My Blog List

Thursday, July 31, 2008

Free Flight / Free Family Holiday..! ವಿದೇಶ ಪಯಣ ಮತ್ತು ರಜಾದ ಮಜಾ..!

Free Flight and Free

Family Holiday..!



What is the meaning of advertisement that 'Flight to West Indies Free or Family Holiday in India Free'. While Consumer thought that second part of the advertisement means that 'Holiday in India Free' includes travelling fare also. But Court ruled that it is not so. It means only stay arrangements in a Hotel in India is free and travelling fare will not include in it.

ವಿದೇಶ ಪಯಣ ಮತ್ತು

ರಜಾದ ಮಜಾ..!


ಗ್ರಾಹಕರು ನ್ಯಾಯಕ್ಕಾಗಿ ಹೋರಾಟ ಮಾಡಲು ಮುಂದಾಗುವಾಗ ತಾವು ಮಾಡಿಕೊಂಡ ಒಪ್ಪಂದ/ ಕರಾರುಗಳ ಇಲ್ಲವೇ ಪಡೆಯಲು ಮುಂದಾಗುವ ಸೇವೆಗಳಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡಿಕೊಳ್ಳಬೇಕು. ಇಂತಹ ಅಧ್ಯಯನ ಗುಣ ಬೆಳೆಸಿಕೊಳ್ಳದೇ ಇದ್ದರೆ ಎಲ್ಲ ಸಂದರ್ಭಗಳಲ್ಲೂ ನ್ಯಾಯ ಲಭಿಸೀತು ಎಂದು ಹೇಳಲು ಸಾಧ್ಯವಿಲ್ಲ.

ನೆತ್ರಕೆರೆ ಉದಯಶಂಕರ

'ಉಚಿತ ವಿದೇಶಯಾನ' ಅಥವಾ 'ದೇಶದೊಳಗೆ ಒಂದು ದಿನ ಉಚಿತ ರಜಾದ ಮಜಾ' ಎಂಬ ಜಾಹೀರಾತು ಕಂಡರೆ ನೀವು ಏನೆಂದು ಅರ್ಥ ಮಾಡಿಕೊಳ್ಳುತ್ತೀರಿ?

ಇಂತಹ ಸೂಕ್ಷ್ಮ ಬರಹದ ಗೊಂದಲದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಗ್ರಾಹಕ ಕಲಿತುಕೊಳ್ಳಬೇಕು. ಇಂತಹ ಆಕರ್ಷಕ ಜಾಹೀರಾತು ಒಂದಕ್ಕೆ ಮರುಳಾದ ಗ್ರಾಹಕರಿಬ್ಬರ ಪ್ರಕರಣಗಳಿವು. ಇಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ತೀರ್ಪು ಗ್ರಾಹಕರ ಪರವಾದರೂ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಅವರಿಗೆ ಗೆಲುವು ಲಭಿಸಲಿಲ್ಲ.

ಈ ಪ್ರಕರಣದ ಅರ್ಜಿದಾರರು: (1) ಬಾಗಲಕೋಟೆ ನವನಗರದ ನಿವಾಸಿ ವಕೀಲ ಸುರೇಶ ಮಲ್ಲಪ್ಪ ಕುಂಬಾರ, (2) ಬಾಗಲಕೋಟೆ ಸ್ಟೇಷನ್ ರಸ್ತೆಯ ಹೀರೋ ಹೋಂಡಾ ವ್ಯಾಪಾರಿ ವಿಜಯಾ ಮೋಟಾರ್ಸ್ನ ಫ್ರಾನ್ಸಿಸ್ ಕ್ಸೇವಿಯರ್. ಹಾಗೂ ಎರಡನೇ ಪ್ರಕರಣದ ಅರ್ಜಿದಾರರು: (2) ಬಾಗಲಕೋಟೆ ಥಲಗಿಹಾಳ ತಾಲ್ಲೂಕಿನ ನಿವಾಸಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ಹಾಗೂ ಬಾಗಲಕೋಟೆ ಸ್ಟೇಷನ್ ರಸ್ತೆಯ ಹೀರೋ ಹೋಂಡಾ ವ್ಯಾಪಾರಿ ಫ್ರಾನ್ಸಿಸ್ ಕ್ಸೇವಿಯರ್.
ಎರಡೂ ಪ್ರಕರಣಗಳ ಪ್ರತಿವಾದಿಗಳು: ಚಂಡೀಗಢದ ಮೆ. ಇನ್ನೋವೇಟಿವ್ ಇನ್ಸೆಂಟಿವ್ ಹಾಲಿಡೇಸ್ ಪ್ರೈವೇಟ್ ಲಿಮಿಟೆಡ್.

ಉಭಯ ಅರ್ಜಿದಾರರ ದೂರುಗಳ ಪ್ರಕಾರ ಅವರು ಪ್ರತಿವಾದಿಯ ಆಕರ್ಷಕ ಜಾಹೀರಾತು ಕಂಡು ಎರಡು ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಬೈಕುಗಳನ್ನು ಖರೀದಿಸಿದರು. ಈ ಬೈಕುಗಳನ್ನು ಖರೀದಿಸಿದವರಿಗೆ ವೆಸ್ಟೀಂಡೀಸ್ ಗೆ ಉಚಿತ ಪ್ರವಾಸ ಅಥವಾ ಭಾರತದಲ್ಲಿ ಕುಟುಂಬ ಸಹಿತ ಉಚಿತ ರಜಾದ ಮಜಾ ಅವಕಾಶ ಎಂಬ ಜಾಹೀರಾತು ಇವರನ್ನು ಸೆಳೆದಿತ್ತು.

ಪ್ರತಿವಾದಿಯ ಜಾಹೀರಾತಿನ ಪ್ರಕಾರ ಹೀರೋ ಹೋಂಡಾ ಖರೀದಿಸಿದ ಯಾರು ಬೇಕಾದರೂ ಅವರಿಗೆ ನೀಡಲಾಗುವ ಸ್ಕ್ರಾಚ್ ಕಾರ್ಡ್ನ್ನು ಗೀರಿದಾಗ ಯಾವ ಬರಹ ಕಂಡು ಬರುತ್ತದೋ ಅದರ ಪ್ರಕಾರ ವೆಸ್ಟಿಂಡೀಸ್ ಗೆ ಉಚಿತ ಪ್ರವಾಸ ಮಾಡಬಹುದು ಅಥವಾ ಭಾರತದಲ್ಲಿ ಕುಟುಂಬ ಸಹಿತ ಉಚಿತ ರಜಾದ ಮಜಾ ಅನುಭವಿಸಬಹುದಾಗಿತ್ತು.

ಅರ್ಜಿದಾರರು ತಮಗೆ ನೀಡಲಾಗಿದ್ದ ಸ್ಕ್ರಾಚ್ ಕಾರ್ಡನ್ನು ಗೀರಿದಾಗ ಅದರಲ್ಲಿ 'ಭಾರತದಲ್ಲಿ ಕುಟುಂಬ ಸಹಿತವಾಗಿ ಉಚಿತ ರಜಾದ ಮಜಾ' ಎಂಬ ಬರಹ ಕಾಣಿಸಿತು.

ಅದಕ್ಕೆ ಅನುಗುಣವಾಗಿ ಪ್ರತಿವಾದಿಗಳು ಕೋಡೈಕನಾಲ್ ರಾಯಲ್ ಹೋಟೆಲಿನಲ್ಲಿ ಅವರಿಗೆ ಮೂರು ಹಗಲು, ಮೂರು ರಾತ್ರಿ ಕಾಲ ರಜಾ ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದರು.
ಆದರೆ ಅರ್ಜಿದಾರರು ಇದನ್ನು ತಿರಸ್ಕರಿಸಿದರು. ಅವರು ಇದನ್ನು ತಿರಸ್ಕರಿಸಲು ಮುಖ್ಯ ಕಾರಣ: ಕೊಡೈಕನಾಲಿನಲ್ಲಿ ಉಚಿತ ರಜಾದ ಮಜಾ ಅನುಭವಿಸಲು ಪ್ರತಿವಾದಿಗಳು ವಾಹನ ಮತ್ತು ಇತರ ವೆಚ್ಚಗಳನ್ನು ಭರಿಸಲು ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯನ್ನು ಪ್ರತಿವಾದಿ ತಿರಸ್ಕರಿಸಿದ್ದು.

ಅರ್ಜಿದಾರರು ಪ್ರತಿವಾದಿಯಿಂದ ಸೇವಾಲೋಪ ಆಗಿದೆ ಎಂದು ಆಪಾದಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.

ಪ್ರಕರಣಗಳ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರ ವಾದವನ್ನು ಪುರಸ್ಕರಿಸಿ, ಅರ್ಜಿದಾರರಿಗೆ ತಲಾ 20,000 ರೂಪಾಯಿಗಳ ಪರಿಹಾರ ನೀಡುವಂತೆ ಪ್ರತಿವಾದಿಗೆ ಆಜ್ಞಾಪಿಸಿತು.

ಜಿಲ್ಲಾ ಗ್ರಾಹಕ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಪ್ರತಿವಾದಿ ಸಂಸ್ಥೆಯು ರಾಜ್ಯ ಗ್ರಾಹಕ ನ್ಯಾಯಾಲಯದ ಕದ ತಟ್ಟಿತು.

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ಟಿ. ಹರಿಯಪ್ಪ ಗೌಡ ಮತ್ತು ಶ್ರೀಮತಿ ರಮಾ ಅನಂತ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರವಾಗಿ ಫ್ರಾನ್ಸಿಸ್ ಕ್ಸೇವಿಯರ್ ಮತ್ತು ಪ್ರತಿವಾದಿಗಳ ಪರವಾಗಿ ಶ್ರೀಮತಿ ಸಿ. ಶಂಕರ ರೆಡ್ಡಿ ಅವರ ಅಹವಾಲು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ರಾಜ್ಯ ಗ್ರಾಹಕ ನ್ಯಾಯಾಲಯ ಮೊತ್ತ ಮೊದಲನೆಯದಾಗಿ ಜಾಹೀರಾತನ್ನು ಎಚ್ಚರಿಕೆಯಿಂದ ಗಮನಿಸಿತು. 'ಫ್ಲೈ ಟು ವೆಸ್ಟ್ ಇಂಡೀಸ್ ಫ್ರೀ ಆರ್ ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' (ಅಂದರೆ ಉಚಿತವಾಗಿ ವೆಸ್ಟ್ ಇಂಡೀಸ್ ಪ್ರವಾಸ ಇಲ್ಲವೇ ಕುಟುಂಬ ಸಹಿತ ಭಾರತದಲ್ಲಿ ಉಚಿತವಾಗಿ ಕುಟುಂಬ ಸಹಿತ ರಜಾ ದಿನದ ಮಜಾ' ಎಂಬುದು ಜಾಹೀರಾತಿನ ವಿವರಣೆಯಾಗಿತ್ತು.

ಈ ಜಾಹೀರಾತಿನ ಪ್ರಕಾರ ಹೀರೋ ಹೋಂಡಾ ಖರೀದಿಸಿದಾಗ ಲಭಿಸಿದ ಸ್ಕ್ರಾಚ್ ಕಾರ್ಡ್ ಗೀರಿದಾಗ ಯಾವ ಕೊಡುಗೆಯ ಬರಹ ಕಾಣುತ್ತದೋ ಅದಕ್ಕೆ ಅವರು ಅರ್ಹರಾಗಿದ್ದರು.

ಅಂದರೆ ಗ್ರಾಹಕನಿಗೆ ಸ್ಕ್ರಾಚ್ ಕಾರ್ಡಿನಲ್ಲಿ 'ಫ್ಲೈ ಟು ವೆಸ್ಟ್ ಇಂಡೀಸ್ ಫ್ರೀ' ಎಂಬ ಬರಹ ಕಂಡರೆ ಆತನು ಉಚಿತ ವೆಸ್ಟ್ ಇಂಡೀಸ್ ಪ್ರವಾಸಕ್ಕೂ, ಸ್ಕ್ರಾಚ್ ಕಾರ್ಡಿನಲ್ಲಿ 'ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' ಎಂಬ ಬರಹ ಕಂಡುಬಂದರೆ ಭಾರತದಲ್ಲಿ ಕುಟುಂಬ ಸಹಿತವಾಗಿ ಉಚಿತ ರಜಾದ ಮಜಾ ಅನುಭವಿಸಲೂ ಅರ್ಹತೆ ಲಭಿಸುತ್ತಿತ್ತು.

ಸ್ಕ್ರಾಚ್ ಕಾರ್ಡ್ ಕೊಡುಗೆಯ ಪ್ರಕಾರ ಪ್ರತಿವಾದಿಯು ಅರ್ಜಿದಾರರ ಇಚ್ಛೆಯಂತೆಯೇ ಅವರನ್ನು ಕೊಡೈಕನಾಲ್ಗೆ ಕಳುಹಿಸಲು ಮತ್ತು ಅಲ್ಲಿ ರಾಯಲ್ ಹೋಟೆಲಿನಲ್ಲಿ ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆ ಮಾಡಿದರು.

ಆದರೆ ಅರ್ಜಿದಾರರು ಅದನ್ನು ಪಡೆದುಕೊಳ್ಳಲು ಮುಂದಾಗಲಿಲ್ಲ. ಪ್ರತಿವಾದಿಯು ಅಲ್ಲಿಗೆ ಹೋಗಲು ಶುಲ್ಕ ವಿಧಿಸಿದ್ದು ಸರಿಯಲ್ಲ, ಉಚಿತವಾಗಿ ಹೋಗಲು ವ್ಯವಸ್ಥೆ ಮಾಡಬೇಕಾಗಿತ್ತು ಎಂಬ ವಾದ ಅವರದಾಗಿತ್ತು.

'ಫ್ಲೈ ಟು ವೆಸ್ಟ್ ಇಂಡೀಸ್ ಫ್ರೀ ಆರ್ ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' ಎಂಬ ವಾಕ್ಯದಲ್ಲಿ ವೆಸ್ಟ್ ಇಂಡೀಸ್ಗೆ ಪ್ರವಾಸ ಮತ್ತು ಭಾರತದ ಒಳಗೆ ಉಚಿತವಾಗಿ ಕುಟುಂಬ ಸಹಿತವಾಗಿ ಉಚಿತ ರಜಾದ ಮಜಾ ಅವಕಾಶದ ಪ್ರಸ್ತಾಪವಿದ್ದುದನ್ನು ನ್ಯಾಯಾಲಯ ಗಮನಿಸಿತು. ಆದರೆ ಭಾರತದಲ್ಲಿ ಕುಟುಂಬ ಸಹಿತ ಉಚಿತ ರಜಾದ ಮಜಾ ಎಂಬ ಭರವಸೆಯ ಜೊತೆಗೆ ಸಂಚಾರ ಮತ್ತು ಇತರ ಸವಲತ್ತುಗಳ ಪ್ರಸ್ತಾಪ ಇರಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಕೊಡುಗೆಯ ಭರವಸೆ 'ಕೇವಲ ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' ಎಂದಷ್ಟೇ ಹೇಳಿತ್ತು.

ತಮ್ಮ ಕೊಡುಗೆಯಲ್ಲಿ ನೀಡಿದ ಭರವಸೆಯ ಪ್ರಕಾರ ಪ್ರತಿವಾದಿಗಳು ಕೋಡೈಕನಾಲಿನಲ್ಲಿ ಕುಟುಂಬ ಸಹಿತ ವಾಸ್ತವ್ಯಕ್ಕೆ ಅರ್ಜಿದಾರರ ಇಚ್ಛೆಯಂತೆಯೇ ಎಲ್ಲ ವ್ಯವಸ್ಥೆ ಮಾಡಿದ್ದರಿಂದ ಇಲ್ಲಿ ಸೇವಾಲೋಪ ಆಗಿಲ್ಲ ಎಂಬ ತೀರ್ಮಾನಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಬಂದಿತು.

ಸಾರಿಗೆ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಅರ್ಜಿದಾರರು ಪ್ರತಿವಾದಿ ನೀಡಿದ ಕೊಡುಗೆಯನ್ನು ಸ್ವೀಕರಿಸದೇ ಇದ್ದುದು ಒಪ್ಪುವಂತಹ ವಿಚಾರವಲ್ಲ ಎಂದು ಹೇಳಿದ ನ್ಯಾಯಾಲಯ ಈ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪು ಸಮರ್ಪಕ ಅಲ್ಲ ಎಂದು ನಿರ್ಧರಿಸಿತು.

ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ಅಂಗೀಕರಿಸಿದ ಪೀಠವು ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ರದ್ದು ಪಡಿಸಿ, ಜಿಲ್ಲಾ ಗ್ರಾಹಕ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾ ಮಾಡಿತು.

ಪ್ರತಿವಾದಿಯು ಉಭಯ ಪ್ರಕರಣಗಳಿಗೂ ಸಂಬಂಧಿಸಿದಂತೆ ಠೇವಣಿ ಇರಿಸಿದ್ದ ತಲಾ 11,000 ರೂಪಾಯಿಗಳನ್ನು ಪ್ರತಿವಾದಿ ಮನವಿಯ ಮೇರೆಗೆ ಹಿಂದಿರುಗಿಸುವಂತೆಯೂ ನ್ಯಾಯಾಲಯ ಆಜ್ಞಾಪಿಸಿತು.

ಇಂದಿನ ಇತಿಹಾಸ History Today ಜುಲೈ 31

ಇಂದಿನ ಇತಿಹಾಸ
ಜುಲೈ 31


1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಸಂಜಯ್ ದತ್ ಗೆ, ವಿಶೇಷ ಟಾಡಾ ನ್ಯಾಯಾಲಯ ಈದಿನ ಆರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25,000 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿತು. 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಸತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೂಗತ ಜಗತ್ತಿನ ವ್ಯಕ್ತಿಗಳು ನೀಡಿದ್ದ ಶಸ್ತ್ರಾಸ್ತ್ರಗಳನ್ನು ಪಡೆದಿದ್ದ ಆರೋಪ ಬಾಲಿವುಡ್ ಚಿತ್ರನಟ ಸಂಜಯ್ ದತ್ ಮೇಲಿತ್ತು. ಸಂಜಯ್ ದತ್ ಗೆ ಎಕೆ-56 ರೈಫಲ್ ಹೊಂದಲು ನೆರವಾದ ಆರೋಪಿ ಯೂಸುಫ್ ನಲ್ ವಲ್ಲಾಗೆ ಐದು ವರ್ಷಗಳ ಸಜೆ ಮತ್ತು ಇನ್ನೊಬ್ಬ ಆರೋಪಿ ಕೇಸರಿ ಅಡ್ಜಾನಿಯಾಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಧೀಶ ಪಿ.ಡಿ. ಖೋಡೆ ವಿಧಿಸಿದರು.

2015: ನವದೆಹಲಿ: ಲಿಬಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿ ಪ್ರಾಬಲ್ಯದ ಪ್ರದೇಶದಲ್ಲಿ ಜುಲೈ 29ರಂದು ಅಪಹರಿಸಲಾಗಿದ್ದ ನಾಲ್ವರು ಭಾರತೀಯರ ಪೈಕಿ ಇಬ್ಬರು ಕನ್ನಡಿಗರನ್ನು ಈದಿನ 31 ಜುಲೈ 2015ರಂದು ಬಿಡುಗಡೆ ಮಾಡಲಾಯಿತು.  ‘ಲಿಬಿಯಾದಲ್ಲಿ ಅಪಹರಿಸಲಾಗಿದ್ದ ಭಾರತೀಯರ ಪೈಕಿ ಲಕ್ಷ್ಮೀಕಾಂತ್ ಮತ್ತು ವಿಜಯ್ ಕುಮಾರ್ ಅವರ ಬಿಡುಗಡೆ ಮಾಡಿಸುವಲ್ಲಿ ನಾವು ಸಫಲರಾಗಿದ್ದೇವೆ ಎಂದು ತಿಳಿಸಲು ಸಂತೋಷವಾಗಿದೆ. ಇನ್ನಿಬ್ಬರ ಬಿಡುಗಡೆಗಾಗಿ ಯತ್ನಿಸುತ್ತಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಸಂಜೆ ಟ್ವೀಟ್ ಮಾಡಿದರು. ಇಬ್ಬರು ಕನ್ನಡಿಗರು ಸೇರಿದಂತೆ 4 ಮಂದಿ ದಕ್ಷಿಣ ಭಾರತೀಯರನ್ನು ಲಿಬಿಯಾದಲ್ಲಿ 29ರಂದು ಅಪಹರಿಸಲಾಗಿತ್ತು. ಉಗ್ರಗಾಮಿಗಳಿಂದ ಅಪಹರಣಗೊಂಡ ಕನ್ನಡಿಗರ ಪೈಕಿ ಲಕ್ಷ್ಮೀಕಾಂತ್ ರಾಯಚೂರಿನವರಾಗಿದ್ದು, ವಿಜಯಕುಮಾರ್ ಬೆಂಗಳೂರಿನವರು ಎಂದು ಹೇಳಲಾಗಿತ್ತು. ಇನ್ನಿಬ್ಬರನ್ನು ಹೈದರಾಬಾದ್​ನ ಬಲರಾಂ ಮತ್ತು ಶ್ರೀಕಾಕುಲಂನ ಗೋಪಾಲಕೃಷ್ಣ ಎಂಬದಾಗಿ ಗುರುತಿಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದ್ದವು. ಟ್ರಿಪೋಲಿ ಮತ್ತು ಟ್ಯುನಿಸ್​ನಿಂದ ಭಾರತಕ್ಕೆ ವಾಪಸಾಗುತ್ತಿದ್ದಾಗ ಇವರನ್ನ್ನು ಅಪಹರಿಸಲಾಗಿತ್ತು. ನಾಲ್ವರ ಪೈಕಿ ಮೂವರು ಲಿಬಿಯಾದ ಸೆರ್ಟೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ಒಬ್ಬರು ಅದೇ ವಿಶ್ವವಿದ್ಯಾಲಯದ ಜುಫ್ರಾ ಶಾಖೆಯಲ್ಲಿ ನೌಕರ ಎಂದು ಸರ್ಕಾರ ತಿಳಿಸಿತ್ತು.

2015: ನ್ಯೂಯಾರ್ಕ್: ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್ ರೋಗಿಗಳಿಗೆ ರೊಬೋಟ್ ಸರ್ಜರಿಗಳನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಭಾರತೀಯ ಮೂಲದ ಅಮೆರಿಕನ್ ಸರ್ಜನ್ ಗಿಲ್ ನೇತೃತ್ವದ ತಂಡ ಮಹತ್ವದ ಸಾಧನೆ ಮಾಡಿರುವುದಾಗಿ ಪ್ರಕಟಿಸಿತು. ಲಾಸ್ ಏಂಜೆಲಿಸ್​ನ ಯುಎಸ್​ಸಿ ಇನ್​ಸ್ಟಿಟ್ಯೂಟ್ ಆಫ್ ಯುರೋಲಜಿಯ (ಯುಎಸ್​ಸಿ ಮೂತ್ರಶಾಸ್ತ್ರ ಸಂಸ್ಥೆ) ವೈದ್ಯರ ತಂಡವು ಅತ್ಯಂತ ದೀರ್ಘವಾದ ಈ ಸರ್ಜರಿಯನ್ನು ಏಳು ಸಣ್ಣ ಛೇದನಗಳು ಮತ್ತು ನಾಲ್ಕು ರೊಬೋಟ್ ಉಪಕರಣಗಳನ್ನು ಮಾತ್ರ ಬಳಸಿ ಮಾಡಿತು.. ಡಾ. ಇಂದೇರ್​ಬಿರ್ ಎಸ್. ಗಿಲ್ ಈ ತಂಡದ ನಾಯಕರು. ಹೃದಯವನ್ನು ಮರು ಸಂರ್ಪಸುವ ಪ್ರಮುಖ ರಕ್ತನಾಳದಲ್ಲಿ ಕ್ಯಾನ್ಸರ್ ಪರಿಣಾಮವಾಗಿ ಮೂರನೇ ಹಂತದ ಹೆಪ್ಪುಗಟ್ಟುವಿಕೆ ಸಂಭವಿಸಿದಾಗ ಈ ಸರ್ಜರಿಯೇ ಮದ್ದು, ಬೇರೆ ದಾರಿಯಿಲ್ಲ. ಸಾಮಾನ್ಯವಾಗಿ ‘ಇನ್​ಫೆರಿಯರ್ ವೀನಾ ಕಾವಾ (ಐವಿಸಿ) ಥ್ರೊಂಬೆಕ್ಟೊಮಿ ಎಂಬುದಾಗಿ ಕರೆಯಲಾಗುವ ಈ ಕ್ಲಿಷ್ಟ ಸರ್ಜರಿಯನ್ನು ದೊಡ್ಡ ಗಾಯವನ್ನು ಪ್ರಾಥಮಿಕವಾಗಿಯೇ ಮಾಡಿ ಮಾಡಬೇಕಾಗುತ್ತದೆ. ಮೂತ್ರನಾಳದ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಡಲಾಗುವ ಈ ಕ್ಲಿಷ್ಟ ಸರ್ಜರಿಯು ಮೂತ್ರನಾಳ ಸಂಬಂಧಿ ಓಪನ್ ಸರ್ಜರಿಗಳಲ್ಲೇ ಅತ್ಯಂತ ಸವಾಲಿನದು ಎಂದು ಯುಎಸ್​ಸಿ ಇನ್​ಸ್ಟಿಟ್ಯೂಟ್​ನ ಡಾ. ಇಂದೇರ್​ಬಿರ್ ಎಸ್. ಗಿಲ್ ವಿವರಿಸುತ್ತಾರೆ. ಕೇವಲ 4ರಿಂದ 10 ರೋಗಿಗಳಿಗೆ ಅಥವಾ ಕಿಡ್ನಿ ಕ್ಯಾನ್ಸರ್ ಸಂದರ್ಭದಲ್ಲಿ ಇಂತಹ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಸ್ಯೆಯಾದಾಗ ಸರ್ಜರಿಯೊಂದೇ ದಾರಿ. ಈ ಕ್ಲಿಷ್ಟ ಸರ್ಜರಿಯನ್ನು ಕೇವಲ 7 ಸಣ್ಣ ಗಾಯ ಹಾಗೂ 4 ರೊಬೋಟ್ ಉಪಕರಣ ಬಳಸಿ ಮಾಡಿರುವುದು ಬಹುದೊಡ್ಡ ಸಾಧನೆ ಎಂಬುದು ಡಾ. ಗಿಲ್ ಹೇಳಿಕೆ. ತಂಡವು ಈವರೆಗೆ ಮೂತ್ರನಾಳದ ಕ್ಯಾನ್ಸರ್ ಮತ್ತು 3ನೇ ಹಂತದ ಥ್ರೋಂಬಿ ತಲುಪಿದ 9 ರೋಗಿಗಳಿಗೆ ಈ ‘ರೊಬೋಟ್ ಐವಿಸಿ ಥ್ರೊಂಬೊಕ್ಟೊಮಿ’ ನಡೆಸಿದೆ. ಏಳು ತಿಂಗಳ ಬಳಿಕ ಗಮನಿಸಿದಾಗ ಇವರೆಲ್ಲರೂ ಸಮಸ್ಯೆಯಿಂದ ಪಾರಾಗಿದ್ದು, ರೋಗ ಲಕ್ಷಣವೇ ಕಾಣಿಸಲಿಲ್ಲ’ ಎಂದು ಅವರು ನುಡಿದರು. ಬೆನ್ನಹುರಿಯಲ್ಲಿ ಗಡ್ಡೆ ಬೆಳೆದ ಒಬ್ಬ ರೋಗಿಗೆ ಮುಂದಿನ ಸರ್ಜರಿ ನಡೆಸಬೇಕಾಯಿತು ಎಂದು ಅವರು ಹೇಳಿದರು.  ‘ಹೆಪ್ಪುಗಟ್ಟಿದ್ದನ್ನು ತೆಗೆಯುವುದರ ಜೊತೆಗೆ ವ್ಯಾಧಿಪೀಡಿತ ಕಿಡ್ನಿಯನ್ನೂ ತೆಗೆದುಹಾಕಬೇಕಾದ್ದರಿಂದ ಮುಂದಿನ ಸಮಸ್ಯೆಗಳಾಗದಂತೆ ಸರ್ಜನ್ ಮೊದಲು ರಕ್ತ ಹೆಪ್ಪುಗಟ್ಟಿದ್ದನ್ನು ತೆಗೆಯಬೇಕು, ಮತ್ತು ರಕ್ತ ಮುಂದಕ್ಕೆ ಪ್ರವಹಿಸದಂತೆ ತಡೆಗಟ್ಟಬೇಕು. ಈ ಎಲ್ಲಾ ಸರ್ಜರಿ ಅಗತ್ಯಗಳನ್ನು ಸಂಪೂರ್ಣವಾಗಿ ರೊಬೋಟ್ ಬಳಸಿ ಯಾವುದೇ ತೆರೆದ ಗಾಯ ಇಲ್ಲದೆಯೇ ಮಾಡಲಾಗಿದೆ’ ಎಂದು ಅವರು ವಿವರಿಸಿದರು. ‘ನಮ್ಮ ಅನುಭವ ಇನ್ನೂ ಪ್ರಾಥಮಿಕವಾದುದಾಗಿದ್ದರೂ, ಭವಿಷ್ಯದಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗಬಲ್ಲುದು ಎಂಬುದು ನಮ್ಮ ನಂಬಿಕೆ’ ಎಂದು ಜರ್ನಲ್ ಆಫ್ ಯುರೋಲಜಿಯಲ್ಲಿ ಪ್ರಕಟಗೊಂಡಿರುವ ಪ್ರಬಂಧದಲ್ಲಿ ಗಿಲ್ ವಿಶ್ವಾಸ ವ್ಯಕ್ತ ಪಡಿಸಿದರು.

2015: ನವದೆಹಲಿ: ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಇತರ 8 ಮಂದಿಯ ವಿರುದ್ಧ ವಿಶೇಷ ನ್ಯಾಯಾಲಯವು  ದೋಷಾರೋಪ ಹೊರಿಸಿತು. ಪ್ರಕರಣದಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಮತ್ತು ಜಾರ್ಖಂಡ್​ನ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ. ಬಸು ಅವರ ವಿರುದ್ಧವೂ ನ್ಯಾಯಾಲಯ ದೋಷಾರೋಪ ಹೊರಿಸಿತು. ರಾಜ್ಯದ ರಾಜ್ಹರಾ ಪಟ್ಟಣದ ವಿನಿ ಐಯರ್ನ್ ಅಂಡ್ ಸ್ಟೀಲ್ ಉದ್ಯೋಗ್ ಲಿಮಿಟೆಡ್ (ವಿಐಎಸ್​ಯುುಎಲ್) ಕಂಪೆನಿಗೆ ಕಲ್ಲಿದ್ದಲು ನಿಕ್ಷೇಪ ಮಂಜೂರಾತಿ ಮಾಡಿದ್ದಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಒಟ್ಟು 9 ಜನರ ವಿರುದ್ಧ ಆರೋಪಗಳಿದ್ದವು. ಕಲ್ಲಿದ್ದಲು ಗಣಿ ನಿಕ್ಷೇಪ ಹಂಚಿಕೆ ಮಾಡುವಂತೆ ಕೋಡಾ, ಗುಪ್ತಾ ಮತ್ತಿತರರು ಸಂಚು ಹೂಡಿದ್ದರು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಆಪಾದಿಸಿತ್ತು. ಇದೇ ಸಂದರ್ಭದಲ್ಲಿ ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ವಿಜಯ್ ದರ್ದಾ ಮತ್ತು ಇತರ 6 ಮಂದಿ ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತು.

2008: `ಏಷ್ಯಾದ ನೊಬೆಲ್ ಪ್ರಶಸ್ತಿ' ಎಂದೇ ಬಿಂಬಿತವಾದ ಪ್ರತಿಷ್ಠಿತ `ರೇಮನ್ ಮ್ಯಾಗ್ಸೇಸೆ' ಪ್ರಶಸ್ತಿ ಈ ಬಾರಿ ಭಾರತದ `ಲೋಕೋಪಕಾರಿ ವೈದ್ಯ ದಂಪತಿ' ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರ ಮುಡಿಗೇರಿತು. ಮಹಾರಾಷ್ಟ್ರದಲ್ಲಿರುವ ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರೇಮನ್ ಮ್ಯಾಗ್ಸೇಸೆ' ಪ್ರಶಸ್ತಿ ಪ್ರತಿಷ್ಠಾನವು ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ತಿಳಿಸಿತು
2007: ನಟ ಸಂಜಯ್ ದತ್ ಗೆ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕೊನೆಗೂ ಸಾಧ್ಯವಾಗಲಿಲ್ಲ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಸಂಜಯ್ ಗೆ, ವಿಶೇಷ ಟಾಡಾ ನ್ಯಾಯಾಲಯ ಈದಿನ ಆರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25,000 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿತು. ಸಂಜಯ್ ದತ್ ಮೇಲಿನ ಆರೋಪ ಹಾಗೂ ವಿಚಾರಣೆಯ ವಿವರ ಇಲ್ಲಿದೆ: ಏಪ್ರಿಲ್ 19, 1993: ಮಾರಿಷಸ್ಸಿನಿಂದ ಆಗಮಿಸಿದ ತತ್ ಕ್ಷಣ ವಿಮಾನ ನಿಲ್ದಾಣದಲ್ಲೇ ಪೊಲೀಸರಿಂದ ಬಂಧನ. ಏಪ್ರಿಲ್ 28: ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ದತ್. ಮೇ 5: ಬಾಂಬೆ ಹೈಕೋರ್ಟಿನಿಂದ ಮಧ್ಯಂತರ ಜಾಮೀನು. ನವೆಂಬರ್ 4: ಸಂಜಯ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ. ಜುಲೈ 4, 1994: ವಿಚಾರಣಾ ನ್ಯಾಯಾಲಯದಿಂದ ಜಾಮೀನು ರದ್ದು, ಮತ್ತೆ ಬಂಧನ. ಸೆಪ್ಟೆಂಬರ್ 11, 1995: ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯ. ಅಕ್ಟೋಬರ್ 16, 1995: ಸುಪ್ರೀಂಕೋರ್ಟಿನಿಂದ ಜಾಮೀನು. ಅಕ್ಟೋಬರ್ 18, 1995: ಹದಿನಾರು ತಿಂಗಳ ನಂತರ ಜೈಲಿನಿಂದ ಬಿಡುಗಡೆ. ಜುಲೈ 31, 2007: ಸಂಜಯ್ ದತ್ ಗೆ 6 ವರ್ಷ ಕಠಿಣ ಶಿಕ್ಷೆ ಪ್ರಕಟ. 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಸತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೂಗತ ಜಗತ್ತಿನ ವ್ಯಕ್ತಿಗಳು ನೀಡಿದ್ದ ಶಸ್ತ್ರಾಸ್ತ್ರಗಳನ್ನು ಪಡೆದಿದ್ದ ಆರೋಪ ಬಾಲಿವುಡ್ ಚಿತ್ರನಟ ಸಂಜಯ್ ದತ್ ಮೇಲಿತ್ತು. ಸಂಜಯ್ ದತ್ ಗೆ ಎಕೆ-56 ರೈಫಲ್ ಹೊಂದಲು ನೆರವಾದ ಆರೋಪಿ ಯೂಸುಫ್ ನಲ್ ವಲ್ಲಾಗೆ ಐದು ವರ್ಷಗಳ ಸಜೆ ಮತ್ತು ಇನ್ನೊಬ್ಬ ಆರೋಪಿ ಕೇಸರಿ ಅಡ್ಜಾನಿಯಾಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಧೀಶ ಪಿ.ಡಿ. ಖೋಡೆ ವಿಧಿಸಿದರು.

2007: ಸೂರ್ಯ ಮುಳುಗದ ಸಾಮ್ರಾಜ್ಯ ಎಂಬುದಾಗಿ ಹೆಸರು ಪಡೆದಿದ್ದ ಇಂಗ್ಲೆಂಡಿನ ನಾಟಿಂಗ್ ಹ್ಯಾಮಿನ ಟ್ರೆಂಟ್ ಬ್ರಿಜ್ ಕ್ರೀಡಾಂಗಣದಲ್ಲಿ ಈದಿನ ರಾಹುಲ್ ದ್ರಾವಿಡ್ ಪಡೆ `ಟೀಮ್ ಇಂಡಿಯಾ' ಇಂಗ್ಲೆಂಡನ್ನು 1-0 ಅಂತರದಲ್ಲಿ ಪರಾಭವಗೊಳಿಸಿ ಸರಣಿಯಲ್ಲಿ ಮಹತ್ವದ ಮುನ್ನಡೆ ಸಾಧಿಸಿತು.

2007: ಆಂಧ್ರಪ್ರದೇಶದ ಸುಂಡೂರಿನಲ್ಲಿ 1991ರಲ್ಲಿ ನಡೆದ ದಲಿತರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ತೀರ್ಪು ನೀಡಿದ ಸ್ಥಳೀಯ ನ್ಯಾಯಾಲಯ 56 ಮಂದಿ ತಪ್ಪಿತಸ್ಥರೆಂದು ಘೋಷಿಸಿ, ಇತರ 123 ಮಂದಿಯನ್ನು ಖುಲಾಸೆಗೊಳಿಸಿತು. 1991 ರ ಆಗಸ್ಟ್ 6 ರಂದು ಗುಂಟೂರು ಜಿಲ್ಲೆಯಿಂದ 20 ಕಿ.ಮೀ. ದೂರದಲ್ಲಿರುವ ಸುಂಡೂರು ಗ್ರಾಮದಲ್ಲಿ ಎಂಟು ದಲಿತರನ್ನು ಹತ್ಯೆ ಮಾಡಲಾಗಿತ್ತು. ಸುಂಡೂರ್ ಹತ್ಯಾಕಾಂಡ ಎಂದೇ ಖ್ಯಾತಿ ಪಡೆದ ಈ ಪ್ರಕರಣದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ಸಣ್ಣ ಮಟ್ಟಿನ ಹೊಡೆದಾಟ ಮತ್ತು ಮಾತಿನ ಚಕಮಕಿ ಎಂಟು ಮಂದಿ ದಲಿತರ ಹತ್ಯೆಯಲ್ಲಿ ಪರ್ಯವಸಾನಗೊಂಡಿತ್ತು.

2007: ಜೈಲಿನಲ್ಲಿ ಬಂಧಿಸಿಟ್ಟ ಉಗ್ರರನ್ನು ಬಿಡುಗಡೆ ಮಾಡಲು ಆಫ್ಘಾನಿಸ್ಥಾನ ಸರ್ಕಾರಕ್ಕೆ ನೀಡ್ದಿದ ಗಡುವು ಅಂತ್ಯಗೊಂಡದ್ದರಿಂದ, ತಾಲಿಬಾನ್ ಉಗ್ರರು ದಕ್ಷಿಣ ಕೊರಿಯಾದ ಒತ್ತೆಯಾಳು ಒಬ್ಬರನ್ನು ಗುಂಡಿಟ್ಟು ಕೊಂದರು. ಇದಕ್ಕೆ ಮೊದಲೇ ಒಬ್ಬ ಒತ್ತೆಯಾಳನ್ನು ಹತ್ಯೆ ಮಾಡಲಾಗಿತ್ತು. ಆಫ್ಘಾನಿಸ್ಥಾನದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದ 23 ಜನ ದಕ್ಷಿಣ ಕೊರಿಯಾ ನಾಗರಿಕರನ್ನು ತಾಲಿಬಾನ್ ಉಗ್ರರು ಜುಲೈ 19ರಂದು ಅಪಹರಿಸಿದ್ದರು. ಈ ಗುಂಪಿನಲ್ಲಿ 16 ಜನ ಮಹಿಳೆಯರಿದ್ದರು. ಕೊರಿಯಾ ತಂಡದ ನಾಯಕನನ್ನು ಗುಂಡಿಟ್ಟು ಕೊಲ್ಲಲಾಗಿತ್ತು.

2006: ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಡ ನಾಗರಿಕರನ್ನು ಪ್ರೇರೇಪಿಸಿದ ಮಾಹಿತಿ ಹಕ್ಕು ಆಂದೋಲನದ ಮುಂಚೂಣಿಯಲ್ಲಿರುವ ದೆಹಲಿ ಮೂಲದ `ಪರಿವರ್ತನ್' ನಾಗರಿಕ ಆಂದೋಲನ ಸಂಸ್ಥೆಯ ಮುಖ್ಯಸ್ಥ ಅರವಿಂದ ಕೇಜರಿವಾಲ (38) ಅವರು ಪ್ರಸ್ತುತ ವರ್ಷದ `ರೇಮನ್ ಮ್ಯಾಗ್ಸೆಸೆ' ಪ್ರಶಸ್ತಿಗೆ ಆಯ್ಕೆಯಾದರು. ಇವರ ಜೊತೆಗೆ ಸಂದುಕ್ ರುಯಿತ್ (ನೇಪಾಳ), ಎಕ್ ಸೊನ್ ಚಾನ್ (ಕಾಂಬೋಡಿಯಾ), ಪಾರ್ಕ್ ವಾನ್ ಸೂನ್ (ದಕ್ಷಿಣ ಕೊರಿಯ) ಹಾಗೂ ಇಗೇನಿಯಾ ದುರಾನ್ ಅಪೊಸ್ತೊಲ್ ಮತ್ತು ಅಂಟೋನಿಯೊ ಮೆಲೊಟೊ (ಇಬ್ಬರೂ ಫಿಲಿಪ್ಪೀನ್ಸ್ನವರು) ಅವರು `ಏಷ್ಯಾದ ನೊಬೆಲ್ ಪಾರಿತೋಷಕ' ಎಂದೇ ಖ್ಯಾತಿ ಪಡೆದಿರುವ ಈ ಪ್ರಶಸ್ತಿಗೆ ಆಯ್ಕೆಯಾದರು.

2006: ನಾಲ್ಕು ತಿಂಗಳ ರಾಜಕೀಯ ಬಿರುಗಾಳಿಗೆ ತೆರೆ ಎಳೆಯುವ ಉದ್ದೇಶದ ವಿವಾದಾತ್ಮಕ `ಲಾಭದ ಹುದ್ದೆ' ಮಸೂದೆಯನ್ನು ಲೋಕಸಭೆಯು ಈದಿನ ಪ್ರತಿಪಕ್ಷ ಸದಸ್ಯರ ತೀವ್ರ ವಿರೋಧದ ಮಧ್ಯೆ ಮೂಲ ಸ್ವರೂಪದಲ್ಲಿಯೇ ಮತ್ತೆ ಅಂಗೀಕರಿಸಿತು. 56 ಹುದ್ದೆಗಳಿಗೆ ವಿನಾಯ್ತಿ ನೀಡುವ ಮತ್ತು ಅನರ್ಹತೆ ಭೀತಿ ಎದುರಿಸುತ್ತಿದ್ದ 40 ಸಂಸದರನ್ನು ಶಿಕ್ಷೆಯಿಂದ ಮುಕ್ತಗೊಳಿಸುವ ಮಸೂದೆಯನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸಂಸತ್ತಿಗೆ ವಾಪಸ್ ಕಳುಹಿಸಿದ್ದರು. ಈ ಮಸೂದೆಯನ್ನು ಅದೇ ಸ್ವರೂಪದಲ್ಲಿ ಸಂಸತ್ತು 230-71 ಮತಗಳ ಅಂತರದೊಂದಿಗೆ ಅಂಗೀಕರಿಸಿತು.

2006: ಮೈಸೂರಿನ ತನ್ನ ಆವರಣದಲ್ಲಿ `ನಾಸ್ಡಾಕ್' ಶಾಖೆಯನ್ನು ತೆರೆಯುವ ಮೂಲಕ ಅಮೆರಿಕದ `ನಾಸ್ಡಾಕ್' ಷೇರು ಮಾರುಕಟ್ಟೆಯನ್ನು ಅಮೆರಿಕದಿಂದ ಹೊರಗೆ ಆರಂಭಿಸಿದ ಏಷ್ಯ- ಫೆಸಿಫಿಕ್ ಪ್ರದೇಶದ ಮೊತ್ತ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಪಾತ್ರವಾಯಿತು. ಮೈಸೂರನ್ನು ಬಿಟ್ಟರೆ ಅಮೆರಿಕದಿಂದ ಹೊರಗೆ `ನಾಸ್ಡಾಕ್' ಮಾರುಕಟ್ಟೆ ಹೊಂದಿರುವ ಹೆಗ್ಗಳಿಕೆ ಇರುವುದು ಲಂಡನ್ ಮತ್ತು ದಾವೋಸ್ ಗಳಿಗೆ ಮಾತ್ರ. `ನಾಸ್ಡಾಕ್' ಅತ್ಯಂತ ದೊಡ್ಡದಾದ ಅಮೆರಿಕದ ಎಲೆಕ್ಟ್ರಾನಿಕ್ ಷೇರು ಮಾರುಕಟ್ಟೆಯಾಗಿದ್ದು 3200 ಕಂಪೆನಿಗಳು ಅದರ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

2006: ಸೂರ್ಯಕಾಂತಿ ಕಳಪೆ ಬೀಜದಿಂದ ನಷ್ಟ ಅನುಭವಿಸಿದ ರೈತನಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬಹುರಾಷ್ಟ್ರೀಯ ಮಾನ್ಸಾಂಟೊ ಕಂಪೆನಿಗೆ ಆಂಕೋಲಾದ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿತು.

1997: ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್ಪಿ) ರಾಷ್ಟ್ರೀಯ ಪಕ್ಷಕ್ಕೆ ಮಾನ್ಯತೆ ನೀಡಲು ಚುನಾವಣಾ ಆಯೋಗ ಸಮ್ಮತಿಸಿತು.

1982: ಫ್ರಾನ್ಸಿನಲ್ಲಿ ಎರಡು ಬಸ್ಸು ಮತ್ತು ಹಲವು ಕಾರುಗಳ ಡಿಕ್ಕಿಯಾಗಿ 46 ಮಕ್ಕಳೂ ಸೇರಿದಂತೆ 53 ಜನ ಮೃತರಾದರು.

1925: ಇಂಗ್ಲೆಂಡಿನಲ್ಲಿ ನಿರುದ್ಯೋಗ ವಿಮೆ ಕಾಯಿದೆಗೆ ಅಂಗೀಕಾರ ನೀಡಲಾಯಿತು.

1916: ಸಾಹಿತಿ ಶಾರದಾ ಗೋಕಾಕ್ ಜನನ.

1903: ಮಧುರ ಚೆನ್ನ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಖ್ಯಾತಿ ಪಡೆದಿದ್ದ ಚೆನ್ನಮಲ್ಲಪ್ಪ ಗಲಗಲಿ (31-7-1903ರಿಂದ 15-8-1953) ಅವರು ಸಿದ್ದಲಿಂಗಪ್ಪ - ಅಂಬವ್ವ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಹಲಸಂಗಿ ಬಳಿಯ ಹಿರೇಲೋಣಿಯಲ್ಲಿ ಜನಿಸಿದರು.

1861: ಅಸ್ಸಾಮಿನ ಚಿರಾಪುಂಜಿಯಲ್ಲಿ 19,300 ಮಿ.ಮೀ. ಮಳೆ ಸುರಿದದ್ದು ವಿಶ್ವ ದಾಖಲೆಯಾಯಿತು. (ಈಗ ಚಿರಾಪುಂಜಿಯ ಹೆಸರು 'ಸೊಹರಾ' ಎಂಬುದಾಗಿ ಬದಲಾಗಿದೆ).

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, July 30, 2008

ಇಂದಿನ ಇತಿಹಾಸ History Today ಜುಲೈ 30

ಇಂದಿನ ಇತಿಹಾಸ

ಜುಲೈ 30

ಮೂವತ್ತೈದು ವರ್ಷಗಳ ಅವಧಿಯಲ್ಲಿ 8000 ಕೋಟಿ ರೂಪಾಯಿ ವೆಚ್ಚದಲ್ಲಿನಿರ್ಮಾಣಗೊಂಡಿರುವ 2400 ಮೆ.ವಾ. ಸಾಮರ್ಥ್ಯದ ಅತಿ ವಿವಾದಿತ ತೆಹ್ರಿ ಜಲ ವಿದ್ಯುತ್ ಸ್ಥಾವರವು ಕಡೆಗೂ ಈದಿನ ಕಾರ್ಯಾರಂಭ ಮಾಡಿತು.

2007: ಭಾರತದಲ್ಲಿ ಆಗಸ್ಟ್ 3ರಂದು ಬಿಡುಗಡೆಯಾಗುವುದಕ್ಕೆ ಒಂದು ದಿನ ಮೊದಲೇ (ಈದಿನ) ಜೋಹಾನ್ಸ್ ಬರ್ಗಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಚೊಚ್ಚಲ ಪ್ರದರ್ಶನ (ಪ್ರೀಮಿಯರ್ ಶೋ) ನಡೆಯಿತು. ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ದಕ್ಷಿಣ ಆಫ್ರಿಕಾದ ಇಡೀ ಸಚಿವ ಸಂಪುಟವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಲನಚಿತ್ರವನ್ನು ವೀಕ್ಷಿಸಿತು. ಮಹಾತ್ಮ ಗಾಂಧಿ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ರಾಷ್ಟ್ರದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಜಾಗತಿಕ ಮಟ್ಟದ ಪ್ರದರ್ಶನದ ಉದ್ಘಾಟನೆ ಮಾಡುತ್ತಿರುವುದು ನನಗೆ ಅತ್ಯಂತ ಖುಷಿಯ ವಿಷಯ. ಭಾರತವು ನಮಗೆ `ಬ್ಯಾರಿಸ್ಟರ್ ಗಾಂಧಿ'ಯನ್ನು ನೀಡಿತು, ಪ್ರತಿಯಾಗಿ ದಕ್ಷಿಣ ಆಫ್ರಿಕವು `ಮಹಾತ್ಮ ಗಾಂಧಿ'ಯನ್ನು ಹಿಂದಿರುಗಿಸಿತು' ಎಂದು ಮಂಡೇಲಾ ತಮ್ಮ ಸಂದೇಶದಲ್ಲಿ ನುಡಿದರು. ಗಾಂಧೀಜಿಯವರ ಹಿರಿಯ ಪುತ್ರ ಹರಿಲಾಲ್ ಜೊತೆಗಿನ ಸಂಕೀರ್ಣ ಸಂಬಂಧದ ಸುತ್ತ ಹೆಣೆಯಲಾಗಿರುವ ಕಥೆಯನ್ನು ಹೊಂದಿರುವ ಈ ಚಿತ್ರ ಜಗತ್ತಿನಾದ್ಯಂತ 2007ರ ಆಗಸ್ಟ್ 3ರಂದು ಬಿಡುಗಡೆಯಾಯಿತು.

2007: ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರು ಈದಿನ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದರು. ಬಹುಮತ ಕಳೆದುಕೊಂಡಿದ್ದ ಅವರು ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ನಾಟಕೀಯ ಬೆಳವಣಿಗೆ ನಡೆಯಿತು. ವಿಧಾನಸಭಾಧ್ಯಕ್ಷ ಪ್ರತಾಪ್ ಸಿಂಗ್ ರಾಣೆ ಅವರು ಎಂಜಿಪಿಯ ಸುದೀನ್ ಮತ್ತು ದೀಪಕ್ ಧವಳೀಕರ್ ಹಾಗೂ ಕಾಂಗ್ರೆಸ್ಗೆ ರಾಜೀನಾಮೆ ಸಲ್ಲಿಸಿದ ವಿಕ್ಟೋರಿಯಾ ಫರ್ನಾಂಡಿಸ್ ಈ ಮೂವರು ಶಾಸಕರನ್ನು ಮತದಾನದಿಂದ ನಿರ್ಬಂಧಿಸಿ, ತಾವೇ ಕಾಂಗ್ರೆಸ್ ನೇತೃತ್ವ ಸಮ್ಮಿಶ್ರ ಸರ್ಕಾರದ ಪರವಾಗಿ ಮತ ಹಾಕಿದ್ದರಿಂದ ಕಾಮತ್ ಬಹುಮತ ಪಡೆದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ನೇತೃತ್ವದ ವಿರೋಧಿ ಗೋವಾ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸದಸ್ಯರು (ಜಿಡಿಎ), ಸರ್ಕಾರ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿರುವುದಾಗಿ ತೀವ್ರ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.

2007: ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಹಾಗೂ ಕುಟುಂಬದ ಇತರ ಆರು ಸದಸ್ಯರ ವಿರುದ್ಧ ಉತ್ತರಪ್ರದೇಶ ಪೊಲೀಸರು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿದರು. ಮೊರಾದಾಬಾದ್ ಜಿಲ್ಲೆಯ ಚಾಂದೌಸಿ ಪೊಲೀಸ್ ಠಾಣೆಯಲ್ಲಿ ಹಿಂದಿನ ದಿನ ರಾತ್ರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಐಪಿಸಿ 323, 234, 235, 498(ಎ), 506 ಹಾಗೂ 304 ಸೆಕ್ಷನ್ ಅಡಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಅರ್ಜುನ್ ಸಿಂಗ್ ಮೊಮ್ಮಗ ಅಭಿಜಿತ್ ಅವರ ಮಾವ ನೌರಲಿಯ ರಾಜಾ ಮಣ್ವಿಂದರ್ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಈ ಮೊಕದ್ದಮೆ ದಾಖಲಿಸಲಾಯಿತು. ಅಭಿಜಿತ್ ಪತ್ನಿ ಪ್ರಿಯಾಂಕಾ ಸಿಂಗ್ ಆರೋಪದ ಆಧಾರದಲ್ಲಿ, ಅರ್ಜುನ್ ಸಿಂಗ್ ಮತ್ತು ಪತ್ನಿ ಬೀನಾ ಸಿಂಗ್, ಪುತ್ರ ಅಭಿಮನ್ಯು ಸಿಂಗ್, ಮೊಮ್ಮಗ ಅಭಿಜಿತ್ ಸೇರಿದಂತೆ ಕುಟುಂಬದ ಒಟ್ಟು ಏಳು ಜನರ ವಿರುದ್ಧ ಅಪರಾಧ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಮೊರಾದಾಬಾದ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ಪೊಲೀಸರಿಗೆ ಆದೇಶಿಸಿದ್ದರು.

2007: ಸಿಕ್ಕಿಂನ ಪ್ರಥಮ ಮುಖ್ಯಮಂತ್ರಿ ಹಾಗೂ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪಕರಾದ ಹೆಂಡುಪ್ ದೋರ್ಜಿ ಖಂಗಸರ್ಪಾ ಅವರು ಈದಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ವಿಧುರರಾಗಿದ್ದ ಅವರಿಗೆ 103 ವರ್ಷ ವಯಸಾಗಿತ್ತು. ಕಾಜಿ ಸಾಬ್ ಎಂದೇ ಖ್ಯಾತರಾಗಿದ್ದ ಅವರು ಉತ್ತರ ಬಂಗಾಳದ ಕಲಿಪಾಂಗಿನಲ್ಲಿ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಭಾರತದ ಒಕ್ಕೂಟದಲ್ಲಿ ಸಿಕ್ಕಿಂ ರಾಜ್ಯದ ಸೇರ್ಪಡೆಗೆ ಪ್ರಮುಖ ಪಾತ್ರ ವಹಿಸಿದ್ದ ಅವರಿಗೆ 2002ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸಿಕ್ಕಿಂ ಸರ್ಕಾರವು 2004ರಲ್ಲಿ ಅವರಿಗೆ ಸಿಕ್ಕಿಂ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

2007: ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪ ಹೊರಿಸಿ ಭಾರತೀಯ ಮೂಲದ ವೈದ್ಯ ಡಾ. ಮೊಹಮ್ಮದ್ ಹನೀಫರನ್ನು ನಾಲ್ಕು ವಾರಗಳ ಕಾಲ ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಲು ಆಸ್ಟ್ರೇಲಿಯಾ ಪ್ರಧಾನಿ ಜಾನ್ ಹೋ ವರ್ಡ್ ನಿರಾಕರಿಸಿದರು.

2007: ಸ್ವೀಡನ್ನಿನ ಖ್ಯಾತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಇಂಗ್ಮಾರ್ ಬರ್ಗ್ ಮನ್ (89) ಅವರು ಈದಿನ ಸ್ಟಾಕ್ ಹೋಮಿನಲ್ಲಿ ನಿಧನರಾದರು. ಬರ್ಗ್ ಮೆನ್ ಅರ್ಧ ಶತಮಾನದಲ್ಲಿ 50 ಚಿತ್ರಗಳು ಹಾಗೂ 125 ನಾಟಕಗಳನ್ನು ನಿರ್ಮಿಸಿ ಸ್ಕಾಂಡಿನೇವಿಯಾದ ಸಾಂಸ್ಕೃತಿಕ ಲೋಕದಲ್ಲಿ ಖ್ಯಾತರಾಗಿದ್ದರು. ಅವರ ಖಾಸಗಿ ಬದುಕು ಸಹ ವರ್ಣರಂಜಿತವಾಗಿತ್ತು. ಸುಂದರ ಹಾಗೂ ಬುದ್ಧಿವಂತರಾಗಿದ್ದ ಐವರು ಮಹಿಳೆಯರನ್ನು ವಿವಾಹವಾಗಿದ್ದ ಅವರು ಅನೇಕ ನಟಿಯರ ಜತೆ ಸಂಬಂಧವಿಟ್ಟುಕೊಂಡು ವಿವಾದಕ್ಕೂ ಒಳಗಾಗಿದ್ದರು. ವೈಲ್ಡ್ ಸ್ಟ್ರೀವ್ ಬ್ಯಾರಿಸ್, ಸೀನ್ಸ್ ಫ್ರಾಮ್ ಮ್ಯಾರೇಜ್ ನಂತಹ ಚಿತ್ರಗಳು ಅವರಿಗೆ ಜಗತ್ತಿನಾದ್ಯಂತ ಖ್ಯಾತಿ ತಂದುಕೊಟ್ಟಿದ್ದವು.

2007: ಪಾಕಿಸ್ಥಾನದ ಈಶಾನ್ಯ ಪ್ರಾಂತ್ಯದಲ್ಲಿನ ಮಸೀದಿಯೊಂದನ್ನು ನೂರಾರು ಉಗ್ರರು ತಮ್ಮ ವಶಕ್ಕೆ ತೆಗೆದುಕೊಂಡು, ಅದಕ್ಕೆ `ಲಾಲ್ ಮಸೀದಿ' ಎಂದು ಹೆಸರಿಸಿ, ಈ ತಿಂಗಳು ಇಸ್ಲಾಮಾಬಾದಿನಲ್ಲಿ ಹತನಾದ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿಯ `ಆದರ್ಶ'ಗಳನ್ನು ಪಾಲಿಸುವುದಾಗಿ ಘೋಷಿಸಿದರು. ಇಸ್ಲಾಮಾಬಾದಿನ ಲಾಲ್ ಮಸೀದಿಯ ಪಕ್ಕಕ್ಕೆ ಇದ್ದ ಬಾಲಕಿಯರ ಮದರಸಾ `ಜಾಮಿಯಾ ಹಫ್ಸಾ' ಮಾದರಿಯಲ್ಲೇ ಬಾಲಕಿಯರಿಗೆ ತರಬೇತಿ ಶಾಲೆಯನ್ನು ಇಲ್ಲಿಯೂ ಆರಂಭಿಸುವುದಾಗಿ ಉಗ್ರರು ಸಾರಿದರು. ಲಾಲ್ ಮಸೀದಿಯನ್ನು ತೆರವುಗೊಳಿಸಿದ ನಂತರ `ಜಾಮಿಯಾ ಹಫ್ಸಾ'ವನ್ನು ಪಾಕ್ ಸೈನಿಕರು ಧ್ವಂಸಗೊಳಿಸಿದ್ದರು.

2007: ಮಾಜಿ ಸಚಿವ ಮೊಹಮ್ಮದ್ ಮೊಯಿನ್ದುದೀನ್ ಅವರು ಜುಲೈ 29ರ ಈದಿನ ಬೆಂಗಳೂರಿನಲ್ಲಿ ನಿಧನರಾದರು. 1985ರಲ್ಲಿ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು, ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ವಸತಿ ಖಾತೆಯ ರಾಜ್ಯ ಸಚಿವರಾಗಿದ್ದರು. ಭದ್ರಾವತಿಯಲ್ಲಿ ಜನಿಸಿದ್ದ ಇವರು ಬಿ.ಎಸ್ಸಿ ಪದವೀಧರರಾಗಿದ್ದರು. ಕರ್ನಾಟಕ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಗಂಜಾಂನಲ್ಲಿರುವ ಟಿಪ್ಪು ಸುಲ್ತಾನ್ ವಕ್ಫ್ಸ್ ಎಸ್ಟೇಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶ್ರೀರಂಗಪಟ್ಟಣದ ಟಿಪ್ತು ಸುಲ್ತಾನ್ ಸಂಶೋಧನಾ ಸಂಸ್ಥೆ ಹಾಗೂ ವಸ್ತು ಸಂಗ್ರಹಾಲಯದ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

2007: ಸ್ಯಾನ್ ಫೋರ್ಡಿನಲ್ಲಿ ಮುಕ್ತಾಯವಾದ ಆರು ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ವೆಸ್ಟ್ ಬ್ಯಾಂಕ್ ಕ್ಲ್ಯಾಸಿಕ್ ಡಬ್ಲ್ಯುಟಿಎ ಟೂರ್ನಿಯಲ್ಲಿ ಶ್ರೇಯಾಂಕಿತ ಆಟಗಾರ್ತಿಯರನ್ನು ಮಣ್ಣುಮುಕ್ಕಿಸಿ ಫೈನಲ್ ಪ್ರವೇಶಿಸಿದ್ದ ಸಾನಿಯಾ ಮಿರ್ಜಾ ಫೈನಲಿನಲ್ಲಿ ಮುಗ್ಗರಿಸಿದರು. ಸಾನಿಯಾ ಮಿರ್ಜಾ ಅವರು 3-6, 2-6 ನೇರ ಸೆಟ್ ಗಳಲ್ಲಿ ರಷ್ಯಾದ ಅನ್ನಾ ಚಕ್ವೆಟಾಜ್ ಅವರ ಕೈಯಲ್ಲಿ ಪರಾಭವಗೊಂಡರು.

2007: ಉದ್ಯಮಿ ಡಾ. ವಿಜಯ್ ಮಲ್ಯ ಕರ್ನಾಟಕದ ಕ್ರಿಕೆಟಿನತ್ತ ಕಣ್ಣು ಹಾಯಿಸಿದರು. ರಾಜಾಜಿನಗರದ ಸೆಲೆಕ್ಟ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜ್ಯ ಕ್ರಿಕೆಟ್ ಕಡೆಗೆ ಅವರು ಹೆಜ್ಜೆಯಿಟ್ಟರು.

2006: ಮೂವತ್ತೈದು ವರ್ಷಗಳ ಅವಧಿಯಲ್ಲಿ 8000 ಕೋಟಿ ರೂಪಾಯಿ ವೆಚ್ಚದಲ್ಲಿನಿರ್ಮಾಣಗೊಂಡಿರುವ 2400 ಮೆ.ವಾ. ಸಾಮರ್ಥ್ಯದ ಅತಿ ವಿವಾದಿತ ತೆಹ್ರಿ ಜಲ ವಿದ್ಯುತ್ ಸ್ಥಾವರವು ಕಡೆಗೂ ಈದಿನ ಕಾರ್ಯಾರಂಭ ಮಾಡಿತು. ಉತ್ತರದ ಗ್ರಿಡ್ ಜಾಲಕ್ಕೆ ಬೆಸೆದಿರುವ ಸ್ಥಾವರದ 250 ಮೆಗಾವ್ಯಾಟ್ ಸಾಮರ್ಥ್ಯದ ಮೊದಲ ಘಟಕದ ಕಾರ್ಯಾರಂಭಕ್ಕೆ ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಚಾಲನೆ ನೀಡಿದರು. 1657 ಕೋಟಿ ರೂಪಾಯಿ ವೆಚ್ಚದ ತೆಹ್ರಿ ಪಂಪ್ ಸ್ಟೋರೇಜ್ ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಏಷ್ಯದಲ್ಲೇ ಅತ್ಯಂತ ಎತ್ತರದ `ರಾಕ್ ಫಿಲ್ ಡ್ಯಾಮ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಅಣೆಕಟ್ಟು ವಿದ್ಯುತ್ ಯೋಜನೆಯಿಂದ ಉತ್ತರ ಭಾರತದ 9 ರಾಜ್ಯಗಳ ವಿದ್ಯುತ್ ಪರಿಸ್ಥಿತಿ ಸುಧಾರಿಸುವುದು ಎಂಬುದು ಆಡಳಿತಗಾರರ ನಿರೀಕ್ಷೆ. 35 ವರ್ಷಗಳ ಹಿಂದೆ ಯೋಜನೆಗೆ ಅಡಿಗಲ್ಲು ಹಾಕಿದಾಗ ಅದರ ವೆಚ್ಚ 200 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು.

2006: ಬಹರೇನಿನಲ್ಲಿ ಮೂರು ಮಹಡಿಯ ಕಟ್ಟಡವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ 16 ಭಾರತೀಯ ಕಾರ್ಮಿಕರು ಮೃತರಾದರು.

1995: ಜಾರ್ಖಂಡ್ ಸ್ವಾಯತ್ತ ಜಿಲ್ಲಾ ಮಂಡಳಿ ರಚನೆಗೆ ಅಧಿಸೂಚನೆ ಪ್ರಕಟಗೊಂಡಿತು.

1960: ಕರ್ನಾಟಕದ ಸಿಂಹ, ಶ್ರೇಷ್ಠ ಸೇನಾನಿ ಗಂಗಾಧರ ಬಾಲಕೃಷ್ಣ ದೇಶಪಾಂಡೆ ನಿಧನ.

1951: ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಜನನ.

1947: ಕಾಶ್ಮೀರದ ಭಾಗವಾದ ನೈಋತ್ಯ ಗಡಿ ಪ್ರದೇಶವನ್ನು (ಎನ್ ಡಬ್ಲ್ಯೂ ಎಫ್ ಸಿ) ಪಾಕಿಸ್ಥಾನ ಕೈವಶಪಡಿಸಿಕೊಂಡಿತು. ನವೆಂಬರಿನಲ್ಲಿ ಇಲ್ಲಿ ಪಾಕಿಸ್ತಾನದ ಧ್ವಜಾರೋಹಣ ಮಾಡಲಾಯಿತು.

1928: ಜಾಜ್ ಈಸ್ಟ್ ಮನ್ ರಿಂದ ಮೊದಲ ಬಣ್ಣದ ಸಿನಿಮಾ ಪ್ರಾತ್ಯಕ್ಷಿಕೆ.

1923: ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ ಖ್ಯಾತ ವಿದ್ವಾಂಸ ಡಾ. ಕೆ. ಕೃಷ್ಣಮೂರ್ತಿ (30-7-1923ರಿಂದ 18-7-1997) ಅವರು ಎನ್. ವೆಂಕಟಸುಬ್ಬಯ್ಯ- ಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಕೇರಳಾಪುರದಲ್ಲಿ ಜನಿಸಿದರು. ಅವರು ರಚಿಸಿದ ಒಟ್ಟು ಗ್ರಂಥಗಳು 54.

1913: ದ್ವಿತೀಯ ಬಾಲ್ಕನ್ ಯುದ್ಧ ಸಮಾಪ್ತಿಗೊಂಡಿತು.

1883: ಕೈಗಾರಿಕೋದ್ಯಮಿ ಬದ್ರಿದಾಸ್ ಜನನ.

1622: ಶ್ರೇಷ್ಠ ಕವಿ, ಸಂತ ತುಳಸೀದಾಸರ ಪುಣ್ಯದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, July 29, 2008

ಇಂದಿನ ಇತಿಹಾಸ History Today ಜುಲೈ 29

ಇಂದಿನ ಇತಿಹಾಸ

ಜುಲೈ 29

ಜಾನಪದ ಗಾರುಡಿಗ, ಸ್ವಾತಂತ್ರ್ಯ ಯೋಧ, ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಎಸ್.ಕೆ. ಕರೀಂಖಾನ್ ಅವರು ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ನಿಧನರಾದರು.

2007: ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕ ಎಂಬ ಹಣೆಪಟ್ಟಿ ಬಿದ್ದು ಬಂಧಿತನಾಗಿ ಅಲ್ಲಿನ ಪೊಲೀಸರಿಂದ ಚಿತ್ರಹಿಂಸೆಗೆ ಒಳಗಾದ ಬೆಂಗಳೂರಿನ ವೈದ್ಯ ಹನೀಫ್ ಆರೋಪಮುಕ್ತರಾಗಿ ತಮ್ಮ ವಕೀಲ ಪೀಟರ್ ರುಸ್ಸೊ ಜೊತೆಗೆ ಬೆಂಗಳೂರಿಗೆ ಬಂದಿಳಿದರು. ಹನೀಫ್ ಮಾವ ಅಶ್ಫಾಕ್ ಅಹಮದ್, ಸಹೋದರ ಮಹಮದ್ ಶಫಿ ಮೊದಲಾದ ಸಂಬಂಧಿಕರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದರು.

2007: ಉಡುಪಿಯಲ್ಲಿ ನಡೆಯುವ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಮರ್ಶಕ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಆಯ್ಕೆಯಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯು, ಶೇಷಗಿರಿರಾವ್ ಅವರನ್ನು ಮುಂದಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿತು.

2007: ಸರಕು ಸಾಗಣೆ ವಿಮಾನವೊಂದು ಈದಿನ ಮಾಸ್ಕೊದ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೆ ಈಡಾಯಿತು. ಪರಿಣಾಮವಾಗಿ ಐವರು ಸಿಬ್ಬಂದಿ ಸೇರಿ ಎಂಟು ಮಂದಿ ಮೃತರಾದರು. ಸೈಬೀರಿಯಾ ಮೂಲದ ಅತ್ರಾನ್ ಏರ್ ಲೈನ್ಸಿನ ಅಂತೊನಾವ್ ಎನ್-12 ವಿಮಾನವು ಭಾರತೀಯ ಕಾಲಮಾನ ಬೆಳಿಗ್ಗೆ 6.46ರ ಸುಮಾರಿಗೆ ಮಾಸ್ಕೊ ಡಾಮೊದೆಡೊವೊ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿ, ರನ್ ವೇಯಿಂದ ಹಾರಿ ಕೇವಲ ನಾಲ್ಕು ಕಿ.ಮೀ. ದೂರ ಸಾಗುವಷ್ಟರಲ್ಲಿ ಬೆಂಕಿಗೆ ಆಹುತಿಯಾಯಿತು.

2007: ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಒಡೆತನದ ಕಪಾರೊ ಸಮೂಹವು ಸ್ಕೈ ಕಂಪೆನಿಯ `ಚಾನೆಲ್ 158'ನ್ನು ಖರೀದಿಸಿತು. ಈ ಚಾನೆಲ್ ಮೂಲಕ ಕಪಾರೊ ಸಮೂಹ ತನ್ನ `ಫಿಲ್ಮ್ 24' ಉದ್ಯಮವನ್ನು ವಿಸ್ತರಿಸುವುದು ಕಪಾರೋ ಸಮೂಹದ ಗುರಿ.

2007: ಉಡುಪಿ ನಗರದ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ಈದಿನ ಸಂಜೆ ಯಕ್ಷಗಾನ ಕ್ಷೇತ್ರದಲ್ಲಿ ನೂತನ ದಾಖಲೆಯೊಂದು ನಿರ್ಮಾಣವಾಯಿತು. ಒಂದಲ್ಲ, ಎರಡಲ್ಲ, ಹತ್ತಕ್ಕಿಂತ ಹೆಚ್ಚು ರಾಕ್ಷಸ ವೇಷಧಾರಿಗಳ ಸಂಗಮ ಇಲ್ಲಿ ಏರ್ಪಟ್ಟಿತು. ಯಕ್ಷಗಾನ ಅಭಿಮಾನಿಗಳು ಈ ಹಿಂದೆಂದೂ ಕಂಡಿರದ ಅಪೂರ್ವ ಸಂಗಮ ಅದಾಗಿತ್ತು. ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಬಡಗುತಿಟ್ಟು ಬಣ್ಣದ ವೇಷ (ರಾಕ್ಷಸ ವೇಷ) ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಈ ರಾಕ್ಷಸರ ದಂಡೇ ರಂಗಸ್ಥಳಕ್ಕೆ ಆಗಮಿಸಿತು. ತೆಂಕುತಿಟ್ಟಿನ ಒಂಬತ್ತು ಮಂದಿ ರಾಕ್ಷಸರು ಹಾಗೂ ಬಡಗುತಿಟ್ಟಿನ ಇಬ್ಬರು ರಾಕ್ಷಸರು ಸಂಗಮದಿಂದ ಇಡೀ ವೇದಿಕೆ ಭರ್ತಿಯಾಯಿತು. ಅಲ್ಲಿ ಬರೀ ರಾಕ್ಷಸರಿರಲಿಲ್ಲ, ರಾಕ್ಷಸಿಯರೂ ಇದ್ದರು. ಬಣ್ಣದ ವೇಷಧಾರಿಗಳ ಕಲ್ಪನೆಯೂ ವಿನಿಮಯ ಇತ್ತು. ತಜ್ಞರ ಸಲಹೆ ಇತ್ತು. ಹೀಗಾಗಿ ರಾಕ್ಷಸ ವೇಷ ಕಮ್ಮಟ ಹೆಚ್ಚು ಕಲಾತ್ಮಕವಾಗಿ ಮೂಡಿ ಬಂತು. ಆ ಕಾರಣದಿಂದ ಯಕ್ಷಗಾನದ ಇತಿಹಾಸದಲ್ಲೇ ಈ ಕಮ್ಮಟ ನೂತನ ದಾಖಲೆ ನಿರ್ಮಿಸಿತು. ಯಕ್ಷಗಾನದ ಇತಿಹಾಸದಲ್ಲೇ ಈ ಕಮ್ಮಟ ನೂತನ ದಾಖಲೆ ನಿರ್ಮಿಸಿತು.

2007: ಜೋರ್ಡಾ ಅಮ್ಮಾನಿನಲ್ಲಿ ನಡೆದ 17ನೇ ಆಸಿಯಾನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಪಿನ ಮುಕ್ತಾಯ ದಿನವಾದ ಈದಿನ ಭಾರತವು ಮೂರು ಬಂಗಾರದ ಪದಕಗಳನ್ನು ಗಳಿಸುವುದರೊಂದಿಗೆ ಎರಡನೇ ಸ್ಥಾನ ಪಡೆಯಿತು. ರಂಜಿತ್ ಮಹೇಶ್ವರಿ ಪುರುಷರ ಟ್ರಿಪಲ್ ಜಿಗಿತದಲ್ಲಿ 17.19 ಮೀಟರ್ ಜಿಗಿದು ಚಿನ್ನದ ಪದಕ ಗೆದ್ದುಕೊಂಡರು. ಸಿನಿಮೋಲ್ ಪೌಲೋಸ್ ಮಹಿಳೆಯರ ವಿಭಾಗದಲ್ಲಿ ಚಿನ್ನ ಗಳಿಸಿದರು. ಮಹಿಳೆಯರ ರಿಲೆ ತಂಡ ಮೊದಲ ಸ್ಥಾನ ಗಳಿಸಿತು. ಇದರಿಂದಾಗಿ ಭಾರತ ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಒಟ್ಟು ಐದು ಪದಕಗಳನ್ನು ತನ್ನದಾಗಿಸಿಕೊಂಡಿತು.

2006: ಜಾನಪದ ಗಾರುಡಿಗ, ಸ್ವಾತಂತ್ರ್ಯ ಯೋಧ, ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಎಸ್.ಕೆ. ಕರೀಂಖಾನ್ ಅವರು ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 104 ವರ್ಷ ವಯಸ್ಸಾಗಿತ್ತು. (ಇನ್ನೊಂದು ಮೂಲದ ಪ್ರಕಾರ 98 ವರ್ಷ ವಯಸ್ಸು). ಮೂರು ತಿಂಗಳುಗಳಿಂದ ಅಸ್ವಸ್ಥರಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

2006: ಶ್ರೀಲಂಕಾ ನಾಯಕ ಜಯವರ್ಧನೆ (374) ಮತ್ತು ಸಂಗಕ್ಕಾರ (287) ಅವರು ದಕ್ಷಿಣ ಆಫ್ರಿಕಾ ವಿರುದ್ಧ ಕೊಲಂಬೋದಲ್ಲಿ ನಡೆದ ಮೊದಲ ಟೆಸ್ಟಿನಲ್ಲಿ ಜೊತೆಯಾಟ `ವಿಶ್ವದಾಖಲೆ' (ಒಟ್ಟು 624 ರನ್) ಸ್ಥಾಪಿಸಿದರು. 1997ರಲ್ಲಿ ಭಾರತದ ವಿರುದ್ಧ ಕೊಲಂಬೋದಲ್ಲೇ ನಡೆದ ಪಂದ್ಯದಲ್ಲಿ ಮಹಾನಾಮಾ ಮತ್ತು ಜಯಸೂರ್ಯ 2ನೇ ವಿಕೆಟ್ ಜೊತೆಯಾಟಕ್ಕೆ 576 ರನ್ ಗಳಿಸ್ದಿದೇ ಜೊತೆಯಾಟದ ವಿಶ್ವದಾಖಲೆಯಾಗಿತ್ತು.

2006: ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಪ್ರಸಾಧನ ಕಲೆಯ ಹಿರಿಯ ಕಲಾವಿದ ಸದಾನಂದ ಶಾನಭಾಗ (65) ನಿಧನರಾದರು. `ಪುತ್ರಣ್ಣ' ಎಂದೇ ಖ್ಯಾತರಾಗಿದ್ದ ಅವರು ಚಿತ್ರ ಕಲಾವಿದರಾಗಿ, ಮುಖವಾಡ ತಯಾರಿಕೆಗಳಲ್ಲಿ ಮತ್ತು ತೆರೆಯ ಹಿಂದಿನಪ್ರಸಾಧನ ಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರು.

2004: ಮಾಜಿ ಮಿಸ್ ಇಂಡಿಯಾ ಖ್ಯಾತಿಯ ರೂಪದರ್ಶಿ ಬೆಂಗಳೂರು ಮೂಲದ ನಫೀಸಾ ಜೋಸೆಫ್ ಮುಂಬೈಯ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.

2003: ಎಬಿಪಿಜೆಡಿ ನಾಯಕ ಸಿ. ಭೈರೇಗೌಡ ನಿಧನ.

1963: ಸಾಹಿತಿ ವಿಜಯಾ ಜಿ.ಎಸ್. ಜನನ.

1958: ಸಾಹಿತಿ ಪಿ. ಬಸವಲಿಂಗಯ್ಯ ಜನನ.

1957: ವಿಶ್ವ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಅಸ್ತಿತ್ವಕ್ಕೆ.

1925: ಸಾಹಿತಿ ಗೋವಿಂದ ರಾಜುಲು ಜನನ.

1904: ಸಾಹಿತಿ ಜಿ.ಬಿ. ಜೋಶಿ ಜನನ.

1904: ಭಾರತೀಯ ಕೈಗಾರಿಕೋದ್ಯಮದ ಜನಕ ಜೆಹಾಂಗೀರ್ ರತನ್ ಜಿ ದಾದಾಭಾಯಿ ಟಾಟಾ (29-7-1904ರಿಂದ 29-11-1993) ಅವರು ಈದಿನ ಪ್ಯಾರಿಸ್ಸಿನಲ್ಲಿ ಜನಿಸಿದರು. ಜೆ. ಆರ್. ಡಿ. ಟಾಟಾ ಎಂದೇ ಖ್ಯಾತರಾದ ಅವರು ನಾಲ್ಕು ಮಕ್ಕಳ ಪೈಕಿ ಎರಡನೆಯವರು. ಫ್ರಾನ್ಸ್, ಜಪಾನ್ ಮತ್ತು ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆದ ಅವರು 1938ರಲ್ಲಿ 34ನೇ ವಯಸ್ಸಿನವರಾಗಿದ್ದಾಗ ಸಹೋದರರ ಜೊತೆ ಸೇರಿ ಭಾರತದಲ್ಲಿ ಅತಿದೊಡ್ಡ ಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿದರು. ಮಾನವೀಯ ವ್ಯಕ್ತಿತ್ವಕ್ಕಾಗಿ 1992ರಲ್ಲಿ ಟಾಟಾ ಅವರಿಗೆ `ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತದಲ್ಲಿ ಕುಟುಂಬಯೋಜನೆ ಯಶಸ್ವಿಯಾಗುವಂತೆ ಮಾಡಿದ್ದಕ್ಕಾಗಿ ಅವರಿಗೆ ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಪ್ರಶಸ್ತಿ ಲಭಿಸಿತ್ತು. 1993ರ ನವೆಂಬರ್ 29ರಂದು ತವರು ರಾಜ್ಯವಾದ ಮಹಾರಾಷ್ಟ್ರದಲ್ಲಿ ಅವರು ನಿಧನರಾದರು.

1891: ಖ್ಯಾತ ಶಿಕ್ಷಣ ತಜ್ಞ, ಸಮಾಜ ಸುಧಾರಕ, ಸಾಹಿತಿ ಈಶ್ವರ ಚಂದ್ರ ವಿದ್ಯಾಸಾಗರ ನಿಧನ.

1884: ನಾಟಕದ ಮೂಲಕ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿದ ಖ್ಯಾತ ನಾಟಕಕಾರ ತಂಜಾವೂರು ಪರಮಶಿವ ಕೈಲಾಸಂ (ಟಿ.ಪಿ. ಕೈಲಾಸಂ) (29-7-1884ರಿಂದ 23-11-1946) ನ್ಯಾಯಾಧೀಶ ಪರಮಶಿವ ಅಯ್ಯರ್- ಕಮಲಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿ ಈದಿನ ಜನಿಸಿದರು.

1835: ಹವಾಯಿಯಲ್ಲಿ ಮೊದಲ ಬಾರಿಗೆ ಕಬ್ಬು ಕೃಷಿ ಆರಂಭ.

Monday, July 28, 2008

ಇಂದಿನ ಇತಿಹಾಸ History Today ಜುಲೈ 28

ಇಂದಿನ ಇತಿಹಾಸ

ಜುಲೈ 28

ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಹಿನ್ನೆಲೆ ಗಾಯನಕ್ಕೆ ಕಾಲಿರಿಸಿ ಐವತ್ತು ವರ್ಷ ಸಂದ ಸಂದರ್ಭದಲ್ಲಿ ರಮ್ಯ ಕಲ್ಚರಲ್ ಅಕಾಡೆಮಿ ಬೆಂಗಳೂರಿನ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ `ಗೌರವಾಭಿನಂದನೆ' ಕಾರ್ಯಕ್ರಮ ನಡೆಯಿತು.

2007: ಭಾರತೀಯ ವೈದ್ಯ ಮೊಹಮ್ಮದ್ ಹನೀಫ್ ಮೇಲಿದ್ದ ಭಯೋತ್ಪಾದನೆ ಆರೋಪವನ್ನು ಆಸ್ಟ್ರೇಲಿಯಾ ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ಹನೀಫ್ ಅವರು ಈದಿನ ಮಧ್ಯರಾತ್ರಿ 12.25ಕ್ಕೆ (ಭಾರತೀಯ ಕಾಲಮಾನ ರಾತ್ರಿ 7.55) ಆಸ್ಟ್ರೇಲಿಯದ ಬ್ರಿಸ್ಬೇನ್ ವಿಮಾನ ನಿಲ್ದಾಣದಿಂದ ಥಾಯ್ ಏರ್ವೇಸ್ ವಿಮಾನದಲ್ಲಿ ಬ್ಯಾಂಕಾಕ್ ಮೂಲಕ ಬೆಂಗಳೂರಿಗೆ ಹೊರಟರು. ಆಸ್ಟ್ರೇಲಿಯ ಸರ್ಕಾರವು ಹನೀಫ್ ಗೆ ದೇಶದಿಂದ ಹೊರಗೆ ತೆರಳಲು ಅವಕಾಶ ನೀಡಿತು. ಆದರೆ ಉದ್ಯೋಗದ ವೀಸಾ ನೀಡಲು ನಿರಾಕರಿಸಿತು.

2007: ನೈಸ್ ಸಂಸ್ಥೆಯನ್ನು ಕಿತ್ತೊಗೆದು, ಬೆಂಗಳೂರು-ಮೈಸೂರು ಹ್ದೆದಾರಿ ಕಾರಿಡಾರ್ ಯೋಜನೆ ಗುತ್ತಿಗೆಯನ್ನು 25000 ಕೋಟಿ ಡಾಲರ್ ವ್ಯವಹಾರದ `ಗ್ಲೋಬಲ್ ಇನ್ ಫ್ರಾಸ್ಟ್ರಕ್ಚರ್ ಕನಸೋರ್ಟಿಯಮ್' (ಜಿಐಸಿ)ಗೆ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ನ್ಯಾಯಾಲಯದ ಅನುಮತಿ ಕೋರಿತು. ಆದರೆ ಯಾವುದೇ ಕಾರಣಕ್ಕೂ ಬೆಂಗಳೂರು- ಮೈಸೂರು ಕಾರಿಡಾರ್ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ, ಸರ್ಕಾರದ ವಿರುದ್ಧ ಕಾನೂನು ಸಮರ ಮುಂದುವರೆಯುವುದು ಎಂದು ನೈಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಸ್ಪಷ್ಟ ಪಡಿಸಿದರು. ಅಮೆರಿಕಾದ ಇಂಡಸ್ ಕ್ಯಾಪಿಟಲ್, ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್ ಫಂಡ್, ಅವೆನ್ಯೂ ಕ್ಯಾಪಿಟಲ್ ಮತ್ತು ಐ ಆರ್ ಇ ಒ ಫಂಡ್ ಹಾಗೂ ಮುಂಬೈನ ಸ್ಕಿಲ್ ಇನ್ ಫ್ರಾಸ್ಟ್ರಕ್ಚರ್ ಕಂಪೆನಿ ಮತ್ತು ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗಳನ್ನು ಒಳಗೊಂಡಿರುವ ಜಿಐಸಿ ಮುಂಬೈ ಮತ್ತು ಬೆಂಗಳೂರಿನ ಕೋರಮಂಗಲದಲ್ಲಿ ಕಚೇರಿ ಹೊಂದಿದೆ. ಜಿಐಸಿ ನೀಡಿರುವ ಪ್ರಸ್ತಾವಕ್ಕೆ ಲೇಖಿರಾಜ್ ಜೈನ್ ಎಂಬವರು ಸಹಿ ಹಾಕಿದ್ದಾರೆ. ಮೂಲಚೌಕಟ್ಟು ಒಪ್ಪಂದವನ್ನು ಮೀರಿ ಸುಮಾರು 30000 ಕೋಟಿ ರೂಪಾಯಿ ಬೆಲೆಬಾಳುವ 2289 ಎಕರೆ ಭೂಮಿಯನ್ನು ನೈಸ್ ಸಂಸ್ಥೆ ಸ್ವಾಧೀನಪಡಿಸಿಕೊಂಡಿದೆ. ಇದಕ್ಕಾಗಿ ಸರ್ಕಾರದ ಕೆಲವು ಅಧಿಕಾರಿಗಳನ್ನು ಕೈವಶಮಾಡಿಕೊಂಡು ದಾಖಲೆಗಳನ್ನು ಕೂಡಾ ತಿರುಚಿದೆ ಎಂಬುದು ರಾಜ್ಯಸರ್ಕಾರದ ಪ್ರಮುಖ ಆರೋಪ. ಇದೇ ಆರೋಪದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎರಡು ವರ್ಷಗಳ ಹಿಂದೆ ರಾಜ್ಯ ಹೈಕೋರ್ಟ್ ವಜಾ ಮಾಡಿ ಯೋಜನೆಗೆ ಹಸಿರು ನಿಶಾನೆ ತೋರಿತ್ತು. ನ್ಯಾಯಾಲಯಕ್ಕೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ ಹಾಗೂ ದಾಖಲೆಗಳನ್ನು ಮರೆಮಾಚಿದ ಆರೋಪದ ಮೇಲೆ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾ ಮತ್ತು ಇನ್ನೊಬ್ಬ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕ್ದದಮೆ ಹೂಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಒಂದು ವರ್ಷದ ನಂತರ ಸುಪ್ರೀಂಕೋರ್ಟ್ ಕೂಡಾ ರಾಜ್ಯ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಯೋಜನೆಗೆ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ದೂರು `ಕುಲ್ಲಕ ಮತ್ತು ದುರುದ್ದೇಶದಿಂದ ಕೂಡಿದೆ' ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಪೀಠ ಬಿಎಂಐಸಿ ಯೋಜನೆ ಜಾರಿಗೊಳಿಸುತ್ತಿರುವ ನೈಸ್ ಸಂಸ್ಥೆಗೆ ವೆಚ್ಚದ ರೂಪದಲ್ಲಿ ನಾಲ್ಕು ವಾರದಲ್ಲಿ 5 ಲಕ್ಷ ರೂ. ನೀಡಬೇಕು ಎಂದು ಆದೇಶ ನೀಡಿತ್ತು. ಇದರ ನಂತರ ಬಿಎಂಐಸಿ ಯೋಜನೆ ಬಗ್ಗೆ ವಿಚಾರಣೆ ನಡೆಸಲು ರಾಜ್ಯಸರ್ಕಾರ ಬಿ.ಸಿ.ಪಟೇಲ್ ತನಿಖಾ ಆಯೋಗ ರಚಿಸಿದಾಗಲೂ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ತನಿಖೆ ನಡೆಸುವುದಿಲ್ಲ ಎಂದು ಮೊದಲು ಒಪ್ಪಿಕೊಂಡರೂ ರಾಜ್ಯ ಸರ್ಕಾರ ಹತ್ತುತಿಂಗಳ ನಂತರ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿ ತನಿಖಾ ಆಯೋಗ ರಚನೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

2007: ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯ ಮುದಿಗೊಂಡ ಗ್ರಾಮದಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ಮೃತರಾದರು. ಎಡಪಕ್ಷಗಳು ಕರೆ ನೀಡಿದ್ದ ಆಂಧ್ರಪ್ರದೇಶ ಬಂದ್ ಹಿಂಸಾಚಾರಕ್ಕೆ ತಿರುಗಿದಾಗ ಈ ಘಟನೆ ಸಂಭವಿಸಿತು.

2007: ಭಾರತ-ಶ್ರೀಲಂಕಾವನ್ನು ಸಂಪರ್ಕಿಸುವ `ರಾಮರ್ ಸೇತು ಅಥವಾ ಆಡಮ್ ಬ್ರಿಡ್ಜ್ ಮಾನವ ನಿರ್ಮಿತ ರಚನೆ ಅಲ್ಲ ಎಂದು ಬಾಹ್ಯಾಕಾಶದಿಂದ ತೆಗೆದಿರುವ ಭೂಮಿಯ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಭಾಗ ಅರ್ಥ್ ವೆಬ್ ಹೇಳಿರುವುದಾಗಿ ಚೆನ್ನೈಯ ಸೇತು ಸಮುದ್ರಂ ಕಾರ್ಪೊರೇಷನ್ ಪ್ರಕಟಿಸಿತು. ಕಾರ್ಪೊರೇಷನ್ ಎರಡು ದಿನದ ಹಿಂದೆ ನಾಸಾಗೆ ಇ ಮೇಲ್ ಮೂಲಕ `ರಾಮರ್ ಸೇತುವೆ ಮಾನವ ನಿರ್ಮಿತವೇ?' ಎಂಬ ಪ್ರಶ್ನೆಯನ್ನು ಕಳುಹಿಸಿತ್ತು. ಅದಕ್ಕೆ ಉತ್ತರಿಸಿರುವ ನಾಸಾದ ಅರ್ಥ್ ವೆಬ್ ವಿಭಾಗ, `ಇದು, ಸಾವಿರಾರು ವರ್ಷಗಳಿಂದ ಅಲೆಗಳಿಂದಾಗಿ ನಿರ್ಮಾಣವಾದ ಮರಳಿನ ಸ್ವಾಭಾವಿಕ ರಚನೆ. ಹಾಗಾಗಿ ಇದು ಮಾನವ ನಿರ್ಮಿತ ಅಲ್ಲ ಎಂದು ಸ್ಪಷ್ಟ ಪಡಿಸಿದೆ' ಎಂದು ಕಾರ್ಪೊರೇಷನ್ ಹೇಳಿತು. ನಾಸಾ ಕಳುಹಿಸಿದ ಉತ್ತರವನ್ನು ಪತ್ರಿಕಾಗೋಷ್ಠಿಯಲ್ಲಿ ಸೇತು ಸಮುದ್ರಂ ಕಾರ್ಪೊರೇಷನ್ ಮತ್ತು ತೂತ್ತುಕುಡಿ ಬಂದರು ಮಂಡಳಿ ಅಧ್ಯಕ್ಷ ಎನ್. ರಘುಪತಿ ವಿವರಿಸಿದರು. ಸೇತು ಸಮುದ್ರಂ ಜಲಮಾರ್ಗ ಯೋಜನೆ ಶೇ 50 ರಷ್ಟು ಪೂರ್ಣಗೊಂಡಿದೆ. ಈವರೆಗೆ 231 ಲಕ್ಷ ಘನ ಅಡಿ ಹೂಳು ಎತ್ತಲಾಗಿದೆ ಎಂದು ರಘುಪತಿ ಹೇಳಿದರು.

2007: ಭಾರತದ ಪೆಂಟ್ಯಾಲ ಹರಿಕೃಷ್ಣ ಅವರು ಕೆನಡಾದ ಮ್ಯಾಂಟ್ರಿಯಲ್ ನಲ್ಲಿ ನಡೆದ ಮಾಂಟ್ರಿಯಲ್ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ ನ ಎಂಟನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದು, ಪೂರ್ಣ ಪಾಯಿಂಟ್ ಸಂಗ್ರಹಿಸಿದರು.

2007: ಭಾರತದಿಂದ ಕೋಳಿಗಳನ್ನು ಆಮದು ಮಾಡಿಕೊಳ್ಳದಂತೆ ಶ್ರೀಲಂಕಾ ನಿಷೇಧ ಹೇರಿತು. ಮಣಿಪುರ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೋಳಿಜ್ವರ ಕಾಣಿಸಿಕೊಂಡಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಭಾರತದ ಕೋಳಿ ಸೇರಿದಂತೆ ಯಾವುದೇ ಪಕ್ಷಿಗಳನ್ನು ಆಮದು ಮಾಡಿಕೊಳ್ಳದಂತೆ ನಿಷೇಧ ವಿಧಿಸಿತು.

2007: ಭಾರತ ಹಾಗೂ ಭೂತಾನ್ ರೂ 3,500 ಕೋಟಿಗಳ ವೆಚ್ಚದ ಮಹತ್ವಾಕಾಂಕ್ಷಿ ಜಲ ವಿದ್ಯುತ್ ಉತ್ಪಾದನಾ ಯೋಜನೆಯ ಒಪ್ಪಂದಕ್ಕೆ ಈದಿನ ಭೂತಾನಿನ ಥಿಂಪುವಿನಲ್ಲಿ ಸಹಿ ಹಾಕುವ ಮೂಲಕ ಉಭಯ ದೇಶಗಳು ಆರ್ಥಿಕ ಸಹಕಾರದಲ್ಲಿ ಹೊಸ ಹೆಜ್ಜೆ ಇಟ್ಟವು. 1095 ಮೆಗಾವಾಟ್ ಸಾಮಥ್ರ್ಯದ ಜಲ ವಿದ್ಯುತ್ ಉತ್ಪಾದನಾ ಯೋಜನೆಯ ಒಪ್ಪಂದಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಮತ್ತು ಭೂತಾನ್ ವಿದೇಶಾಂಗ ಸಚಿವ ಲೊಂಪೊ ಕಾಂಡು ವಾಂಗ್ ಚುಕ್ ಅವರು ಸಹಿ ಹಾಕಿದರು. ಭಾರತದ ಸಹಕಾರದೊಂದಿಗೆ ಭೂತಾನಿನಲ್ಲಿನಿರ್ಮಾಣವಾಗುವ ಅತಿದೊಡ್ಡ ಜಲವಿದ್ಯುತ್ ಯೋಜನೆ ಇದು. ಭಾರತದ ಸಹಕಾರದೊಂದಿಗೆ ಭೂತಾನ್ ಕೈಗೆತ್ತಿಕೊಂಡ ಹಲವು ಜಲ ವಿದ್ಯುತ್ ಯೋಜನೆಗಳಲ್ಲಿ ಚುಖಾ, ಹರಿಚಾ, ಢಾಲಾ ಹಾಗೂ ಪುನತ್ ಸಂಘಚುವಾನ್ ಯೋಜನೆಗಳು ಮುಖ್ಯವಾದವು. ಈ ಯೋಜನೆಗಳಲ್ಲಿ ಭಾರತ 5,000 ಕೋಟಿ ರೂ. ಬಂಡವಾಳ ಹೂಡಿದೆ.

2007: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಹಿನ್ನೆಲೆ ಗಾಯನಕ್ಕೆ ಕಾಲಿರಿಸಿ ಐವತ್ತು ವರ್ಷ ಸಂದ ಸಂದರ್ಭದಲ್ಲಿ ರಮ್ಯ ಕಲ್ಚರಲ್ ಅಕಾಡೆಮಿ ಬೆಂಗಳೂರಿನ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ `ಗೌರವಾಭಿನಂದನೆ' ಕಾರ್ಯಕ್ರಮ ನಡೆಯಿತು. ಗೌರವ ಜಾನಕಿ ಅವರು ಸಮಾರಂಭದಲ್ಲಿ ಹೃದಯತುಂಬಿ ಹಾಡಿದರು. ಈ ಸನ್ಮಾನ ಸಮಾರಂಭದಲ್ಲಿ ಹಿನ್ನೆಲೆ ಗಾಯಕ ಪಿ.ಬಿ. ಶ್ರೀನಿವಾಸ್, ಸಂಗೀತ ನಿರ್ದೇಶಕರಾದ ಜಯಗೋಪಾಲನ್, ರಾಜನ್, ಹಿರಿಯ ನಟಿಯರಾದ ಹರಿಣಿ, ಜಯಂತಿ, ಡಾ. ಬಿ. ಸರೋಜಾದೇವಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಪಾಲ್ಗೊಂಡಿದ್ದರು. `ಸುರಭಿ ಪ್ರಕಾಶನ' ಹೊರತಂದ ಆರ್. ಶ್ರೀನಾಥ್ ಅವರ `ನಾದ ದೇವತೆ-ಎಸ್. ಜಾನಕಿ' ಪುಸ್ತಕವನ್ನು ಇದೇ ಸಂದರ್ಭದಲ್ಲಿ ಹಿರಿಯ ನಟಿ ಜಯಂತಿ ಬಿಡುಗಡೆ ಮಾಡಿದರು.

2006: ಪಾಂಡಿಚೇರಿಯನ್ನು `ಪುದುಚೇರಿ' ಎಂಬುದಾಗಿ ನಾಮಕರಣ ಮಾಡುವ ವಿಧೇಯಕವನ್ನು ರಾಜ್ಯಸಭೆಯ್ಲಲಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಮಂಡಿಸಿದರು. ಸೆಪ್ಟೆಂಬರ್ ತಿಂಗಳಿನಲ್ಲಿ ಹೆಸರು ಬದಲಾಯಿತು.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನೂತನ ಮೀಸಲಾತಿ ನೀತಿ ರೂಪಿಸುವ ಸಂಬಂಧ ರಚಿಸಲಾಗ್ದಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತು.
2006: ದೀರ್ಘ ಕಾಲದ ಸಮರದ ಬಳಿಕ ಕಡೆಗೂ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರು ರಂಜನಾ ಝಾ ಅವರನ್ನು ತಮ್ಮ ಪತ್ನಿ ಎಂಬುದಾಗಿ ಬಿಹಾರಿನ ಮಹಿಳಾ ಆಯೋಗದ ಮುಂದೆ ಅಂಗೀಕರಿಸಿದರು. ರಂಜನಾ ಅವರನ್ನು ತಮ್ಮ ಮೊದಲ ಪತ್ನಿ ಎಂಬುದಾಗಿ ಒಪ್ಪಿಕೊಂಡು ಅವರಿಗೆ ಪತ್ನಿಯ ಸ್ಥಾನಮಾನ ನೀಡಲು ಉದಿತ್ ಅವರು ಒಪ್ಪಿದ್ದಾರೆ ಎಂದು ಆಯೋಗದ ಅಧ್ಯಕ್ಷೆ ಮಂಜು ಪ್ರಕಾಶ್ ಈದಿನ ಪ್ರಕಟಿಸಿದರು.

1943: ಇಟಲಿಯ ಫ್ಯಾಸಿಸ್ಟ್ ಸರ್ವಾಧಿಕಾರಿ ಬೆನಿಟೊ ಮುಸೋಲಿನಿ ಈದಿನ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ. 10 ವರ್ಷಗಳ ಕಾಲ ನಿರಂಕುಶ ಆಡಳಿತ ನಡೆಸಿದ ಈತ 1936-1939ರ ನಡುವಣ ಸ್ಪಾನಿಷ್ ಜತೆಗಿನ ಯುದ್ಧದಲ್ಲಿ ಹಿಟ್ಲರ್ ಜೊತೆಗೆ ಕೈಜೋಡಿಸಿದ.

1935: ಪ್ರಾಧ್ಯಾಪಕ, ಸಾಹಿತಿ ವಾಮನ ಬೇಂದ್ರೆ ಅವರು ವರಕವಿ ದ.ರಾ. ಬೇಂದ್ರೆ- ಲಕ್ಷ್ಮೀಬಾಯಿ ದಂಪತಿಯ ಪುತ್ರನಾಗಿ ಹಾವೇರಿ ಜಿಲ್ಲೆಯ (ಹಿಂದಿನ ಧಾರವಾಡ ಜಿಲ್ಲೆ) ರಾಣೆಬೆನ್ನೂರಿನಲ್ಲಿ ಜನಿಸಿದರು. ಶಾಲೆಯಲ್ಲಿದ್ದಾಗಲೇ ಬರವಣಿಗೆ ಪ್ರಾರಂಭಿಸಿದ ಅವರಿಗೆ ಸಾಹಿತ್ಯ ರಚನೆ ತಂದೆಯಿಂದ ಬಂದ ಬಳುವಳಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ವಾಮನ ಬೇಂದ್ರೆ ಅವರು ಪ್ರಬಂಧ, ಕವನ, ನಾಟಕ, ಅನುವಾದ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದವರು.

1909: ರಾಜಕಾರಣಿ ಬ್ರಹ್ಮಾನಂದರೆಡ್ಡಿ ಜನನ.

Sunday, July 27, 2008

ಇಂದಿನ ಇತಿಹಾಸ History Today ಜುಲೈ 27

ಇಂದಿನ ಇತಿಹಾಸ

ಜುಲೈ 27

ಕ್ರೊಯೇಷಿಯಾದ ಜಾಗ್ರೆಬ್ ನಲ್ಲಿ ನಡೆದ 49ನೇ ಐ ಎಸ್ ಎಸ್ ಎಫ್ ವಿಶ್ವ ಶೂಟಿಂಗ್ ಚಾಂಪಿಯನ್ ಷಿಪ್ ನ ಪುರುಷರ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮಾನವ್ ಜಿತ್ ಸಿಂಗ್ ಸಂಧು ಚಿನ್ನದ ಪದಕ ಗೆದ್ದರು.

2006: ಹಿರಿಯ ಜಾನಪದ ವಿದ್ವಾಂಸ ಮತಿಘಟ್ಟ ಕೃಷ್ಣಮೂರ್ತಿ (94) ಬೆಂಗಳೂರಿನಲ್ಲಿ ನಿಧನರಾದರು. ಹಾಸನ ಮತಿಘಟ್ಟ ಮೂಲದ ಕೃಷ್ಣಮೂರ್ತಿ `ಕಳಸಾಪುರದ ಹುಡುಗರು', `ಗೃಹಿಣಿ ಗೀತ', `ಸಾಂಪ್ರದಾಯಿಕ ಗೀತೆಗಳು', `ಶಕುನದ ಹಕ್ಕಿ', `ಹೊನ್ನ ಹೊತ್ತಿಗೆ', `ಮರುಗಿ', `ನಾಡಪದಗಳು' `ನಮ್ಮ ಹಳ್ಳಿಯ ಹಾಡು' ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದರು. 50,000ಕ್ಕೂ ಹೆಚ್ಚು ಜನಪದ ಹಾಡು ಕಥೆಗಳನ್ನು ಸಂಗ್ರಹಿಸಿದ್ದಲ್ಲದೆ, ಬ್ರಿಟಿಷ್ ಆಡಳಿತ ವಿರುದ್ಧ ಹೋರಾಡಿ ಜೈಲಿಗೂ ಹೋಗಿದ್ದರು.

2006: ಭಾರತ- ಅಮೆರಿಕ ಪರಮಾಣು ಶಕ್ತಿ ಒಪ್ಪಂದವನ್ನು ಅಮೆರಿಕದ ಕಾಂಗ್ರೆಸ್ (ಪ್ರತಿನಿಧಿಗಳ ಸಭೆ) ಅನುಮೋದಿಸಿತು. 4 ಗಂಟೆಗಳ ಚರ್ಚೆಯ ಬಳಿಕ 435 ಸದಸ್ಯ ಬಲದ ಸದನವು 359 ಪರ ಮತ್ತು 68 ವಿರೋಧಿ ಮತಗಳಿಂದ ಒಪ್ಪಂದಕ್ಕೆ ಅನುಮೋದನೆ ನೀಡಿತು.

2006: ಕಾಲ್ ಸೆಂಟರ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಕೊಲೆ ಆರೋಪಿ, ಆಕೆಯ ಪ್ರಿಯಕರ ಗುರುರಾಜ ಕಿಶೋರನನ್ನು ಪೊಲೀಸರು ಬಂಧಿಸಿದರು. ಮದುವೆಯಾಗಲು ನಿರಾಕರಿಸಿದ್ದರಿಂದ ಕೊಲೆ ಮಾಡಿದುದಾಗಿ ಆತ ಪೊಲೀಸರಲ್ಲಿ ತಪ್ಪು ಒಪ್ಪಿಕೊಂಡ.

2006: ಕ್ರೊಯೇಷಿಯಾದ ಜಾಗ್ರೆಬ್ ನಲ್ಲಿ ನಡೆದ 49ನೇ ಐ ಎಸ್ ಎಸ್ ಎಫ್ ವಿಶ್ವ ಶೂಟಿಂಗ್ ಚಾಂಪಿಯನ್ ಷಿಪ್ ನ ಪುರುಷರ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮಾನವ್ ಜಿತ್ ಸಿಂಗ್ ಸಂಧು ಚಿನ್ನದ ಪದಕ ಗೆದ್ದರು.

2006: ರಾಷ್ಟ್ರದ ಸಮುದಾಯ ಸೇವೆಗೆ ತೊಡಗಿಸಿಕೊಂಡವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಕೆನಡಾದ ಎರಡನೇ ಉನ್ನತ ನಾಗರಿಕ ಪ್ರಶಸ್ತಿ `ಆರ್ಡರ್ ಆಫ್ ಕೆನಡಾ'ಕ್ಕೆ ಭಾರತದ ಅರ್ಥಶಾಸ್ತ್ರಜ್ಞ ಮಾನವ ಹಕ್ಕುಗಳ ಹೋರಾಟಗಾರ ವಿಠ್ಠಲ್ ರಾಜನ್ ಮತ್ತು ಆರೋಗ್ಯ ಸೇವಾ ಕಾರ್ಯಕರ್ತೆ ಲಲಿತಾ ಮಲ್ಹೋತ್ರ ಆಯ್ಕೆಯಾದರು.

1992: ಖ್ಯಾತ ಲೇಖಕ, ವಕೀಲ, ಪತ್ರಕರ್ತ ರಾಮೇಶ್ವರ ಸಹಾಯ್ ಸಕ್ಸೇನಾ ಜನನ.

1992: ಖ್ಯಾತ ಹಿಂದಿ ಚಿತ್ರನಟ ಅಮ್ಜದ್ ಖಾನ್ ನಿಧನ.

1972: ನಕ್ಸಲ್ ಚಳವಳಿಯ ಧುರೀಣ ಚಾರು ಮಜುಂದಾರ್ ಅವರು ಕಾರಾಗೃಹದಲ್ಲಿ ಈದಿನ ನಿಧನರಾದರು. ನಕ್ಸಲ್ ಚಳವಳಿಯ ನೇತೃತ್ವ ವಹಿಸಿ ಅವರು ಬಹಳ ಕಾಲ ಭೂಗತರಾಗಿ ಚಳವಳಿ ಮುಂದುವರೆಸಿದ್ದರು.

1928: ಸಾಹಿತಿ ಶ್ರೀನಿವಾಸ ಕುಲಕರ್ಣಿ ಜನನ.

1910: ಸಾಹಿತಿ ಜೋಳದರಾಶಿ ದೊಡ್ಡನಗೌಡರ ಜನನ.

1910: ಖ್ಯಾತ ಗಾಯಕ ಬಂದೇ ಅಲಿಖಾನ್ ನಿಧನ.

1906: ಮದ್ರಾಸು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಪಂಡಿತ, ನಿಘಂಟು ತಜ್ಞ, ಸಂಶೋಧಕ ಪ್ರೊ. ಮರಿಯಪ್ಪ ಭಟ್ಟ (27-7-1906ರಿಂದ 21-3-1980) ಅವರು ಗೋವಿಂದ ಭಟ್ಟ- ಕಾವೇರಿ ಅಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ ಜನಿಸಿದರು. ಹವ್ಯಕ- ಇಂಗ್ಲಿಷ್ ನಿಘಂಟು, ತುಳು- ಇಂಗ್ಲಿಷ್ ನಿಘಂಟು, ರೆ.ಎಫ್. ಕಿಟೆಲ್ ಅವರ ಕನ್ನಡ- ಇಂಗ್ಲಿಷ್ ನಿಘಂಟನ್ನು ಪರಿಷ್ಕರಿಸಿ ವಿಸ್ತಾರಗೊಳಿಸಿ, ರಚಿಸಿದ ನಿಘಂಟು ಮರಿಯಪ್ಪ ಭಟ್ಟರ ಮಹತ್ವದ ಕಾಣಿಕೆಗಳಲ್ಲಿ ಕೆಲವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, July 26, 2008

ಇಂದಿನ ಇತಿಹಾಸ History Today ಜುಲೈ 26

ಇಂದಿನ ಇತಿಹಾಸ

ಜುಲೈ 26

ಕ್ಷಯರೋಗ ತಗುಲಿದ ಶಂಕೆಯಿಂದ ನೈಋತ್ಯ ವೇಲ್ಸಿನಲ್ಲಿರುವ ಸ್ಕಂದ ವೇಲ್ ದೇವಾಲಯದ ಹೋರಿ `ಶಂಬೊ'ವನ್ನು ಕೊಲ್ಲಲು ಆಗಮಿಸಿದ ಸರ್ಕಾರಿ ಅಧಿಕಾರಿಗಳನ್ನು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ಸಮುದಾಯದವರು ಪ್ರತಿಭಟಿಸಿ ವಾಪಸ್ ಕಳುಹಿಸಿದರು.

2007: ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳ ಜತೆ ಸಂವಾದ ನಡೆಸಲು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ www.abdulkalam.com ಎಂಬ ಹೊಸ ವೆಬ್ ಸೈಟ್ ಈದಿನ ಆರಂಭಗೊಂಡಿತು. ಚೆನ್ನೈಯ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಲ್ಲಿನ ಶಿಕ್ಷಕರ ಜತೆಗೆ ಕಲಾಂ ಸಂವಾದ ನಡೆಸಿದ ಸಂದರ್ಭದಲ್ಲಿ ಈ ವೆಬ್ ಸೈಟನ್ನು ಪ್ರಾರಂಭಿಸಲಾಗಿತ್ತು. ರಾಷ್ಟ್ರಪತಿ ಕಚೇರಿಯಲ್ಲಿದ್ದ ಹಿಂದಿನ ವೆಬ್ ಸೈಟಿನ ಎಲ್ಲ ವಿಷಯಗಳು ಈ ವೆಬ್ ಸೈಟಿನಲ್ಲಿ ಲಭಿಸುತ್ತವೆ.

2007: ಸುಮಾರು 700 ಕಿಲೋ ಮೀಟರ್ ದೂರದ ಭೂಪ್ರದೇಶಕ್ಕೆ ಅಪ್ಪಳಿಸುವ ಸಾಮರ್ಥ್ಯವುಳ್ಳ `ಬಾಬರ್' ನೌಕಾ ಕ್ಷಿಪಣಿಯ ಪರೀಕ್ಷೆಯನ್ನು ಪಾಕಿಸ್ತಾನ ಸರ್ಕಾರ ಯಶಸ್ವಿಯಾಗಿ ನಡೆಸಿತು. ಈ ವ್ಯಾಪ್ತಿಯೊಳಗೆ ಬರುವ ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಭಾರತ-ರಷ್ಯಾ ಜಂಟಿ ಕಾರ್ಯಾಚರಣೆಯ ಅನ್ವಯ ಭಾರತ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಪ್ರತಿಯಾಗಿ ಬಾಬರ್ ಕ್ಷಿಪಣಿಯನ್ನು ಪಾಕ್ ನಿರ್ಮಿಸಿದೆ. 2005ರಲ್ಲಿ 500 ಕಿಲೋ ಮೀಟರ್ ವರೆಗೆ ಕ್ರಮಿಸುವ ಸಾಮರ್ಥ್ಯ ಇದ್ದ ಬ್ರಹ್ಮೋಸ್ ಕ್ಷಿಪಣಿ ಸಾಮರ್ಥ್ಯವನ್ನು 700 ಕಿಲೋ ಮೀಟರ್ಗೆ ಹೆಚ್ಚಿಸಿ ಕಳೆದ ಮಾರ್ಚ್ 22ರಂದು ಭಾರತ ಪರೀಕ್ಷೆ ನಡೆಸಿತ್ತು.

2007: ಉಗ್ರರ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸಹಾಯ ಮಾಡ್ದಿದಕ್ಕಾಗಿ ಅಮೆರಿಕ ಪ್ರಜೆ ಮಹಮದ್ ಫಾರೂಕ್ ಬ್ರೆಂಟ್ ಎಂಬಾತನಿಗೆ ನ್ಯೂಯಾರ್ಕಿನ ಸ್ಥಳೀಯ ನ್ಯಾಯಾಲಯ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಬ್ರೆಂಟ್ ನಂತಹ ವ್ಯಕ್ತಿಗಳ ಸಹಾಯದಿಂದಲೇ ಉಗ್ರರ ಸಂಘಟನೆಗಳು ಈ ದೇಶದಲ್ಲಿ ದುಷ್ಕೃತ್ಯ ನಡೆಸಲು ಸಾಧ್ಯವಾಗುತ್ತದೆ ಎಂದು ಶಿಕ್ಷೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಲೊರೆಟ್ಟಾ ಹೇಳಿದರು. ಬ್ರೆಂಟ್ 2002ರಲ್ಲಿ ಪಾಕಿಸ್ಥಾನದಲ್ಲಿ ಉಗ್ರರ ತರಬೇತಿ ಪಡೆದುಕೊಂಡು ಅಮೆರಿಕಕ್ಕೆ ವಾಪಸ್ಸಾದ ನಂತರ ಮಹಮದ್ ಅಲ್ ಮುತಜ್ಜಮ್ ಎಂಬ ಹೆಸರಿನಲ್ಲಿ ದುಷ್ಕೃತ್ಯ ನಡೆಸಲು ಆರಂಭಿಸಿದನು. 2005ರಲ್ಲಿ ಬಾಲ್ಟಿಮೋರ್, ಮೇರಿಲ್ಯಾಂಡ್ ಪ್ರದೇಶದಲ್ಲಿ ಚಟುವಟಿಕೆ ನಡೆಸುತ್ತಿದ್ದಾಗ ಈತ ಸೆರೆ ಸಿಕ್ಕಿದ.

2007: ಕ್ಷಯರೋಗ ತಗುಲಿದ ಶಂಕೆಯಿಂದ ನೈಋತ್ಯ ವೇಲ್ಸಿನಲ್ಲಿರುವ ಸ್ಕಂದ ವೇಲ್ ದೇವಾಲಯದ ಹೋರಿ `ಶಂಬೊ'ವನ್ನು ಕೊಲ್ಲಲು ಆಗಮಿಸಿದ ಸರ್ಕಾರಿ ಅಧಿಕಾರಿಗಳನ್ನು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ಸಮುದಾಯದವರು ಪ್ರತಿಭಟಿಸಿ ವಾಪಸ್ ಕಳುಹಿಸಿದರು.`ಶಂಬೊ'ವನ್ನು ಕೊಲ್ಲದಂತೆ ದೇವಾಲಯದ ಹಿಂದೂ ಭಕ್ತರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ, ಹತ್ಯೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಪಶುವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ತಮ್ಮನ್ನು ಈಗ ವಾಪಸ್ ಕಳುಹಿಸಿದರೂ ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡು ಬಂದು ಹೋರಿಯನ್ನು ವಧಿಸುವುದಾಗಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಹೇಳಿದರು.

2007: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು 2007ರ 28 ರಿಂದ ನವೆಂಬರ್ 18 ರವರೆಗೆ ಬೆಂಗಳೂರಿನ ಗಿರಿನಗರದಲ್ಲಿ ಇರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳುವರು. 28 ರ ಸಂಜೆ 5 ಗಂಟೆಗೆ ಯಶವಂತಪುರದ ಗಾಯತ್ರಿ ದೇವಸ್ಥಾನದ ಬಳಿ ಚಿದಂಬರ ದೀಕ್ಷಿತ ಸ್ವಾಮೀಜಿ ಅವರ ನೇತೃತ್ವದ್ಲಲಿ ಸ್ವಾಮೀಜಿಗಳು ಪುರ ಪ್ರವೇಶ ಮಾಡುವರು ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಬಿ.ಕೃಷ್ಣ ಭಟ್ ಹಾಗೂ ಸಂಚಾಲಕ ಕೆ.ಲಕ್ಷ್ಮಿನಾರಾಯಣ ಪ್ರಕಟಿಸಿದರು. ಚಾತುರ್ಮಾಸ್ಯ ಕಾಲದಲ್ಲಿ ಇತರ ಕಾರ್ಯಕ್ರಮಗಳ ಜೊತೆಗೆ ವಿಶೇಷವಾಗಿ ವಾರದ ಎಲ್ಲ ದಿನಗಳಲ್ಲೂ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಗೋ ಯಾತ್ರೆ ನಡೆಯುವುದು. ಈ ಸಂದರ್ಭದಲ್ಲಿ ಭಾರತೀಯ ಗೋವಿನ ಮಹತ್ವ ಸಾರುವ ಪುರ ಸಂಚಲನ ಮತ್ತು ಮನೆ ಬಾಗಿಲಿಗೆ ಗೋ ಸಂದೇಶ ಸಾರಲಾಗುವುದು. ಪ್ರತಿ ಭಾನುವಾರ ನಗರದ ವಿವಿಧ ವಲಯ ಕೇಂದ್ರಗಳಲ್ಲಿ ಗೋ ವಿಚಾರ ಪ್ರಬೋಧಕ, ಗಾನ. ನೃತ್ಯ ಸಮೇತ ಬೃಹತ್ ಸಾರ್ವಜನಿಕ ಸಭೆ ನಡೆಯುವುದು. ವಾರದ ದಿನದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣೆ, ಸಂವರ್ಧನೆ ಬಗ್ಗೆ ಅರಿವು ಮೂಡಿಸಲು ವಿವಿಧ ಶಾಲಾ ಕಾಲೇಜುಗಳಲ್ಲಿ ವೈಜ್ಞಾನಿಕ ಸಂವಾದ ನಡೆಸಲಾಗುವುದು. ಸೆಪ್ಟೆಂಬರ್ 26 ರಂದು ಸೀಮೋಲ್ಲಂಘನ, ನವೆಂಬರ್ 18 ರಂದು ಕೋಟಿ ನೀರಾಜನ - ಲಕ್ಷ ಮಹಿಳೆಯರು ಗೋಮಾತೆಗೆ ಕೋಟಿ ಸಂಖ್ಯೆಯ ದೀಪ ಬೆಳಗುವರು ಎಂದು ಅವರು ಹೇಳಿದರು.

2007: ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯ ಪಬ್ಲಿಕ್ ಯುಟಿಲಿಟಿ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಬಟ್ಟೆ ಮಳಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾದವು.

2006: ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ, ವೈಟ್ಫೀಲ್ಡ್ ಕುಂದಲ ಹಳ್ಳಿಯ ಅವಿವಾ ಕಸ್ಟಮರ್ ಆಪರೇಷನಲ್ ಸರ್ವೀಸ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಅವರನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಸಮೀಪ ಹೆದ್ದಾರಿಯಲ್ಲಿ ಎಸೆಯಲಾಯಿತು. ಬೆಂಗಳೂರಿನ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಇನ್ನೊಬ್ಬ ಕಾಲ್ ಸೆಂಟರ್ ಉದ್ಯೋಗಿಯ ಈ ಹತ್ಯೆ ಜನರನ್ನು ಕಂಗೆಡಿಸಿತು.

2006: ಇಂಗ್ಲೆಂಡಿನ ಉತ್ತರ ಯಾರ್ಕ್ ಷೈರ ತಂಡ ಕೌಂಟಿಯಲ್ಲಿ 5 ರನ್ನುಗಳಿಗೆ ಆಲೌಟ್ ಆಯಿತು. ಡಿಶ್ ಫೋರ್ತ್ ತಂಡದ ವಿರುದ್ಧ ಉತ್ತರ ಯಾರ್ಕ್ ಷೈರ್ ತಂಡದ ಎಲ್ಲ ಬ್ಯಾಟ್ಸ್ ಮನ್ ಗಳೂ ಶೂನ್ಯ ಸಂಪಾದನೆ ಮಾಡಿದರು. ಇವರಿಗೆ ಬಂದ ಐದು ರನ್ನುಗಳು ಇತರ ರನ್ನುಗಳಿಂದ ಕೊಡುಗೆಯಾಗಿ ಬಂದವುಗಳು. ನಿಡ್ಡರ್ ಡೇಲ್ ಮತ್ತು ಅಮೆಚೂರ್ ಕ್ರಿಕೆಟ್ ಲೀಗಿನ 112 ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಕಡಿಮೆ ಮೊತ್ತವಾಗಿದ್ದು ವಿಸ್ಡನ್ ಅಲ್ಮನಾಕ್ ಪ್ರಕಾರ ಇದು ಅತ್ಯಂತ ಅಪೂರ್ವ ಘಟನೆ. 1931ರರಲ್ಲಿ ಮಿಡ್ ಲ್ಯಾಂಡ್ಸಿನಲ್ಲಿ ಶೆಪ್ ಸ್ಟೋನ್ ಇಲೆವೆನ್ ತಂಡವು 4 ಇತರೆ ರನ್ ಗಳಿಸಿ ಆಲೌಟ್ ಆಗಿತ್ತು.

2006: ಒಲಿಂಪಿಕ್ ಮಹಿಳಾ ಡಿಸ್ಕಸ್ ಚಾಂಪಿಯನ್ ರಷ್ಯಾದ ಕ್ರೀಡಾಪಟು ನತಾಲ್ಯಾ ಸಡೋವಾಗೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಎರಡು ವರ್ಷಗಳ ಅವಧಿಯ ನಿಷೇಧ ಹೇರಲಾಯಿತು. ಕಳೆದ ಮೇ 21ರಂದು ಹಾಲೆಂಡಿನ ಹೆಂಗೆಲೋದಲ್ಲಿ ನಡೆದ ಕೂಟ ಒಂದರಲ್ಲಿ ಸಡೋವಾ ನಿಷೇಧಿತ ಸ್ಟೆರಾಯ್ಡ್ ಮೆಥಾಂಡೀನನ್ ಸೇವಿಸಿದ್ದು ಪತ್ತೆಯಾಗಿತ್ತು.

2000: 14 ವರ್ಷದೊಳಗಿನ ಮಕ್ಕಳನ್ನು ಸರ್ಕಾರಿ ನೌಕರಿ, ಮನೆಗೆಲಸಕ್ಕೆ ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ನಿಷೇಧ.

1991: ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬಂದ್.

1958: ತೇಜಸ್ವಿನಿ ನಿರಂಜನ ಜನನ.

1956: ಖ್ಯಾತ ಒರಿಯಾ ಕವಿ, ನಾಟಕಕಾರ, ಪ್ರಬಂಧಕಾರ ಗೋಧಾವರೀಶ್ ಮಿಶ್ರಾ ನಿಧನ.

1945: ಬ್ರಿಟನ್ ಪ್ರಧಾನಿ ಹುದ್ದೆಗೆ ವಿನ್ ಸ್ಟನ್ ಚರ್ಚಿಲ್ ರಾಜೀನಾಮೆ.

1938: ಜಿ.ಜೆ. ಹರಿಜಿತ್ ಜನನ.

1935: ಶೈಲಜಾ ಉಡಚಣ ಜನನ.

1934: ಖ್ಯಾತ ಕಾದಂಬರಿಕಾರ ಎಲ್.ಎಲ್. ಭೈರಪ್ಪ ಅವರು ಲಿಂಗಣ್ಣಯ್ಯ- ಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆಶಿವರ ಗ್ರಾಮದಲ್ಲಿ ಜನಿಸಿದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆ ಆರಂಭಿಸಿದ ಭೈರಪ್ಪ ಈವರೆಗೆ 22 ಕಾದಂಬರಿಗಳನ್ನು ಬರೆದಿದ್ದಾರೆ. ನೀಳ್ಗತೆ, ವಿಮರ್ಶಾಕೃತಿ, ಆತ್ಮವೃತ್ತಾಂತವನ್ನೂ ಬರೆದ್ದಿದಾರೆ. ಅವರ ಮೊದಲ ಕಾದಂಬರಿ `ಜಟ್ಟಿ ಮತ್ತು ಮಟ್ಟಿ'ಯಾದರೆ ಇತ್ತೀಚಿನ ಜನಪ್ರಿಯ ಕಾದಂಬರಿ `ಆವರಣ'.

1926: ವಾಗೀಶ್ವರಿ ಶಾಸ್ತ್ರಿ ಜನನ.

1923: ಖ್ಯಾತ ಹಿನ್ನೆಲೆ ಗಾಯಕ ಮುಖೇಶ್ಚಂದ್ರ ಮಾಥುರ್ ಜನನ.

1891: ಖ್ಯಾತ ಬಂಗಾಳಿ ಪ್ರಾಚ್ಯವಸ್ತು ಸಂಶೋಧಕ ರಾಜೇಂದ್ರಲಾಲ್ ಮಿತ್ರ (ರಾಜಾ) ನಿಧನ.

1775: ಮೊದಲ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಬೆಂಜಮಿನ್ ಫ್ರಾಂಕ್ಲಿನ್ ನೇಮಕ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, July 25, 2008

ಇಂದಿನ ಇತಿಹಾಸ History Today ಜುಲೈ 25

ಇಂದಿನ ಇತಿಹಾಸ

ಜುಲೈ 25

ಖ್ಯಾತ ಚಿತ್ರನಟಿ ಜಯಮಾಲಾ (ಜಯಂತಿ) ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ `ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ' ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿತು.

2007: ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಈದಿನ ಮಧ್ಯಾಹ್ನ ಅಧಿಕಾರ ಸ್ವೀಕರಿಸುವ ಮೂಲಕ 72 ವರ್ಷದ ಪ್ರತಿಭಾ ಪಾಟೀಲ್ ನೂತನ ಇತಿಹಾಸ ಸೃಷ್ಟಿಸಿದರು. ದೆಹಲಿಯ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ಹನ್ನೆರಡನೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಇಂಗ್ಲಿಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರತಿಭಾ ಅವರು ಎಪಿಜೆ ಅಬ್ದುಲ್ ಕಲಾಂ ಜೊತೆ ಕುರ್ಚಿ ಬದಲಾಯಿಸಿಕೊಂಡರು. ಈ ಸಂದರ್ಭದಲ್ಲಿ 21 ಕುಶಾಲುತೋಪುಗಳನ್ನು ಹಾರಿಸಲಾಯಿತು.

2007: ಭಾರತ- ಅಮೆರಿಕ ಪರಮಾಣು ಒಪ್ಪಂದವನ್ನು ಜಾರಿಗೆ ತರಲು ಅನುವಾಗುವ 123ನೇ ಒಡಂಬಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ರಾಜಕೀಯ ವ್ಯವಹಾರ ಮತ್ತು ಭದ್ರತೆ ಕುರಿತ ಸಂಪುಟ ಸಮಿತಿಗಳ ಜಂಟಿ ಸಭೆಯಲ್ಲಿ ಈ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಯಿತು. ಹಿಂದಿನ ವಾರ ವಾಷಿಂಗ್ಟನ್ನಿನಲ್ಲಿ ನಡೆದ ಉಭಯ ದೇಶಗಳ ಅಧಿಕಾರಿ ಮಟ್ಟದ ಉನ್ನತ ಸಭೆಯಲ್ಲಿ ಈ ಒಡಂಬಡಿಕೆಯ ಕರಡು ಸಿದ್ಧಪಡಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಸಚಿವರಾದ ಎ.ಕೆ. ಆಂಟನಿ, ಪ್ರಣವ್ ಮುಖರ್ಜಿ, ಶಿವರಾಜ ಪಾಟೀಲ್, ಪಿ. ಚಿದಂಬರಂ, ಶರದ್ ಪವಾರ್, ಲಾಲೂ ಪ್ರಸಾದ್ ಮತ್ತು ಟಿ.ಆರ್. ಬಾಲು ಭಾಗವಹಿಸಿದ್ದರು. ಇದರೊಂದಿಗೆ ಭಾರತ ಮತ್ತು ಅಮೆರಿಕ ನಡುವೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆಗಳಿಗೆ ತೆರೆ ಬಿದ್ದಿತು.

2007: ಬದುಕಿನಲ್ಲಿ ಸರಳವಾದದ್ದೆಲ್ಲವನ್ನೂ ಪ್ರೀತಿಸುವ `ಕ್ಷಿಪಣಿ ಮನುಷ್ಯ' ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದ ಎದುರು ಭವ್ಯವಾದ ಬೀಳ್ಕೊಡುಗೆ ನೀಡಲಾಯಿತು. 300 ಕೊಠಡಿಗಳ ಭವ್ಯ ಭವನದಲ್ಲಿ 5 ವರ್ಷ ಕಳೆದ ಕಲಾಂ ಈದಿನ ರಾತ್ರಿ ತಾತ್ಕಾಲಿಕವಾಗಿ ನೀಡಲಾದ 5 ಕೊಠಡಿಗಳ ಸೇನಾ ವಸತಿಗೃಹದಲ್ಲಿ ತಂಗಿದರು. ಅವರ ಕುಟುಂಬದ ನಿಕಟ ಸಂಬಂಧಿಗಳು ಈ ಸಂದರ್ಭದಲ್ಲಿ ಜೊತೆಗಿದ್ದರು.

2007: ಓಂಕಾರ ಆಶ್ರಮದ ಶಿವಪುರಿ ಸ್ವಾಮೀಜಿ (69) ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹರ್ತಿ ಗ್ರಾಮದ ಯಲ್ಲಪ್ಪ ಹಾಗೂ ತಾಯಮ್ಮ ಅವರ ಪುತ್ರರಾದ ಸ್ವಾಮೀಜಿ ಕೈಲಾಸ ಆಶ್ರಮದ ತಿರುಚ್ಚಿ ಶ್ರೀಗಳ ಶಿಷ್ಯರಾಗಿದ್ದರು. ಎಳೆಯ ವಯಸ್ಸಿ ನಿಂದಲೇ ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿವಹಿಸಿದ್ದರು. ಇವರು 1994ರಲ್ಲಿ ಒಂಕಾರ ಆಶ್ರಮ ಸ್ಥಾಪಿಸಿದ್ದರು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಈದಿನ ಮತ್ತೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಿತು. ತಲೆಮರೆಸಿಕೊಂಡ ಪ್ರಮುಖ ಆರೋಪಿ ಟೈಗರ್ ಮೆಮನ್ ನ ಆಪ್ತ ಸ್ನೇಹಿತನಾಗಿದ್ದ ಫಾರೂಕ್ ಪಾಲ್ವೆ ಗಲ್ಲು ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ದಾದರ್ನ ಶಿವಸೇನಾ ಭವನ ಮತ್ತು ನರಿಮನ್ ಪಾಯಿಂಟ್ ಬಳಿಯ ಏರ್ ಇಂಡಿಯಾ ಕಟ್ಟಡದಲ್ಲಿ ಬಾಂಬ್ ಇರಿಸಿದ್ದ. ಫಾರೂಕ್ ಅಡಗಿಸಿಟ್ಟ ಬಾಂಬ್ ಸ್ಫೋಟಗೊಂಡು 24 ಜನರು ಬಲಿಯಾಗಿ, 79 ಮಂದಿ ಗಾಯಗೊಂಡಿದ್ದರು. ಕಳೆದ ವರ್ಷದ ಅಕ್ಟೋಬರ್ 9 ರಂದು ಫಾರೂಕ್ ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿತ್ತು. ಟಾಡಾ ನ್ಯಾಯಾಲಯ ಈತನಿಗೆ 2 ಲಕ್ಷ 65 ಸಾವಿರ ರೂಪಾಯಿ ದಂಡ ತೆರುವಂತೆಯೂ ಆದೇಶಿಸಿತು.

2007: ದೇಶದ 12ನೇ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡ ಮರುಗಳಿಗೆಯಲ್ಲೇ ಸೈಬರ್ ಲೋಕದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನಪ್ರಿಯ ವೆಬ್ ಸೈಟ್ ಮಾಯವಾಯಿತು. ಕಲಾಂ ಅವರು ಜನತೆಯ ರಾಷ್ಟ್ರಪತಿಯೆಂದೇ ಬಿಂಬಿತವಾಗಲು ಈ ವೆಬ್ ಸೈಟ್ ಪ್ರಮುಖ ಪಾತ್ರವಹಿಸಿತ್ತು. ಈದಿನ ಮಧ್ಯಾಹ್ನ 2.30ಕ್ಕೆ ಸಂಸತ್ ಭವನದ ಸೆಂಟ್ರಲ್ ಹಾಲಿನಲ್ಲಿ ಪ್ರತಿಭಾ ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಕಲಾಂ ಅವರು `ಮಾಜಿ'ಯಾದರು, ಜತೆಗೆ ಅವರ ವೆಬ್ ಸೈಟ್ ಕೂಡ! ಮೂರು ವರ್ಷಗಳಲ್ಲಿ ಡಾ.ಕಲಾಂ ಅವರ ವೆಬ್ ಸೈಟ್ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ ಪ್ರತಿ ಸೆಕೆಂಡ್ಗೆ ಮೂರು ಜನರು ಈ ವೆಬ್ ಸೈಟನ್ನು ನೋಡುತ್ತಿದ್ದರು. ಸರಾಸರಿ ದಿನವೊಂದಕ್ಕೆ 2.50 ಲಕ್ಷ ಜನ ಈ ವೆಬ್ ಸೈಟಿಗೆ ಭೇಟಿ ನೀಡಿದ್ದಾರೆ. 2004ರ ಆಗಸ್ಟ್ ತಿಂಗಳಿನಲ್ಲಿ ಈ ವೆಬ್ ಸೈಟನ್ನು ಮರು ವಿನ್ಯಾಸಗೊಳಿಸಿ ಸರ್ಕಾರಿ ಶೈಲಿಗಿಂತ ವಿಭಿನ್ನವಾದ ಆಕರ್ಷಕ ವೆಬ್ ಸೈಟನ್ನಾಗಿ ಪರಿವರ್ತಿಸಲಾಗಿತ್ತು. ಕಲಾಂ ಅವರು ತಾವು ಭಾಗವಹಿಸಿದ ಪ್ರತಿಯೊಂದು ಸಮಾರಂಭದಲ್ಲೂ ಈ ವೆಬ್ಸೈಟ್ ವಿಳಾಸವನ್ನು ಬಹಿರಂಗವಾಗಿ ಸಾರುತ್ತಿದ್ದರು. ದಿನವೊಂದಕ್ಕೆ ಕನಿಷ್ಟ 500 ಇ-ಮೇಲ್ ಗಳು ಕಲಾಂ ಅವರಿಗೆ ಬರುತ್ತಿದ್ದವು. ಬಹುತೇಕ ಮೇಲ್ ಗಳನ್ನು ಸ್ವತಃ ಕಲಾಂ ಅವರೇ ಓದಿ ಅವುಗಳಿಗೆ ಉತ್ತರಿಸುತ್ತಿದ್ದರು. ಕೆಲವರನ್ನು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವಂತೆ ಆಹ್ವಾನಿಸುತ್ತಿದ್ದರು. ಹೀಗಾಗಿಯೇ ರಾಷ್ಟ್ರಪತಿ ಭವನವನ್ನು ಸಾಮಾನ್ಯ ಜನತೆಗೆ ತೆರೆದ ಕೀರ್ತಿ ಅವರಿಗೆ ಲಭಿಸಿತು. ಈ ಸೈಟಿನಲ್ಲಿ ಡಾ. ಕಲಾಂ ಅವರ ಎಲ್ಲ ಭಾಷಣಗಳೂ ಸದಾ ಜನತೆಗೆ ಲಭ್ಯವಾಗುತ್ತಿದ್ದವು.

2007: ವಾಯವ್ಯ ಪಾಕಿಸ್ತಾನದ ಬನ್ನು ನಗರದ ಮೇಲೆ ಅತಿಕ್ರಮಣಕಾರರು ನಸುಕಿನ ಜಾವ ನಡೆಸಿದ ರಾಕೆಟ್ ದಾಳಿಯಲ್ಲಿ 10 ಜನ ಸತ್ತು, 35ಕ್ಕೂ ಹೆಚ್ಚು ಜನರು ಗಾಯಗೊಂಡರು. ನಾಲ್ಕು ರಾಕೆಟುಗಳು ಇಲ್ಲಿನ ಎರಡು ಮನೆ, ಮಸೀದಿ ಮತ್ತು ಅಂಗಡಿಯೊಂದರ ಮೇಲೆ ಅಪ್ಪಳಿಸಿದವು.

2007: ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತಕ್ಕೆ ಕನಿಷ್ಠ 60 ಮಂದಿ ಬಲಿಯಾದರು.

2007: ಆಸ್ಟ್ರೇಲಿಯಾದ ನಾರ್ ಫೋಕ್ ದ್ವೀಪದಲ್ಲಿ 2002ರಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಕಗ್ಗೊಲೆ ಮಾಡಿದ ಅಪರಾಧಕ್ಕಾಗಿ ನ್ಯೂಜಿಲೆಂಡಿನ ಅಡುಗೆ ಕೆಲಸಗಾರನಿಗೆ ಸ್ಥಳೀಯ ನ್ಯಾಯಾಲಯ ಕನಿಷ್ಠ 18 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಒಂದು ಕಾಲದಲ್ಲಿ ದಕ್ಷಿಣ ಪೆಸಿಫಿಕ್ನ ಬ್ರಿಟಿಷ್ ಕಾಲೋನಿಯಾಗಿದ್ದ ಈ ಪುಟ್ಟ ದ್ವೀಪದಲ್ಲಿ ಕಳೆದ 150 ವರ್ಷಗಳ ಅವಧಿಯಲ್ಲಿ ನಡೆದ ಮೊದಲ ಹತ್ಯೆ ಇದು. ಆರೋಪಿ ಗ್ಲೆನ್ ಮೆಕ್ ನೆಲ್ (29) ಎಂಬಾತನು ಜನೆಲ್ಲಿ ಪ್ಯಾಟನ್ (29) ಎಂಬ ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಿ ಇರಿದು ಕೊಂದಿದ್ದ. ಆಗ ಪ್ಯಾಟನ್ ಮೂಳೆ ಮುರಿತ ಮತ್ತು ಹಲವು ಇರಿತ ಸೇರಿದಂತೆ 64 ಕಡೆ ತೀವ್ರತರ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಗ್ಲೆನ್ ಗೆ ಗರಿಷ್ಠ 24 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ನ್ಯಾಯಾಲಯ ಆದೇಶಿಸಿತು.

2007: ಖ್ಯಾತ ಚಿತ್ರನಟಿ ಜಯಮಾಲಾ (ಜಯಂತಿ) ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ `ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ' ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿತು. ಇವರಿಗೆ `ಕೆಂಪೇಗೌಡ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ಕೇಂದ್ರ ನಿರ್ದೇಶಕ ಎಂ.ಜಿ.ಕೃಷ್ಣನ್ ಮಾರ್ಗದರ್ಶಕರಾಗಿದ್ದರು. ಮಂಗಳೂರಿನಲ್ಲಿ ಜನಿಸಿದ ಜಯಮಾಲ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಖಜಾಂಚಿಯಾದ ಇವರು ತುಳು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ಅಭಿನಯಿಸಿರುವವರು. ಹದಿಮೂರು ವರ್ಷದವರಿದ್ದಾಗ `ಕಾಸ್ ದಾಯೆ ಕಂಡನೆ' ಎಂಬ ತುಳು ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿ, ಈವರೆಗೆ ದಕ್ಷಿಣ ಭಾರತ ಐದು ಭಾಷೆಗಳಲ್ಲಿ ಒಟ್ಟು 75 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಐದು ಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಕೂಡಾ ಇವರದು.

2006: ಕೊಚ್ಚಿಯ ರಾ (ಕೇಂದ್ರ ಸರ್ಕಾರದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ) ಮುಖ್ಯಸ್ಥ ಎಚ್. ತಾರಕನ್ ಅವರು ವಿ.ಆರ್. ಕೃಷ್ಣ ಅಯ್ಯರ್ ಪ್ರಶಸ್ತಿಗೆ ಆಯ್ಕೆಯಾದರು.

2006: ಕೊಂಕಣಿ ಕೂಟಮ್ ಬಹರೇನ್ ನೀಡುವ `ಕೊಂಕಣಿ ಕೂಟಮ್ 2006' ಪ್ರಶಸ್ತಿಗೆ ಖ್ಯಾತ ಕೊಂಕಣಿ ಭಾಷಾ ಲೇಖಕ, ಕವಿ, ಸಾಹಿತಿ ಮೆಲ್ವಿನ್ ರಾಡ್ರಿಗಸ್ ಕುಲಶೇಕರ ಅವರು ಆಯ್ಕೆಯಾದರು.

2006: ಕರಾಟಕದ 865 ಗ್ರಾಮಗಳು ಹಾಗೂ ಬೆಳಗಾವಿ ಸೇರಿದಂತೆ ಆರು ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕು ಎಂದು ಕೋರಿ ಅಲ್ಲಿನ ಉನ್ನತ ನಿಯೋಗವೊಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿತು.

1970: ಕೇರಳದ ಮಾಜಿ ಮುಖ್ಯಮಂತ್ರಿ ಪಿಳ್ಳೈ ಎ. ಥಾನು ನಿಧನ.

1950: ಖ್ಯಾತ ಚಿಂತಕಿ, ಸ್ತ್ರೀವಾದಿ ಪ್ರಭಾವತಿ ಅವರು ವೆಂಕಟಸುಬ್ಬಯ್ಯ- ರತ್ನಮ್ಮ ದಂಪತಿಯ ಮಗಳಾಗಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಜನಿಸಿದರು.
1938: ಖ್ಯಾತ ಹಿಂದಿ ಕವಿ ಕಾಳಿಚರಣ್ ಜನನ.

1929: ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ ಜನನ.

Thursday, July 24, 2008

Come, let us fight Chikoongunya With help of Cows

Come, let us fight

Chikoongunya


With help of Cows.

Chickoongunya has taken to toll of about 72 persons in Dakshina Kannada and Kasaragodu districts including famous small story writer M. Vyasa. More than 4 lakh people are suffering from severe fever, joint pain and swellings apart from problems of omitting. Now Ramachandrapura Matha is conducting camps to Chikoongunya victims with making use of the Ayurveda and Cow Urine therapy. Matha requests people come forward to donate to help poor people.

By Nethrakere Udaya Shankara

Yes, it took one more toll. M. Vyasa, famous small story writer in Kannada Literature M.Vyasa died on 23 July 2008 at Kasaragodu. Along with urinal problems, it is Chikoongunya which took him away from us.

Dreaded Chikoongunya has affected not one or two persons like this; it widely affected entire Dakshina Kannada District and Kasaragodu District. About 4 lakh people in these areas are suffering from this disease; Recently Rural Devolopment Minister of Karnatka Shobha Karandlaje also admitted it.

You can see one or two chikoongunya victims in every house in these two districts. According to recent press reports about 72 people died because of this Chikoongunya.

Agriculture suffered most and no workers are getting for cultivation and horticultural works. Almost all doctors in the area are engaged in treating patients day and night.

Earlier it was believed that if rain comes, disease will disappear as mosquitoes will washed away in rain. But recent experience says it is not so. Even after heavy rains, disease is neither reducing nor coming under control. Each day fresh cases of Chikoongunya are being reported in both districts.

Out of Dakshina Kannada and Kasaragodu districts, most affected areas are Sullia, Puttur, Vittla and Kasaragodu. Total living is paralyzed in these areas. Lack of control measures, short of medicines is aggravating the condition.Many medicines are tried. But human suffering is continued. Ayurveda, Homeopathy, Allopathy are giving relief to some extent.

In Ayurveda, Indigenous Cows urine, ghee based drugs are giving very good result. That is why Shree Shree Raghaveshwara Bharathi Mahaswamiji Shree Ramachandrapura Matha directed Amrithdhara Goushala Bajakudlu Perla Kasaragodu to take the project of manufacturing and distribution of Panchagavya drugs under the guidance of eminent Ayurveda doctors like Dr Giridhara Kaje Bangalore, Dr Jayagovinda Ukkinadka for Chikoongunya.

Some drugs are - 1] Goamritha-antipyretic, 2] Bhomika-antiviral, 3] Gunyanashaka-anti inflammatory, 4] Gosaravati-antiinfective, immunostimulant, 5] Shamana taila anti-inflammatory ointmentBy involving expert BAMS doctors, treatment camps are scheduled in different areas of effected locality.

In Perla, Kasaragodu on 22nd June first camp was conducted. The Panchagavya medicines are distributed at free of cost. Nearly 300 patients attended.

Other camps conducted -- Sarve Puttur, Puttur, Guruvayanakere, Shiradi, and Manya.Next camps scheduled - Uppinangady, Alankar, Bellare, Chokkady, Hebri, Udupi, Moodabidri, Kasaragodu, and Kumble.
In a camp of 500 patients nearly Rs 15,000.00 worth medicines are required for distribution. Some donors came forward to sponsor these medicines. But huge amount of money is required to make these drugs in a large quantity so that these camps could be extended to more areas.

In this backlash Dr. Y.V. Krishnamoorthy of Kamadugha project, Sri Ramachandrapura Matha requests all people to donate to this noble cause. These donations shall in the name of Kamadugha which will get tax exemption under 80G rule.

Kindly Come forward, Donate & Help to helpless people. Dr Y V Krishnamoorthy could be contacted in the Phone No: 09449595206.

ಇಂದಿನ ಇತಿಹಾಸ History Today ಜುಲೈ 24

ಇಂದಿನ ಇತಿಹಾಸ

ಜುಲೈ 24

ಐದು ವರ್ಷ ಭಾರತದ ಯಶಸ್ವಿ ರಾಷ್ಟ್ರಪತಿಯಾಗಿ ಹುದ್ದೆಗೆ ಶೋಭೆ ತಂದುಕೊಟ್ಟ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಧಿಕಾರಾವಧಿಯ ಕೊನೆಯ ದಿನವಿದು. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದರೂ ಕಲಾಂ ಅವರು ಒಬ್ಬ ಮಾನವಪ್ರೇಮಿಯಾಗಿ ಜನಮಾನಸದಲ್ಲಿ ಸದಾಕಾಲಕ್ಕೂ ಉಳಿಯುವ `ಜನರ ರಾಷ್ಟ್ರಪತಿ.'

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಈದಿನ ಮತ್ತೆ ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ ಇನ್ನೊಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತು. 1993ರ ಮಾರ್ಚ್ 12ರಂದು ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ ಸಮಯದಲ್ಲಿ ನಗರದ ಮಾಹಿಮ್ ಪ್ರದೇಶದಲ್ಲಿ ಮೀನುಗಾರರ ಕಾಲೋನಿ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿ ಆರು ಜನ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪಿ.ಡಿ. ಕೋಡೆ ಅವರು ಆರೋಪಿಗಳಾದ ಜಾಕೀರ್ ಹುಸೇನ್ ಶೇಖ್, ಫಿರೋಜ್ ಮಲ್ಲಿಕ್ ಮತ್ತು ಅಬ್ದುಲ್ ಅಕ್ತರ್ ಖಾನ್ ಗೆ ಗಲ್ಲು ಶಿಕ್ಷೆ ಮತ್ತು ಇನ್ನೊಬ್ಬ ಆರೋಪಿ ಮೋಹಿನ್ ಖುರೇಷಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಈ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಮೊದಲೇ ಆರೋಪಿ ಬಷೀರ್ ಕಹಿರುಲ್ಲಾಗೆ ಸಹ ಜೀವಾವಧಿ ಶಿಕ್ಷೆ ವಿಧಿಸಿತ್ತು. 257 ಜನರನ್ನು ಬಲಿ ತೆಗೆದುಕೊಂಡ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇದುವರೆಗೆ 100 ಆರೋಪಿಗಳಲ್ಲಿ 91 ಆರೋಪಿಗಳಿಗೆ ಶಿಕ್ಷೆ ವಿಧಿಸಿದಂತಾಯಿತು.

2007: ಐದು ವರ್ಷ ಭಾರತದ ಯಶಸ್ವಿ ರಾಷ್ಟ್ರಪತಿಯಾಗಿ ಹುದ್ದೆಗೆ ಶೋಭೆ ತಂದುಕೊಟ್ಟ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಧಿಕಾರಾವಧಿಯ ಕೊನೆಯ ದಿನವಿದು. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದರೂ ಕಲಾಂ ಅವರು ಒಬ್ಬ ಮಾನವಪ್ರೇಮಿಯಾಗಿ ಜನಮಾನಸದಲ್ಲಿ ಸದಾಕಾಲಕ್ಕೂ ಉಳಿಯುವ `ಜನರ ರಾಷ್ಟ್ರಪತಿ.' ಭಾರತ ರತ್ನ (1997), ಪದ್ಮಭೂಷಣ (1981), ಪದ್ಮ ವಿಭೂಷಣ (1991), ರಾಷ್ಟ್ರೀಯ ಭಾವೈಕ್ಯಕ್ಕಾಗಿ ಇಂದಿರಾಗಾಂಧಿ ಪ್ರಶಸ್ತಿ (1998) ಈ ಪ್ರಶಸ್ತಿಗಳು ಕಲಾಂ ಅವರ ಕಿರೀಟ ಸೇರುವ ಮೂಲಕ ತಮ್ಮ ಘನತೆ ಹೆಚ್ಚಿಸಿಕೊಂಡವು. `ಕನಸು ಕಾಣಿ, ಕಾಣುತ್ತಿರಿ, ಕಾಣುತ್ತಲೇ ಇರಿ. ಉದಾತ್ತವಾದುದನ್ನು ಯೋಚಿಸಿ' ಎನ್ನುತ್ತಾ ಅಪ್ಪಟ ಕನಸುಗಾರನಾಗಿ ಮಕ್ಕಳಲ್ಲಿ ಉದಾತ್ತ ಚಿಂತನೆಯ ಬೆಳಕು ಮೂಡಿಸುತ್ತಿದ್ದ ಕಲಾಂ ದೇಶದ ಪ್ರಗತಿಗಾಗಿ ತಂತ್ರಜ್ಞಾನದ ಬಳಕೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಮಕ್ಕಳೊಂದಿಗೆ ಮಗುವಾಗುತ್ತಿದ್ದ ಕಲಾಂ ವಿಶ್ವದ ಅತ್ಯಂತ ಎತ್ತರದ ನೀರ್ಗಲ್ಲ ಪ್ರದೇಶ ಸಿಯಾಚಿನ್ ನಲ್ಲಿ ಕಾಲಿಟ್ಟ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಜಲಾಂತರ್ಗಾಮಿ ನೌಕೆ ಹಾಗೂ ಸೂಪರ್ ಸಾನಿಕ್ `ಸುಖೋಯ್ 30' ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ ಪ್ರಥಮ ರಾಷ್ಟ್ರಪತಿ ಎಂಬ ಕೀರ್ತಿ ಕೂಡಾ ಕಲಾಂ ಅವರದೇ. ದೇಶದ ಮೊಟ್ಟಮೊದಲ ದೇಶೀಯ ತಂತ್ರಜ್ಞಾನದ ಉಪಗ್ರಹ ಉಡಾವಣಾ ವಾಹನ (ಎಸ್ಎಲ್ವಿ -3) ತಯಾರಿಕೆಯಲ್ಲಿ ಯೋಜನಾ ನಿರ್ದೇಶಕರಾಗಿ ಕಲಾಂ ಕೊಡುಗೆ ಅನನ್ಯ. 1980ರಲ್ಲಿ `ರೋಹಿಣಿ' ಉಪಗ್ರಹವನ್ನು ಇದೇ ಉಡಾವಣಾ ವಾಹನದ ಮೂಲಕ ಕಕ್ಷೆಗೆ ಹಾರಿಬಿಟ್ಟದ್ದು ಈಗ ಇತಿಹಾಸ. ಇಸ್ರೋದ ಉಪಗ್ರಹ ಉಡಾವಣಾ ಯೋಜನೆಯಲ್ಲಿ ಕಲಾಂ ಅವರದ್ದು ಸಿಂಹಪಾಲು. ಕಲಾಂ 1992ರಿಂದ 1999ರವರೆಗೆ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಸಲಹೆಗಾರರಾಗಿ ಹಾಗೂ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಓ) ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ದೇಶ ಪ್ರೋಖ್ರಾನಿನಲ್ಲಿ ಪರಮಾಣು ಬಾಂಬನ್ನು ಪ್ರಯೋಗಾರ್ಥ ಪ್ರಯೋಗಿಸಿದ್ದು ಎಂಬುದು ಗಮನಾರ್ಹ. ಕಲಾಂ ಅವರು ಮದ್ರಾಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಪದವಿ ಪಡೆದವರು. 1931 ಅಕ್ಟೋಬರ್ 15 ಕಲಾಂ ಜನ್ಮದಿನ. ರಾಮೇಶ್ವರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಸಾಮಾನ್ಯ ಅಬ್ದುಲ್ ಕಲಾಂ ಅವರು ಬೆಳೆದುಬಂದ ರೀತಿ ಮಾತ್ರ ಬೆರಗುಹುಟ್ಟಿಸುವಂತಹದು. ಅವರ ಬದುಕು ಎಲ್ಲರಿಗೂ ಆದರ್ಶಪ್ರಾಯ.

2007: ಆಫ್ಘಾನಿಸ್ಥಾನ ಗಡಿಯಲ್ಲಿರುವ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ತಾಲಿಬಾನ್ ಪ್ರಮುಖ ನಾಯಕ ಅಬ್ದುಲ್ಲಾ ಮೆಹ್ಸುದ್ ಎಂಬಾತ ಸೇನಾ ದಾಳಿಯ ಸಂದರ್ಭದಲ್ಲಿ ಬಂಧನವನ್ನು ತಪ್ಪಿಸಿಕೊಳ್ಳಲು ಸ್ವತಃ ಕೈ ಬಾಂಬ್ ಸ್ಫೋಟಿಸಿ ಆತ್ಮಹತ್ಯೆ ಮಾಡಿಕೊಂಡ. ತಾಲಿಬಾನ್ ಪರವಾಗಿ ಹೋರಾಡುತ್ತಿದ್ದ 32 ವರ್ಷದ ಅಬ್ದುಲ್ಲಾ 2003ರಲ್ಲಿ ಗ್ವಾಂಟೆನಾಮೋ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದ. ಈತನನ್ನು 2004 ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ದಕ್ಷಿಣ ವಜೀರಿಸ್ಥಾನದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಈತ, ಚೀನಾದ ಇಬ್ಬರು ಎಂಜಿನಿಯರುಗಳ ಅಪಹರಣಕ್ಕೆ ಕಾರಣನಾಗಿದ್ದ. ಇದಲ್ಲದೆ, ಇತ್ತೀಚೆಗೆ ಪಾಕಿಸ್ಥಾನದ ಪೇಶಾವರ ಮತ್ತು ಹಬ್ ಪಟ್ಟಣಗಳಲ್ಲಿ ಚೀನಿಯರ ಮೇಲೆ ನಡೆದ ದಾಳಿಯಲ್ಲಿ ಈತನ ಕೈವಾಡವಿತ್ತು. ಹೀಗಾಗಿ ಈತನನ್ನು ಹಿಡಿಯಲು ಪಾಕಿಸ್ಥಾನ ಸೇನೆ ಬಲೆ ಬೀಸಿತ್ತು. ಅಬ್ದುಲ್ಲಾ ತಾಲಿಬಾನ್ ಪರ ಅನುಕಂಪ ಹೊಂದಿದ ಜಮಾತ್ ಉಲೆಮಾ ಇಸ್ಲಾಮಿನ ಉನ್ನತ ನಾಯಕ ಶೇಖ್ ಅಯೂಬ್ ಮುತ್ತಖೇಲ್ನನ್ನು ಭೇಟಿಯಾಗಲು ಬಂದಾಗ ಸೇನೆ ಈತನ ಸೆರೆಗಾಗಿ ಬಲೆ ಬೀಸಿತು.

2007: ಭಿಕ್ಷುಕನನ್ನು ಕೊಲೆ ಮಾಡಿ ಆತನ ಅಂಗಾಂಗಗಳನ್ನು ಆಸ್ಪತ್ರೆಯೊಂದಕ್ಕೆ ಮಾರಾಟ ಮಾಡಿದ ಆರೋಪ ಸಾಬೀತಾದ ಕಾರಣ ಚೀನಾದ ಹೈಬೆ ಪ್ರಾಂತ್ಯದ ಉತ್ತರ ಭಾಗದ ಗ್ರಾಮದ ನಿವಾಸಿ ವಾಂಗ್ ಚಾವೊಯಂಗ್ ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಈತ ಕಳೆದ ವರ್ಷ ತಾಂಗ್ ಗೆಫಾಯ್ ಎಂಬ ಭಿಕ್ಷುಕನನ್ನು ಅಪಹರಿಸಿ ಕೊಲೆ ಮಾಡಿದ್ದ ಎಂದು `ಬೀಜಿಂಗ್ ಟೈಮ್ಸ್' ವರದಿ ಮಾಡಿತು. 2006ರ ನವೆಂಬರ್ ತಿಂಗಳಲ್ಲಿ ಚಾವೊಯಂಗ್ ನನ್ನು ಬಂಧಿಸಲಾಗಿತ್ತು. ಚಾವೊ ವೈದ್ಯರಿಗೆ ಸುಳ್ಳು ಹೇಳಿ ಭಿಕ್ಷುಕನ ಅಂಗಾಂಗ ಮಾರಾಟ ಮಾಡಿ 2,000 ಡಾಲರ್ ಸಂಪಾದಿಸಿದ್ದ.

2007: ಚೀನಾದ ವೈದ್ಯರು ರೋಗಿಯೊಬ್ಬರ ತಲೆಯಲ್ಲಿ ಬೆಳೆದಿದ್ದ 15 ಕೆಜಿ ತೂಕದ ದುರ್ಮಾಂಸದ ಗಡ್ಡೆಯನ್ನು ಹೊರ ತೆಗೆದು ನೂತನ ದಾಖಲೆ ನಿರ್ಮಿಸಿದರು. 31ರ ವಯಸಿನ ಹುಂಗ್ ಚುಂಚಿ ತಲೆಯ ಎಡ ಭಾಗದಲ್ಲಿ ದುರ್ಮಾಂಸ ಬೆಳದ ಪರಿಣಾಮ ಆತನ ಎಡಗಣ್ಣು ಸಂಪೂರ್ಣ ಕಾಣದಂತಾಗಿತ್ತು. ಕೆಳ ದವಡೆಯಿಂದ ಕಿವಿಯ ಭಾಗ ಊದಿಕೊಂಡು ಭುಜದ ಕಡೆ ವಾಲಿಕೊಂಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಚೀನಾ ವೈದ್ಯರು ಸುಮಾರು ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ತಲೆ ಹಾಗೂ ಮುಖದ ಭಾಗದಲ್ಲಿದ್ದ ಗಡ್ಡೆಯನ್ನು ಹೊರ ತೆಗೆದರು. ಸುಮಾರು 30 ವರ್ಷಗಳಿಂದ ಈತ ಈ ಬಾಧೆ ಅನುಭವಿಸುತ್ತಿದ್ದ.

2007: ಬ್ರಿಟಿಷ್ ನ್ಯಾಯಾಲಯವೊಂದು ಹಿಂದೂ ಸಮುದಾಯದ ಪ್ರತಿಭಟನೆಯ ನಡುವೆಯೂ ಕ್ಷಯರೋಗ ತಗುಲಿದ ವೇಲ್ಸಿನ ಸ್ಕಂದ ವೇಲ್ ದೇವಾಲಯದ ಪವಿತ್ರ `ಶಂಬೊ' ಹೋರಿಯನ್ನು ವಧಿಸಲು ಆದೇಶಿ ನೀಡಿತು. `ಹೋರಿಯನ್ನು ಸಂಹರಿಸದೆ ಬೇರೆ ಮಾರ್ಗವಿಲ್ಲ' ಎಂದು ನ್ಯಾಯಾಧೀಶ ಮಾಲ್ಕಂ ಪಿಲ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಅಭಿಪ್ರಾಯ ಪಟ್ಟಿತು. ಆದರೆ ನ್ಯಾಯಾಲಯದ ತೀರ್ಪಿನಿಂದ ಪಶುಗಳನ್ನು ಪೂಜಿಸುವ ಹಿಂದೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಸ್ಕಂದ ವೇಲ್ ದೇವಾಲಯದ ಸ್ವಾಮಿ ಸೂರ್ಯಾನಂದ ಪ್ರತಿಕ್ರಿಯಿಸಿದರು.

2006: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಡೆಹ್ರಾಡೂನಿನ ಆಶ್ರಮದಲ್ಲಿ `ಸ್ವಾಮೀಜಿ' ವೇಷದಲ್ಲಿ ಜೀವಿಸಿ, 1977ರ ಏಪ್ರಿಲ್ 10ರಂದು ನಿಧನರಾದರು ಎಂದು ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿತು. ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಸಂಭಾಷಣೆ, ಛಾಯಾಚಿತ್ರಗಳು ಮತ್ತು ಪತ್ರಗಳ ದಾಖಲೆಯನ್ನು 4 ಮಂದಿ ಸ್ವತಂತ್ರ ಸಂಶೋಧಕರ ಈ ತಂಡ ಡೆಹ್ರಾಡೂನಿನಲ್ಲಿ ಬಿಡುಗಡೆ ಮಾಡಿತು. ಮಾಜಿ ಸಿಬಿಐ ಇನ್ ಸ್ಪೆಕ್ಟರ್ ಓಂ ಪ್ರಕಾಶ್ ಶರ್ಮಾ, ಡಿಎವಿ ಕಾಲೇಜು ಪ್ರೊಫೆಸರ್ ದೇವೇಂದ್ರ ಭಾಸಿನ್ ಮತ್ತು ಇತರ ಇಬ್ಬರು ಈ ತಂಡದ ಸದಸ್ಯರು. ಪಶ್ಚಿಮ ಬಂಗಾಳದ ಜಲಪಾಯಿಗುರಿಯಿಂದ 1973ರಲ್ಲಿ ಡೆಹ್ರಾಡೂನಿಗೆ ಬಂದಿದ್ದ ಈ ಸ್ವಾಮೀಜಿಯ ಚಿತ್ರಗಳಲ್ಲಿನೇತಾಜಿ ಹೋಲಿಕೆ ಇದೆ. ಇಂತಹ ಸ್ವಾಮೀಜಿ ಒಬ್ಬರ ಬಗ್ಗೆ ನೇತಾಜಿ ಕಣ್ಮರೆ ಬಗ್ಗೆ ತನಿಖೆ ನಡೆಸಿರುವ ಮುಖರ್ಜಿ ಆಯೋಗವೂ ಪ್ರಸ್ತಾಪಿಸಿದೆ. ಡೆಹ್ರಾಡೂನಿಗೆ ಬರುವ ಮುನ್ನ ಈ ಸ್ವಾಮೀಜಿ ಜಲಪಾಯಿಗುರಿಯ ಶೌಲ್ಮರಿ ಆಶ್ರಮದಲ್ಲಿ ಇದ್ದರು ಎಂದು ಮುಖರ್ಜಿ ಆಯೋಗ ಹೇಳಿತ್ತು. ಈ ಸ್ವಾಮೀಜಿಯ ಅಂತ್ಯಕ್ರಿಯೆ 1977ರ ಏಪ್ರಿಲ್ 13ರಂದು ಹೃಷಿಕೇಶದಲ್ಲಿ ನಡೆದಿತ್ತು. ಸ್ವಾಮೀಜಿಯ ಆಪ್ತ ಕಾರ್ಯದರ್ಶಿಯಾಗಿದ್ದ ರಮಣಿ ರಂಜನ್ ದಾಸ್ ಅವರು ಸ್ವಾಮೀಜಿ ಭಸ್ಮದ ವಿಸರ್ಜನೆ ಕಾಲದಲ್ಲಿ `ನೇತಾಜಿ ನೀವು ನನಗೆ ವಹಿಸಿದ ಕಾರ್ಯ ಪೂರ್ಣಗೊಂಡಿತು' ಎಂದು ಉದ್ಘರಿಸಿದ್ದರು ಎಂದು ಸ್ವಾಮೀಜಿಯ ಅಂತ್ಯಕ್ರಿಯೆ ಕಾಲದಲ್ಲಿ ಹಾಜರಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಇಂದರ್ ಪಾಲ್ ಸಿಂಗ್ ನೆನಪು ಮಾಡಿಕೊಂಡದ್ದನ್ನೂ ತಂಡ ಉಲ್ಲೇಖಿಸಿದೆ. ಈಗ ಲಭಿಸಿರುವ ಸಾಕ್ಷ್ಯಾಧಾರಗಳ ಬಗ್ಗೆ ಸರ್ಕಾರ ಸಿಬಿಐ ತನಿಖೆ ನಡೆಸಬೇಕು ಎಂದು ಸಂಶೋಧಕರ ತಂಡ ಆಗ್ರಹಿಸಿತು.

2006: ಪೋರ್ಟೊರಿಕೊದ 18ರ ಹರೆಯದ ಜಲೈಕಾ ರಿವೆರಾ ಮೆಂಡೋಜಾ 2006ನೇ ಸಾಲಿನ ಭುವನ ಸುಂದರಿಯಾಗಿ ಆಯ್ಕೆಯಾದರು. ಜಪಾನಿನ ಕುರಾರಾ ಚಿಬಾನಾ ಎರಡನೇ ಸ್ಥಾನ ಗಳಿಸಿದರು.

2006: ಕರ್ನಾಟಕ ವಿಧಾನ ಮಂಡಲವು ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿ ಅಂಕಿತಕ್ಕಾಗಿ ಕಳುಹಿಸಿದ್ದ `ಲಾಭದಾಯಕ ಹುದ್ದೆ'ಗೆ ಸಂಬಂಧಿಸಿದ ಮಸೂದೆಯನ್ನು ರಾಜ್ಯಪಾಲರು ಈ ದಿನ ವಾಪಸ್ ಕಳುಹಿಸಿದರು.

1997: ಮಾಜಿ ಹಂಗಾಮಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಮತ್ತು ಮರಣೋತ್ತರವಾಗಿ ಸ್ವಾತಂತ್ರ್ಯ ಹೋರಾಟಗಾರ್ತಿ ಅರುಣಾ ಅಸಫ್ ಅಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪ್ರಶಸ್ತಿಯನ್ನು ನೀಡಲಾಯಿತು.

1993: ಲೋಕಸಭೆಯ ವಿರೋಧ ಪಕ್ಷ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಆಯ್ಕೆಯಾದರು.

1969: ಗಗನನೌಕೆ ಅಪೋಲೊ-11 ಭೂಮಿಗೆ ವಾಪಸಾಯಿತು.

1932: ರೋಗಿಗಳ ಶುಶ್ರೂಷೆ ಮತ್ತು ಮಾನವೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿತು.

1874: ರಂಗಭೂಮಿ ನಟ, ಪತ್ರಿಕೋದ್ಯಮಿ, ಕರ್ನಾಟಕ ಏಕೀಕರಣಕ್ಕಾಗಿ ದುಡಿದವರಲ್ಲಿಪ್ರಮುಖರಾಗಿದ್ದ ಲೇಖಕ ಮುದವೀಡು ಕೃಷ್ಣರಾಯ (24-7-1874ರಿಂದ 7-9-1947) ಅವರು ಹನುಮಂತರಾವ್- ಗಂಗಾಬಾಯಿ ದಂಪತಿಯ ಮಗನಾಗಿ ಬಾಗಲಕೋಟೆಯಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತ, ಸಾಹಿತಿ, ನಾಟಕಕಾರ ರಂಗಭೂಮಿ ನಿರ್ದೇಶಕರಾಗಿ ನಾಡಿಗೆ ಅಪಾರ ಸೇವೆ ಸಲ್ಲಿಸಿದ ಮುದವೀಡು ಅವರನ್ನು 1939ರಲ್ಲಿ ಬೆಳಗಾವಿಯಲ್ಲಿ ನಡೆದ 24ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಜನತೆ ಗೌರವಿಸಿತು. ಆಂಧ್ರಪ್ರದೇಶಕ್ಕೆ ಸೇರಿದ ಮುದವೀಡು ಗ್ರಾಮದಿಂದ ಇವರ ಹಿರಿಯರು ಬಂದ್ದದರಿಂದ ಈ ಕುಟುಂಬಕ್ಕೆ ಮುದವೀಡು ಹೆಸರು ಅಂಟಿಕೊಂಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, July 23, 2008

ಇಂದಿನ ಇತಿಹಾಸ History Today ಜುಲೈ 23

ಇಂದಿನ ಇತಿಹಾಸ

ಜುಲೈ 23

ಹದಿಹರೆಯದಲ್ಲೇ ಬ್ರಿಟಿಷರಿಗೆ ಸೆಡ್ಡು ಹೊಡೆದ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದ್ ಮಧ್ಯಪ್ರದೇಶದ ಝಾಬ್ರಾದಲ್ಲಿ ಈದಿನ ಜನಿಸಿದರು. ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಪ್ರಾಣತೆತ್ತ ಆಜಾದ್ ಸ್ವಾತಂತ್ರ್ಯ ಕಲಿಗಳಿಗೆ ಆದರ್ಶಪ್ರಾಯರಾದರು.

2007: ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 10 ರಂದು ನಡೆಯುವ ಚುನಾವಣೆಗಾಗಿ ಯುಪಿಎ ಹಾಗೂ ಎಡಪಕ್ಷ ಬೆಂಬಲಿತ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಮೊಹ್ಮದ್ ಹಮೀದ್ ಅನ್ಸಾರಿ ಹಾಗೂ ಎನ್ ಡಿಎ ಅಭ್ಯರ್ಥಿ ನಜ್ಮಾ ಹೆಫ್ತುಲ್ಲಾ ಅವರು ನಾಮಪತ್ರ ಸಲ್ಲಿಸಿದರು. ಉಭಯ ಸ್ಪರ್ಧಿಗಳೂ ತಮ್ಮ ತಮ್ಮ ಪಕ್ಷಗಳ ಮುಖಂಡರ ಜೊತೆಗೆ ಆಗಮಿಸಿ ಚುನಾವಣಾಧಿಕಾರಿ ಯೋಗೇಂದ್ರ ನಾರಾಯಣ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

2007: ಆಫ್ಘಾನಿಸ್ಥಾನದ ಕೊನೆಯ ದೊರೆ ಮಹಮ್ಮದ್ ಜಾಹಿರ್ ಷಾ (92) ಅವರು ಈದಿನ ನಿಧನರಾದರು. ಆಫ್ಘಾನಿಸ್ಥಾನದಲ್ಲಿ 1973ರಲ್ಲಿ ಆಡಳಿತ ನಡೆಸುತ್ತಿದ್ದ ದೊರೆ ಷಾ ವಿರುದ್ಧ ಅವರ ಸಂಬಂಧಿ ಮೊಹಮದ್ ದಾವೂದ್ ದಂಗೆ ಎದ್ದರು. ದೊರೆ ಆಗ ದೇಶದಲ್ಲಿ ಇರಲಿಲ್ಲ. ಇಟಲಿಯಲ್ಲಿ ರಜಾ ದಿನ ಕಳೆಯುತ್ತಿದ್ದರು. ದಂಗೆಯ ವಿಷಯ ಕೇಳಿ ಅಲ್ಲಿಂದಲೇ ಅವರು ಅಧಿಕಾರ ತ್ಯಜಿಸಿದರು. ಮತ್ತೆ ಅವರು ದೇಶಕ್ಕೆ ವಾಪಸಾದದ್ದು ತಾಲಿಬಾನ್ ಆಡಳಿತ ಅಂತ್ಯಗೊಂಡ (2001) ಹಲವು ತಿಂಗಳುಗಳ ನಂತರ. ಸುಮಾರು 29 ವರ್ಷಗಳ ನಂತರ ದೇಶಕ್ಕೆ ವಾಪಸಾದ ಅವರನ್ನು ಆಫ್ಘನ್ನಿನ ಹೊಸ ಸರ್ಕಾರ `ರಾಷ್ಟ್ರಪಿತ' ಎಂಬ ಬಿರುದು ನೀಡಿ ಗೌರವಿಸಿತು. ಅಷ್ಟೇ ಅಲ್ಲ, ದೊರೆ ಆಳಿದ 40 ವರ್ಷಗಳ ಕಾಲ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿತ್ತು ಎಂದು ಬಣ್ಣಿಸಿತು. ದೊರೆ ದೇಶಕ್ಕೆ ವಾಪಸಾದ ಕೆಲ ದಿನಗಳ ನಂತರ 2002ರಲ್ಲಿ ಅವರ ಪತ್ನಿ ಹೊಮೈರಾ ಸಹ ದೇಶಕ್ಕೆ ವಾಪಸಾಗಲು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ನಿಧನ ಹೊಂದಿದರು.

2007: ಮಾಜಿ ನಟಿ, ಭೂಗತ ದೊರೆ ಅಬು ಸಲೇಮ್ ಪ್ರೇಯಸಿ ಮೋನಿಕಾ ಬೇಡಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತು. ನಕಲಿ ಪಾಸ್ ಪೋರ್ಟ್ ಸಂಬಂಧದಲ್ಲಿ ಆಕೆಗೆ ಆಂಧ್ರಪ್ರದೇಶ ಹೈಕೋರ್ಟ್ ಮೂರು ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತ್ತು. ಆದರೆ ಮುಂಬೈ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ 1999 ಜೂನ್ 24ರಂದು ನೀಡಿದ್ದ ಪಾಸ್ ಪೋರ್ಟ್ ಕಳೆದು ಹೋಗಿದೆ. ಹೀಗಾಗಿ ಅದನ್ನು ಕೋರ್ಟಿಗೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಆಕೆಯ ತಂದೆ ಪ್ರಮಾಣಪತ್ರ ಸಲ್ಲಿಸಿದ್ದರು. ಈ ಪಾಸ್ ಪೋರ್ಟ್ ರದ್ದು ಪಡಿಸಿ, ಜಾಮೀನಿನ ಮೇಲೆ ಬೇಡಿ ಅವರನ್ನು ಬಿಡುಗಡೆ ಮಾಡುವಂತೆ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

2007: ಲೇಖಕ ಡಾ. ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ `ಆನು ದೇವಾ ಹೊರಗಣವನು...' ಕೃತಿಯನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಎಚ್. ಎಸ್. ಮಹದೇವಪ್ರಸಾದ್ ವಿಧಾನಸಭೆಯಲ್ಲಿ ಪ್ರಕಟಿಸಿದರು.

2006: ನವದೆಹಲಿಯಲ್ಲಿ ನಡೆದ ಎಂಟನೆಯ ಏಷ್ಯಾ ಸಿನೆಮಾ ಉತ್ಸವದ ಭಾರತೀಯ ಸ್ಪರ್ಧಾ ವಿಭಾಗದಲ್ಲಿ ರಾಮಚಂದ್ರ ಪಿ.ಎನ್. ಅವರ ಚೊಚ್ಚಲ `ಸುದ್ದ' (ತಿಥಿ) ತುಳು ಚಲನಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಕನ್ನಡ ಚಲನ ಚಿತ್ರವು ವಿಶೇಷ ಪ್ರಶಸ್ತಿಯನ್ನು ಗೆದ್ದುಕೊಂಡವು.

2006: ಭಾರತದ ಮೊತ್ತ ಮೊದಲ ಬೌದ್ಧಿಕ ಆಸ್ತಿಗಳ ಹಕ್ಕು ಶಾಲೆ (Intellectual Property Right School) ಈದಿನ ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಆರಂಭಗೊಂಡಿತು.

2006: ಆರು ವರ್ಷದ `ಬೆತ್ತಲೆ ರಾಜಕುಮಾರ' ಪ್ರಿನ್ಸ್ ಈದಿನ ಸಂಜೆ 7.45ಕ್ಕೆ ಶ್ವೇತವಸ್ತ್ರ ಸುತ್ತಿಕೊಂಡು ಸೈನಿಕನ ಬೆಚ್ಚನೆಯ ತೋಳಿನ ಮೂಲಕ 60 ಅಡಿ ಆಳದ ಕೊಳವೆಬಾವಿಯ ಒಳಗಿನಿಂದ ಹೊರಕ್ಕೆ ಬಂದ. ಹರಿಯಾಣದ ಕುರುಕ್ಷೇತ್ರ ಬಳಿಯ ಹಲ್ವೇರಿ ಗ್ರಾಮದಲ್ಲಿ ಜುಲೈ 21ರಂದು ಆಕಸ್ಮಿಕವಾಗಿ ಈ ಕೊಳವೆ ಬಾವಿಯೊಳಕ್ಕೆ ಬಿದ್ದ ಪ್ರಿನ್ಸ್ 49 ಗಂಟೆಗಳ ಕಾಲ ಅದರೊಳಗೆ ಜವರಾಯನ ಜೊತೆಗೆ ಹೋರಾಟ ನಡೆಸಿದ್ದ. ಕೊಳವೆ ಬಾವಿಯಿಂದ 10 ಅಡಿ ದೂರದಲ್ಲಿ ಇನ್ನೊಂದು ಬಾವಿ ತೋಡಿ ಅದರ ಮೂಲಕ ಇಳಿದು ಅದಕ್ಕೆ ಅಡ್ಡ ಸುರಂಗ ಕೊರೆದು ಬಾಲಕನನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

2006: ಆಂಧ್ರಪ್ರದೇಶದ ಜಲ್ಲಮಲ್ಲ ಅರಣ್ಯದಲ್ಲಿ ಈದಿನ ನಸುಕಿನಲ್ಲಿ ನಡೆದ ಘರ್ಷಣೆಯಲ್ಲಿ ಮಾವೋವಾದಿ ನಕ್ಸಲೀಯರ ಉನ್ನತ ನಾಯಕ ಮಾಧವನನ್ನು ಪೊಲೀಸರು ಕೊಂದು ಹಾಕಿದರು. ಘರ್ಷಣೆಯಲ್ಲಿ ಐವರು ಮಹಿಳೆಯರು ಸೇರಿ 7 ಜನ ಅಸು ನೀಗಿದರು.

1981: ಇಂದಿರಾಗಾಂಧಿ ಅವರು ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷವೇ `ನಿಜ'ವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದು ಈದಿನ ಮಾನ್ಯತೆ ನೀಡಿದ ಚುನಾವಣಾ ಆಯೋಗವು ದೇವರಾಜ ಅರಸು ಅಧ್ಯಕ್ಷತೆಯ ಪಕ್ಷದ ಮಾನ್ಯತೆಯನ್ನು ರದ್ದು ಮಾಡಿತು.

1948: ಭಾಗೀರಥಿ ಹೆಗಡೆ ಜನನ.

1936: ಸಾಹಿತಿ ವೆಂಕಟೇಶ ಕುಲಕರ್ಣಿ ಜನನ.

1930: ರತ್ನಮ್ಮ ಸುಂದರರಾವ್ ಜನನ.

1908: ನವೋದಯ ಕಾಲದ ಪ್ರತಿಭಾನ್ವಿತ ಕವಿ ಗಣಪತಿ ರಾವ್ ಪಾಂಡೇಶ್ವರ ಅವರು ರಾಮಚಂದ್ರರಾಯ- ಸೀತಮ್ಮ ದಂಪತಿಯ ಪುತ್ರನಾಗಿ ಬ್ರಹ್ಮಾವರದಲ್ಲಿ ಜನಿಸಿದರು. ಮುಳಿಯ ತಿಮ್ಮಪ್ಪಯ್ಯ, ಐರೋಡಿ ಶಿವರಾಮಯ್ಯ ಅವರ ಶಿಷ್ಯರಾಗಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಈ ಮೂರೂ ಭಾಷೆಗಳಲ್ಲಿ ಸಮಾನ ವಿದ್ವತ್ ಗಳಿಸಿದ್ದ ಪಾಂಡೇಶ್ವರ 17ರ ಹರೆಯದಲ್ಲೇ `ವಿವೇಕಾನಂದ ಚರಿತಂ' ಕವನ ಬರೆದು ಖ್ಯಾತಿ ಪಡೆದಿದ್ದರು.

1906: ಹದಿಹರೆಯದಲ್ಲೇ ಬ್ರಿಟಿಷರಿಗೆ ಸೆಡ್ಡು ಹೊಡೆದ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದ್ ಮಧ್ಯಪ್ರದೇಶದ ಝಾಬ್ರಾದಲ್ಲಿ ಈದಿನ ಜನಿಸಿದರು. ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಪ್ರಾಣತೆತ್ತ ಆಜಾದ್ ಸ್ವಾತಂತ್ರ್ಯ ಕಲಿಗಳಿಗೆ ಆದರ್ಶಪ್ರಾಯರಾದರು.

1856: ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಡಿಪಾಯ ಹಾಕಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಪಂಡಿತ, ಗಣಿತಜ್ಞ, ತತ್ವಜ್ಞಾನಿ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು ಈ ದಿನ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದರು.

Tuesday, July 22, 2008

ಇಂದಿನ ಇತಿಹಾಸ History Today ಜುಲೈ 22

ಇಂದಿನ ಇತಿಹಾಸ

22 ಜುಲೈ

ನವ್ಯ ಕಾದಂಬರಿಕಾರ, ವಿಮರ್ಶಕ, ಕಥೆಗಾರ ಶಾಂತಿನಾಥ ದೇಸಾಯಿ (22-7-1929ರಿಂದ 6-3-1998) ಅವರು ಈದಿನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು.

2007: ರಾಜ್ಯ ಸಭೆಯ ಮಾಜಿ ಉಪ ಸಭಾಪತಿ ನಜ್ಮಾ ಹೆಫ್ತುಲ್ಲಾ ಅವರು ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವರು ಎಂದು ಎನ್ ಡಿಎ ಪ್ರಕಟಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸದಲ್ಲಿ ನಡೆದ ಎನ್ ಡಿಎ ಸಭೆಯ ನಂತರ ಈ ವಿಷಯ ಪ್ರಕಟಿಸಲಾಯಿತು. ನಜ್ಮಾ ಹೆಫ್ತುಲ್ಲಾ ಅವರು ಸ್ವಾತಂತ್ರ್ಯಯೋಧ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಮೊಮ್ಮಗಳು. ಈ ಮೊದಲು ಇವರು ಕಾಂಗ್ರೆಸ್ಸಿನಲ್ಲಿದ್ದರು.

2007: ಟಿವಿಯಲ್ಲಿ ಕ್ರೈಸ್ತಧರ್ಮದ ಪ್ರಚಾರ ಮಾಡುತ್ತಿದ್ದ ಟಾಮಿ ಫಯೆ ಬಕ್ಕೆರ್ ಮೆಸ್ಸನೆರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಕಾನ್ಸಸ್ ಸಿಟಿಯಲ್ಲಿ ಮೃತರಾದರು. ಮೆಸ್ಸನೆರ್ ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. `ಪ್ರೈಸ್ ದಿ ಲಾರ್ಡ್' ಸಂಘಟನೆಯ ಸಂಸ್ಥಾಪಕರಾದ ಅವರ ಮೊದಲ ಪತಿ ಜಿಮ್ ಬಕ್ಕರ್ ಅವರಿಂದ ಮೆಸ್ಸನೆರ್ ಅವರು ಅಮೆರಿಕದಲ್ಲಿ ಮನೆಮಾತಾಗಿದ್ದರು.

2007: ಜೆ.ಕೆ.ರಾವ್ಲಿಂಗ್ ಬರೆದಿರುವ 'ಹ್ಯಾರಿ ಪಾಟರ್ ಅಂಡ್ ಡೆತ್ಲಿ ಹ್ಯಾಲೊಸ್' ಪುಸ್ತಕದ 30 ಲಕ್ಷ ಪ್ರತಿಗಳು ಲಂಡನ್ನಿನ ನ್ಯಾಚುರಲ್ ಹಿಸ್ಟ್ರಿ ಮ್ಯೂಸಿಯಮ್ಮಿನಲ್ಲಿ 24 ಗಂಟೆಗಳಲ್ಲಿ ಮಾರಾಟವಾಗಿ ಇತಿಹಾಸ ನಿರ್ಮಾಣಗೊಂಡಿತು. ಡಬ್ಲ್ಯು ಎಚ್ ಸ್ಮಿತ್ ಮತ್ತು ವೂಲ್ ವರ್ತ್ಸ್ ಅವರು ಬರೆದಿದ್ದ ಹಿಂದಿನ `ಹ್ಯಾರಿ ಪಾಟರ್' ಪುಸ್ತಕಕ್ಕೆ ಹೋಲಿಸಿದರೆ ಈ ಪುಸ್ತಕದ 10 ಲಕ್ಷದಷ್ಟು ಹೆಚ್ಚು ಪ್ರತಿಗಳು ಮಾರಾಟವಾದವು. ಪುಸ್ತಕವನ್ನು ಮಾರಾಟಕ್ಕೆ ಇಟ್ಟ ಎರಡು ಗಂಟೆಗಳಲ್ಲಿಯೇ 1 ಲಕ್ಷ ಪ್ರತಿ ಖರ್ಚಾಯಿತು ಎಂದು ಪ್ರಕಾಶಕ ಬ್ಲೂಮ್ಸ್ ಬರಿ ಹೇಳಿದರು.

2007: ಸರ್ಕಾರದ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿ ಪಾಕಿಸ್ತಾನದ ಮಿರಾನ್ ಷಾ ಪ್ರದೇಶದಲ್ಲಿ ಹಿಂಸಾತ್ಮಕ ಚಟುವಟಿಕೆ ನಡೆಸುತ್ತಿದ್ದ 13 ಮಂದಿ ತಾಲಿಬಾನ್ ಉಗ್ರರನ್ನು ಪಾಕ್ ಸೇನೆ ಹತ್ಯೆ ಮಾಡಿತು.

2007: ಮಾಜಿ ಚಾಂಪಿಯನ್ ಗೀತ್ ಸೇಥಿ ಅವರು ಬ್ರಿಟನ್ನಿನ ಲೀಡ್ಸ್ ನಲ್ಲಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಷಿಪ್ ಫೈನಲ್ ಪ್ರವೇಶಿಸಲು ವಿಫಲರಾದರು. ನಾರ್ಥನ್ ಸ್ನೂಕರ್ ಸೆಂಟರಿನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡಿನ ಮೈಕ್ ರಸ್ಸೆಲ್ ಅವರು 1835-1231ರಲ್ಲಿ ಎಂಟು ಬಾರಿಯ ವಿಶ್ವ ಚಾಂಪಿಯನ್ ಸೇಥಿ ಅವರನ್ನು ಮಣಿಸಿದರು. ಇದೇ ಚಾಂಪಿಯನ್ ಷಿಪ್ ನಲ್ಲಿ ಪೈಪೋಟಿಗೆ ಇಳಿದ ಭಾರತದ ಇತರ ಸ್ಪರ್ಧಿಗಳಾದ ಪಂಕಜ್ ಅಡ್ವಾಣಿ, ದೇವೇಂದ್ರ ಜೋಶಿ, ಅಶೋಕ್ ಶಾಂಡಿಲ್ಯಾ, ಅಲೋಕ್ ಕುಮಾರ್, ಸೌರವ್ ಕೊಠಾರಿ, ಧ್ರುವ ಸೀತಾವಾಲಾ ಅವರು ಆರಂಭದ ಹಂತದಲ್ಲಿಯೇ ಸೋತು ಹೊರ ಬಿದ್ದಿದ್ದರು.

2006: ಹಿರಿಯ ನೃತ್ಯಗುರು ಎಚ್. ಆರ್. ಕೇಶವಮೂರ್ತಿ (87) ನಿಧನರಾದರು. 1949ರಲ್ಲಿ ಇವರು ಕೇಶವ ನೃತ್ಯ ಶಾಲೆಯನ್ನು ಸ್ಥಾಪಿಸಿ ಭರತನಾಟ್ಯವನ್ನು ಅತ್ಯಂತ ಶುದ್ಧ ಶೈಲಿಯಲ್ಲಿ ಬೆಳೆಸಿದವರಲ್ಲಿಪ್ರಮುಖರಾಗಿದ್ದರು.

2006: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರಿಗೆ ಸೆಡ್ಡು ಹೊಡೆದು ಜಾತ್ಯತೀತ ಜನತಾದಳವನ್ನು ತೊರೆದ ಸಿದ್ದರಾಮಯ್ಯ ನವದೆಹಲಿಯಲ್ಲಿ ವಿಧಿವತ್ತಾಗಿ ಕಾಂಗ್ರೆಸ್ ಸೇರಿದರು.

2006: ರಾಷ್ಟ್ರಪತಿಯವರು ತಿರಸ್ಕರಿಸಿದ `ಲಾಭದ ಹುದ್ದೆ' ಮಸೂದೆಯನ್ನು ಯಾವ ಬದಲಾವಣೆಯನ್ನೂ ಮಾಡದೆ ಯಥಾವತ್ತಾಗಿ ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಮಸೂದೆಯನ್ನು ಯಥಾವತ್ತಾಗಿ ಅಂಗೀಕರಿಸಬೇಕಾದ ಅಗತ್ಯ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಪತಿಗೆ ವಿವರಿಸಿದರು. ಲಾಭದ ಹುದ್ದೆ ವಿನಾಯ್ತಿಗೆ ಬಳಸಿದ ಮಾನದಂಡ ಅಪೂರ್ಣ ಎಂದು ಹೇಳಿದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ದೇಶವ್ಯಾಪಿ ಅನ್ವಯವಾಗುವಂತಹ ಏಕರೂಪಿ ಸೂತ್ರ ರೂಪಿಸಲು ಸಲಹೆ ಮಾಡಿದ್ದರು. ವಿನಾಯ್ತಿಗೆ ಬಳಸುವ ಮಾನದಂಡಗಳು ನಿಷ್ಪಕ್ಷಪಾತ, ಪಾರದರ್ಶಕ, ಗೊಂದಲ ರಹಿತವಾಗಿರಬೇಕು ಎಂದು ಅವರು ಸೂಚಿಸಿದ್ದರು.

2000: ಪಾಕಿಸ್ತಾನದ ನ್ಯಾಯಾಲಯವೊಂದು ನವಾಜ್ ಷರೀಫ್ ಅವರಿಗೆ 14 ವರ್ಷಗಳ ಶಿಕ್ಷೆ ಮತ್ತು 21 ವರ್ಷಗಳ ಅವಧಿಯ ರಾಜಕೀಯ ಬಹಿಷ್ಕಾರವನ್ನು ವಿಧಿಸಿತು.

1999: ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಶಿಫಾರಸು ಮಾಡಿದರು.

1997: ಸೆಪ್ಟೆಂಬರ್ 15ರಿಂದ ಪ್ರಸಾರ ಭಾರತಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತು.

1993: ವಿಲೆ ಪೋಸ್ಟ್ ಅವರು 7 ದಿನ 18 ಗಂಟೆ 49 ನಿಮಿಷದಲ್ಲಿ ವಿಶ್ವವನ್ನು ಸುತ್ತಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1991: ಗಾಯಕ ಪಂಡಿತ ಬಸವರಾಜ ರಾಜಗುರು ನಿಧನ.

1981: ಭಾರತದ ಪ್ರಥಮ ಪ್ರಾಯೋಗಿಕ ಉಪಗ್ರಹ ಆಪಲ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಪ್ರಾರಂಭಿಸಿ, ಎಲ್ಲ ನಿರೀಕ್ಷಿತ ಸಂಪರ್ಕ ಕಾರ್ಯಕ್ರಮ ಆರಂಭಿಸಿ ಸ್ಪಷ್ಟ ಚಿತ್ರಗಳನ್ನು ಪ್ರಸಾರ ಮಾಡಿತು.

1966: ಶಂಕರ ಬೈಚಬಾಳ ಜನನ.

1959: ಸಂಸದ, ಬಿಜೆಪಿ ನಾಯಕ ಅನಂತಕುಮಾರ ಜನನ.

1943: ಕುಮುದಾ ಪುರುಷೋತ್ತಮ ಜನನ.

1938: ಸಾಹಿತಿ ಕೆ.ಟಿ. ಗಟ್ಟಿ ಜನನ.

1929: ನವ್ಯ ಕಾದಂಬರಿಕಾರ, ವಿಮರ್ಶಕ, ಕಥೆಗಾರ ಶಾಂತಿನಾಥ ದೇಸಾಯಿ (22-7-1929ರಿಂದ 6-3-1998) ಅವರು ಈದಿನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿ ಸಲಹಾ ಸಮಿತಿಯ ಸಲಹೆಗಾರರಾಗಿದ್ದ ದೇಸಾಯಿ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಕಥೆ ಇಂಗ್ಲೆಂಡಿಗೆ ಹಡಗಿನ ಪ್ರಯಾಣ ಕಾಲದಲ್ಲಿ ಬರೆದ `ಕ್ಷಿತಿಜ'. ಅವರ ಐವತ್ತಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆ. ಕನ್ನಡವಲ್ಲದೆ ಇಂಗ್ಲಿಷಿನಲ್ಲೂ ಕೃತಿಗಳನ್ನು ರಚಿಸಿದ ಅವರಿಗೆ ವರ್ಧಮಾನ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.

Monday, July 21, 2008

ಇಂದಿನ ಇತಿಹಾಸ History Today ಜುಲೈ 21

ಇಂದಿನ ಇತಿಹಾಸ

21 ಜುಲೈ

ಭಾರತದ 13ನೇ ರಾಷ್ಟ್ರಪತಿಯಾಗಿ ನಿರೀಕ್ಷೆಯಂತೆ ಯುಪಿಎ- ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅಧಿಕ ಬಹುಮತದಿಂದ ಆಯ್ಕೆಯಾಗುವುದರೊಂದಿಗೆ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ಭಾರತದ 13ನೇ ರಾಷ್ಟ್ರಪತಿಯಾಗಿ ನಿರೀಕ್ಷೆಯಂತೆ ಯುಪಿಎ- ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅಧಿಕ ಬಹುಮತದಿಂದ ಆಯ್ಕೆಯಾಗುವುದರೊಂದಿಗೆ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1934 ಡಿಸೆಂಬರ್ 19 ರಂದು ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಜನಿಸಿದ ಪ್ರತಿಭಾ ಅವರು ಜಲಗಾಂವ್ ಎಂ. ಜೆ. ಕಾಲೇಜಿನಲ್ಲಿ ಪದವಿ ಪಡೆದು ನಂತರ ಮುಂಬೈನ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕಾನೂನು ಪದವಿ ಪಡೆದರು. 1965ರ ಜುಲೈಯಲ್ಲಿ ದೇವಿಸಿಂಗ್ ರಾಣಾಸಿಂಗ್ ಶೆಖಾವತ್ ಅವರ ಜತೆ ವಿವಾಹ. ರಾಜಕೀಯ ಜೀವನ ಆರಂಭಕ್ಕೆ ಮುನ್ನ ಅವರು ಸ್ವಂತ ಊರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಮಹಿಳಾ ಹಕ್ಕುಗಳ ಪ್ರತಿಪಾದಕರಾದ ಪ್ರತಿಭಾ ಅವರು ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಭಾರತದ ನಿಯೋಗದೊಂದಿಗೆ ಆಸ್ಟ್ರೇಲಿಯಾ ಮತ್ತು ಬೀಜಿಂಗ್ ಗೆ ಭೇಟಿ ನೀಡಿದ್ದರು. 1962ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸಿದರು. 1985ರವರೆಗೆ ಸತತವಾಗಿ ಐದು ಬಾರಿ ಅವರು ಶಾಸಕರಾಗಿ ಆಯ್ಕೆಯಾದರು. ಪ್ರಥಮ ಬಾರಿಗೆ 1967ರಲ್ಲಿ ವಸಂತ್ ರಾವ್ ನಾಯ್ಕ ಸಂಪುಟದಲ್ಲಿ ಉಪಸಚಿವರಾಗಿ ಸಾರ್ವಜನಿಕ ಆರೋಗ್ಯ, ಪಾನ ನಿಷೇಧ, ಪ್ರವಾಸೋದ್ಯಮ, ವಸತಿ, ಸಂಸದೀಯ ವ್ಯವಹಾರಗಳ ಖಾತೆಯನ್ನು ನಿರ್ವಹಿಸಿದರು. ನಂತರ ಸಂಪುಟ ದರ್ಜೆ ಸಚಿವರಾದ ಅವರು ಸಮಾಜ ಕಲ್ಯಾಣ ಖಾತೆಯನ್ನು ನಿರ್ವಹಿಸಿದರು. ನಂತರ ಶಂಕರರಾವ್ ಚವ್ಹಾಣ್ ಮತ್ತು ವಸಂತದಾದಾ ಪಾಟೀಲ್ ಮಂತ್ರಿಮಂಡಲದಲ್ಲೂ ಪುನರ್ವಸತಿ, ಸಾಂಸ್ಕೃತಿಕ ಹಾಗೂ ಶಿಕ್ಷಣ ಸಚಿವರಾದರು. 1977ರಲ್ಲಿ ಕಾಂಗ್ರೆಸ್ಸಿನಲ್ಲಿ ಒಡಕು ಮೂಡಿದಾಗ ರಾಜಕೀಯ ಗುರು ವೈ. ಬಿ. ಚವ್ಹಾಣ್ ಸೇರಿದಂತೆ ಅನೇಕ ಮುಖಂಡರು ದೇವರಾಜ್ ಅರಸು ನೇತೃತ್ವದ ಕಾಂಗ್ರೆಸ್ (ಯು)ಗೆ ಸೇರಿದರೂ ಪ್ರತಿಭಾ ಅವರು ಇಂದಿರಾ ಗಾಂಧಿ ಜತೆ ಉಳಿದರು. 1978ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಜುಲೈ 1979ರಿಂದ ಫೆಬ್ರುವರಿ 1980ರ ವರೆಗೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. ಬಾಬಾ ಸಾಹೇಬ್ ಭೋಂಸ್ಲೆ ಮತ್ತು ವಸಂತದಾದಾ ಪಾಟೀಲ್ ಸಂಪುಟದಲ್ಲಿ ನಗರಾಭಿವೃದ್ಧಿ, ವಸತಿ, ನಾಗರಿಕ ಸರಬರಾಜು ಮತ್ತು ಸಮಾಜ ಕಲ್ಯಾಣ ಸಚಿವರಾಗಿ (1982ರಿಂದ 1985) ಕಾರ್ಯ ನಿರ್ವಹಿಸಿದರು. 1985ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದರು. 1986ರಿಂದ 1988ರ ನವೆಂಬರ್ ವರೆಗೆ ರಾಜ್ಯಸಭೆಯ ಉಪಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದರು. 1988ರಿಂದ 1990ರ ವರೆಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1991ರಲ್ಲಿ ಲೋಕಸಭೆಗೆ ಆಯ್ಕೆಯಾದ ಪ್ರತಿಭಾ, ಸದನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1996ರ ನಂತರ ಸಕ್ರಿಯ ರಾಜಕೀಯದಿಂದ ದೂರ ಸರಿದಿದ್ದ ಪ್ರತಿಭಾ ಅವರನ್ನು ಯುಪಿಎ ಸರ್ಕಾರ 2004ರ ನವೆಂಬರಿನಲ್ಲಿ ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಿತು. ಭಾರಿ ಕುತೂಹಲ ಮೂಡಿಸಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಭಾ ಪಾಟೀಲ್, ಶೆಖಾವತ್ ಅವರಿಗಿಂತ 3 ಲಕ್ಷ 06, 810ರಷ್ಟು ಮೌಲ್ಯದ ಅಧಿಕ ಮತ ಗಳಿಸಿದರು. ಸಂಜೆ 4 ಗಂಟೆಯ ಹೊತ್ತಿಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಮತ ಎಣಿಕೆ ಆರಂಭವಾದಾಗಿನಿಂದ ಮುನ್ನಡೆ ಸಾದಿಸಿದ್ದ ಪ್ರತಿಭಾ ಪಾಟೀಲ್, ಎಣಿಕೆ ಪೂರ್ಣಗೊಂಡಾಗ ಒಟ್ಟು 6 ಲಕ್ಷ 38,116ರಷ್ಟು ಮೌಲ್ಯದ ಮತ ಪಡೆದರು. ಅವರ ಪ್ರತಿಸ್ಪರ್ಧಿ ಎನ್ ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್ 3 ಲಕ್ಷ 31,306 ರಷ್ಟು ಮೌಲ್ಯದ ಮತ ಗಳಿಸಿದರು. ಪ್ರತಿಭಾ ಒಟ್ಟು 2,931 ಮತ ಗಳಿಸಿದರೆ, ಶೆಖಾವತ್ ಅವರಿಗೆ 1,449 ಮತಗಳು ಬಂದವು.

2007: ಅಮಾನತಿನಲ್ಲಿದ್ದ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧರಿ ಅವರನ್ನು ಮರುನೇಮಕಗೊಳಿಸುವಂತೆ ಪಾಕ್ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಚೌಧರಿ ಅವರು ಈದಿನ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದರು. ಚೌಧರಿ ಅವರ ಅಮಾನತನ್ನು ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಕೆಲವೆಡೆ ನಡೆದ ಪ್ರತಿಭಟನೆಗಳು ಹಿಂಸಾರೂಪವನ್ನೂ ಪಡೆದಿದ್ದವು. ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣ ಚೌಧರಿ ಅವರನ್ನು ಅಮಾನತು ಮಾಡಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಫಕೀರ್ ಹುಸೇನ್ ಅವರನ್ನೂ ಸರ್ಕಾರ ಅಮಾನತುಗೊಳಿಸಿತ್ತು. ಹುಸೇನ್ ಅವರನ್ನು ಹುದ್ದೆಗೆ ಮರುನೇಮಕ ಮಾಡುವಂತೆಯೂ ಸುಪ್ರೀಂ ಕೋರ್ಟ್ ಆದೇಶ ನೀಡಿತು.

2007: ವಾಯವ್ಯ ಪಾಕಿಸ್ತಾನದಲ್ಲಿ ಭಾರಿ ಚಂಡಮಾರುತದಿಂದ ಸಂಭವಿಸಿದ ಮಳೆ ಹಾಗೂ ಭೂ ಕುಸಿತಕ್ಕೆ 50 ಮಂದಿ ಬಲಿಯಾದರು. ಎರಡು ಗ್ರಾಮಗಳು ಸಂಪೂರ್ಣ ನಾಮಾವಶೇಷವಾದವು.ಪೇಶಾವರದಿಂದ 150 ಮೈಲು ದೂರದ ದಿರ್ಬಾಲ ಜಿಲ್ಲೆಯಲ್ಲಿರುವ ಈ ಎರಡು ಗ್ರಾಮಗಳಲ್ಲಿ ಕುಸಿದ ಮನೆಗಳ ಅಡಿಯಿಂದ 50 ಶವಗಳನ್ನು ಹೊರತೆಗೆಯಲಾಯಿತು. ಚಂಡಮಾರುತದಲ್ಲಿ ನೂರಾರು ಮಂದಿ ನಾಪತ್ತೆಯಾದರು.

2007: ವಿಶ್ವದ ಪುಸ್ತಕ ಪ್ರಿಯರನ್ನು ಮಾಯಾಜಾಲದಂತೆ ಸೆಳೆದ `ಹ್ಯಾರಿ ಪಾಟರ್' ಪುಸ್ತಕ ಸರಣಿಯ ಏಳನೇ ಹಾಗೂ ಕೊನೆಯ ಆವೃತ್ತಿ `ಹ್ಯಾರಿ ಪಾಟರ್ ಅಂಡ್ ಡೆಥ್ಲಿ ಹ್ಯಾಲೋಸ್' ಪುಸ್ತಕ ವಿಶ್ವದಾದ್ಯಂತ ಈದಿನ ಬಿಡುಗಡೆಯಾಗಿದ್ದು ಎಲ್ಲೆಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಿಸಿ ದೋಸೆಯಂತೆ ಮಾರಾಟವಾಯಿತು. ಬ್ರಿಟನ್, ಆಸ್ಟ್ರೇಲಿಯಾದ ಸಿಡ್ನಿ, ಸಿಂಗಪುರ, ಭಾರತದ ನವದೆಹಲಿಯಂತಹ ನಗರಗಳಲ್ಲಿ ಬೆಳಗ್ಗೆಯಿಂದಲೇ ಈ ಪುಸ್ತಕ ಕೊಳ್ಳಲು ಪುಸ್ತಕದಂಗಡಿಗಳ ಮುಂದೆ ಜನರ ಸಾಲುಗಳು ಕಂಡು ಬಂದವು.

2006: ಬೆಂಗಳೂರು - ಮೈಸೂರು ಹ್ದೆದಾರಿ ಕಾರಿಡಾರ್ ಯೋಜನೆಯ (ಬಿಎಂಐಸಿ) ಹೆಚ್ಚುವರಿ ಭೂಮಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು.

1999: ಜನತಾದಳವು ಎಚ್. ಡಿ. ದೇವೇಗೌಡ ಅವರ ನೇತ್ವತ್ವದಲ್ಲಿ ವಿಭಜನೆಗೊಂಡಿತು.

1995: ಖ್ಯಾತ ಸಂಗೀತ ನಿರ್ದೇಶಕ ಸಜ್ಜದ್ ಹುಸೇನ್ ನಿಧನ.

1977: ನೀಲಂ ಸಂಜೀವರೆಡ್ಡಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರು.

1956: ಕಛ್ ಪ್ರಾಂತ್ಯದ ರಾಜಧಾನಿಯಾದ ಭುಜ್ ನ ಆಗ್ನೇಯಕ್ಕೆ 24 ಮೈಲಿ ದೂರದಲ್ಲಿರುವ ಅಂಜಾರ್ ಪಟ್ಟಣ ಮತ್ತು ಸುತ್ತಮುತ್ತಣ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 87 ಜನ ಸತ್ತು 250ಕ್ಕೂ ಹೆಚ್ಚು ಜನ ಗಾಯಗೊಂಡರು.

1947: ಭಾರತದ ಸಂವಿಧಾನ ಸಮಿತಿಯು ಮೂರು ಬಣ್ಣವುಳ್ಳ ಬಾವುಟವನ್ನು ರಾಷ್ಟ್ರಧ್ವಜವಾಗಿ ಅಂಗೀಕರಿಸಿತು.

1937: ಸಾಹಿತ್ಯ ವಿಮರ್ಶ, ಕಲಾಪ್ರೇಮಿ, ಸಂಗೀತ ಪ್ರಿಯ ಕೃಷ್ಣಯ್ಯ ಅವರು ಹುಚ್ಚಯ್ಯ- ಕೆಂಪಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಶಿಸ್ತಿನ ಪ್ರವಚನಕಾರರಾದ ಕೃಷ್ಣಯ್ಯ ಅವರ ಸುಮಾರು 30 ಕೃತಿಗಳು ಪ್ರಕಟವಾಗಿವೆ. ಅವರ ಶೃಂಗಾರ ಲಹರಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.

1937: ಸಾಹಿತಿ ನಾ.ಸು. ಭರತನ ಹಳ್ಳಿ ಜನನ.

1930: ಗೀತ ರಚನೆಕಾರ ಆನಂದ್ ಬಕ್ಷಿ ಜನನ.

1906: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷ ಡಬ್ಲ್ಯೂ.ಸಿ. ಬ್ಯಾನರ್ಜಿ ನಿಧನರಾದರು.
1844ರ ಡಿಸೆಂಬರ್ 29ರಂದು ಕಲ್ಕತ್ತ್ತಾದಲ್ಲಿ (ಈಗಿನ ಕೋಲ್ಕತ್ತಾ) ಜನಿಸಿದ ಬ್ಯಾನರ್ಜಿ 1885ರಲ್ಲಿ ಮುಂಬೈಯಲ್ಲಿ ನಡೆದ ಕಾಂಗ್ರೆಸ್ಸಿನ ಮೊದಲ ಅಧಿವೇಶನದ ಅಧ್ಯಕ್ಷರಾಗಿದ್ದರು.

1798: ಪಿರಮಿಡ್ ಕಾಳಗದಲ್ಲಿ ನೆಪೋಲಿಯನ್ 60,000 ಮಮೆಲ್ಲೂಕರನ್ನು ಸೋಲಿಸಿದ.

Sunday, July 20, 2008

Mr. B.S.Y. Go forward; you are in Right Direction...!

Mr. B.S.Y. Go forward;

you are in Right

Direction...!


Mr. B.S.Y, You have stepped in the right direction. Don't yield to criticisms and change your mind. Always keep it in your mind that if the farmers and villages become stronger and self reliant, then state will emerge stronger.

By Nethrakere Udaya Shankara


One hundred crore to implement Organic Farming in the state, incentive of Rs. 2000 to each family which takes up organic farming in 1000 villages, Setting up of the Karnataka Agriculture Mission with which Karnataka becomes the First State in the country to setup such a body to integrate and coordinate the activities in agriculture, horticulture, animal husbandry, sericulture and allied activities- are the important gifts given to the Agricultural Sector of the state by Chief Minister B.S. Yeddyurappa in his hatric budget presented to the Karnataka State Assembly on 17th July 2008.

Chief Minister himself will head the high power committee under the Karnataka Agriculture Mission which will be comprised of agricultural scientists, progressive farmers and NGO representatives besides senior officers and ministers.

Mr. Yeddyurappa, who took an oath in the name of farmers when he assumed office has also reaffirmed his commitment for the development of the farming sector by announcing various other sops like supply of free electricity to irrigation pump sets up to 10 HP, extension of farm loans from co operative institutions at 3 percent interest rate and setting up of Rs. 500 Crore revolving fund for market intervention.

He has also increased the allocation to agriculture section to Rs. 1,974 Crores this year from Rs. 1603 Crores in the 2007-08 budget to improve the agricultural productivity.

To fulfill the poll promise of supplying free power to IP sets to below 10 HP, Mr. Yeddurappa has provided an additional subsidy of Rs. 750 Crores to the electricity distribution companies. This gesture of Chief Minister is expected to benefit around 15 lakh IP sets in the state.

In view of truant played by the monsoon rains this year, the Chief Minister has announced a sop of Rs. 1000 to each small and marginal farmer family to the dry land areas which has lost both seeds as well as fertilizer. Rs. 500 Crore allocated in the budget for this purpose.

But most important thing which I, observed in the budget presented by B.S. Yeddyurappa is a plan to value addition of Cow Dung and Cow Urine which will have long-lasting impact on farmers.


To add the value to Cow Dung and Cow Urine, just like Cow Milk, Chief Minister has announced the the programme of 'Mahatma Gandhi Cow Based Rural Employment (Mahatma Gandhi Govu Adharita
Gramodhyoga)'. He said that the programme would be implemented in two districts i.e. Shimoga and Mysore in the beginning.

Chief Minister expected that this programme will increase the income level of rural people.

Sri Raghveshwara Bharthi Swamiji of Ramachandrapura Mutt, who started his 15th Chaturmasya in Bangalore has welcomed this programme and appealed to extend it to all districts of Karnataka.

Sri Raghaveshwar Swamiji, who is heading the movement for to safeguard the Indian Breeds of Cows by by the unique scheme 'Kamadugha', has already setup several Gou Shalas in the state and supporting the small scale industries base on Cow Dung and Cow Urine.

Ramachandrapura Mutt has already released several such products like Cow Urine medicine like Arka, tooth powder, shampoo, bindi, cosmetics etc apart from popularizing Organic Fertilizer made out of cow dung and cow urine.

The High Power Committee headed by Chief Minister for Karnataka Agriculture Mission should make use of the experience of such attempts.

Organic Fertilizers produced out of Cow dung and Cow Urine as well as earth worms and the liquid organic fertilizers like Jeevamrutha have already proved that they can boost the agricultural production at very little cost. All farmers must be given training to use such organic manure instead depending upon chemical fertilizers.

Cow Based Rural Employment Scheme will generate employment to rural areas and definitely improve their financial position, if it involve establishment of dairies to collect Cow Dung and Cow Urine in the lines of Milk Dairies apart from starting small scale industrial units based on cow and cow products. Such small scale industrial units will help not only the farmers but also the other youth of the villages who will engage themselves themselves in such activities.

Government has already announced the loan scheme with 3 percent interest to farmers. I feel this scheme should be extended to all rural people who want to establish Gobar Gas units in their houses and who want to make use of such unit’s slurry which is the best organic fertilizer to the agricultural crops. This will help the rural people to improve their health and will make them self reliant regarding fuel. They need not wait for LPG or kerosene which comes from cities to their kitchen. They also need not wait for fuel which will decrease their health by its smoke.

I have seen some farmers in Haveri District, with the support of BAIF have established gobar gas units linked to earth worm units. They feed the slurry comes out from gobar gas unit to the earth worms and get the best organic fertilizer which boosts the agricultural production.

Such linked schemes will improve the financial conditions of rural people further and boost the agricultural production.

During Vishwa Gou Sammelana organised by Sri Ramachandrapura Mutt at Hosanagara, lakhs of people saw a unique bullock cart which was producing electricity. The bullock cart improved by one Chandrakant Pathak of Modern Technical Centre Pune produced electricity by just bullock power making use of a generator and battery charger. He produced the electricity by simply fixing it to Bullock Cart.

If the Government extends the subsidized loan plan to purchase such improved bullock carts, they can produce the electricity needed to their houses while they use the bullock cart for transporting goods in the villages.

Such efforts will make farmers self sufficient regarding the needs of fertilizer, electricity and fuel and turn will definitely improve their livelihood.

With the support of Government villagers can also establish community Gou Shalas in each village. Such Gou Shalas could provide milk and gobar gas to other people and the slurry of such Gou Shalas could also be used to manufacture best organic manure.

Such Cow based rural activities will help farmers and villagers to regain the self confidence and they will come out thoughts of suicides.

Along with such measures, support should be given simple methods of rainwater harvesting, use of alternative energy sources like solar and wind in whole state without making any difference between of the cities and villages.

Mr. B.S.Y, You have stepped in the right direction. Don't yield to criticisms and change your mind. Always keep it in your mind that if the farmers and villages become stronger and self reliant, then state will emerge stronger. If agriculture sector becomes self reliant, no farmer will commit suicide and people of the state will lead happy and healthy life. Industries also go stronger.

ಇಂದಿನ ಇತಿಹಾಸ History Today ಜುಲೈ 20

ಅಂದಿನ ಈದಿನ

20 ಜುಲೈ

2006-07ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಏಳು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ, ಪ್ರೇಕ್ಷಕರ ಅಭೂತಪೂರ್ವ ಮೆಚ್ಚುಗೆಗೆ ಪಾತ್ರವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ `ಮುಂಗಾರು ಮಳೆ' ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆಯಿತು.

2007: 2006-07ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಏಳು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ, ಪ್ರೇಕ್ಷಕರ ಅಭೂತಪೂರ್ವ ಮೆಚ್ಚುಗೆಗೆ ಪಾತ್ರವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ `ಮುಂಗಾರು ಮಳೆ' ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆಯಿತು. ಪ್ರಸ್ತುತ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪಟ್ಟಿಯನ್ನು ಸಮಿತಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ಪ್ರಕಟಿಸಿದರು. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಸಂಗೀತ, ಛಾಯಾಗ್ರಹಣ, ಸಂಭಾಷಣೆ, ಗೀತ ರಚನೆ, ಧ್ವನಿ ಗ್ರಹಣ ಪ್ರಶಸ್ತಿಗಳು `ಮುಂಗಾರು ಮಳೆ' ಪಾಲಾದವು. `ಮುಂಗಾರು ಮಳೆ' ನಂತರ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಎರಡನೆಯದಾದ `ದುನಿಯಾ' ಪ್ರಶಸ್ತಿ ಪಟ್ಟಿಯಲ್ಲೂ ಎರಡನೆಯ ಸ್ಥಾನ ಪಡೆಯಿತು. ದ್ವಿತೀಯ ಅತ್ಯುತ್ತಮ ಚಿತ್ರ ಪುರಸ್ಕಾರದೊಂದಿಗೆ ಇನ್ನೂ ಐದು ಪ್ರಶಸ್ತಿಗಳನ್ನು `ದುನಿಯಾ' ಬಾಚಿಕೊಂಡಿತು. ಮೂರನೇ ಅತ್ಯುತ್ತಮ ಚಿತ್ರವಾಗಿ `ಸೈನೈಡ್' ಆಯ್ಕೆಯಾಯಿತು. ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ಕಲಾವಿದೆ ಎಂ.ಎನ್. ಲಕ್ಷ್ಮಿದೇವಿ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಜೀವಮಾನದ ವಿಶಿಷ್ಟ ಕೊಡುಗೆಗೆ ಸಲ್ಲುವ ಪುರಸ್ಕಾರ ನಟ ಮತ್ತು ನಿರ್ದರ್ೇಶಕ ದ್ವಾರಕೀಶ್ ಅವರಿಗೆ ಲಭಿಸಿತು. ಎರಡು ತುಳು ಚಿತ್ರಗಳೂ ಸೇರಿದಂತೆ ಒಟ್ಟೂ 37 ಚಿತ್ರಗಳು ಸ್ಪರ್ಧಾಕಣದಲ್ಲಿದ್ದವು. ತೀರ್ಪುಗಾರರ ವಿಶೇಷ ಪ್ರಶಸ್ತಿಗಳನ್ನು `ಸ್ನೇಹಾಂಜಲಿ' ಚಿತ್ರದ ಅಭಿನಯಕ್ಕಾಗಿ, ಹುಟ್ಟು ಕಿವುಡ ಹಾಗೂ ಮೂಕ ಕಲಾವಿದ ಧ್ರುವ ಹಾಗೂ `ದಾಟು' ಚಿತ್ರಕ್ಕೆ ನೀಡಲಾಯಿತು.

2007: 1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಇನ್ನೊಬ್ಬ ಅರೋಪಿ ಮೊಹಮದ್ ಇಕ್ಬಾಲ್ ಮೊಹಮದ್ ಯುಸೂಫ್ ಶೇಖ್ ಎಂಬಾತನಿಗೆ ಮರಣ ದಂಡನೆ ವಿಧಿಸಿತು. ಪಿತೂರಿಯಲ್ಲಿ ಭಾಗಿಯಾಗಿದ್ದ ಅಪರಾಧಕ್ಕಾಗಿ ಸೇವೆಯಿಂದ ವಜಾಗೊಂಡ ಕಸ್ಟಮ್ಸ್ ಕಲೆಕ್ಟರ್ ಸೋಮನಾಥ್ ಥಾಪಾ ಮತ್ತು ಬಷಿರ್ ಅಹಮದ್ ಖೈರುಲ್ಲಾಗೆ ಟಾಡಾ ನ್ಯಾಯಾಧೀಶ ಪಿ. ಡಿ. ಕೊಡೆ ಅವರು ಜೀವಾವಧಿ ಶಿಕ್ಷೆ ವಿಧಿಸಿದರು. ಮೀನುಗಾರರ ವಸತಿ ಪ್ರದೇಶದ ಮೇಲೆ ಗ್ರೆನೇಡ್ ಎಸೆದ ಅಪರಾಧಿಗಳ ಗುಂಪಿನಲ್ಲಿ ಬಷಿರ್ ಅಹಮದ್ ಖೈರುಲ್ಲಾ ಭಾಗಿಯಾಗಿದ್ದ. ಈ ಅಪರಾಧಕ್ಕಾಗಿ ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಮೊಹಮದ್ ಇಕ್ಬಾಲನಿಗೆ ಗಲ್ಲು ಶಿಕ್ಷೆ ವಿಧಿಸುವುದರೊಂದಿಗೆ ಮುಂಬೈ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾದವರ ಸಂಖ್ಯೆ ಏಳಕ್ಕೆ ಏರಿತು. ರಾಯಗಡ ಜಿಲ್ಲೆಯ ಸಂಧೇರಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು ಅಲ್ ಹುಸ್ಸೇನಿ ಕಟ್ಟಡದಲ್ಲಿ ಆರ್ ಡಿಎಕ್ಸ್ ಅಳವಡಿಸಲು ನೆರವಾದ ಹಾಗೂ ಸಹರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದ ಮತ್ತು ದಾದರಿನಲ್ಲಿ ಸ್ಕೂಟರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ ಕೃತ್ಯಕ್ಕಾಗಿ ಅಹಮದ್ ಇಕ್ಬಾಲನನ್ನು ಕಳೆದ ಸೆಪ್ಟೆಂಬರ್ 25ರಂದು ಅಪರಾಧಿ ಎಂದು ಘೋಷಿಸಲಾಗಿತ್ತು. 1993ರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನೂರು ಜನರನ್ನು ಅಪರಾಧಿಗಳು ಎಂದು ಘೋಷಿಸಲಾಗಿತ್ತು. ಇದುವರೆಗೆ 87 ಮಂದಿ ಅಪರಾಧಿಗಳ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ಪ್ರಕಟಿಸಲಾಗಿದೆ. 1993ರ ಮಾರ್ಚ್ 12ರ ಸ್ಫೋಟದಲ್ಲಿ 257 ಮಂದಿ ಸತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ನ್ಯಾಯಾಲಯವು ಈವರೆಗೆ ಏಳು ಮಂದಿಗೆ ಮರಣದಂಡನೆ ಹಾಗೂ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

2007: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಮೊಹಮ್ಮದ್ ಹಮೀದ್ ಅನ್ಸಾರಿ ಅವರನ್ನು ರಾಷ್ಟ್ರೀಯ ಪ್ರಗತಿಪರ ಒಕ್ಕೂಟ (ಯುಪಿಎ) ಮತ್ತು ಎಡಪಕ್ಷಗಳು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದವು. ನವದೆಹಲಿಯಲ್ಲಿ ಈದಿನ ನಡೆದ ಯುಪಿಎ ಮತ್ತು ಎಡಪಕ್ಷಗಳ ಸಮನ್ವಯ ಸಮಿತಿಯ ಸಭೆಯ ಬಳಿಕ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಮಾಜಿ ರಾಜತಾಂತ್ರಿಕ ಅನ್ಸಾರಿ ಅವರ ಹೆಸರು ಪ್ರಕಟಿಸಿದರು.

2007: ದೇಶದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರನ್ನು ಅಮಾನತುಗೊಳಿಸಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಹೊರಡಿಸಿದ್ದ ಆದೇಶವನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿತು. ಇದರಿಂದಾಗಿ ಅನೇಕ ಸಮಸ್ಯೆ, ವಿವಾದದಲ್ಲಿ ಸಿಕ್ಕಿ ತತ್ತರಿಸಿದ ಮುಷರಫ್ ಅವರಿಗೆ ಭಾರಿ ಮುಖಭಂಗವಾಯಿತು. ನ್ಯಾಯಮೂರ್ತಿ ಖಲೀಲುರ್ ರೆಹಮಾನ್ ರಾಮಡೆ ನೇತೃತ್ವದಲ್ಲಿ ಸುಪ್ರೀಂ ಕೋರ್ಟಿನ 13 ಸದಸ್ಯರ ಪೂರ್ಣ ಪೀಠ ಎರಡು ತಿಂಗಳು ವಿಚಾರಣೆ ನಡೆಸಿ, ಚೌಧರಿ ವಿರುದ್ಧ ಮುಷರಫ್ ಸರ್ಕಾರ ಸಿದ್ಧಪಡಿಸಿದ್ದ ಆರೋಪಗಳ ಪಟ್ಟಿಯನ್ನು 10-3 ಮತಗಳಿಂದ ವಜಾ ಮಾಡಿತು. ತಮ್ಮ ಮಗನಿಗೆ ಉನ್ನತ ಪೊಲೀಸ್ ಹುದ್ದೆ ದೊರಕಿಸಲು ಹಾಗೂ ವೈಯಕ್ತಿಕ ಅನುಕೂಲ ಮಾಡಿಕೊಳ್ಳಲು ಚೌಧರಿ ಪ್ರಭಾವ ಬೀರಿದ್ದರು ಎಂಬ ಸರ್ಕಾರದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪೀಠ ಹೇಳಿತು.

2007: ದುಬೈ ನಗರದಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ `ಬುರ್ಜ್ ದುಬೈ' ಗಗನಚುಂಬಿ ಕಟ್ಟಡ ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿ ಲಭಿಸಿತು. ಇದುವರೆಗೆ 507.3 ಮೀಟರ್ ಎತ್ತರದ `ತೈಪೆ ಟವರ್ಸ್' ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಕೀರ್ತಿ ಪಡೆದಿತ್ತು. ಆದರೆ ಈಗ `ಬುರ್ಜ್ ದುಬೈ' ಕಟ್ಟಡ ಅದನ್ನು ಹಿಂದಿಕ್ಕಿದೆ ಎಂದು ಬೃಹತ್ ಕಟ್ಟಡಗಳ ನಿರ್ವಹಣಾ ಮಂಡಳಿಯು ಅಧಿಕೃತವಾಗಿ ಸ್ಪಷ್ಟಪಡಿಸಿತು. ಹೋಟೆಲುಗಳು, ಶಾಪಿಂಗ್ ಮಾಲ್ ಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಫ್ಲಾಟುಗಳನ್ನು ಹೊಂದಲಿರುವ `ಬುರ್ಜ್ ದುಬೈ' ಕಟ್ಟಡದ ಎತ್ತರ 705ರಿಂದ 950 ಮೀಟರ್ ನಡುವೆ ಇರಲಿದೆ ಎಂಬ ಅಂದಾಜಿದೆ. ಇದು 154ರಿಂದ 180 ಅಂತಸ್ತುಗಳನ್ನು ಹೊಂದಲಿದೆ. ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಾರ್ಪೊರೇಷನ್ ಕಂಪೆನಿ ಈ ಕಟ್ಟಡದ ನಿರ್ಮಾಣದ ಉಸ್ತುವಾರಿ ಹೊತ್ತುಕೊಂಡಿದೆ. 2005ರ ಫೆಬ್ರವರಿ 1ರಂದು ಕಾಮಗಾರಿ ಆರಂಭವಾಗಿದ್ದು, 2009ರ ಜೂನ್ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು. ಈ ಬೃಹತ್ ಕಟ್ಟಡದ ಅಂದಾಜು ವೆಚ್ಚ 7300 ಕೋಟಿ ದಿರಹಂ (ಯುಎಇ ಹಣ). ಚಿಕಾಗೋ ಮೂಲದ ಸ್ಕಿಡ್ ಮೋರ್, ಓವಿಂಗ್ಸ್ ಹಾಗೂ ಮೆರಿಲ್ ಕಂಪೆನಿಗಳು ಇದರ ವಿನ್ಯಾಸ ರೂಪಿಸಿವೆ.

2007: ವಿಶ್ವದಲ್ಲೇ ಅತ್ಯಂತ ಬೃಹತ್ ದೇವಾಲಯಗಳಲ್ಲಿ ಒಂದು ಎಂದು ಬಣ್ಣಿಸಲಾಗಿರುವ ಸ್ವಾಮಿನಾರಾಯಣ ದೇವಸ್ಥಾನ ಜುಲೈ 22ರಂದು ಕೆನಡಾದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಈದಿನ ಟೊರೆಂಟೋದಲ್ಲಿ ಪ್ರಕಟಿಸಲಾಯಿತು. ಟೊರೆಂಟೋ ನಗರದ ಈಶಾನ್ಯ ಭಾಗದಲ್ಲಿ ಹಿಮಾಚ್ಛಾದಿತ ಹಿಮಾಲಯ ಶಿಖರದಂತೆ ಕಾಣುವ ಸ್ವಾಮಿನಾರಾಯಣ ಮಂದಿರವು ಪ್ರಧಾನಿ ಸ್ಟೀಫನ್ ಹಾರ್ಪರ್, ಟೋರೆಂಟೋ ಮೇಯರ್ ಡೇವಿಡ್ ಮ್ಲಿಲರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಲಿದೆ. ಇಲ್ಲಿ 2 ಲಕ್ಷಕ್ಕಿಂತ ಅಧಿಕ ಹಿಂದುಗಳಿದ್ದಾರೆ. ದೇಗುಲದ ಹೊರ ಆವರಣವನ್ನು ಸುಣ್ಣದ ಕಲ್ಲು ಹಾಗೂ ಹೊಳೆಯುವ ಇಟಲಿ ಕೆರ್ರಾರ ಶಿಲೆಯಲ್ಲಿ ಕೆತ್ತಲಾಗಿದೆ. ಒಳ ಆವಣರದಲ್ಲಿ ಗುಲಾಬಿ ವರ್ಣದ ಕಲ್ಲುಗಳು ಶೋಭಿಸುತ್ತಿವೆ. ಸ್ಥಳೀಯ ಹಿಂದು ಸಮುದಾಯ ಕಟ್ಟಡಕ್ಕಾಗಿ 4 ಕೋಟಿ ಅಮೆರಿಕ ಡಾಲರ್ ನೀಡಿದೆ. 400 ಸ್ವಯಂ ಸೇವಕರು ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ ವಹಿವಾಟಿನ ಒಂದು ಹಂತದಲ್ಲಿ 15,683 ಅಂಶಗಳ ಗಡಿ ದಾಟಿ ಹೊಸ ದಾಖಲೆ ಮಾಡಿತು.

1982: ಗಾಂಧೀಜಿ ಅನುಯಾಯಿ ಮೀರಾ ಬೆಹನ್ ನಿಧನ.

1969: ವರಾಹಗಿರಿ ವೆಂಕಟಗಿರಿ ರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದರು.

1961: ಎಚ್. ಎಲ್. ಪುಷ್ಪ ಜನನ.

1958: ಮಂದಾಕಿನಿ ಪುರೋಹಿತ ಜನನ.

1955: ಬಸವರಾಜ ಸಾದರ ಜನನ.

1943: ಸಾಹಿತಿ ಡಿ.ಆರ್. ಬಳೂರಗಿ ಜನನ.

1940: ವೈದ್ಯ, ಸಾಹಿತಿ, ಸಂಶೋಧಕ ಡಾ. ಸ.ಜ. ನಾಗಲೋಟಿಮಠ ಅವರು ಜಂಬಯ್ಯ ವೀರಬಸಯ್ಯ- ಹಂಪವ್ವ ದಂಪತಿಯ ಪುತ್ರನಾಗಿ ಗದಗದಲ್ಲಿ ಈದಿನ ಜನಿಸಿದರು. ಕನ್ನಡದಲ್ಲಿ 42, ಇಂಗ್ಲಿಷಿನಲ್ಲಿ 14 ಗ್ರಂಥಗಳನ್ನು ರಚಿಸಿದ ನಾಗಲೋಟಿಮಠ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕುವೆಂಪು ವೈದ್ಯ ವಿಜ್ಞಾನ ಪ್ರಶಸ್ತಿ, ಡಾ. ಬಿ.ಸಿ. ರಾಯ್ ಪ್ರಶಸ್ತಿ, ವಿ.ಎಸ್. ಮುಂಗಳಿಕ ಪ್ರಶಸ್ತಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ಅಲೆಂಬಿಕ್ ಸಂಶೋಧನಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾದವರು.

1925: ಸಾಹಿತಿ ಟಿ.ಬಿ. ಹಂಡಿ ಜನನ.

1924: ಹದಿನೈದು ದೇಶಗಳ ಪ್ರತಿನಿಧಿಗಳು ಪ್ಯಾರಿಸ್ಸಿನಲ್ಲಿ ಭೇಟಿಯಾಗಿ ಚೆಸ್ ಗಾಗಿ ಒಂದು ಶಾಶ್ವತ ಒಕ್ಕೂಟ (ಫಿಡೆ) ಸ್ಥಾಪಿಸಲು ನಿರ್ಧರಿಸಿದರು.

1905: ಬಂಗಾಳ ವಿಭಜನೆಯ ಲಾರ್ಡ್ ಕರ್ಜನ್ ಘೋಷಣೆಯನ್ನು ಬ್ರಿಟಿಷ್ ಸರ್ಕಾರ ಒಪ್ಪಿಕೊಂಡಿತು.

1532: ಕವಿ, ತತ್ವಜ್ಞಾನಿ ತುಳಸೀದಾಸರು ಉತ್ತರ ಪ್ರದೇಶದ ರಾಜಪುರದಲ್ಲಿ ಈದಿನ ಜನಿಸಿದರು. ಮಹತ್ವದ ಹಿಂದಿ ಕವಿಗಳಲ್ಲಿ ಒಬ್ಬರಾಗಿರುವ ತುಳಸೀದಾಸರು 12 ಪುಸ್ತಕ ಬರೆದಿದ್ದಾರೆ. ರಾಮನ ಕುರಿತು ಬರೆದಿರುವ `ರಾಮಚರಿತ ಮಾನಸ' ಇವರ ಪ್ರಮುಖ ಗ್ರಂಥಗಳಲ್ಲಿ ಒಂದು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement