್ವರೂಪಿಯಾದ ನಿನ್ನ ಅಣ್ಣತಮ್ಮಂದಿರು, ಅಕ್ಕತಂಗಿಯರೂ ಲಕ್ಷಾಂತರ ಮಂದಿ ಅಲ್ಲಿದ್ದರು.

ಅಂದು ಅಲ್ಲಿ 'ಗೋವಿಗೆ' ನಡೆದ ಕೋಟಿ ಆರತಿಯ ದೃಶ್ಯ, ಗೋವಿನ ಮಹತ್ವದ ಬಗ್ಗೆ ನಡೆದ ಪ್ರವಚನ, ನೃತ್ಯ ರೂಪಕಗಳ ದೃಶ್ಯಕಂಡು ನನ್ನ ಕಣ್ತುಂಬಿ ಬಂತು. ಮನುಷ್ಯರಿಗಾಗಿ ನಾನು ಮಾಡುವ ಸೇವೆ ವ್ಯರ್ಥವಲ್ಲ, ಇಂದಿಗೂ ನನ್ನನ್ನು, ನನ್ನ ಒಡಹುಟ್ಟಿದವರನ್ನು ಪೂಜಿಸುವ ಮಂದಿ, ನಮ್ಮ ರಕ್ಷಣೆಗಾಗಿ ಟೊಂಕ ಕಟ್ಟುವ ಮಂದಿ ಇದ್ದಾರೆಂದು ಖುಷಿಯಾಯಿತು.

ಅದೇ ಖುಷಿಯ ಗುಂಗಿನಲ್ಲಿ ಡಿಸೆಂಬರ್ ತಿಂಗಳಿನ ಈ ದಿನಗಳಲ್ಲಿ ನಾನು ಇದೇ ಬೆಂಗಳೂರಿಗೆ ಅಡ್ಡಾಡುತ್ತಾ ಬಂದೆ. ಆದರೆ ಅದೇ ಬೆಂಗಳೂರಿನಲ್ಲಿ ಅಬ್ಬಾ! ಇದೆಂಥ ದೃಶ್ಯ. ನನ್ನ ಸಹೋದರ ಸಹೋದರಿಯರನ್ನು ಇದೇ ಮಾನವರು ನೂರಾರು ಸಂಖ್ಯೆಯಲ್ಲಿ ವ್ಯಾನುಗಳಲ್ಲಿ ತುಂಬಿ ಸಾಗಿಸುತ್ತಿದ್ದಾರೆ. ಅವರ ಕೈ ಕಾಲುಗಳಿಗೆ ಹಗ್ಗ. ಕೆಲವರನ್ನು ಪಾದಯಾತ್ರೆ ಮಾಡಿಸುತ್ತಿದ್ದಾರೆ. ಅದರೆ ಎಂಟು ಹತ್ತು ಮಂದಿ ಸಹೋದರರನ್ನು ಒಂದೇ ಹಗ್ಗದಿಂದ ಬಿಗಿದಿದ್ದಾರೆ.

ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಂತೂ ಉತ್ತರ ಭಾರತದ ಕಡೆಯಿಂದ ತರಲಾದ ನನ್ನ ಅನೇಕಾನೇಕ ಸುಂದರ ಸಹೋದರರಿದ್ದಾರೆ. ಎಲ್ಲರ ಕೈಕಾಲುಗಳಿಗೂ ಹಗ್ಗದ ಬಂಧನ.

ಎಂದೂ ಹುಲ್ಲಿನ, ಹಿಂಡಿಯ ಅಂಗಡಿಯೇ ಇರದಿದ್ದ ಈ ರಸ್ತೆಯಲ್ಲಿ ಈಗ ಹತ್ತಾರು ಹಿಂಡಿ, ಹುಲ್ಲಿನ ಅಂಗಡಿಗಳು ರಾರಾಜಿಸುತ್ತಿವೆ. ಈ ಹಿಂಡಿ, ಹುಲ್ಲು ಈ ನನ್ನ ಸಹೋದರರಿಗೆ 'ಅಂತಿಮ ಸೇವೆ!'.

ನನ್ನ ಸಹೋದರ, ಸಹೋದರಿಯರಷ್ಟೇ ಅಲ್ಲ, ನಮ್ಮೊಂದಿಗೆ ಅಕ್ಕರೆಯಿಂದ ಒಡನಾಡುವ ಅದೆಷ್ಟೋ ಆಡಣ್ಣ, ಆಡಕ್ಕ, ಕುರಿಯಣ್ಣ, ಕುರಿಯಕ್ಕಗಳ ಮಂದೆಯೂ ಇದೆ. ಅವರ ಕೈಕಾಲುಗಳಿಗೂ ಹಗ್ಗದ ಬಂಧನ.

ನನಗೆ ಗೊತ್ತು. ಈ ರಸ್ತೆಯಲ್ಲಿಯೇ ಒಂದು ಕಸಾಯಿ ಖಾನೆ ಉಂಟು. ಮಾನವ, ನಿಮಗೆ ಸದಾ ಕಾಲ ಕಾನೂನು ರೀತಿ ನೀತಿಗಳನ್ನು ನೆನೆಪಿಸಿಕೊಡುವ ಹೈಕೋರ್ಟ್ ಉಂಟಲ್ಲ, ಅದು ಈ ಕಸಾಯಿ ಖಾನೆಯನ್ನು ಬೆಂಗಳೂರಿನಿಂದ ಹೊರಕ್ಕೆ ಸಾಗಿಸಬೇಕು ಎಂದು ಎಷ್ಟೋ ಸಮಯದ ಹಿಂದೆಯೇ ಆಜ್ಞಾಪಿಸಿತ್ತು. ಆದರೆ ಆ ಕೆಲಸ ಇನ್ನೂ ಆಗಿಲ್ಲ.

ಈ ಕಸಾಯಿ ಖಾನೆ ನನ್ನಂಥವರು, ಈಗ ಬಂದಿದ್ದಾರಲ್ಲ ನನ್ನ ಸಹೋದರ ಸಹೋದರಿಯರು, ಆಡಣ್ಣ, ಆಡಕ್ಕ, ಕುರಿಯಣ್ಣ, ಕುರಿಯಕ್ಕ ಇಂತಹರನ್ನೆಲ್ಲ ವಧಿಸಲಿಕ್ಕಾಗಿಯೇ ಇರುವ ಜಾಗ! ಈ ರಸ್ತೆಯಲ್ಲಿ ಅಡ್ಡಾಡಿದ ನನ್ನ ಹಲವಾರು ಮಂದಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಇಲ್ಲಿ ನಡೆಯುವ 'ಹತ್ಯಾಕಾಂಡ'ದ ಬಗ್ಗೆ ನನಗೆ ಹೇಳಿದ್ದಾರೆ. ಕತ್ತಿಗೆ ಕೊಡಲಿ ಬೀಳುವ ಹೊತ್ತಿನಲ್ಲಿ ಕೇಳುವ ಆರ್ತನಾದದ ದನಿಯಿಂದ ನೊಂದು ಬಸವಳಿದಿದ್ದಾರೆ.

ಮಾನವ, ನಿನಗೆ ಗೊತ್ತಿರಬೇಕಲ್ಲ, ಅಮೆರಿಕದಲ್ಲಿ ಒಂದು ಮಾಂಸ ಮಾರುವ ಕಂಪೆನಿ ಉಂಟಂತೆ. 'ಮೆಕ್ಡೊನಾಲ್ಡ್' ಎಂದೋ ಏನೋ ಅದರ ಹೆಸರಂತೆ. ದನ-ಕರು, ಕುರಿ-ಆಡು, ಹಂದಿಗಳನ್ನು ಕೊಂದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ 'ಮಾಂಸ' ಮಾರಾಟ ಮಾಡುವ ಪ್ರಪಂಚದ ಬಲುದೊಡ್ಡ ಕಂಪೆನಿ ಅದಂತೆ. ಈ ಕಂಪೆನಿಯವರು ಮಾಂಸ ತಯಾರಿಸುವ ಮುನ್ನ ಕಸಾಯಿ ಖಾನೆಯಲ್ಲಿ ದನ-ಕರು, ಆಡು-ಕುರಿ, ಹಂದಿಗಳನ್ನು ಹೇಗೆ ಕೊಲ್ಲುತ್ತಾರೆ ಅಂತ ವಿವರಿಸಿ ಎರಿಕ್ ಶ್ಲಾಸ್ಟರ್ ಎಂಬ ಅಲ್ಲಿನ ಪತ್ರಕರ್ತನೊಬ್ಬ 'ಫಾಸ್ಟ್ ಫುಡ್ ನೇಷನ್' ಎಂಬ ಪುಸ್ತಕವನ್ನೇ ಬರೆದಿದ್ದಾನಂತೆ.

ಪ್ರತಿದಿನ ಈ ಕಂಪೆನಿಯ ಕಸಾಯಿಖಾನೆಯೊಳಕ್ಕೆ ಹೋಗುವ 5000 ದನ, 20,000 ಹಂದಿಗಳು ಮಾಂಸದ ತುಕಡಿಗಳಾಗಿ ಲಕ್ಷಾಂತರ ಪೊಟ್ಟಣಗಳಲ್ಲಿ ಹೊರಬರುತ್ತವಂತೆ.

ಈ ಪತ್ರಕರ್ತ ಮಹಾಶಯ ಬಣ್ಣಿಸಿದ್ದನ್ನು ನೋಡಿ ನನಗೆ ಈ ಚಳಿಯಲ್ಲೂ ಬೆವರುತ್ತದೆ. 'ನೂರಾರು ದನಗಳು ಮಂದೆಯಲ್ಲಿ ಈ ಕಸಾಯಿಖಾನೆ ಒಳಕ್ಕೆ ಬರುತ್ತಿದ್ದಂತೆಯೇ ಸುಮಾರು ಐವತ್ತು ಮಂದಿಯ ಸಮೂಹ ಈ ದನಗಳ ಹಣೆಗೆ ಗುರಿಯಿಟ್ಟು ಗುಂಡು ಹಾರಿಸುತ್ತದೆ. ಈ ಗುಂಡೇಟಿಗೆ ದನಗಳು ಮೂರ್ಛೆ ಬೀಳುತ್ತವೆ. ಮೂರ್ಛೆ ಬಿದ್ದ ಈ ದನಗಳ ಕುತ್ತಿಗೆಗೆ ಸರಪಣಿ ಹಾಕಿ ಅದನ್ನು ಕ್ರೇನಿನಲ್ಲಿ ಇಟ್ಟು ಹದಿನೈದು ಇಪ್ಪತ್ತು ನಿಮಿಷ ಗಾಳಿಯಲ್ಲಿ ಎತ್ತಿ ಹಿಡಿದಿಡುತ್ತಾರೆ. ಕುತ್ತಿಗೆ ಮೃದುವಾಗಿ ನೀಳವಾಗಲಿ ಹಾಗೂ ಮಚ್ಚಿನಲ್ಲಿ ಸುಲಭ ಹೊಡೆತಕ್ಕೆ ಸಿಗಲಿ ಎಂದು ಈ ಕಸರತ್ತು. ದನವನ್ನು ಕ್ರೇನಿನಿಂದ ಇಳಿಸುತ್ತಿದ್ದಂತೆಯೇ ಮಚ್ಚಿನೇಟು! ರಕ್ತದ ಸಿಡಿತ. ಅನಂತರ ಕನ್ವೇಯರ್ ಬೆಲ್ಟ್ ಮೂಲಕ ಸಾಗಿಸಿ, ಮುಂದಿನ ಹಂತದಲ್ಲಿ ಮಾಂಸ, ಚರ್ಮ, ಮೂಳೆ ಬೇರ್ಪಡಿಸಲಾಗುತ್ತದೆ. ಬಳಿಕ ಮಾಂಸದ ಪರಿಷ್ಕರಣೆ. ಒಂದು ತಾಸಿಗೆ 600 ದನ, 800 ಹಂದಿಗಳ ರುಂಡ-ಮುಂಡ ಬೇರ್ಪಡಿಸುವ ಈ ಕಸಾಯಿಖಾನೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ..!'

ಅಬ್ಬಬ್ಬಾ..! ಮುಂದಕ್ಕೆ ಓದುವುದೇ ಬೇಡ. ಪ್ರತಿದಿನ ಉತ್ಕೃಷ್ಟ ಆಹಾರ ಎಂದು ಇದೇ ಮಾನವರು ಕಂಡು ಹಿಡಿದ ಹಾಲು, ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆ, ಇವರ ಕ್ಯಾನ್ಸರ್, ಚರ್ಮರೋಗ, ರಕ್ತದೊತ್ತಡವೇ ಮುಂತಾದ ನೂರಕ್ಕೂ ಹೆಚ್ಚು ರೋಗಗಳಿಗೆ ಔಷಧಿಯಾದ ಮೂತ್ರ, ಪ್ರತಿನಿತ್ಯ ಇವರು ಉಣ್ಣುವ ಅನ್ನ, ರಾಗಿ, ಗೋಧಿ, ಜೋಳ ಸೇರಿದಂತೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳಿಗೆ ಅತ್ಯಂತ ಶ್ರೇಷ್ಠ ಎನ್ನಲಾಗಿರುವ ಸಾವಯವ ಗೊಬ್ಬರಕ್ಕೆ ಬೇಕಾದ ಮೂಲ ದ್ರವ್ಯ ಸಗಣಿಯನ್ನು ಕೊಟ್ಟದ್ದಕ್ಕೆ ನಮಗೆ ಮಾಡುವ ಪ್ರತಿ ಉಪಕಾರವೇ ಇದು!

ನಮ್ಮ ಸಹೋದರರು ಇವರ ಹೊಟ್ಟೆ ತುಂಬಿಸಲೆಂದು ಪ್ರತಿದಿನ ನೊಗ ಹೊತ್ತು ಗದ್ದೆಗಳಲ್ಲಿ ಉತ್ತದ್ದಕ್ಕಾಗಿ, ಅಂಗಡಿಗಳಿಂದ ನಿತ್ಯ ಸರಕನ್ನು ಬಂಡಿಯಲ್ಲಿ ಹೊತ್ತು ತಂದಕ್ಕಾಗಿ ಈ ವೇತನವೇ? ಈಚಿನ ದಿನಗಳಲ್ಲಿ ಇದೇ ಬಂಡಿಯ ಚಕ್ರಕ್ಕೆ 'ವಿದ್ಯುತ್ ಜನರೇಟರ್' ಅಳವಡಿಸಿ ಇಡೀ ದಿನ ಇವರ ಮನೆಗಳ ಒಳಗೆ ದೀಪ ಉರಿಯುವಂತೆ ಮಾಡುವ ವಿದ್ಯುತ್ತನ್ನೂ ಸಂಪಾದಿಸಬಹುದು ಎಂದೂ ಕಂಡು ಕೊಂಡಿದ್ದಾರೆ. ಹಿಂದೆ ನಮ್ಮ ಸಹೋದರರನ್ನೇ ಬಳಸಿ ಬೆಲ್ಲ ತೆಗೆಯಲು ಬಳಸುತ್ತಿದ್ದ ಗಾಣದಲ್ಲೂ ಈ ರೀತಿ ವಿದ್ಯುತ್ ಪಡೆಯಬಹುದಂತೆ.

ಹೇಳುತ್ತಾ ಹೋದಂತೆ ಇನ್ನೂ ನೆನಪಾಗುತ್ತದೆ. ನಮ್ಮ ಸೆಗಣಿಯಿಂದ ಶ್ರೇಷ್ಠ ಗೊಬ್ಬರ ಮಾಡಿಕೊಳ್ಳುವ ಮುನ್ನವೇ ಈ ಮಾನವರ ಅಡುಗೆಗೆ ಬೇಕಾದ 'ಗ್ಯಾಸ್' ತಯಾರಿಸಿಕೊಳ್ಳಲು ಬರುತ್ತದೆ. ಪೇಟೆಯಿಂದ ಬರುವ ಗ್ಯಾಸಿಗೆ ನೂರಾರು ರೂಪಾಯಿ ತೆರಬೇಕು. ನಮ್ಮ ಸೆಗಣಿಯಿಂದ ಬರುವುದು ವೆಚ್ಚವೇ ಇಲ್ಲದ ಗ್ಯಾಸ್. ಅಷ್ಟೇ ಅಲ್ಲ, ನಮ್ಮ ಸೆಗಣಿ, ಮೂತ್ರಗಳನ್ನು ಬಳಸಿಕೊಂಡು ಸೊಳ್ಳೆ ಓಡಿಸುವ ಬತ್ತಿಯಂತೆ, ಸೌಂದರ್ಯ ಹೆಚ್ಚಿಸಿಕೊಳ್ಳುವ ಸೌಂದರ್ಯ ಸಾಧನವಂತೆ, ಸಾಬೂನಂತೆ ಇನ್ನೂ ಏನೇನೋ ಸಾಮಗ್ರಿ ಮಾಡಿಕೊಳ್ಳುತ್ತಾರಂತೆ.....!

ಜೊತೆಗೇ ಸಾಲು ಸಾಲಾಗಿ ತಂದು ಕಟ್ಟಿ ಹಾಕಿದ್ದಾರಲ್ಲ, ಈ ಆಡಣ್ಣ, ಕುರಿಯಣ್ಣ.. ಇವರೆಲ್ಲ ಈ ಮಾನವರಿಗೆ ಮಾಡುವ ಉಪಕಾರವೇನು ಕಮ್ಮಿಯಲ್ಲ. ಈ ಆಡಕ್ಕ ಕೊಡುವ ಹಾಲು ಉಂಟಲ್ಲ ಅದು ಸರ್ವ ಶ್ರೇಷ್ಠ ಹಾಲು, ಅದನ್ನು ಕುಡಿದರೆ ಯಾವ ರೋಗವೂ ಬರುವುದಿಲ್ಲ ಎಂದು ಮಹಾತ್ಮಾ ಗಾಂಧಿ ಎಂಬ ಈ ಭಾರತದ ನೇತಾರ ಹೇಳಿದ್ದಾರಂತೆ. ಅದಕ್ಕಾಗಿಯೇ ಅವರು ಪ್ರತಿನಿತ್ಯ 'ಆಡಿನ' ಹಾಲು ಕುಡಿಯುತ್ತಿದ್ದರಂತೆ.

ಕುರಿಯಣ್ಣನ ಸೇವೆಯೂ ಅಷ್ಟೇ. ಚಳಿ, ಚಳಿ ಎಂದು ಸದಾ ಗಡ ಗಡ ನಡುಗುವ ಈ ಮನುಷ್ಯರಿಗೆ ಈ ಕುರಿಯಣ್ಣನ ಕೂದಲಿನಿಂದ ತಯಾರಾಗುವ ಸ್ವೆಟರ್, ಕಂಬಳಿಯಿಂದಲೇ ರಕ್ಷಣೆ. ಬೆಳಗಾದರೆ ತಾನೇ ಮೊದಲು ಎದ್ದುಕೊಂಡು ಮನುಷ್ಯರನ್ನು ಎಬ್ಬಿಸುವ ಕೋಳಿಯಕ್ಕನ ಕಥೆಯಂತೂ ಹೇಳುವುದೇ ಬೇಡ. ಈ ಟ್ಯಾನರಿ ರಸ್ತೆಯೇ ಅಲ್ಲ, ಯಾವ ರಸ್ತೆಯಲ್ಲೇ ಹೋಗಿ ನೋಡಿ ಕೋಳಿಯಣ್ಣ, ಕೋಳಿಯಕ್ಕಗಳೆಲ್ಲ ಗೂಡಿನೊಳಗೆ ಬಂಧಿ! ಪ್ರತಿನಿತ್ಯ ಕುಡಿಯುವ ನೀರನ್ನು ಶುದ್ಧವಾಗಿ ಇರಿಸುವ ಮೀನನ್ನೂ ಇವರು ಬಿಡುವುದಿಲ್ಲ. ಅದರ ಗಂಟಲಿಗೆ ಕೊಕ್ಕೆ ಹಾಕಿ, ನೀರಿನಿಂದ ಹೊರಕ್ಕೆ ಎಳೆದು ಉಸಿರು ಕಟ್ಟಿಸಿ ಕೊಂದು ತಿನ್ನುತ್ತಾರೆ.

ಈ ಮಾನವ ಸಂತಾನವನ್ನು ಯಾಕೆ 'ಮಾನವ' ಎಂದು ಕರೆಯುತ್ತಾರೋ ಏನೋ? ಮಾನವೀಯತೆ ಮನುಷ್ಯರ ಮೂಲದ್ರವ್ಯವಂತೆ. ಅದು ನಿಜವೇ ಆಗಿದ್ದರೆ ಇವರು ತಮ್ಮಂತೆಯೇ ಜೀವ ಇರುವ ಪ್ರಾಣಿಗಳನ್ನು ಪ್ರತಿನಿತ್ಯ ಅವು ತಮಗೆ ಮಾಡುವ ಸೇವೆಯನ್ನೂ ಲೆಕ್ಕಿಸದೆ ಕೊಲ್ಲಲು ಮನಸ್ಸು ಮಾಡುತ್ತಿದ್ದರೇ?

ಈ ಪ್ರಪಂಚದಲ್ಲಿ ಮಾಂಸಕ್ಕಾಗಿಯೇ ಪ್ರತಿವರ್ಷ 2500 ಕೋಟಿ ಪ್ರಾಣಿಗಳನ್ನು ಕೊಲ್ಲಲಾಗುತ್ತದೆಯಂತೆ. ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಪ್ರತಿವರ್ಷ 90 ಪ್ರಾಣಿಗಳನ್ನು ತಿನ್ನುತ್ತಾನಂತೆ. ಸ್ವಿಜರ್ ಲ್ಯಾಂಡಿನ ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ 8 ದನ, 2 ಮೇಕೆ, 33 ಹಂದಿ, 25 ಇಲಿ, 720 ಕೋಳಿ, 4 ಜಿಂಕೆ, 6 ಕುರಿ, 390 ಮೀನುಗಳನ್ನು ತಿನ್ನುತ್ತಾನಂತೆ.
ಅಬ್ಬಬ್ಬಾ, ಈ ಮನುಷ್ಯರ ಸಹವಾಸವೇ ಬೇಡ. ಬೇರಾವುದಾದರೂ ಮನುಷ್ಯ ಸಂತಾನ ಇಲ್ಲದ ಜಗತ್ತು ಇದ್ದರೆ ಅಲ್ಲಿಗೆ ಓಡಿ ಹೋಗಿ ಬಿಡೋಣ ಅನ್ನಿಸುತ್ತಿದೆ.

ಆದರೆ, ಪುಟ್ಟ ಪುಟ್ಟ ಮಕ್ಕಳನ್ನು ಕಂಡರೆ, ಕ್ಯಾನ್ಸರಿನಂತಹ ಭಯಾನಕ ರೋಗಕ್ಕೆ ತುತ್ತಾಗಿ ನರಳುವವರನ್ನು ಕಂಡರೆ ಇಂತಹವರಿಗೆ ಹಾಲಿನಂತಹ ಶ್ರೇಷ್ಠ ಆಹಾರ, ನಮ್ಮ ಶ್ರೇಷ್ಠ ಔಷಧಿಯಾದ ಮೂತ್ರ, ಶ್ರೇಷ್ಠ ಗೊಬ್ಬರವಾದ ಸೆಗಣಿಯನ್ನು ಕೊಡದೆ ಇರುವುದಾದರೂ ಹೇಗೆ ಎಂಬ ದ್ವಂದ್ವ ಕಾಡುತ್ತದೆ.

ಮಾನವ, ನಿಮ್ಮೆಲ್ಲರನ್ನೂ ಕಟುಕರು, ಹೃದಯ ಇಲ್ಲದವರು ಎಂದು ನಾನು ಖಂಡಿತ ದೂರಲಾರೆ. ಏಕೆಂದರೆ ನವೆಂಬರಿನಲ್ಲಿ ಬೆಂಗಳೂರಿಗೆ ಬಂದಾಗ ಕಂಡಿದ್ದೆನಲ್ಲ. ಇದೇ ಕರ್ನಾಟಕ ರಾಜ್ಯದ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ತಮ್ಮ ಜೀವಮಾನವನ್ನೇ ನಮ್ಮ ಗೋತಳಿಯ ಅದರಲ್ಲೂ ವಿಶೇಷವಾಗಿ ಭಾರತೀಯ ಗೋ ತಳಿಗಳ ಸಂರಕ್ಷಣೆಗಾಗಿ ಮುಡುಪಾಗಿ ಇಟ್ಟಿದ್ದಾರೆ. ನಮ್ಮ 27ಕ್ಕೂ ಅಧಿಕ ಗೋ ಜಾತಿಗಳನ್ನು ಸಾಕಿ ಸಲಹಿ ಸಂರಕ್ಷಿಸುತ್ತಿದ್ದಾರೆ. ಸಮಾಜದಲ್ಲಿ ಗೋ ಸಂರಕ್ಷಣೆ, ಸಂವರ್ಧನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಗೋವಿನಿಂದ ಹಾಲು ಮಾತ್ರವೇ ಅಲ್ಲ, ಅದಕ್ಕೂ ಹೆಚ್ಚಿನ ಆದಾಯ, ಆರೋಗ್ಯ ತರುವ ಮೂತ್ರ, ಸೆಗಣಿ ಲಭಿಸುತ್ತದೆ. ಅದಕ್ಕಾಗಿ ಅವುಗಳನ್ನು ಸಂರಕ್ಷಿಸಿ ಎಂದು ಹೇಳುತ್ತಾ ನಾಡಿನಾದ್ಯಂತ ಸಂಚರಿಸುತ್ತಿದ್ದಾರೆ. ಅವರೊಂದಿಗೆ ಹೆಜ್ಜೆ ಹಾಕಲೂ ಲಕ್ಷಾಂತರ ಮಂದಿ ಸಜ್ಜಾಗಿದ್ದಾರೆ.

ಮಾನವ, ನಿಮ್ಮೆಲ್ಲರಲ್ಲಿ ನನ್ನ ಕಡೆಯದೊಂದು ಪ್ರಾರ್ಥನೆ: ಕೇವಲ ನಮ್ಮ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅಲ್ಲ, ನಿಮ್ಮ ಆರೋಗ್ಯ, ಆದಾಯ, ಸಂಪತ್ತು ಸಮೃದ್ಧಿ ಸಲುವಾಗಿಯಾದರೂ, ನಮ್ಮ ಕತ್ತಿನ ಮೇಲೆ ಹಾಕಲು ಎತ್ತಿದ ಕೊಡಲಿಯನ್ನು ದೂರ ಬಿಸಾಡುವೆಯಾ? ಜಗತ್ತು ಇರುವುದು ಕೇವಲ ಮಾನವರಿಗಾಗಿ ಅಲ್ಲ, ಸಮಸ್ತ ಜೀವ ಸಂಕುಲಕ್ಕಾಗಿ, ಸಮಸ್ತ ಪ್ರಾಣಿ ಪಕ್ಷಿ, ಗಿಡಮರಗಳಿಗಾಗಿ ಎಂಬುದನ್ನು ಅರಿತುಕೊಂಡು ಕಾರ್ಯ ತತ್ಪರನಾಗುವೆಯಾ? ಈಗಾಗಲೇ ಈ ಕಾರ್ಯಕ್ಕಾಗಿ ಟೊಂಕ ಕಟ್ಟಿದವರ ಜೊತೆಗೆ ಕೈಜೋಡಿಸುವೆಯಾ? ತನ್ಮೂಲಕ 'ಮಾನವ' ಎಂಬ ಶ್ರೇಷ್ಠ ಹೆಸರನ್ನು ಸಾರ್ಥಕ ಪಡಿಸಿಕೊಳ್ಳುವೆಯಾ?

ನೀನು ನಿಜವಾಗಿಯೂ 'ದಾನವ'ನಲ್ಲದೆ, 'ಮಾನವ'ನೇ ಆಗಿದ್ದರೆ ನಿನಗೆ ಎದೆಹಾಲು ನೀಡಿ ಜೀವ ರಕ್ಷಿಸಿದ ಮಾತೆ ಸ್ವರೂಪಳಾದ ನನ್ನನ್ನು ಕೇವಲ ನಾಲಿಗೆಯ ಚಪಲಕ್ಕಾಗಿ ಬಲಿಗೊಡಬೇಡ ಎಂದು ಕೋರುವೆ.

ಇತಿ ಸದಾ ನಿನ್ನನ್ನು ಆಶೀರ್ವದಿಸುವ,

ಪುಣ್ಯಕೋಟಿ/ ಕಾಮಧೇನು/ ನಂದಿನಿ


Saturday, December 8, 2007

wake up Consumer

ಎದ್ದೆದ್ದು ಬೀಳದಿರು,

ಒದ್ದಾಡಿ ಸೋಲದಿರು:

ಗ್ರಾಹಕರಿಗುಂಟು ಇದೋ

'ಪರ್ಯಾಯ ಮಾರ್ಗ'...

ಪೆಪ್ಸಿ, ಕೋಕ್, ಮಿರಿಂಡಾ, ಫಾಂಟಾ, ಸೆವೆನ್ ಅಪ್ ಇತ್ಯಾದಿ ತಂಪು ಪಾನೀಯವಿರಲಿ, ಮಿನರಲ್ ವಾಟರ್, ಹಾಲು, ಮೊಸರಿನ ಪ್ಯಾಕೆಟ್ಟೇ ಇರಲಿ- ಅಂಗಡಿ, ಹೋಟೆಲ್ ಚಿತ್ರಮಂದಿರ ಎಲ್ಲಾದರೂ ಹೋಗಿ ತೆಗೆದುಕೊಳ್ಳಿ. ನಮೂದಿಸಿದ ಬೆಲೆಗಿಂತ ಕನಿಷ್ಠ ಒಂದು ರೂಪಾಯಿ ಹೆಚ್ಚು! ಯಾಕಪ್ಪಾ ಹೀಗೆ ಅಂತ ಕೇಳಿದರೆ 'ಪ್ರಿಜ್ನಲ್ಲಿ ಇಡ್ತೇವಲ್ಲ ಸ್ವಾಮೀ, ಕೂಲ್ ಮಾಡಿದ್ದಕ್ಕೆ!' ಎಂಬ ಉತ್ತರ ಬರುತ್ತದೆ. ಹೋಟೆಲ್ಗಳಲ್ಲಿ ಅಧಿಕೃತವಾಗಿಯೇ ಇದಕ್ಕೆ 'ಸೇವೆ'ಯ ಸೋಗು..!'ಥಂಡಾ, ಥಂಡಾ, ಕೂಲ್ ಕೂಲ್' ಎನ್ನುತ್ತಾ ಸುಲಿಗೆ ನಡೆಯುತ್ತದೆ ನಿರಂತರ.. ಇದು ನಮ್ಮ ಗ್ರಹಚಾರ ಎಂದುಕೊಂಡು ಸುಮ್ಮನೆ ಕುಳಿತುಕೊಳ್ಳುತ್ತೀರಾ? ಅಥವಾ ಬೆಂಗಳೂರು ಮಲ್ಲೇಶ್ವರಂನ ಬಿ.ವಿ. ಶಂಕರನಾರಾಯಣರಾವ್ ತುಳಿದ 'ಪರ್ಯಾಯ' ಹಾದಿ ತುಳಿಯುತ್ತೀರಾ?ಮೊದಲು ಶಂಕರ ನಾರಾಯಣರಾವ್ ಮಾಡಿದ್ದೇನು? ಓದಿಕೊಳ್ಳಿ.. ಗ್ರಾಹಕ ಗೆಲುವಿನ ಕಥೆಯನ್ನು..

'ಮಿನರಲ್ ವಾಟರ್'ಗೆ ಇಷ್ಟ ಬಂದಷ್ಟು ದರ..!

ಪ್ಯಾಕ್ ಮಾಡಿ ಗರಿಷ್ಠ ಬಿಡಿ ಮಾರಾಟ ಬೆಲೆ ನಮೂದಿಸಿದ ಯಾವುದೇ ವಸ್ತುವನ್ನೂ ಅದೇ ಬೆಲೆಗೆ ಮಾರಾಟ ಮಾಡಬೇಕಾದ್ದು ಕಡ್ಡಾಯ. ಆದರೆ ಹೋಟೆಲ್/ರೆಸ್ಟೋರೆಂಟ್ಗಳಲ್ಲಿ 'ಸೇವೆ'ಯ ಸೋಗಿನಲ್ಲಿ ಹೀಗೆ ನಮೂದಿಸಲಾದ ಬೆಲೆಗಿಂತ ಹೆಚ್ಚಿನ ಬೆಲೆಗೆ ಅಂತಹ ವಸ್ತುವನ್ನು ಮಾರಬಹುದೇ?ಯಾವುದೇ ವಸ್ತುವನ್ನು ಈರೀತಿ ಮಾರುವುದು ಸೇವಾ ಲೋಪವಾಗುತ್ತದೆ ಎಂದು ಅಭಿಪ್ರಾಯಪಟ್ಟ ಬೆಂಗಳೂರು ನಗರ ಜಿಲ್ಲಾ ಮೂರನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯವು ಗ್ರಾಹಕರೊಬ್ಬರಿಗೆ ನ್ಯಾಯ ಒದಗಿಸಿದ ಪ್ರಕರಣ ಇದು
.

ನೆತ್ರಕೆರೆ ಉದಯಶಂಕರ

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಮಲ್ಲೇಶ್ವರಂನ ನಿವಾಸಿ ಬಿ.ವಿ. ಶಂಕರ ನಾರಾಯಣ ರಾವ್. ಪ್ರತಿವಾದಿಗಳು: ಬೆಂಗಳೂರು ಜೆ.ಸಿ. ರಸ್ತೆಯ ಹೋಟೆಲ್ ಪೈ ವೈಸ್ರಾಯ್ ಮತ್ತು ಬೆಂಗಳೂರು ರೇಸ್ ಕೋರ್ಸ್ ರಸ್ತೆಯ ಸಾಮ್ರಾಟ್ ರೆಸ್ಟೋರೆಂಟ್ ಕಾತ್ಯಾಯಿನಿ ಎಂಟರ್ ಪ್ರೈಸಸ್.ವಾಸ್ತವವಾಗಿ ಅರ್ಜಿದಾರರು ಗ್ರಾಹಕ ನ್ಯಾಯಾಲಯಕ್ಕೆ ಇಬ್ಬರು ಪ್ರತಿವಾದಿಗಳ ವಿರುದ್ಧ ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದರು. ಆದರೆ ಉಭಯ ಪ್ರಕರಣಗಳ ಸ್ವರೂಪ ಒಂದೇ ಆಗಿದ್ದುದರಿಂದ ನ್ಯಾಯಾಲಯ ಎರಡೂ ಪ್ರಕರಣಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಿ ತೀರ್ಪು ನೀಡಿತು.ಪ್ರಕರಣದ ಅರ್ಜಿದಾರ ಬಿ.ವಿ. ಶಂಕರ ನಾರಾಯಣ ರಾವ್ ಅವರು ವಕೀಲರಾಗಿದ್ದು 2-5-2007ರಂದು ತಮ್ಮ ಇಬ್ಬರು ಸ್ನೇಹಿತರ ಜೊತೆಗೆ ಒಂದನೇ ಪ್ರಕರಣದ ಪ್ರತಿವಾದಿ ಹೋಟೆಲ್ ಪೈ ವೈಸ್ರಾಯ್ಗೆ ತೆರಳಿದ್ದರು. ಆಹಾರದ ಜೊತೆಗೆ ಪ್ಯಾಕ್ ಮಾಡಿದ ಕುಡಿಯುವ ನೀರಿನ (ಮಿನರಲ್ ವಾಟರ್) ಎರಡು ಬಾಟಲಿಗಳಿಗೆ ಆರ್ಡರ್ ಮಾಡಿದರು. ಪ್ರತಿವಾದಿ ಪ್ಯಾಕ್ ಮಾಡಿದ 'ಕಿನ್ಲೆ' ನೀರು ಸರಬರಾಜು ಮಾಡಿದರು.

ಬಾಟಲಿಯಲ್ಲಿ ನಮೂದಾಗಿದ್ದ ಗರಿಷ್ಠ ಬಿಡಿ ಮಾರಾಟ ದರ (ಎಂಆರ್ಪಿ) ತಲಾ 13 ರೂಪಾಯಿ. ಆದರೆ ಬಿಲ್ ನೀಡುವಾಗ ಬಾಟಲಿಗೆ ತಲಾ 24 ರೂಪಾಯಿ ವಿಧಿಸಲಾಯಿತು. ಎರಡು ಬಾಟಲಿಗಳಿಗೆ ಒಟ್ಟು 22 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಡೆಯಲಾಯಿತು.

ಎರಡನೇ ಪ್ರಕರಣದಲ್ಲಿ ಅರ್ಜಿದಾರ ಶಂಕರ ನಾರಾಯಣರಾವ್ ಅವರು ಪ್ರತಿವಾದಿ ಸಾಮ್ರಾಟ್ ರೆಸ್ಟೋರೆಂಟ್ ಕಾತ್ಯಾಯಿನಿ ಎಂಟರ್ ಪ್ರೈಸಸ್ಗೆ 17-4-2007ರಂದು ಮತ್ತು 18-4-2007ರಂದು ತಮ್ಮ ಕಿರಿಯ ಸಹೋದ್ಯೋಗಿ ಎಚ್.ಕೆ. ಹೊನ್ನೇಗೌಡ ಅವರ ಜೊತೆಗೆ ಭೇಟಿ ನೀಡಿದ್ದರು. ಅಲ್ಲೂ ಆಹಾರದ ಜೊತೆಗೆ ಪ್ಯಾಕ್ ಮಾಡಿದ ಕುಡಿಯುವ ನೀರಿಗೆ ಆರ್ಡರ್ ಮಾಡಿದಾಗ ಪ್ಯಾಕ್ ಮಾಡಿದ 'ಬಿಸ್ಲೇರಿ' ನೀರು ಬಾಟಲಿಗಳನ್ನು ಸರಬರಾಜು ಮಾಡಲಾಯಿತು.

ಈ ನೀರಿಗೂ ನಮೂದಾಗಿದ್ದ ಗರಿಷ್ಠ ಬಿಡಿ ಮಾರಾಟ ದರ ಬಾಟಲಿ ತಲಾ 12 ರೂಪಾಯಿ. ಪ್ರತಿವಾದಿಗಳು ಬಿಲ್ ಮಾಡಿದ್ದು ಬಾಟಲಿಗೆ ತಲಾ 18 ರೂಪಾಯಿಗಳು. ಬಾಟಲಿಗೆ ತಲಾ 6 ರೂಪಾಯಿಗಳಂತೆ ಹೆಚ್ಚು ಹಣ ಪಡೆಯಲಾಯಿತು.

ಈ ರೀತಿ ಪ್ಯಾಕ್ ಮಾಡಿದ ವಸ್ತುಗಳಿಗೆ ನಮೂದಿತ ದರದಿಂದ ಹೆಚ್ಚು ದರ ಪಡೆಯುವುದು ತೂಕ ಮತ್ತು ಅಳತೆ ನಿಯಮಾವಳಿಗಳ 23 (2) ನಿಯಮದ ಉಲ್ಲಂಘನೆ ಆಗುತ್ತದೆ, ಇದು ಅಪ್ರಾಮಾಣಿಕ ವಹಿವಾಟು ಎಂಬ ನೆಲೆಯಲ್ಲಿ ಅರ್ಜಿದಾರರು ಉಭಯ ಪ್ರತಿವಾದಿಗಳ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಮೂರನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದರು. ಹೆಚ್ಚುವರಿಯಾಗಿ ಪಡೆದ ಹಣವನ್ನು ವಾಪಸ್ ನೀಡುವುದರ ಜೊತೆಗೆ ತಲಾ 10,000 ರೂಪಾಯಿ ಖಟ್ಲೆ ವೆಚ್ಚ ಮತ್ತು ತಲಾ ಒಂದು ಲಕ್ಷ ರೂಪಾಯಿಗಳನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪರಿಹಾರ ರೂಪದಲ್ಲಿ ಪಾವತಿ ಮಾಡಲು ನಿರ್ದೇಶನ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಪ್ರಾರ್ಥಿಸಿದರು.

ಅಧ್ಯಕ್ಷ ಎನ್. ಶ್ರೀವತ್ಸ ಕೆದಿಲಾಯ ಮತ್ತು ಸದಸ್ಯೆ ಡಾ. ಸುಭಾಷಿಣಿ ಅವರನ್ನು ಒಳಗೊಂಡ ಪೀಠವು ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಕೀಲರಾದ ಎ.ಎಸ್. ಮೂರ್ತಿ, ಬಿ. ದಿನೇಶ, ಸಿ.ಎನ್. ಕಾಮತ್ ಮತ್ತು ವಿನಾಯಕ ಕಾಮತ್ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.ಅರ್ಜಿದಾರರು ಗ್ರಾಹಕನಲ್ಲ, ಪ್ರತಿವಾದಿಗಳು ಯಾವುದೇ ಅಪ್ರಾಮಾಣಿಕ ವಹಿವಾಟು ನಡೆಸಿಲ್ಲ, ಎಂಆರ್ಪಿ ಕಾಯ್ದೆ ಹೋಟೆಲ್ - ರೆಸ್ಟೋರೆಂಟುಗಳಿಗೆ ಅನ್ವಯಿಸುವುದಿಲ್ಲ (ಏಕೆಂದರೆ ಇವು ಬಿಡಿ ವ್ಯಾಪಾರ ಸಂಸ್ಥೆಗಳಲ್ಲ), ಆಹಾರ ಮತ್ತು ಪಾನೀಯಗಳ 'ಮೆನು' ದರದಲ್ಲಿ ಒದಗಿಸಲಾಗುವ ಸೇವೆ, ವಸ್ತುಗಳ ಸಂರಕ್ಷಣೆಗೆ ಬೇಕಾದ ಮೂಲ ಸವಲತ್ತುಗಳ ವೆಚ್ಚ ಇತ್ಯಾದಿ ಸೇರುತ್ತದೆ, ಮೆನುವಿನಲ್ಲಿ ನಮೂದಿಸಿದ ದರವನ್ನೇ ಬಿಲ್ನಲ್ಲಿ ಹಾಕುವುದರಿಂದ ಮೆನು ನೋಡಿ ಆಹಾರ ವಸ್ತುವಿಗೆ ಆರ್ಡರ್ ಮಾಡಿದ ಅರ್ಜಿದಾರ ನಂತರ ಈ ರೀತಿ ತಗಾದೆ ತೆಗೆಯುವುದು ಸರಿಯಲ್ಲ ಎಂದು ಆಕ್ಷೇಪಗಳ ಮಹಾಪೂರವನ್ನೇ ಹರಿಸಿದ ಉಭಯ ಪ್ರಕರಣಗಳ ಪ್ರತಿವಾದಿಗಳು ಅರ್ಜಿಯನ್ನು ತಳ್ಳಿಹಾಕಬೇಕು ಎಂದು ಮನವಿ ಮಾಡಿದವು.

ಸುಪ್ರೀಂಕೋರ್ಟ್ ತೀಪರ್ು ಸೇರಿದಂತೆ ವಿವಿಧ ನ್ಯಾಯಾಲಯಗಳು ನೀಡಿದ ತೀರ್ಪುಗಳು, ರಾಜ್ಯ ಗ್ರಾಹಕ ನ್ಯಾಯಾಲಯಗಳು ನೀಡಿದ ತೀರ್ಪುಗಳ ಸವಿಸ್ತಾರ ಅಧ್ಯಯನ ಮಾಡಿದ ಗ್ರಾಹಕ ನ್ಯಾಯಾಲಯ, ಅರ್ಜಿದಾರರು ತಕರಾರು ತೆಗೆದದ್ದು ಪ್ಯಾಕ್ ಮಾಡಲಾದ ನೀರಿನ ಬಾಟಲಿಯಲ್ಲಿ ನಮೂದಿಸಲಾದ ಬಿಡಿ ಮಾರಾಟದರಕ್ಕಿಂತ ಹೆಚ್ಚು ದರ ಪಡೆದುದಕ್ಕೆ ಹೊರತು ಇತರ ಯಾವುದೇ ಆಹಾರ ವಸ್ತುಗಳ ದರಕ್ಕೆ ಸಂಬಂಧಿಸಿದಂತೆ ಅಲ್ಲ ಎಂಬುದನ್ನು ಗಮನಕ್ಕೆ ತೆಗೆದುಕೊಂಡಿತು.ತಾವು ವಸ್ತುಗಳನ್ನು ಮಾರುವುದಿಲ್ಲ, ಸೇವೆಯನ್ನಷ್ಟೇ ನೀಡುತ್ತಿದ್ದೇವೆ ಎನ್ನುತ್ತಾ ಗರಿಷ್ಠ ಬಿಡಿ ಮಾರಾಟ ದರ ಕಾಯ್ದೆ ಪ್ರಕಾರ ನಮೂದಿಸಲಾದ ದರಕ್ಕಿಂತ ಹೆಚ್ಚು ದರವನ್ನು ಹೋಟೆಲ್/ ರೆಸ್ಟೋರೆಂಟ್ಗಳು ಪಡೆಯಬಹುದೇ? ಕಾಯ್ದೆ ಅನ್ವಯ ಆಗುವುದಿಲ್ಲ ಎಂಬ ನೆಪದಲ್ಲಿ ಆಹಾರ ವಸ್ತುವಿನ ಜೊತೆಗೆ ಗ್ರಾಹಕ ಆರ್ಡರ್ ಮಾಡುವ 'ಪ್ಯಾಕ್' ಮಾಡಿದ ನೀರಿಗೆ ಹೆಚ್ಚು ದರ ವಿಧಿಸುವುದರಿಂದ ಪರಿಸ್ಥಿತಿಯ ದುರ್ಲಾಭ ಪಡೆದಂತಾಗುವುದಿಲ್ಲವೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಬಂತು.

ಸೇವೆಯ ಹೆಸರಿನಲ್ಲಿ ನಮೂದಿತ ಗರಿಷ್ಠ ಬಿಡಿ ಮಾರಾಟ ದರಕ್ಕಿಂತ ಹೆಚ್ಚು ಹಣವನ್ನು ತಮಗಿಷ್ಟ ಬಂದಂತೆ ಯಾರೂ ವಿಧಿಸಲು ಸಾಧ್ಯವಿಲ್ಲ. ಹಾಗೆ ಮಾಡಬಹುದಾದರೆ 'ಗರಿಷ್ಠ ಬಿಡಿ ಮಾರಾಟ ದರ' ಕಾನೂನಿಗೆ ಯಾವ ಪಾವಿತ್ರ್ಯವೂ ಉಳಿಯುವುದಿಲ್ಲ ಎಂದು ಹೇಳಿದ ನ್ಯಾಯಾಲಯ ಈ ರೀತಿ ದರ ವಿಧಿಸುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಅನ್ವಯ ಅಪ್ರಾಮಾಣಿಕ ವಹಿವಾಟು ಆಗುತ್ತದೆ ಎಂಬ ನಿಲುವನ್ನು ತಾಳಿತು.

ವಾಸ್ತವವಾಗಿ ದಾಹ ನೀಗಿಸಿ ಬಿಕ್ಕಳಿಕೆ ನಿವಾರಿಸಬೇಕಾದ ನೀರು, ಈ ಪ್ರಕರಣದಲ್ಲಿ ಬಿಲ್ ಕಂಡೊಡನೆಯೇ ಗ್ರಾಹಕ ಬಿಕ್ಕುವಂತೆ ಮಾಡಿದೆ ಎಂಬ ಅಭಿಪ್ರಾಯಕ್ಕೂ ನ್ಯಾಯಾಲಯ ಬಂದಿತು.

ಈ ಹಿನ್ನೆಲೆಯಲ್ಲಿ ಮಾರಾಟಕ್ಕಾಗಿ ಇಡಲಾದ ಪ್ಯಾಕ್ ಮಾಡಿದ ವಸ್ತುಗಳಿಗೆ ಸೇವೆಯ ಹೆಸರಿನಲ್ಲಿ ನಮೂದಿತ ಗರಿಷ್ಠ ಬಿಡಿ ಮಾರಾಟ ದರಕ್ಕಿಂತ ಹೆಚ್ಚು ದರ ವಿಧಿಸುವ ಇಂತಹ ಅಪ್ರಾಮಾಣಿಕ ವಹಿವಾಟನ್ನು ಇನ್ನು ಮುಂದೆ ನಡೆಸಬಾರದು, ಹೆಚ್ಚು ಪಡೆದ ಹಣವನ್ನು ತಲಾ 1000 ರೂಪಾಯಿ ಖಟ್ಲೆ ವೆಚ್ಚ ಸಹಿತವಾಗಿ ಮರುಪಾವತಿ ಮಾಡಬೇಕು ಹಾಗೂ ತಲಾ 5000 ರೂಪಾಯಿಗಳನ್ನು ಗ್ರಾಹಕ ನ್ಯಾಯಾಲಯದ ಗ್ರಾಹಕ ಕಲ್ಯಾಣ ನಿಧಿ ಖಾತೆಗೆ ಪರಿಹಾರರೂಪದಲ್ಲಿ ಪಾವತಿ ಮಾಡಬೇಕು ಎಂದು ಪ್ರತಿವಾದಿಗಳಿಗೆ ಆದೇಶ ನೀಡಿತು.

Do You Know about ICC World Cup Cricket Final ?

Here is Madhu Bhat Poorlupady ! He collected some information about ICC World Cup Cricket. He is 9th Standard student studying in Viveka Bala Mandira, Yelahanka Satellite Town, Bangalore. Children you too can record your poems, drawings, small stories or articles here. Will you try?

ಗೊತ್ತಾ ನಿಮಗೆ ಐಸಿಸಿ ಕ್ರಿಕೆಟ್

ವಿಶ್ವಕಪ್ ಫೈನಲ್ ವಿಶೇಷಗಳು ?


ಮಧು ಭಟ್ ಪೂರ್ಲುಪಾಡಿ

ಮೊದಲ ವಿಶ್ವಕಪ್ ವಿಶೇಷ...

ಈ ವಿಶ್ವಕಪ್ ನಡೆದದ್ದು ಇಂಗ್ಲೆಂಡಿನಲ್ಲಿ. 1975ರಲ್ಲಿ ನಡೆದ ಮೊದಲ ವಿಶ್ವಕಪ್ 6 ದಿನ ನಡೆಯಿತು.ಈ ವಿಶ್ವಕಪ್ ಗೆದ್ದತಂಡ "ಕ್ಲೈವ್ ಲಾಯ್ಡ" ನಾಯಕತ್ವದ ವೆಸ್ಟ್ ಇಂಡೀಸ್ ತಂಡ. ಒಟ್ಟು 8 ತಂಡಗಳು ಭಾಗವಹಿಸಿದ್ದವು.ಇದರಲ್ಲಿ 2 ಟೆಸ್ಟ್ ಮಾನ್ಯತೆ ಹೊಂದಿರದ ರಾಷ್ಟ್ರಗಳಾಗಿದ್ದವು.ಫೈನಲ್ನಲ್ಲಿ ಎದುರಾದ ತಂಡಗಳು ವೆಸ್ಟ್ಇಂಡೀಸ್ ಮತ್ತು ಇಂಗ್ಲೆಂಡ್.ವೆಸ್ಟ್ ಇಂಡೀಸ್ ತಂಡವು ಮೊದಲು ಬ್ಯಾಟಿಂಗ್ ನಡೆಸಿ 60 ಓವರ್ಗಳಲ್ಲಿ 7ವಿಕೆಟ್ ಕಳೆದುಕೊಂಡು 291 ರನ್ ಗಳಿಸಿತು. ನಂತರ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 58.4 ಓವರುಗಳಲ್ಲಿ 274 ರನ್ ಗಳಿಸಿ 17ರನ್ಗಳಿಂದ ಸೋತಿತು. ಈ ಪಂದ್ಯದ ಪಂದ್ಯ ಪುರುಷೋತ್ತಮ ಶತಕ ಹೊಡೆದ "ಕ್ಲೈವ್ಲಾಯ್ಡ". ಮೊದಲ ಬಾರಿಗೆ ವಿಶ್ವಕಪ್ ಗೆದ್ದ ತಂಡ ವೆಸ್ ್ಟ ಇಂಡೀಸ್.

ಎರಡನೇ ವಿಶ್ವಕಪ್ ವಿಶೇಷ

ಈ ವಿಶ್ವಕಪ್ ನಡೆದದ್ದು ಇಂಗ್ಲೆಂಡಿನಲ್ಲಿ. ಈ ವಿಶ್ವಕಪ್ನಲ್ಲಿ ಆಟಗಾರರ ಗುತ್ತಿಗೆ ವಿವಾದ ಕಾಡಿತು. ಈ ವಿಶ್ವಕಪ್ನ ಫೈನಲ್ನಲ್ಲಿ ಆಡಿದ ತಂಡಗಳು ವೆಸ್ಟ್ಇಂಡೀಸ್ ಮತ್ತು ಇಂಗ್ಲೆಂಡ್.ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ ವಿವಿಯನ್ ರಿಚಡ್ಸರ್್ ನೆರವಿನಿಂದ 157 ಎಸೆತಗಳಲ್ಲಿ ಅಜೇಯವಾದ 138 (11 ಬೌಂಡರಿ, 3 ಸಿಕ್ಸರ್). ಇದರಿಂದಾಗಿ ಕ್ಲೈವ್ ಲಾಯ್ಡ್ ಬಳಗ 60 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 286 ರನ್ ಪೇರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 51 ಓವರ್ಗಳಲ್ಲಿ 191 ರನ್ಗಳಿಗೆ ಆಲೌಟ್ ಆಗಿ 92 ರನ್ಗಳಿಂದ ಸೋತಿತು. ಇಂಗ್ಲೆಂಡಿನ ಕುಸಿತಕ್ಕೆ ಕಾರಣರಾದವರು ಪ್ರಭಾವಿ ಬೌಲಿಂಗ್ ದಾಳಿ ನಡೆಸಿದ ಜೊಯಲ್ ಗಾರ್ನರ್ (11-0-38-5). ವಿಶ್ವಕಪ್ ಗೆದ್ದ ತಂಡ ವೆಸ್ಟ್ ಇಂಡೀಸ್.

ಮೂರನೇ ವಿಶ್ವಕಪ್ ವಿಶೇಷ

ಈ ವಿಶ್ವಕಪ್ ನಡೆದದ್ದು ಇಂಗ್ಲೆಂಡಿನಲ್ಲಿ. ಈ ವಿಶ್ವಕಪ್ನಲ್ಲಿ ಫೈನಲ್ಗೆ ಏರಿದ ತಂಡಗಳು ಈ ಟೂನರ್ಿಯ ಕರಿಕುದುರೆ ಆಗಿದ್ದ ಭಾರತ ಮತ್ತು 2 ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಗಳು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 54.4 ಓವರುಗಳಲ್ಲಿ 183 ರನ್ನುಗಳಿಗೆ ಅಲೌಟ್ ಆಯಿತು. ಈ ಮೊತ್ತವನ್ನು ಬೆಂಬತ್ತಿದ ವೆಸ್ಟ್ ಇಂಡೀಸ್ ತಂಡವು ಮೊದಲ ವಿಕೆಟಿಗೆ 50 ರನ್ ಪೇರಿಸಿದಾಗ ಭಾರತವು ಸುಲಭವಾಗಿ ಸೋಲುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಭಾರತದ ಮದನ್ ಲಾಲ್ (31-3) ಹಾಗೂ ಮೊಹಿಂದರ್ ಅಮರನಾಥ್ (12-3) ಮತ್ತು ಬಲ್ವಿಂದರ್ ಸಂಧು (32-2) ಪ್ರಭಾವಿ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡವನ್ನು 52 ಓವರ್ಗಳಲ್ಲಿ 140 ರನ್ಗಳಿಗೆ ಅಲೌಟ್ ಆಗಿ 43 ರನ್ನುಗಳಿಂದ ಗೆದ್ದಿತು. ಇದರಿಂದಾಗಿ ಭಾರತ ತಂಡವು ಪ್ರಥಮ ಬಾರಿಗೆ ವಿಶ್ವಕಪ್ಗೆ ಮುತ್ತಿಕ್ಕಿತು. ಪ್ರಭಾವಿ ಬೌಲಿಂಗ್ ನಡೆಸಿದ ಮೊಹಿಂದರ್ ಅಮರನಾಥ್ (12ಕ್ಕೆ 3) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ನಾಲ್ಕನೇ ವಿಶ್ವಕಪ್ ವಿಶೇಷ

ಈ ವಿಶ್ವಕಪ್ ನಡೆದದ್ದು ಏಷ್ಯಾದ 3 ರಾಷ್ಟ್ರಗಳಾದ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ. ಈ ವಿಶ್ವಕಪ್ನಲ್ಲಿ ಫೈನಲ್ಗೆ ಏರಿದ್ದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು.ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡವು 50 ಓವರುಗಳಲ್ಲಿ 253 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಪೇರಿಸಿ 7 ರನ್ಗಳ ರೋಚಕ ವಿಜಯ ಸಾಧಿಸಿತು. ಅಲನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಯಾ ತಂಡಕ್ಕೆ ಪ್ರಪ್ರಥಮ ಬಾರಿಗೆ ವಿಶ್ವಕಪ್ಗೆ ಮುತ್ತಿಕ್ಕುವ ಅವಕಾಶ ಲಭಿಸಿತು.

ಐದನೇ ವಿಶ್ವಕಪ್ ವಿಶೇಷ

ಈ ವಿಶ್ವಕಪ್ ನಡೆದದ್ದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿನಲ್ಲಿ. ಈ ವಿಶ್ವಕಪ್ನಲ್ಲಿ ಬಿಳಿ ಚೆಂಡುಗಳನ್ನು ಬಳಸಲಾಯಿತು. ಆಟಗಾರರು ಪ್ರಥಮ ಬಾರಿಗೆ ಬಣ್ಣದ ಉಡುಪು ಧರಿಸಿ ಆಡಿದರು.ಇಲ್ಲಿ ಫೈನಲ್ಗೆ ಏರಿದ ತಂಡಗಳು ಪಾಕಿಸ್ತಾನ ಮತ್ತು ಇಂಗ್ಲೆಂಡ್. ಈ ಪಂದ್ಯವನ್ನು 22 ರನ್ಗಳಿಂದ ಗೆದ್ದ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನ ತಂಡವು ಪ್ರಥಮ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು. ಪಂದ್ಯಶ್ರೇಷ್ಠ್ಟ ಪ್ರಶಸ್ತಿ ವಾಸಿಮ್ ಅಕ್ರಮ್ ಪಾಲಾಯಿತು.

ಆರನೇ ವಿಶ್ವಕಪ್ ವಿಶೇಷ

ಈ ವಿಶ್ವಕಪ್ ನಡೆದದ್ದು ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ. ಫೈನಲ್ಗೇರಿದ ತಂಡಗಳು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 242 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಅರವಿಂದ ಡಿ'ಸಿಲ್ವ ನಾಯಕತ್ವದ ಶ್ರೀಲಂಕಾ 46.2 ಓವರುಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತು. ಅರವಿಂದ ಡಿ'ಸಿಲ್ವ ನಾಯಕನ ಆಟವನ್ನು ಆಡಿದರು. 107 ರನ್ ಮತ್ತು 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠರೆನಿಸಿದರು. ಅರವಿಂದ ಡಿ'ಸಿಲ್ವ ಅವರ ಆಲ್ ರೌಂಡ್ ಆಟದಿಂದಾಗಿ ಶ್ರೀಲಂಕಾ ತಂಡ ವಿಶ್ವಕಪ್ ಗೆದ್ದಿತು.

ಏಳನೇ ವಿಶ್ವಕಪ್ ವಿಶೇಷ

ಈ ವಿಶ್ವಕಪ್ ನಡೆದದ್ದು ಇಂಗ್ಲೆಂಡಿನಲ್ಲಿ. ಫೈನಲ್ಗೆ ಏರಿದ ತಂಡಗಳು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ.ಫೈನಲ್ ನಡೆದದ್ದು ಕ್ರಿಕೆಟ್ನ ಮೆಕ್ಕಾ ಎನಿಸಿರುವ ಲಾಡ್ಸರ್್ ಕ್ರೀಡಾಂಗಣದಲ್ಲಿ. ಮೊದಲು ಬ್ಯಾಟ್ ನಡೆಸಿದ ಪಾಕಿಸ್ತಾನ 39 ಓವರುಗಳಲ್ಲಿ 132 ರನ್ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಸ್ಟೀವ್ ವಾ ಪಡೆಯಾದ ಆಸ್ಟ್ರೇಲಿಯಾ 20.1 ಓವರ್ಗಳಲ್ಲಿ ಗುರಿ ಮುಟ್ಟಿ ಎರಡನೇ ಬಾರಿ ವಿಶ್ವಕಪ್ನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಶೇನ್ವಾನರ್್ ಪಂದ್ಯ ಶ್ರೇಷ್ಠರಾಗಲು ಅರ್ಹರಾದರು..

ಎಂಟನೇ ವಿಶ್ವಕಪ್ ವಿಶೇಷ

ಈ ವಿಶ್ವಕಪ್ ನಡೆದದ್ದು ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಂಬ್ವೆಯಲ್ಲಿ.ಫೈನಲಿಗೇರಿದ ತಂಡಗಳು ಒಂದು ವಿಶ್ವಕಪ್ ಗೆದ್ದ ಭಾರತ ಮತ್ತು ಎರಡು ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಗಳು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 359 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ 39.2 ಓವರುಗಳಲ್ಲಿ 234 ರನ್ಗಳಿಗೆ ಆಲೌಟ್ ಆಗಿ 125 ರನ್ಗಳಿಂದ ಹೀನಾಯವಾಗಿ ಸೋತಿತು. ರಿಕಿಪಾಂಟಿಂಗ್ ಪಂದ್ಯ ಶ್ರೇಷ್ಠ ಎನಿಸಿದರು. ಎರಡು ವಿಶ್ವಕಪ್ ಆಸ್ಟ್ರೇಲಿಯವು ಮೂರನೇ ಬಾರಿಗೆ ಹಾಗೂನಿರಂತರವಾಗಿ 2ನೇ ಬಾರಿಗೆ ವಿಶ್ವಕಪ್ಗೆ ಮುತ್ತಿಕ್ಕಿತು.

ಒಂಬತ್ತನೇ ವಿಶ್ವಕಪ್ ವಿಶೇಷ

ಈ ವಿಶ್ವಕಪ್ ನಡೆದದ್ದು ಕೆರಿಬಿಯನ್ ಎಂದೇ ಹೆಸರಾದ ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ.ಇಲ್ಲಿ ಭಾರತವು ಪ್ರಥಮ ಸುತ್ತಿನಲ್ಲಿಯೇ ನಿರ್ಗಮಿಸಿತು.ಫೈನಲ್ಗೆ ಏರಿದ ತಂಡಗಳು ಒಂದು ವಿಶ್ವಕಪ್ ಗೆದ್ದ ಶ್ರೀಲಂಕಾ ಮತ್ತು 1987ರಲ್ಲಿ ಒಂದು ವಿಶ್ವಕಪ್ ಹಾಗೂ 1999 ಮತ್ತು 2003ರಲ್ಲಿ ನಿರಂತರವಾಗಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ. ಮಳೆಯಿಂದ ಅಡಚಣೆ ಉಂಟಾದ ಈ ಪಂದ್ಯವನ್ನು 38 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರುಗಳಲ್ಲಿ 281 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾಗೆ ಡಕ್ವಥರ್್- ಲೂಯಿಸ್ ನಿಯಮದ ಪ್ರಕಾರ 36 ಓವರುಗಳಲ್ಲಿ 269 ರನ್ನುಗಳ ಗುರಿಯನ್ನು ನೀಡಲಾಯಿತು. ಆದರೆ ಶ್ರೀಲಂಕಾವು 36 ಓವರುಗಳಲ್ಲಿ 215 ರನ್ನುಗಳನ್ನು ಪೇರಿಸಲಷ್ಟೇ ಶಕ್ತವಾಯಿತು.ಇದರಿಂದಾಗಿ ಆಸ್ಟ್ರೇಲಿಯಾವು ನಾಲ್ಕನೇ ಬಾರಿ ಮತ್ತು ನಿರಂತರಾವಾಗಿ ಮೂರನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡು ಹೊಸವಿಶ್ವದಾಖಲೆ ನಿಮರ್ಿಸಿತು.ಗಿಲ್ ಕ್ರಿಸ್ಟ್ ಪಂದ್ಯ ಶ್ರೇಷ್ಠರಾದರು.

Sunday, December 2, 2007

Gou Samrakshanege Hosa Bhashya

ಗೋ

ಸಂರಕ್ಷಣೆಗೆ

ಹೊಸ ಭಾಷ್ಯ

ಬರೆದ

ಬೆಂಗಳೂರು





ದೀಪಾವಳಿಗೆ ಮೊದಲೇ ತಿಂಗಳುಗಟ್ಟಲೆ ದೀಪ ಸಂಭ್ರಮ. ಬೆಂಗಳೂರು ಬಡಾವಣೆಗಳಲ್ಲಿ ಗೋವುಗಳಿಗೆ ಆರತಿ, ಪೂಜೆ. ಗೋ ಸಂರಕ್ಷಣೆಯ ಪ್ರತಿಜ್ಞೆ. ಕಟ್ಟ ಕಡೆಗೆ ನವೆಂಬರ್ 18ರಂದು ಅರಮನೆ ಮೈದಾನದಲ್ಲಿ 'ಕೋಟಿ ನೀರಾಜನ'ದೊಂದಿಗೆ ಗೋ ಸಂರಕ್ಷಣಾ ಚಳವಳಿಗೆ ಬೆಂಗಳೂರು ಹೊಸ ಭಾಷ್ಯ ಬರೆಯಿತು.


ನೆತ್ರಕೆರೆ ಉದಯಶಂಕರ

ಪರೋಪಕಾರಾರ್ಥಂ ಇದಂ ಶರೀರಂ ಎಂಬ ಮಾತನ್ನು ಅಕ್ಷರಶಃ ಪಾಲಿಸುವ ಗೋವುಗಳಿಗೆ ಕೃತಯುಗದಲ್ಲಿ ಸಂಪೂರ್ಣ ಸಮೃದ್ಧಿ ಸ್ವಾತಂತ್ರ್ಯವಿತ್ತು. ಅದು ಅವುಗಳು ಖುಷಿಯಿಂದ ವಿಹರಿಸುತ್ತಿದ್ದ ಕಾಲ. ತ್ರೇತಾಯುಗದಲ್ಲಿ ಗೋವುಗಳ ಮೇಲೆ ಆಕ್ರಮಣ ಆರಂಭ. ಆದರೆ ಅವುಗಳು ತಮ್ಮ ಸ್ವರಕ್ಷಣೆಯ ಸಾಮಥ್ರ್ಯ ಹೊಂದಿದ್ದ ಕಾಲವದು. ಗೋವನ್ನು ಎಳೆದೊಯ್ಯಲು ಬಂದ ವಿಶ್ವಾಮಿತ್ರ ಪರಾಜಿತನಾಗಿ ಕೊನೆಗೆ ತಲೆಬಾಗಿ ನಮಿಸುತ್ತಾನೆ. ದ್ವಾಪರಯುಗದಲ್ಲಿ ಗೋವುಗಳು ತಮ್ಮ ಸಾಮಥ್ರ್ಯ ಕಳೆದುಕೊಂಡವು. ಆದರೆ ಅವುಗಳ ರಕ್ಷಣೆಗೆ ಶ್ರೀಕೃಷ್ಣ, ಪಾಂಡವರಿದ್ದರು. ಕಲಿಯುಗದಲ್ಲಿ ಗೋವುಗಳು ಸಂಪೂರ್ಣ ಅಸುರಕ್ಷಿತ. ಅವುಗಳಿಗೆ ರಕ್ಷಿಸಿಕೊಳ್ಳುವ ಸ್ವ ಸಾಮಥ್ರ್ಯವೂ ಇಲ್ಲ, ಅವುಗಳನ್ನು ರಕ್ಷಿಸುವವರೂ ಇಲ್ಲ. ಹಾಗಾಗಿಯೇ ಅವುಗಳು ಇಂದು ಸಹಜವಾಗಿ ಹುಟ್ಟುವ, ಸಹಜವಾಗಿ ಬದುಕುವ, ಸಹಜವಾಗಿ ಸಾಯುವ ಸ್ವಾತಂತ್ರ್ಯವನ್ನೂ ಕಳೆದುಕೊಂಡಿವೆ. ಮಾನವರಿಗೆ ಹಾಲು ನೀಡುವ, ಉಳುವ, ಭಾರ ಹೊರುವ ಯಂತ್ರಗಳಾಗಿ ಕಡೆಗೆ ಕಸಾಯಿಖಾನೆ ಸೇರಿ ಮಾಂಸದ ಮುದ್ದೆಗಳಾಗಿ ಅಂಗಡಿಗಳಲ್ಲಿ ಬಿಕರಿಯಾಗುತ್ತವೆ.

ಯಾರಿಗೂ ತೊಂದರೆ ಮಾಡದ, ಹಾಲು ನೀಡುವುದರಿಂದ ಹಿಡಿದು, ಗೊಬ್ಬರ ಒದಗಿಸುವರೆಗೆ ಪ್ರತಿ ಹಂತದಲ್ಲೂ ಮಾನವರಿಗೆ ಉಪಕಾರವನ್ನೇ ಮಾಡುವ ದನಗಳ ಈ ಪರಿಯ ದುರವಸ್ಥೆಯ ಕಥೆ ಅಂದು ನೃತ್ಯ ರೂಪಕದಲ್ಲಿ ಮೂಡಿ ಬಂದಾಗ ಲಕ್ಷಾಂತರ ಮಂದಿಯ ಕಣ್ಣುಗಳು ತೇವಗೊಂಡವು. ನೇರವಾಗಿ ನೋಡುತ್ತಿದ್ದವರಷ್ಟೇ ಅಲ್ಲ, ಟಿ.ವಿ.ಯ ಮೂಲಕ ನೋಡುತ್ತಿದ್ದವರ ಹೃದಯಗಳೂ ಕರಗಿದವು.ನೃತ್ಯದ ಕೊನೆಗೆ ಈ ಕಥೆಯನ್ನು ಕಣ್ಮುಂದೆ ಸೃಷ್ಟಿಸಿದ 'ಕಾಮಧೇನು' ಪಾತ್ರಧಾರಿ ಕರುಣೆಯ ಜ್ಯೋತಿಯನ್ನು ಸ್ವಾಮೀಜಿ ಕೈಯಲ್ಲಿ ಕೊಡುತ್ತಾರೆ. ಕ್ಷಣಮಾತ್ರದಲ್ಲಿ ಆ ಜ್ಯೋತಿ ಇಡೀ ಸಭೆಯಲ್ಲಿ ವ್ಯಾಪಿಸುತ್ತದೆ. ಲಕ್ಷ ಲಕ್ಷ ಜ್ಯೋತಿಗಳು ಭೂಮಿಯ ಮೇಲೊಂದು ನಕ್ಷತ್ರ ಲೋಕವನ್ನೇ ಸೃಷ್ಟಿಸುತ್ತವೆ. ಅದೇ ವೇಳೆಗೆ ಭೂಮಿಯಿಂದ ಬಾನಿನೆತ್ತರಕ್ಕೆ ಮೇಲೆದ್ದು ಬರುವ ಪುಣ್ಯಕೋಟಿಗೆ ಈ ಜ್ಯೋತಿಗಳೇ ಆರತಿಯಾಗುತ್ತವೆ. ಮಂತ್ರಘೋಷದ ಮಧ್ಯೆ 'ಗೋಮಾತೆಗೆ ಕೋಟಿ ನೀರಾಜನ' ಸಲ್ಲುತ್ತದೆ. ಜೊತೆಗೆ ಇಡೀ ಸಭೆ ಗೋವುಗಳ ಸಂರಕ್ಷಣೆ, ಸಂವರ್ಧನೆಗೆ ಕೈಜೋಡಿಸುವ ಪ್ರತಿಜ್ಞೆ ಕೈಗೊಳ್ಳುತ್ತದೆ.

ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗೋವಿಗೆ 'ಕೋಟಿ ಆರತಿ' ಬೆಳಗುವ ಮೂಲಕ ರಾಜ್ಯದ ಮಹಿಳೆಯರು ತಾವು ಗೋವುಗಳ ಅಸಹಾಯಕತೆ ಕೊನೆಗೊಳಿಸಲು ಶ್ರಮಿಸುವ ಸಂದೇಶವನ್ನು ವಿಶ್ವಕ್ಕೆ ನೀಡುತ್ತಾರೆ. ಗೋವುಗಳತ್ತ ಕರುಣೆಯ ದೀಪ ಬೆಳಗುತ್ತಾರೆ.ಶತಾವಧಾನಿ ಡಾ. ಆರ್. ಗಣೇಶ್ ಅವರ ಲೇಖನಿಯಲ್ಲಿ ಮೂಡಿ ಬಂದ 'ಗೋ ವಿಶ್ವರೂಪ ದರ್ಶನ'ದ ಈ ಕಥೆಯನ್ನು ನಿರುಪಮಾ ರಾಜೇಂದ್ರ ತಂಡದ ಕಲಾವಿದರು ನೃತ್ಯ ರೂಪಕದಲ್ಲಿ ಪ್ರದಶರ್ಿಸುವ ಮೂಲಕ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಮನದಾಳದ 'ಗೋ ಸಂರಕ್ಷಣೆಯ' ಅಭಿಯಾನಕ್ಕೆ ಹೊಸ ಆಯಾಮವನ್ನೇ ನೀಡುತ್ತಾರೆ. ಅದಕ್ಕೂ ಮುನ್ನ 'ಅಮೃತ ಕಿರಣ' ವೇದಿಕೆಯಲ್ಲಿ ಗೀರ್ ಮತ್ತು ಕನರ್ಾಟಕದ ಗೋ ತಳಿಗಳ ಸುಂದರ ಪ್ರತಿಕೃತಿಗಳ ಸಮ್ಮುಖದಲ್ಲಿ ಕಪಿಲೆ ದನಕ್ಕೆ 'ರಕ್ಷೆ' ಕಟ್ಟುವುದರೊಂದಿಗೆ ಆರಂಭವಾದ ಸಮಾವೇಶದಲ್ಲಿ ಸುಮಾರು ಆರು ತಾಸುಗಳ ಕಾಲ ಗೋ ಸಂರಕ್ಷಣೆ, ಗೋವೈಭವ, ಗೋವಿನ ಉಪಯುಕ್ತತೆ, ಅವುಗಳ ಇಂದಿನ ದಯನೀಯ ಪರಿಸ್ಥಿತಿಗಳ ಬಗ್ಗೆ ಉಪನ್ಯಾಸ, ಮಕ್ಕಳು, ಮಹಿಳೆಯರಿಂದ ನೃತ್ಯ, ಗೀತೆಗಳ ಕಾರ್ಯಕ್ರಮ. ಇಡೀ ಕಾರ್ಯಕ್ರಮಕ್ಕೆ ಸಂಗೀತ ನಿದರ್ೇಶಕ ವಿ. ಮನೋಹರ್ ಅವರ ನಿದರ್ೇಶನ.

ಬೆಂಗಳೂರಿನ ಮಂದಿ ತಮ್ಮ ಕಣ್ತುಂಬಿಕೊಂಡ ಈ ಅಪರೂಪದ 'ಕೋಟಿ ನೀರಾಜನ' ಕಾರ್ಯಕ್ರಮಕ್ಕೆ ಮೂರು ನಾಲ್ಕು ತಿಂಗಳುಗಳಿಂದಲೇ ಸಿದ್ಧತೆ ನಡೆದಿತ್ತು. ಸ್ವಾಮೀಜಿ ತಮ್ಮ ಚಾತುರ್ಮಾಸ್ಯವನ್ನು ಇದಕ್ಕಾಗಿ ಧಾರೆ ಎರೆದಿದ್ದರು.ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ 'ಗೋಸಂಧ್ಯಾ' ಕಾರ್ಯಕ್ರಮಗಳ ಮೂಲಕ ಗೋಧೂಳಿ ಹೊತ್ತಿನಲ್ಲಿ ಗೋವುಗಳಿಗೆ ಆರತಿ ಬೆಳಗುವ, ಗೋವಿನ ಪರಿಸ್ಥಿತಿ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯ ನಡೆದಿತ್ತು. ರಾಮಚಂದ್ರಾಪುರ ಮಠದ ಮೂಲಕ ಗೋವಿನ ಉಪಯುಕ್ತತೆಗಳ ಬಗ್ಗೆ ವೈದ್ಯರಿಂದ ತಂತ್ರಜ್ಞರವರೆಗೆ, ಶಿಕ್ಷಕರಿಂದ ಉದ್ಯಮಿಗಳವರೆಗೆ, ಕಲಾವಿದರಿಂದ ಪತ್ರಕರ್ತರವರೆಗೆ ವಿವಿಧ ಸ್ತರಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆದಿತ್ತು. ಬೆಂಗಳೂರಿನ ಎಚ್. ಬಿ. ಆರ್. ಬಡಾವಣೆಯ ಕಾಚರಕನಹಳ್ಳಿ, ರಾಜರಾಜೇಶ್ವರಿ ನಗರ, ರಾಜಾಜಿ ನಗರ, ಸಂಜಯ ನಗರ, ಆರ್.ಟಿ. ನಗರ, ಬಸವನಗುಡಿ, ವತರ್ೂರು, ಕೋರಮಂಗಲ, ಗಿರಿನಗರ ಮತ್ತಿತರ ಕಡೆಗಳಲ್ಲೂ ಇಂತಹ ಸಮಾವೇಶಗಳು ನಡೆದಿದ್ದವು. ಭಾರತದ 32ಕ್ಕೂ ಹೆಚ್ಚಿನ ವೈವಿಧ್ಯಮಯ ಗೋತಳಿಗಳ ಚಿತ್ರವನ್ನು ಕಣ್ಮುಂದೆ ತರುವಂತಹ ಗೋವುಗಳ ಪುಟ್ಟಪುಟ್ಟ ಮೂತರ್ಿಗಳನ್ನು ಒಳಗೊಂಡ 'ರಥಯಾತ್ರೆ' ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಚರಿಸಿತ್ತು. ಗೋವಿನ ಹಾಡು ಎಲ್ಲೆಡೆಗಳಲ್ಲಿ ಮಾರ್ದನಿಸಿತ್ತು. ಗವ್ಯ ಚಿಕಿತ್ಸೆ, ಗೋವುಗಳ ಪ್ರದರ್ಶನ, ಗೋಮೂತ್ರ- ಗೋಮಯದಿಂದ ತಯಾರಿಸಿದ ಔಷಧಿ, ಸೌಂದರ್ಯ ಸಾಧನಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾಪೂರ ನಡೆದಿತ್ತು.

ಎರಡನೆಯ ಸ್ವಾತಂತ್ರ್ಯ ಸಂಗ್ರಾಮ: ಗೋ ಸಂರಕ್ಷಣಾ ಚಳವಳಿಯನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂಬುದಾಗಿ ಬಣ್ಣಿಸುವ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಈ ಚಳವಳಿಯನ್ನು ಬೆಂಗಳೂರಿನಲ್ಲೇ ಆರಂಭಿಸಿದ್ದೇನಲ್ಲ. ಕೆಲವು ವರ್ಷಗಳ ಹಿಂದೆಯೇ 'ಕಾಮದುಘಾ' ಯೋಜನೆಯ ಮೂಲಕ ಹೊಸನಗರದಲ್ಲೇ ಅವರು ಈ ಚಳವಳಿಗೆ ಅಡಿಗಲ್ಲು ಹಾಕಿದ್ದಾರೆ.

ಸ್ವಾತಂತ್ರ್ಯ ಸಿಗುವುದಕ್ಕೂ ಪೂರ್ವದಲ್ಲಿ ಸುಮಾರು 70ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಭಾರತೀಯ ಗೋವುಗಳ ತಳಿಗಳು ಅಳಿಯುತ್ತಾ ಈಗ ಸುಮಾರು 27-30ರ ಅಂಚಿಗೆ ತಲುಪಿರುವುದು, ಸ್ವಾವಲಂಬಿಗಳಾಗಬೇಕಿದ್ದ ರೈತರು ಆತ್ಮಹತ್ಯೆ ಮಾಡುವಂತಹ ದುಃಸ್ಥಿತಿಗೆ ತಲುಪಿರುವುದು ಭಾರತೀಯ ಗೋವಿನ ಮಹತ್ವವನ್ನು ಮರೆತದ್ದರಿಂದಲೇ ಎಂಬುದು ಸ್ವಾಮೀಜಿ ಅವರ ಪ್ರತಿಪಾದನೆ. ಅದಕ್ಕಾಗಿಯೇ ಭಾರತೀಯ ಪರಿಸರಕ್ಕೆ ಒಗ್ಗಿಕೊಳ್ಳಬಲ್ಲಂತಹ, ಅತಿವೃಷ್ಟಿಯಿಂದ ಹಿಡಿದು ಅನಾವೃಷ್ಟಿಯವರೆಗೆ ಯಾವುದೇ ಪರಿಸ್ಥಿತಿಯನ್ನು ತಾಳಿಕೊಳ್ಳಬಲ್ಲಂತಹ ಭಾರತೀಯ ಗೋವುಗಳ ಸಂರಕ್ಷಣೆಯ ಕಾರ್ಯಕ್ಕೆ 'ಕಾಮದುಘಾ' ಮೂಲಕ ಅವರು ಕೈಹಾಕಿದರು.

ಅಳಿವಿನ ಅಂಚಿನಲ್ಲಿ ಇರುವ ಭಾರತೀಯ ಗೋವುಗಳ ಸಂರಕ್ಷಣೆ ಸಂವರ್ಧನೆಗಾಗಿ ಈ ಯೋಜನೆಯ ಅಡಿಯಲ್ಲಿ 27ಕ್ಕೂ ಹೆಚ್ಚು ಭಾರತೀಯ ಗೋ ತಳಿಗಳನ್ನು ದೇಶದಾದ್ಯಂತದಿಂದ ಸಂಗ್ರಹಿಸಿ ಸಂರಕ್ಷಿಸಲು 'ಅಮೃತಧಾರಾ'' ಗೋಶಾಲೆಗಳನ್ನು ಸ್ಥಾಪಿಸಿದರು. ಹೊಸನಗರ, ಬೆಂಗಳೂರಿನ ಕಗ್ಗಲಿಪುರ, ಮೈಸೂರು, ಮಂಗಳೂರಿನ ಮುಳಿಯ, ವಿಟ್ಲ ಸಮೀಪದ ಪೆರಾಜೆ, ಕೇರಳದ ಬಜಕ್ಕೂಡ್ಲು ಮತ್ತಿತರ ಸ್ಥಳಗಳು ಸೇರಿದಂತೆ 18 ಕಡೆಗಳಲ್ಲಿ ಈಗ 'ಅಮೃತಧಾರಾ' ಗೋಶಾಲೆಗಳಿವೆ. ಇವುಗಳ ಸಂಖ್ಯೆಯನ್ನು 108ಕ್ಕೆ ಏರಿಸುವ ಗುರಿ ಅವರದ್ದು.ಜೊತೆಗೆ ಸಂಕಷ್ಟ ಕಾಲದಲ್ಲಿ ರೈತರಿಗೆ ಅವರ ಗೋವುಗಳ ರಕ್ಷಣೆಗೆ ನೆರವಾಗಲು ವಿಶಿಷ್ಟ ಕಲ್ಪನೆಯ 'ಗೋ ಬ್ಯಾಂಕ್', ಸಾವಯವ ಗೊಬ್ಬರ ಬಳಸಿ ಮಾಡುವಂತಹ ಕೃಷಿ ವಿಧಾನ ಮೂಲಕ ಭೂಮಿಯ ಅಂತಃಸತ್ವ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿಗಾಗಿ 'ಅಮೃತಸತ್ವ'' ಯೋಜನೆ, ಕಸಾಯಿಖಾನೆಗೆ ಹೋಗುವ ಗೋವುಗಳ ರಕ್ಷಣೆಗಾಗಿ ಗೋ ರಕ್ಷಾ ಪರಿಷತ್ತು, 'ಗೋ ಸಂಜೀವಿನಿ' ಯೋಜನೆ, ಗೋಮೂತ್ರ ಖರೀದಿಗೆ ಗವ್ಯ ಡೈರಿಗಳನ್ನೂ ಮಠ ಆರಂಭಿಸಿದೆ.ಔಷಧೀಯ ಗುಣ ಹೊಂದಿರುವ ಗೋಮೂತ್ರದಿಂದ ಅರ್ಕ ಮತ್ತಿತರ ಔಷಧಿ, ಕೇಶ ಸಂರಕ್ಷಕ, ದಂತ ಮಂಜನ, ಶ್ಯಾಂಪೂ, ಸ್ನಾನದ ಸಾಬೂನು, ಧೂಪ ಮತ್ತಿತರ ನಿತ್ಯ ಬಳಕೆ ವಸ್ತುಗಳು, ಸೌಂದರ್ಯ ಸಾಧನಗಳು, ಎರೆಗೊಬ್ಬರ ಇತ್ಯಾದಿಗಳನ್ನು ತಯಾರಿಸಿ ಜನಪ್ರಿಯಗೊಳಿಸುತ್ತಿರುವ ಮಠ, ವಿವಿಧ ರೋಗಗಳನ್ನು ಗುಣಪಡಿಸಬಲ್ಲಂತಹ ಗವ್ಯ ಚಿಕಿತ್ಸಾ ಕೇಂದ್ರಗಳನ್ನೂ ತೆರೆದಿದೆ.

ಇದರ ಹೊರತಾಗಿ ಕನರ್ಾಟಕ, ಕೇರಳದಲ್ಲಿ 2005ರಲ್ಲಿ ಗೋರಥಯಾತ್ರೆ, 2007ರ ಏಪ್ರಿಲ್ನಲ್ಲಿ 9 ದಿನಗಳ 'ವಿಶ್ವ ಗೋ ಸಮ್ಮೇಳನ'ವನ್ನೂ ಹೊಸನಗರದಲ್ಲಿ ಸಂಘಟಿಸಿ, ಗೋ ಸಂರಕ್ಷಣಾ ಚಳವಳಿಗೆ ಹೊಸ ಆಯಾಮ ನೀಡಿದೆ.ಈ ಎಲ್ಲ ಕಾರ್ಯಕ್ರಮಗಳ ಫಲವಾಗಿ ಹಲವಾರು ವೈದ್ಯರು ಗವ್ಯ ಚಿಕಿತ್ಸೆ ನೀಡಲು, ಉದ್ಯಮಿಗಳು ಗೋ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬರುತ್ತಿದ್ದಾರೆ. ಇದು ಸಾಲದು, ಗೋಮೂತ್ರ ಸಂಗ್ರಹಕ್ಕೆ ಎಲ್ಲೆಡೆಗಳಲ್ಲಿ ಹಾಲಿನ ಡೈರಿ ಮಾದರಿಯಲ್ಲಿ ಗವ್ಯ ಡೈರಿಗಳ ಸ್ಥಾಪನೆ ಆಗಬೇಕು. ಗೋವಿನ ಮಹತ್ವದ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕು. ಗೋವಿನ ವಿಚಾರದಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಯೂ ಆಗಬೇಕು ಎನ್ನುತ್ತಾರೆ ರಾಘವೇಶ್ವರ ಭಾರತಿ ಸ್ವಾಮೀಜಿ. ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಘೋಷಣೆಯನ್ನೂ ಅವರು ಈಗಾಗಲೇ ಮಾಡಿದ್ದಾರೆ.

Advertisement