Tuesday, March 31, 2009

ಇಂದಿನ ಇತಿಹಾಸ History Today ಮಾರ್ಚ್ 28

ಇಂದಿನ ಇತಿಹಾಸ

ಮಾರ್ಚ್ 28

ಆಧುನಿಕ ಹರಿಯಾಣದ ಶಿಲ್ಪಿ ಎಂದೇ ಪರಿಗಣಿಸಲಾಗಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡ, ರಾಜ್ಯದ ಮಾಜಿ ಮುಖ್ಯಮಂತ್ರಿ ಬನ್ಸಿಲಾಲ್ (79) ನವದೆಹಲಿಯಲ್ಲಿ ನಿಧನರಾದರು. ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿ ಆಗಿದ್ದ ಬನ್ಸಿಲಾಲ್ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಇಂದಿರಾಗಾಂಧಿ ಪುತ್ರ ಸಂಜಯಗಾಂಧಿ ನಿಕಟವರ್ತಿಯಾಗಿ ಸಾಕಷ್ಟು ವಾದಕ್ಕೂ ಗುರಿಯಾಗಿದ್ದರು.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಹಣಾಹಣಿಯಲ್ಲಿ ಅತಿ ವೇಗದ ತ್ರಿಶತಕ ದಾಖಲಿಸಿದ ಭಾರತ ತಂಡದ ವೀರೇಂದ್ರ ಸೆಹ್ವಾಗ್ ವಿಶ್ವ ಕ್ರಿಕೆಟ್ನ್ಲಲಿ ಅತ್ಯಂತ ಗೌರವದಿಂದ ಹೆಸರಿಸಲಾಗುವ `ಡಾನ್' ಬ್ರಾಡ್ಮನ್ ಸಾಧನೆಯನ್ನು ಸರಿಗಟ್ಟಿ ನಿಂತರು. ಅತಿ ಹೆಚ್ಚು ತ್ರಿಶತಕ ಗಳಿಸಿದ ಸಾಧಕರ ಪಟ್ಟಿಯಲ್ಲಿ ಭಾರತದ ಆರಂಭಿಕ ಆಟಗಾರನಿಗೆ ಸ್ಥಾನ ಸಿಕ್ಕಿತು. ಅತಿ ಕಡಿಮೆ ಪಂದ್ಯಗಳಲ್ಲಿ ಎರಡು ಬಾರಿ ಇಷ್ಟೊಂದು ದೊಡ್ಡ ಮೊತ್ತದ ಸಾಧನೆ ಮಾಡಿದ ಬಲಗೈ ಬ್ಯಾಟ್ಸ್ಮನ್, ಇಂತಹದೇ ಶ್ರೇಯಕ್ಕೆ ಪಾತ್ರರಾದ ವೆಸ್ಟ್ ಇಂಡೀಸಿನ ಬ್ರಯನ್ ಲಾರಾಗಿಂತ ಸೆಹ್ವಾಗ್ ಮೇಲೆ ನಿಂತರು. ಆದರೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರಾಡ್ಮನ್ ಗಿಂತ ಸ್ವಲ್ಪ ಕೆಳಗುಳಿದರು.

2008: ರಾಷ್ಟ್ರೀಯ  ರಾಜಧಾನಿ ದೆಹಲಿಯಲ್ಲಿ ಬಿಗಿ  ಭದ್ರತೆಯಿರುವ ಪ್ರಧಾನಿ ಕಚೇರಿಯ ಹೊರಭಾಗದಲ್ಲಿ ಸಂಭವಿಸಿದ ಗುಂಡು ಹಾರಾಟದಲ್ಲಿ ದೆಹಲಿ ಪೊಲೀಸ್ ಕಮಾಂಡೋ ಒಬ್ಬರು ಗಾಯಗೊಂಡರು. ಪೊಲೀಸ್ ಕಮಾಂಡೋ ಸಂಜಯ್ ಅವರಿಗೆ ಘಟನೆಯಲ್ಲಿ ಗುಂಡು ತಗುಲಿ ಪೃಷ್ಠದ ಬಳಿ ಗಾಯವಾಯಿತು.

2008: ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನವೇ ತೃತೀಯ ರಂಗ ರಚನೆಯ ಸಾಧ್ಯತೆಗಳನ್ನು  ತಳ್ಳಿ  ಹಾಕಿದ ಸಿಪಿಐ, ತಾನು ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಮೈತ್ರಿ  ಮಾಡಿಕೊಳ್ಳುವುದಾಗಿ  ಹೇಳಿತು.

2008: ಲೋಹ ಮತ್ತು ಆಹಾರ ವಸ್ತುಗಳ ದರ ಏರಿಕೆಯು ಹಣದುಬ್ಬರ ದರವನ್ನು ಶೇಕಡಾ 6.68ಕ್ಕೆ ಏರಿಸಿ ಕಳೆದ ಒಂದು ವರ್ಷದಲ್ಲೇ ಅತಿ ಹೆಚ್ಚಿನ ದರ ಏರಿಕೆಯ ದಾಖಲೆಯನ್ನು ನಿರ್ಮಿಸಿತು. ಪರಿಣಾಮವಾಗಿ ಸದ್ಯೋಭವಿಷ್ಯದಲ್ಲಿ ಬಡ್ಡಿದರಗಳು ಇಳಿಯುವ ಆಶೆ ನುಚ್ಚು ನೂರಾಯಿತು. ಇತ್ತೀಚಿನ ತಿಂಗಳುಗಳಲ್ಲಿ ಶೇಕಡಾ 4ರ ಸನಿಹದಲ್ಲಿದ್ದ ಹಣದುಬ್ಬರ ಮೇಲ್ಮುಖವಾಗಿ ಸಾಗುತ್ತಾ ಮಾರ್ಚ್ 15ರಂದು ಕೊನೆಗೊಂಡ ವಾರಾಂತ್ಯ ವೇಳೆಗೆ ಶೇಕಡಾ 0.76ರಷ್ಟು ಹೆಚ್ಚಿತ್ತು.

2008: ಐವತ್ತು ಕೋಟಿ ರೂಪಾಯಿ ಆದಾಯ ತೆರಿಗೆ ವಂಚಿಸಿದ ಪ್ರಕರಣವೊಂದರಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ ಆಪ್ತ ಎನ್ನಲಾದ ರೊಮೇಶ್ ಶರ್ಮಾ ತಪ್ಪಿತಸ್ಥ ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತು. 12 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಆದಾಯ ತೆರಿಗೆ ಕಾಯ್ದೆ ಅಡಿ ಆತನನ್ನು ತಪ್ಪಿತಸ್ಥ ಎಂದು ಘೋಷಿಸಿ ದೆಹಲಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕನ್ವಲ್ ಜಿತ್ ಅರೋರಾ ಆದೇಶ ನೀಡಿದರು.

2007: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ 32 ಪುಟ್ಟ ಪುಟ್ಟ ಕೊಳೆಗೇರಿ ಮಕ್ಕಳನ್ನು ಅಪಹರಿಸಿ, ಬಸ್ಸಿನಲ್ಲಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡ ಶಿಶುವಿಹಾರ ಕೇಂದ್ರದ ಮಾಲೀಕ ಡ್ಯೂಕಾಟ್ 10 ಗಂಟೆಗಳ ಕಾಲ ಆತಂಕ ಸೃಷ್ಟಿಸಿದ. ಅಪಹೃತ 32 ಮಕ್ಕಳು ಸೇರಿದಂತೆ ಶಿಶುವಿಹಾರದ 145 ಮಕ್ಕಳಿಗೆ ಉಚಿತ ವಸತಿ ವ್ಯವಸ್ಥೆ ಹಾಗೂ ಶಿಕ್ಷಣ ಒದಗಿಸಬೇಕು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಅಗಬೇಕು ಎಂಬುದು ಆತನ ಬೇಡಿಕೆಗಳಾಗಿದ್ದವು. ಚಿತ್ರನಟ, ಸಂಸದ ಸೆನ್ ರೋಮನ್ `ಬಾಂಗ್' ರೆವಿಲ್ಲಾ ಜ್ಯೂನಿಯರ್ ಅವರು ಅಪಹರಣಕಾರನ ಜೊತೆಗೆ ಮಾತುಕತೆ ನಡೆಸಿ ಸಂಜೆ ವೇಳೆಗೆ ಮಕ್ಕಳನ್ನು ಬಂಧಮುಕ್ತಗೊಳಿಸಿದರು. ಅಪಹರಣ ಮುಗಿಯುತ್ತಿದ್ದಂತೆಯೇ ಗೊಂಬೆ, ಆಟಿಕೆ, ತಿಂಡಿ ಪೊಟ್ಟಣಗಳೊಂದಿಗೆ ಅಪಹೃತ ಮಕ್ಕಳು ಮತ್ತು ಅಪಹರಣಕಾರ ಅಪಹೃತ ಬಸ್ಸಿನಿಂದ ಹೊರಕ್ಕೆ ಬಂದರು. ಅಪಹರಣಕಾರ ಪ್ರತಿ ಮಗುವಿಗೂ ಮುತ್ತಿಟ್ಟು, ತನ್ನ ಬಳಿ ಇದ್ದ ಗ್ರೆನೇಡನ್ನು ಪ್ರಾಂತೀಯ ಗವರ್ನರರಿಗೆ ಒಪ್ಪಿಸಿ ಶರಣಾಗತನಾದ. ಹಿಂದೆ ವೇತನ ವಿವಾದಕ್ಕೆ ಸಂಬಂಧಿಸಿದಂತೆ ಈತ ಇಬ್ಬರು ಕ್ಯಾಥೋಲಿಕ್ ಪಾದ್ರಿಗಳನ್ನು ಅಪಹರಿಸಿದ್ದ.

2007: ಪತಿಯೊಡನೆ ವಾಸಿಸಲು ನಿರಾಕರಣೆ ಮತ್ತು ಮಗು ಬೇಡ ಎಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಪತ್ನಿಯ ವರ್ತನೆ ಮಾನಸಿಕ ಹಿಂಸೆ ಎನಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಪತಿ ವಿಚ್ಛೇದನ ಕೇಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 22 ವರ್ಷದ ಹಿಂದೆ ಮದುವೆಯಾಗಿ ಕಳೆದ 16 ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸಿಸಿದ ಪಶ್ಚಿಮ ಬಂಗಾಳದ ಐಎಎಸ್ ದಂಪತಿ ಸಮೀರ್ ಘೋಷ್ ಮತ್ತು ಜಯಾ ಘೋಷ್ ಅವರ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯ ಇದೇ ಆಧಾರದಲ್ಲಿ ಇತ್ಯರ್ಥ ಪಡಿಸಿ, ವಿಚ್ಛೇದನ ಮಂಜೂರು ಮಾಡಿತು. 

2007: ಜಾಗತಿಕ ತಾಪಮಾನದ ಪರಿಣಾಮವಾಗಿ ಹಿಮಾಲಯದ ನೀರ್ಗಲ್ಲುಗಳು ಶೀಘ್ರವಾಗಿ ಕರಗುತ್ತಿವೆ ಎಂದು ಫ್ರೆಂಚ್ ಸಂಶೋಧಕರು ಉಪಗ್ರಹ ಚಿತ್ರಗಳನ್ನು ಅಧರಿಸಿ ಬಹಿರಂಗ ಪಡಿಸಿದರು. ಹಿಮಾಲಯದ ನೀರ್ಗಲ್ಲುಗಳು ಕ್ರಮೇಣ ಕರಗುತ್ತಿರುವ ಚಿತ್ರಗಳನ್ನು ಬಿಡುಗಡೆ ಮಾಡಿದ ಅವರು ವಾರ್ಷಿಕ 8ರಿಂದ 10 ಮೀಟರಿನಷ್ಟು ನೀರ್ಗಲ್ಲುಗಳು ಕರಗುತ್ತಿವೆ ಎಂದು ಅವರು ಪ್ರಕಟಿಸಿದರು.

2006: ದೇಶದಲ್ಲೇ ಅಪರೂಪದ್ದಾದ ಜೀವಂತ ಮನುಷ್ಯನ ಇಡೀ ದೇಹದ ಅಚ್ಚು ತೆಗೆಯುವ ಶಿಲ್ಪಕಲಾ ಪ್ರಯೋಗ ಚಿಕ್ಕಮಗಳೂರಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಯಶಸ್ವಿಯಾಯಿತು. `ಸ್ಲೀಪಿಂಗ್ ಗರ್ಲ್' ಕಲಾಕೃತಿಗೆ ವಿದ್ಯಾಲಯದ ವಿದ್ಯಾರ್ಥಿನಿ ಜ್ಯೋತಿ ಮತ್ತು `ಥಿಂಕಿಂಗ್ ಮ್ಯಾನ್' ಕಲಾಕೃತಿಗೆ ಸಂಚಾರಿ ಪೊಲೀಸ್ ಪೇದೆ ಕಿರಣ್ ಸ್ವಯಂಸ್ಫೂರ್ತಿಯಿಂದ ರೂಪದರ್ಶಿಗಳಾದರು. ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಮತ್ತು ಇತರ ಉಪನ್ಯಾಸಕರ ನೇತೃತ್ವದಲ್ಲಿ 40 ವಿದ್ಯಾರ್ಥಿಗಳ ತಂಡ ದಶಮಾನೋತ್ಸವದ ಅಂಗವಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಶ್ರಮಿಸಿ ಈ ಕಲಾಕೃತಿಗಳನ್ನು ನಿರ್ಮಿಸಿತು. ಜೀವಂತ ಮನುಷ್ಯನನ್ನೇ ಸಂಪೂರ್ಣವಾಗಿ `ಪ್ಲಾಸ್ಟರ್ ಆಫ್ ಪ್ಯಾರಿಸ್' ನಿಂದ ಮುಚ್ಚಿ ಪಡಿಯಚ್ಚು ತೆಗೆದು ಫೈಬರಿಗೆ ಅಳವಡಿಸುವ ಈ ಕಲೆ ಅತ್ಯಂತ ವಿರಳ. ದೇಹದ ಒಂದಂಗುಲವನ್ನೂ ಬಿಡದೆ ಸಂಪೂರ್ಣವಾಗಿ ಮುಚ್ಚಿ ಮೂಗಿಗೆ ಉಸಿರಾಡಲು ಮಾತ್ರ ಪೈಪ್ ಅಳವಡಿಸಿ ಸುಮಾರು 20 ನಿಮಿಷ ಒಂದೇ ಭಂಗಿಯಲ್ಲಿ ಕೂರಿಸಿ ಈ ಪಡಿಯಚ್ಚು ತೆಗೆಯಲಾಯಿತು.

2006: ಗೋಧ್ರಾ ಹತ್ಯಾಕಾಂಡದ ಬಳಿಕ 2002ರ ಏಪ್ರಿಲಿನಲ್ಲಿ ಗುಜರಾತಿನ ಅಹಮದಾಬಾದಿನ ಧನಿಲಿಮ್ಡಾ ಪ್ರದೇಶದಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಪ್ರಮುಖ ಆರೋಪಿ ಮುಷ್ತಾಕ್ ಕನಿಯೊ ಮತ್ತು ಇತರ 8 ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಯಿತು.

2006: ಆಧುನಿಕ ಹರಿಯಾಣದ ಶಿಲ್ಪಿ ಎಂದೇ ಪರಿಗಣಿಸಲಾಗಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡ, ರಾಜ್ಯದ ಮಾಜಿ ಮುಖ್ಯಮಂತ್ರಿ ಬನ್ಸಿಲಾಲ್ (79) ನವದೆಹಲಿಯಲ್ಲಿ ನಿಧನರಾದರು. ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿ ಆಗಿದ್ದ ಬನ್ಸಿಲಾಲ್ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಇಂದಿರಾಗಾಂಧಿ ಪುತ್ರ ಸಂಜಯಗಾಂಧಿ ನಿಕಟವರ್ತಿಯಾಗಿ ಸಾಕಷ್ಟು ವಾದಕ್ಕೂ ಗುರಿಯಾಗಿದ್ದರು. ನಂತರ ಕಾಂಗ್ರೆಸ್ಸಿನಿಂದ ಹೊರನಡೆದು ಹರಿಯಾಣ ವಿಕಾಸ ಪಕ್ಷ ಸ್ಥಾಪಿಸಿದ್ದರು. 2004ರಲ್ಲಿ ಕಾಂಗ್ರೆಸ್ಸಿಗೆ ಮರಳಿದ್ದರು.

2006: ಟೆಂಪಲ್ ಆಫ್ ಕಾನ್ಷಿಯಸ್ನೆಸ್ಸಿನ ಮುಖ್ಯಸ್ಥ ಆಧ್ಯಾತ್ಮಿಕ ಗುರು ವೇದಾಂತಿ ಮಹರ್ಷಿ (96) ಅಳಿಯಾರಿನಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಇಸ್ರೇಲ್ ಚುನಾವಣೆ ಬಿಗಿ ಭದ್ರತೆಯ ನಡುವೆ ನಡೆಯಿತು. ಐವತ್ತು ಲಕ್ಷ ಮಂದಿ ಮತ ಚಲಾಯಿಸಿದರು. ಆದರೆ 1999 ಹಾಗೂ 2003ರ ಚುನಾವಣೆಗೆ ಹೋಲಿಸಿದರೆ ಮತ ಚಲಾವಣೆ ಪ್ರಮಾಣ ಕುಸಿಯಿತು.

1979: ಅಮೆರಿಕದ ಅತಿಭೀಕರ ಪರಮಾಣು ವಿದ್ಯುತ್ ಸ್ಥಾವರ ದುರಂತ ಸಂಭವಿಸಿದ ದಿನ. ಪೆನ್ಸಿಲ್ವೇನಿಯಾದ ಥ್ರೀ ಮೈಲ್ ಐಲ್ಯಾಂಡಿನ ಯುನಿಟ್ ಟು ರಿಯಾಕ್ಟರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಹೊರಸೂಸಿದ ಪರಿಣಾಮವಾಗಿ ಈ ದುರಂತ ಘಟಿಸಿತು.

1959: ಕಲಾವಿದ ಸಿಂಧೆ ಡಿ.ಕೆ. ಜನನ.

1958: ಕಲಾವಿದ ವಾಗೀಶ ಭಟ್ ಜನನ.

1955:  ಆಕ್ಲೆಂಡಿನ ಈಡನ್ ಪಾರ್ಕಿನಲ್ಲಿ  ಇಂಗ್ಲೆಂಡ್ ವಿರುದ್ಧ ಆಡಿದ  ನ್ಯೂಜಿಲ್ಯಾಂಡ್ 26 ರನ್ನುಗಳಿಗೆ ಆಲ್ ಔಟ್ ಆಗಿ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿತು.  

1951: ಕಲಾವಿದ ಶರಣಪ್ಪ ಜಿ. ಶೆಟಗಾರ ಜನನ.

1940: ಕಲಾವಿದ ಶಕುಂತಲಾ ನರಸಿಂಹನ್ ಜನನ.

1939: ಜನರಲ್ ಫ್ರಾಂಕೋಗೆ ಮ್ಯಾಡ್ರಿಡ್ ಶರಣಾಗತಿಯೊಂದಿಗೆ ಸ್ಪಾನಿಶ್ ಅಂತರ್ಯುದ್ಧ ಕೊನೆಗೊಂಡಿತು. ಈ ಗೆಲುವಿನ ಹಿನ್ನೆಲಯಲ್ಲಿ ಫ್ರಾಂಕೋ ಅವರನ್ನು `ಕಾಡಿಲೋ' ಅಂದರೆ ರಾಷ್ಟ್ರದ ನಾಯಕ ಎಂದು ಗೌರವಿಸಲಾಯಿತು. 

1930: ಟರ್ಕಿಯಲ್ಲಿನ ಅಂಗೋರಾ ಮತ್ತು ಕಾನ್ ಸ್ಟಾಂಟಿನೋಪಲ್ ನಗರಗಳ  ಹೆಸರುಗಳನ್ನು ಕ್ರಮವಾಗಿ ಅಂಕಾರ ಮತ್ತು ಇಸ್ತಾಂಬುಲ್ ಎಂಬುದಾಗಿ ಬದಲಾಯಿಸಲಾಯಿತು.

1926: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಪಾಲಿ ಉಮ್ರಿಗಾರ್ ಜನ್ಮದಿನ. ಇವರು ಟೆಸ್ಟ್ ಕ್ರಿಕೆಟಿನಲ್ಲಿ ದ್ವಿಶತಕ ಭಾರಿಸಿದ ಮೊಟ್ಟ ಮೊದಲ ಭಾರತೀಯ ಕ್ರಿಕೆಟಿಗ.

1916: ಸಂಗೀತ, ಚಿತ್ರಕಲೆ, ರಂಗಭೂಮಿ ಇತ್ಯಾದಿ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ಅವರು ಬಡವಿಶ್ವಕರ್ಮ ಕುಟುಂಬದ ಸದಸ್ಯರಾಗಿ ರಾಯಚೂರು ಜಿಲ್ಲೆಯ ತಳಕಲ್ಲಿನಲ್ಲಿ ಜನಿಸಿದರು.

1862: ಅರಿಸ್ಟೈಡ್ ಬ್ರಿಯಾಂಡ್ (1862-1932) ಹುಟ್ಟಿದ ದಿನ. ಹನ್ನೊಂದು ಬಾರಿ ಫ್ರಾನ್ಸಿನ ಪ್ರಧಾನಿಯಾದ ಇವರು `ಲೀಗ್ ಆಫ್ ನೇಷನ್ಸ್' ಸ್ಥಾಪನೆ ಮತ್ತು ವಿಶ್ವಶಾಂತಿಗಾಗಿ ತೀವ್ರವಾಗಿ ಶ್ರಮಿಸಿದರು. ಈ ಯತ್ನಗಳು ಇವರಿಗೆ 1926ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಂದು ಕೊಟ್ಟವು. 1926ರ ನೊಬೆಲ್ ಶಾಂತಿ ಪ್ರಶಸ್ತಿ ಇವರ ಜೊತೆಗೆ ಜರ್ಮನಿಯ ಗುಸ್ತಾವ್ ಸ್ಟ್ರೆಸ್ ಮ್ಯಾನ್ ಅವರಿಗೂ ಲಭಿಸಿತು.

1851: ಬರ್ನಾರ್ಡಿನೊ ಲೂಯಿ ಮಚಾಡೊ (1851-1944) ಹುಟ್ಟಿದ ದಿನ. ಬ್ರೆಜಿಲ್ ಸಂಜಾತ ರಾಜಕೀಯ ನಾಯಕನಾದ ಇವರು ಎರಡು ಅವಧಿಗೆ ಪೋರ್ಚುಗಲ್ ಅಧ್ಯಕ್ಷರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಮಾರ್ಚ್ 27

ಇಂದಿನ ಇತಿಹಾಸ

ಮಾರ್ಚ್ 27

ಬಾಹ್ಯಾಕಾಶಕ್ಕೆ ಮೊತ್ತ ಮೊದಲ ಬಾರಿಗೆ ಪಯಣಿಸಿದ ಗಗನಯಾನಿ ಯೂರಿ ಗಗಾರಿನ್ ಮಾಸ್ಕೊದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಮೃತರಾದರು. ಅವರು ಮೃತರಾದ ಗಾಸ್ತಸ್ಕ್ ಪಟ್ಟಣಕ್ಕೆ ಗಗಾರಿನ್ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

ಇಂದು ವಿಶ್ವ ರಂಗಭೂಮಿ ದಿನ. ಇಂಟರ್ ನ್ಯಾಷನಲ್ ಥಿಯೇಟರ್ ಇನ್ ಸ್ಟಿಟ್ಯೂಟ್ 1961ರಲ್ಲಿ ವ್ಯವಸ್ಥೆಗೊಳಿಸಿದ ವಿಶ್ವ ರಂಗಭೂಮಿ ಸಮಾವೇಶದಲ್ಲಿ ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನ ಆಚರಿಸಲು ನಿರ್ಧರಿಸಲಾಯಿತು. 1962 ರಲ್ಲಿಪ್ಯಾರಿಸ್ಸಿನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯೊಂದಿಗೆ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.

2008: ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ, ನಾಲ್ವರು ಮೋಟಾರು ವಾಹನ ನಿರೀಕ್ಷಕರು ಮತ್ತು ಆಹಾರ ನಿರೀಕ್ಷಕರೊಬ್ಬರ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಹಾಸನ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ ಕೆ.ಪಿ. ಹೊನಕೇರಿ, ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಸದಾಶಿವ, ಮೋಟಾರು ವಾಹನ ನಿರೀಕ್ಷಕರಾದ ಎಚ್. ಸಿ. ಸತ್ಯನ್ (ಒಒಡಿ ಸಕಲೇಶಪುರ), ಶ್ರೀನಿವಾಸಪ್ಪ (ಒಒಡಿ ದೇವನ ಹಳ್ಳಿ), ಪ್ರಮಥೇಶ್ (ಚಿತ್ರದುರ್ಗ), ಎನ್. ಕರಿಯಪ್ಪ (ಒಒಡಿ ಹಾಸನ) ಮತ್ತು ಗುಲ್ಬರ್ಗದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಎಸ್. ಬಿ. ಫುಲಾರೆ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಿತು. ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಮತ್ತು ಡಿಐಜಿ ಚರಣ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಪೊಲೀಸ್ ಅಧಿಕಾರಿಗಳು ಬೆಂಗಳೂರು, ಮಂಗಳೂರು, ಹಾಸನ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಮೈಸೂರು, ಗುಲ್ಬರ್ಗ ಮತ್ತಿತರ ಕಡೆಗಳಲ್ಲಿ ದಾಳಿ ನಡೆಸಿದರು.

2008: ಎರಡು ವಾರಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದು ದಾಖಲೆಯ ಪ್ರಯೋಗಗಳಿಗೆ ಸಾಕ್ಷಿಯಾದ `ಎಂಡೇವರ್' ಗಗನ ನೌಕೆ ಬೆಳಗ್ಗೆ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು. ಫ್ಲಾರಿಡಾದ ಕೇಪ್ ಕೆನವರಲ್ನ  ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಏಳು ಮಂದಿ ಗಗನ ಯಾತ್ರಿಗಳನ್ನು ಹೊತ್ತಿದ್ದ `ಎಂಡೇವರ್' ಬೆಳಿಗ್ಗೆ 6.09 ಗಂಟೆಗೆ ಬಂದಿಳಿದಾಗ ಹೂಸ್ಟನ್ನಿನಲ್ಲಿನ `ನಾಸಾ' ನಿಯಂತ್ರಣ ಕೇಂದ್ರದ ಸಿಬ್ಬಂದಿ ಸಂತಸದಿಂದ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಬಾರಿಯ ಎಂಡೇವರ್ ಯಾನ ಅತ್ಯಂತ ಫಲಪ್ರದ ಎಂದು ವಿಜ್ಞಾನಿಗಳು ಬಣ್ಣಿಸಿದರು. ಒಟ್ಟು 16 ದಿನಗಳ ಈ ಯಾನದ ಅವಧಿಯಲ್ಲಿ ನೌಕೆಯು 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್ಎಸ್) ಅಡಗಿ ಕುಳಿತಿತ್ತು. ಈ ಸಂದರ್ಭದಲ್ಲಿ ವ್ಯೋಮಯಾನಿಗಳು 5 ಬಾರಿ ಬಾಹ್ಯಾಕಾಶ ನಡಿಗೆ ನಡೆಸಿ ದಾಖಲೆ ಸೃಷ್ಟಿಸಿದ್ದರು. ಹಾಗೂ ಜಪಾನಿನ ಒಂದು ಪ್ರಯೋಗಾಲಯ ಮತ್ತು ಕೆನಡಾದ ರೊಬೊಟ್ ಒಂದನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2008: ಮಹಾರಾಷ್ಟ್ರ ನಿರ್ಮಾಣ ಸೇನೆಯು (ಎಂ ಎನ್ ಎಸ್) ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ವಿರುದ್ಧದ ದಾಳಿಯನ್ನು ಮುಂದುವರೆಸಿದ್ದು, ಈಗ ಭಿತ್ತಿಚಿತ್ರಗಳ ಮೂಲಕ ಅವರನ್ನು ಪರೋಕ್ಷವಾಗಿ ಟೀಕಿಸುವ ಕೆಲಸ ಮಾಡಿತು. ಪುಣೆ ಬಳಿಯ ಲೊಣಾವಾಲದಲ್ಲಿ ಖರೀದಿಸಿದ ಕೃಷಿ ಭೂಮಿಯನ್ನು ಮೂಲ ಮಾಲೀಕನಿಗೆ ವಾಪಸ್ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಅಮಿತಾಭ್ ಅವರ ನಿಲುವನ್ನು ಟೀಕಿಸಲು ಎಂ ಎನ್ ಎಸ್ ವ್ಯಂಗ್ಯ ಭಿತ್ತಿಚಿತ್ರವನ್ನು ಬಳಸಿತು. ಭಿತ್ತಿಚಿತ್ರದಲ್ಲಿ ರೇಖಾಚಿತ್ರದ ಕೆಳಗಡೆ ಮರಾಠಿಯಲ್ಲಿ `ಮಜೆ ದಾನ್ ಪರತ್ ಕರಾ' (ನಾನು ದಾನವಾಗಿ ನೀಡಿದ್ದನ್ನು ವಾಪಸ್ ಮಾಡು) ಎಂದು ಬರೆದು ನಂತರ `ಸೂಪರ್ ಶೇತ್ಕರಿ' (ಸೂಪರ್ ರೈತ) ಎಂದು ಬರೆಯಲಾಯಿತು.

2008: ಹಿಂದೂ ದೇವತೆ ದುರ್ಗಾದೇವಿಯ ಪ್ರತಿರೂಪದಂತೆ ಭಿತ್ತಿ ಚಿತ್ರಗಳಲ್ಲಿ ತಮ್ಮನ್ನು ಪ್ರತಿಬಿಂಬಿಸಿಕೊಂಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿಂದೂಗಳ ಭಾವನೆಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಆಪಾದಿಸಿ ಮುಜಾಫರಾಬಾದ್ ನ್ಯಾಯಾಲಯದಲ್ಲಿ ಸಲ್ಲಿಸಿದ ದೂರನ್ನು ವಿಚಾರಣೆಗೆ ಅಂಗೀಕರಿಸಲಾಯಿತು. ಸೋನಿಯಾ ಗಾಂಧಿ ಅವರು ಉತ್ತರಪ್ರದೇಶ ಮತ್ತು ಮುರದಾಬಾದ್ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಕೀಲ ಸುಧೀರ್ ಓಝಾ ಅವರು ಸಲ್ಲಿಸಿದ ದೂರನ್ನು ಸ್ವೀಕರಿಸಿದ ನ್ಯಾಯಾಧೀಶ ಎಚ್. ಕೆ. ಶ್ರೀವಾತ್ಸವ ಅವರು ಪ್ರಕರಣವನ್ನು ವಿಚಾರಣೆಗಾಗಿ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಕಳೆದ ಡಿಸೆಂಬರಿನಲ್ಲಿ ಮ್ಯಾಜಿಸ್ಟ್ರೇಟ್ ಅವರು ಈ ದೂರನ್ನು ವಜಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಓಝಾ ಅವರು ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ದುರ್ಗಾದೇವಿಯಂತೆ ಕಾಣಿಸುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭಿತ್ತಿಚಿತ್ರವು ಟಿವಿ ಹಾಗೂ ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.

2008: ಹೊಗೇನಕಲ್ ಸಮಗ್ರ ನೀರು ಸರಬರಾಜು ಯೋಜನೆಯನ್ನು ಜಾರಿ ಮಾಡಲು ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಗೊತ್ತುವಳಿಯನ್ನು ತಮಿಳುನಾಡು ವಿಧಾನಸಭೆಯು ಅಂಗೀಕರಿಸಿತು. 1,334 ಕೋಟಿ ರೂಪಾಯಿಗಳ ಜಪಾನ್ ಆರ್ಥಿಕ ನೆರವಿನ ಯೋಜನೆಯನ್ನು ಜಾರಿ ಮಾಡುವಾಗ ಕರ್ನಾಟಕವು ವಿರೋಧ ವ್ಯಕ್ತಪಡಿಸದಂತೆ ನೋಡಿಕೊಳ್ಳಬೇಕು ಎಂದು ಗೊತ್ತುವಳಿಯನ್ನು ಮಂಡಿಸಿದ ಸ್ಥಳೀಯಾಡಳಿತ ಸಚಿವ ಎಂ.ಕೆ. ಸ್ಟ್ಯಾಲಿನ್ ಅವರು ಕೇಂದ್ರವನ್ನು ಒತ್ತಾಯಿಸಿದರು. ಕರ್ನಾಟಕದ ಗಡಿಯಲ್ಲಿರುವ ಹೊಗೇನಕಲ್ಲಿನಲ್ಲಿ ನೀರು ಸರಬರಾಜು ಯೋಜನೆ ಜಾರಿ ಮಾಡುವುದಕ್ಕೆ ಬಿಜೆಪಿಯ ಕರ್ನಾಟಕ ಘಟಕ ಮತ್ತು ಇತರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಹೊಗೇನಕಲ್ಲಿನಲ್ಲಿ ಧರಣಿ ನಡೆಸಿದ್ದರ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಈ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

2008: ಲೋಕಾಯುಕ್ತ ತನಿಖೆಗೆ ಒಳಗಾಗಿದ್ದ ಹತ್ತು ಅಧಿಕಾರಿಗಳ ಹೆಸರನ್ನು ಐಎಎಸ್ ಗೆ ಬಡ್ತಿ ನೀಡಲು ಶಿಫಾರಸು ಮಾಡಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್  ವಜಾಗೊಳಿಸಿತು. ಅಧಿಕಾರಿಗಳ ಹೆಸರು ಶಿಫಾರಸು ಮಾಡಿರುವ ಕೃಷ್ಣ ಸರ್ಕಾರದ ಕ್ರಮ ಸಮರ್ಥನೀಯವಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನ್ಯಾಯಮೂರ್ತಿ ಸಿ.ಕೆ. ಠಕ್ಕರ್ ಹಾಗೂ ಡಿ.ಕೆ. ಜೈನ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.

2008: ಕೇಂದ್ರದ ಮಾಜಿ ಸಚಿವ ಹಾಗೂ ಬಿಹಾರದ ಬಿಜೆಪಿ ಮಾಜಿ ಮುಖಂಡ ಜೈ ನಾರಾಯಣ ಪ್ರಸಾದ್ ನಿಷಾದ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ನಿಷಾದ್, ತಮ್ಮ ಮಾತೃ ಪಕ್ಷ ಬಿಜೆಪಿ ತ್ಯಜಿಸಿದ್ದರಿಂದ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ ಎಂದು  ರಾಜ್ಯಸಭಾ ಅಧ್ಯಕ್ಷ ಹಮಿದ್ ಅನ್ಸಾರಿ ತಿಳಿಸಿದರು. ನಿಷಾದ್, 2005ರ ಚುನಾವಣೆಯಲ್ಲಿ ಆರ್ ಜೆ ಡಿ ಪರ ಚುನಾವಣಾ ಪ್ರಚಾರ ಮಾಡಿದ್ದರಿಂದ ಸುಷ್ಮಾ ಸ್ವರಾಜ್ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

2008: ಹಿರಿಯ ಧುರೀಣ ಎ. ಬಿ. ಬರ್ಧನ್ ಅವರು ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ 4ನೇ ಬಾರಿಗೆ ಆಯ್ಕೆಯಾದರು. ಹೈದರಾಬಾದಿನಲ್ಲಿ ಪಕ್ಷದ 20ನೇ ರಾಷ್ಟ್ರೀಯ ಸಮ್ಮೇಳನದ ಮುಕ್ತಾಯ ದಿನ ನಡೆದ ಚುನಾವಣೆಯಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾದರು. ಪಕ್ಷದ ನಲಗೊಂಡ ಕ್ಷೇತ್ರದ ಸಂಸದ ಎಸ್. ಸುಧಾಕರ್ ರೆಡ್ಡಿ ಅವರು ಉಪ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 

2008: ವಾಯವ್ಯ ಚೀನಾದ ಜಿಯಾಂಗ್ ಉಗುರ್ ಪ್ರಾಂತ್ಯದಲ್ಲಿ ಪಟಾಕಿ ವಿಲೇವಾರಿ ಕೇಂದ್ರದಲ್ಲಿ ಪಟಾಕಿಗಳನ್ನು ನಾಶಪಡಿಸಲು ಯತ್ನಿಸಿದಾಗ ಸಂಭವಿಸಿದ ಸ್ಛೋಟದಿಂದ 25 ಮಂದಿ ಮೃತರಾಗಿ ಏಳು ಜನರಿಗೆ ಗಾಯಗಳಾದವು.

2008: ಗ್ರಂಥಾಲಯ ಇಲಾಖೆಯನ್ನು ದೇಶದಲ್ಲಿಯೇ ಮಾದರಿಯನ್ನಾಗಿ ರೂಪಿಸಿದ ಕೀರ್ತಿಗೆ ಭಾಜನರಾಗಿರುವ ಇಲಾಖೆಯ ನಿರ್ದೇಶಕ ಪಿ.ವೈ.ರಾಜೇಂದ್ರ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ `ರಂಗನಾಥನ್- ಕೌಲ ಪ್ರತಿಷ್ಠಾನ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಭಾರತೀಯ ಶೈಕ್ಷಣಿಕ ಗ್ರಂಥಾಲಯಗಳ ಸಂಘ, ಭಾರತೀಯ ಸಾರ್ವಜನಿಕ ಗ್ರಂಥಾಲಯಗಳ ಸಂಘ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನೌಕರರ ಸಂಘ, ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ಹಾಗೂ ರಂಗನಾಥನ್- ಕೌಲ ಪ್ರತಿಷ್ಠಾನ ಜಂಟಿಯಾಗಿ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.

2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ  ನೀಡಿದ ಕೊಡುಗೆ ಬಗ್ಗೆ  ತನ್ನ ಬಳಿ ಇರುವ ದಾಖಲೆಗಳಲ್ಲಿ ಯಾವ ಮಾಹಿತಿಯೂ ಇಲ್ಲ ಎಂಬ ಆಘಾತಕಾರಿ ವಿಚಾರವನ್ನು  ಭಾರತ ಸರ್ಕಾರ ಬಹಿರಂಗಗೊಳಿಸಿತು. ದೆಹಲಿಯ ದೇವ್ ಅಶಿಷ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕುಗಳ ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವನ್ನು  ಒಪ್ಪಿಕೊಂಡರು. ಸ್ವತಃ ಭಟ್ಟಾಚಾರ್ಯ ಅವರು ಈದಿನ  ಈ ವಿಚಾರ  ಬಹಿರಂಗ ಪಡಿಸಿದರು. ಭಟ್ಟಾಚಾರ್ಯ ಅವರು ಐದು ಪ್ರಶ್ನೆಗಳೊಂದಿಗೆ ಕೇಂದ್ರ ಗೃಹ ಸಚಿವಾಲಯವನ್ನು  ಸಂಪರ್ಕಿಸಿ `ಸ್ವಾತಂತ್ರ್ಯ ಚಳವಳಿಯಲ್ಲಿ ಬೋಸ್ ಅವರು ಯಾವ ಪಾತ್ರ ವಹಿಸಿದ್ದರು.' ಎಂಬ ಬಗ್ಗೆ ಮಾಹಿತಿ  ಬೇಕು ಎಂದು ಕೇಳಿದ್ದರು. ಬೋಸ್ ಅವರ ಬಗ್ಗೆ  ಏನಾದರೂ ರಾಜತಾಂತ್ರಿಕ ಶಿಷ್ಟಾಚಾರವನ್ನು  ಭಾರತ ಇಟ್ಟುಕೊಂಡಿದೆಯೇ? ಎಲ್ಲಾದರೂ ಅಂತಹ ರಾಜತಾಂತ್ರಿಕ ಶಿಷ್ಟಾಚಾರಕ್ಕೆ ಬೋಸ್ ಯೋಗ್ಯರಾಗಿದ್ದಾರೆಯೇ ಎಂದೂ ಅರ್ಜಿದಾರರು ಮಾಹಿತಿ  ಬಯಸಿದ್ದರು. `ನಿಮ್ಮ ಪತ್ರದಲ್ಲಿ ತಿಳಿಸಲಾಗಿರುವ ಅಂಶಗಳಿಗೆ ಸಂಬಂಧಿಸಿದ ಮಾಹಿತಿ ಲಭ್ಯವಿಲ್ಲ' ಎಂದು ಗೃಹ ಸಚಿವಾಲಯದ ಉಪ ಕಾರ್ಯದರ್ಶಿ ಎಸ್. ಕೆ. ಮಲ್ಹೋತ್ರ ಭಟ್ಟಾಚಾರ್ಯ ಅವರ ಅರ್ಜಿಗೆ ಉತ್ತರವಾಗಿ ಬರೆದ ಪತ್ರದಲ್ಲಿ ತಿಳಿಸಿದರು. `ಈ ಪ್ರತಿಕ್ರಿಯೆ ಕಂಡು ನನಗೆ ಆಘಾತವಾಯಿತು' ಎಂದು ಭಟ್ಟಾಚಾರ್ಯ ಇದಕ್ಕೆ ಪ್ರತಿಕ್ರಿಯಿಸಿದರು. ನೇತಾಜಿ ಸುಭಾಶ್  ಚಂದ್ರ ಬೋಸ್ ಅವರು ಭಾರತ ಮತ್ತು  ಭಾರತದ ಜನತೆಗೆ ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ಜನರಿಗೆ ಇರುವ ಕೆಚ್ಚಿನ ಬಗ್ಗೆ  ಜಾಗೃತಿ  ಮೂಡಿಸಲು ಸಾಕಷ್ಟು  ಕೆಲಸ ಮಾಡಿರಬಹುದು. ಆದರೆ ಇದನ್ನು  ಸಮರ್ಥಿಸಲು ಬೇಕಾದ ಯಾವ ದಾಖಲೆಗಳೂ ಇಲ್ಲ' ಎಂದು ಸರ್ಕಾರ ಹೇಳುತ್ತದೆ ಎಂದು ಭಟ್ಟಾಚಾರ್ಯ ನುಡಿದರು. ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ್ದು ಮತ್ತು ಮಣಿಪುರದ ಮೋರೆಹ್ ನಲ್ಲಿ ಹಿಮ್ಮೆಟ್ಟುವ ಮುನ್ನ ಭಾರತದ ಮುಖ್ಯಭಾಗದ ಅತ್ಯಂತ ಸಮೀಪಕ್ಕೆ  ಈ ಸೇನೆ  ಬಂದಿತ್ತು ಎಂಬುದು ಐತಿಹಾಸಿಕ ವಾಸ್ತವಾಂಶ. ಆದರೆ ನನ್ನ ಅರ್ಜಿಗೆ ಸ್ಪಂದಿಸಿ ಈ ವಿಚಾರವನ್ನು ದಾಖಲೆಗೆ ಸೇರಿಸಲು ಸರ್ಕಾರ ನಿರಾಸಕ್ತವಾಗಿದೆ ಎಂದು ಭಟ್ಟಾಚಾರ್ಯ ಹೇಳಿದರು.

2007: ಕೇಂದ್ರೀಯ  ಆಡಳಿತಾತ್ಮಕ ಸುಧಾರಣಾ  ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ಮತ್ತು  ಖ್ಯಾತ ಸಂಸ್ಕೃತ ವಿದ್ವಾಂಸ ವಾಸುದೇವ ಪೋದ್ದಾರ ಅವರನ್ನು ಸಂವಿಧಾನ  ತಜ್ಞ ಮಾಜಿ ರಾಜ್ಯಸಭಾ ಸದಸ್ಯ ಎಲ್. ಎಂ. ಸಿಂಘ್ವಿ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ದಶರಥ ಮಲ್ ಸಿಂಘ್ವಿ ಶತಮಾನೋತ್ಸವ ಆಚರಣೆ  ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರಿಗೆ  ಬ್ಯಾಂಕಾಕ್ ಮೂಲದ ಏಷ್ಯಾ ಮತ್ತು ಶಾಂತ ಸಾಗರ ವಲಯಕ್ಕಾಗಿ  ರಚಿಸಲಾದ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಆಯೋಗವು (ಯುನೆಸ್ಕ್ಯಾಪ್) `ಯುನೆಸ್ಕ್ಯಾಪ್' ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿತು. ಆಯೋಗವು ತನ್ನ ಅರವತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬ್ಯಾಂಕಾಕಿನಲ್ಲಿ ನಡೆದ ಸಮಾರಂಭದಲ್ಲಿ ಅಮರ್ತ್ಯ ಸೇನ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿತು. 

2006: ಧಾರವಾಡ, ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ 2006-07ನೇ ಸಾಲಿನಲ್ಲೂ 20 ಕೋಟಿ ರೂಪಾಯಿ ಮೀಸಲಿಟ್ಟಿರುವುದಾಗಿ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರಕಟಿಸಿದರು.

2006: ಭಾರತದ ಗಗನ್ ನಾರಂಗ್ ಅವರು ಚೀನಾದ ಗುವಾಂಗ್ ಜೊನಲ್ಲಿ ಐ ಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವರ್ಣಪದಕ ಗೆದ್ದು 2008ರ ಬೀಜಿಂಗ್ ಒಲಿಂಪಿಕ್ ಕೂಟಕ್ಕೆ ನೇರ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಲಂಡನ್ನಿನಲ್ಲಿ ಈ ದಿನ ಜಸ್ಟಿನ್ ವಿಟ್ಟಿ ಎಂಬ ಮಹಿಳೆ ಹೆಣ್ಣು ಮಗು ಒಂದಕ್ಕೆ ಜನ್ಮನೀಡಿ ವಿಶಿಷ್ಠ ದಾಖಲೆ ನಿರ್ಮಾಣದ ಅಪರೂಪದ ಕೀರ್ತಿಗೆ ಪಾತ್ರಳಾದಳು. ಅಪರೂಪದ ಈ ದಾಖಲೆ ಏನೆಂದರೆ ಈ ಮಹಿಳೆ ಮತ್ತು ಆಕೆಯ ತಾಯಿ ಕೂಡಾ ಇದೇ ದಿನಾಂಕದಂದು ಹುಟ್ಟಿದ್ದು! ಇದರಿಂದಾಗಿ ಅಜ್ಜಿ, ತಾಯಿ ಮತ್ತು ಮೊಮ್ಮಗಳು ಈ ಮೂರು ತಲೆಮಾರಿನವರಿಗೆ ಒಂದೇ ದಿನ ಹುಟ್ಟುಹಬ್ಬ ಆಚರಿಸುವ ಯೋಗ ಲಭಿಸಿತು. ಪ್ರತಿ 1,33,225 ಜನರಲ್ಲಿ ಒಬ್ಬರು ಮಾತ್ರ ಈ ರೀತಿಯ ದಾಖಲೆಗೆ ಪಾತ್ರರಾಗುತ್ತಾರೆ.

2006: ಆಂಧ್ರ್ರಪ್ರದೇಶದ ಕರೀಂನಗರ ಜಿಲ್ಲೆಯ ಕಿಶನ್ ರಾವ್ ಪೇಟೆ ಗ್ರಾಮದಲ್ಲಿ ಜಿಲ್ಲಾ ಹೋಂಗಾರ್ಡ್ ಚಂದ್ರಲೀಲಾ (28) ಮತ್ತು ಕೈದಿ ಸ್ವಪ್ನಾ (25) ಎಂಬ ಇಬ್ಬರು ಮಹಿಳೆಯರು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸ್ವಪ್ನಾ ಜಿಲ್ಲಾ ಕಾರಾಗೃಹದಲ್ಲಿ ಇದ್ದಾಗ ಇವರಲ್ಲಿ ಸ್ನೇಹ ಅಂಕುರಿಸಿ ಅದು ಪ್ರೇಮವಾಗಿ ಬೆಳೆದು ವಿವಾಹದಲ್ಲಿ ಪರ್ಯವಸಾನಗೊಂಡಿತು. ಗ್ರಾಮಸ್ಥರೂ ಈ ಜೋಡಿಯನ್ನು ಮನತುಂಬಿ ಹರಸಿದರು.

2006: ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನವು 2005ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗೆ ಕವಯಿತ್ರಿ ಪ್ರತಿಭಾ ನಂದಕುಮಾರ್ ಅವರನ್ನು ಆಯ್ಕೆ ಮಾಡಿತು.

2000: ಜಮೈಕಾದ ಕಿಂಗ್ ಸ್ಟನ್ನಿನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಟರ್ಿ್ನ ವಾಲ್ಷ್ ಅವರು ತಮ್ಮ 435ನೇ ವಿಕೆಟನ್ನು ಪಡೆದು ಕಪಿಲ್ ದೇವ್ ಅವರ 434 ಟೆಸ್ಟ್ ವಿಕೆಟ್ ದಾಖಲೆಯನ್ನು ಮುರಿದರು.

1979: ಭಾರತದ ಎಸ್. ವಿಜಯಲಕ್ಷ್ಮಿ ಹುಟ್ಟಿದ ದಿನ. ಈಕೆ ಚೆಸ್ ನಲ್ಲಿ ಭಾರತದ ಪ್ರಪ್ರಥಮ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಎಂಬ ಕೀರ್ತಿಗೆೆ ಪಾತ್ರರಾದರು.

1977: ಕ್ಯಾನರಿ ದ್ವೀಪದ ಲಾಸ್ ರ್ಹೋಡ್ಸ್ ವಿಮಾನ ನಿಲ್ದಾಣದ ರನ್ ವೇಯಲ್ಲಿ ಪಾನ್ ಅಮೆರಿಕನ್ ಮತ್ತು ಕೆ ಎಲ್ ಎಂ ಜಂಬೋ ವಿಮಾನಗಳು ಡಿಕ್ಕಿ ಹೊಡೆದು 574 ಮಂದಿ ಅಸು ನೀಗಿದರು. ಇದು ವಾಯುಯಾನ ಇತಿಹಾಸದ ಅತಿ ಭೀಕರ ದುರಂತ ಎನಿಸಿತು. 

1968: ಬಾಹ್ಯಾಕಾಶಕ್ಕೆ ಮೊತ್ತ ಮೊದಲ ಬಾರಿಗೆ ಪಯಣಿಸಿದ ಗಗನಯಾನಿ ಯೂರಿ ಗಗಾರಿನ್ ಮಾಸ್ಕೊದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಮೃತರಾದರು. ಅವರು ಮೃತರಾದ ಗಾಸ್ತಸ್ಕ್ ಪಟ್ಟಣಕ್ಕೆ ಗಗಾರಿನ್ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

1958: ನಿಖಿತ ಕ್ರುಶ್ಚೇವ್ ಅವರು ಸೋವಿಯತ್ ಕಮ್ಯೂನಿಸ್ಟ್ ಪಕ್ಷದ ಮೊದಲ ಕಾರ್ಯದರ್ಶಿ ಹುದ್ದೆಯ ಜೊತೆಗೆ ಸೋವಿಯತ್ ಪ್ರಧಾನಿಯಾದರು.

1863: ಲಕ್ಷುರಿ ಕಾರು ಮತ್ತು ವಿಮಾನ ಎಂಜಿನ್ ಗಳ ತಯಾರಕ ಸಂಸ್ಥೆ ರೋಲ್ಸ್- ರಾಯ್ಸ್ ಲಿಮಿಟೆಡ್ಡಿನ ಸ್ಥಾಪಕ ಸರ್ (ಫ್ರೆಡರಿಕ್) ಹೆನ್ರಿ ರಾಯ್ಸ್ (1863-1933) ಜನ್ಮದಿನ.

1845: ವಿಲ್ಹೆಮ್ ಕೊನ್ರಾಡ್ ರಾಂಟ್ ಜೆನ್ (1845-1923) ಹುಟ್ಟಿದ ದಿನ. ಜರ್ಮನ್ ಭೌತತಜ್ಞನಾದ ಈತ ಭೌತವಿಜ್ಞಾನಕ್ಕೆ ನೀಡಲಾಗುವ `ನೊಬೆಲ್' ಪ್ರಶಸ್ತಿಯನ್ನು 1901ರಲ್ಲಿ ಪಡೆಯುವ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ. ಪಾರದರ್ಶಕವಲ್ಲದ ವಸ್ತುಗಳ ಮುಖಾಂತರ ಹಾದುಹೋಗುವ ಕ್ಷ-ಕಿರಣಗಳ (ಎಕ್ಸ್-ರೇಸ್) ಪತ್ತೆಗಾಗಿ ಈತನಿಗೆ ಈ ಪ್ರಶಸ್ತಿ ಲಭಿಸಿತು.

1625: ಮೊದಲನೆಯ ಜೇಮ್ಸ್ ಸಾವಿನ ಬಳಿಕ ಮೊದಲನೆಯ ಚಾರ್ಲ್ಸ್ ಇಂಗ್ಲಿಷ್ ಸಿಂಹಾಸನವನ್ನು ಏರಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, March 30, 2009

Brinjal Festival..!

Brinjal Festival..!


Five Organizations namely Association for India's Development (AID)- Bangalore, Sahaja Samrudha, Samvada, Jaivika Krishi Society (JKS) and Maysore Horticulture Society (MHS) have jointly organized a unique first -ever Brinjal Festival at MHS Hall, Lalbaug in Bangalore on 5th Sunday, 11 am to 7 pm. 

Nethrakere Udaya Shankara

Why this Brinjal Festival, do you know?
 
Brinjal which is popularly known as badanekayi in Kannada is the king of vegetables which comes with its own crown! It is a good and tasty food, but the technology of Genetically Modified (GM) Foods pose a grave threat to the diversity of Brinjal and other vegetables and also to our health as consumers.

Brinjal Festival is being organized in this backlash.

This is an event that will celebrate the diversity of Brinjals and contemplate our role in protecting it.

Good Food, Healthy Food, Safe Food… should be a primary concern of all of us. The Brinjal festival is an attempt to bring a better consciousness and respect for our rich diverse food.

Genetically Modified (GM) food crops pose a grave threat to the diversity and to our health as consumers. Through this Brinjal Festival all of us will be informed about the choices of food, one of most fundamental necessities.

What’s in store?

    * Food Stalls with brinjal specials for you to savour
    * Cooking competition for innovative Brinjal dishes
    * Drawing competition and more fun events for kids
    * Brinjal Diversity Exhibition showcasing more than 30 varieties of brinjal
    * Screening of Mahesh Bhatt’s film Poison on the Platter
    * Awareness campaign about GM foods and the risk to our health and environment.
    * Meet scientists, farmers, doctors and Ayurveda practitioners and some well known celebrities.

You can participate in the competetions also. To register for competitions, visit  http://bangalore.aidindia.org/cms/?q=brinjalMela.

For any queries:

 
Or Contact:
 
Sejal - 9901201279 (sejalrparikh@gmail.com)
Siddesh - 9880600840 (tosiddesh@yahoo.com)
Pulkit - 9916173750 (pulkitparikh@gmail.com)
Guru - 9845294184 (mguru.aid@gmail.com)
 Sejal [http://sejswhirlpool.wordpress.com/] 

Don't Miss the first-ever Brinjal Festival in Bangalore and note down the Venue: and time.

Venue: MHS Hall, Lalbaug (Double road gate)
Date/Time: April 5th Sunday, 11am - 7pm


ಇಂದಿನ ಇತಿಹಾಸ History Today ಮಾರ್ಚ್ 26

ಇಂದಿನ ಇತಿಹಾಸ

ಮಾರ್ಚ್ 26
ದೇಶದಾದ್ಯಂತ ಕುತೂಹಲ ಕೆರಳಿಸಿದ್ದ ಭಾರತೀಯ ತೈಲ ನಿಗಮದ ಮಾರಾಟ ಅಧಿಕಾರಿ ಮಂಜುನಾಥ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವನ್ ಕುಮಾರ್ ಮಿತ್ತಲ್ ಗೆ ಉತ್ತರ ಪ್ರದೇಶದ ಲಖೀಂಪುರದ ಜಿಲ್ಲಾ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಉಳಿದ ಏಳುಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2008: ಜಾಗತಿಕ ತಾಪಮಾನ ಏರಿಕೆಗೆ ಮಾನವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕಳೆದ ಏರಡು ದಶಕಗಳಲ್ಲಿ ವೈಜ್ಞಾನಿಕವಾಗಿ ಸಂಗ್ರಹಿಸಿದ ಅಂಕಿ-ಅಂಶಗಳಿಂದ ಇದು ಸಾಬೀತಾಗಿದೆ ಎಂದು 'ಗ್ರೀನ್ ಪೀಸ್' ಸಂಸ್ಥೆ ಈದಿನ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿತು. ಕಳೆದ ಒಂದು ಶತಮಾನದಲ್ಲಿ ಭೂಮಿಯ ತಾಪಮಾನ 0.6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಏರಿದೆ. ಈ ಶತಮಾನದ ಅಂತ್ಯದ ವೇಳೆಗೆ ತೈಲ ಇಂಧನ ಬಳಕೆ ಹಾಗೂ ಭೂಮಿಯ ಅತಿಯಾದ ಬಳಕೆಯಿಂದ ಇಂಗಾಲದ ಡೈಆಕ್ಸೈಡ್ ಹಾಗೂ ಮಿಥೇನ್ ಅನಿಲ ಹೊರಸೂಸುವಿಕೆ ಹೆಚ್ಚಾಗಲಿದೆ. ಜಗತ್ತಿನಾದ್ಯಂತ ಭೂ ತಾಪಮಾನ 5-6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಹೆಚ್ಚಲಿದೆ ಎಂದು `ಗ್ರೀನ್ಪೀಸ್' ಸಂಸ್ಥೆ ಹೇಳಿತು. ಉಷ್ಣಾಂಶದಲ್ಲಿ ಕೇವಲ 2 ಡಿಗ್ರಿ ಹೆಚ್ಚಾದರೂ ಭೂಮಿಯ ಬಹುತೇಕ ಭಾಗ ಮಾನವರು ವಾಸಿಸಲು ಅನರ್ಹವಾಗುತ್ತದೆ. ಹಲವು ಸಸ್ಯ, ಪ್ರಾಣಿ ಸಂಕುಲಗಳು ಭೂಮಿಯಿಂದ ಕಣ್ಮರೆಯಾಗುತ್ತವೆ ಎಂದು ಈ ವರದಿ ಹೇಳಿತು. ಮುಂದಿನ 50 ವರ್ಷಗಳಲ್ಲಿ ಬಿಸಿಗಾಳಿ ಬೀಸುವುದು ಹೆಚ್ಚಾಗಲಿದೆ. ಬೇಸಿಗೆಯಲ್ಲಿ ಇನ್ನಷ್ಟು ಉರಿ ಉಂಟಾಗಲಿದೆ. ಚಳಿಗಾಲದಲ್ಲಿ ಚಳಿಯ ಪ್ರಮಾಣ  ಇನ್ನಷ್ಟು ಹೆಚ್ಚಲಿದೆ. ಕೈಗಾರಿಕಾ ಕ್ರಾಂತಿಯ ನಂತರ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ 10 ಪಟ್ಟು ಹೆಚ್ಚಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತ ಮತ್ತು ಚೀನಾದಂತಹ ದೇಶಗಳು ಇಂಗಾಲದ ಡೈಆಕ್ಸೈಡನ್ನು ದೊಡ್ಡ ಪ್ರಮಾಣದಲ್ಲಿ ಹೊರಸೂಸುತ್ತಿವೆ ಎಂದು ವರದಿ ಹೇಳಿತು. ಜಾಗತಿಕ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಪ್ರಮಾಣದಲ್ಲಿ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ  ಶೇ 60ರಷ್ಟು ಅನಿಲವನ್ನು ಬಿಡುಗಡೆ ಮಾಡುತ್ತಿವೆ. ಭಾರತ ಶೇ 3ರಷ್ಟು ಹಾಗೂ ಚೀನಾ ಶೇ 8ರಷ್ಟು ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತಿವೆ ಎಂದು ಗ್ರೀನ್ ಪೀಸ್ ತಿಳಿಸಿತು. ಇತ್ತೀಚಿನ ಹವಾಮಾನ ವೈಪರೀತ್ಯಕ್ಕೆ  ತಾಪಮಾನ ಏರಿಕೆಯೇ ಕಾರಣ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಉಷ್ಣವಲಯದಲ್ಲಿ ಬರಗಾಲ ಸಾಮಾನ್ಯವಾಗಿದೆ. ಚಂಡಮಾರುತಗಳು ಪದೇ ಪದೇ ಏಳುತ್ತಿವೆ. ಪರ್ವತ ಪ್ರದೇಶಗಳಲ್ಲಿ ಹಿಮ ಕರಗುತ್ತಿದ್ದರೆ, ಸಮುದ್ರ ಮಟ್ಟ ಒಂದೇ ಸಮನೇ ಏರುತ್ತಿದೆ ಎಂದು ಈ ವರದಿ ಅಭಿಪ್ರಾಯ ಪಟ್ಟಿತು. ಹಸಿರು ಅನಿಲದ ಪರಿಣಾಮ ತಗ್ಗಿಸಲು ವಿಶ್ವದ ದೊಡ್ಡ ದೇಶಗಳ ರಾಜಧಾನಿಗಳಲ್ಲಿ ಮಾರ್ಚ್ 29ರ ರಾತ್ರಿ `ಅರ್ಥ್ ಅವರ್' ಆಚರಿಸಿ, ಒಂದು ಗಂಟೆ ಕಾಲ ಎಲ್ಲಾ ದೀಪಗಳನ್ನೂ ದೀಪಗಳನ್ನು ಆರಿಸಲಾಗುವುದು. ತನ್ಮೂಲಕ ವಿದ್ಯುಚ್ಛಕ್ತಿ ಉಳಿಸುವುದು ಈ ಆಂದೋಲನದ ಉದ್ದೇಶ.

2008: ಸಣ್ಣ ಕಾರು `ನ್ಯಾನೊ' ಪ್ರದರ್ಶಿಸಿ ವಿಶ್ವವನ್ನು ಅಚ್ಚರಿಯಲ್ಲಿ ಮುಳುಗಿಸಿದ್ದ ಭಾರತದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆ ಟಾಟಾ ಮೋಟಾರ್ಸ್, ಈಗ ಪ್ರತಿಷ್ಠಿತ ವಿಲಾಸಿ ಕಾರು ಬ್ರಾಂಡುಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ಗಳನ್ನು (ಜೆ ಎಲ್ ಆರ್) ಸ್ವಾಧೀನಪಡಿಸಿಕೊಂಡು ಜಾಗತಿಕ ಆಟೊಮೊಬೈಲ್ ರಂಗದಲ್ಲಿ ಹೊಸ ಇತಿಹಾಸ ಬರೆಯಿತು. ಅನೇಕ ತಿಂಗಳ ಊಹಾಪೋಹ ಮತ್ತು ಅನೇಕ ಬಾರಿ ಮುಂದೂಡಿಕೆ ನಂತರ ಕೊನೆಗೂ ಟಾಟಾ ಮೋಟಾರ್ಸ್,  ಅಮೆರಿಕದ ಫೋರ್ಡ್ ಮೋಟಾರ್ ಕಂಪನಿಯ ವಿಲಾಸಿ ಕಾರು ಬ್ರಾಂಡುಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ಗಳನ್ನು (ಜೆ ಎಲ್ ಆರ್) 2.3 ಶತಕೋಟಿ ಡಾಲರುಗಳಿಗೆ ಖರೀದಿಸಿತು. ಅಂತಿಮವಾಗಿ  ಅಂದಾಜು ರೂ 9200 ಕೋಟಿಗಳಿಗೆ ಈ ಸ್ವಾಧೀನ ಪ್ರಕ್ರಿಯೆ  ಪೂರ್ಣಗೊಂಡಿತು. ಆಟೊಮೊಬೈಲ್ ರಂಗದಲ್ಲಿ ಭಾರತದ ಸಂಸ್ಥೆಯೊಂದರ ಅತಿ ದೊಡ್ಡ ಸ್ವಾಧೀನ  ಪ್ರಕ್ರಿಯೆ ಇದು. ರೂ.1 ಲಕ್ಷ ಮೌಲ್ಯದ ಅಗ್ಗದ ಕಾರು ತಯಾರಿಕೆಯಿಂದ ಹಿಡಿದು ದುಬಾರಿ ಕಾರು ತಯಾರಿಕೆಯ ಹೆಗ್ಗಳಿಕೆಯು ಟಾಟಾ ಮೋಟಾರ್ಸಿನ ಪಾಲಾಯಿತು.

2008: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಈ ಹಿಂದೆ ನಾಗರಹೊಳೆಯಲ್ಲಿ ಉಳಿದುಕೊಂಡಿದ್ದ ಕೋಣೆಯಲ್ಲಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರೂ ಹಿಂದಿನ ದಿನ ರಾತ್ರಿ ವಾಸ್ತವ್ಯ ಹೂಡಿದರು. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದ ಅವರು ಮಧ್ಯರಾತ್ರಿ 12.30ರ ವೇಳೆಗೆ ನಾಗರಹೊಳೆ ಅರಣ್ಯದಲ್ಲಿನ ಕಾವೇರಿ ಲಾಜ್ ಗೆ ಆಗಮಿಸಿದರು. ಇಂದಿರಾಗಾಂಧಿ ಅವರೂ ಚಿಕ್ಕಮಗಳೂರು ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಇಲ್ಲಿಯೆ ಉಳಿದುಕೊಂಡಿದ್ದರು. ರಾಹುಲ್ ಗಾಂಧಿ ಅವರಿಗೆ ನಾಗರಹೊಳೆ ಕಾಡಿನಲ್ಲಿಯೇ ಇದ್ದ ಕಿಂಗ್ಸ್ ಸ್ಯಾಂಚುರಿ ರೆಸಾರ್ಟಿನಲ್ಲಿ ಎರಡು ಕೋಣೆಗಳನ್ನು ಮುಂಗಡ ಕಾಯ್ದಿರಿಸಿದ್ದರೂ ಅವರು ಕಾವೇರಿ ಲಾಜ್ನಲ್ಲಿಯೇ ಉಳಿದುಕೊಂಡರು. ಇಂದಿರಾಗಾಂಧಿ ಅವರಿಗೆ ಊಟ ಬಡಿಸಿದ್ದ ರವೀಂದ್ರ ನಾಯರ್ ಅವರೇ ರಾತ್ರಿ ಊಟ ಹಾಗೂ ಈದಿನ ಬೆಳಗ್ಗೆ ತಿಂಡಿಯನ್ನು ರಾಹುಲ್ ಗಾಂಧಿ ಅವರಿಗೂ ಬಡಿಸಿದರು.

 2008: ಪದವಿ ಪೂರ್ವ (ಪಿ.ಯು) ಕಾಲೇಜು ಉಪನ್ಯಾಸಕರ ನೇಮಕಾತಿಯ ಅರ್ಹತಾ ಮಾನದಂಡವಾಗಿ ಇತ್ತೀಚೆಗೆ ಸೇರಿಸಲಾಗಿದ್ದ ಬಿ.ಇಡಿ ಪದವಿಯನ್ನು ಕೈ ಬಿಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಪಿ.ಯು. ಉಪನ್ಯಾಸಕರಾಗಲು ಸ್ನಾತಕೋತ್ತರ ಪದವಿ ಜತೆ ಬಿ.ಇಡಿ ಪದವಿ ಇರಬೇಕೆಂಬ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ಈ ತೀರ್ಮಾನ ತೆಗೆದುಕೊಂಡಿತು.

2008: ಹಣ ದುರುಪಯೋಗಪಡಿಸಿದ ಆರೋಪಕ್ಕೆ ಗುರಿಯಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರನ್ನು ಮುಂಬೈಯಲ್ಲಿ ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಮುಂಬೈ ಪೊಲೀಸಿನ ಆರ್ಥಿಕ ಅವ್ಯವಹಾರ ತಡೆ ಘಟಕದ (ಇಒಡಬ್ಲ್ಯು) ಅಧಿಕಾರಿಗಳು ದಾಲ್ಮಿಯ ಅವರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನ್ಯಾಯಾಧೀಶ ಆರ್. ಕೆ. ವಾಂಖೇಡೆ ಅವರು 25,000 ರೂಪಾಯಿ ಮುಚ್ಚಳಿಕೆಯ ಮೇಲೆ ಅವರನ್ನು ಬಿಡುಗಡೆಗೊಳಿಸಿದರು.

2008: ವಿಭು ಎಂಬ 55 ದಿನಗಳ ರಣಹದ್ದಿನ ಮರಿಯೊಂದು ಬಂಧನದಲ್ಲಿ ಜನಿಸಿ, ಬದುಕುಳಿದ ವಿಶ್ವದ ಮೊದಲ ರಣಹದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹರಿಯಾಣದ ಪಿಂಜೊರಿನಲ್ಲಿ ಅರಣ್ಯ ಇಲಾಖೆ ಸಂರಕ್ಷಿಸಿದ್ದ ಬಿಳಿ ಬೆನ್ನಿನ ರಣಹದ್ದು ಜೋಡಿಯೊಂದು ತನ್ನ ಜಾತಿಯ ಜಾಯಮಾನದಂತೆ ಗೂಡು ಕಟ್ಟಿ, ಮೊಟ್ಟೆ ಇಟ್ಟು 55 ದಿನಗಳ ಹಿಂದೆ ಮರಿ ಹಾಕಿತ್ತು. ಚಂಡೀಗಢ ಸಮೀಪದ ಪಿಂಜೊರಿನ `ರಣಹದ್ದು ಸಂರಕ್ಷಣೆ ಹಾಗೂ ತಳಿ ಸಂವರ್ಧನೆ ಕೇಂದ್ರ'ದಲ್ಲಿ ಈ ಅಪರೂಪದ ಘಟನೆ ನಡೆಯಿತು ಎಂದು ಹರಿಯಾಣದ ಅರಣ್ಯ ಹಾಗೂ ಪರಿಸರ ಸಚಿವೆ ಕಿರಣ್ ಚೌಧುರಿ ತಿಳಿಸಿದರು. ಮರಿ ಚೆನ್ನಾಗಿ ಬೆಳೆಯುತ್ತಿದ್ದು ಮುಂದಿನ 45 ದಿನಗಳಲ್ಲಿ ಹಾರುವ ಸಾಮರ್ಥ್ಯ ಪಡೆಯುವುದು. ಬಿಳಿಬೆನ್ನಿನ ರಣಹದ್ದು ಜಾತಿಯಲ್ಲಿ ಮರಿ  100 ದಿನಗಳ ಕಾಲ ಗೂಡಿನಲ್ಲಿ ಇರುತ್ತದೆ. ಗಂಡು-ಹೆಣ್ಣು ಹಕ್ಕಿಗಳು ಸಮನಾಗಿ ಮರಿಯ ಪಾಲನೆ ಮಾಡುತ್ತವೆ. ಅಳಿಯುತ್ತಿರುವ ರಣಹದ್ದುಗಳನ್ನು ಸಂರಕ್ಷಿಸಲು ಬಾಂಬೆ ನ್ಯಾಚುರಲ್ ಹಿಸ್ಟರಿ ಸಹಯೋಗದಲ್ಲಿ ಹರಿಯಾಣ ಅರಣ್ಯ ಇಲಾಖೆ ಪಿಂಜೊರಿನಲ್ಲಿ ರಣಹದ್ದು ಸಂರಕ್ಷಣಾ ಕೇಂದ್ರ ನಡೆಸಿದೆ.  

 2008: ಆಗ್ರಾ ಬಳಿಯ ಹುಲಾಸ್ ಪುರ ಗ್ರಾಮದಲ್ಲಿ ತಂದೆಯ ಜೊತೆ ಆಟವಾಡುತ್ತಿದ್ದಾಗ 45 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 3 ವರ್ಷದ ಬಾಲಕಿ ವಂದನಾಳನ್ನು 26ಗಂಟೆಗಳ ಬಳಿಕ ಸುರಕ್ಷಿತವಾಗಿ ಹೊರ ತರಲಾಯಿತು. ಸ್ಥಳದಲ್ಲೇ ಕಾದಿದ್ದ ಅಂಬುಲೆನ್ಸ್ ಮೂಲಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಂದನಾ ಹಿಂದಿನ ದಿನ  ಕೊಳವೆ ಬಾವಿಗೆ ಬಿದ್ದಿದ್ದಳು.

2008: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪ್ರಜಾವಾಣಿಯ ಹಿರಿಯ ಉಪಸಂಪಾದಕ ಕೇಶವ ಜಿ. ಝಿಂಗಾಡೆ ಆಯ್ಕೆಯಾದರು. ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷ- ಸುದರ್ಶನ ಚೆನ್ನಂಗಿಹಳ್ಳಿ, ಕಾರ್ಯ ನಿರ್ವಾಹಕನಿರ್ದೇಶಕ- ಎ.ಎಂ.ಸುರೇಶ್, ಖಜಾಂಚಿ- ದಿನೇಶ್ ಕಾರ್ಯಪ್ಪ, ಆಂತರಿಕ ಲೆಕ್ಕಪರಿಶೋಧಕ- ಬಿ.ಎನ್.ಶ್ರೀಧರ, ಹಾಗೂ ನಿರ್ದೇಶಕರಾಗಿ ಎಂ.ಎನ್. ಗುರುಮೂರ್ತಿ, ಕೆ.ಶಿವಸುಬ್ರಹ್ಮಣ್ಯ, ಕೆ.ವಿ.ಪ್ರಭಾಕರ, ಎಸ್.ಗಿರೀಶ್ ಬಾಬು, ಮಂಜುನಾಥ್ ಚಾಂದ್, ಎಂ.ಜಯರಾಮ ಅಡಿಗ, ಸುಧಾ ಹೆಗಡೆ ಹಾಗೂ ನಾಗರಾಜ ರಾ. ಚಿನಗುಂಡಿ ಆಯ್ಕೆಯಾದರು.

2008: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾದ 500 ಮೆಗಾವ್ಯಾಟ್ ಸಾಮರ್ಥ್ಯದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೊದಲನೇ ಘಟಕವನ್ನು ಸಂಪೂರ್ಣವಾಗಿ ದೇಶಕ್ಕೆ ಸಮರ್ಪಿಸಲು ಸಿದ್ಧತೆಗಳು ನಡೆದಿದ್ದು, ಪರೀಕ್ಷಾರ್ಥವಾಗಿ ಮೊದಲ ಬಾರಿಗೆ ಕಲ್ಲಿದ್ದಲು ಬಳಸಿ ಹಿಂದಿನ ದಿನ ಸಂಜೆ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಾಯಿತು. 

2008: ಗೋಧ್ರಾ ಬಳಿಕದ ಕೋಮು ಗಲಭೆಗಳ ಮರು ತನಿಖೆಗಾಗಿ  10 ದಿನಗಳ ಒಳಗೆ ವಿಶೇಷ ತನಿಖಾ ತಂಡ (ಸಿಟ್) ರಚಿಸುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತು.

2008: ಕೀರ್ತಿ ಮತ್ತು  ಅದೃಷ್ಟ ಎರಡನ್ನೂ ಗೆಲ್ಲುವ ಅತ್ಯುತ್ತಮ ಅವಕಾಶ ಹೆಸರಿಗೆ ಇದೆ ಎಂದು ಲಂಡನ್ನಿನ ಒಂದು ಅಧ್ಯಯನ ಹೇಳಿತು. ಬ್ರಿಟನ್ನಿನ ಹೆರ್ಟ್ ಫೋರ್ಡ್ ಷೈರ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ಕೆಲವು ವ್ಯಕ್ತಿಗಳ ಯಶಸ್ಸಿಗೆ ಮತ್ತು  ಕೆಲವರ ದುರದೃಷ್ಟಕ್ಕೆ  ಅವರ ಹೆಸರೇ ಕಾರಣ ಎಂದು `ದಿ ಟೈಮ್ಸ್' ವರದಿ ಮಾಡಿತು. 6500 ಮಂದಿಯ ಸಮೀಕ್ಷೆಯಿಂದ ಲಭಿಸಿದ ಫಲಿತಾಂಶವನ್ನು ಆಧರಿಸಿ ಈ ತೀರ್ಮಾನಕ್ಕೆ  ಸಂಶೋಧಕರು ಬಂದರು. ಜೇಮ್ಸ್ ಮತ್ತು  ಎಲಿಜಬೆತ್ನಂತಹ ಹೆಸರುಗಳು ಯಶಸ್ಸಿನ ಸಂಕೇತವಾಗಿದ್ದರೆ, ರಿಯಾನ್ ಮತ್ತು  ಸೋಫೀಯಂತಹ ಹೆಸರುಗಳು ಅದೃಷ್ಟದ ಸಂಕೇತಗಳು. ಆದರೆ ಜ್ಯಾಕ್ ಮತ್ತು  ಲೂಸಿಯಂತಹ ಹೆಸರುಗಳು ದುರದೃಷ್ಟಕರ ಹೆಸರುಗಳು ಎಂಬುದು ಸಮೀಕ್ಷೆಯ ಅಭಿಪ್ರಾಯ.  
2007: ದೇಶದಾದ್ಯಂತ ಕುತೂಹಲ ಕೆರಳಿಸಿದ್ದ ಭಾರತೀಯ ತೈಲ ನಿಗಮದ ಮಾರಾಟ ಅಧಿಕಾರಿ ಮಂಜುನಾಥ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವನ್ ಕುಮಾರ್ ಮಿತ್ತಲ್ ಗೆ ಉತ್ತರ ಪ್ರದೇಶದ ಲಖೀಂಪುರದ ಜಿಲ್ಲಾ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಉಳಿದ ಏಳುಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2007: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ನಾಡಿನ ಅತ್ಯುನ್ನತ ನಾಗರಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು.ಸಿದ್ದಗಂಗಾಮಠದ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ `ಕರ್ನಾಟಕ ರತ್ನ' ಮತ್ತು ಖ್ಯಾತ ವಿಮರ್ಶಕ ಜಿ.ಎಸ್. ಆಮೂರ ಅವರಿಗೆ `ಪಂಪ ಪ್ರಶಸ್ತಿ' ಘೋಷಿಸಲಾಯಿತು. `ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ'ಗೆ ಹಿರಿಯ ಕಲಾವಿದರಾದ ಬಿ.ಕೆ. ಹುಬಳಿ, ಜಕಣಾಚಾರಿ ಪ್ರಶಸ್ತಿಗೆ ಶಿಲ್ಪಿ ಬಿ.ಎನ್. ಚನ್ನಪ್ಪಾಚಾರ್ಯ, ಜಾನಪದ ಶ್ರೀ ಪ್ರಶಸ್ತಿಗೆ ಈಶ್ವರಪ್ಪ ಗುರಪ್ಪ ಅಂಗಡಿ, ಕನಕ ಪುರಂದರ ಪ್ರಶಸ್ತಿಗೆ ವಿ. ರಾಮರತ್ನಂ, ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ  ಸಿ.ಕೆ. ತಾರಾ ಆಯ್ಕೆಯಾದರು.

 2007: 1984ರ ಸಿಖ್-ವಿರೋಧಿ ದೊಂಬಿಗಳ ಕಾಲದಲ್ಲಿ ಕುಟುಂಬ ಒಂದರ ಮೂವರು ಸದಸ್ಯರನ್ನು  ಕೊಂದುದಕ್ಕಾಗಿ ಮೂವರು ವ್ಯಕ್ತಿಗಳನ್ನು  ತಪ್ಪಿತಸ್ಥರು ಎಂದು ದೆಹಲಿಯ ಅಡಿಷನಲ್ ಸೆಷನ್ಸ್  ನ್ಯಾಯಾಲಯ ತೀರ್ಪು ನೀಡಿತು. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ರಾಜೇಂದರ್ ಕುಮಾರ್  ಶಾಸ್ತ್ರಿ  ಅವರು ಆರೋಪಿಗಳಾದ ಹರಪ್ರಸಾದ್ ಭಾರಧ್ವಾಜ್, ಆರ್.ಪಿ. ತಿವಾರಿ ಮತ್ತು ಜಗದೀಶ ಗಿರಿ ಅವರು ದೆಹಲಿ ಪೊಲೀಸ್  ಹೆಡ್ ಕಾನ್ ಸ್ಟೇಬಲ್ ಸೇರಿದಂತೆ ಸಿಖ್ ಕುಟುಂಬದ ಮೂವರನ್ನು  ಕೊಂದ ಪ್ರಕರಣದಲ್ಲಿ ಅಪರಾಧಿಗಳು ಎಂದು ತೀರ್ಪು ನೀಡಿದರು. ಇಪ್ಪತ್ತೆರಡೂವರೆ ವರ್ಷಗಳ ಹಿಂದೆ 1984ರ ನವೆಂಬರ್ ಒಂದು ಮತ್ತು  ಎರಡರಂದು ಅರ್ಜಿದಾರರಾದ ಹರ್ಮಿಂದರ್ ಕೌರ್ ಅವರ ಪೂರ್ವ ದೆಹಲಿಯ ಮನೆಯ ಮೇಲೆ ಆರೋಪಿಗಳ ನೇತೃತ್ವದಲ್ಲಿ ಗುಂಪೊಂದು ಹಲ್ಲೆ ನಡೆಸಿತ್ತು. ಆಗಿನ ಪ್ರಧಾನಿ  ಇಂದಿರಾ ಗಾಂಧಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ಸಿಖ್ ವಿರೋಧಿ ದಂಗೆಗಳು ಭುಗಿಲೆದ್ದ ಸಂದರ್ಭದಲ್ಲಿ ಈ ಹಲ್ಲೆ ನಡೆದಿತ್ತು. ಪ್ರಕರಣದಲ್ಲಿ ಆರೋಪಿಯಾಗಿದ್ದ ಇನ್ನೊಬ್ಬ ಮಹಿಳೆ ಕಮಲೇಶ್ ಮತ್ತು  ಸೂರಜ್ ಗಿರಿ ಅವರನ್ನು ಸಾಕ್ಷ್ಯಗಳ ಅಭಾವದ ಕಾರಣ ಅಡಿಷನಲ್ ಸೆಷನ್ಸ್ ನ್ಯಾಯಾಧೀಶರು ಬಿಡುಗಡೆ ಮಾಡಿದರು. ಹರ್ಮಿಂದರ್ ಕೌರ್ ಅವರ ಪತಿ, ದೆಹಲಿ ಪೊಲೀಸ್  ಹೆಡ್ ಕಾನ್ ಸ್ಟೇಬಲ್ ನಿರಂಜನ್ ಸಿಂಗ್ 1984ರ ನವೆಂಬರ್ 1ರಂದು ಶಾಹ್ ದರ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರತರಾಗಿದ್ದಾಗ ಅಲ್ಲಿಗೆ ಬಂದ ಆರೋಪಿಗಳ ನೇತೃತ್ವದ ಗುಂಪು ನಿರಂಜನ್ ಸಿಂಗ್  ಅವರನ್ನು  ಕೊಂದು  ಬೆಂಕಿ ಹಚ್ಚಿತು. ಅದಕ್ಕೂ  ಮುನ್ನ ಆರೋಪಿಗಳು ನಿರಂಜನ್ ಸಿಂಗ್  ಅವರನ್ನು ಮಾನಸರೋವರ ಪಾರ್ಕಿನ ಅವರ ಮನೆಯವರೆಗೂ ಅಟ್ಟಿಸಿಕೊಂಡು ಹೋಗಿದ್ದರು. ಅವರ 17 ವರ್ಷದ ಮಗ ಗುರ್ಪಾಲ್ ಸಿಂಗ್ ಮತ್ತು  ಅಳಿಯ ಮಹೇಂದರ್ ಸಿಂಗ್  ಅವರನ್ನು ಆರೋಪಿಗಳು ಮರುದಿನ ಕೊಂದು ಹಾಕಿದರು ಎಂದು ಪ್ರಾಸೆಕ್ಯೂಷನ್ ಆಪಾದಿಸಿತ್ತು. ದಂಗೆ ಕಾಲದಲ್ಲಿ ಬದುಕಿ ಉಳಿದ ಕೌರ್ ಅವರು ಸಿಖ್ ವಿರೋಧಿ  ಗಲಭೆಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ಜೈನ್ ಮತ್ತು  ಬ್ಯಾನರ್ಜಿ ಆಯೋಗದ ಮುಂದೆ ಪ್ರಮಾಣಪತ್ರ ಸಲ್ಲಿಸಿದ ಬಳಿಕ 1996ರಲ್ಲಿ  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ  ವರದಿ (ಎಫ್ ಐ ಆರ್) ಸಲ್ಲಿಸಲಾಗಿತ್ತು. ಮಾಜಿ ಕೇಂದ್ರ  ಸಚಿವ ಎಚ್. ಕೆ. ಎಲ್. ಭಗತ್ ಅವರನ್ನು  ಕೂಡಾ ಪ್ರಕರಣದಲ್ಲಿ ಆರೋಪಿ ಎಂಬುದಾಗಿ  ಹೆಸರಿಸಲಾಗಿತ್ತು. ಆದರೆ ನಂತರ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲವೆಂಬ ಕಾರಣದಿಂದ ಆರೋಪ ಮುಕ್ತರನ್ನಾಗಿ  ಮಾಡಲಾಗಿತ್ತು.

2006: ಖ್ಯಾತ ರಂಗ ಕಲಾವಿದ ಏಣಗಿ ಬಾಳಪ್ಪ ಅವರಿಗೆ ಹೊನ್ನಾವರ ತಾಲ್ಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ `ಶಿವರಾಮ ಹೆಗಡೆ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಂಭುಹೆಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

2006: ಇಬ್ಬರು ಮಕ್ಕಳ ತಾಯಿ ಮುಂಬೈಯ ಆರತಿ ಠಾಕೂರ್ (24) ಅವರು `ನೋ ಮಾರ್ಕ್ಸ್ ಮಿಸೆಸ್ ಇಂಡಿಯಾ ವರ್ಲ್ಡ್ 2006' ಆಗಿ ಆಯ್ಕೆಯಾದರು. ಈಕೆ ಶಿವಮೊಗ್ಗದ ಗುಲ್ವಾಡಿ ಸ್ಟುಡಿಯೋದ ಆರ್. ಡಿ. ಗುಲ್ವಾಡಿ ಮತ್ತು ಛಾಯಾದೇವಿ ಗುಲ್ವಾಡಿ ಅವರ ಮೊಮ್ಮಗಳು. ಇವರ ಶಾಲಾ ಶಿಕ್ಷಣ ಶಿವಮೊಗ್ಗದ ವಾಸವಿ ಶಾಲೆಯಲ್ಲಿ ನಡೆದಿತ್ತು. 

2006: ಮೆಲ್ಬೋರ್ನಿನ ಯಾರಾ ನದಿಯ ದಡದಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟವು ವರ್ಣರಂಜಿತ ಸಾಂಸ್ಕತಿಕ ಕಾರ್ಯಕ್ರಮದೊಂದಿಗೆ ಅಂತ್ಯಗೊಂಡಿತು. ಕ್ರೀಡಾಕೂಟದಲ್ಲಿ 22 ಸ್ವರ್ಣ ಸೇರಿ ಐವತ್ತು ಪದಕ ಪಡೆದ ಭಾರತ, ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಭಾರತದ ಶೂಟರ್ ಸಮರೇಶ್ ಜಂಗ್ ಕ್ರೀಡಾಕೂಟದ ಶ್ರೇಷ್ಠ ಕ್ರೀಡಾಪಟು ಎನಿಸಿಕೊಂಡರು. ಅಚಂತ ಶರತ್ ಕಮಲ್ ಅವರಿಗೆ ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಬಂಗಾರ ಲಭಿಸಿತು. ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಬಾಲಿವುಡ್ ತಾರೆಯರಾದ ರಾಣಿ ಮುಖರ್ಜಿ, ಸೈಫ್ ಅಲಿಖಾನ್ ಭಾಂಗ್ರಾ ಅವರ ಆಕರ್ಷಕ ನೃತ್ಯ ಮುಕ್ತಾಯ ಸಮಾರಂಭದ ವಿಶೇಷ ಕಾರ್ಯಕ್ರಮವಾಗಿ ಗಮನಸೆಳೆಯಿತು. 

2006: ಮಂಗಳೂರಿನಲ್ಲಿ 98 ಗಂಟೆ 32 ಸೆಕೆಂಡುಗಳ ಕಾಲ ನಿರಂತರ ಉಪನ್ಯಾಸ ಮಾಡುವ ಮೂಲಕ ಮಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಅಣ್ಣಯ್ಯ ರಮೇಶ್ 'ಗಿನ್ನೆಸ್' ವಿಶ್ವ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರು ಸೇರ್ಪಡೆಗೆ ಅವಕಾಶ ಪಡೆದುಕೊಂಡರು. ಮಾರ್ಚ್ 22ರ ಬೆಳಗ್ಗೆ 9ಕ್ಕೆ ಆರಂಭಿಸಿದ್ದ ತಮ್ಮ `ಮ್ಯಾರಥಾನ್ ಉಪನ್ಯಾಸ'ವನ್ನು ಅವರು ಈ ದಿನ ಬೆಳಗ್ಗೆ 11.35ಕ್ಕೆ ಕೊನೆಗೊಳಿಸಿದರು. ಆಂಧ್ರಪ್ರದೇಶದ ನಾರಾಯಣ ಶಿವಶಂಕರ್ ಅವರು 72 ಗಂಟೆ 9 ನಿಮಿಷಗಳ ನಿರಂತರ ಉಪನ್ಯಾಸ ಮಾಡಿ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ದಾಖಲಿಸಿದ್ದರು.

1982: ಕಲಾವಿದ ಪಾರ್ಶ್ವನಾಥ್ ಶಾ. ಉಪಾಧ್ಯ ಜನನ.

1979: ಎರಡು ವರ್ಷಗಳ ಶಾಂತಿ ಮಾತುಕತೆಗಳ ಬಳಿಕ ಇಸ್ರೇಲಿ ಪ್ರಧಾನಿ ಮೆನಾಕೆಮ್ ಬೆಗಿನ್ ಮತ್ತು ಈಜಿಪ್ಟಿನ ಅಧ್ಯಕ್ಷ ಅನ್ವರ್ ಸಾದತ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

1970: ಕಲಾವಿದೆ ಅರ್ಚನಾ ಹಂಡೆ ಜನನ.

1959: ಲಾಹೋರಿನಲ್ಲಿ ನಡೆದ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಪಾಕಿಸ್ಥಾನದ ಪರವಾಗಿ ಆಟವಾಡಿದ ಮುಷ್ತಾಖ್ ಮಹಮ್ಮದ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಟೆಸ್ಟ್ ಆಟಗಾರ ಎನ್ನಿಸಿದ. ಆಗ ಆತನ ವಯಸ್ಸು 15 ವರ್ಷ 124 ದಿನಗಳು.

1906: ಖ್ಯಾತ ವರ್ಣಚಿತ್ರ ಹಾಗೂ ಶಿಲ್ಪ ಕಲಾವಿದ ಎಸ್. ಎನ್. ಸ್ವಾಮಿ (26-03-1906ರಿಂದ 27-12-1969) ಅವರು ಅವರು ಶಿಲ್ಪ ಸಿದ್ಧಾಂತಿ ವೀರತ್ತ ಸ್ವಾಮಿ ಅವರ ಮಗನಾಗಿ ಈಗಿನ ಚಾಮರಾಜ ನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಜನಿಸಿದರು.

1932: ಕಲಾವಿದೆ ಉಷಾ ದಾತಾರ್ ಜನನ.

1902: ಈಗಿನ ಜಿಂಬಾಬ್ವೆಗೆ ರೊಡೇಷಿಯಾ ಎಂಬ ಹೆಸರು ಬರಲು ಕಾರಣನಾದ ಸಿಸಿಲ್ ರ್ಹೋಡ್ಸ್ (1853-1902) ತನ್ನ 48ನೇ ವಯಸ್ಸಿನಲ್ಲಿ ಮೃತನಾದ. ಈತ ತನ್ನ ವಜ್ರದ ಗಣಿಯಿಂದ ಲಭಿಸಿದ ಸಂಪತ್ತನ್ನು ವಿನಿಯೋಗಿಸಿ ಆಕ್ಸ್ ಫರ್ಡಿನಲ್ಲಿ ರ್ಹೋಡ್ಸ್ ಸ್ಕಾಲರ್ ಶಿಪ್ ಆರಂಭಿಸಿದ.

1892: ಅಮೆರಿಕಾದ ಖ್ಯಾತ ಪ್ರಬಂಧಕಾರ ಹಾಗೂ ಕವಿ ವಾಲ್ಟ್ ವೈಟ್ ಮ್ಯಾನ್ ತನ್ನ 72ನೇ ವಯಸ್ಸಿನಲ್ಲಿ ಮೃತನಾದ. ಈತನ `ಲೀವ್ಸ್ ಆಫ್ ಗ್ರಾಸ್' ಕೃತಿ ಅಮೆರಿಕದ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲು.

1874: ಈದಿನ ಹುಟ್ಟಿದ ರಾಬರ್ಟ್ ಫ್ರಾಸ್ಟ್ ಮುಂದೆ ಅಮೆರಿಕಾದ ಖ್ಯಾತ ಕವಿಯಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಮಾರ್ಚ್ 25

ಇಂದಿನ ಇತಿಹಾಸ 

ಮಾರ್ಚ್ 25

ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ಥಾನಿ ಸೇನೆಯು ಬಾಂಗ್ಲಾದೇಶಿ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿದ್ದ ಡಾಕಾ ವಿಶ್ವವಿದ್ಯಾಲಯದ ಮೇಲೆ ಹಾಗೂ ಮುಕ್ತಿ ವಾಹಿನಿಯ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ ನೂರಾರು ಯುವಕರು ಅಸು ನೀಗಿದರು. ಈ ಆಕ್ರಮಣ ಟಿಕ್ಕಾಖಾನ್ ಗೆ `ಬಾಂಗ್ಲಾದೇಶದ ಕಟುಕ' ಎಂಬ ಕುಖ್ಯಾತಿಯನ್ನು ತಂದುಕೊಟ್ಟಿತು.

2008: ನೈಸ್ ಸಂಸ್ಥೆ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರದ ಏಳು ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು. ರಾಜ್ಯದ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಯಿತು. ಆರು ವಾರಗಳ ಒಳಗೆ ಈ ನೋಟಿಸಿಗೆ ಉತ್ತರ ನೀಡುವಂತೆ  ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ  ನ್ಯಾಯಪೀಠ ಆದೇಶಿಸಿತು. ಬಿಎಂಐಸಿ ಕುರಿತಂತೆ 2006ರ ಏಪ್ರಿಲ್ 20ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಈ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು `ನೈಸ್' ಸಂಸ್ಥೆ ಸಲ್ಲಿಸಿದ್ದ ಅರ್ಜಿಯಲ್ಲಿ ದೂರಿತ್ತು. ಈ ಎಲ್ಲ ಅಧಿಕಾರಿಗಳು ವೈಯಕ್ತಿಕವಾಗಿ ಹಾಗೂ ಒಟ್ಟಾಗಿ, ಉದ್ದೇಶ ಪೂರ್ವಕವಾಗಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ನೈಸ್ ಆರೋಪಿಸಿತ್ತು. ಯೋಜನೆ ಶೀಘ್ರ ಪೂರ್ಣಗೊಳಿಸಲು ನೆರವಾಗುವಂತೆ ಈ ಅಧಿಕಾರಿಗಳಿಗೆ (ಪ್ರತಿವಾದಿಗಳು) ಆದೇಶಿಸುವಂತೆ ಅದು ಮನವಿ ಮಾಡಿಕೊಂಡಿತ್ತು. 2240 ಕೋಟಿ ರೂ. ವೆಚ್ಚದ ಬಿಎಂಐಸಿ ಯೋಜನೆಯಲ್ಲಿ ನೈಸ್ ಈಗಾಗಲೇ 900 ಕೋಟಿ ರೂ. ವ್ಯಯಿಸಿದೆ. 2006ರ ಏಪ್ರಿಲ್ 20ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂಕೋರ್ಟ್, ಬಿಎಂಐಸಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ  ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಯೋಜನೆಗೆ ಅನಗತ್ಯ ಅಡೆತಡೆ ಉಂಟು ಮಾಡಿದ್ದಕ್ಕಾಗಿ ಧರ್ಮಸಿಂಗ್ ನೇತೃತ್ವದ ಸರ್ಕಾರಕ್ಕೆ ರೂ. 5 ಲಕ್ಷ ದಂಡವನ್ನೂ ವಿಧಿಸಿತ್ತು. ಯೋಜನೆ ನೆಪದಲ್ಲಿ `ನೈಸ್' ಸಂಸ್ಥೆ ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆ. ನೈಸ್ ನೊಂದಿಗೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ರದ್ದುಗೊಳಿಸಬೇಕು ಎಂದು ಅಂದು ಶಾಸಕರಾಗಿದ್ದ ಜೆ.ಸಿ.ಮಾಧುಸ್ವಾಮಿ (ಜೆಡಿಯು) ಹಾಗೂ ಜಿ.ವಿ. ಶ್ರೀರಾಮರೆಡ್ಡಿ (ಸಿಪಿಎಂ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 

2008: ಬಾಹ್ಯಾಕಾಶದಲ್ಲಿ ಉಳಿದ ಇಬ್ಬರು ಸಿಬ್ಬಂದಿಗೆ ಹೃದಯಸ್ಪರ್ಶಿ ವಿದಾಯ ಹೇಳಿದ ಬಳಿಕ ಹಿಂದಿನ ರಾತ್ರಿ ಎಂಡೆವರ್ ಷಟಲ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟು ಭೂಮಿಯತ್ತ ಮರುಪಯಣ ಹೊರಟಿತು. 10 ಮಂದಿ ಬಾಹ್ಯಾಕಾಶ ಯಾನಿಗಳು ದಾಖಲೆಯ ಐದು ಬಾಹ್ಯಾಕಾಶ ನಡಿಗೆ ನಡೆಸಿ ಬಾಹ್ಯಾಕಾಶ ನಿಲ್ದಾಣ ರೊಬೋಟನ್ನು ಮತ್ತು ನೂತನ ಜಪಾನೀ ಕಂಪಾರ್ಟ್ ಮೆಂಟ್ ಒಂದನ್ನೂ ಕಕ್ಷೆಯಲ್ಲಿ ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಿಸಿದರು. `ನನ್ನ ದೃಷ್ಟಿಯಲ್ಲಿ ಇದೊಂದು ಅಭೂತಪೂರ್ವ ಕಾರ್ಯವಾಗಿತ್ತು' ಎಂದು ಯೋಜನಾ ನಿರ್ವಹಣಾ ತಂಡದ ಅಧ್ಯಕ್ಷ ಲೆರೋಯ್ ಕಾಯಿನ್ ಹೇಳಿದರು.

2008: ಕೀರ್ತಿ ಮತ್ತು  ವಿವಾದಗಳ ಉತ್ತುಂಗಕ್ಕೆ ಏರಿದ್ದ ದೆಹಲಿಯ `ಪೊಲೀಸ್ ಎನ್ ಕೌಂಟರ್ ತಜ್ಞ' ರಾಜ್ ಬೀರ್ ಸಿಂಗ್ ಅವರನ್ನು  ರಾಷ್ಟ್ರದ ರಾಜಧಾನಿಯ ಹೊರವಲಯದಲ್ಲಿ ಗುಡಗಾಂವ್ನ ಆಸ್ತಿಪಾಸ್ತಿ ಉದ್ಯಮಿಯೊಬ್ಬರು ಗುಂಡಿಟ್ಟು ಕೊಲೆಗೈದರು. `ಝೆಡ್' ದರ್ಜೆಯ ಭದ್ರತೆ ಒದಗಿಸಲಾಗಿದ್ದ ದೆಹಲಿ ಪೊಲೀಸ್ ವಿಶೇಷ ಕಾರ್ಯಾಚರಣಾ ದಳದ ಎಸಿಪಿ, 48 ವರ್ಷದ ಸಿಂಗ್ ಅವರ ತಲೆಗೆ, ಆಸ್ತಿಪಾಸ್ತಿ ಉದ್ಯಮಿ ವಿಜಯ ಭಾರಧ್ವಾಜ್ ಹಿಂದಿನ ದಿನ ರಾತ್ರಿ ಅತ್ಯಂತ ಸನಿಹದಿಂದ ಎರಡು ಬಾರಿ ಗುಂಡು ಹೊಡೆದರು ಎಂದು ಆಪಾದಿಸಲಾಯಿತು.

2008: ಶಂಕಿತ ದಿಮಾ ಹಾಲಂ ದೇವಗಾಹ್ (ಜ್ಯುವೆಲ್) ಉಗ್ರಗಾಮಿಗಳು ದಕ್ಷಿಣ ಅಸ್ಸಾಮಿನ ಉತ್ತರ ಕಾಚಾರ್ ಗುಡ್ಡಗಾಡು ಜಿಲ್ಲೆಯ ರೈಲು ನಿಲ್ದಾಣದ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ರೈಲು ಸಿಬ್ಬಂದಿ ಸೇರಿ ನಾಲ್ಕು ಮಂದಿ ಗಾಯಗೊಂಡರು. `ಬ್ಲ್ಯಾಕ್ ವಿಡೋ' ಎಂಬುದಾಗಿಯೂ ಕುಖ್ಯಾತಿ ಪಡೆದಿರುವ ಡಿ ಎಚ್ ಡಿ(ಜೆ) ಉಗ್ರಗಾಮಿಗಳು ಹಿಂದಿನ ದಿನ ರಾತ್ರಿ ಹರಂಗಜಾವೊ ರೈಲು ನಿಲ್ದಾಣಕ್ಕೆ ನುಗ್ಗಿ ಏಕಕಾಲಕ್ಕೆ ಗುಂಡಿನ ಮಳೆಗರೆಯುವುದರೊಂದಿಗೆ ಕಚ್ಛಾ ಬಾಂಬನ್ನೂ ಸಿಡಿಸಿದರು. ಪರಿಣಾಮವಾಗಿ  ಇಬ್ಬರು ನಾಗರಿಕರು ಮತ್ತು ಇಬ್ಬರು ರೈಲ್ವೆ  ನೌಕರರು ಮೃತರಾದರು ಎಂದು ರೈಲ್ವೇ ಮೂಲಗಳು ತಿಳಿಸಿದವು.

2008: ಗೋಧ್ರಾ ನಂತರದ ಕೋಮು ಗಲಭೆಗಳ ಮರುತನಿಖೆಗಾಗಿ ಪಂಚಸದಸ್ಯ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚನೆಗೆ ಒಪ್ಪಿಗೆ ನೀಡಿದ ಸುಪ್ರೀಂಕೋರ್ಟ್ ಈ ತಂಡವು ಮೂರು ತಿಂಗಳಲ್ಲಿ ತನ್ನ ವರದಿ ಸಲ್ಲಿಸಬೇಕು ಎಂದು ಸೂಚಿಸಿತು. ಗುಜರಾತಿನ ಹಿರಿಯ ಐಪಿಎಸ್ ಅಧಿಕಾರಿಗಳಾದ ಗೀತಾ ಜೋಹ್ರಿ, ಶಿವಾನಂದ ಝಾ ಮತ್ತು  ಆಶಿಶ್ ಭಾಟಿಯಾ ಹಾಗೂ ಸಿಬಿಐ ನಿವೃತ್ತ ನಿರ್ದೇಶಕ ಆರ್. ಕೆ. ರಾಘವನ್ ಮತ್ತು  ಮಾಜಿ ಡಿಜಿಪಿ ಸಿ.ಬಿ. ಸತ್ಪಥಿ  ಈ ತಂಡದ ಸದಸ್ಯರು.

 2008: ಕರ್ನಾಟಕ ಕಾವೇರಿ ಜಲಾನಯನ ಪ್ರದೇಶದಲ್ಲಿ ನ್ಯಾಯ ಮಂಡಳಿಯ ಆದೇಶವನ್ನು ಉಲ್ಲಂಘಿಸಿ `ಚೆಕ್ ಡ್ಯಾಮ್' ನಿರ್ಮಿಸುವುದನ್ನು ಮತ್ತು ಹೆಚ್ಚಿನ ನೀರು ಬಳಸುವುದನ್ನು ತಡೆಯಬೇಕೆಂದು ಕೋರಿ ತಮಿಳುನಾಡು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತು. ಕರ್ನಾಟಕ ಏತ ನೀರಾವರಿ ಮತ್ತಿತರ ಯೋಜನೆಗಳನ್ನು ಮುಂದುವರೆಸದಂತೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಈ ಅರ್ಜಿಯಲ್ಲಿ ಮನವಿ ಮಾಡಿತು. `ತನ್ನ ರಾಜ್ಯದ ನೀರಾವರಿಯ ಮೇಲೆ ಪರಿಣಾಮ ಬೀರುವ ಯಾವುದೇ ನೀರಿನ ಸಂಗ್ರಹಕ್ಕೂ ನ್ಯಾಯ ಮಂಡಳಿಯ ಅಂತಿಮ ವರದಿಯಲ್ಲಿ ಅನುಮತಿ ನೀಡಿಲ್ಲ. ಹೀಗಾಗಿ ಕರ್ನಾಟಕ ಯಾವುದೇ ನೀರಾವರಿ ಯೋಜನೆ ಕೈಗೊಳ್ಳಲು ಸಾಧ್ಯವಿಲ್ಲ' ಎಂದು ತಮಿಳುನಾಡು ವಕೀಲರಾದ ಕೆ. ಪರಾಶರನ್ ಮತ್ತು ಆರ್. ಎನ್. ಎಡುಮಾರನ್ ಅರ್ಜಿಯಲ್ಲಿ ತಿಳಿಸಿದರು.

2008: ಚೆನ್ನೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಶರದ್  ಪವಾರ್ ಅವರು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಭಾರತದ 'ಕ್ರಿಕೆಟ್ ರತ್ನ' ಅನಿಲ್ ಕುಂಬ್ಳೆ  ಅವರನ್ನು 37 ಕ್ಯಾರೆಟ್ಟಿನ 1500 ಬೆಲ್ಜಿಯಮ್ ವಜ್ರಗಳು ಹಾಗೂ 239 ಕ್ಯಾರೆಟ್ಟಿನ 640 ರೂಬೀಸ್ ಹರಳುಗಳಿಂದ ಅಲಂಕೃತವಾದ ವಜ್ರ ಲೇಪಿತ ಚಿನ್ನದ ಚೆಂಡನ್ನು ನೀಡಿ ಗೌರವಿಸಿದರು.

2008: ಪಾಕಿಸ್ಥಾನದ 25ನೇ ಪ್ರಧಾನಿಯಾಗಿ ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಯೂಸಫ್ ರಝಾ ಜಿಲಾನಿ ಅವರು ಇಸ್ಲಾಮಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು. ಆಡಳಿತಾರೂಢ ಪಕ್ಷಗಳ ಪ್ರಮುಖ ನಾಯಕರಾದ ಅಸೀಫ್ ಆಲಿ ಜರ್ದಾರಿ, ನವಾಜ್ ಷರೀಫ್, ಬಿಲ್ವಾಲ್ ಮೊದಲಾದವರ ಬಹಿಷ್ಕಾರ ಮತ್ತು ಅನುಪಸ್ಥಿತಿಯ ನಡುವೆಯೇ ಅಧ್ಯಕ್ಷೀಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಜಿಲಾನಿ (55) ಅವರಿಗೆ ಪ್ರಮಾಣವಚನ ಬೋಧಿಸಿದರು.

2008: ಭೂತಾನಿನಲ್ಲಿ ನಡೆದ ಮೊತ್ತಮೊದಲ ಸಂಸದೀಯ ಚುನಾವಣೆಯಲ್ಲಿ ಭೂತಾನ್ ಪೀಸ್ ಅಂಡ್ ಪ್ರಾಸ್ಪರಿಟಿ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿತು. ಒಟ್ಟು 47 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಪಕ್ಷ 44 ಸ್ಥಾನಗಳಲ್ಲಿ ಗೆಲುವು ಪಡೆಯಿತು. ಚುನಾವಣೆಯಲ್ಲಿ ಮತದಾರರು ದೊರೆಯ ಸಂಬಂಧಿಗಳನ್ನು ತಿರಸ್ಕರಿಸಿದರು. ಉಳಿದ ಮೂರು ಸ್ಥಾನಗಳಲ್ಲಿ ಮಾತ್ರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಗೆದ್ದಿತು.

2007: ಇಂದೋರಿನ ಡಾ. ಜೈನ್ಸ್ ಗೋಮೂತ್ರ ಥೆರೆಪಿ ಆಸ್ಪತ್ರೆಯ ಏಳನೇ ಶಾಖೆಯನ್ನು ವಿಧಾನ ಪರಿಷತ್ ಸದಸ್ಯ, ಚಿತ್ರನಟ ಶ್ರೀನಾಥ್ ಅವರು ಬೆಂಗಳೂರಿನ ವಿ.ವಿ.ಪುರಂನಲ್ಲಿ ಉದ್ಘಾಟಿಸಿದರು. ಇದರೊಂದಿಗೆ ಈವರೆಗೆ ಉತ್ತರಭಾರತದಲ್ಲಿ ಮಾತ್ರ ಇದ್ದ ಡಾ. ಜೈನ್ಸ್ ಅವರ ಗೋಮೂತ್ರ ಥೆರೆಪಿ ಆಸ್ಪತ್ರೆಯ ಶಾಖೆಗಳು ದಕ್ಷಿಣ ಭಾರತಕ್ಕೂ ಕಾಲಿರಿಸಿದವು. ಆರ್ಯವೈಶ್ಯ ಮಹಾಸಭಾ ಬೆಂಗಳೂರಿನ ಈ ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳುವುದು. ದೇಶಾದ್ಯಂತ 50 ಗೋಮೂತ್ರ ಥೆರೆಪಿ ಆಸ್ಪತ್ರೆಗಳ ಶಾಖೆ ತೆರೆಯುವ ಯೋಜನೆ ಜೈನ್ಸ್ ಸಂಸ್ಥೆಯದು.

2007: ಆಕಾಶದಿಂದ ಆಕಾಶಕ್ಕೆ ಗುರಿ ಇಡುವ ಭಾರತದ ಸ್ವದೇಶೀ ನಿರ್ಮಿತ `ಅಸ್ತ್ರ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಾಲ್ಕು ವರ್ಷಗಳ ಸುದೀರ್ಘ ಅವಧಿಯ ಬಳಿಕ ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರ ಪರೀಕ್ಷಾ ವಲಯದಲ್ಲಿ ನೆರವೇರಿತು. 

2007: ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಮಾರ್ಗದರ್ಶಕರಾಗಿದ್ದ ಮಾವೋ ನಕ್ಸಲವಾದಿ ರಾಮಯ್ಯ ಯಾನೆ ದಿಲೀಪ್ ಯಾನೆ ಮಾಸ ಯಾನೆ ರವಿ ಆಂಧ್ರಪ್ರದೇಶದ ವಾರಂಗಲ್ಲಿನಲ್ಲಿ ಪೊಲೀಸರಿಗೆ ಶರಣಾಗತನಾದ. 2004ರಲ್ಲಿ ಒರಿಸ್ಸಾದ ಕೊರಾಪಟ್ ಸೆರೆಮನೆಯ ಗೋಡೆಗಳನ್ನು ಒಡೆದು ಐದು ಶಸ್ತ್ರಾಸ್ತ್ರಗಳೊಂದಿಗೆ ಆತ ಪರಾರಿಯಾಗಿದ್ದ.

2007: ದುಬೈ ಮತ್ತು ಭಾರತದ ನಡುವೆ ಏರ್ ಇಂಡಿಯಾ ಎಕ್ಸ್ ಪ್ರೆಸ್ಸಿನ ಹೊಸ ವಿಮಾನ ತನ್ನ ಮೊದಲ ಹಾರಾಟವನ್ನು ಕತಾರ್ನ ದೋಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರಂಭಿಸಿತು.

2007: ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಬೆಂಗಳೂರಿನ ಡಾ. ಶ್ರೀಕಾಂತ ಕೆ. ಮೂರ್ತಿ ಅವರಿಗೆ ವಾಷಿಂಗ್ಟನ್ನಿನ `ಸಂಗೀತಪ್ರಿಯ ಡಾಟ್ ಆರ್ಗ್ ಸಂಸ್ಥೆಯು `ರಸಿಕಪ್ರಿಯ' ಪ್ರಶಸ್ತಿ ನೀಡಿ ಗೌರವಿಸಿತು.

2007: ಕ್ರೆಡಿಟ್ ಕಾರ್ಡ್ ಒಂದರ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರದ ಬಳಕೆಯನ್ನು ವಿರೋಧಿಸಿ ಡರ್ಬಾನಿನ ಫೋನಿಕ್ಸ್ ಸೆಟ್ಲ್ ಮೆಂಟ್ ಟ್ರಸ್ಟ್, ದಕ್ಷಿಣ ಆಫ್ರಿಕಾ ಹಿಂದೂ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದವು.

2006: ಬಿಜೆಪಿ ಕರ್ನಾಟಕ ಘಟಕದ ನೂತನ ಅಧ್ಯಕ್ಷರಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಡಿ.ವಿ. ಸದಾನಂದ ಗೌಡ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.

2006: ಲಾಭದ ಹುದ್ದೆ ವಿವಾದದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. `ಲಾಭದ ಹುದ್ದೆ'ಗೆ ಸಮರ್ಪಕ ವ್ಯಾಖ್ಯಾನ ನೀಡಲು ಸಮಗ್ರ ಮಸೂದೆ ತರಬೇಕು ಎಂಬ ಕೂಗು ವ್ಯಾಪಕಗೊಂಡಿತು. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಜೊತೆ ಕೇಂದ್ರ ಸರ್ಕಾರ ಸಮಾಲೋಚನೆ ಆರಂಭಿಸಿತು.

2006: ಕೃಷ್ಣಾ ನದಿ ನೀರು ನ್ಯಾಯಮಂಡಳಿ ಮುಂದೆ ರಾಜ್ಯದ ಪರ ವಾದ ಮಂಡಿಸಲು ಹಿರಿಯ ವಕೀಲ ಎಫ್. ಎಸ್. ನಾರಿಮನ್ ಅವರನ್ನು ಮುಂದುವರೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕರ್ನಾಟಕದ ಅಡ್ವೋಕೇಟ್ ಜನರಲ್ ಆರ್.ಎನ್. ನರಸಿಂಹಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1975: ಸೌದಿ ಅರೇಬಿಯಾದ ದೊರೆ ಫೈಸಲ್ ಅವರನ್ನು ರಿಯಾದಿನ ಅರಮನೆಯಲ್ಲಿ ರಾಜಕುಮಾರ ಮುಸೀದ್ ಗುಂಡಿಟ್ಟು ಕೊಂದ. ಮಾನಸಿಕ ರೋಗಿಯಾಗಿದ್ದ ಈತನನ್ನು ಜೂನ್ ತಿಂಗಳಲ್ಲಿ ಮರಣದಂಡನೆಗೆ ಗುರಿ ಪಡಿಸಲಾಯಿತು.

1971: ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ಥಾನಿ ಸೇನೆಯು ಬಾಂಗ್ಲಾದೇಶಿ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿದ್ದ ಡಾಕಾ ವಿಶ್ವವಿದ್ಯಾಲಯದ ಮೇಲೆ ಹಾಗೂ ಮುಕ್ತಿ ವಾಹಿನಿಯ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ ನೂರಾರು ಯುವಕರು ಅಸು ನೀಗಿದರು. ಈ ಆಕ್ರಮಣ ಟಿಕ್ಕಾಖಾನ್ ಗೆ `ಬಾಂಗ್ಲಾದೇಶದ ಕಟುಕ' ಎಂಬ ಕುಖ್ಯಾತಿಯನ್ನು ತಂದುಕೊಟ್ಟಿತು.

1957: ಆರು ಐರೋಪ್ಯ ರಾಷ್ಟ್ರಗಳು ರೋಮ್ ಒಪ್ಪಂದಕ್ಕೆ ಸಹಿ ಹಾಕಿ ಐರೋಪ್ಯ ಸಮುದಾಯ (ಯುರೋಪಿಯನ್ ಕಮ್ಯೂನಿಟಿ) ಸ್ಥಾಪಿಸಿಕೊಂಡವು. ಫ್ರಾನ್ಸ್, ಬೆಲ್ಜಿಯಂ, ಲಕ್ಸೆಂಬರ್ಗ್, ಪಶ್ಚಿಮ ಜರ್ಮನಿ, ಇಟೆಲಿ ಮತ್ತು ನೆದರ್ ಲ್ಯಾಂಡ್ಸ್ ಇವೇ ಈ ಆರು ರಾಷ್ಟ್ರಗಳು. 

1914: ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕನ್ ಕೃಷಿ ವಿಜ್ಞಾನಿ ನಾರ್ಮನ್ ಅರ್ನೆಸ್ಟ್ ಬೊರ್ಲಾಗ್ ಜನ್ಮದಿನ. ಈ ವಿಜ್ಞಾನಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ನಡೆದ `ಹಸಿರು ಕ್ರಾಂತಿ'ಗೆ ತಳಪಾಯ ಹಾಕಿದವರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, March 29, 2009

ನಾಗತಿಹಳ್ಳಿ ಸಂಸ್ಕೃತಿ ಹಬ್ಬ

ನಾಗತಿಹಳ್ಳಿ ಸಂಸ್ಕೃತಿ ಹಬ್ಬ

ನಾಗತಿಹಳ್ಳಿಯ 'ಅಭಿವ್ಯಕ್ತಿ' ಬಳಗದ ವತಿಯಿಂದ ಮಾರ್ಚ್ 27, 28, 29 ಮತ್ತು 30ರಂದು ನಾಲ್ಕು ದಿನಗಳ ಕಾಲ ಸಂಸ್ಕೃತಿ ಹಬ್ಬ.  ಈ ದಿನಗಳಲ್ಲಿ ರಾಜ್ಯ ಮಟ್ಟದ ಚಿತ್ರಕಥಾ ಶಿಬಿರ ನಡೆಯಲಿದ್ದು ರಾಜ್ಯಾದ್ಯಂತದಿಂದ ಆಯ್ಕೆಯಾದ 50 ಮಂದಿ ಅರ್ಹ ವ್ಯಕ್ತಿಗಳು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರಲ್ಲಿ ಬೆಂಗಳೂರಿನಿಂದ ನೆಲಮಂಗಲ ಕುಣಿಗಲ್ ಮಾರ್ಗವಾಗಿ 110ನೇ ಕಿ.ಮೀ.ಯಲ್ಲಿ ಇರುವ ನಾಗತಿಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿರುವ 'ಸಿಹಿ ಕನಸು' ಬಯಲು ರಂಗಮಂದಿರದಲ್ಲಿ ನಡೆಯುವ ಈ ಶಿಬಿರದಲ್ಲಿ ತಜ್ಞರಿಂದ ಉಪನ್ಯಾಸ, ಚರ್ಚೆ, ಜಾಗತಿಕ ಅಭಿಜಾತ ಚಿತ್ರಗಳ ಪ್ರದರ್ಶನ ಇತ್ಯಾದಿ ನಡೆಯಲಿವೆ ಎಂದು ನಾಗತಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ. ವಿವರಗಳಿಗೆ ಈ ಕೆಳಗಿನ ಆಮಂತ್ರಣ ಪತ್ರಿಕೆಯನ್ನು ಕ್ಲಿಕ್ ಮಾಡಿರಿ.
 




ಗೋಲೋಕದಲ್ಲಿ ಬೇಸಿಗೆ ಶಿಬಿರ

ಗೋಲೋಕದಲ್ಲಿ ಬೇಸಿಗೆ ಶಿಬಿರ


ಶ್ರೀ ರಾಮಚಂದ್ರಾಪುರ ಮಠ, ಬೆಂಗಳೂರು ಸೀಮಾ ಪರಿಷತ್ತಿನ, ಅವಲಂಬನ ವತಿಯಿಂದ ಈ ವರ್ಷದ ಮಕ್ಕಳ ಬೇಸಿಗೆ ರಜಾ ಕಾಲದ ಶಿಬಿರವು ವಿರೋಧಿ ಸಂವತ್ಸರದ ವೈಶಾಖ ಕೃಷ್ಣ ಪಂಚಮಿಯಿಂದ ಚತುರ್ದಶಿಯವರೆಗೆ (14-5-2009ರಿಂದ 23-5-2009 ರವರೆಗೆ) ಬೆಂಗಳೂರಿನ ಕನಕಪುರ ರಸ್ತೆಯ ಕಗ್ಗಲೀಪುರದ ದಿಣ್ಣೇ ಪಾಳ್ಯದ (ಬಿ.ಜೆ. ಶರ್ಮರ ಪ್ರತಿಮಾ ಫಾರಂ ಪಕ್ಕದಲ್ಲಿರುವ) ಗೋಲೋಕದಲ್ಲಿ ನಡೆಯಲಿದೆ.

ಆಸಕ್ತ ಯಜುಶಾಖಾ ಬೋಧಾಯನ ಸೂತ್ರದ ಉಪನೀತ ವಟುಗಳಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆಸಕ್ತರು 30-4-2009ರ ಒಳಗೆ ಪರಿಷತ್ತಿಗೆ ತಲುಪುವಂತೆ, ಸ್ವ ವಿಳಾಸವಿರುವ ಸರಿಯಾದ ಬೆಲೆಯ ಅಂಚೆ ಮುದ್ರಿತ ಲಕೋಟೆಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಸೀಮಾ ಪರಿಷತ್ ಪ್ರಕಟಣೆ ತಿಳಿಸಿದೆ.

ಶ್ರೀ ರಾಮಾಶ್ರಮ, ಗಿರಿನಗರ ಬೆಂಗಳೂರು (ದೂರವಾಣಿ: 08026721510) ಇಲ್ಲಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಧಾನ ಕಾರ್ಯದರ್ಶಿ ಸಿ.ಎಚ್.ಎಸ್. ಭಟ್ ತಿಳಿಸಿದ್ದಾರೆ.
 

ಇಂದಿನ ಇತಿಹಾಸ History Today ಮಾರ್ಚ್ 24

ಇಂದಿನ ಇತಿಹಾಸ

ಮಾರ್ಚ್ 24
ಫ್ರಾನ್ಸಿನ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮಾಜಿ ಪತ್ನಿ ಸಿಸಿಲಿಯಾ ಸಿಗ್ನರ್ - ಅಲ್ ಬೆನಿಝ್ ಅವರು ಮೊರಾಕ್ಕೊ ಮೂಲದ ತಮ್ಮ ಪ್ರಿಯಕರ ರಿಚರ್ಡ್ ಅತ್ತಿಯಾಸ್ ಅವರನ್ನು ನ್ಯೂಯಾರ್ಕಿನ ಹೆಸರಾಂತ `ರೇನ್ ಬೊ ರೂಂ'ನಲ್ಲಿ ವರಿಸಿದರು.

2008: ಫ್ರಾನ್ಸಿನ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮಾಜಿ ಪತ್ನಿ ಸಿಸಿಲಿಯಾ ಸಿಗ್ನರ್ - ಅಲ್ ಬೆನಿಝ್ ಅವರು ಮೊರಾಕ್ಕೊ ಮೂಲದ ತಮ್ಮ ಪ್ರಿಯಕರ ರಿಚರ್ಡ್ ಅತ್ತಿಯಾಸ್ ಅವರನ್ನು ನ್ಯೂಯಾರ್ಕಿನ ಹೆಸರಾಂತ `ರೇನ್ ಬೊ ರೂಂ'ನಲ್ಲಿ ವರಿಸಿದರು.  ಸುಮಾರು 150 ಅತಿಥಿಗಳು ಇವರಿಬ್ಬರ ವಿವಾಹಕ್ಕೆ ಸಾಕ್ಷಿಯಾದರು.  ಈ ಮದುವೆ ಅದೆಷ್ಟು ಗೌಪ್ಯವಾಗಿ ನಡೆಯಿತೆಂದರೆ ಆಹ್ವಾನಿತ  ಅತಿಥಿಗಳು  ಈ ಬಗ್ಗೆ ತುಟಿಪಿಟಿಕ್ ಎನ್ನಲಿಲ್ಲ. 

2008: 2005ರಲ್ಲಿ ಕಾರ್ಯಾರಂಭ ಮಾಡಿದ ತುಮಕೂರು ವಿಶ್ವವಿದ್ಯಾಲಯದ ಚೊಚ್ಚಲ ಘಟಿಕೋತ್ಸವ ಈದಿನ ನಡೆಯಿತು. ಮಂಗಳೂರು ಮತ್ತು ಗೋವಾ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ. ಶೇಖ್ ಅಲಿ, ಕನ್ನಡದ ಹೆಸರಾಂತ ಹಿರಿಯ ಚಿತ್ರನಟ ಕೆ.ಎಸ್. ಅಶ್ವಥ್ ಅವರಿಗೆ ಗೌರವ ಡಾಕ್ಟರೇಟ್ ಮತ್ತು ಶಿಕ್ಷಣ ಪ್ರೇಮಿಗಳಾದ ಎಚ್.ಎಂ. ಗಂಗಾಧರಯ್ಯ ಮತ್ತು ಎಂ.ಎಸ್. ರಾಮಯ್ಯ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಯಿತು. 21 ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಚಿನ್ನದ ಪದಕ ಪಡೆದರು.  ತುಮಕೂರು ವಿವಿಯ ಮೊದಲ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರು ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದರು. ಮೊದಲೇ ಡಾಕ್ಟರೇಟ್ ಸಿಕ್ಕಿರುವುದರಿಂದ ಮತ್ತೊಮ್ಮೆ ಅದರ ಅಗತ್ಯವಿಲ್ಲ, ಆದ್ದರಿಂದ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂದು ಶ್ರೀಗಳು ಮೊದಲೇ ವಿವಿ ಆಡಳಿತದ ಗಮನಕ್ಕೆ ತಂದಿದ್ದರು.
2008: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದ ಆರೋಪಿಗಳಾದ ಅಮಾನತುಗೊಂಡ ಐಪಿಎಸ್ ಅಧಿಕಾರಿ  ಆರ್. ಕೆ. ಶರ್ಮಾ ಮತ್ತು ಇತರ ಮೂವರಿಗೆ ನಗರದ ನ್ಯಾಯಾಲಯವು  ಜೀವಾವಧಿ  ಶಿಕ್ಷೆ  ವಿಧಿಸಿತು. ಶರ್ಮಾ ಮತ್ತು ಇತರರು ಕೊಲೆ ಹಾಗೂ ಕ್ರಿಮಿನಲ್  ಒಳಸಂಚಿಗಾಗಿ  ಶಿಕ್ಷೆಗೆ ಒಳಗಾದರು. ಶಿವಾನಿ  ಬಳಿ  ಶರ್ಮಾಗೆ ವಿರುದ್ಧವಾದ ಕೆಲವು `ದಾಖಲೆಗಳು' ಇದ್ದ ಕಾರಣಕ್ಕಾಗಿ  ಶಿವಾನಿಯನ್ನು  ಕೊಲೆಗೈಯಲಾಯಿತು ಎಂದು ಪ್ರಾಸೆಕ್ಯೂಷನ್ ಆಪಾದಿಸಿತ್ತು.

2008: ಬೀಜಿಂಗ್ ಒಲಿಂಪಿಕ್ ಕೂಟದ ಕ್ರೀಡಾಜ್ಯೋತಿಯನ್ನು ಗ್ರೀಕಿನ  ಪ್ರಾಚೀನ ನಗರಿ ಒಲಿಂಪಿಯಾದಲ್ಲಿ ಬೆಳಗಿಸಲಾಯಿತು. ಇದರೊಂದಿಗೆ 2008ರ ಒಲಿಂಪಿಕ್ ಕ್ಷಣಗಣನೆ ಆರಂಭವಾಯಿತು.

2008: ಮೊಟ್ಟಮೊದಲ ಸಂಸದೀಯ ಚುನಾವಣೆಯನ್ನು ಕಾಣುತ್ತಿರುವ ಭೂತಾನಿನಲ್ಲಿ ಜನರು ಈದಿನ ತಮ್ಮ ಮತದಾನದ ಹಕ್ಕನ್ನು ಸಂಭ್ರಮೋತ್ಸಾಹದೊಂದಿಗೆ ಚಲಾಯಿಸಿದರು. ವಿಶ್ವದ ವಿವಿಧ ಕಡೆಗಳಲ್ಲಿ ಅಧಿಕಾರದಿಂದ ಕೆಳಗಿಳಿಯದೇ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದರೆ, ಭೂತಾನಿನಲ್ಲಿ ಮಾತ್ರ ಇದಕ್ಕೆ ವಿರುದ್ಧ. ಭೂತಾನ್ ದೊರೆ ಜಿಗ್ಮೆ ವಾಂಗ್ಚುಕ್ ಅವರೇ ಪ್ರಜಾಪ್ರಭುತ್ವ ಸ್ಥಾಪನೆಗೆ ಮುಂದಾದದ್ದು ಒಂದು ವಿಶೇಷ.

2008: 65 ವರ್ಷದ ಭೂತಾನೀ  ಮಹಿಳೆಯೊಬ್ಬರು (ಅಜ್ಜಿ) ತನ್ನ ಮತ ಚಲಾಯಿಸಲು ರಬ್ಬರ್ ಚಪ್ಪಲಿಗಳನ್ನು ಧರಿಸಿ, ಕೈಯಲ್ಲಿ ಊರುಗೋಲು ಹಿಡಿದುಕೊಂಡು 600 ಕಿ.ಮೀ. ದೂರ ಪಾದಯಾತ್ರೆ ಮಾಡಿದರು. ಈಕೆಯ ಹೆಸರು ತ್ಸೆವಾಂಗ್ ಡೇಮಾ. ಪೂರ್ವದ ಟ್ರಶಿಯಾಂಗ್ ಸ್ತೆ ಜಿಲ್ಲೆಯಲ್ಲಿನ ಮತಗಟ್ಟೆ ತಲುಪಲು ಈಕೆ ಥಿಂಪುವಿನಿಂದ 14 ದಿನಗಳ ಪಾದಯಾತ್ರೆ ಮಾಡಿದರು. ಚಳಿಯಲ್ಲಿ ಗಢಗಢ ನಡುಗುತ್ತಾ, ಬೆಟ್ಟಗುಡ್ಡಗಳ ಕಡಿದಾದ ದಾರಿಯನ್ನು ಹತ್ತಿ ಇಳಿದರು.

2008: ಪ್ರಧಾನಿ ಮನಮೋಹನ್ ಸಿಂಗ್ ಅವರು 5000 ಕೋಟಿ ರೂಪಾಯಿ ವೆಚ್ಚದ ಅನಿಲ ಆಧಾರಿತ ವಿದ್ಯುತ್ ಯೋಜನೆಗೆ ನವದೆಹಲಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

2008: ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ ನೇತೃತ್ವದ ಆರನೇ ವೇತನ ಆಯೋಗವು ಸರ್ಕಾರಕ್ಕೆ ತನ್ನ ಶಿಫಾರಸು ಸಲ್ಲಿಸಿತು. ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ವಿವಿಧ ಭತ್ಯೆಗಳನ್ನು ದುಪ್ಪಟ್ಟುಗೊಳಿಸಲು ಆಯೋಗ ಶಿಫಾರಸು ಮಾಡಿತು. ವೇತನ ಆಯೋಗ ಮಾಡಿದ ಶಿಫಾರಸಿನಿಂದ ಸರ್ಕಾರದ ಬೊಕ್ಕಸಕ್ಕೆ 2008-2009ನೇ ಸಾಲಿನಲ್ಲಿ 12,561 ಕೋಟಿ ರೂಪಾಯಿಗಳಷ್ಟು ಹೊರೆಯಾಗುವುದು.

2008: ಕೆಲವು ಯುವಕರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾದರೆಂಬ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಜನರ ಗುಂಪೊಂದು ಆಗ್ರಾ ಜಿಲ್ಲೆಯ ಖೇರಗಢ ಪಟ್ಟಣದ ಪೊಲೀಸ್ ಠಾಣೆಗೆ ಕಿಚ್ಚಿಟ್ಟು ಆವರಣದಲ್ಲಿದ್ದ ಕೆಲವು ವಾಹನಗಳಿಗೂ ಬೆಂಕಿ ಹಚ್ಚಿದ ಘಟನೆ ನಡೆಯಿತು. ನಗರ ಪಂಚಾಯತ್ ಅಧ್ಯಕ್ಷ ಅನಿಲ್ ಗಾರ್ಗ್ ಅವರು ಕುಡಿದ ಮತ್ತಿನಲ್ಲಿ ಹಿಂಸಾಚಾರ ನಿರತರಾಗಿದ್ದ ನಾಲ್ವರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಇದಕ್ಕೆ ಕಾರಣವಾಯಿತು. ಪೊಲೀಸರು ಈ ಯುವಕರನ್ನು ಹಾಗೆಯೇ ಬಿಟ್ಟು ಬಿಟ್ಟಾಗ ಸಿಟ್ಟಿಗೆದ್ದ ಗಾರ್ಗ್ ಬೆಂಬಲಿಗರು ಗಲಭೆಯಲ್ಲಿ ತೊಡಗಿದರು ಎಂಬುದು ಪೊಲೀಸರ ಹೇಳಿಕೆ.

2008: ವಿಶ್ವವಿಖ್ಯಾತ ಕಾಶ್ಮೀರದ ದಲ್ ಸರೋವರಕ್ಕೆ ಮುಖಮಾಡಿ ತಲೆ ಎತ್ತಿರುವ ಐದು ಎಕರೆ ಪ್ರದೇಶದಲ್ಲಿ ಹರಡಿಕೊಂಡ ಏಷ್ಯಾದ ಅತಿ ದೊಡ್ಡ ಟ್ಯುಲಿಪ್ ಹೂವಿನ ಉದ್ಯಾನ 2008ರ ಏಪ್ರಿಲ್ ತಿಂಗಳಿನಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪುಷ್ಪೋದ್ಯಮ ಇಲಾಖೆಯ ನಿರ್ದೇಶಕ ಸರ್ವರ್ ನಾಗೇಶ್ ತಿಳಿಸಿದರು.

2007: ಪಾಕಿಸ್ಥಾನದ ಮುಖ್ಯ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಪ್ರಮಾಣ ವಚನ ಸ್ವೀಕರಿಸಿದರು ಪಾಕಿಸ್ಥಾನದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿದ ಪ್ರಥಮ ಹಿಂದೂ ಎಂಬ ಹೆಗ್ಗಳಿಕೆ ಅವರದಾಯಿತು.

2007: ಭಾರತೀಯ ಸಂಜಾತರಿಗೆ ನೀಡುವ ಇಂಡಿಯನ್ ಅಬ್ರಾಡ್ ಪ್ರಶಸ್ತಿಯನ್ನು ಪೆಪ್ಸಿಕೊ ಕಂಪೆನಿಯ ಅಧ್ಯಕ್ಷೆ ಇಂದಿರಾ ನೂಯಿ, ಗಗನಯಾತ್ರಿ ಸುನೀತಾ ವಿಲಿಯಮ್ಸ್, ಸಾಹಿತಿ ಸಲ್ಮಾನ್ ರಷ್ದಿ ಹಾಗೂ ಸಮುದಾಯ ನಾಯಕ ಸ್ವದೇಶ್ ಚಟರ್ಜಿ ಅವರಿಗೆ ನ್ಯೂಯಾರ್ಕಿನಲ್ಲಿ ನೀಡಲಾಯಿತು.

2007: ಸೋಮಾಲಿಯಾದ ಮೊಗದಿಶು ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ವಿಮಾನ ಅಪಘಾತದಲ್ಲಿ ಹನ್ನೊಂದು ಮಂದಿ ಮೃತರಾದರು. ಕ್ಷಿಪಣಿ ದಾಳಿಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಬೈಲೋರಷ್ಯ ಪ್ರಕಟಿಸಿತು.

2007: ಬಹುಕೋಟಿ ನಕಲಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಪೂರೈಸಿದ ಬೆಂಗಳೂರು ನಗರದ ವಿಶೇಷ ಸಿಬಿಐ ನ್ಯಾಯಾಲಯ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ಆತನ ನಾಲ್ವರು ಸಹಚರರಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ತಲಾ 6.75 ಲಕ್ಷ ರೂಪಾಯಿಗಳ ದಂಡ ವಿಧಿಸಿತು. ತೆಲಗಿಗೆ ರಾಜ್ಯದಲ್ಲಿ ವಿಧಿಸಲಾದ ಮೊದಲ ಶಿಕ್ಷೆ ಇದಾಯಿತು.

2007: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಂಟು ಮಂದಿ ಕ್ರಿಯಾಶೀಲರಿಗೆ `ನಾಡಚೇತನ' ಪ್ರಶಸ್ತಿ ಸೇರಿದಂತೆ ಹೆಸರಾಂತ ನಿರ್ದೇಶಕರಾಗಿದ್ದ ದಿವಂಗತ ಸಿ.ಜಿ. ಕೃಷ್ಣಸ್ವಾಮಿ ಅವರ ಹೆಸರಿನ ಸಿಜಿಕೆ ಪ್ರಶಸ್ತಿಯನ್ನು ಸಾಹಿತಿ ಕೋಟಗಾನಹಳ್ಳ ರಾಮಯ್ಯ ಅವರಿಗೆ ರಂಗಚೇತನ ಸಂಸ್ಥೆ ಬೆಂಗಳೂರಿನಲ್ಲಿ ಪ್ರಕಟಿಸಿತು.

2007: ಆವಶ್ಯಕತೆಗೆ ತಕ್ಕಂತೆ ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬೆಂಗಳೂರು ಭೂ ಸಾರಿಗೆ ಪ್ರಾಧಿಕಾರವನ್ನು ರಚಿಸಿ ಆದೇಶ ಹೊರಡಿಸಿತು.

 2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 50 ಮೀ. ರೈಫಲ್ ಮೂರು ಭಂಗಿ ಸ್ಪರ್ಧೆಯಲ್ಲಿ ಗಗನ್ ನಾರಂಗ್ ಮತ್ತು ಅಭಿನವ್ ಬಿಂದ್ರಾಗೆ ಮೊದಲ ಎರಡು ಸ್ಥಾನಗಳು ಲಭಿಸಿದವು.

2006: ದಕ್ಷಿಣ ಕೊರಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಹ್ಯಾನ್ ಮೈಂಗ್ ಸೂಕ್ ಆಯ್ಕೆಯಾದರು. 

2006: ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಸೇರಿದಂತೆ ಲಾಭದ ಹುದ್ದೆ ಹೊಂದಿದ ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 18 ಸದಸ್ಯರ ವಿರುದ್ಧ ಬಂದ ದೂರುಗಳನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿದರು. ಲಾಭದ ಹುದ್ದೆ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ನಾಮಕರಣಗೊಂಡಿದ್ದ ಕಪಿಲಾ ವಾತ್ಸಾಯನ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

2006: ಲಾಭದ ಹುದ್ದೆ ಹೊಂದಿರುವ ಜಾರ್ಖಂಡಿನ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ರಾಜ್ಯಪಾಲ ಸೈಯದ್ ಸಿಬ್ತೆ ರಜಿ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದರು. ಇದರಿಂದಾಗಿ ಬಿಜೆಪಿ ನೇತೃತ್ವದ ಅರ್ಜುನ್ ಮುಂಡಾ ಅವರ ಎನ್ ಡಿ ಎ ಸರ್ಕಾರ ಪತನದ ಅಂಚಿಗೆ ಬಂದು ನಿಂತಿತು.

1983: ಕಲಾವಿದೆ ಶ್ವೇತಾ ರತ್ನಾಕರ ಭಟ್ಟ ಜನನ.

1977: ಮೊರಾರ್ಜಿ ದೇಸಾಯಿ ಅವರು ಭಾರತದ ನಾಲ್ಕನೆಯ ಪ್ರಧಾನ ಮಂತ್ರಿಯಾದರು. ಕೇಂದ್ರದಲ್ಲಿ ಪ್ರಪ್ರಥಮ ಕಾಂಗ್ರೆಸ್ಸೇತರ ಸರ್ಕಾರವನ್ನು ಅವರು ಸ್ಥಾಪಿಸಿದರು. 81 ವರ್ಷ ವಯಸ್ಸಾಗಿದ್ದ ಅವರು ಅತ್ಯಂತ ಹಿರಿಯ ಪ್ರಧಾನಿ ಎನ್ನಿಸಿಕೊಂಡರು.

1943: ಸುಳಾದಿ ನೃತ್ಯ ಪ್ರಕಾರದಲ್ಲಿ ಪರಿಣತಿ ಪಡೆದ ನರ್ತಕಿ ಲಲಿತಾ ಶ್ರೀನಿವಾಸನ್ ಅವರು ಶಿವನ ಸಮುದ್ರದಲ್ಲಿ ಜನಿಸಿದರು. ಕೇಂದ್ರ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಸುಲಲಿತ ನೃತ್ಯ ಸಂಶೋಧನೆಗಾಗಿ ಶ್ರಮಿಸಿದ ಅವರು ಅನೇಕ ಪ್ರಾತ್ಯಕ್ಷಿಕೆ, ನೃತ್ಯ ಕಾರ್ಯಾಗಾರಗಳನ್ನು ಸಂಘಟಿಸಿದರು. ದೇಶ- ವಿದೇಶಗಳಲ್ಲಿ ಪ್ರಾತ್ಯಕ್ಷಿಕೆ, ಕಾರ್ಯಾಗಾರಗಳನ್ನು ನಡೆಸಿದರು. 

1932: ಜಗತ್ತಿನ ಮುಂಚೂಣಿಯ ಕ್ರಿಕೆಟ್ ಪ್ರಚಾರಕ ಲಾರ್ಡ್ ಹ್ಯಾರಿಸ್ ತಮ್ಮ 81ನೇ ವಯಸ್ಸಿನಲ್ಲಿ ಮೃತರಾದರು. ಮುಂಬೈಯ ಗವರ್ನರ್ ಆಗಿದ್ದ ಕಾಲದಲ್ಲಿ ಅವರು ಭಾರತದಲ್ಲಿ ಕ್ರಿಕೆಟನ್ನು ಬೆಳೆಸಲು ಪ್ರೋತ್ಸಾಹ ನೀಡಿದರು. ಐರೋಪ್ಯರು ಮತ್ತು ಪಾರ್ಸಿಗಳ ನಡುವೆ ವಾರ್ಷಿಕ ದೇಶೀ ಕ್ರಿಕೆಟ್ ಪಂದ್ಯಗಳನ್ನು ಅವರು ಆರಂಭಿಸಿದರು.

1882: ಜರ್ಮನ್ ವಿಜ್ಞಾನಿ ರಾಬರ್ಟ್ ಕೋಚ್ ಅವರು ಬರ್ಲಿನ್ನಿನ ಫಿಸಿಯೊಲಾಜಿಕಲ್ ಸೊಸೈಟಿಯಲ್ಲಿ ಎಲ್ಲ ರೂಪದ ಕ್ಷಯ (ಟ್ಯೂಬರ್ ಕ್ಯುಲೋಸಿಸ್) ರೋಗಕ್ಕೆ ಕಾರಣವಾದ ಟ್ಯೂಬರ್ ಕುಲ್ ಬ್ಯಾಸಿಲಸ್ಸನ್ನು ತಾನು ಪ್ರತ್ಯೇಕಿಸಿ ಅಭಿವೃದ್ಧಿ ಪಡಿಸಿರುವುದಾಗಿ ಪ್ರಕಟಿಸಿದ. (ಈತ ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ ಎಂಬುದನ್ನೂ ಹೆಚ್ಚು ಕಡಿಮೆ ಕಂಡುಕೊಂಡಿದ್ದ, ಆದರೆ ಬ್ರಿಟಿಷ್ ಬ್ಯಾಕ್ಟೀರಿಯಾ ತಜ್ಞ ರೊನಾಲ್ಡ್ ರಾಸ್ ತಾನು ಕಂಡುಕೊಂಡ ಇದೇ ನಿರ್ಣಯವನ್ನು ಕೋಚ್ ಗಿಂತ ಮೊದಲೇ ಪ್ರಕಟಿಸಿ ಈತನನ್ನು ಹಿಂದೆ ಹಾಕಿದ ಎಂಬುದು ಬಹುಜನಕ್ಕೆ ಗೊತ್ತಿಲ್ಲದ ಸಂಗತಿ). 

1874: `ಹ್ಯಾರಿ ಹೌಡಿನಿ' ಎಂದೇ ಖ್ಯಾತನಾಗಿದ್ದ ಅಮೆರಿಕದ ಖ್ಯಾತ ಐಂದ್ರಜಾಲಿಕ ಎರಿಕ್ ವೀಸ್ (1874-1926) ಹುಟ್ಟಿದ ದಿನ.

1834: ಇಂಗ್ಲಿಷ್ ವಿನ್ಯಾಸಕಾರ, ಕುಶಲಕರ್ಮಿ ವಿಲಿಯಂ ಮೋರಿಸ್ ಜನ್ಮದಿನ. ಈತ ನಿರ್ಮಿಸಿದ ಪೀಠೋಪಕರಣ, ಬಟ್ಟೆಗಳು, ವಾಲ್ ಪೇಪರ್ ಇನ್ನಿತರ ಅಲಂಕಾರಿಕ ವಸ್ತುಗಳು ಇಂಗ್ಲೆಂಡಿನಲ್ಲಿ ಕಲೆ ಮತ್ತು ಕುಶಲಕಲೆಗಳ ಚಳವಳಿಯನ್ನೇ ಹುಟ್ಟುಹಾಕಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಮಾರ್ಚ್ 23

ಇಂದಿನ ಇತಿಹಾಸ

ಮಾರ್ಚ್ 23

ಮಂಜೇಶ್ವರ ಗೋವಿಂದ ಪೈ ಅವರ 125ನೇ ಜನ್ಮದಿನಾಚರಣೆ ಮತ್ತು `ಗಿಳಿವಿಂಡು' ಕಟ್ಟಡ ಸಂಕೀರ್ಣದ ಶಿಲಾನ್ಯಾಸ ಸಮಾರಂಭವನ್ನು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯಿಲಿ ಅವರು ಕಾಸರಗೋಡಿನ ಮಂಜೇಶ್ವರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

2008: ಮಂಜೇಶ್ವರ ಗೋವಿಂದ ಪೈ ಅವರ 125ನೇ ಜನ್ಮದಿನಾಚರಣೆ ಮತ್ತು `ಗಿಳಿವಿಂಡು' ಕಟ್ಟಡ ಸಂಕೀರ್ಣದ ಶಿಲಾನ್ಯಾಸ ಸಮಾರಂಭವನ್ನು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯಿಲಿ ಅವರು ಕಾಸರಗೋಡಿನ ಮಂಜೇಶ್ವರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

2008: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯ ಆರ್ಭಟ ಮುಂದುವರೆಯಿತು. ಮಳೆಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಮೂವರು ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗುಲ್ಬರ್ಬ ಮತ್ತು ವಿಜಾಪುರ ಜಿಲ್ಲೆಗಳಲ್ಲಿ  ಒಬ್ಬರು ಸೇರಿ ಒಟ್ಟು ಏಳು ಮಂದಿ ಮೃತರಾದರು. ಕುರಿ, ಕೋಳಿ ಹಾಗೂ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿ ಭಾರೀ ನಷ್ಟ ಸಂಭವಿಸಿತು. ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕದ ರೈತರು ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾದರು. ಬೆಳೆದು ನಿಂತಿದ್ದ ಜಯಧರ ಹತ್ತಿ, ಬಿಳಿಜೋಳ, ಗೋಧಿ, ಕಡಲೆ, ಕುಸುಬಿ, ಕೆಂಪು ಮೆಣಸಿನಕಾಯಿ ಬೆಳೆಗಳೆಲ್ಲ ಮಳೆಗೆ ಆಹುತಿಯಾದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು.

2008: 700- 900 ಕಿ.ಮೀ. ದೂರದವರೆಗೆ ಕ್ರಮಿಸಬಲ್ಲ ಘನ ಇಂಧನ ಚಾಲಿತ `ಅಗ್ನಿ-1' ಕ್ಷಿಪಣಿಯ ಪರೀಕ್ಷೆ ಒರಿಸ್ಸಾದ ಬಾಲಸೋರಿಗೆ ಸಮೀಪದ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ನಡೆಯಿತು.  ಬೆಳಗ್ಗೆ 10.15ರ ಸಮಯದಲ್ಲಿ ಸಂಚಾರಿ ಉಡಾವಣಾ ವೇದಿಕೆಯಿಂದ (ಮೊಬೈಲ್ ಲಾಂಚರ್) ಕ್ಷಿಪಣಿ ಉಡಾಯಿಸಲಾಯಿತು. `ಅಗ್ನಿ-1' ಭಾರತೀಯ ಸೇನೆಗೆ ಪೂರೈಸಿರುವ ಏಕೈಕ ಘನ ಇಂಧನ ಕ್ಷಿಪಣಿ. ಪ್ರತಿ ಕ್ಷಿಪಣಿಯ ಸಾಮರ್ಥ್ಯ ಒರೆಗಲ್ಲಿಗೆ ಹಚ್ಚಲು ಡಿ ಆರ್ ಡಿ ಒ ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ನಡೆಸುವುದು. 2007ರ ಅಕ್ಟೋಬರಿನಲ್ಲಿ ವ್ಹೀಲರ್ ದ್ವೀಪದಿಂದಲೇ `ಅಗ್ನಿ-1'ರ ಪರೀಕ್ಷೆ ನಡೆಸಲಾಗಿತ್ತು. ದೇಶೀಯವಾಗಿ ನಿರ್ಮಿತವಾದ ಅಗ್ನಿ 15 ಮೀಟರ್ ಎತ್ತರವಾಗಿದ್ದು, 12 ಟನ್ ತೂಕವಿದೆ. 1000 ಕೆ.ಜಿ. ತೂಕದ ಶಸ್ತ್ರ ಹಾಗೂ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

2008: ಹೂಳು ತುಂಬಿ, ಮಲಿನಗೊಂಡಿದ್ದ ಶತಮಾನದಷ್ಟು ಹಳೆಯದಾದ ಕಲ್ಯಾಣಿಯ ಹೂಳು ತೆಗೆಯುವ ಮೂಲಕ ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮಸ್ಥರು ಮಹತ್ವದ ಕಾರ್ಯ ಕೈಗೊಂಡರು. ನೂರಕ್ಕೂ ಹೆಚ್ಚು ಮಂದಿಯ ತಂಡಗಳು ಮೂರು ದಿನಗಳಿಂದ ಎಡೆ ಬಿಡದೆ ಕಲ್ಯಾಣಿ ಬದಿ ಎತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡವು. ನೇಕಾರರು, ಕೃಷಿಕರು ವ್ಯಾಪಾರಿಗಳು ತಮ್ಮ ಕಸುಬನ್ನೇ ಮರೆತು ಕಲ್ಯಾಣಿ ಸ್ವಚ್ಛ ಕಾರ್ಯದಲ್ಲಿ ತಲ್ಲೀನರಾದರು. ಮಕ್ಕಳು ಮುದುಕರೆನ್ನದೆ ಗ್ರಾಮದ ಎಲ್ಲಾ ವರ್ಗದ ಜನ ಈ ಕಲ್ಯಾಣಿಯ ಬದಿ ಎತ್ತುವ ಕೆಲಸದಲ್ಲಿ ತೊಡಗಿದರು. ಕೊಳವೆ ಬಾವಿಗಳೇ ಇಲ್ಲದ ಕಾಲದಲ್ಲಿ, ನೂರು ವರ್ಷಗಳ ಹಿಂದೆ ಕೊಡಿಯಾಲದ ಸಾವುಕಾರ ಲಕ್ಷ್ಮಯ್ಯ ಊರಿನ ಋಣ ತೀರಿಸಲಿಕ್ಕಾಗಿ ಈ ಕಲ್ಯಾಣಿ ನಿರ್ಮಿಸಿದ್ದರು. ಇಡೀ ಊರಿಗೆ ಇದು ನೀರಿನ ಮೂಲವೂ ಆಗಿತ್ತು. 170 ಚದುರ ಅಡಿ ವಿಸ್ತಾರದ, ಸುಮಾರು 50 ಅಡಿ ಆಳದ ಕಲ್ಯಾಣಿಯನ್ನು ಚುರಕಿ ಗಾರೆ ಹಾಗೂ ಕಲ್ಲು ಚಪ್ಪಡಿ ಬಳಸಿ ನಿರ್ಮಿಸಲಾಗಿತ್ತು. ಕಲ್ಯಾಣಿ ಬತ್ತಿ ಹೋಗದಂತೆ ಕೂಗಳತೆಯ ದೂರದಲ್ಲಿ ನೀರಿನ ಕಟ್ಟೆ ನಿರ್ಮಿಸಿ, ಅಲ್ಲಿಂದ ನೀರಿನ ಪೂರಣವಾಗುವಂತೆ ಮಾಡಲಾಗಿತ್ತು. ಇದು ಕಲ್ಯಾಣಿ ನಿರ್ಮಸಿದವರ ದೂರದೃಷ್ಟಿಗೆ ಹಿಡಿದ ಕನ್ನಡಿ. ಒಂದಾನೊಂದು ಕಾಲದಲ್ಲಿ ಊರಿನ ನೀರಿನ ಆಕರವಾಗಿದ್ದ ಈ  ಕಲ್ಯಾಣಿಯು ಹೂಳು ತುಂಬಿ ನೀರು ಬಗ್ಗಡವಾಗಿತ್ತು. ಹತ್ತು ವರ್ಷಗಳಿಂದ ನೀರು ಬಳಕೆಗೆ ಬಾರದಷ್ಟು ಮಲಿನಗೊಂಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮಸ್ಥರು ಯುವಕರನ್ನು ಕಟ್ಟಿಕೊಂಡು, ಸರ್ಕಾರದ ನೆರವಿಗೆ ಕಾಯದೆ ಸ್ವಪ್ರೇರಣೆಯಿಂದ ಕಲ್ಯಾಣಿಯ ಮಲಿನ ತೊಳೆಯಲು ಟೊಂಕ ಕಟ್ಟಿ ನಿಂತರು.

2008: ದೆಹಲಿ-  ಚಂಡೀಗಢ-ಅಮೃತಸರ ಮಾರ್ಗದ ಪ್ರಯಾಣ ಸಮಯವನ್ನು ಅರ್ಧದಷ್ಟು ಉಳಿಸುವ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು  ರೈಲ್ವೆ ಇಲಾಖೆಯು ಜಾಗತಿಕ ಟೆಂಡರ್ ಆಹ್ವಾನಿಸಿತು. ಸದ್ಯ ದೆಹಲಿ ಮತ್ತು ಅಮೃತಸರ ನಡುವಿನ 520  ಕಿ.ಮೀ.  ದೂರವನ್ನು ಶತಾಬ್ದಿ  ಎಕ್ಸ್ ಪ್ರೆಸ್ ಐದುವರೆ ಗಂಟೆಯಲ್ಲಿ ಕ್ರಮಿಸುವುದು. ಇದೇ ಮಾರ್ಗದಲ್ಲಿ ಗಂಟೆಗೆ  300 ಕಿ.ಮೀ. ವೇಗದಲ್ಲಿ ಪ್ರಸ್ತಾವಿತ ಅತೀ ವೇಗದ ಅಥವಾ ಬುಲೆಟ್ ರೈಲನ್ನು ಓಡಿಸುವ ಸಲುವಾಗಿ ಪೂರ್ವಭಾವಿ ಸಮೀಕ್ಷೆ ನಡೆಸಲು ಟೆಂಡರ್ ಕರೆಯಲಾಯಿತು.

2008: ಸೇಂಟ್ ಪೀಟರ್ ಎಂದೇ ಕರೆಯಲಾಗುವ ಅಪೋಸ್ತ್ಲೇ ಪೀಟರ್ ಮೊದಲ ಪೋಪ್ ಆಗಿರಲಿಲ್ಲ ಹಾಗೂ ಈತ ಎಂದೂ ರೋಮ್ ನಗರಕ್ಕೆ ಕಾಲಿಟ್ಟಿರಲೇ ಇಲ್ಲ ಎಂದು ಹೊಸ ಸಾಕ್ಷ್ಯಚಿತ್ರವೊಂದು ಪ್ರತಿಪಾದಿಸಿತು. ಚಾನಲ್-4ರಲ್ಲಿ ಪ್ರಸಾರವಾದ ಈ ಸಾಕ್ಷ್ಯಚಿತ್ರದಲ್ಲಿ ಈ ಕುರಿತ ಹಲವಾರು ಅಂಶಗಳು ವ್ಯಕ್ತವಾದವು. ಪಶ್ಚಿಮದಲ್ಲಿ ಕ್ರೈಸ್ತ ಮತ ಪ್ರಸಾರ ಮಾಡಬೇಕೆಂಬ ಏಕೈಕ ಉದ್ದೇಶದಿಂದ ವ್ಯಾಟಿಕನ್ ನಗರ ಜಗತ್ತನ್ನು ದಿಕ್ಕುತಪ್ಪಿಸಿದೆ ಎಂದು ಪ್ರಮುಖ ಶಿಕ್ಷಣವೇತ್ತರು ಈ ಸಾಕ್ಷ್ಯಚಿತ್ರದಲ್ಲಿ ಆಪಾದಿಸಿದರು. ಸೇಂಟ್ ಪೀಟರ್ ಅವರ ಅಂತ್ಯಸಂಸ್ಕಾರ ರೋಮ್ನಲ್ಲಿ ನಡೆಯಿತು ಎಂಬ ಸಂಗತಿಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಈ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಿರುವ ಆಕ್ಸ್ ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದ ಡಾ. ರೋಬರ್ಟ್ ಬೆಕ್ ಫೋರ್ಡ್ ಹೇಳಿದರು. ವಿಶ್ವದ ರೋಮ್ ಸಮುದಾಯದ ಮೇಲೆ ನಂಬಿಕೆ ಹುಟ್ಟಿಸುವ ದಿಸೆಯಲ್ಲಿ ಸರಿಸುಮಾರು 2 ಸಾವಿರ ವರ್ಷಗಳ ಕೆಳಗೆ ಸೇಂಟ್ ಪೀಟರನನ್ನು ಇಲ್ಲಿ ಸಮಾಧಿ ಮಾಡಲಾಯಿತು ಎಂಬ ಅಂತೆ ಕಂತೆಗಳನ್ನು ಹೆಣೆಯಲಾಗಿದೆ ಎಂದು ಬೆಕ್ ಫೋರ್ಡ್ ಹೇಳಿರುವುದಾಗಿ `ದಿ ಸಂಡೇ ಟೆಲಿಗ್ರಾಫ್' ವರದಿ ಮಾಡಿತು.

2007: ಬೆಂಗಳೂರಿನ ಕೋಟೆ ಶ್ರೀರಾಮಸೇವಾ ಮಂಡಲಿಯ ಸ್ಥಾಪಕ `ಎಸ್.ವಿ. ನಾರಾಯಣಸ್ವಾಮಿ ರಾವ್' ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ (2007) ಹಿರಿಯ ಗಾಯಕ ವಿದ್ವಾನ್ ನೇದನೂರಿ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು.

2007: ಹಿರಿಯ ಕವಿ ಡಾ. ಎನ್. ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಇರಾಕಿನಲ್ಲಿ ಇರುವ ಅಮೆರಿಕದ ಪಡೆಗಳ ವಾಪಸಾತಿಯನ್ನು  ನಾಲ್ಕು ತಿಂಗಳಲ್ಲಿ ಆರಂಭಿಸಲು ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರಿಗೆ ಅವಕಾಶ ಒದಗಿಸುವ ಡೆಮಾಕ್ರಾಟಿಕ್ ಯೋಜನೆಗೆ  ಸೆನೆಟ್ ಸಮಿತಿಯ ಅನುಮೋದನೆ ಲಭಿಸಿತು. ಇರಾಕ್ ಮತ್ತು  ಆಫ್ಘಾನಿಸ್ಥಾನದಲ್ಲಿನ ಸಮರಗಳಿಗೆ ನಿಧಿ ಒದಗಿಸುವುದನ್ನು ಮುಂದುವರೆಸಲು ಅವಕಾಶ ನೀಡುವ 121.6 ಶತಕೋಟಿ ಡಾಲರ್ ಮೊತ್ತದ ಮಸೂದೆಗೆ ಸೆನೆಟ್ ಹಣಕಾಸು ಸಂಬಂಧಿತ ಸಮಿತಿ ಅನುಮೋದನೆ ನೀಡಿತು. ಆದರೆ ಅಮೆರಿಕದ ಎಲ್ಲ ಯುದ್ಧ ಪಡೆಗಳನ್ನು 2008ರ ಮಾರ್ಚ್ 31 ರ ಒಳಗಾಗಿ  ಹಿಂದಕ್ಕೆ  ಕರೆಸಿಕೊಳ್ಳಬೇಕು ಎಂಬ ಗಡುವನ್ನೂ  ವಿಧಿಸಿತು. ಇಂತಹುದೇ ಪ್ರಸ್ತಾವಕ್ಕೆ  ಮಂಜೂರಾತಿ  ನೀಡಲು ಸೆನೆಟ್ ವಾರದ ಹಿಂದೆ ವಿಫಲಗೊಂಡಿತ್ತು.

2007: ಪಾಕಿಸ್ಥಾನದ ಖ್ಯಾತ ಕ್ರಿಕೆಟ್ ತರಬೇತುದಾರ ಬಾಬ್ ವೂಲ್ಮರ್ ಸಾವಿನ ಸುತ್ತ ಹಬ್ಬಿದ ಬಿರುಗಾಳಿಯ ನಡುವೆ ದಿಕ್ಕು ತೋಚದೆ ಕಂಗೆಟ್ಟಿದ್ದ ಜಮೈಕಾ ಪೊಲೀಸರು ಕೊನೆಗೂ `ಇದು ಕೊಲೆ' ಎಂಬ ತೀರ್ಮಾನಕ್ಕೆ ಬಂದರು.

2007: ಕೋಲಾರ ಮೂಲದ ಭಾರತೀಯ ತೈಲ ನಿಗಮದ (ಐಓಸಿ) ಮಾರಾಟ ಅಧಿಕಾರಿ ಎಸ್. ಮಂಜುನಾಥ ಅವರ ಹತ್ಯೆ ಪ್ರಕರಣದ ಎಲ್ಲ 8 ಆರೋಪಿಗಳನ್ನು ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲಾ ನ್ಯಾಯಾಲಯ `ತಪ್ಪಿತಸ್ಥರು' ಎಂದು ಘೋಷಿಸಿತು. ಲಖನೌ ಐಐಎಂನಿಂದ ಪದವಿ ಪಡೆದಿದ್ದ ಮಂಜುನಾಥ 2005ರ ನವೆಂಬರ್ 19ರಂದು ಕೊಲೆಯಾಗಿದ್ದರು. ಕಲಬೆರಕೆ ಪೆಟ್ರೋಲ್ ಮಾರಾಟ ಮಾಡಿದ್ದಕ್ಕಾಗಿ ಪರವಾನಗಿ ರದ್ದು ಪಡಿಸಿದ್ದಕ್ಕಾಗಿ ಪವನ್ ಪೆಟ್ರೋಲ್ ಪಂಪ್ ಮಾಲೀಕರ ಮಗ ಪವನ್ ಕುಮಾರ್ ಕೆಲವು ಹಂತಕರ ನೆರವಿನಿಂದ ಮಂಜುನಾಥ ಅವರ ಕೊಲೆ ಮಾಡಿಸಿದ್ದ. ಕೆಲದಿನಗಳ ನಂತರ ಮಂಜುನಾಥನ ಶವ ಪಕ್ಕದ ಸೀತಾಪುರ ಜಿಲ್ಲೆಯಲ್ಲಿ ಪತ್ತೆಯಾಗಿತ್ತು.

2007: ನಕಲಿ ಛಾಪಾಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಮತ್ತು ಆತನ ನಾಲ್ವರು ಸಹಚರರನ್ನು (ಇರ್ಫಾನ್ ಅಹಮದ್, ವಜೀರ್ ಅಹಮದ್ ಸೈಲಿಕ್ ಮತ್ತು ಪ್ರದೀಪ ಕುಮಾರ್) ಅಪರಾಧಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯ ಪರಿಗಣಿಸಿತು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ವಿಶ್ವನಾಥ ಅಗಡಿ ಅವರು ಈ ತೀರ್ಪನ್ನು ಪ್ರಕಟಿಸಿದರು.

2007: ವಿಶೇಷ ಆರ್ಥಿಕ ವಲಯ (ಎಸ್ ಇ ಜೆಡ್) ಸ್ಥಾಪನೆ ಕುರಿತಂತೆ ಸಚಿವರ ತಂಡ (ಜಿ ಎಫ್ ಎಂ) ಅಧ್ಯಯನ ನಡೆಸಿ ವರದಿ ನೀಡುವವರೆಗೆ ಹೊಸ ಎಸ್ ಇ ಜೆಡ್ ಸ್ಥಾಪನೆಗೆ ಭೂಮಿ ವಶಪಡಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ ಎಂದು ಕೈಗಾರಿಕಾ ರಾಜ್ಯ ಸಚಿವ ಅಶ್ವಿನಿ ಕುಮಾರ ತಿಳಿಸಿದರು.

 2006:  ಲಾಭದಾಯಕ ಹುದ್ದೆಯ ವಿವಾದದ ಉರುಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭಾ ಸದಸ್ಯತ್ವ ಮತ್ತು ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ `ತಲೆದಂಡ' ಒಪ್ಪಿಸಿದರು. ಸೋನಿಯಾಗಾಂಧಿ ರಕ್ಷಣೆಗೆ ಯುಪಿಎ ಸರ್ಕಾರ ಇನ್ನೇನು ಸುಗ್ರೀವಾಜ್ಞೆ ಹೊರಡಿಸಲಿದೆ ಎಂಬ ನಿರೀಕ್ಷೆಯ ನಡುವೆಯೇ ಕಾಂಗ್ರೆಸ್ ಅಧ್ಯಕ್ಷೆ ಅನಿರೀಕ್ಷಿತ ನಿರ್ಧಾರದ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್  ಅವರು ವಕೀಲರ ತಂಡದ ಜತೆ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಒಂಭತ್ತು ಪುಟಗಳ ದೀರ್ಘ ಮನವಿ ಪತ್ರ ಸಲ್ಲಿಸಿ ಸೋನಿಯಾಗಾಂಧಿ ಹೊಂದಿರುವ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಸ್ಥಾನ ಲಾಭದಾಯಕ ಹುದ್ದೆಯಾಗಿರುವ ಕಾರಣ ಸಂವಿಧಾನದ 102ನೇ ವಿಧಿ ಪ್ರಕಾರ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಕೋರಿದ್ದು ಇದಕ್ಕೆ ಕಾರಣವಾಯಿತು. ಸೋನಿಯಾ ದಾರಿಯನ್ನೇ ಅನುಸರಿಸಿದ ಕಾಂಗ್ರೆಸ್ ಸಂಸದ ಕರಣ್ ಸಿಂಗ್ ಅವರೂ ತಮ್ಮ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

2006: ಶಾಸಕರ ಸದಸ್ಯತ್ವ ರದ್ದು ಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಜನತಾದಳದ (ಎಸ್) 39 ಮಂದಿ ಶಾಸಕರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ವಿಧಾನಸಭೆ ಅಧ್ಯಕ್ಷ ಕೃಷ್ಣ ಸದನದಲ್ಲಿ ಪ್ರಕಟಿಸಿದರು. ಶಾಸಕ ವಾಟಾಳ್ ನಾಗರಾಜ್ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದರು.

2006: ತನ್ನ ಗೆಳತಿಯ ಕತ್ತು ಹಿಸುಕಿ ಕೊಂದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಲೆ ಹ್ಯೂ ಅಂಗ್ (27) ಎಂಬ ವ್ಯಕ್ತಿಗೆ ಆತನ ಕೋರಿಕೆ ಮೇರೆಗೆ ಹನಾಯ್ ನ್ಯಾಯಾಲಯ ಮರಣದಂಡನೆ ವಿಧಿಸಿತು. 2004ರ ಜುಲೈ ತಿಂಗಳಲ್ಲಿ ಹೊ ಚಿ ಮಿನ್ ನಗರದಲ್ಲಿ ಗೆಳತಿಯ ಜೊತೆಗೆ ಕಾರು ಓಡಿಸುತ್ತಿದ್ದಾಗ ಅಪಘಾತ ಸಂಭವಿಸಿತು. ಆಗ ಆತನನ್ನು ಬಿಟ್ಟು ಪರಾರಿಯಾಗಲು ಯತ್ನಿಸ್ದಿದಕ್ಕಾಗಿ ಗೆಳತಿಯನ್ನು ಕತ್ತು ಹಿಚುಕಿ ಕೊಲೆ ಮಾಡಿದ್ದ. ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಪಾಪಪ್ರಜ್ಞೆಯಿಂದ ಕೊರಗುತ್ತಿದ್ದ ಆತ ಮೇಲ್ಮನವಿ ಸಲ್ಲಿಸಿ ಮರಣದಂಡನೆ ವಿಧಿಸಲು ಕೋರಿದ. ಆತನ ಮೊರೆಗೆ ನ್ಯಾಯಾಲಯ ಓಗೊಟ್ಟು ಮರಣದಂಡನೆ ದಯಪಾಲಿಸಿತು.

2006: ವಿಶ್ವಮಟ್ಟದ ಪೈಪೋಟಿ ಎದುರಿಸಲು ಬ್ರಿಟನ್ ಅರ್ಥವ್ಯವಸ್ಥೆಯನ್ನು ಸಜ್ಜುಗೊಳಿಸುವುದಕ್ಕಾಗಿ ಬ್ರಿಟಿಷ್ ಹಣಕಾಸು ಸಚಿವ ಗೋರ್ಡಾನ್ ಬ್ರೌನ್ ಅವರಿಗೆ ಸಲಹೆ ನೀಡಲು ರಚಿಸಲಾದ ಸಮಿತಿಯಲ್ಲಿ ಭಾರತದ ಪ್ರಮುಖ ಉದ್ಯಮಿ ಟಾಟಾ ಸಮೂಹದ ರತನ್ ಟಾಟಾ ಸೇರ್ಪಡೆಯಾದರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯ ಮಹಿಳೆಯರ 50 ಮೀ. ರೈಫಲ್ ವಿಭಾಗದಲ್ಲಿ ಭಾರತದ ಅನುಜಾ ಜಂಗ್ ಸ್ವರ್ಣ ಪದಕ ಗೆದ್ದುಕೊಂಡರು.

2001: ರಷ್ಯದ ಬಾಹ್ಯಾಕಾಶ ನಿಲ್ದಾಣ `ಮೀರ್' (ರಷ್ಯದಲ್ಲಿ ಈ ಶಬ್ದಕ್ಕೆ ಶಾಂತಿ ಮತ್ತು ಜಗತ್ತು ಎಂಬ ಅರ್ಥಗಳಿವೆ.) 15 ವರ್ಷಗಳ ಸೇವೆಯ ಬಳಿಕ ಆಸ್ಟ್ರೇಲಿಯಾ ಮತ್ತು ಚಿಲಿ ನಡುವಣ ಜನವಸತಿ ರಹಿತ ಫೆಸಿಫಿಕ್ ಸಾಗರದಲ್ಲಿ ಬಿತ್ತು. ಇದು ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಬಾಹ್ಯಾಕಾಶ ನಿಲ್ದಾಣವಾಗಿ ಕಾರ್ಯ ನಿರ್ವಹಿಸಿತು.

 1983: ಮೊತ್ತ ಮೊದಲ ಬಾರಿಗೆ ಖಾಯಂ ಕೃತಕ ಹೃದಯ ಕಸಿ ಮಾಡಿಸಿಕೊಂಡ ಡಾ. ಬಾರ್ನಿ ಕ್ಲಾರ್ಕ್ ಅವರು ಯುನಿವರ್ಸಿಟಿ ಉಟಾಹ್ ಮೆಡಿಕಲ್ ಸೆಂಟರಿನಲ್ಲಿ ಮೃತರಾದರು. ಕೃತಕ ಹೃದಯದೊಂದಿಗೆ ಅವರು 112 ದಿನಗಳ ಕಾಲ ಬದುಕಿದ್ದರು.

1980: ಭಾರತದ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ್ನು ಗೆದ್ದುಕೊಂಡ ಪ್ರಥಮ ಭಾರತೀಯ ಎನಿಸಿಕೊಂಡರು. ಅವರು ಸೋಲಿಸಿದ್ದು ಇಂಡೋನೇಸಿಯಾದ ಲೀಮ್ ಸ್ವೀ ಕಿಂಗ್ ಅವರನ್ನು. 

1955: ಕಲಾವಿದ ತಿಮ್ಮಯ್ಯ ಸಿ.ಎಂ. ಜನನ.

1951: ಹಲವಾರು ರಂಗಸಂಸ್ಥೆಗಳನ್ನು ಕಟ್ಟಿ, ನಿರ್ದೇಶಕರಾಗಿ ಹಲವಾರು ಮಂದಿ ಶ್ರೇಷ್ಠ ನಾಟಕಕಾರರ ನಾಟಕಗಳನ್ನು ರಂಗಭೂಮಿಗೆ ತಂದ ರಂಗಕರ್ಮಿ ಪ್ರಸನ್ನ ಅವರು ಪ್ರಹ್ಲಾದಾಚಾರ್ಯ- ಹೇಮಾವತಿ ಬಾಯಿ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಜನಿಸಿದರು. ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಬಹುಮಾನ, ಪು.ತಿ.ನ. ಪುರಸ್ಕಾರ, ಚದುರಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಪ್ರಸನ್ನ ಅವರಿಗೆ ಸಂದಿವೆ.

1931: ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರನ್ನು ಗಲ್ಲಿಗೇರಿಸಲಾಯಿತು.

1928: ಕಲಾವಿದ ಬಿ.ಆರ್. ಶೇಷಾದ್ರಿ ಜನನ.

1919: ಕಲಾವಿದ ಸುಗಂಧ ರಾಮನ್ ಜನನ.

1919: ಬೆನಿಟೋ ಮುಸ್ಸೋಲಿನಿ ಇಟಾಲಿಯನ್ ಫ್ಯಾಸಿಸ್ಟ್ ಪಾರ್ಟಿಯನ್ನು ಮಿಲಾನಿನಲ್ಲಿ ಸ್ಥಾಪಿಸಿದ. ಮುಸ್ಸೋಲಿನಿ ಈ ಪಾರ್ಟಿಗೆ `ಫ್ಯಾಸಿ ಡಿ ಕೊಂಬಾಟ್ಟಿಮೆಂಟೋ' ಎಂದು ಹೆಸರಿಟ್ಟ. ಇದರೊಂದಿಗೆ `ಫ್ಯಾಸಿಸಂ' ಜನ್ಮತಳೆಯಿತು.

1910: ಭಾರತದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜವಾದಿ ನಾಯಕ ರಾಮ್ ಮನೋಹರ ಲೋಹಿಯಾ ಹುಟ್ಟಿದ ದಿನ. ಲೋಹಿಯಾ ಅವರು 1952ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಪ್ರಜಾ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

1910: ಅಕಿರಾ ಕುರೊಸಾವಾ ಹುಟ್ಟಿದ ದಿನ. ಜಪಾನಿನ ಚಿತ್ರ ನಿರ್ದೇಶಕರಾದ ಇವರು `ರಾಶೊಮೋನ್' `ಸೆವೆನ್ ಸಮುರಾಯಿ' ಚಿತ್ರಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದರು.

1899: ಗೋವಾವನ್ನು ಪೋರ್ಚುಗೀಸ್ ಆಡಳಿತದಿಂದ ಮುಕ್ತಗೊಳಿಸುವ ಸಲುವಾಗಿ ಹೋರಾಡಿದ ಭಾರತೀಯ ಪತ್ರಕರ್ತ, ಕವಿ, ಸ್ವಾತಂತ್ರ್ಯ ಹೋರಾಟಗಾರ ಟೆಲೋ ಡಿ ಮಸ್ಕರೇಙಸ್ (1899-1979) ಜನ್ಮದಿನ.

1893: ಕಲಾವಿದ ಎನ್.ವಿ. ಚಿನ್ನಾಚಾರಿ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, March 25, 2009

ಇಂದಿನ ಇತಿಹಾಸ History Today ಮಾರ್ಚ್ 22

ಇಂದಿನ ಇತಿಹಾಸ

ಮಾರ್ಚ್ 22

 ಭಾರತೀಯ  ಸಂಜಾತ  ಅಮೆರಿಕನ್ ಗಣಿತಜ್ಞ ಶ್ರೀನಿವಾಸ  ಎಸ್. ಆರ್. ವರದನ್  (67) ಅವರು, ಗಣಿತ ಕ್ಷೇತ್ರಕ್ಕೆ  ನೀಡಲಾಗುವ 8.50 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಪ್ರತಿಷ್ಠಿತ 'ಅಬೆಲ್ ಪ್ರಶಸ್ತಿ'ಯನ್ನು ಗೆದ್ದುಕೊಂಡರು. `ಸಂಭವನೀಯ  ಸಿದ್ಧಾಂತಕ್ಕೆ  ನೀಡಿರುವ ಮೂಲಭೂತ ಕೊಡುಗೆಗಳಿಗಾಗಿ' ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕೌರಾಂಟ್ ಗಣಿತ ವಿಜ್ಞಾನ  ಸಂಸ್ಥೆಯ ಪ್ರೊಫೆಸರ್  ಶ್ರೀನಿವಾಸ ಅವರಿಗೆ  ಈ ಪ್ರಶಸ್ತಿ  ನೀಡಲಾಗಿದೆ ಎಂದು ಪ್ರಶಸ್ತಿ  ಸಮಿತಿಯ ಪ್ರಕಟಣೆ  ತಿಳಿಸಿತು.

2008: ಗುಲ್ಬರ್ಗದ ಆಳಂದದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಸಂಭವಿಸಿದ ಗುಂಪು ಘರ್ಷಣೆಯಲ್ಲಿ ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು. ಬಣ್ಣ ಎರಚುವ ನೆಪದಲ್ಲಿ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಗೆಳೆಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆಯಿತು.

2008: ಚೀನಾದ ವಾಯವ್ಯ ಭಾಗದಲ್ಲಿರುವ ವೈಗುರ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದಿನ ದಿನ ಸಂಭವಿಸಿದ ಭಾರಿ ಭೂಕಂಪನದಿಂದ ಸಹಸ್ರಾರು ಮನೆಗಳಿಗೆ ಹಾನಿ ಉಂಟಾಗಿ ಸುಮಾರು 44 ಸಾವಿರ ಜನರು ಆಶ್ರಯ ಕಳೆದುಕೊಂಡರು ಎಂದು ಅಧಿಕೃತ ಮೂಲಗಳು ತಿಳಿಸಿದವು. ಮೊದಲು ರಿಕ್ಟರ್ ಮಾಪಕದಲ್ಲಿ 7.3ರಷ್ಟು ಇದ್ದ ಕಂಪನವು ನಂತರ 3.8ಕ್ಕೇ ಇಳಿಯಿತಾದರೂ ಸುಮಾರು 12 ಬಾರಿ ಭೂಮಿಯನ್ನು ಅದುರಿಸಿತು. ದಕ್ಷಿಣ ಕ್ಸಿಯಾಂಗಿನ ಯುತೆನ್, ಕ್ವಿರಾ ಮತ್ತು ಲೋಪ್ನಲ್ಲಿ ಭೂಕಂಪನದಿಂದ ಸುಮಾರು 44 ಸಾವಿರ ಜನರಿಗೆ ತೊಂದರೆಯಾಯಿತು.

2008: ಟಿಬೆಟಿನ ಧಾರ್ಮಿಕ ಮುಖಂಡ ದಲೈಲಾಮ ಅವರ ಜೊತೆ ಮಾತುಕತೆ ನಡೆಸಬೇಕು ಎಂಬ ಸಲಹೆಯನ್ನು ಸಾರಾಸಗಾಟಾಗಿ ತಳ್ಳಿಹಾಕಿದ ಚೀನಾ, ಟಿಬೆಟ್ ಸ್ವಾತಂತ್ರ್ಯ  ಹೋರಾಟವನ್ನು ಹತ್ತಿಕ್ಕುವ ಪಣ ತೊಟ್ಟಿತು.

2008: ಆತ್ಮಾಹತ್ಯಾ ದಾಳಿಯಲ್ಲಿ ಮೂವರು ಉಗ್ರರು ಜೀವ ತೆತ್ತು, ಶ್ರೀಲಂಕಾ ನೌಕಾ ಪಡೆಯ ಹಡಗೊಂದನ್ನು ಮುಳುಗಿಸಿದರು ಎಂದು ಎಲ್ ಟಿ ಟಿ ಇ ಪ್ರಕಟಿಸಿತು. ಆದರೆ ನೌಕಾ ದಳವು ಎಲ್ ಟಿ ಟಿ ಇ ಜೊತೆಗೆ ಅಂತಹ ಯಾವುದೇ ಘರ್ಷಣೆಯನ್ನೂ ನಡೆಸಿಲ್ಲ ಎಂದು ಸೇನಾಪಡೆ ತಿಳಿಸಿತು.

2008: ಕರ್ನಾಟಕ ರಾಜ್ಯದಲ್ಲಿ ಮಳೆಯ ಅಬ್ಬರ ನಿಲ್ಲಲಿಲ್ಲ. ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಟೊಮೆಟೋ, ಕಾಫಿ,  ಸೂರ್ಯಕಾಂತಿ, ದಾಳಿಂಬೆ, ಕಲ್ಲಂಗಡಿ, ಹುಣಸೆ, ಕನಕಾಂಬರ ಹಾಗೂ ಮಾವಿನ ಮಿಡಿಗೆ ಹಾನಿಯಾಯಿತು. ಕೆಲವು ಜಿಲ್ಲೆಗಳಲ್ಲಿ ನೀರಾವರಿ ಭಾಗದ ಬೆಳೆಗೆ ಮಳೆಯಿಂದ ಅನುಕೂಲವೇ ಆಯಿತು.

2008: ತಮಿಳುನಾಡಿನಲ್ಲಿ ವಾರದಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಎರಡು ದಿನಗಳಲ್ಲಿ 12 ಜನ ಮೃತರಾದರು. ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆ ನಾಶವಾಯಿತು. 20 ಸಾವಿರ ಎಕರೆಯಷ್ಟು ಭತ್ತದ ಬೆಳೆ ಜಲಾವೃತಗೊಂಡಿತು.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯು (ಪಿಪಿಪಿ) ಪಕ್ಷದ ಉಪಾಧ್ಯಕ್ಷ ಹಾಗೂ ನ್ಯಾಷನಲ್ ಅಸೆಂಬ್ಲಿಯ (ಸಂಸತ್ತು) ಮಾಜಿ ಸ್ಪೀಕರ್ ಸೈಯದ್ ಯೂಸಫ್ ರಾಜಾ ಗಿಲಾನಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತು.

2008: ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನಗಳ ಹಾರಾಟ ಶನಿವಾರ ಹಿಂದಿನ ದಿನ ನಡುರಾತ್ರಿಯಿಂದ ಆರಂಭಗೊಂಡಿತು. ಇದೇ ಸಮಯಕ್ಕೆ ಬೇಗಮ್ ಪೇಟೆಯಲ್ಲಿನ ಮೊದಲಿನ ವಿಮಾನನಿಲ್ದಾಣವನ್ನು ಮುಚ್ಚಲಾಯಿತು. ಶಂಷಾಬಾದಿನಲ್ಲಿನ ಹೊಸ ವಿಮಾನನಿಲ್ದಾಣದಲ್ಲಿ ಲುಫ್ತಾನ್ಸಾ ವಿಮಾನ ಬಂದಿಳಿಯುತ್ತಿದ್ದಂತೆ ಭವ್ಯ ಸ್ವಾಗತ ನೀಡಲಾಯಿತು. 

2007: `ಯುಜಿ' ಎಂದೇ ಖ್ಯಾತರಾಗಿದ್ದ ತತ್ವಜ್ಞಾನಿ ಉಪ್ಪಲೇರಿ ಗೋಪಾಲಕೃಷ್ಣ ಕೃಷ್ಣಮೂರ್ತಿ (89) ಇಟಲಿಯ ವಾಲೆಕ್ರಾಸಿಯಾದಲ್ಲಿ ನಿಧನರಾದರು.

2007:  ಭಾರತೀಯ  ಸಂಜಾತ  ಅಮೆರಿಕನ್ ಗಣಿತಜ್ಞ ಶ್ರೀನಿವಾಸ  ಎಸ್. ಆರ್. ವರದನ್  (67) ಅವರು, ಗಣಿತ ಕ್ಷೇತ್ರಕ್ಕೆ  ನೀಡಲಾಗುವ 8.50 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಪ್ರತಿಷ್ಠಿತ 'ಅಬೆಲ್ ಪ್ರಶಸ್ತಿ'ಯನ್ನು ಗೆದ್ದುಕೊಂಡರು. `ಸಂಭವನೀಯ  ಸಿದ್ಧಾಂತಕ್ಕೆ  ನೀಡಿರುವ ಮೂಲಭೂತ ಕೊಡುಗೆಗಳಿಗಾಗಿ' ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕೌರಾಂಟ್ ಗಣಿತ ವಿಜ್ಞಾನ  ಸಂಸ್ಥೆಯ ಪ್ರೊಫೆಸರ್  ಶ್ರೀನಿವಾಸ ಅವರಿಗೆ  ಈ ಪ್ರಶಸ್ತಿ  ನೀಡಲಾಗಿದೆ ಎಂದು ಪ್ರಶಸ್ತಿ  ಸಮಿತಿಯ ಪ್ರಕಟಣೆ  ತಿಳಿಸಿತು. ನೊಬೆಲ್ ಪ್ರಶಸ್ತಿಗೆ ಸರಿಸಮವಾದ ಈ  60 ಲಕ್ಷ ಕ್ರೋನರ್ ಪ್ರಶಸ್ತಿಯನ್ನು ನಾರ್ವೆಯ ಖ್ಯಾತ ಗಣಿತಜ್ಞ ನೀಲ್ಸ್  ಹೆನ್ರಿಕ್  ಅಬೆಲ್ ಅವರ  200ನೇ  ಜನ್ಮಶತಮಾನೋತ್ಸವದ ಅಂಗವಾಗಿ ನಾರ್ವೆ ಸರ್ಕಾರವು 2002ರಲ್ಲಿ ಸ್ಥಾಪಿಸಿದೆ. ನಾರ್ವೆಯ ದೊರೆ ಐದನೇ ಹೆರಾಲ್ಡ್ ಅವರಿಂದ ಈ ಪ್ರಶಸ್ತಿಯನ್ನು  ಶ್ರೀನಿವಾಸ ಅವರು ಮೇ 22ರಂದು ಓಸ್ಲೋದಲ್ಲಿ ಸ್ವೀಕರಿಸುವರು.

2007: ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದಿನ  ಸುತ್ತಲಿನ ಪ್ರದೇಶಗಳಲ್ಲಿ ಸತ್ತ ಕಾಗೆಗಳಲ್ಲಿ ಮಾರಣಾಂತಿಕ ಪಕ್ಷಿಜ್ವರ (ಕೋಳಿಜ್ವರ) ಹರಡುವ ವೈರಸ್ ಎಚ್ 5 ಎನ್ 1 ವೈರಸ್ ಇರುವುದು ಪತ್ತೆಯಾಗಿರುವುದಾಗಿ ಇಸ್ಲಾಮಾಬಾದಿನ  ಕೃಷಿ ಪ್ರಾಧಿಕಾರ ಪ್ರಕಟಿಸಿತು. ಸುಮಾರು ಎಪ್ಪತ್ತಕ್ಕೂ ಹೆಚ್ಚು ಕಾಗೆಗಳಲ್ಲಿ ಈ ವೈರಸ್ ಇರುವುದು ಪತ್ತೆಯಾಯಿತು. ರಾಜಧಾನಿಯ ಉದ್ಯಾನವನಗಳಲ್ಲಿ ಸತ್ತುಬಿದ್ದಿದ್ದ ಎಂಟು ಕಾಗೆಗಳ ದೇಹವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವುಗಳಲ್ಲಿ ಎರಡು ಕಾಗೆಗಳಲ್ಲಿ ವೈರಸ್ ಇರುವುದು ಖಚಿತವಾಗಿದೆ ಎಂದು ಆಹಾರ  ಮತ್ತು ಕೃಷಿ ಸಚಿವಾಲಯದಲ್ಲಿ ಜಾನುವಾರು ಇಲಾಖೆ ಆಯುಕ್ತ ಮಹಮ್ಮದ್ ಅಫ್ಜಲ್ ಹೇಳಿದರು.

2007: ಪಾಕಿಸ್ಥಾನವು ಸುಮಾರು 700 ಕಿ.ಮೀ. ದೂರ ಅಣ್ವಸ್ತ್ರ ಸಾಗಿಸುವ ಸಾಮರ್ಥ್ಯದ `ಬಾಬರ್' (ಹಾಟ್ಫ್-7)  ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು. ಭಾರತದ ಹಲವಾರು ನಗರಗಳನ್ನು ಕ್ರಮಿಸಬಲ್ಲ ಸಾಮರ್ಥ್ಯವುಳ್ಳ್ಳ ಈ ಕ್ಷಿಪಣಿ ರೇಡಾರ್ ಶೋಧಕದ ಕಣ್ತಪ್ಪಿಸಿ, ಅಣ್ವಸ್ತ್ರ ಸೇರಿದಂತೆ ವಿವಿಧ ಯುದ್ಧ ಸಾಮಗ್ರಿಗಳನ್ನು ಬಹುದೂರ ಸಾಗಿಸಬಲ್ಲುದು. ಈ ಹಿಂದೆ 2005ರಲ್ಲಿ, 500 ಕಿ.ಮೀ. ದೂರ ಸಾಗುವ ಸಾಮರ್ಥ್ಯದ ಬಾಬರ್ ಕ್ಷಿಪಣಿಯನ್ನು ಮೊದಲ ಹಂತದ ಪರೀಕ್ಷೆಯಾಗಿ ಉಡಾಯಿಸಿ ಪಾಕಿಸ್ಥಾನವು ವಿಶ್ವದ ಗಮನ ಸೆಳೆದಿತ್ತು. ಚೀನಾ ತಯಾರಿಸಿದ ಕ್ಷಿಪಣಿಯ ಪ್ರತಿರೂಪ ಇದೆಂದು ಹೇಳಲಾಗಿತ್ತು. 

2007: ವರ್ಷದಷ್ಟು ಹಿಂದೆ ಅಪಘಾತವೊಂದರಲ್ಲಿ ಮೃತರಾದ ಭಾರತೀಯ ವಿಜ್ಞಾನ ಸಂಸ್ಥೆಯ ಖ್ಯಾತ ವಿಜ್ಞಾನಿ ಡಾ. ಟಿ. ಚಂದ್ರಶೇಖರ್ ಅವರ ಕುಟುಂಬ ವರ್ಗಕ್ಕೆ 32.78 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಆದೇಶ ನೀಡಿತು. ಚಂದ್ರಶೇಖರನ್ ಅವರು 1980ರ ಆದಿಯಲ್ಲಿ ರಾಷ್ಟ್ರದ ಪ್ರಥಮ ಕಂಪ್ಯೂಟರೀಕೃತ `ಕರೆಂಟ್ ಅವೇರ್ ನೆಸ್ ಸರ್ವೀಸ್' ಕಂಡು ಹಿಡಿದ ಕೀರ್ತಿಗೆ ಭಾಜನರಾಗಿದ್ದರು.

2006: ಲಾಭದಾಯಕ ಹುದ್ದೆಯ ತೂಗುಕತ್ತಿಯಿಂದ ಸಂಸತ್ ಸದಸ್ಯತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿ ಇರುವ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಇತರರ ರಕ್ಷಣೆಗೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ತರಲು ತಂತ್ರ ಹೂಡಿದೆ ಎಂಬ ಪ್ರತಿಪಕ್ಷಗಳ ಆರೋಪದ ಮಧ್ಯೆಯೇ ಸಂಸತ್ತಿನ ಉಭಯ ಸದನಗಳನ್ನೂ ದಿಢೀರನೆ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು. ಬಜೆಟ್ ಅಧಿವೇಶನವು ಮಧ್ಯಂತರ ಬಿಡುವು ಇಲ್ಲದೆ ಈ ರೀತಿ ಅರ್ಧದಲ್ಲೇ ಮೊಟಕುಗೊಂಡದ್ದು ಸಂಸದೀಯ ಇತಿಹಾಸದಲ್ಲಿ ಇದೇ ಪ್ರಥಮ.

2006: ಕೇರಳದಲ್ಲಿ ಜಲ ಸಂರಕ್ಷಣೆ ಪ್ರಾಮುಖ್ಯ ಕುರಿತು ಜಾಗೃತಿ ಮೂಡಿಸಲು ನಡೆಸಿದ ಪ್ರಯತ್ನಗಳಿಗಾಗಿ `ಮಲಯಾಳಂ ಮನೋರಮಾ' ಪತ್ರಿಕೆಗೆ `ಪ್ರತಿಷ್ಠಿತ ಯುನೆಸ್ಕೊ' ಪ್ರಶಸ್ತಿ ಲಭಿಸಿತು. ಜಾಗತಿಕ ಜಲ ಸಂಪನ್ಮೂಲ ವಿಭಾಗದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಕೆನಡಾದ ನಾಗರಿಕರಾಗಿರುವ ಭಾರತೀಯ ಸಂಜಾತ ವಿಜ್ಞಾನಿ ಅಸಿತ್ ಬಿಸ್ವಾಸ್ (67) ಅವರಿಗೆ ಸ್ಟಾಕ್ ಹೋಂ ಇಂಟರ್ ನ್ಯಾಷನಲ್ ವಾಟರ್ ಇನ್ ಸ್ಟಿಟ್ಯೂಟ್ ಪ್ರದಾನ ಮಾಡುವ `ಪ್ರತಿಷ್ಠಿತ ಸ್ಟಾಕ್ ಹೋಮ್ ಜಲ ಪ್ರಶಸ್ತಿ' ಲಭಿಸಿತು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಐದನೆಯ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಗುರಿಕಾರ ಸಮರೇಶ್ ಜಂಗ್ ಕಾಮನ್ವೆಲ್ತ್ ಕ್ರೀಡಾಕೂಟದ ದಾಖಲೆಗೆ ಪಾತ್ರರಾದರು. 10 ಮೀಟರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಸಮರೇಶ್ ಜಂಗ್ ದಾಖಲೆಯ 685.4 ಅಂಕ ಗಳಿಸಿ ಚಿನ್ನದ ಪದಕ ಗಿಟ್ಟಿಸಿದರು. ಎಂಟು ವರ್ಷಗಳ ಹಿಂದೆ ಇಂಗ್ಲೆಂಡಿನ ಮೈಕೆಲ್ ಗಾಲ್ಫ್ ಸೃಷ್ಟಿಸಿದ್ದ 679.9 ಅಂಕಗಳ ದಾಖಲೆಯನ್ನು ಸಮರೇಶ್ ಜಂಗ್ ಅಳಿಸಿ ಹಾಕಿದರು.  

2001: ಚೆನ್ನೈಯಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮೂರು ಟೆಸ್ಟ್ ಕ್ರಿಕೆಟ್ ಮ್ಯಾಚ್ ಸರಣಿಯ ಕೊನೆಂಯಲ್ಲಿ ಹರ ಭಜನ್ ಸಿಂಗ್ 32ನೇ ವಿಕೆಟ್ ಪಡೆದರು. ಮೂರು ಟೆಸ್ಟ್ ಮ್ಯಾಚ್ ಸರಣಿಯಲ್ಲಿ ಭಾರತೀಯ ಬೌಲರ್ ಪಡೆದ ಅತೀ ಹೆಚ್ಚಿನ ವಿಕೆಟ್ ದಾಖಲೆ ಇದು. ಅನಿಲ್ ಕುಂಬ್ಳೆ ಪಡೆದಿದ್ದ 23 ವಿಕೆಟುಗಳ ದಾಖಲೆಯನ್ನು ಅವರು ಮುರಿದರು.

2001: ಅನಿಮೇಷನ್ ಪಾತ್ರಗಳಾದ `ಯೋಗಿ ಬೀಯರ್' `ಸ್ಕೂಬಿ ಡೂ' `ಫ್ಲಿನ್ ಸ್ಟೋನ್ಸ್' ಇತ್ಯಾದಿಗಳನ್ನು ಸೃಷ್ಟಿಸಿದ ವಿಲಿಯಂ ಹೆನ್ನಾ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ಜೋಸೆಫ್ ಬಾರ್ಬೇರಾ ಅವರ ಜೊತೆ ಸೇರಿ ಈ ಅನಿಮೇಷನ್ ಪಾತ್ರಗಳನ್ನು ಅವರು ಸೃಷ್ಟಿಸಿದರು.

1971: ಖ್ಯಾತ ವಾಗ್ಗೇಯಕಾರ ಸಂಪತ್ ಜಯಾ (ಗುರುದಾಸ) ಅವರು ಜಯ ರಾಘವನ್- ಆಲಮೇಲು ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಭಜನೆ ಜನಪ್ರಿಯಗೊಳಿಸುವ ಸಲುವಾಗಿ ಅವರು ಗುರುದಾಸ ಭಜನಾ ಮಂಡಳಿ ಸ್ಥಾಪಿಸಿದರು. ಇವರ ಕೃತಿ ರಚನಾ ಪ್ರತಿಭೆ ಗುರುತಿಸಿ ಇವರಿಗೆ `ಗುರುದಾಸ' ಅಂಕಿತ ನೀಡಲಾಯಿತು.

1963: ಕಲಾವಿದೆ ಸುರೇಖಾ ಕುಲಕರ್ಣಿ ಜನನ.

1957: ಭಾರತವು ಶಕ ವರ್ಷಾಧಾರಿತ ರಾಷ್ಟ್ರೀಯ ಕ್ಯಾಲೆಂಡರನ್ನು ಅಂಗೀಕರಿಸಿತು.

1946: ಜೋರ್ಡಾನ್ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಗಳಿಸಿತು.

1945: ಮಧ್ಯಪ್ರಾಚ್ಯದ ಅರಬ್ ರಾಜ್ಯಗಳ ಒಕ್ಕೂಟ `ಅರಬ್ ಲೀಗ್' ಕೈರೋದಲ್ಲಿ ಸ್ಥಾಪನೆಗೊಂಡಿತು.

1942: ಭಾರತೀಯರಿಗೆ ಅಧಿಕಾರ ಹಸ್ತಾಂತರಿಸುವ ರಾಜಕೀಯ ಸೂತ್ರ ರೂಪಿಸುವ ಸಲುವಾಗಿ ಸರ್ ಸ್ಟಾಫರ್ಡ್ ಕ್ರಿಪ್ಸ್ ನೇತೃತ್ವದ ಕ್ರಿಪ್ಸ್ ಆಯೋಗ ಭಾರತಕ್ಕೆ ಆಗಮಿಸಿತು. ಈ ಯತ್ನ ವಿಫಲಗೊಂಡು ಕೆಲವು ತಿಂಗಳ ಬಳಿಕ ಕ್ವಿಟ್ ಇಂಡಿಯಾ ಚಳವಳಿ ಆರಂಭವಾಯಿತು.

1941: ಕಲಾವಿದ ಲಕ್ಷ್ಮಣ ಭಟ್ ಜನನ.

1893: ಭಾರತದ ಕ್ರಾಂತಿಕಾರಿ ನಾಯಕರಲ್ಲಿ ಒಬ್ಬರಾದ ಸೂರ್ಯ ಸೇನ್ (1893-1934) ಜನ್ಮದಿನ. ಚಿತ್ತಗಾಂಗ್ ಶಸ್ತ್ರಾಗಾರ ಮೇಲಿನ ದಾಳಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, March 23, 2009

ಇಂದಿನ ಇತಿಹಾಸ History Today ಮಾರ್ಚ್ 21

ಇಂದಿನ ಇತಿಹಾಸ

ಮಾರ್ಚ್ 21

 ಜಗತ್ತಿನ ಮೊತ್ತ ಮೊದಲ `ಪ್ರನಾಳ ಶಿಶು' (ಟೆಸ್ಟ್ ಟ್ಯೂಬ್ ಬೇಬಿ) ಲೂಯಿ ಬ್ರೌನ್ ಹುಟ್ಟಿಗೆ ಕಾರಣವಾದ `ಇನ್ ವಿಟ್ರೋ ಫರ್ಟಿಲೈಸೇಷನ್' ವಿಧಾನದ ಸಂಶೋಧಕ ಬ್ರಿಟನ್ನಿನ ಪ್ಯಾಟ್ರಿಕ್ ಸ್ಟೆಪ್ ಟೋ (1913-1988) ತನ್ನ 74ನೇ ವಯಸ್ಸಿನಲ್ಲಿ ಮೃತನಾದ.

ಇಂದು ವಿಶ್ವ ಜಲದಿನ.

2008: ಕರ್ನಾಟಕ ರಾಜ್ಯದಲ್ಲಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮುಂದುವರೆದ ಅಕಾಲಿಕ ಮಳೆಗೆ ಮೂವರು ಬಲಿಯಾಗಿ, ಕೆಲವೆಡೆ ಬೆಳೆ ಹಾನಿ ಸಂಭವಿಸಿತು. ಬಂಗಾಳಕೊಲ್ಲಿಯಲ್ಲಿ ಸಮುದ್ರ ಮಟ್ಟದಿಂದ ಕೇವಲ 3.6 ಕಿ.ಮೀ. ಎತ್ತರದಲ್ಲಿ ವಾಯುಭಾರ ಕುಸಿತ ಉಂಟಾಗಿ ಕರ್ನಾಟಕದ ವಿವಿಧೆಡೆ ವ್ಯಾಪಕವಾಗಿ ಮಳೆಯಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಅತಿ ಹೆಚ್ಚು 6 ಸೆಂಟಿಮೀಟರ್ ಮಳೆ ಬಿದ್ದಿತು. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯ  ಹಲವೆಡೆ ಉತ್ತಮ ಮಳೆಯಾಯಿತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾರಮಡು ಗ್ರಾಮದಲ್ಲಿ ಮನೆ ಮಾಳಿಗೆ ಕುಸಿದು ಒಬ್ಬರು ಮೃತರಾದರು. ಗುಲ್ಬರ್ಗ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ದನ ಕಾಯಲು ಹೋಗಿದ್ದ ಬಾಲಕನೊಬ್ಬ ಸಿಡಿಲಿಗೆ ಬಲಿಯಾದ. ಕಾಸರಗೋಡು ಜಿಲ್ಲೆ ಕುಂಬಳೆಯ ಕೋಟೆಕಾರಿನಲ್ಲಿ ಸಿಡಿಲು ಬಡಿದು ಅಧ್ಯಾಪಕರೊಬ್ಬರು ಮೃತರಾದರು.

2008: ಟಿಬೆಟ್ ಸ್ವಾತಂತ್ರ್ಯಕ್ಕಾಗಿನ ದಲೈಲಾಮ ಅನುಯಾಯಿಗಳ ಹೋರಾಟವನ್ನು ಬೆಂಬಲಿಸಿ ಅನೇಕ ಟಿಬೆಟನ್ನರು ನವದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಮತ್ತು ತಡೆಗೋಡೆಗಳನ್ನು ಭೇದಿಸಿ, ಚೀನಾ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದರು.

2008: ಚೀನಾದ ವಾಯವ್ಯ ಭಾಗದ ಕ್ಸಿಜಿಯಾಂಗಿನಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 7.3ರಷ್ಟಿದ್ದ ಕಂಪನವು ಇಡೀ ಪಟ್ಟಣವನ್ನು ನಾಲ್ಕು ಬಾರಿ ನಡುಗಿಸಿತು. 

2008: ಇಬ್ಬರು ಮೀನುಗಾರರ ಸಾವಿಗೆ ಕಾರಣವಾದ ನೌಕಾ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪಾನ್ ರಕ್ಷಣಾ ಸಚಿವರು ನೌಕಾದಳದ ಮುಖ್ಯಸ್ಥರನ್ನು ಸೇವೆಯಿಂದ ವಜಾ ಮಾಡಿದರು. ಹಾಗೂ ನೌಕಾಪಡೆಯ ಇತರ 90 ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಿದರು. ಟೋಕಿಯೊ ಕೊಲ್ಲಿ ಪ್ರದೇಶದಲ್ಲಿ  ಕಳೆದ ತಿಂಗಳು ಜಪಾನಿನ ಅತ್ಯಾಧುನಿಕ ಜಲಫಿರಂಗಿಯು ಮೀನುಗಾರಿಕೆ ದೋಣಿಗೆ ಅಪ್ಪಳಿಸಿದ್ದರಿಂದ ಒಬ್ಬ ಮೀನುಗಾರ ಹಾಗೂ ಆತನ ಮಗ ಸಾವಿಗೀಡಾಗಿ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ರಕ್ಷಣಾ ಸಚಿವಾಲಯವು ನೌಕಾ ಮುಖ್ಯಸ್ಥ ಅಡ್ಮಿರಲ್ ಕೈಜಿ ಅಕಹೋಶಿ ಅವರನ್ನು ಸೇವೆಯಿಂದ ವಜಾ ಮಾಡಿತು. ರಕ್ಷಣಾ ಸಚಿವರು ಈ ಬಗ್ಗೆ ಸಾರ್ವಜನಿಕರ ಕ್ಷಮೆ ಕೋರಿದರು.

2008: ಸಂಸತ್ತಿನ ಅಧ್ಯಕ್ಷರ ಭ್ರಷ್ಟಾಚಾರವನ್ನು ವಿರೋಧಿಸಿ 44 ವರ್ಷದ ವ್ಯಕ್ತಿಯೊಬ್ಬ ಬ್ಯಾಂಕಾಕಿನಲ್ಲಿ ಸಂಸತ್ ಭವನದ ಎದುರು ಗ್ಯಾಸೋಲಿನ್ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆಯಿತು. ಸಂಸತ್ತಿನ ಅಧ್ಯಕ್ಷ ಯೋಂಗ್ಯುಟ್ ಟೈಪರೈಟ್ ಅವರು ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡಲು ಉತ್ತರ ಥೈಲ್ಯಾಂಡಿನಲ್ಲಿ ಅಧಿಕಾರಿಗಳಿಗೆ ಲಂಚ ನೀಡಿದ್ದರಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಆತ್ಮಾಹುತಿಗೆ ಯತ್ನಿಸಿದ ಟ್ರುತ್ಮಾಂಕಾನ ದೇಹದ  ಶೇಕಡಾ 90ರಷ್ಟು ಭಾಗಗಳು ಸುಟ್ಟುಹೋಯಿತು ಎಂದು ಪೊಲೀಸ್ ಮೂಲಗಳು ತಿಳಿಸಿದವು. 

2008: ಖ್ಯಾತ ಕಲಾವಿದ ಎಂ. ಎಫ್.  ಹುಸೇನ್ ಅವರು ರಚಿಸಿದ ಸಮಕಾಲೀನ ಭಾರತದ ಕಲಾಕೃತಿ ನ್ಯೂಯಾರ್ಕಿನಲ್ಲಿ 1.6 ದಶಲಕ್ಷ ಅಮೆರಿಕ ಡಾಲರಿಗೆ ಹರಾಜಾಗುವುದರೊಂದಿಗೆ ದಾಖಲೆ ಬೆಲೆ ಕಂಡಿತು. ಹುಸೇನ್ ಅವರ ವಿವಾದಾತ್ಮಕ ಕೃತಿಗಳ ಬಗ್ಗೆ ಹರಾಜು ನಡೆದ ಕಟ್ಟಡದ ಹೊರ ಭಾಗದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಆದರೂ ಅನಾಮಧೇಯ ವ್ಯಕ್ತಿಯೊಬ್ಬರು `ಬ್ಯಾಟಲ್ ಆಫ್ ಗಂಗಾ ಆಂಡ್ ಜಮುನಾ; ಮಹಾಭಾರತ 12' ಕೃತಿಯನ್ನು 1.6 ದಶಲಕ್ಷ ಡಾಲರಿಗೆ ಖರೀದಿಸಿದರು.

2008: ಟಿಬೆಟ್ ಜನ ನೆಲೆಸಿರುವ ನೈಋತ್ಯದ ಸಿಚುವಾನ್ ಪ್ರಾಂತ್ಯದಲ್ಲಿ ಗುಂಡು ಹಾರಿಸಿ 4 ಜನ ಪ್ರತಿಭಟನಾಕಾರರನ್ನು ಗಾಯಗೊಳಿಸಿರುವುದಾಗಿ ಚೀನಾ ಒಪ್ಪಿಕೊಂಡಿತು. ಲ್ಹಾಸಾದಲ್ಲಿ ಹಿಂದಿನವಾರ ಚೀನಾ ವಿರೋಧಿ ಪ್ರತಿಭಟನೆ    ಭುಗಿಲೆದ್ದಾಗ ಸಿಚುವಾನಿನಲ್ಲಿಯೂ ಇದು ಪ್ರತಿಧ್ವನಿಸಿತ್ತು.

2008: ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಪೊಲೀಸರಿಗಾಗಿ ವಿಶ್ವವಿದ್ಯಾಲಯವನ್ನು ಜಲಂಧರಿನ ಫಿಲ್ಲೂರಿನಲ್ಲಿಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪ್ರಕಟಿಸಿದರು. 

2008: ಶ್ರವಣ ಬೆಳಗೊಳದ ಶ್ರುತ ಕೇವಲಿ ಟ್ರಸ್ಟ್ ಹಾಗೂ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥಾನದ ವತಿಯಿಂದ ನೀಡಲಾಗುವ `ಪ್ರಾಕೃತ ಜ್ಞಾನಭಾರತಿ' ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಜರ್ಮನಿಯ ಪ್ರಾಕೃತ ವಿದ್ವಾಂಸರಾದ ಪ್ರೊ. ವಿಲ್ಲೆಂ ಬೊಲ್ಲಿ ಮತ್ತು ಪ್ರೊ. ಕ್ಲಾಸ್ ಬ್ರೂನ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಈ ಪುರಸ್ಕಾರವನ್ನು 2004 ರಲ್ಲಿ ಆರಂಭಿಸಲಾಗಿತ್ತು. ಬೊಲ್ಲಿ ಅವರನ್ನು 2005ನೇ ಸಾಲಿನ ಹಾಗೂ ಬ್ರೂನ್ ಅವರನ್ನು 2006ನೇ ಸಾಲಿನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಬೊಲ್ಲಿ ಅವರು ಜಗತ್ತಿನ ಹಿರಿಯ ಪ್ರಾಕೃತ ವಿದ್ವಾಂಸರಲ್ಲಿ ಒಬ್ಬರಾಗಿದ್ದು, ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಒಂದೂವರೆ ಸಾವಿರ ವರ್ಷಗಳಷ್ಟು ಹಳೆಯದಾದ `ಪಯೇಸಿಯ ಕಥೆ' ಎಂಬ ಕೃತಿಯನ್ನು ಸಂಪಾದಿಸಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿ. ಮತ್ತೊಬ್ಬ ಹಿರಿಯ ವಿದ್ವಾಂಸರಾದ ಬ್ರೂನ್ ಮಧ್ಯಪ್ರದೇಶದ ದೇವಗಢದಲ್ಲಿ ಸಂಶೋಧನೆ ಕೈಗೊಂಡು ಕೃತಿಗಳನ್ನು ಪ್ರಕಟಿಸಿದ್ದರು. 

2007: ವೃದ್ಧರು ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಪಾಲಕರ ರಕ್ಷಣೆಗಾಗಿ ಲೋಕಸಭೆಯಲ್ಲಿ ನಿರ್ವಹಣೆ ಮತ್ತು ಪಾಲಕರ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಮಸೂದೆ- 2007ನ್ನು ಲೋಕಸಭೆಯಲ್ಲಿ ಸರ್ಕಾರ ಮಂಡಿಸಿತು. ಇದರ ಪ್ರಕಾರ 60 ವರ್ಷಕ್ಕೂ ಮೇಲ್ಪಟ್ಟ ತಂದೆ- ತಾಯಿಯನ್ನು ಕಡೆಗಣಿಸುವವರಿಗೆ 5000 ರೂಪಾಯಿ ದಂಡ ಅಥವಾ ಮೂರು ತಿಂಗಳು ಸೆರೆಮನೆವಾಸ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

2007: ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ಪ್ರೊ. ಎನ್. ಬಾಲಸುಬ್ರಹ್ಮಣ್ಯ ಸೇರಿದಂತೆ ಐವರು ಹಿರಿಯ ಅನುವಾದಕರಿಗೆ 2006-07ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರಕಟಿಸಿತು. ಹಿರಿಯ ಅನುವಾದಕರಾದ ಎಂ.ಬಿ. ಅಬ್ದುಲ್ ಘನಿ, ಲವ್ಲೀನ್ ಜೋಲಿ, ಸಿ. ರಾಘವನ್ ಮತ್ತು ಡಾ. ತಿಪ್ಪೇಸ್ವಾಮಿ ಅವರನ್ನೂ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ತ ಪ್ರಕಟಿಸಿದರು.

2007: ಹೊಸನಗರದಲ್ಲಿ ಏಪ್ರಿಲ್ 21ರಿಂದ 29ರವರೆಗೆ ನಡೆಯುವ ವಿಶ್ವ ಗೋ ಸಮ್ಮೇಳನದ ಬಳಿಕ ರಾಜ್ಯದಲ್ಲಿ ಕಾಮಧೇನು ವಿಶ್ವ ವಿದ್ಯಾಲಯ ಸ್ಥಾಪಿಸುವ ಗುರಿ ಇಟ್ಟುಕೊಂಡಿರುವುದಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು.

2007: ಕೈಗಾರಿಕಾ ಉದ್ದೇಶ ಹಾಗೂ ವಿಶೇಷ ಆರ್ಥಿಕ ವಲಯಗಳಿಗೆ (ಎಸ್ ಇ ಜೆಡ್) ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಎದ್ದ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಸ್ ಇ ಜೆಡ್ ನಿಯಮಾವಳಿಗಳಿಗೆ ಬದಲಾವಣೆ ತಂದಿತು. ಈ ನಿಯಮಾವಳಿಗಳಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಉದ್ಯಮಿಗಳ ಮೇಲೆ ಹೊರಿಸಲಾಯಿತು. 

2006: ಪೊಲೀಸರಿಗೆ ಬೇಕಾಗಿದ್ದ 191 ಕ್ರಿಮಿನಲ್ ಅಪರಾಧಿಗಳ ಭಾರಿ ದೊಡ್ಡ ಗುಂಪೊಂದು ಉತ್ತರ ಬಿಹಾರದ ಸುಪೌಲ್ ಮತ್ತು ಮಾಧೇಪುರದಲ್ಲಿ ನಡೆದ ಎರಡು ಪ್ರತ್ಯೇಕ ಶರಣಾಗತಿ ಸಮಾರಂಭಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮುಂದೆ ಶರಣಾಗತವಾಯಿತು. ಎನ್ ಡಿ ಎ ಸರ್ಕಾರವು ಅಪರಾಧಗಳನ್ನು ನಿಯಂತ್ರಿಸಲು ಹೊಸದಾಗಿ ಪ್ರಕಟಿಸಿರುವ `ಶರಣಾಗತಿ ಮತ್ತು ಪುನರ್ ವಸತಿ ನೀತಿ' ಫಲನೀಡಿದ ಪರಿಣಾಮವಾಗಿ 131 ಮಂದಿ ಅಪರಾಧಿಗಳು ಸುಪೌಲ್ನಲ್ಲಿ ಮುಖ್ಯಮಂತ್ರಿಯ ಎದುರಲ್ಲಿ ಹಾಗೂ 60 ಮಂದಿ ಅಪರಾಧಿಗಳು ಮಾಧೇಪುರ ಜಿಲ್ಲೆಯ ಸಿಂಘೇಶ್ವರದಲ್ಲಿ ಶರಣಾಗತರಾದರು. ಇವರೆಲ್ಲ ಕೊಲೆ, ಸುಲಿಗೆ , ದರೋಡೆ ಇತ್ಯಾದಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು.

1990: ನಮೀಬಿಯಾ ಸ್ವತಂತ್ರ ರಾಷ್ಟ್ರವಾಯಿತು. ಈ ರಾಷ್ಟ್ರದ ಮೇಲಿನ ಬಿಳಿಯರ 75 ವರ್ಷಗಳ ಆಳ್ವಿಕೆ ಕೊನೆಗೊಂಡಿತು.

1988: ಜಗತ್ತಿನ ಮೊತ್ತ ಮೊದಲ `ಪ್ರನಾಳ ಶಿಶು' (ಟೆಸ್ಟ್ ಟ್ಯೂಬ್ ಬೇಬಿ) ಲೂಯಿ ಬ್ರೌನ್ ಹುಟ್ಟಿಗೆ ಕಾರಣವಾದ `ಇನ್ ವಿಟ್ರೋ ಫರ್ಟಿಲೈಸೇಷನ್' ವಿಧಾನದ ಸಂಶೋಧಕ ಬ್ರಿಟನ್ನಿನ ಪ್ಯಾಟ್ರಿಕ್ ಸ್ಟೆಪ್ ಟೋ (1913-1988) ತನ್ನ 74ನೇ ವಯಸ್ಸಿನಲ್ಲಿ ಮೃತನಾದ.

1985: ಇಂಗ್ಲಿಷ್ ರಂಗಭೂಮಿ ಹಾಗೂ ಸಿನಿಮಾ ನಟ ಮೈಕೆಲ್ ರೆಡ್ ಗ್ರೇವ್ ತನ್ನ 77ನೇ ಹುಟ್ಟುಹಬ್ಬದ ಒಂದು ದಿನದ ಬಳಿಕ ಈದಿನ ಮೃತರಾದರು. 

1938: ಕಲಾವಿದರಾದ ಕೃಷ್ಣಾ ಬಾಳಾಶೇಟ್ ಕರ್ಡೇಕರ ಜನನ.

1931: ಕಲಾವಿದೆ ಬಿ.ಎಸ್. ಚಂದ್ರಕಲಾ ಜನನ.

1924: ಖ್ಯಾತ ವಾಗ್ಗೇಯಕಾರ, ಗಾಯಕ, ಸಂಗೀತ ಶಿಕ್ಷಕ, ಪ್ರಸಾರಕ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿ (21-3-1924ರಿಂದ 19-3-2003) ಅವರು ರಾಜಾಪುರ ವೆಂಕಟಸುಬ್ಬರಾವ್- ತಿಮ್ಮಮ್ಮ ದಂಪತಿಯ ಮಗನಾಗಿ ದಾವಣಗೆರೆಯಲ್ಲಿ ಜನಿಸಿದರು. `ಗಾಯನ ಗಂಗಾ' ಸಂಗೀತ ಮಾಸಪತ್ರಿಕೆ, `ಉರುಗಾಚಲ' ಅಂಕಿತದಲ್ಲಿ ಕೃತಿಗಳ ರಚನೆ, 500ಕ್ಕೂ ಹೆಚ್ಚು ಭಕ್ತಿಗೀತೆಗಳಿಗೆ ಸ್ವರ ಸಂಯೋಜನೆ ಇತ್ಯಾದಿ ಇವರ ಜೀವನದ ಸಾಧನೆಗಳು. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಭಾರತೀಯ ಗಾಂಧರ್ವ ಮಹಾವಿದ್ಯಾಲಯದ ಸಂಗೀತ ಮಹೋಪಾಧ್ಯಾಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರ ಸೇವೆಗೆ ಸಂದಿವೆ.

1916: ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ (1916) ಜನ್ಮದಿನ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಹಾಗೂ 1997ರಲ್ಲಿ 50ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೆ ಪ್ರದರ್ಶನ ನೀಡಿದ ವಿಶಿಷ್ಟ ಕಲಾವಿದರು ಇವರು. 

1791: ಲಾರ್ಡ್ ಕಾರ್ನವಾಲಿಸ್ ಬೆಂಗಳೂರನ್ನು ವಶಪಡಿಸಿಕೊಂಡ. ಮೂರನೇ ಮೈಸೂರು ಯುದ್ಧದ ಸಮಯದಲ್ಲಿ ಈ ಘಟನೆ ಸಂಭವಿಸಿತು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಮಾರ್ಚ್ 20

ಇಂದಿನ ಇತಿಹಾಸ

ಮಾರ್ಚ್ 20
2008: ತೆಲುಗಿನ ಜನಪ್ರಿಯ ನಟ ಶೋಭನ್ ಬಾಬು (71) ಅವರು ಹೃದಯಾಘಾತದಿಂದ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು. ಶೋಭನ್ ಬಾಬು ಅವರು ದಶಕಗಳಿಂದ  ತೆಲುಗು ಚಿತ್ರರಂಗದಲ್ಲಿದ್ದು, ಎನ್.ಟಿ. ರಾಮರಾವ್, ಎ. ನಾಗೇಶ್ವರ ರಾವ್ ಅವರಂತೆ  ಜನಪ್ರಿಯರಾಗಿದ್ದರು. ತಮ್ಮ ಎಂದಿನ  ದಿನಚರಿಯಂತೆ ಶೋಭನ್ ಬಾಬು ಅವರು ಹಿಂದಿನ ದಿನ ಬೆಳಗ್ಗೆ ಯೋಗಾಸನ ಮಾಡುತ್ತಿದ್ದ ಸಮಯದಲ್ಲಿ ಕುಸಿದು ಬಿದ್ದಾಗ ಅವರ ಮೂಗಿನಲ್ಲಿ ತೀವ್ರ ರಕ್ತಸ್ರಾವ ಕಂಡು ಬಂದಿತ್ತು. ತತ್ ಕ್ಷಣವೇ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.  

2008: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕರ್ನಾಟಕ ಮತ್ತು ಕೇರಳಕ್ಕೆ ಸಮೀಪದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು  ಜಿಲ್ಲೆಗಳಲ್ಲಿ ಮಳೆಯಾಯಿತು. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಸಿ. ನಂದಿಹಳ್ಳಿ ಗ್ರಾಮದ ಮರಾಠಿ ಪಾಳ್ಯದಲ್ಲಿ ಸಿಡಿಲು ಬಡಿದು ಮರಿಯಪ್ಪ (55) ಎಂಬವರು ಮೃತರಾದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಿತ್ರದುರ್ಗ, ಕೋಲಾರ, ಮಂಡ್ಯ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಸಾಧಾರಣ ಹಾಗೂ ಇನ್ನು ಕೆಲವೆಡೆ ರಭಸದ ಮಳೆಯಾಯಿತು.

2008: ಅಮೆರಿಕವು ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ಥಾನದಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಮಾಡಲು ಆರಂಭಿಕ ಪ್ರಯತ್ನಗಳನ್ನು ಬಿಟ್ಟರೆ ಹೆಚ್ಚಿನ ಆಸಕ್ತಿ ತೋರಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅಸಮಾಧಾನ ಸೂಚಿಸಿದರು. ಮಾಜಿ ಉಪಪ್ರಧಾನಿ ಮತ್ತು ಹಾಲಿ ಲೋಕಸಭೆಯ ಪ್ರತಿಪಕ್ಷ ನಾಯಕರಾದ ಅಡ್ವಾಣಿಯವರು ತಮ್ಮ ``ನನ್ನ ರಾಷ್ಟ್ರ, ನನ್ನ ಜೀವನ'' ಎಂಬ ಆತ್ಮಕಥನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

2008: ಪತ್ರಕರ್ತೆ ಶಿವಾನಿ  ಭಟ್ನಾಗರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ಘೋಷಿಸಬೇಕಾಗಿದ್ದ ತೀರ್ಪನ್ನು ದೆಹಲಿ ಸೆಷನ್ಸ್ ನ್ಯಾಯಾಲಯ ಮಾರ್ಚ್ 24ರವರೆಗೆ ಕಾಯ್ದಿರಿಸಿತು.

2008: ಉದ್ಯೋಗ ನೀಡುವ ಸಂಸ್ಥೆಯೊಂದು ತನ್ನ ಒಬ್ಬ ನೌಕರನ ಹೆಸರಲ್ಲಿ ಹಲವು ಎಚ್-1ಬಿ ವೀಸಾ ಅರ್ಜಿಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸುವ ನೂತನ ವೀಸಾ ನೀತಿಯನ್ನು ಅಮೆರಿಕ ಜಾರಿಗೆ ತಂದಿತು. 

2007: ರಷ್ಯಾದ ಸೈಬೇರಿಯಾ ಕಲ್ಲಿದ್ದಲು ಗಣಿಯಲ್ಲಿ ದಶಕದ ಅವಧಿಯಲ್ಲಿ ಸಂಭವಿಸಿದ ಅತಿ ಭೀಕರ ಅನಿಲ ಸ್ಫೋಟದಲ್ಲಿ ಕನಿಷ್ಠ 106 ಮಂದಿ ಮೃತರಾದರು.

2007: ಭಾರತೀಯ ವಾಯುಪಡೆಯ ಮಿಗ್-23 ಯುದ್ಧ ವಿಮಾನಗಳು ಇತಿಹಾಸದ ಪುಟ ಸೇರಿದವು. ಪಾಕಿಸ್ಥಾನದ ಎಫ್-16 ಯುದ್ಧ ವಿಮಾನಗಳನ್ನು ಎದುರಿಸಲು ಕಳೆದ 25 ವರ್ಷಗಳಿಂದ ಸಮರ ಸನ್ನದ್ಧವಾಗಿದ್ದ ಮಿಗ್-23 ವಿಮಾನಗಳು ಜಾಮ್ ನಗರದಲ್ಲಿ ಸಾಂಪ್ರದಾಯಿಕ ಹಾರಾಟ ನಡೆಸುವ ಮೂಲಕ ತೆರೆಮರೆಗೆ ಸರಿದವು.

2006: ಹಿಂದಿ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಮೂರು ತಿಂಗಳ ನಂತರ ಮತ್ತೆ ಬಣ್ಣ ಹಚ್ಚಿ ಚಿತ್ರೀಕರಣದಲ್ಲಿ ಪಾಲ್ಗೊಂಡರು. ನವೆಂಬರ್ ತಿಂಗಳಲ್ಲಿ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಮಿತಾಭ್ ಈ ದಿನ ಕರಣ್ ಜೋಹರ್ ಅವರ ಕಬಿ ಅಲ್ವಿದ ನಾ ಕೆಹನಾ ಚಿತ್ರಕ್ಕಾಗಿ ಕೆಲವು ಸನ್ನಿವೇಶಗಳಲ್ಲಿ ನಟಿ ರಾಣಿ ಮುಖರ್ಜಿ ಜೊತೆಗೆ ಅಭಿನಯಿಸಿದರು.

2006: ಮೆಲ್ಬೋರ್ನಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸಿನಲ್ಲಿ ಪುರುಷರ ತಂಡಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನ, ಮಹಿಳೆಯರಿಗೆ ಕಂಚು ಲಭಿಸಿತು.

2006: ಕ್ಷೀರಕ್ರಾಂತಿಯ ನೇತೃತ್ವ ವಹಿಸಿ ಭಾರತೀಯ ಡೇರಿ ಉದ್ಯಮದ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿದ್ದ ವರ್ಗೀಸ್ ಕುರಿಯನ್ ಅವರು 3600 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಗುಜರಾತ್ ಹಾಲು ಮಾರಾಟ ಸಹಕಾರ ಸಂಘದ (ಜಿಸಿಎಂಸಿಎಫ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 34 ವರ್ಷಗಳಿಂದ ಅಧ್ಯಕ್ಷರಾಗಿದ್ದ 85ರ ಹರೆಯದ ಕುರಿಯನ್ ವಿರುದ್ಧ ಇತ್ತೀಚೆಗೆ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆಯಿಂದ ನೊಂದು ಅವರು ಈ ಕ್ರಮ ಕೈಗೊಂಡರು.

2006: ಖ್ಯಾತ ಚಿತ್ರ ನಿರ್ಮಾಪಕ ಅಡೂರು ಗೋಪಾಲಕೃಷ್ಣನ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಸಿಇಒ ನಂದನ್ ನೀಲೇಕಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 51 ಗಣ್ಯರಿಗೆ 2006ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.

2006: ಜನತಾದಳ (ಎಸ್) - ಬಿಜೆಪಿ ಮೈತ್ರಿ ಕೂಟದ ಕರ್ನಾಟಕ ಅಭಿವೃದ್ಧಿ ರಂಗದ ಚೊಚ್ಚಲ ಮುಂಗಡಪತ್ರವನ್ನು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದರು. ರೈತರು, ನೇಕಾರರು, ಮೀನುಗಾರರಿಗೆ ಶೇಕಡಾ 4ರ ಬಡ್ಡಿದರದಲ್ಲಿ ಸಾಲಸೌಲಭ್ಯ, ದೇಸೀ ಗೋ ತಳಿ ಸಂರಕ್ಷಣೆಗೆ ಕಾರ್ಯಕ್ರಮಗಳು ಮುಂಗಡ ಪತ್ರದ ವಿಶೇಷತೆಗಳಲ್ಲಿ ಪ್ರಮುಖವಾದವು. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹಮ್ಮಿಕೊಂಡ ದೇಸೀ ಗೋ ತಳಿ ಸಂರಕ್ಷಣೆ ಆಂದೋಲನದಿಂದ ಪ್ರೇರಣೆ ಪಡೆದು ದೇಸೀ ಗೋ ತಳಿ ಅಭಿವೃದ್ಧಿ ಪಡಿಸುವವರಿಗೆ ಪ್ರತಿ ಜಿಲ್ಲೆಯಲ್ಲಿ 20 ಎಕರೆ ಜಮೀನು ಗುತ್ತಿಗೆ ನೀಡಿಕೆ, ಅಲ್ಲಿ ಕನಿಷ್ಠ 100 ಹಸು ಸಾಕಣೆ ಮತ್ತು ಗೋಮೂತ್ರ ಸಂಗ್ರಹ ಕಡ್ಡಾಯಗೊಳಿಸಲು, ಗೋ ಮೂತ್ರ ಉಪಯುಕ್ತತೆ ಬಗ್ಗೆ ಸಂಶೋಧನೆಗೆ ಒತ್ತು ನೀಡಲು ನಿರ್ಧರಿಸಿದ್ದು ಮುಂಗಡಪತ್ರಗಳ ಇತಿಹಾಸದಲ್ಲೇ ಪ್ರಥಮ.

2003: ಅಮೆರಿಕವು ಬಾಗ್ದಾದ್ ಮೇಲೆ ವಿಮಾನದಾಳಿ ನಡೆಸಿ ಇರಾಕ್ ವಿರುದ್ಧ ಸಮರ ಆರಂಭಿಸಿತು

1999: ಬ್ರಿಟನ್ನಿನ ಬ್ರೈನ್ ಜೋನ್ಸ್ ಮತ್ತು ಸ್ವಿಟ್ಸರ್ಲೆಂಡಿನ ಬರ್ಟ್ರಂಡ್ ಪಿಕ್ಕಾರ್ಡ್ ಅವರು ಎಲ್ಲೂ ನಿಲ್ಲದೆ ಬಲೂನ್ ಮೂಲಕ ಜಗತ್ತಿಗೆ ಸುತ್ತು ಹಾಕಿದ ಮೊದಲ ಹಾರಾಟಗಾರರೆನಿಸಿದರು. ಮಾರ್ಚ್ 1ರಿಂದ 19 ದಿನಗಳ ಕಾಲ ನಡೆದ ಅವರ ಈ ಬಲೂನ್ ಹಾರಾಟ 19 ದಿನ 1 ಗಂಟೆ 49 ನಿಮಿಷಗಳ ಕಾಲ ನಡೆಯಿತು. 

1962: ಭಾರತದ ಕ್ರಿಕೆಟ್ ಕ್ಯಾಪ್ಟನ್ ನಾರಿ ಕಾಂಟ್ರಾಕ್ಟರ್ ಅವರು ಬಾರ್ಬಡೋಸ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್  ಚಾರ್ಲಿ ಗ್ರಿಫಿತ್ ಚೆಂಡಿನ (ಬಾಲ್) ಏಟಿನಿಂದ  ತೀವ್ರವಾಗಿ ಗಾಯಗೊಂಡರು. ತುರ್ತು ಶಸ್ತ್ರಚಿಕಿತ್ಸೆ ನಡೆದರೂ ನಂತರ ಅವರು ಪಂದ್ಯದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.

1856: ಫ್ರೆಡರಿಕ್ ವಿನ್ ಸ್ಲೋ ಟೇಲರ್ (1856-1915) ಹುಟ್ಟಿದ ದಿನ. ಅಮೆರಿಕನ್ ಸಂಶೋಧಕನಾದ ಈತ `ವೈಜ್ಞಾನಿಕ ಸಂಶೋಧನಾ ನಿರ್ವಹಣೆಯ ಜನಕ' ಎಂದೇ ಖ್ಯಾತನಾಗಿದ್ದಾನೆ. 

1952: ಭಾರತದ ಮಾಜಿ ಟೆನಿಸ್ ಆಟಗಾರ ಆನಂದ್ ಅಮೃತರಾಜ್ ಹುಟ್ಟಿದ ದಿನ.

1951: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮದನ ಲಾಲ್ (ಶರ್ಮಾ) ಹುಟ್ಟಿದ ದಿನ.

1855: ಸಿಮೆಂಟ್ ಉದ್ಯಮವನ್ನು ಅಭಿವೃದ್ಧಿ ಪಡಿಸಿದ ಮುಂಚೂಣಿ ಬ್ರಿಟಿಷ್ ಸಿಮೆಂಟ್ ಉದ್ಯಮಿ ಜೋಸೆಫ್ ಆಸ್ಪ್ ಡಿನ್ ತನ್ನ 77ನೇ ವಯಸ್ಸಿನಲ್ಲಿ ಮೃತನಾದ. ಪೋರ್ಟ್ ಲ್ಯಾಂಡ್ ಸಿಮೆಂಟಿಗೆ ಈತ ಪೇಟೆಂಟ್ ಪಡೆದಿದ್ದ. ಸಿಮೆಂಟಿನ ಬಣ್ಣ ಪೋರ್ಟ್ ಲ್ಯಾಂಡಿನ ಕಲ್ಲಿನ ಬಣ್ಣವನ್ನೇ ಹೋಲುತ್ತಿದ್ದುದರಿಂದ ಅದಕ್ಕೆ ಆತ ಪೋರ್ಟ್ ಲ್ಯಾಂಡ್ ಸಿಮೆಂಟ್ ಎಂದು ಹೆಸರು ನೀಡಿದ್ದ.

1727: ಖ್ಯಾತ ಭೌತವಿಜ್ಞಾನಿ, ಗಣಿತಜ್ಞ ಹಾಗೂ ಖಗೋಳತಜ್ಞ ಐಸಾಕ್ ನ್ಯೂಟನ್ ಲಂಡನ್ನಿನಲ್ಲಿ ತನ್ನ 84ನೇ ವಯಸ್ಸಿನಲ್ಲಿ ಮೃತನಾದ.

1413: ದೊರೆ 4ನೇ ಹೆನ್ರಿ ವೆಸ್ಟ್ ಮಿನ್ ಸ್ಟರ್ ಅಬ್ಬೆಯ ಜೆರುಸಲೇಂ ಚೇಂಬರಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಮೃತನಾದ. ಆತನ ಹಿರಿಯ ಪುತ್ರ ಐದನೇ ಹೆನ್ರಿ ಸಿಂಹಾಸನ ಏರಿದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement