My Blog List

Saturday, October 31, 2009

ಇಂದಿನ ಇತಿಹಾಸ History Today ಅಕ್ಟೋಬರ್ 30

ಇಂದಿನ ಇತಿಹಾಸ

ಅಕ್ಟೋಬರ್ 30

ಕ್ವೆಟ್ಟಾದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ಥಾನ ಆಡಿದ ಪಂದ್ಯದಲ್ಲಿ ಆಟವಾಡುವ ಮೂಲಕ ಪಾಕಿಸ್ಥಾನದ 14 ವರ್ಷ 233 ದಿನಗಳ ವಯಸ್ಸಿನ ಹಸನ್ ರಝಾ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟವಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ಪಂದ್ಯದಲ್ಲಿ ವಾಸಿಮ್ ಆಕ್ರಮ್ ಅವರು ಒಂದು ದಿನದ ಕ್ರಿಕೆಟಿನಲ್ಲಿ 300 ವಿಕೆಟುಗಳನ್ನು ಪಡೆದ ಮೊದಲ ಬೌಲರ್ ಎನಿಸಿದರು.

2008: ಅಸ್ಸಾಂನ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 61 ಮಂದಿ ಸಾವನ್ನಪ್ಪಿ, 350ಕ್ಕೂ ಹೆಚ್ಚು ಜನ ಗಾಯಗೊಂಡರು. ಭಾರತದ ಈ ಈಶಾನ್ಯ ರಾಜ್ಯದಲ್ಲಿ ಕೇವಲ ಒಂದು ಗಂಟೆ ಅವಧಿಯೊಳಗೆ ಒಂದರ ನಂತರ ಒಂದರಂತೆ 13 ಬಾಂಬುಗಳು ಸ್ಫೋಟಗೊಂಡವು. ಗುವಾಹಟಿ ನಗರದ ಜನನಿಬಿಡ ಮಾರುಕಟ್ಟೆ ಪ್ರದೇಶ ಮತ್ತು ಬರ್ಪೆಟಾ, ಕೋಕ್ರಜಾರ್ ಹಾಗೂ ಬೋಂಗಿಯಾಗಾಂವ್ ಜಿಲ್ಲೆಗಳಲ್ಲಿ ಏಕಕಾಲದಲ್ಲೇ ಈ ಬಾಂಬುಗಳು ಸ್ಫೋಟಿಸಿದವು.

2008: `ಚಂದ್ರಯಾನ-1' ಯಶಸ್ಸಿಗೆ ಕಾರಣರಾದ ಇಬ್ಬರು ವಿಜ್ಞಾನಿಗಳಾದ ಡಾ. ಎಸ್.ಕೆ.ಶಿವಕುಮಾರ್, ಎಂ.ಅಣ್ಣಾದೊರೈ, ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಇನ್ಫೋಸಿಸ್ಸಿನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಟಿ.ವಿ.ಮೋಹನ್ ದಾಸ್ ಪೈ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಟ್ಟು 89 ಮಂದಿ ಗಣ್ಯರಿಗೆ 2008ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ನಿರ್ಧರಿಸಿತು.

2008: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾತೃಭಾಷೆಯ ಜೊತೆಗೆ, ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು ಅಗತ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು. 1994-95ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಅಂಗೀಕೃತವಾಗಿರುವ ಎಲ್ಲ ಶಾಲೆಗಳಲ್ಲಿ 1ರಿಂದ 4ನೇ ತರಗತಿವರೆಗೆ ಮತ್ತು 2002-03ರಲ್ಲಿ ಅಂಗೀಕೃತವಾಗಿರುವ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ಶಿಕ್ಷಣ ಮಾಧ್ಯಮವು ಮಾತೃಭಾಷೆ ಅಥವಾ ಕನ್ನಡ ಭಾಷೆ ಆಗಿರಬೇಕು ಎಂಬ 2002ರ ಸರ್ಕಾರಿ ಆದೇಶವನ್ನು ರದ್ದು ಮಾಡಿದ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಇಂಗ್ಲಿಷ್ ಮಾತೃಭಾಷೆಯಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಅಂಗೀಕೃತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ವ್ಯಾಸಂಗ ಮಾಡಲು ಅನುಮತಿ ನೀಡಬಹುದು. ಇಲ್ಲದಿದ್ದರೆ ಅಂತಹ ಶಾಲೆಗಳನ್ನು ಮುಚ್ಚಬೇಕು ಎಂದು ಸರ್ಕಾರದ 2002ರ ಆದೇಶವನ್ನು ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅನೂರ್ಜಿತಗೊಳಿಸಿದರು. ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ 1994ರ ಸರ್ಕಾರದ ಆದೇಶದ ಕುರಿತು ಪೂರ್ಣಪೀಠ ಕಳೆದ ಜುಲೈ ತಿಂಗಳಿನಲ್ಲಿ ನೀಡಿದ ತೀರ್ಪಿಗೆ ಅನುಗುಣವಾಗಿ 2002ನೇ ಸಾಲಿನ ಈ ಆದೇಶವನ್ನು ರದ್ದು ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು. 2002ರ ಮೇ 30ರಂದು ಸರ್ಕಾರ ಹೊರಡಿಸಿದ್ದ ಆದೇಶದ ರದ್ದತಿ ಕೋರಿ ಬೆಂಗಳೂರಿನ ಸೇಂಟ್ ಫಿಲೋಮಿನಾಸ್ ಇಂಗ್ಲಿಷ್ ಸ್ಕೂಲ್ ಸೇರಿದಂತೆ ರಾಜ್ಯದ ಹಲವಾರು ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಯಿತು.

2007: ಬಿಜೆಪಿ- ಜೆಡಿಎಸ್ ಮೈತ್ರಿಕೂಟದ 129 ಶಾಸಕರು ಸಲ್ಲಿಸಿದ ವೈಯಕ್ತಿಕ ಪ್ರಮಾಣ ಪತ್ರವನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ ರಾಜ್ಯಪಾಲ ರಾಮೇಶ್ವರ ಠಾಕೂರ್, ಎರಡು ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು. ಜಂಟಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ ಅವರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲರು ಈ ವಿಷಯ ತಿಳಿಸಿದರು. ರಾಜಭವನದ ಈ ಬೆಳವಣಿಗೆಯಿಂದಾಗಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದಲ್ಲಿ ಒಂದು ರೀತಿಯ ಸಮಾಧಾನ ಕಂಡುಬಂದಿತು.

2007: ವಾಯುಭಾರ ಕುಸಿತದಿಂದಾಗಿ ಐದು ದಿನಗಳಿಂದ ಭಾರಿ ಹಿಂಗಾರು ಮಳೆಗೆ ಸಿಲುಕಿದ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಾದ ಕಡಪಾ, ನೆಲ್ಲೂರು, ಪ್ರಕಾಶಮ್ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ 20 ಜನರು ಸಾವಿಗೀಡಾದರು.

2007: ವಿಶ್ವಕಪ್ ಫುಟ್ ಬಾಲ್ ಟೂರ್ನಿಗೆ ಆತಿಥ್ಯ ವಹಿಸಬೇಕೆಂಬ ಬ್ರೆಜಿಲ್ ದೇಶದ ಸುದೀರ್ಘ ಕಾಯುವಿಕೆ ಕೊನೆಗೊಂಡಿತು. 2014ರ ವಿಶ್ವಕಪ್ ಟೂರ್ನಿ ದಕ್ಷಿಣ ಅಮೆರಿಕದ ಈ ದೇಶದಲ್ಲಿ ನಡೆಯುವುದು ಖಚಿತಗೊಂಡಿತು. ಬ್ರೆಜಿಲ್ ಸಲ್ಲಿಸಿದ್ದ ಬಿಡ್ ಗೆ ಕಳೆದ ವಾರವೇ ಫಿಫಾ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿತ್ತು. ವಿಶ್ವದ ಅತಿದೊಡ್ಡ ಕ್ರೀಡಾಮೇಳವನ್ನು ಸಂಘಟಿಸುವ ಅವಕಾಶ ಬ್ರೆಜಿಲ್ಲಿಗೆ ಲಭಿಸುವುದು ಆಗಲೇ ಖಚಿತವಾಗಿತ್ತು. ಇತರ ಯಾವುದೇ ದೇಶಗಳು ಬಿಡ್ ಸಲ್ಲಿಸಿರಲಿಲ್ಲ. 1950ರಲ್ಲಿ ಬ್ರೆಜಿಲಿನಲ್ಲಿ ಕೊನೆಯದಾಗಿ ವಿಶ್ವಕಪ್ ಟೂರ್ನಿ ನಡೆದಿತ್ತು. ಇದೀಗ 64 ವರ್ಷಗಳ ಬಳಿಕ ಮತ್ತೊಮ್ಮೆ ಅವರಿಗೆ ಆತಿಥ್ಯ ವಹಿಸುವ ಅವಕಾಶ ಒದಗಿತು. ಐದು ಬಾರಿ ವಿಶ್ವಕಪ್ ಗೆದ್ದಿರುವ ಬ್ರೆಜಿಲ್ ಗೆ ಲಭಿಸಿದ ಈ ಅವಕಾಶವನ್ನು ಯಾರಾದರೂ ಕಿತ್ತುಕೊಳ್ಳಬಹುದೇ ಎಂಬ ಪ್ರಶ್ನೆಗೆ ಫಿಫಾ ಅಧ್ಯಕ್ಷ ಸೆಪ್ ಬಾಟ್ಲರ್, `ಇಲ್ಲ. ಹಾಗಾಗಲು ಸಾಧ್ಯವಿಲ್ಲ. ಬ್ರೆಜಿಲ್ ಈ ಅವಕಾಶದಿಂದ ವಂಚಿತವಾಗಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಯಾರೂ ಸ್ಪರ್ಧೆ ನೀಡುತ್ತಿಲ್ಲ' ಎಂದು ಜ್ಯೂರಿಚ್ಚಿನಲ್ಲಿ ಉತ್ತರಿಸಿದರು.

2007: ನಾಲ್ಕುನೂರು ವರ್ಷಗಳಷ್ಟು ದೀರ್ಘಕಾಲ ಬದುಕಿದ್ದ ಜೀವಿಯೊಂದು ಬ್ರಿಟನ್ ವಿಜ್ಞಾನಿಗಳಿಗೆ ಕರಾವಳಿಯ ಐಸ್ ಲ್ಯಾಂಡಿನಲ್ಲಿ ದೊರಕಿತು. ಈ ಜೀವಿ ಕಪ್ಪೆ ಚಿಪ್ಪಿನಲ್ಲಿ ಬದುಕುತ್ತಿತ್ತು. ವಿಜ್ಞಾನಿಗಳು ಈ ಪುರಾತನ ಜೀವಿಯ ಆಯಸ್ಸಿನ ಹಿಂದಿರುವ ಗುಟ್ಟನ್ನು ರಟ್ಟು ಮಾಡಲು ಮುಂದಾದರು. ವಿಜ್ಞಾನಿಗಳ ಪ್ರಕಾರ ಜೀವಿಯ ವಯಸ್ಸು 405ರಿಂದ 410 ವರ್ಷಗಳು. ಜೀವಿಗೆ ಮಿಂಗ್ ಎಂದು ಹೆಸರಿಡಲಾಯಿತು. ಮಿಂಗ್ ಎನ್ನುವುದು ಚೀನಾದ ಒಂದು ಸಾಮ್ರಾಜ್ಯದ ಹೆಸರು. ಜೀವಿ ಹುಟ್ಟುವಾಗ ಆ ಸಾಮ್ರಾಜ್ಯ ಆಡಳಿತ ನಡೆಸುತ್ತಿತ್ತು ಎಂಬುದು ವಿಜ್ಞಾನಿಗಳ ವಿವರಣೆ. ಮರಗಳ ವಯಸ್ಸನ್ನು ಅಳೆದಂತೆ ಈ ಜೀವಿಯ ವಯಸ್ಸನ್ನು ಆ ಜೀವಿಯ ಕಪ್ಪೆಚಿಪ್ಪಿನ ಮೇಲಿನ ಗೆರೆಗಳನ್ನು ಆಧರಿಸಿ ಅಂದಾಜಿಸಲಾಗುತ್ತಿದೆ ಎನ್ನುತ್ತಾರೆ ವಿಜ್ಞಾನಿಗಳು. ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ `ಮಿಂಗ್' ಲಭ್ಯವಾಗುವುದಕ್ಕೆ ಮುನ್ನ 1982ರಲ್ಲಿ 220 ವರ್ಷ ಬದುಕಿದ್ದ ಜೀವಿಯೊಂದು ಸಿಕ್ಕಿತ್ತು. ಆಮೆಗಳೂ ಸುದೀರ್ಘ ವರ್ಷಗಳ ಕಾಲ ಬದುಕಿದ ಉದಾಹರಣೆಗಳಿವೆ.

2006: ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿರುವ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ತನ್ನ ಜಲಾನಯನ ಅಭಿವೃದ್ಧಿ ಮತ್ತು ನಿರ್ವಹಣಾ ಕಾರ್ಯಕ್ರಮಕ್ಕಾಗಿ ಪ್ರಸ್ತುತ ಸಾಲಿನ ಅಮೆರಿಕದ ಪ್ರತಿಷ್ಠಿತ `ಜಿಮ್ಮಿ ಅಂಡ್ ರೋಸಲಿನ್ ಪಾರ್ಟ್ನರ್ ಶಿಪ್' ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪ್ರಶಸ್ತಿಯ ಮೊತ್ತ 10,000 ಅಮೆರಿಕನ್ ಡಾಲರುಗಳು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಮೆರಿಕದಿಂದ ಹೊರಗಿನ ಜಂಟಿ ಕಾರ್ಯಕ್ರಮವೊಂದಕ್ಕೆ ನೀಡಿರುವುದು ಇದೇ ಮೊದಲು. ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ಸಮುದಾಯಗಳು ಪಾಲ್ಗೊಳ್ಳುವಂತೆ ಮಾಡಿ ಜನರನ್ನು ತಲುಪುವಂತಹ ವಿಶೇಷ ಕಾರ್ಯಕ್ರಮ ರೂಪಿಸುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ವಾರ್ಷಿಕ ಕಾರ್ಟರ್ ಪಾರ್ಟ್ನರ್ ಶಿಪ್ ಯೋಜನೆಯು ಈ ಪ್ರಶಸ್ತಿಯನ್ನು ನೀಡುತ್ತದೆ. ನೆರೆಯ ಹಳ್ಳಿಯೊಂದರಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರೇ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಸಮೀಕ್ಷೆ ನಡೆಸಿ, ಕಾಲುವೆ, ಬದುಗಳನ್ನು ನಿರ್ಮಿಸಿ ನೀರು ಇಂಗಲು ವ್ಯವಸ್ಥೆ ಮಾಡಿದ್ದಲ್ಲದೆ 10,000 ಗಿಡಗಳನ್ನೂ ನೆಟ್ಟು ಬೆಳೆಸಿದ್ದಕ್ಕಾಗಿ ಈ ಪ್ರಶಸ್ತಿ ಸಂದಿದೆ. ದ್ವಿತೀಯ ಮತ್ತು ತೃತೀಯ ಪ್ರಶಸ್ತಿಗಳನ್ನು ಗೆದ್ದಿರುವ ಪಂಜಾಬ್ ವಿಶ್ವವಿದ್ಯಾಲಯ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕ್ರಮವಾಗಿ 3000 ಅಮೆರಿಕನ್ ಡಾಲರ್ ಹಾಗೂ 2000 ಅಮೆರಿಕನ್ ಡಾಲರುಗಳನ್ನು ಪಡೆದಿವೆ. ಪಂಜಾಬ್ ವಿಶ್ವವಿದ್ಯಾಲಯಕ್ಕೆ ಸಾಕ್ಷರತೆ ಕಾರ್ಯಕ್ರಮಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದರೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಉತ್ತರ ಪ್ರದೇಶದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡದ್ದಕ್ಕಾಗಿ ಈ ಪ್ರಶಸ್ತಿ ಬಂದಿದೆ.

2006: ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಕಾನೂನು ವಿದ್ಯಾರ್ಥಿನಿ ಪ್ರಿಯದರ್ಶಿನಿ ಮಟ್ಟ ಹಂತಕ ಸಂತೋಷ ಕುಮಾರ್ ಸಿಂಗ್ ಗೆ ದೆಹಲಿ ಹೈಕೋರ್ಟ್ ಮರಣದಂಡನೆ ವಿಧಿಸಿತು. ನ್ಯಾಯಮೂರ್ತಿಗಳಾದ ಆರ್. ಎಸ್. ಸೋಧಿ ಮತ್ತು ಪಿ.ಕೆ. ಭಾಸಿನ್ ಅವರ ಪೀಠವು ಹಂತಕ ಸಂತೋಷನನ್ನು ಸಾಯುವ ತನಕ ಗಲ್ಲಿಗೆ ಏರಿಸಬೇಕು ಎಂದು ಆದೇಶ ನೀಡಿತು. 1996ರ ಜನವರಿ 3ರಂದು ಸಹಪಾಠಿ ಪ್ರಿಯದರ್ಶಿನಿ ಮನೆಗೆ ಬಂದ ಸಂತೋಷ ಕುಮಾರ್ ಸಿಂಗ್ ಆಕೆಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದ.

2006: ಶಿರಸಿ ತಾಲ್ಲೂಕಿನ ಮತ್ತಿಘಟ್ಟದ ರಂಗಬಳಗದವರಿಂದ ಗೋಕರ್ಣದ ಓಂ ಬೀಚಿನಲ್ಲಿ `ಆವರ್ತನ' ನಾಟಕ ಪ್ರದರ್ಶನಗೊಂಡಿತು. ಮಾನಸಾ ಹೆಗಡೆ ರಚಿಸಿ, ಕೆ.ಆರ್. ಪ್ರಕಾಶ ನಿರ್ದೇಶಿಸಿದ ಈ ನಾಟಕದ ಪ್ರದರ್ಶನ ಸಮುದ್ರದ ತೆರೆಗಳ ಮಧ್ಯೆ ನಡೆದು ಇದನ್ನು ಒಂದು ಅಪರೂಪದ ಪ್ರಯೋಗವನ್ನಾಗಿಸಿತು.

2005: ಜಗತ್ತಿನ ಅತ್ಯಂತ ಪುರಾತನ ಖಗೋಲ ವೀಕ್ಷಣಾಲಯ ಉತ್ತರ ಚೀನಾದ ಶಾಂಕ್ಷಿ ಪ್ರಾಂತ್ಯದಲ್ಲಿ ಪತ್ತೆಯಾಯಿತು. 4300 ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಇದನ್ನು ಖಗೋಲ ವಿದ್ಯಮಾನ ವೀಕ್ಷಣೆ ಹಾಗೂ ಧಾರ್ಮಿಕ ಬಲಿ ಪದ್ಧತಿಗೂ ಬಳಸಲಾಗುತ್ತಿತ್ತು ಎಂಬುದು ಪುರಾತತ್ವ ಸಂಶೋಧಕರ ವರದಿ.

2005: ತಾವು ಕಲಿತ ಶಾಲೆಯಲ್ಲಿಯೇ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಮುಂದಿನ 15 ವರ್ಷಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಮುಂಬೈಯ ಕನ್ನಡತಿ ಸಿ.ಆರ್. ಶ್ಯಾಮಲ ತಮ್ಮ 70ನೇ ವಯಸ್ಸಿನಲ್ಲಿ ಪಿ. ಎಚ್. ಡಿ. ಪದವಿ ಪಡೆದುಕೊಂಡರು. ಅವರು ಆಯ್ದುಕೊಂಡಿದ್ದ ವಿಷಯ `ಪೂರ್ವ ಕರ್ನಾಟಕದ ಪಾಳೆಯಗಾರರು'. ಡಾ. ವಿಶ್ವನಾಥ ಕಾರ್ನಾಡ್ ಹಾಗೂ ಡಾ. ಶ್ರೀನಿವಾಸ ಹಾವನೂರು ಮಾರ್ಗದರ್ಶಕರಾಗಿದ್ದರು.

1996: ಕ್ವೆಟ್ಟಾದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ಥಾನ ಆಡಿದ ಪಂದ್ಯದಲ್ಲಿ ಆಟವಾಡುವ ಮೂಲಕ ಪಾಕಿಸ್ಥಾನದ 14 ವರ್ಷ 233 ದಿನಗಳ ವಯಸ್ಸಿನ ಹಸನ್ ರಝಾ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟವಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ಪಂದ್ಯದಲ್ಲಿ ವಾಸಿಮ್ ಆಕ್ರಮ್ ಅವರು ಒಂದು ದಿನದ ಕ್ರಿಕೆಟಿನಲ್ಲಿ 300 ವಿಕೆಟುಗಳನ್ನು ಪಡೆದ ಮೊದಲ ಬೌಲರ್ ಎನಿಸಿದರು.

1996: ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಶಿವಸೇನೆಯ ಮೊದಲ ಸಭೆ.

1990: ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯತ್ತ ಹೊರಟಿದ್ದ ಕರ ಸೇವಕರನ್ನು ತಡೆಯಲು ರಕ್ಷಣಾ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಹಲವರ ಸಾವು.

1956: ಭಾರತದ ಪ್ರಪ್ರಥಮ ಪಂಚತಾರಾ ಡಿಲಕ್ಸ್ ಹೋಟೆಲ್ `ಅಶೋಕ' ನವದೆಹಲಿಯ್ಲಲಿ ಉದ್ಘಾಟನೆಗೊಂಡಿತು.

1945: ಭಾರತವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರೂ ಮೂಲ ರಾಷ್ಟ್ರಗಳ ಪೈಕಿ ಒಂದಾಗಿ ವಿಶ್ವಸಂಸ್ಥೆಗೆ ಸೇರ್ಪಡೆಯಾಯಿತು.

1928: ಆರ್ಯ ಸಮಾಜದ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರು ಲಾಹೋರಿನಲ್ಲಿ ಸೈಮನ್ ಕಮೀಷನ್ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾಗ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡರು. ಇದೇ ಗಾಯಗಳ ಪರಿಣಾಮವಾಗಿ ಅವರು ನವೆಂಬರ್ 17ರಂದು ಮೃತರಾದರು.

1909: ಭಾರತೀಯ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾ (1909-66) ಜನ್ಮದಿನ. ಭಾರತೀಯ ಪರಮಾಣು ಯೋಜನೆಗೆ ಅಡಿಗಲ್ಲನ್ನು ಇಟ್ಟ ಭಾಭಾ 1966ರಲ್ಲಿ ಸ್ವಿಸ್ ಆಲ್ಪ್ಸ್ ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಅಸುನೀಗಿದರು.

1895: ಜರ್ಮನ್ ಬ್ಯಾಕ್ಟೀರಿಯಾ ತಜ್ಞ ಗೆರ್ಹಾರ್ಡ್ ಡೊಮಾಗ್ಕ್ (1895-1964) ಜನ್ಮದಿನ. ಪ್ರೊಟೆನ್ ಸಿಲ್ ನ ಬ್ಯಾಕ್ಟೀರಿಯಾ ನಿರೋಧಿ ಪರಿಣಾಮಗಳ ಕುರಿತ ಸಂಶೋಧನೆಗಾಗಿ ಅವರಿಗೆ 1939ರಲ್ಲಿ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಆದರೆ ನಾಝಿ ಸರ್ಕಾರ ಅವರಿಗೆ ಪ್ರಶಸ್ತಿಯನ್ನು ಸ್ವೀಕರಿಸಲು ಅವಕಾಶ ನೀಡಲಿಲ್ಲ. ಈ ರೀತಿ ನಿರಾಕರಿಸಿದ್ದು ನೊಬೆಲ್ ಪ್ರಶಸ್ತಿಗಳ ಚರಿತ್ರೆಯಲ್ಲಿ ಇದೇ ಪ್ರಥಮವೆನ್ನಿಸಿತು. ನಂತರ 1947ರಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

1888: ಮೊದಲ ಬಾಲ್ ಪಾಯಿಂಟ್ ಪೆನ್ ಗೆ ಹಕ್ಕುಸ್ವಾಮ್ಯ.

1883: ಆರ್ಯ ಸಮಾಜದ ಸ್ಥಾಪಕ, ಸಮಾಜ ಸುಧಾರಕ ಮಹರ್ಷಿ ಸ್ವಾಮಿ ದಯಾನಂದ ಸರಸ್ವತಿ (1824-83) ಅವರು ನಿಧನರಾದರು.

ಇಂದಿನ ಇತಿಹಾಸ History Today ಅಕ್ಟೋಬರ್ 29

ಇಂದಿನ ಇತಿಹಾಸ

ಅಕ್ಟೋಬರ್ 29

ಹಿಂದೂ ಮಹಾಸಾಗರದ ದ್ವೀಪ ಸಮೂಹ ರಾಷ್ಟ್ರವಾದ ಮಾಲ್ಡೀವ್ಸಿನಲ್ಲಿ ಪ್ರಜಾತಾಂತ್ರಿಕ ಮಾದರಿಯಲ್ಲಿ ಇದೇ ಮೊತ್ತಮೊದಲ ಬಾರಿಗೆ ಹಿಂದಿನ ದಿನ ನಡೆದ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಮಾಜಿ ರಾಜಕೀಯ ಕೈದಿ ಮೊಹಮ್ಮದ್ ನಶೀದ್ ನಿಚ್ಚಳ ಗೆಲುವು ಸಾಧಿಸಿದರು. ಈ ಮೂಲಕ ಏಷ್ಯಾದ ದೀರ್ಘ ಕಾಲದ ಅಧ್ಯಕ್ಷರೆನಿಸಿಕೊಂಡಿದ್ದ ಮೊಹಮ್ಮದ್ ಅಬ್ದುಲ್ ಗಯೂಂ ಅಧಿಕಾರದಿಂದ ಪತನಗೊಂಡರು.

2008: ಬೆಂಗಳೂರು ಮಹದೇವಪುರ ಸಮೀಪದ ಸಿದ್ಧಾಪುರ ಗ್ರಾಮದ ಕೆರೆಗೆ ಹಾನಿಕಾರಕ ತ್ಯಾಜ್ಯ ಹರಿದು ಬಂದ ಪರಿಣಾಮ ಈದಿನ ಮುಂಜಾನೆ ಮೂವತ್ತು ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತವು. ಕೆರೆಯ ಸುತ್ತಮುತ್ತಲ ವಸತಿ ಸಮುಚ್ಛಯಗಳಿಂದ ಹೊರಬರುವ ತ್ಯಾಜ್ಯವೇ ಮೀನುಗಳ ಸಾವಿಗೆ ಮುಖ್ಯ ಕಾರಣ. ಅಲ್ಲದೇ, ಕೆರೆಗೆ ಹೊಂದಿಕೊಂಡ ಕೆಲವು ಸಣ್ಣ ಕೈಗಾರಿಕಾ ಕೇಂದ್ರಗಳಿಂದಲೂ ವಿಷಯುಕ್ತ ಕೊಳಕು ನೀರನ್ನು ಕೆರೆಗೆ ಹರಿಯಬಿಡುತ್ತಿದ್ದುದು ಮತ್ತು ಬೆಮೆಲ್ ಬಡಾವಣೆಯಿಂದ ಒಳಚರಂಡಿ ನೀರು ಸಹ ಯಥೇಚ್ಛವಾಗಿ ಕೆರೆಯ ಒಡಲನ್ನು ಸೇರುತ್ತಿದ್ದುದರ ಪರಿಣಾಮವಾಗಿ ಈ ದುರಂತ ಸಂಭವಿಸಿತು.

2008: ಜರ್ಮನಿಯ ಬಾನ್ ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್ ಫೈನಲಿನಲ್ಲಿ ಒಟ್ಟು 6.5 ಪಾಯಿಂಟ್ ಸಂಗ್ರಹಿಸುವ ಮೂಲಕ ಭಾರತದ ಗ್ರ್ಯಾಂಡ್ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ ಅವರು ರಷ್ಯಾದ ಗ್ರ್ಯಾಂಡ್ ಮಾಸ್ಟರ್ ವ್ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಪರಾಭವಗೊಳಿಸಿ ಮತ್ತೆ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ವಿಶ್ವ ಚದುರಂಗ ಲೋಕದಲ್ಲಿ ಭಾರತ ಮತ್ತೊಮ್ಮೆ ತನ್ನ ಪಾರಮ್ಯ ಮೆರೆಯಲು ಆನಂದ್ ಕಾರಣರಾದರು. ಕೇವಲ 4.5 ಪಾಯಿಂಟ್ ಗಳಿಸಿದ ಕ್ರಾಮ್ನಿಕ್ ನಿರಾಶೆ ಅನುಭವಿಸಿದರು. 2007ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ಕಿರೀಟ ಕೂಡ ಆನಂದ್ ಪಾಲಾಗಿತ್ತು. 2000ದಲ್ಲಿ ಟೆಹರಾನಿನಲ್ಲಿ ಆನಂದ್ ಮೊದಲ ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.

2008: ನೈಋತ್ಯ ಪಾಕಿಸ್ಥಾನದ ಬಲೂಚಿಸ್ಥಾನದಲ್ಲಿ ಬೆಳಗಿನ ಜಾವ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 170 ಜನ ಸತ್ತು, ಸಾವಿರಾರು ಜನ ಗಾಯಗೊಂಡರು. ಸುಮಾರು 500ಕ್ಕೂ ಹೆಚ್ಚು ಮನೆಗಳು ನಾಶವಾಗಿ, 15,000ಕ್ಕೂ ಹೆಚ್ಚು ಜನ ನಿರ್ವಸಿತರಾದರು. ಪ್ರಾಂತ್ಯ ರಾಜಧಾನಿ ಕ್ವೆಟ್ಟಾದ ಈಶಾನ್ಯಕ್ಕೆ 60 ಕಿ.ಮೀ. ದೂರದಲ್ಲಿ ಕೇಂದ್ರ ಬಿಂದು ಹೊಂದಿದ್ದ ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ಇದ್ದ ಈ ಭೂಕಂಪ ಬೆಳಿಗ್ಗೆ 5.10ಕ್ಕೆ ಸಂಭವಿಸಿತು. ಜéಿಯಾರತ್ ಮತ್ತು ಪಿಶಿನ್ ಜಿಲ್ಲೆಗಳು ಅತಿ ಹೆಚ್ಚು ಹಾನಿಗೆ ತುತ್ತಾದವು.

2008: ಹಿಂದೂ ಮಹಾಸಾಗರದ ದ್ವೀಪ ಸಮೂಹ ರಾಷ್ಟ್ರವಾದ ಮಾಲ್ಡೀವ್ಸಿನಲ್ಲಿ ಪ್ರಜಾತಾಂತ್ರಿಕ ಮಾದರಿಯಲ್ಲಿ ಇದೇ ಮೊತ್ತಮೊದಲ ಬಾರಿಗೆ ಹಿಂದಿನ ದಿನ ನಡೆದ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಮಾಜಿ ರಾಜಕೀಯ ಕೈದಿ ಮೊಹಮ್ಮದ್ ನಶೀದ್ ನಿಚ್ಚಳ ಗೆಲುವು ಸಾಧಿಸಿದರು. ಈ ಮೂಲಕ ಏಷ್ಯಾದ ದೀರ್ಘ ಕಾಲದ ಅಧ್ಯಕ್ಷರೆನಿಸಿಕೊಂಡಿದ್ದ ಮೊಹಮ್ಮದ್ ಅಬ್ದುಲ್ ಗಯೂಂ ಅಧಿಕಾರದಿಂದ ಪತನಗೊಂಡರು. 41ರ ಪ್ರಾಯದ ನಶೀದ್ ಪ್ರವಾಸಿಗರ ಸ್ವರ್ಗವೆಂಬ ಖ್ಯಾತಿಯ ಈ ನಾಡಿನಲ್ಲಿ ನಡೆದ ಪ್ರಜಾಪ್ರಭುತ್ವ ಪರ ಹೋರಾಟಗಳ ನೇತೃತ್ವ ವಹಿಸಿದ್ದರು. `ವರ್ಚಸ್ವೀ ನಾಯಕ'ರೆಂಬ ಹಾಗೂ `ಅಂತಃಸಾಕ್ಷಿಯಿರುವ ಕೈದಿ' ಎಂಬ ಹೆಗ್ಗಳಿಕೆಗಳನ್ನೂ ಅವರು ಹೊಂದಿದ್ದರು.

2008: ಅಗ್ಗದ ದರದ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಡೆನ್ಮಾರ್ಕಿನ ಸ್ಟೆರ್ಲಿಂಗ್ ಏರ್ ಲೈನ್ಸ್ ತಾನು ದಿವಾಳಿ ಎಂದು ಕೊಪೆನ್ ಹೇಗನ್ನಿನಲ್ಲಿ ಘೋಷಿಸಿಕೊಂಡು, ತನ್ನೆಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತು. ಇದರಿಂದಾಗಿ ಈ ಸಂಸ್ಥೆಯಲ್ಲಿದ್ದ 1,100 ಉದ್ಯೋಗಿಗಳ ಭವಿಷ್ಯ ಅತಂತ್ರವಾಯಿತು. ಜೊತೆಗೆ ಟಿಕೆಟ್ ಪಡೆದ ಸಾವಿರಾರು ಪ್ರಯಾಣಿಕರೂ ಹತಾಶರಾದರು. ವೆಬ್ ಸೈಟಿನಲ್ಲಿ ತಾನು ದಿವಾಳಿ ಎಂದು ಹೇಳಿದ ಸಂಸ್ಥೆ, ಜಾಗತಿಕ ಆರ್ಥಿಕ ಬಿಕ್ಕಟ್ಟು, ಹೆಚ್ಚಿದ ತೈಲ ಬೆಲೆಗಳಿಂದಾಗಿ ಸಂಸ್ಥೆಯ ಷೇರುದಾರರು ತೀವ್ರ ನಷ್ಟಕ್ಕೆ ಸಿಲುಕಿದರು, ಇದರಿಂದ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿತು.

2008: ಮಾಲೆಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಿವೃತ್ತ ಮೇಜರ್ ರಮೇಶ್ ಚಂದ್ರ ಉಪಾಧ್ಯ ಮತ್ತು ಕಾರ್ಯಕರ್ತ ಸಮೀರ್ ಕುಲಕರ್ಣಿ ಎಂಬುವವರನ್ನು ಪೊಲೀಸರು ಪುಣೆಯಲ್ಲಿ ಬಂಧಿಸಿದರು. ಈ ನಡುವೆ ಅವರಿಗೆ ಸಂಬಂಧಿಸಿದ ಹಿಂದುತ್ವ ಸಂಘಟನೆ `ಅಭಿನವ್ ಭಾರತ್'ಯ ವೆಬ್ ಸೈಟ್ ಅಂತರ್ಜಾಲ ತಾಣದಿಂದ ಕಣ್ಮರೆಯಾಯಿತು.

2007: ತೀವ್ರವಾಗಿ ಅಸ್ವಸ್ಥರಾಗಿದ್ದ ಖ್ಯಾತ ರಂಗಕರ್ಮಿ ಪ್ರೇಮಾ ಕಾರಂತ (73) ಬೆಂಗಳೂರಿನ ಟ್ರಿನಿಟಿ ಆಸ್ಪತ್ರೆಯಲ್ಲಿ ಈದಿನ ಮಧ್ಯಾಹ್ನ ನಿಧನರಾದರು. ಸಂಜೆ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಪ್ರಸಿದ್ಧ ವ್ಯಕ್ತಿಯ ಪತ್ನಿಯಾಗಿದ್ದೂ ಅಸ್ತಿತ್ವವನ್ನು ಉಳಿಸಿಕೊಂಡ ಅಪರೂಪದ ಮಹಿಳೆಯರ ಸಾಲಿಗೆ ಸೇರಿದವರು ಪ್ರೇಮಾ ಕಾರಂತ. ಅವರ ಆಸಕ್ತಿ ಹಾಗೂ ಸಾಧನೆ ಸಿನಿಮಾ, ರಂಗಭೂಮಿ, ಭಾಷಾಂತರ, ಬೋಧನೆ- ಹೀಗೆ ಹಲವು ಕ್ಷೇತ್ರಗಳಲ್ಲಿ ಹಂಚಿಹೋಗಿತ್ತು.
ದೆಹಲಿಯ `ರಾಷ್ಟ್ರೀಯ ನಾಟಕ ಶಾಲೆ'ಯಲ್ಲಿ ರಂಗಭೂಮಿಯ ಪಟ್ಟುಗಳನ್ನು ಕಲಿಯುವಾಗ ಅಂಕುರಿಸಿದ ಪ್ರೇಮ ಬಿ.ವಿ. ಕಾರಂತರೊಂದಿಗೆ ಪ್ರೇಮ ವಿವಾಹದಲ್ಲಿ ಪರ್ಯವಸಾನಗೊಂಡಿತ್ತು. ಪ್ರೇಮ ವಿವಾಹದ ಸಂಕಷ್ಟ, ಆರ್ಥಿಕ ಅಡಚಣೆಗಳ ನಡುವೆ ಸಾಗಿದ ಅವರ ಬಾಳ ಹಾದಿಯಲ್ಲಿ ಗುರಿ ನಿಚ್ಚಳವಾಗಿತ್ತು. ರಂಗಭೂಮಿಯ ಹಾದಿಯ ಪಯಣ ಲೌಕಿಕ ತೊಂದರೆಗಳನ್ನು ಮರೆಸುವಷ್ಟು ಪ್ರಭಾವಶಾಲಿಯಾಗಿತ್ತು. ಅರವತ್ತು ಎಪ್ಪತ್ತರ ದಶಕ ಕಾರಂತರು ನಾಟಕ ಹಾಗೂ ಸಿನಿಮಾಗಳಲ್ಲಿ ನಿರಂತರ ಪ್ರಯೋಗಶೀಲರಾಗಿದ್ದಾಗ, ಆರಂಭವಾದ ಕನ್ನಡದ ಹೊಸ ಅಲೆಯ ಚಿತ್ರಗಳ ನಿರ್ಮಾಣ ಸೇರಿದಂತೆ ಪತಿಯ ಎಲ್ಲ ಪ್ರಯೋಗಗಳಲ್ಲಿ ಪ್ರೇಮಾ ಸಹಕಾರವಿತ್ತು. `ಹಂಸಗೀತೆ' ಚಿತ್ರಕ್ಕೆ ಪ್ರೇಮಾ ಅವರೇ ವಸ್ತ್ರವಿನ್ಯಾಸ ಮಾಡಿದ್ದರು. ಜೊತೆಗೆ ಪ್ರೇಮಾ ತಮ್ಮದೇ ಆದ ದಾರಿಯಲ್ಲಿಯೂ ನಡೆದರು. ಅವರು ನಿರ್ದೇಶಿಸಿದ `ಫಣಿಯಮ್ಮ' ರಾಷ್ಟ್ರಪ್ರಶಸ್ತಿ ಪಡೆಯಿತು. ಎಂ.ಕೆ. ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರದಲ್ಲಿ ಪ್ರೇಮಾ ಎಳೆಯ ವಯಸ್ಸಿನಲ್ಲಿ ವಿಧವೆಯಾದ ಹೆಣ್ಣುಮಗಳ ತವಕ ತಲ್ಲಣಗಳನ್ನು ಅದ್ಭುತವಾಗಿ ಚಿತ್ರಿಸಿದ್ದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಪ್ರೇಮಾ ನಿರ್ದೇಶಿಸಿದ `ಬಂಧ್ ಝರೋಕೆ' ಹಿಂದಿಚಿತ್ರ ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಹೆಸರು ತಂದು ಕೊಟ್ಟಿತ್ತು. `ನಕ್ಕಳಾ ರಾಜಕುಮಾರಿ', `ಲಕ್ಷ್ಮೀ ಕಟಾಕ್ಷ', `ಅಬ್ದುಲ್ಲಾ ಗೋಪಾಲ' ಅವರ ನಿರ್ದೇಶನದ ಇತರ ಚಿತ್ರಗಳು. ಮಕ್ಕಳನ್ನು ಕಂಡರೆ ಪ್ರೇಮಾ ಅವರಿಗೆ ಮೈಮರೆಯುವಷ್ಟು ಅಕ್ಕರೆ. `ಬೆನಕ' ಮಕ್ಕಳ ರಂಗತಂಡದ ಮೂಲಕ ಅವರು ಮಕ್ಕಳ ನಾಟಕಗಳನ್ನು ರೂಪಿಸಲಿಕ್ಕೆ ಈ ಅಕ್ಕರೆಯೇ ಕಾರಣ. ಅವರ ನಿರ್ದೇಶನದ `ಆಲೀಬಾಬಾ' ನಾಟಕ- ಆ ನಾಟಕದ ಸಂಗೀತ- ಮಕ್ಕಳಿಗೆ ತುಂಬಾ ಇಷ್ಟವಾಗಿತ್ತು, `ಸಿಂದಾಬಾದ್', `ನಕ್ಕಳಾ ರಾಜಕುಮಾರಿ', `ಇಸ್ಪೀಟ್ ರಾಜ್ಯ', `ಪಂಜರಶಾಲೆ', `ಅಳಿಲು ರಾಮಾಯಣ', `ಸುಣ್ಣದ ಸುತ್ತು', `ಕುಣಿಯೋ ಕತ್ತೆ', `ಹಿಂದುಮುಂದಾದ ಕಾಳಿ' ಅವರ ಕೆಲವು ಜನಪ್ರಿಯ ಮಕ್ಕಳ ನಾಟಕಗಳು. ಷೇಕ್ಸ್ಪಿಯರ್ನ `ಕಿಂಗ್ಲಿಯರ್' ಹಾಗೂ ಎಚ್.ಎಸ್. ವೆಂಕಟೇಶಮೂರ್ತಿಯವರ `ಹುಚ್ಚುದೊರೆ ಮತ್ತು ಮೂವರು ಮಕ್ಕಳು' ನಾಟಕಗಳು ಪ್ರೇಮಾ ಅವರ ಯಶಸ್ವಿ ನಾಟಕಗಳಲ್ಲಿ ಕೆಲವು. ವಿಪರ್ಯಾಸವೆಂದರೆ ಮಕ್ಕಳ ಬಗ್ಗೆ ಇಷ್ಟೆಲ್ಲ ಕಾಳಜಿ ಹೊಂದಿದ್ದ ಪ್ರೇಮಾ ಅವರಿಗೆ ಸಂತಾನವಿರಲಿಲ್ಲ. ಭಾಷಾಂತರದಲ್ಲೂ ಪ್ರೇಮಾ ಪ್ರವೀಣೆಯಾಗಿದ್ದರು. ಹಿಂದಿಯಿಂದ ಶಂಭುಮಿತ್ರ, ವಿಜಯ್ ತೆಂಡೂಲ್ಕರರ ಕೃತಿಗಳನ್ನು, ಗುಜರಾತಿ ಏಕಾಂಕಗಳನ್ನು, ಇಂಗ್ಲಿಷಿನ ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದರು. ರಾಷ್ಟ್ರೀಯ ಪುಸ್ತಕ ಟ್ರಸ್ಟಿನಿಂದ ಭಾಷಾಂತರಕಾರಳಾಗಿ ಮನ್ನಣೆ ಪಡೆದಿದ್ದರು. ಪ್ರೇಮಾ ಅವರು ರಂಗಕ್ಕೆ ತಂದ ದ.ರಾ. ಬೇಂದ್ರೆಯವರ `ಸಾಯೋ ಆಟ', ಗಿರೀಶ್ ಕಾರ್ನಾಡರ `ಹಿಟ್ಟಿನ ಹುಂಜ', ವಿಜಯ್ ತೆಂಡೂಲ್ಕರರ `ಹಕ್ಕಿ ಹಾರುತಿದೆ ನೋಡಿದಿರಾ', ಶ್ರೀರಂಗರ `ಸ್ವಗತ ಸಂಭಾಷಣೆ', ಲಂಕೇಶರ `ಪೊಲೀಸರಿದ್ದಾರೆ ಎಚ್ಚರಿಕೆ' ನಾಟಕಗಳು ಅವರ ರಂಗಪ್ರೀತಿ ಹಾಗೂ ಬದ್ಧತೆಗೆ ಸಾಕ್ಷಿಯಾಗಿದ್ದವು. ದೇಶದ ವಿವಿಧ ಭಾಗಗಳಲ್ಲಿ ರಂಗಭೂಮಿಗೆ ಸಂಬಂಧಿಸಿದ ಕಮ್ಮಟಗಳನ್ನು ನಡೆಸಿದ್ದರು. ಸಿನೆಮಾಗಳಿಗೆ ಲಭಿಸಿದ ರಾಷ್ಟ್ರಪ್ರಶಸ್ತಿಗಳ ಜೊತೆಗೆ ಪ್ರೇಮಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು. ಪತಿ ಬಿ.ವಿ. ಕಾರಂತರ ನಿಧನದ ಬಳಿಕ ಅವರು ಸ್ಥಾಪಿಸಿದ್ದ `ಬಾಬುಕೋಡಿ ಪ್ರತಿಷ್ಠಾನ'ದ ಮೂಲಕ ಪತಿಯ ಕನಸುಗಳನ್ನು ನನಸಾಗಿಸುವ ಯತ್ನದಲ್ಲಿ ಪ್ರೇಮಾ ಸಕ್ರಿಯರಾಗಿದ್ದರು. ಕಾರಂತರ ಬೃಹತ್ ಪುಸ್ತಕ ಸಂಗ್ರಹ ಹಾಗೂ ದೇಶವಿದೇಶಗಳ- ಅಪರೂಪದ ವಾದ್ಯಗಳನ್ನೊಳಗೊಂಡ- ವಸ್ತು ಸಂಗ್ರಹವನ್ನು ಜೋಪಾನವಾಗಿರಿಸುವ ಕನಸು ಅವರಿಗಿತ್ತು.

2007: ವಾಯುಭಾರ ಕುಸಿತದಿಂದಾಗಿ ವರ್ಷದ ಅತ್ಯಂತ ಬಿರುಸಿನ ಮಳೆಯ ಆರ್ಭಟಕ್ಕೆ ಸಿಲುಕಿದ ತಮಿಳುನಾಡಿನ ವಿವಿಧೆಡೆಗಳಲ್ಲಿ 48 ಗಂಟೆಗಳ ಅವಧಿಯಲ್ಲಿ 30 ಜನ ಮೃತರಾಗಿ ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಯಿತು. ತಂಜಾವೂರು, ಕಡಲೂರು, ಚೆನ್ನೈ ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಹಾನಿ ಉಂಟಾಯಿತು.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ ವಹಿವಾಟಿನಲ್ಲಿ ದೀಪಾವಳಿಯ ರಾಕೆಟ್ನಂತೆ ಚಿಮ್ಮಿ 20 ಸಾವಿರ ಅಂಶಗಳ ಮಾಂತ್ರಿಕ ಸಂಖ್ಯೆ ದಾಟಿ ಹೊಸ ಇತಿಹಾಸ ಬರೆಯಿತು.

2007: ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ನಟ ಅನಂತನಾಗ್, ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾಣಿ ಸಹಿತ ವಿವಿಧ ಕ್ಷೇತ್ರಗಳ ಗಣ್ಯರಿಗೆ 2007ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಯಿತು. 51ನೇ ರಾಜ್ಯೋತ್ಸವ ನಿಮಿತ್ತ 51 ಮಂದಿಯನ್ನು ಪ್ರಶಸ್ತಿಗೆ ಆರಿಸಲಾಯಿತು.

2007: ನಿರೀಕ್ಷಿತ ಬೆಂಬಲ ಸಿಗದೆ ಮುಗ್ಗರಿಸಿದ ಎಂ.ಪಿ.ಪ್ರಕಾಶ್ ಬಣ, ರಾಜ್ಯಪಾಲರ ಮುಂದೆ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ಸ್ವಯಂ ಪ್ರೇರಿತ ಶಕ್ತಿ ಪ್ರದರ್ಶನ, ರಾಜಭವನದಲ್ಲಿ 129 ಶಾಸಕರ ಖುದ್ದು ಹಾಜರಿ ಹಾಜರಿ, ಮರು ಮೈತ್ರಿಗೆ ಕಾಂಗ್ರೆಸ್ಸಿನಿಂದ ಮುಂದುವರೆದ ಕಿರಿಕಿರಿ, ತಮಗೆ ಅವಕಾಶ ನೀಡುವಲ್ಲಿ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆಂಬ ಮಿತ್ರ ಪಕ್ಷಗಳ ತೀವ್ರ ಅಸಮಾಧಾನ- ಈ ಪ್ರಮುಖ ಬೆಳವಣಿಗೆಗಳು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈದಿನ ನಡೆದವು. ಇಡೀದಿನ ರಾಜಕೀಯ ಚಟುವಟಿಕೆಗಳು ನಡೆದರೂ ರಾಜ್ಯಪಾಲರ ಮನದಿಂಗಿತ ಬಹಿರಂಗಗೊಳ್ಳದ ಕಾರಣ ಪರ್ಯಾಯ ಸರ್ಕಾರ ರಚನೆ ಸಂಬಂಧದ ಅನಿಶ್ಚಿತತೆ ಮುಂದುವರೆಯಿತು. ಬಿಜೆಪಿ ಮತ್ತು ಜೆಡಿಎಸ್ ಜಂಟಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿ.ಎಸ್. ಯಡಿಯೂರಪ್ಪ ಆಯ್ಕೆಯಾದರು. ವಿಂಡ್ಸರ್ ಮ್ಯಾನರಿನಲ್ಲಿ ಸಂಜೆ ಹದಿನೈದು ನಿಮಿಷಗಳ ಕಾಲ ನಡೆದ ಜಂಟಿ ಸಭೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಸರನ್ನು ಸೂಚಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ- ಜೆಡಿಎಸ್ ರಾಜ್ಯ ಘಟಕಗಳ ಅಧ್ಯಕ್ಷರಾದ ಸದಾನಂದಗೌಡ ಮತ್ತು ಮೆರಾಜ್ದುದೀನ್ ಪಟೇಲ್, ಶಾಸಕರು ಭಾಗವಹಿಸಿದ್ದರು.

2006: ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಅಕ್ಟೋಬರ್ 27ರಂದು ಮಧ್ಯಪ್ರದೇಶದಲ್ಲಿ ನಿಧನರಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಗುನಾದಲ್ಲಿ ತನಿಖೆ ಆರಂಭಿಸಿದರು. ಮಧ್ಯ ಪ್ರದೇಶದ ಅಶೋಕ ನಗರ ಜಿಲ್ಲೆಯ ಸಾಯಿಜಿ ಗ್ರಾಮದಲ್ಲಿ 30 ವರ್ಷಗಳಿಂದ ವಾಸವಾಗಿದ್ದ 100ಕ್ಕೂ ಹೆಚ್ಚು ವಯಸ್ಸಿನ ಸಂತ ಬಾಬಾ ಲಾಲ್ ಜಿ ಮಹಾರಾಜ್ ಎರಡು ದಿನಗಳ ಹಿಂದೆ ಮರಣಶಯ್ಯೆಯಲ್ಲಿ ಇದ್ದಾಗ ತಾವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಎಂಬುದಾಗಿ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಮಾಜಿ ಗ್ರಾಮ ಸರಪಂಚ ಗಜೇಂದ್ರ ಸಿಂಗ್ ರಘುವಂಶಿ ಪ್ರಕಟಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ವಾಪಸಾಗುವಾಗ ಬಾಬಾ ತಾವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಎಂಬುದಾಗಿ ಒಪ್ಪಿಕೊಂಡಿದ್ದು, ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಈ ವಿಚಾರವನ್ನು ಬಹಿರಂಗ ಪಡಿಸಬಾರದು ಎಂದು ನಮಗೆ ಸೂಚಿಸಿದ್ದರು' ಎಂದು ರಘುವಂಶಿ ಹೇಳಿದರು. ಸಾಯಿಜಿ ಗ್ರಾಮಕ್ಕೆ ಬರುವ ಮುನ್ನ ಬಾಬಾ ಲಾಲ್ ಜಿ ಮಹಾರಾಜ್ ಅವರು ನೆರೆಯ ಚಾಕ್ ಚಿರೋಲಿ ಗ್ರಾಮದಲ್ಲಿ 20 ವರ್ಷಗಳ ಕಾಲ ವಾಸವಾಗಿದ್ದರು. ಸಾಯುವ ಮುನ್ನ ಲಾಲ್ ಜಿ ಅವರು ತಮ್ಮ ಬಳಿ ಇದ್ದ ಹಲವಾರು ಪುಸ್ತಕಗಳನ್ನು ರಘುವಂಶಿ ಅವರಿಗೆ ನೀಡಿದ್ದರು. ಇದಲ್ಲದೆ ಬೌದ್ಧಮತಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳು, ಹಳೆಯ ರೈಲು ಮತ್ತು ಬಸ್ ಟಿಕೆಟ್ಟುಗಳು, ಸುಭಾಶ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಹಳೆ ವೃತ್ತ ಪತ್ರಿಕಾ ತುಣುಕುಗಳು ಮತ್ತು ಫೊಟೋಗಳು ಆಶ್ರಮದಲ್ಲಿ ಲಭಿಸಿದವು.

2006: ಬಾಂಗ್ಲಾದೇಶದ ರಾಷ್ಟ್ರಪತಿ ಇವಾಜ್ದುದೀನ್ ಅಹ್ಮದ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅವರೇ ಜನವರಿ ತಿಂಗಳಲ್ಲಿ ನಡೆಯಲಿರುವ ಮಹಾಚುನಾವಣೆಯ ಮೇಲುಸ್ತುವಾರಿ ನೋಡಿಕೊಳ್ಳುವುದಾಗಿ ಪ್ರಕಟಿಸಿದರು. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಹಸನ್ ಹಂಗಾಮಿ ಆಡಳಿತಗಾರರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ವಿರೋಧ ಪಕ್ಷಗಳಿಂದ ವ್ಯಕ್ತವಾದ ತೀವ್ರ ಪ್ರತಿಭಟನೆ ಹಾಗೂ ಹಸನ್ ಅವರು ಹಠಾತ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸಮಾರಂಭ ಮುಂದೂಡಿದ್ದ ಇವಾಜುದ್ದೀನ್ ಅಹ್ಮದ್ ಅವರು ಮೌನ ಮುರಿದು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಕ್ರಮ ಕೈಗೊಂಡರು.

2006: ನೈಜೀರಿಯಾದ ರಾಜಧಾನಿ ಅಬುಜಾ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ವಿಮಾನ ಕೆಲ ಕ್ಷಣಗಳಲ್ಲೇ ಪತನಗೊಂಡು 100ಕ್ಕೂ ಹೆಚ್ಚು ಮಂದಿ ಮೃತರಾದರು. ವಿಮಾನದಲ್ಲಿ 110ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

2006: ಇನ್ಫೋಸಿಸ್ ಟೆಕ್ನಾಲಜೀಸ್ ಸಿಇಓ ನಂದನ್ ನೀಲೇಕಣಿ ಅವರಿಗೆ 2006ನೇ ಸಾಲಿನ ಡೇಟಾ ಕ್ವೆಸ್ಟ್ ಐಟಿ ವ್ಯಕ್ತಿ ಪ್ರಶಸ್ತಿ ಲಭಿಸಿತು. ಡೇಟಾಕ್ವೆಸ್ಟ್ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಪ್ಲೆಕ್ಸ್ ಟ್ರಾನಿಕ್ಸ್ ಸಾಫ್ಟ್ ವೇರ್ ಮುಖ್ಯಸ್ಥರಾಗಿದ್ದ ಅರುಣ್ ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು.

2006: ಕನ್ನಡದ ಹಿರಿಯ ನಟಿ ಜಯಶ್ರೀ (77) ಅವರು ಮೈಸೂರಿನಲ್ಲಿ ನಿಧನರಾದರು. `ಭಕ್ತ ಕುಂಬಾರ' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ ಕನ್ನಡ, ತಮಿಳು ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ನಾಗಕನ್ನಿಕಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಆ ಕಾಲದಲ್ಲೇ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದ್ದರು. 1970-71ರ ಸಾಲಿನಲ್ಲಿ `ಅಮರ ಭಾರತಿ' ಚಿತ್ರಕ್ಕೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಲಭಿಸಿತ್ತು.

2006: ಕನಕದಾಸರ ನೆಲೆವೀಡಾದ ಹಾವೇರಿ ಜಿಲ್ಲೆ ಕಾಗಿನೆಲೆಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಎರಡನೇ ಜಗದ್ಗುರುಗಳಾಗಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅಧಿಕಾರ ಸ್ವೀಕರಿಸಿದರು.

2005: ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯಲ್ಲಿ ನಸುಕಿನ 4.40ರ ವೇಳೆಗೆ ಸಿಕಂದರಾಬಾದ್ ಡೆಲ್ಟಾ ಫಾಸ್ಟ್ ಪ್ಯಾಸೆಂಜರ್ ರೈಲಿನ ಬೋಗಿಗಳು ಪ್ರವಾಹದಿಂದ ಕೊಚ್ಚಿಹೋದ ಸೇತುವೆ ಮೇಲೆ ಹಳಿತಪ್ಪಿದವು. 150ಕ್ಕೂ ಹೆಚ್ಚು ಜನ ಮೃತರಾಗಿ 200ಕ್ಕೂ ಹೆಚ್ಚು ಜನ ಗಾಯಗೊಂಡರು.

2005: ದೆಹಲಿಯ ಪಹಾಡ್ ಗಂಜ್, ಸರೋಜಿನಿ ನಗರ ಮಾರುಕಟ್ಟೆ, ಗೋವಿಂದ ಪುರಿಯ ಬಸ್ಸುಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 62 ಜನ ಮೃತರಾಗಿ ನೂರಾರು ಮಂದಿ ಗಾಯಗೊಂಡರು.

2005: ಇಪ್ಪತ್ಮೂರು ವರ್ಷಗಳ ಕಾನೂನು ಸಮರದ ಬಳಿಕ ಬೆಂಗಳೂರು ನಗರ ರೇಸ್ ಕೋರ್ಸ್ ರಸ್ತೆಯ ಸಂಖ್ಯೆ 3ರ ಪಕ್ಷದ ಕಚೇರಿ ಕಟ್ಟಡವನ್ನು ತೆರವುಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಜನತಾದಳಕ್ಕೆ (ಎಸ್) ಆದೇಶ ನೀಡಿತು. ಈ ಕಟ್ಟಡದ ಮಾಲೀಕತ್ವ ಕೋರಿ ಕಾಂಗ್ರೆಸ್ 1982ರಲ್ಲಿ ಅರ್ಜಿ ಸಲ್ಲಿಸಿತ್ತು. ಅಂದಿನ ಜನತಾ ಪಕ್ಷವೂ ಇಂತಹುದೇ ಅರ್ಜಿ ಸಲ್ಲಿಸಿತ್ತು. ನಂತರ ಕಟ್ಟಡ ವಶಪಡಿಸಿಕೊಂಡ ಜನತಾದಳ (ಎಸ್) ಪ್ರತಿವಾದಿಯಾಗಿ ಸೇರಿಕೊಂಡು ಕಟ್ಟಡ ತನಗೆ ಸೇರಬೇಕು ಎಂದು ವಾದಿಸಿತ್ತು.

2005: ಮಂಗಳ ಗ್ರಹವು ಭೂಮಿಗೆ ಅತ್ಯಂತ ಸಮೀಪ ಬಂತು. ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಈ ವಿದ್ಯಮಾನವನ್ನು ಸೆರೆ ಹಿಡಿಯಿತು. 2018ರಲ್ಲಿ ಇನ್ನೊಮ್ಮೆ ಇಂತಹ ಘಟನೆ ಘಟಿಸಲಿದೆ.

2000: ಶಾರ್ಜಾದಲ್ಲಿ ನಡೆದ ಕೋಕಾ-ಕೋಲಾ ಪಂದ್ಯದಲ್ಲಿ ಭಾರತವು ಶ್ರೀಲಂಕೆಯ ಎದುರಲ್ಲಿ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅಂದರೆ 54 ರನ್ನುಗಳಿಗೆ ಅದು ಆಲ್ ಔಟ್ ಆಯಿತು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಕೇವಲ 63 ರನ್ ಗಳಿಕೆಯೊಂದಿಗೆ ಭಾರತ ಸೋಲು ಅನುಭವಿಸಿತ್ತು.

1990: ಖ್ಯಾತ ಹಿಂದಿ ನಟ ವಿನೋದ ಮೆಹ್ರಾ ನಿಧನ.

1987: ಥಾಮಸ್ ಹೀಯರ್ನ್ಸ್ ಲಾಸ್ ಏಂಜೆಲಿಸ್ ನಲ್ಲಿ ಜಾಗತಿಕ ಮಿಡ್ಲ್ ವೇಯ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದರೊಂದಿಗೆ ನಾಲ್ಕು ಬೇರೆ ಬೇರೆ ವೇಯ್ಟ್ ಗಳಲ್ಲಿ ಜಾಗತಿಕ ಪ್ರಶಸ್ತಿಗಳನ್ನು ಗೆದ್ದ ಪ್ರಥಮ ಬಾಕ್ಸರ್ ಎಂಬ ಎಂಬ ಹೆಗ್ಗಳಿಕೆ ಅವರದಾಯಿತು.

1967: ತತ್ವಜ್ಞಾನಿ ಕುರ್ತಕೋಟಿ ಲಿಂಗನಗೌಡ ನಿಧನ.

1959: `ಆಸ್ಟೆರಿಕ್ಸ್' ಎಂಬ ಕಾಮಿಕ್ಸ್ ಕಥಾಸರಣಿ ಫ್ರೆಂಚ್ ಸಾಪ್ತಾಹಿಕ ಮ್ಯಾಗಜಿನ್ `ಪೈಲೊಟ್' ನಲ್ಲಿ ಜನಿಸಿತು. ಈವರೆಗೆ `ಆಸ್ಟೆರಿಕ್ಸ್' ನ 35 ಕಥೆಗಳು ಪ್ರಕಟವಾಗಿದ್ದು 40 ಭಾಷೆಗಳಿಗೆ ಅದು ಭಾಷಾಂತರಗೊಂಡಿದೆ. 22 ಕೋಟಿ ಪ್ರತಿಗಳು ಮಾರಾಟವಾಗಿವೆ.

1936: ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ನೈಲಾಡಿ ರಾಮಭಟ್ಟ- ಮೂಕಾಂಬಿಕೆ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.

1931: ಸಾಹಿತಿ ಎಂ.ಜಿ. ಭೀಮರಾವ್ (ವಂಶಿ) ಜನನ.

1931: ಸಾಹಿತಿ ಆರ್.ಜಿ. ಕುಲಕರ್ಣಿ ಜನನ.

1929: ಅಮೆರಿಕದ ಸ್ಟಾಕ್ ಮಾರ್ಕೆಟ್ `ಕರಾಳ ಮಂಗಳವಾರ'ದ ದಿನ ಕುಸಿಯಿತು. 1.60 ಕೋಟಿ ಷೇರುಗಳ ಮಾರಾಟಗೊಂಡವು. ಇದರಿಂದಾಗಿ ಸ್ಟಾಕ್ ಮಾರ್ಕೆಟಿನಲ್ಲಿ ಬೆಲೆಗಳು ಸಂಪೂರ್ಣ ಕುಸಿದು ಬಿದ್ದವು. ಬ್ಯಾಂಕ್ ಸಾಲಗಳನ್ನು ಭರಿಸಲು ಸಾಧ್ಯವಾಗುವುದಿಲ್ಲ ಎಂಬದಾಗಿ ಹರಡಿದ ಊಹಾಪೋಹಗಳು ಸ್ಟಾಕ್ ಮಾರ್ಕೆಟಿನ ಈ ಭಾರೀ ಕುಸಿತಕ್ಕೆ ಕಾರಣವಾಗಿದ್ದವು. ಇದರಿಂದಾಗಿ ಭಾರೀ ಬೆಲೆ ಇಳಿಕೆ ಉಂಟಾಗಿ ಪಶ್ಚಿಮದ ಕೈಗಾರಿಕಾ ದೇಶಗಳಲ್ಲಿ 10 ವರ್ಷಗಳ ಕಾಲ ಆರ್ಥಿಕತೆ ಸ್ಥಗಿತಗೊಂಡಿತು.

1923: `ಟರ್ಕಿಶ್' ರಿಪಬ್ಲಿಕ್ ಜನಿಸಿತು. ಕೆಮಲ್ ಅಟಾಟರ್ಕ್ ಮೊದಲ ಅಧ್ಯಕ್ಷರಾದರು. ಅಂಕಾರಾ ಅದರ ರಾಜಧಾನಿಯಾಯಿತು.

1920: ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಮಹಮೂದ್ ಹಸನ್ ಅವರಿಂದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾಕ್ಕೆ ಅಡಿಗಲ್ಲು ಹಾಕಲಾಯಿತು.

1916: ಸಾಹಿತಿ ಚಂದ್ರಭಾಗಿ ಕೆ. ರೈ ಜನನ.

1907: ಸಾಹಿತಿ ಡಿ.ವಿ. ಶೇಷಗಿರಿ ರಾವ್ ಜನನ.

1903: ಇಪ್ಪತ್ತನೇ ಶತಮಾನದಲ್ಲಿ ಮಹಿಳೆಯರ ಉನ್ನತಿಗಾಗಿ ದುಡಿದ ಕಮಲಾದೇವಿ ಚಟ್ಟೋಪಾಧ್ಯಾಯ ನಿಧನರಾದರು.

1897: ಅಡಾಲ್ಫ್ ಹಿಟ್ಲರನ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್ (1897-1945) ಜನ್ಮದಿನ. ಜರ್ಮನ್ನರಲ್ಲಿ ಹಿಟ್ಲರನ ನಾಝಿ ಆಡಳಿತ ಬಗ್ಗೆ ಅನುಕಂಪ ಮೂಡುವಂತೆ ಮಾಡುವಲ್ಲಿ ಈತನ ಪ್ರಚಾರ ತಂತ್ರಗಳೇ ಪ್ರಮುಖ ಪಾತ್ರ ವಹಿಸಿದ್ದವು.

1863: ಹೆನ್ರಿ ಡ್ಯುನಾನ್ ಅವರು ಇಂಟರ್ ನ್ಯಾಷನಲ್ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿದರು. ಉತ್ತರ ಇಟಲಿಯ ಮಂಟುವಾ ಸಮೀಪ ಸೊಲ್ಫರಿನೋ ಕದನದಲ್ಲಿ ಗಾಯಗೊಂಡವರ ಪರಿಸ್ಥಿತಿಯನ್ನು ಕಂಡು ಮನಮಿಡಿದ ಹೆನ್ರಿ ಅವರ ನೆರವಿಗಾಗಿ ಈ ಸಂಸ್ಥೆ ಸ್ಥಾಪನೆಗೆ ಮುಂದಾದರು.

Friday, October 30, 2009

ಇಂದಿನ ಇತಿಹಾಸ History Today ಅಕ್ಟೋಬರ್ 28

ಇಂದಿನ ಇತಿಹಾಸ

ಅಕ್ಟೋಬರ್ 28

ಗಿನ್ನೆಸ್ ದಾಖಲೆ ನಿರ್ಮಿಸುವುದಕ್ಕಾಗಿಯೇ ಮೀಸಲಾದ ಸಭಾಂಗಣವೊಂದನ್ನು ದುಬೈಯಲ್ಲಿ ಚಳಿಗಾಲದ ಸಂಸ್ಕೃತಿ ಮತ್ತು ಮನರಂಜನಾ ಕಾರ್ಯಕ್ರಮ ಏರ್ಪಡಿಸುವ `ಗ್ಲೋಬಲ್ ವಿಲೇಜ್' ಸಂಸ್ಥೆ ಸ್ಥಾಪಿಸಿತು. ಇಲ್ಲಿ ನವೆಂಬರ್ 12ರಿಂದ ಫೆ.21ರ ತನಕ ವಿವಿಧ ವಿಭಾಗಗಳಲ್ಲಿ ಪ್ರದರ್ಶನಗಳು ನಡೆಯುತ್ತವೆ.

2008: ಮಹಾರಾಷ್ಟ್ರದ ನಾಂದೇಡಿನಲ್ಲಿ ಶ್ವೇತವರ್ಣದ ಅಮೃತಶಿಲೆಯಲ್ಲಿ ನಿರ್ಮಿಸಲಾದ ಸ್ವರ್ಣಗೋಪುರ ಇರುವ ಸಚ್ ಖಂಡ್ ಗುರುದ್ವಾರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಯಾತ್ರಿಗಳು ಹಾಲಿನ ಸ್ನಾನ ಮಾಡಿಸಿ, ಶುಚಿಗೊಳಿಸಿ ಧನ್ಯತಾಭಾವ ಅನುಭವಿಸಿದರು. ಸಿಖ್ಖರ ಧರ್ಮಗ್ರಂಥ `ಗುರು ಗ್ರಂಥಸಾಹಿಬ್'ಗೆ ಪಟ್ಟಕಟ್ಟಿದ 300ನೇ ವರ್ಷದ ಆಚರಣೆಯ `ಗುರು ತಾ ಗದ್ದಿ' ಉತ್ಸವದ ಮೊದಲ ದಿನವಾದ ಈದಿನ `ತಖ್ತ್ ಸ್ನಾನ'ದ ಮೂಲಕ ಆಚರಣೆಯ ವಿಧಿವಿಧಾನಗಳು ವಿಧ್ಯುಕ್ತವಾಗಿ ಆರಂಭವಾದವು.

2008: ಗಿನ್ನೆಸ್ ದಾಖಲೆ ನಿರ್ಮಿಸುವುದಕ್ಕಾಗಿಯೇ ಮೀಸಲಾದ ಸಭಾಂಗಣವೊಂದನ್ನು ದುಬೈಯಲ್ಲಿ ಚಳಿಗಾಲದ ಸಂಸ್ಕೃತಿ ಮತ್ತು ಮನರಂಜನಾ ಕಾರ್ಯಕ್ರಮ ಏರ್ಪಡಿಸುವ `ಗ್ಲೋಬಲ್ ವಿಲೇಜ್' ಸಂಸ್ಥೆ ಸ್ಥಾಪಿಸಿತು. ಇಲ್ಲಿ ನವೆಂಬರ್ 12ರಿಂದ ಫೆ.21ರ ತನಕ ವಿವಿಧ ವಿಭಾಗಗಳಲ್ಲಿ ಪ್ರದರ್ಶನಗಳು ನಡೆಯುತ್ತವೆ. ಯಾವುದೇ ವ್ಯಕ್ತಿಯೂ ಈ ವೇದಿಕೆ ಏರಿ ತಮ್ಮ ಸಾಧನೆ ಪ್ರದರ್ಶಿಸಿ ಹಿಂದಿನ ವಿಶ್ವದಾಖಲೆ ಮುರಿದು ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯಬಹುದು ಎಂದು ಗ್ಲೋಬಲ್ ವಿಲೇಜಿನ ಯೋಜನಾ ನಿರ್ದೇಶಕ ಅಬ್ದುಲ್ ರೆಧಾ ಆಲಿ ಬಿನ್ ರೆಧಾ ಪ್ರಕಟಿಸಿದರು. ಗಿನ್ನೆಸ್ ವಿಶ್ವದಾಖಲೆಯ ವ್ಯವಸ್ಥಾಪಕ ನಿರ್ದೇಶಕ ಆಲಿಸ್ಟೈರ್ ರಿಚರ್ಡ್ಸ್ ಈ ವೇದಿಕೆಯನ್ನು ಜಗತ್ತಿಗೆ ಪರಿಚಯಿಸಿದರು.

2008: ಅಪೂರ್ವ ತಳಿಯ ಮಿಡತೆಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಒಳಗಾದ ಚೆಕ್ ಗಣರಾಜ್ಯದ ಕೀಟಶಾಸ್ತ್ರಜ್ಞ ಎಮಿಲ್ ಕ್ಯುಸೇರ ಭಾರತದಿಂದ ತಪ್ಪಿಸಿಕೊಂಡು ತನ್ನ ದೇಶ ಸೇರಿದ ಪ್ರಕರಣ ಬೆಳಕಿಗೆ ಬಂತು. ಕೃತ್ಯ ನಡೆಸಿದ ಬಳಿಕ ನ್ಯಾಯಾಲಯದಿಂದ ಜಾಮೀನು ಶರ್ತಗಳನ್ನು ಉಲ್ಲಂಘಿಸಿ ಎಮಿಲ್ ಚೆಕ್ ಗಣರಾಜ್ಯವನ್ನು ಸೇರಿದರು.. ಭಾರತದಲ್ಲಿರುವ ಆ ದೇಶದ ರಾಯಭಾರಿ ಹೀನೆಕ್ ಮೊನಿಸೆಕ್ ತಿಳಿಸಿರುವಂತೆ, ಗೆಳೆಯನಾದ ಇನ್ನೋರ್ವ ಕೀಟ ಶಾಸ್ತ್ರಜ್ಞ ಅನಾರೋಗ್ಯದಿಂದ ಬಳಲುತ್ತಿದ್ದರೂ ಬೇರೆ ದಾರಿ ಇಲ್ಲದೆ ಎಮಿಲ್ ದೇಶದಿಂದ ಪಲಾಯನ ಮಾಡಿದ ಎನ್ನಲಾಯಿತು. ಆದರೆ ಇದಕ್ಕೆ ಚೆಕ್ ಸರ್ಕಾರ ಹೊಣೆಯಲ್ಲ, ಕಾನೂನು ಕ್ರಮಕ್ಕೆ ಎಲ್ಲಾ ಸಹಕಾರ ನೀಡುವುದು ಎಂದು ಮೊನಿಸೆಕ್ ಹೇಳಿದರು. ಕಳೆದ ಜೂನ್ 22ರಂದು ಎಮಿಲ್ ಮತ್ತು ಸಂಗಡಿಗ ಸ್ವಾಚಾ ಅವರನ್ನು ಅಪೂರ್ವ ಜಾತಿಯ ಮಿಡತೆಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದನ್ವಯ ಸಿಂಗಾಲಿಯಾ ರಾಷ್ಟ್ರೀಯ ಉದ್ಯಾನದಲ್ಲಿ ಬಂಧಿಸಲಾಗಿತ್ತು. ನಂತರ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 60 ಸಾವಿರ ರೂ. ದಂಡ ವಿಧಿಸಲಾಗಿತ್ತು.

2008: ದಾವಣಗೆರೆ ನಗರದ ಎಸ್ ಎಸ್ ಆಸ್ಪತ್ರೆಯಲ್ಲಿ ಹಿಂದಿನ ದಿನ ರಾತ್ರಿ ನಿಧನರಾದ ಜಾನಪದ ತಜ್ಞ ಮುದೇನೂರು ಸಂಗಣ್ಣ ಅವರ ದೇಹವನ್ನು ಪೂರ್ವನಿರ್ಧರಿತ ಇಚ್ಛೆಯಂತೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ದಾನ ನೀಡಲಾಯಿತು.

2008: ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ ಬಾಲ್ ಕ್ಲಬ್ಬಿನ ಕ್ರಿಸ್ಟಿಯಾನೊ ರೊನಾಲ್ಡೊ ಅವರು `ಎಫ್ ಐ ಎಫ್ ಪ್ರೋ ವರ್ಷದ ವೃತ್ತಿಪರ ಆಟಗಾರ' ಪ್ರಶಸ್ತಿಗೆ ಆಯ್ಕೆಯಾದರು. ವಿಶ್ವದ ನಲ್ವತ್ತು ರಾಷ್ಟ್ರಗಳ ವೃತ್ತಿಪರ ಫುಟ್ ಬಾಲ್ ಆಟಗಾರರ ಮತದಾನದ ಆಧಾರದಲ್ಲಿ ರೊನಾಲ್ಡೊ ಅವರನ್ನು ಈ ಮಹತ್ವದ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಕಳೆದ ಫುಟ್ ಬಾಲ್ ಋತುವಿನಲ್ಲಿನ ಪ್ರದರ್ಶನವನ್ನು ಪರಿಗಣಿಸಿ ಅವರ ಹೆಸರನ್ನು ಪ್ರಶಸ್ತಿಯ ಸ್ಪರ್ಧೆಯಲ್ಲಿರುವ ಆಟಗಾರರ ಪಟ್ಟಿಗೆ ಸೇರಿಸಲಾಗಿತ್ತು.

2007: ಕರ್ನಾಟಕದ ಕೈಗಾ ಅಣುವಿದ್ಯುತ್ ಸ್ಥಾವರದ ಎರಡನೇ ಘಟಕವು ಸತತ 436 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವದಾಖಲೆಗೆ ಅರ್ಹವಾಯಿತು. 2006ರ ಆಗಸ್ಟ್ 19ರಂದು ಆರಂಭವಾದ ಕೈಗಾದ ಎರಡನೇ ಘಟಕ ಒಂದೇ ಒಂದು ದಿನವೂ ಸಹ ವಿದ್ಯುತ್ ಉತ್ಪಾದನೆ ನಿಲ್ಲಿಸದೆಯೇ ಕಾರ್ಯ ನಿರ್ವಹಿಸುವ ಮೂಲಕ ಅಮೆರಿಕಾದ ಅಣುವಿದ್ಯುತ್ ಘಟಕ ಸ್ಥಾಪಿಸಿದ್ದ ಸತತ 406 ದಿನಗಳ ವಿದ್ಯುತ್ ಉತ್ಪಾದನೆಯ ದಾಖಲೆಯನ್ನು ಮುರಿಯಿತು. ದೇಶದಲ್ಲಿರುವ ಒಟ್ಟು 18 ಅಣುವಿದ್ಯುತ್ ಘಟಕಗಳಲ್ಲಿ ಈ ಘಟಕ ಮಾತ್ರ ಈ ಸಾಧನೆಗೆ ಅರ್ಹವಾಗಿದ್ದು, ವಿಶ್ವದಲ್ಲಿಯೇ ಈ ಸಾಧನೆ ಮಾಡಿದ ಮೊದಲ ಘಟಕ ಎಂಬ ಹೆಗ್ಗಳಿಕೆಯನ್ನೂ ಪಡೆಯಿತು.

2007: ವಿಶೇಷ ಆರ್ಥಿಕ ವಲಯಕ್ಕಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ನಂದಿಗ್ರಾಮದಲ್ಲಿ ನಡೆದ ಸಂಗ್ರಾಮ ಮತ್ತೊಮ್ಮೆ ಉಗ್ರ ಸ್ವರೂಪ ಪಡೆಯಿತು. ಈದಿನ ಇಲ್ಲಿ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಸಿಪಿಎಂನ ನಾಲ್ವರು ಕಾರ್ಯಕರ್ತರು ಮೃತರಾಗಿ, ಐವರು ಗಾಯಗೊಂಡರು. ನಂದಿಗ್ರಾಮಕ್ಕೆ ಸಮೀಪದ ಖೆಜೂರಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್ಖನ್ ಚಕ್ ಎಂಬಲ್ಲಿ ಈ ದುರಂತ ಸಂಭವಿಸಿತು. ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ರೈತರ ತೀವ್ರ ವಿರೋಧದ ಮಧ್ಯೆ ವಿಶೇಷ ವಿತ್ತ ವಲಯಕ್ಕಾಗಿ ಬಲವಂತದಿಂದ ಭೂಮಿ ಸ್ವಾಧೀನ ಪಡೆಯಲು ಸರ್ಕಾರ ಮುಂದಾದುದರ ವಿರುದ್ಧ ಹೋರಾಟದ ನೇತೃತ್ವ ವಹಿಸಿದ ಭೂಮಿ ಉಚೇಡ್ ಪ್ರತಿರೋಧ ಕಮಿಟಿ (ಬಿಯುಪಿಸಿ)ಯು ಹಿಂದಿನ ದಿನ ನಡೆದ ಘರ್ಷಣೆಯನ್ನು ಖಂಡಿಸಿ ನೀಡಿದ್ದ 12 ಗಂಟೆಗಳ ಬಂದ್ ಸಂದರ್ಭದಲ್ಲಿ ಈ ಘಟನೆ ನಡೆಯಿತು.

2007: ಭಾರತದ ಮೊದಲ 500 ಮೆಗಾ ವಾಟ್ ಸಾಮರ್ಥ್ಯದ ಅಣು ಸ್ಥಾವರದ (ಫಾಸ್ಟ್ ಬ್ರೀಡರ್ ರಿಯಾಕ್ಟರ್) ನಿರ್ಮಾಣ ನಿರ್ಣಾಯಕ ಹಂತ ತಲುಪಿದ್ದು, ಸುಮಾರು 165 ಟನ್ ಭಾರದ ಸುರಕ್ಷಾ ಕವಾಟವನ್ನು ಅಳವಡಿಸಲು ಸಿದ್ಧತೆಗಳು ನಡೆದವು. ಸುಮಾರು ರೂ.3,492 ಕೋಟಿ ವೆಚ್ಚದಲ್ಲಿ ತಮಿಳುನಾಡಿನ ಕಲ್ಪಾಕಮ್ಮಿನಲ್ಲಿ ನಿರ್ಮಿಸಲಾಗುತ್ತಿರುವ ಈ ಪ್ರಾಯೋಗಿಕ ಅಣು ವಿದ್ಯುತ್ ಸ್ಥಾವರ ಹಲವಾರು ದಾಖಲೆಗಳನ್ನು ಹೊಂದಿದೆ. ಈಗ ಇದಕ್ಕೆ ಅಳವಡಿಸಲಾದ ಸುರಕ್ಷಾ ಕವಾಟ ಕೂಡ ಇದೇ ಮೊದಲನೆಯದು ಎನ್ನಲಾಗಿದೆ. ಅಣು ಸ್ಥಾವರ 2010ರ ವೇಳೆಗೆ ವಿದ್ಯುತ್ ಉತ್ಪಾದನೆ ಪ್ರಾರಂಭಿಸಲಿದ್ದು, 2020ರ ವೇಳೆಗೆ ಇಂತಹ ಇನ್ನೂ ನಾಲ್ಕು ಸ್ಥಾವರಗಳು ಕಾರ್ಯಾರಂಭ ಮಾಡುವುವು.

2007: ಆಫ್ಘಾನಿಸ್ಥಾನದಲ್ಲಿ ಉಗ್ರಗಾಮಿಗಳ ಹಠಾತ್ ದಾಳಿಗೆ ಪ್ರತಿಯಾಗಿ ಅಮೆರಿಕ ನೇತೃತ್ವದ ಸೇನೆ ಮತ್ತು ಆಫ್ಘನ್ ಸೇನೆ ಜಂಟಿಯಾಗಿ ಆರು ಗಂಟೆಗಳ ಕಾಲ ಹೋರಾಟ ನಡೆಸಿ, ಸುಮಾರು 80 ಮಂದಿ ತಾಲಿಬಾನ್ ಉಗ್ರರನ್ನು ಕೊಂದವು ಎಂದು ಅಮೆರಿಕ ಸೇನೆ ಪ್ರಕಟಿಸಿತು. ಹೆಲ್ಮಾಂಡ್ ಪ್ರಾಂತ್ಯದ ಸೇನಾ ಶಿಬಿರದ ಮೇಲೆ ತಾಲಿಬಾನ್ ಉಗ್ರರು ಸ್ವಯಂಚಾಲಿತ ಕೋವಿ ಮತ್ತು ರಾಕೆಟ್ ಇರುವ ಗ್ರೆನೇಡುಗಳಿಂದ ದಾಳಿ ನಡೆಸಿದರು. ತತ್ ಕ್ಷಣ ಇದಕ್ಕೆ ಪ್ರತಿಯಾಗಿ ಸೇನೆ ದಾಳಿ ನಡೆಸಿತು. ಸೆಪ್ಟೆಂಬರ್ 1ರಿಂದ ಇಲ್ಲಿ ನಡೆದ ದಾಳಿಗಳಲ್ಲಿ ಸುಮಾರು 250 ತಾಲಿಬಾನ್ ಉಗ್ರರನ್ನು ಕೊಲ್ಲಲಾಯಿತು.

2007: ಕರ್ನಾಟಕದಲ್ಲಿ ಮರುಮೈತ್ರಿಗೆ ಮುಂದಾದ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಮತ್ತೊಮ್ಮೆ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತ್ವತ್ವದಲ್ಲಿ ಕಾಂಗ್ರೆಸ್ ನಾಯಕರ ದಂಡೊಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಆಗ್ರಹಿಸಿತು. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಚ್. ಕೆ. ಪಾಟೀಲ್ ಜೊತೆಗಿದ್ದರು.

2007: ಸಿಟ್ಟಿನ ಭರದಲ್ಲಿ ಹೆಂಡತಿಗೆ ಗಂಡ ಮೂರು ಬಾರಿ ತಲಾಖ್ ಹೇಳಿದರೆ ಅಥವಾ ನಿಗದಿತ ಅವಧಿಯೊಳಗೆ ಆಕೆಗೆ ಅದನ್ನು ತಿಳಿಸದೇ ಹೋದರೆ ಅಂಥ `ತಲಾಖ್' ಗೆ ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ತೀವ್ರ ಕೋಪದಿಂದ ಸ್ವಯಂ ನಿಯಂತ್ರಣ ಕಳೆದುಕೊಂಡ ಪತಿ, `ತಲಾಖ್, ತಲಾಖ್, ತಲಾಖ್' ಎಂದು ಹೇಳಿದರೆ ಅದನ್ನು ಒಪ್ಪಲಾಗದು. ಅಷ್ಟೇ ಅಲ್ಲದೆ ಪತ್ನಿಯ ಅನುಪಸ್ಥಿತಿಯಲ್ಲಿ ಕೊಟ್ಟ ತಲಾಖ್ ಪತ್ನಿಗೆ ತಿಳಿಸದ್ದಿದರೆ ಅದು ಸಹ ಕ್ರಮಬದ್ಧವಾಗದು ಎಂದು ನ್ಯಾಯಮೂರ್ತಿ ಬಿ.ಡಿ.ಅಹ್ಮದ್ ಹೇಳಿದರು. ಆಯೇಷಾ ಅಂಜುಂ ಅವರು ತಮ್ಮಿಂದ ದೂರವಾದ ಪತಿ ಮಸೂರ್ ಅಹ್ಮದ್ ವಿರುದ್ಧ ಮಾಡಿರುವ ಅತ್ಯಾಚಾರದ ಆರೋಪವನ್ನೂ ತಿರಸ್ಕರಿಸಿದ ನ್ಯಾಯಾಲಯ, 2005ರ ಅಕ್ಟೋಬರಿನಲ್ಲಿ ಸಾರಲಾದ ತಲಾಖ್ ಕ್ರಮಬದ್ಧವಲ್ಲ, ಆದ್ದರಿಂದ ಅತ್ಯಾಚಾರದ ಆರೋಪ ಮಾಡಿದ ಸಂದರ್ಭದಲ್ಲಿಯೂ ೂ ಅವರು ಪತಿ-ಪತ್ನಿಯಾಗಿಯೇ ಇದ್ದರು ಎಂದು ಹೇಳಿತು. ತಲಾಖ್ ಕ್ರಮಬದ್ಧವಲ್ಲದ ಕಾರಣ ಕಾನೂನುಬದ್ಧವಾಗಿ ಮದುವೆಯಾದ ಪತ್ನಿಯೊಂದಿಗೆ ಪತಿ ಹೊಂದುವ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು. 'ಅಕ್ಟೋಬರ್ 2005 ರಂದು ನನಗೆ ತಲಾಖ್ ನೀಡಿದ್ದರೂ ಮಸೂರ್ ಅಹ್ಮದ್ 2006ರ ಏಪ್ರಿಲ್ 13 ರಿಂದ 19ರವರೆಗೆ ತವರು ಮನೆಯಲ್ಲಿದ್ದ ನನ್ನ ಮೇಲೆ ಅತ್ಯಾಚಾರವೆಸಗಿದ' ಎಂಬುದು ಆಯೆಷಾ ಅಂಜುಂ ನೀಡಿದ ದೂರಿನ ಸಾರಾಂಶವಾಗಿತ್ತು.

2006: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಹಸನ್ ತೀವ್ರ ಅನಾರೋಗ್ಯಕ್ಕೆ ಈಡಾಗಿ ಅಧಿಕಾರ ಸ್ವೀಕರಿಸಲು ಅಶಕ್ತರಾಗಿದ್ದಾರೆ ಎಂಬ ಕಾರಣ ನೀಡಿ ರಾಷ್ಟ್ರಪತಿ ಇಯಾಜ್ದುದೀನ್ ಅಹ್ಮದ್ ಅವರು ಹಂಗಾಮಿ ಮುಖ್ಯಸ್ಥರ ಪ್ರಮಾಣವಚನ ಸಮಾರಂಭವನ್ನು ಮುಂದೂಡಿದರು.

2006: ಭಾರತದಲ್ಲಿ ಹೊಸದಾಗಿ ಜಾರಿಯಾಗಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ತಿರುನಲ್ವೇಲಿ ಸಮೀಪದ ಮೆಲಪಾಳ್ಯಂನಲ್ಲಿ ಸರ್ಕಾರಿ ನೌಕರ ಜೋಸೆಫ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದರು. ಈ ಕಾಯ್ದೆಯ ಅಡಿಯಲ್ಲಿ ಬಂಧಿತನಾದ ಮೊತ್ತ ಮೊದಲ ವ್ಯಕ್ತಿ ಈತ. ಅಕ್ಟೋಬರ್ 25ರಂದು ತನ್ನ ಪತ್ನಿ ಬೆನೆಡಿಕ್ಟ್ ಮೇರಿಯನ್ನು ಈತ ಛತ್ರಿಯ ಮೊನೆಯಿಂದ ತಿವಿದು ಹಿಂಸಿಸಿದ್ದ. ಕತ್ತು ಹಾಗೂ ಮೂಗಿಗೆ ಗಾಯಗಳಾಗಿ ರಕ್ತ ಸೋರುತ್ತ್ದಿದ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2005: ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ಕರ್ನಾಟಕದ ಖ್ಯಾತ ಗಾಯಕಿ ಗಂಗೂಬಾಯಿ ಹಾನಗಲ್ ಅವರು 2005ನೇ ಸಾಲಿನ ಆದಿತ್ಯ ವಿಕ್ರಮ್ ಬಿರ್ಲಾ ಕಲಾ ಪುರಸ್ಕಾರಕ್ಕೆ ಆಯ್ಕೆಯಾದರು. ಈ ಪ್ರಶಸ್ತಿಯ ಮೊತ್ತ 1.50 ಲಕ್ಷ ರೂಪಾಯಿಗಳು.

1997: ಮೈಸೂರು ಸಂಪ್ರದಾಯದ ಸಂಗೀತ ಸುಧೆಯನ್ನು ಹರಡಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ವೈಣಿಕ ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್ (77) ಬೆಂಗಳೂರಿನಲ್ಲಿ ನಿಧನರಾದರು.

1965: ಅಮೆರಿಕದ ಮಿಸ್ಸೌರಿಯ ಸೈಂಟ್ ಲೂಯಿಯಲ್ಲಿ ಜಗತ್ತಿನ ಅತ್ಯಂತ ಎತ್ತರದ ಸ್ಮಾರಕ ಸ್ಟೆಯಿನ್ ಲೆಸ್ ಸ್ಟೀಲಿನ `ಗೇಟ್ ವೇ ಟು ದಿ ವೆಸ್ಟ್' (ಜೆಫರ್ಸನ್ ನ್ಯಾಷನಲ್ ಎಕ್ಸ್ ಪಾನ್ಶನ್ ಮೆಮೋರಿಯಲ್) ನಿರ್ಮಾಣ ಕಾರ್ಯ ಪೂರ್ಣಗೊಂಡಿತು. 1803ರಲ್ಲಿ ಲೂಸಿಯಾನಾ ಖರೀದಿಯ ಬಳಿಕ ಪಶ್ಚಿಮದೆಡೆಗಿನ ವಿಸ್ತರಣೆಯ ನೆನಪಿಗಾಗಿ ಇದನ್ನು ನಿರ್ಮಿಸಲಾಯಿತು. ಫಿನ್ನಿಶ್- ಅಮೆರಿಕನ್ ಶಿಲ್ಪಿ ಎರೋ ಸಾರಿನೆನ್ ಅವರ ವಿನ್ಯಾಸ ಮಾಡಿದ ಈ ಸ್ಮಾರಕ 630 ಅಡಿಗಳಷ್ಟು ವಿಸ್ತಾರ ಹಾಗೂ ಅಷ್ಟೇ ಎತ್ತರವಾಗಿದೆ.

1955: ಅಮೆರಿಕದ ಕಂಪ್ಯೂಟರ್ ತಜ್ಞ, ಉದ್ಯಮಿ ಮೂರನೆಯ ವಿಲಿಯಂ ಹೆನ್ರಿ `ಬಿಲ್' ಗೇಟ್ಸ್ ಜನ್ಮದಿನ. ಜಗತ್ತಿನ ಪ್ರಪ್ರಥಮ ಪರ್ಸನಲ್ ಕಂಪ್ಯೂಟರ್ ಸಾಫ್ಟ್ ವೇರ್ ಕಂಪೆನಿ `ಮೈಕ್ರೋಸಾಫ್ಟ'ನ್ನು ಸ್ಥಾಪಿಸಿದ ಇವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

1935: ಕನ್ನಡ ಸಾಹಿತಿ ಬೆಂಗಳೂರು ಜಿಲ್ಲೆ ದೇವನಹಳ್ಳಿಯ ಕಮಲಾ ಹಂಪನಾ ಹುಟ್ಟಿದ ದಿನ. `ಅತ್ತಿಮಬ್ಬೆ' ಪ್ರಶಸ್ತಿ ವಿಜೇತರಾದ ವಿವರು `ನಕ್ಕಿತು ಹಾಲಿನ ಬಟ್ಟಲು', `ಬಿಂದಲಿ', `ಬುಗುಡಿ' ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

1933: ಸಾಹಿತಿ ಕೆ. ಶಾಂತಾ ಜನನ.

1926: ಸಾಹಿತಿ ವೈ.ಎಂ.ಎನ್. ಮೂರ್ತಿ ಜನನ.

1898: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಊಧಮ್ ಸಿಂಗ್ (1898-1940) ಜನ್ಮದಿನ. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಮೈಕೆಲ್ ಒ' ಡೈಯರನನ್ನು ಕೊಲೆಗೈದುದಕ್ಕಾಗಿ 1940ರಲ್ಲಿ ಊಧಮ್ಸಿಂಗ್ ಅವರನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು.

1886: ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವ ಸಂದರ್ಭದಲ್ಲಿ ಫ್ರಾನ್ಸ್ ನೀಡಿದ ಕೊಡುಗೆಯಾದ `ಸ್ಟಾಚ್ಯೂ ಆಫ್ ಲಿಬರ್ಟಿಯನ್ನು ಅಧ್ಯಕ್ಷ ಗ್ರೋವರ್ ಕ್ಲೆವ್ ಲ್ಯಾಂಡ್ ಅನಾವರಣ ಮಾಡಿದರು.

1881: ಕನ್ನಡ ಸಾಹಿತಿ ಧಾರವಾಡದ ಉತ್ತಂಗಿ ಚನ್ನಪ್ಪ (28/10/1881-8/5/1971) ಜನ್ಮದಿನ. `ಹಿಂದೂ ಸಮಾಜದ ಹಿತಚಿಂತಕ', `ಮಕ್ಕಳ ಶಿಕ್ಷಣಪಟ' ಇತ್ಯಾದಿ ಕೃತಿಗಳನ್ನು ರಚಿಸಿದ ಇವರು 1949ರಲ್ಲಿ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1867: ಸ್ವಾಮಿ ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ (1867-1911) ಜನ್ಮದಿನ. ಇಂಗ್ಲೆಂಡಿನಲ್ಲಿ ಹುಟ್ಟಿದ ಮಾರ್ಗರೆಟ್ ಎಲಿಜಬೆತ್ ನೊಬಲ್ ಅವರು ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿ ಅವರ ಶಿಷ್ಯೆಯಾಗಿ ಸಿಸ್ಟರ್ ನಿವೇದಿತಾ ಎಂಬುದಾಗಿ ಹೆಸರು ಇಟ್ಟುಕೊಂಡದ್ದಷ್ಟೇ ಅಲ್ಲ, ತಮ್ಮ ಸಾಮಾಜಿಕ, ರಾಜಕೀಯ ಸುಧಾರಣಾ ಕಾರ್ಯಗಳಿಗೆ ಭಾರತವನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು

1636: ಮೆಸಾಚ್ಯುಸೆಟ್ಸಿನ ಕೇಂಬ್ರಿಜಿನಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇಂಗ್ಲಿಷ್ ಸಂಜಾತ ಪ್ಯುರಿಟನ್ ಸಚಿವ ಜಾನ್ ಹಾರ್ವರ್ಡ್ ಅವರ ಗೌರವಾರ್ಥ ಅದಕ್ಕೆ ಹಾರ್ವರ್ಡ್ ವಿಶ್ವ ವಿದ್ಯಾಲಯ ಎಂಬ ಹೆಸರು ಇಡಲಾಯಿತು.

ಇಂದಿನ ಇತಿಹಾಸ History Today ಅಕ್ಟೋಬರ್ 27

ಇಂದಿನ ಇತಿಹಾಸ

ಅಕ್ಟೋಬರ್ 27

ಚಂಡೀಗಢವನ್ನು ಪಂಜಾಬ್ ರಾಜ್ಯಕ್ಕೆ ಸೇರಿಸುವಂತೆ ಒತ್ತಾಯಿಸಿ ಆಮರಣ ನಿರಶನ ನಡೆಸಿದ ಸಿಖ್ ಧುರೀಣ ದರ್ಶನ್ ಸಿಂಗ್ ಫೆರುಮಾನ್ ಅವರು ತಮ್ಮ ನಿರಶನದ 74ನೇ ದಿನವಾದ ಈದಿನ ಮೃತರಾದರು.

2008: ಬಾಂಗ್ಲಾದೇಶದ ನೈಋತ್ಯ ದಿಕ್ಕಿನ ಕಡಲ ತೀರದಲ್ಲಿ ಈದಿನ (27ಅಕ್ಟೋಬರ್ 2008) ಬೆಳಗಿನ ಜಾವ ಬೀಸಿದ ಚಂಡ ಮಾರುತದಿಂದ ಉಂಟಾದ ಅವಘಡಗಳಲ್ಲಿ 10 ಮಂದಿ ಸಾವಿಗೀಡಾಗಿ ಹಲವಾರು ಮಂದಿ ನಾಪತ್ತೆಯಾದರು. ಈ ಚಂಡ ಮಾರುತದಲ್ಲಿ ಸತ್ತವರು ಬಹುತೇಕ ಮನೆಗಳು ಕುಸಿದು ಅವಶೇಷಗಳ ಅಡಿ ಸಿಲುಕಿ ಸತ್ತರು. ಈ ಬಾರಿಯ ಚಂಡಮಾರುತವನ್ನು 'ರಶ್ಮಿ' ಎಂದು ಹೆಸರಿಸಲಾಯಿತು. ಕಳೆದ ಬಾರಿ ಇದೇ ಸಮಯಕ್ಕೆ ಕರಾವಳಿಯಲ್ಲಿ ಬೀಸಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಮಾಡಿದ್ದ ಚಂಡಮಾರುತಕ್ಕೆ 'ಸಿದ್ರ' ಎಂದು ಹೆಸರಿಸಲಾಗಿತ್ತು.

2007: ಅತ್ಯಂತ ನಾಟಕೀಯ ಬೆಳವಣಿಗೆಯಲ್ಲಿ ಮತ್ತೆ ಕೈಜೋಡಿಸಿದ ಬಿಜೆಪಿ ಮತ್ತು ಜನತಾದಳ (ಎಸ್) ಜಂಟಿಯಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಅವಕಾಶ ಕೋರುವ ಪತ್ರಗಳನ್ನು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಸಲ್ಲಿಸಿದವು. ಸಂವಿಧಾನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಇದಕ್ಕೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿದರು. ಇದರಿಂದಾಗಿ ಕಾಂಗ್ರೆಸ್ ಜೊತೆಗೆ ಸಖ್ಯ ಬೆಳೆಸುವ ಯತ್ನದಲ್ಲಿ ಜನತಾದಳದಲ್ಲಿ ಪರ್ಯಾಯ ನಾಯಕರಾಗಲು ಹೊರಟಿದ್ದ ಎಂ.ಪಿ.ಪ್ರಕಾಶ್ ಅವರ ಆಸೆಗೆ ಆರಂಭದಲ್ಲೇ ವಿಘ್ನ ಉಂಟಾಯಿತು.

2007: ಮಾಜಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಹೆಸರನ್ನು 'ಬಿ.ಎಸ್. ಯಡ್ಯೂರಪ್ಪ' ಎಂಬುದಾಗಿ ಬದಲಾಯಿಸಿಕೊಂಡರು. ಅಕ್ಟೋಬರ್ 11ರಂದೇ ಪ್ರಮಾಣಪತ್ರ ಸಲ್ಲಿಸಿ ಈ ಬದಲಾವಣೆ ಮಾಡಲಾಗಿದೆ ಎಂದು ಅವರ ಪತ್ರಿಕಾ ಪ್ರಕಟಣೆ ತಿಳಿಸಿತು. ಕೆಲವೇ ದಿನಗಳಲ್ಲಿ ಇನ್ನೊಂದು ಪ್ರಕಟಣೆ ನೀಡಿದ ಅವರು ಇಂಗ್ಲಿಷಿನಲ್ಲಿ ಮಾತ್ರ 'ಯಡಿಯೂರಪ್ಪ' ಬದಲಿಗೆ 'ಯಡ್ಯೂರಪ್ಪ' ಎಂದು ಬದಲಿಸಲಾಗಿದ್ದು, ಕನ್ನಡದಲ್ಲಿ ಉಚ್ಚಾರಣೆ ಹಿಂದಿನಂತೆಯೇ ಇರುತ್ತದೆ ಎಂದು ಸ್ಷಷ್ಟ ಪಡಿಸಿದರು.

2007: ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ, ಸಂಸದ ಬಾಬುಲಾಲ್ ಮರಾಂಡಿ ಅವರ ಪುತ್ರ ಪುತ್ರ ಅನೂಪ್ ಸೇರಿದಂತೆ 18 ಜನರನ್ನು ಬಿಹಾರ ಗಡಿಗೆ ಹೊಂದಿಕೊಂಡಿರುವ ಗಿರಿದಿಹ್ ಜಿಲ್ಲೆಯ ಚಿಲ್ಖಾಡಿಯಾ ಗ್ರಾಮದಲ್ಲಿ ಮಾವೋವಾದಿ ಉಗ್ರರು ಹತ್ಯೆ ಮಾಡಿದರು. ರಾತ್ರಿ 1 ಗಂಟೆಗೆ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ದಾಳಿ ನಡೆಸಿದ 25ರಿಂದ 30 ಜನ ಮಾವೋವಾದಿ ಉಗ್ರರು ಗುಂಡಿನ ಮಳೆಗರೆಯುವುದರೊಂದಿಗೆ ಬಾಂಬ್ಗಳನ್ನು ಸಿಡಿಸಿದರು. ಘಟನಾ ಸ್ಥಳದಲ್ಲಿ 14 ಜನರು ಸಾವಿಗೀಡಾದರು. ನಂತರ ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಮೃತರಾದರು.

2007: ಉತ್ತರ ಚೀನಾದ ಕೆಲವು ಭಾಗಗಳಲ್ಲಿ ನಶಿಸಿವೆ ಎಂದು ನಂಬಲಾಗಿದ್ದ ಅಪಾಯಕಾರಿ ಹುಲಿಗಳು ಇನ್ನೂ ಅಸ್ತಿತ್ವದಲ್ಲಿ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಹುಲಿ ಬೇಟೆಯನ್ನು ನಿಷೇಧಿಸಲಾಯಿತು. ಈ ಪ್ರದೇಶದಲ್ಲಿ ಕಂಡು ಬಂದ ಹುಲಿಗಳು ನಶಿಸಿಹೋಗುತ್ತಿರುವ ಪ್ರಾಣಿ ಸಂಕುಲಕ್ಕೆ ಸೇರಿವೆ ಎಂದು ತಜ್ಞರು ದೃಢಪಡಿಸಿದ್ದಾರೆ. ಈ ಪ್ರಾಂತ್ಯದಲ್ಲಿ 1950ರಲ್ಲಿ ಇಂತಹ 4000 ಹುಲಿಗಳು ಇದ್ದವು.

2007: 'ಕರ್ನಾಟಕ ರಾಜ್ಯದಲ್ಲಿ ಗೋ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ದುಂಡು ಮೇಜಿನ ಸಭೆಯೊಂದನ್ನು ನಡೆಸುವ ಮೂಲಕ, ಗೋ ಸಂರಕ್ಷಣೆ ಕುರಿತ ಕೆಲ ನಿರ್ಣಯಗಳನ್ನು ಕೈಗೊಳ್ಳುವ ಅಗತ್ಯವಿದೆ' ಎಂದು ಸಂಸತ್ ಸದಸ್ಯ ಅನಂತಕುಮಾರ್ ಬೆಂಗಳೂರಿನಲ್ಲಿ ಅಭಿಪ್ರಾಯ ಪಟ್ಟರು. ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಗಿರಿನಗರದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ವ ಸಾರುವ `ಗೋಸಂಧ್ಯಾ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗೋ ಸಂಪತ್ತಿನಿಂದ ಪರಿಸರಕ್ಕೆ ಆಗುವ ಅನುಕೂಲ, ಗ್ರಾಮೀಣ ಪ್ರದೇಶದ ಆರ್ಥಿಕತೆ ಹಾಗೂ ಗೋ ಸಂಪತ್ತಿಗೆ ಇರುವ ಸಂಬಂಧವನ್ನು ಗಮನದಲ್ಲಿ ಇಟ್ಟುಕೊಂಡು ಸಭೆಯಲ್ಲಿ ಚರ್ಚೆ ನಡೆಯಬೇಕು. ಆ ಮೂಲಕ ರಾಷ್ಟ್ರೀಯ ಗೋ ನೀತಿ ಜಾರಿಗೆ ತರುವ ಅವಶ್ಯಕತೆ ಇದೆ' ಎಂದು ಅವರು ಪ್ರತಿಪಾದಿಸಿದರು. ರಾಜ್ಯದಲ್ಲಿ 300ರಷ್ಟಿದ್ದ ಕಸಾಯಿಖಾನೆಗಳು ಇದೀಗ 36 ಸಾವಿರಕ್ಕೆ ಏರಿದೆ. ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅಲ್ಲದೆ ಮನೆಗೊಂದು ಮರದಂತೆ ಮನೆಗೊಂದು ದೇಶಿ ತಳಿಯ ಗೋವು ಸಾಕುವ ಸಂಕಲ್ಪವನ್ನು ಎ್ಲಲರೂ ತೊಡಬೇಕು' ಎಂದು ಅವರು ಆಗ್ರಹಿಸಿದರು. ಹಿರಿಯ ರಂಗ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಮಾತನಾಡಿ, ನವಿಲನ್ನು ಕೊಂದವರಿಗೆ ಶಿಕ್ಷೆ ನೀಡುವ ಕಾನೂನು ನಮ್ಮ ದೇಶದಲ್ಲಿದೆ. ಆದರೆ ಗೋವನ್ನು ಕೊಂದು ತಿನ್ನುವವರಿಗೆ ಯಾವ ಶಿಕ್ಷೆಯಿಲ್ಲ. ಗೋವನ್ನು ತಿನ್ನುವುದು ನಮ್ಮ ಸಂಸ್ಕೃತಿಯೇ?' ಎಂದು ಪ್ರಶ್ನಿಸಿದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಶ್ವಭಾರತಿ ಗೃಹನಿರ್ಮಾಣ ಸಂಘದ ಅಧ್ಯಕ್ಷ ಬಿ.ಕೃಷ್ಣ ಭಟ್, ಬಿಜೆಪಿ ನಗರ ಉಪಾಧ್ಯಕ್ಷ ರವಿ ಸುಬ್ರಹ್ಮಣ್ಯ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಹಾಜರಿದ್ದರು.

2006: ರಜಪೂತ ವಂಶಜ ಮಹಾರಾಜ ಎರಡನೆಯ ಗಜಸಿಂಗ್ ಅವರಿಗೆ ನ್ಯೂಯಾರ್ಕಿನಲ್ಲಿ ಈ ಸಾಲಿನ ಅಮೆರಿಕದ ಪ್ರತಿಷ್ಠಿತ ಹಾಡ್ರಿಯನ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಪ್ರಾಚೀನ ವಾಸ್ತುಶಿಲ್ಪ ಸಂರಕ್ಷಣೆಗೆ ವಹಿಸಿರುವ ಆಸ್ಥೆಯನ್ನು ಪರಿಗಣಿಸಿ ಅವರಿಗೆ ಈ ಪುರಸ್ಕಾರ ನೀಡಲಾಯಿತು. ಅಮೆರಿಕದಲ್ಲಿರುವ ಭಾರತದ ರಾಯಭಾರಿ ರೊನೆನ್ ಸೇನ್ ಅವರು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಿ ಮಹಾರಾಜ ಗಜಸಿಂಗ್ ಅವರನ್ನು ಸನ್ಮಾನಿಸಿದರು. ಶತಮಾನಗಳಷ್ಟು ಹಳೆಯದಾದ ವಾಸ್ತುಶಿಲ್ಪ ಹಾಗೂ ಅವುಗಳ ಸಂರಕ್ಷಣೆಗೆ ನೀಡುವ ಮಹತ್ತರ ನೆರವು ಆಧರಿಸಿ ಅಮೆರಿಕದ `ವಿಶ್ವ ಸ್ಮಾರಕ ನಿಧಿ' (ವರ್ಲ್ಡ್ ಮಾನ್ಯುಮೆಂಟ್ ಫಂಡ್) ಸೇವಾ ಸಂಸ್ಥೆಯು ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುತ್ತದೆ.

2006: ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ವರನಟ ಡಾ. ಡಾ. ರಾಜಕುಮಾರ್ ಅವರ ಪಂಚಲೋಹದ ಪುತ್ಥಳಿಯನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅನಾವರಣ ಮಾಡಿದರು.

2006: ಹಿರಿಯ ತಬಲಾ ವಾದಕ ಪ್ರೊ. ಕರವೀರಪ್ಪ ಶಿವಪ್ಪ ಹಡಪದ (ಕೆ. ಎಸ್. ಹಡಪದ) (76) ಗುಲ್ಬರ್ಗದಲ್ಲಿ ನಿಧನರಾದರು.

2006: ಅತ್ಯಾಚಾರ, ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಕೃತ ಕಾಮಿ ಉಮೇಶ ರೆಡ್ಡಿಗೆ ಬೆಂಗಳೂರು ನಗರದ ಏಳನೇ ತ್ವರಿತ ನ್ಯಾಯಾಲಯ ಮರಣದಂಡನೆ ವಿಧಿಸಿತು. ನ್ಯಾಯಾಧೀಶರಾದ ಕೆ. ಸುಕನ್ಯಾ ಈ ತೀರ್ಪು ನೀಡಿದರು. 1998ರ ಫೆಬ್ರುವರಿ 28ರ ಮಧ್ಯಾಹ್ನ ಉಮೇಶ ರೆಡ್ಡಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಜಯಶ್ರೀ ಮರಡಿ ಸುಬ್ಬಯ್ಯ (37) ಮನೆಗೆ ನುಗ್ಗಿ ಅವರ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹತ್ಯೆಗೈದು ಮನಯಲ್ಲಿದ್ದ ನಗನಾಣ್ಯ ದರೋಡೆ ಮಾಡಿ ಪರಾರಿಯಾಗಿದ್ದ.

2000: ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರಿಂದ ವಿಶ್ವದಾಖಲೆ. ಭಾರತದ ವಿರುದ್ಧ ಶಾರ್ಜಾದಲ್ಲಿ ನಡೆದ ಕೋಕಾಕೋಲಾ ಏಕದಿನ ಪಂದ್ಯದಲ್ಲಿ 30 ರನ್ನುಗಳಿಗೆ 7 ವಿಕೆಟ್ ಉರುಳಿಸುವ ಮೂಲಕ ಅವರಿಂದ ಈ ದಾಖಲೆ ಸ್ಥಾಪನೆಯಾಯಿತು.

1999: ಲೋಕಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಪಿ.ಎಂ. ಸಯೀದ್ ಪುನರಾಯ್ಕೆಯಾದರು.

1992: ಕರ್ನಾಟಕದಲ್ಲಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಂಪುಟದ ಸಂಸದೀಯ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯ್ಲಿ ರಾಜೀನಾಮೆ ನೀಡಿದರು.

1969: ಚಂಡೀಗಢವನ್ನು ಪಂಜಾಬ್ ರಾಜ್ಯಕ್ಕೆ ಸೇರಿಸುವಂತೆ ಒತ್ತಾಯಿಸಿ ಆಮರಣ ನಿರಶನ ನಡೆಸಿದ ಸಿಖ್ ಧುರೀಣ ದರ್ಶನ್ ಸಿಂಗ್ ಫೆರುಮಾನ್ ಅವರು ತಮ್ಮ ನಿರಶನದ 74ನೇ ದಿನವಾದ ಈದಿನ ಮೃತರಾದರು.

1947: ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಒಪ್ಪಂದಕ್ಕೆ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಸಹಿ ಹಾಕಿದರು. ಪಾಕಿಸ್ಥಾನಿ ದಾಳಿಗಳ ವಿರುದ್ಧ ನೆರವು ನೀಡುವಂತೆ ಮನವಿ ಮಾಡಿದ ಅವರು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಕೊಡುಗೆಯನ್ನು ಮುಂದಿಟ್ಟರು. ಭಾರತ ಸರ್ಕಾರ ಮಹಾರಾಜ ಹರಿಸಿಂಗ್ ಅವರ ಈ ಕೊಡುಗೆಯನ್ನು ಅಂಗೀಕರಿಸಿ ಕಾಶ್ಮೀರಕ್ಕೆ ತನ್ನ ಸೇನೆಯನ್ನು ಕಳುಹಿಸಿತು. ಪಾಕಿಸ್ಥಾನಿ ಸರ್ಕಾರವು ಪಠಾಣರ ದಾಳಿಗಳಿಗೆ ಕಾಶ್ಮೀರವನ್ನು ದೂರಿತು ಹಾಗೂ ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆಗೊಳಿಸಿದದನ್ನು ಮಾನ್ಯ ಮಾಡಲು ನಿರಾಕರಿಸಿತು.

1940: ಆರತಿ ಸಹಾ (1940-1994) ಜನ್ಮದಿನ. ಇವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿನ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1920: ಭಾರತದ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಜನ್ಮದಿನ. ಇವರು 1997-2002ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು.

1911: ಸಿಖ್ ಧಾರ್ಮಿಕ ನಾಯಕ ಸಂತ ಫತೇಸಿಂಗ್ (1911-72) ಜನ್ಮದಿನ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಂಜಾಬಿ ಮಾತನಾಡುವ ಜನರಿಗಾಗಿ ಪ್ರತ್ಯೇಕ ರಾಜ್ಯ ಸ್ಥಾಪಿಸುವಂತೆ ಮಾಸ್ಟರ್ ತಾರಾಸಿಂಗ್ ಅವರ ಜೊತೆಗೂಡಿ ತೀವ್ರ ಪ್ರಚಾರ ಅಭಿಯಾನ ಕೈಗೊಂಡ ವ್ಯಕ್ತಿ ಫತೇಸಿಂಗ್.

1907: ಹರಿವಂಶರಾಯ್ ಬಚ್ಚನ್ ಜನ್ಮದಿನ. ಭಾರತೀಯ ಸಾಹಿತಿ, ಕವಿಯಾದ ಇವರು ಚಿತ್ರನಟ ಅಮಿತಾಭ್ ಬಚ್ಚನ್ ಅವರ ತಂದೆ.

1906: ಕನ್ನಡ ಸಾಹಿತಿ ದೊಡ್ಡಬೆಲೆಯ ಡಿ.ಎಲ್.ಎನ್. (27/10/1906-8/5/1971) ಜನ್ಮದಿನ. ಸಂಶೋಧನೆ, ವಿಮರ್ಷಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಇವರು `ವಡ್ಡಾರಾಧನೆ', `ಪಂಪರಾಮಾಯಣ ಸಂಗ್ರಹ', `ಭೀಷ್ಮಪರ್ವ' ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

1904: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ (1904-1929) ಜನ್ಮದಿನ. ಅವರು ಲಾಹೋರ್ ಜೈಲಿನಲ್ಲಿ ತಮ್ಮ ಆಮರಣ ನಿರಶನದ 63ನೇ ದಿನ ಮೃತರಾದರು.

1858: ಥಿಯೋಡೋರ್ ರೂಸ್ ವೆಲ್ಟ್ (1858-1919) ಜನ್ಮದಿನ. ಇವರು 1901-1909ರ ಅವಧಿಯಲ್ಲಿ ಅಮೆರಿಕದ 26ನೇ ಅಧ್ಯಕ್ಷರಾಗಿದ್ದರು.

1811: ಅಮೆರಿಕದ ಸಂಶೋಧಕ ಐಸಾಕ್ ಮೆರ್ರಿಟ್ ಸಿಂಗರ್ (1811-75) ಜನ್ಮದಿನ. ಗೃಹ ಬಳಕೆಗೆ ಬಳಸುವಂತಹ ಮೊತ್ತ ಮೊದಲ ಹೊಲಿಗೆ ಯಂತ್ರವನ್ನು ಇವರು ಅಭಿವೃದ್ಧಿ ಪಡಿಸಿದರು. ಕಂತು ಸಾಲ ಯೋಜನೆಯನ್ನು ಜಾರಿಗೆ ತಂದವರೂ ಇವರೇ. ಇವರ ಕಂತು ಸಾಲ ಯೋಜನೆ ಆಧುನಿಕ ಸಮಾಜದಲ್ಲಿ ವ್ಯಾಪಕ ಪ್ರಭಾವ ಬೀರಿತು.

Thursday, October 29, 2009

ಇಂದಿನ ಇತಿಹಾಸ History Today ಅಕ್ಟೋಬರ್ 26

ಇಂದಿನ ಇತಿಹಾಸ

ಅಕ್ಟೋಬರ್ 26

ಹುಬ್ಬಳ್ಳಿಯ ಪ್ರತಿಷ್ಠಿತ ಡಾ.ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿಗೆ ಕಾಂತಾವರದ ಡಾ.ನಾ. ಮೊಗಸಾಲೆ ಅವರು ಆಯ್ಕೆಯಾದರು. ಅವರು ಕವಿ, ಕಾದಂಬರಿಕಾರ ಹಾಗೂ ಸಾಹಿತ್ಯ ಸಂಘಟಕರಾಗಿ ಪ್ರಸಿದ್ಧರು. 2006ನೇ ಸಾಲಿನ ಅತ್ಯುತ್ತಮ ಕವನ ಸಂಕಲನವೆಂದು ಡಾ.ನಾ. ಮೊಗಸಾಲೆ ಅವರು ಬರೆದ `ಇಹಪರದ ಕೊಳ' ಆಯ್ಕೆಯಾಯಿತು. ಡಾ.ಡಿ.ಎಸ್. ಕರ್ಕಿ ಜನ್ಮ ಶತಮಾನೋತ್ಸವದ ಈ ವರ್ಷದಲ್ಲಿ ವಿಶೇಷವಾಗಿ ನೀಡಲಾದ ಕಾವ್ಯ ಪ್ರಶಸ್ತಿಯನ್ನು ವಿಭಾ ಅವರು ಬರೆದ `ಜೀವ ಮಿಡಿತದ ಸದ್ದು' ಕವನ ಸಂಕಲನಕ್ಕೆ ಘೋಷಿಸಲಾಯಿತು.

2008: ಅಸಮರ್ಪಕ ನಿರ್ವಹಣೆಯಿಂದಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎನ್ ಆರ್ ಇ ಜಿ) ಯೋಜನೆಗೆ ಹಿನ್ನಡೆ ಉಂಟಾದುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಅನಾವರಣಗೊಳಿಸಿತು. ವಿಳಂಬ ವೇತನ, ಉದ್ಯೋಗಾಕಾಂಕ್ಷಿಗಳ ಅರ್ಜಿಯ ಅಪೂರ್ಣ ದಾಖಲೆ ಇತ್ಯಾದಿಗಳಿಂದ ಈ ಮಹತ್ವದ ಯೋಜನೆಯ ಉದ್ದೇಶ ವಿಫಲವಾಗುತ್ತಿದ್ದು ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಹೊಣೆ ಎಂದು ವರದಿ ಅಭಿಪ್ರಾಯಪಟ್ಟಿತು. 2006ರ ಫೆಬ್ರುವರಿಯಿಂದ 2007ರ ಮಾರ್ಚಿವರೆಗೆ 26 ರಾಜ್ಯಗಳ 558 ಗ್ರಾಮ ಪಂಚಾಯಿತಿಗಳನ್ನು ವರದಿ ಒಳಗೊಂಡಿತ್ತು. ``ವಿಳಂಬ ವೇತನದ ಹಲವಾರು ಪ್ರಕರಣಗಳನ್ನು ಉದಾಹರಿಸಿದ ವರದಿ, ಈವರೆಗೂ ಈ ಸಂಬಂಧದ ನಿಯಮ ಉಲ್ಲಂಘನೆಗಾಗಿ ಯಾರೊಬ್ಬರಿಗೂ ಶಿಕ್ಷೆ ವಿದಿಸಿಲ್ಲ. ಇದು ದೂರು ನಿರ್ವಹಣೆ ಕಾರ್ಯತಂತ್ರದ ಕೊರತೆಯನ್ನು ಎತ್ತಿ ತೋರಿಸುತ್ತದೆ. 100 ದಿನಗಳವರೆಗೆ ಉದ್ಯೋಗಕ್ಕಾಗಿ ಆಗ್ರಹಿಸುವ ಕಾನೂನುಬದ್ಧ ಹಕ್ಕನ್ನು ಗ್ರಾಮೀಣ ಕುಟುಂಬಗಳಿಗೆ ಒದಗಿಸುವ ಕಾಯ್ದೆಯ ಉದ್ದೇಶಕ್ಕ್ಕೆ ಧಕ್ಕೆಯಾಗಿದೆ'' ಎಂದು ಹೇಳಿತು.

2008: ರಾಜ್ಯದಲ್ಲಿ ಈಗಲೂ ಅತಿದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕೃಷಿ ಕ್ಷೇತ್ರ ಬೆಳವಣಿಗೆಯಲ್ಲಿ ಹಿಂದುಳಿದಿದ್ದು, ರೈತರಿಗೆ ಹೆಚ್ಚಿನ ಉತ್ಪಾದನಾ ಅವಕಾಶಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ರಾಜ್ಯ ಯೋಜನಾ ಮಂಡಳಿಯು ರೂಪಿಸಿದ `ವಿಷನ್ 2020' ಒತ್ತಿ ಹೇಳಿತು. ರಾಜ್ಯದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ರೂಪಿಸಲಾದ ಈ ಕರಡು ಪ್ರಸ್ತಾವವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯ `ವಿಷನ್ ಗ್ರೂಪ್' ಮುಂದೆ ಮಂಡಿಸಲಾಯಿತು. ಶೇಕಡ 61ರಷ್ಟು ಜನರಿಗೆ ಉದ್ಯೋಗ ನೀಡುತ್ತಿರುವ ಕೃಷಿ ಕ್ಷೇತ್ರ ಕೇವಲ 0.8ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ. 1993ರಿಂದ 2005ರ ಅವಧಿಯಲ್ಲಿ ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಉದ್ಯೋಗಿಗಳ ಸಂಖ್ಯೆ ಶೇಕಡ 65ರಿಂದ ಶೇ 61ಕ್ಕೆ ಕುಸಿದಿದೆ. ರಾಜ್ಯದ ಒಟ್ಟು ಉತ್ಪನ್ನದಲ್ಲಿ ಕೃಷಿಯ ಪಾಲು ಶೇ 36ರಿಂದ ಶೇ 18ಕ್ಕೆ ಕುಸಿದಿದೆ ಎಂದೂ ಈ ವರದಿ ತಿಳಿಸಿತು.

2008: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಷಿಕ ಬಾಡಿಗೆ ತೆರಿಗೆ ಪದ್ಧತಿ (ಎ ಆರ್ ವಿ) ವಿಧಾನದ ಮೂಲಕ ತೆರಿಗೆ ಸಂಗ್ರಹಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲರು ಅನುಮತಿ ನೀಡಿದರು. 1976ರ ಕರ್ನಾಟಕ ಪಟ್ಟಣ ಪಂಚಾಯಿತಿ ಕಾಯ್ದೆಯ 108(ಎ) ವಿಧಿಗೆ ತಿದ್ದುಪಡಿ ತಂದು ಏಕರೂಪದ ತೆರಿಗೆ ಸಂಗ್ರಹ ಪದ್ಧತಿ ಜಾರಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲ ರಾಮೇಶ್ವರ ಠಾಕೂರ್ ಅಂಗೀಕಾರ ನೀಡಿದರು. `ನೂತನ ತೆರಿಗೆ ಪದ್ಧತಿ ಕುರಿತು ವಾರದೊಳಗೆ ನಿಯಮ ರೂಪಿಸಲಾಗುವುದು. ನಂತರ ನಿಯಮಗಳ ಕರಡು ಪ್ರತಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ಹಾಗಾಗಿ ನವೆಂಬರ್ ಮಾಸಾಂತ್ಯದ ವೇಳೆಗೆ ಹೊಸ ಪದ್ಧತಿ ಅಡಿ ತೆರಿಗೆ ಸಂಗ್ರಹಣೆ ಆರಂಭಿಸುವ ಸಾಧ್ಯತೆ ಇದೆ' ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

2007: ಹುಬ್ಬಳ್ಳಿಯ ಪ್ರತಿಷ್ಠಿತ ಡಾ.ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿಗೆ ಕಾಂತಾವರದ ಡಾ.ನಾ. ಮೊಗಸಾಲೆ ಅವರು ಆಯ್ಕೆಯಾದರು. ಅವರು ಕವಿ, ಕಾದಂಬರಿಕಾರ ಹಾಗೂ ಸಾಹಿತ್ಯ ಸಂಘಟಕರಾಗಿ ಪ್ರಸಿದ್ಧರು. 2006ನೇ ಸಾಲಿನ ಅತ್ಯುತ್ತಮ ಕವನ ಸಂಕಲನವೆಂದು ಡಾ.ನಾ. ಮೊಗಸಾಲೆ ಅವರು ಬರೆದ `ಇಹಪರದ ಕೊಳ' ಆಯ್ಕೆಯಾಯಿತು. ಡಾ.ಡಿ.ಎಸ್. ಕರ್ಕಿ ಜನ್ಮ ಶತಮಾನೋತ್ಸವದ ಈ ವರ್ಷದಲ್ಲಿ ವಿಶೇಷವಾಗಿ ನೀಡಲಾದ ಕಾವ್ಯ ಪ್ರಶಸ್ತಿಯನ್ನು ವಿಭಾ ಅವರು ಬರೆದ `ಜೀವ ಮಿಡಿತದ ಸದ್ದು' ಕವನ ಸಂಕಲನಕ್ಕೆ ಘೋಷಿಸಲಾಯಿತು.

2007: ಕೌಟುಂಬಿಕ ದೌರ್ಜನ್ಯ ಕಾಯ್ದೆ ಜಾರಿಯಾದ ಒಂದು ವರ್ಷದ ಅವಧಿಯೊಳಗೆ ದೇಶಾದ್ಯಂತ ಸುಮಾರು 10 ಸಾವಿರ ಪ್ರಕರಣಗಳು ದಾಖಲಾಗಿದ್ದು, ಹಲವು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಕಾಯ್ದೆ ಜಾರಿ ತರುವಲ್ಲಿ ಹಿಂದುಳಿದಿವೆ ಎಂದು ವರದಿಯೊಂದು ತಿಳಿಸಿತು. 2007ರ ಜುಲೈ 31ರಂದು ಕೊನೆಗೊಂಡ ಅವಧಿಯಲ್ಲಿ ಈ ಕಾಯ್ದೆಯಡಿ ಒಟ್ಟು 7,913 ದೂರುಗಳು ದಾಖಲಾಗಿದ್ದು, ಇಲ್ಲಿಯವರೆಗೆ ದೂರುಗಳ ಸಂಖ್ಯೆ ಹತ್ತು ಸಾವಿರಕ್ಕೆ ತಲುಪಿದೆ. ಇವುಗಳಲ್ಲಿ ಬಹಳಷ್ಟು ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇದೆ. ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 3,440 ಪ್ರಕರಣಗಳು ಈ ಕಾಯ್ದೆಯಡಿ ದಾಖಲಾಗಿವೆ. ನಂತರ ಕೇರಳ (1,028), ಆಂಧ್ರ ಪ್ರದೇಶ (731), ದೆಹಲಿ (607), ಬಿಹಾರ (64), ಪಶ್ಚಿಮ ಬಂಗಾಳ (54) ಹಾಗೂ ಒರಿಸ್ಸಾ (12)ದಲ್ಲಿ ಪ್ರಕರಣಗಳು ವರದಿಯಾಗಿವೆ. ದೆಹಲಿ ಹಾಗೂ ಆಂಧ್ರ ಪ್ರದೇಶದಲ್ಲಿ ಸುರಕ್ಷಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇನ್ನುಳಿದ ರಾಜ್ಯಗಳಲ್ಲಿ ಪೂರ್ಣಾವಧಿಗೆ ಯಾರನ್ನೂ ನೇಮಿಸಿಲ್ಲ ಎಂದು ವರದಿ ಹೇಳಿತು.

2007: ಎಲ್.ಕೆ. ಅಡ್ವಾಣಿ ಭೇಟಿ ಸಂದರ್ಭದಲ್ಲಿ ಸಂಭವಿಸಿದ 1998ರ ಕೊಯಮತ್ತೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಿದ್ದ ಮೈಸೂರಿನ ರಿಯಾಜ್-ಉಲ್-ರೆಹಮಾನ್ ಅವರನ್ನು ಕೊಯಮತ್ತೂರಿನ ವಿಶೇಷ ನ್ಯಾಯಾಲಯ ಬಿಡುಗಡೆಗೊಳಿಸಿತು. ರಿಯಾಜ್ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗಲಿ ಅಥವಾ ಅವರ ವಿರುದ್ಧ ವಿಚಾರಣೆ ನಡೆಸಲಾಗಲಿ ಸರ್ಕಾರಿ ವಕೀಲರು ಬಯಸಲಿಲ್ಲ. ಆದ್ದರಿಂದ ಅವರನ್ನು ಬಿಡುಗಡೆ ಮಾಡುತ್ತಿರುವುದಾಗಿ ನ್ಯಾಯಮೂತರ್ಿ ಕೆ. ಉದಿರಪತಿ ಹೇಳಿದರು. ಮೈಸೂರಿನವರಾದ ರಿಯಾಜ್ ಸ್ಫೋಟಕ ವಸ್ತುಗಳ ವ್ಯಾಪಾರಿ. ಕೊಯಮತ್ತೂರಿನಲ್ಲಿ ಸ್ಫೋಟಗೊಂಡ ಬಾಂಬುಗಳನ್ನು ತಯಾರಿಸಲು ಸ್ಪೋಟಕ ವಸ್ತುಗಳನ್ನು ಇವರು ಪೂರೈಸಿದ್ದರು ಎಂದು ಆರೋಪಿಸಲಾಗಿತ್ತು. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರಿಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತು. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 43 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದಂತಾಯಿತು. 1998ರ ಫೆಬ್ರುವರಿ 14ರಂದು ನಡೆದ ಸ್ಫೋಟದಲ್ಲಿ 58 ಜನರು ಹತ್ಯೆಗೀಡಾಗಿದ್ದರು. 43 ಮಂದಿ ಶಿಕ್ಷಿತರ ಪೈಕಿ 26 ಜನರಿಗೆ ಎರಡು ಅವಧಿಗೆ ಜೀವಾವಧಿ ಶಿಕ್ಷೆ, 15 ಜನರಿಗೆ ಒಂದು ಅವಧಿಗೆ ಜೀವಾವಧಿ ಶಿಕ್ಷೆ, ಒಬ್ಬನಿಗೆ ಮೂರು ಅವಧಿಗೆ ಜೀವಾವಧಿ ಶಿಕ್ಷೆ ಹಾಗೂ ಇನ್ನೊಬ್ಬನಿಗೆ ನಾಲ್ಕು ಅವಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2007: ವಿದೇಶಿ ಬಂಡವಾಳ ಹರಿವಿಗೆ ಕಡಿವಾಣ ವಿಧಿಸುವ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಕ್ರಮಗಳಿಂದ ಧೃತಿಗೆಡದ ಹೂಡಿಕೆದಾರರು, ಷೇರು ಖರೀದಿಗೆ ಆದ್ಯತೆ ನೀಡಿದ್ದರಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಇನ್ನೊಂದು ದಾಖಲೆ ಬರೆಯಿತು. ಕಳೆದ ವಾರ ದಾಖಲೆ ಮಟ್ಟದಿಂದ (19 ಸಾವಿರ ಅಂಶಗಳಿಂದ) ತೀವ್ರ ಕುಸಿತ ದಾಖಲಿಸಿದ್ದ ಸೂಚ್ಯಂಕವು ಈದಿನದ ವಹಿವಾಟಿನಲ್ಲಿ 472 ಅಂಶಗಳ ಏರಿಕೆ ದಾಖಲಿಸಿ, 19,243 ಅಂಶಗಳೊಂದಿಗೆ ವಹಿವಾಟು ಕೊನೆಗೊಳಿಸಿ, ಇನ್ನೊಂದು ಮೈಲಿಗಲ್ಲು ದಾಟಿತು. ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ) ನಿಫ್ಟಿ ಕೂಡ 5702 ಅಂಶಗಳಿಗೆ ಏರಿಕೆ ಕಂಡು ಹೊಸ ದಾಖಲೆ ಬರೆಯಿತು.

2007: ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಸೇರಿದ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಎರಡು ಪ್ರಕರಣಗಳಲ್ಲಿ ಆರೋಪ ಮುಕ್ತರಾದರು. ಭ್ರಷ್ಟಾಚಾರದ ಎರಡು ಪ್ರಕರಣಗಳಲ್ಲಿ ಖಲೀದಾ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಭ್ರಷ್ಟಾಚಾರ ನಿರ್ಮೂಲನೆ ಆಯೋಗ ತಿಳಿಸಿತು.

2006: ಗಂಡ ಅಥವಾ ಸಂಗಾತಿ ಮತ್ತು ಅವರ ಸಂಬಂಧಿಕರು ನೀಡುವ ಹಿಂಸೆಯಿಂದ ರಕ್ಷಿಸಲು ರೂಪಿಸಲಾಗಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ- 2005 ಭಾರತದಲ್ಲಿ ಜಾರಿಗೆ ಬಂತು. ಈ ಕಾಯ್ದೆಯ ಅನುಷ್ಠಾನದೊಂದಿಗೆ ಪತ್ನಿಯರನ್ನು ಹೊಡೆಯುವ ಅಥವಾ ಅವಮಾನಿಸುವ ಗಂಡಂದಿರು ಸೆರೆಮನೆ ಶಿಕ್ಷೆ ಅಥವಾ 20,000 ರೂಪಾಯಿಗಳವರೆಗೆ ದಂಡ ತೆರಬೇಕಾಗಿ ಬರುತ್ತದೆ. ಸಂಸತಿನಲ್ಲಿ ಈ ಕಾಯ್ದೆಯನ್ನು ಕಳೆದ ವರ್ಷದ ಆಗಸ್ಟಿನಲ್ಲಿ ಮಂಡಿಸಿ, ಸೆಪ್ಟೆಂಬರ್ 13ರಂದು ರಾಷ್ಟ್ರಪತಿಗಳಿಂದ ಅನುಮೋದನೆ ಪಡೆಯಲಾಗಿತ್ತು. ಕಾಯ್ದೆಯನ್ನು 2006ರ ಅಕ್ಟೋಬರ್ 26ರಂದು ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ನೇರ ಅಥವಾ ದೈಹಿಕ, ಲೈಂಗಿಕ, ಮೌಖಿಕ ಬೈಗುಳ, ಮಾನಸಿಕ ಅಥವಾ ಆರ್ಥಿಕ ಕಿರುಕುಳಗಳು, ಬೆದರಿಕೆ ಹಾಕುವುದು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಬರುತ್ತವೆ. ಹೆಚ್ಚು ವರದಕ್ಷಿಣೆ ತರುವಂತೆ ಮಹಿಳೆ ಅಥವಾ ಅವಳ ಸಂಬಂಧಿಕರನ್ನು ಪೀಡಿಸುವುದೂ ಈ ಕಾಯ್ದೆಯಡಿ ಸೇರುತ್ತದೆ. ಹಿಂಸೆ ನೀಡಿದ ವ್ಯಕ್ತಿಯ ಜೊತೆಗೆ ಒಂದೇ ಮನೆಯಲ್ಲಿ ಒಟ್ಟಾಗಿ ಬಾಳಿದ್ದರೆ, ರಕ್ತ ಸಂಬಂಧ ಹೊಂದಿದ್ದರೆ ಅಥವಾ ಮದುವೆ ಇಲ್ಲವೇ ಮದುವೆ ಮಾದರಿಯ ಬೇರಾವುದೇ ರೀತಿಯ ಬಾಂಧವ್ಯ ಅಥವಾ ದತ್ತು ಸ್ವೀಕಾರದಂತಹ ಬಾಂಧವ್ಯ ಹೊಂದಿದ್ದರೆ ಅಂತಹ ಮಹಿಳೆಗೆ ಕಾನೂನು ರಕ್ಷಣೆ ಒದಗಿಸುತ್ತದೆ. ಇದಲ್ಲದೆ ದೈಹಿಕವಾಗಿ ಹೊಡೆಯುವುದು, ಕಪಾಳಮೋಕ್ಷ ಮಾಡುವುದು, ವ್ಯಂಗ್ಯವಾಡುವುದು, ಒದೆಯುವುದು, ತಳ್ಳುವುದು, ಬಲಾತ್ಕಾರದ ಲೈಂಗಿಕತೆ, ಪತ್ನಿ ಅಥವಾ ಜೊತೆಗಾತಿಯನ್ನು ನಗ್ನ ಇಲ್ಲವೇ ಅಸಭ್ಯ ಚಿತ್ರಗಳನ್ನು ನೋಡುವಂತೆ ಬಲಾತ್ಕರಿಸುವುದು, ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುವುದು, ಹೆಸರು ಹಿಡಿದು ಕೂಗಿ ಅವಮಾನಿಸುವುದು, ಪತ್ನಿಯನ್ನು ಕೆಲಸಕ್ಕೆ ಸೇರದಂತೆ ತಡೆಯುವುದು, ಅಥವಾ ಕೆಲಸ ಬಿಡುವಂತೆ ಒತ್ತಾಯಿಸುವುದು ಕೂಡಾ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಕಾಯ್ದೆಯ ಅತ್ಯಂತ ಪ್ರಮುಖ ವೈಶಿಷ್ಟ್ಯವೇನೆಂದರೆ ಮಹಿಳೆಗೆ ವಸತಿ ಸೌಕರ್ಯದ ಹಕ್ಕು. ಮಹಿಳೆಗೆ ತವರು ಮನೆಯಲ್ಲಿ ವಾಸಿಸುವ ಮತ್ತು ಪಾಲಾದ ಮನೆಯಲ್ಲಿ ಆಕೆಗೆ ಯಾವುದೇ ಅಧಿಕಾರ ಇರಲಿ ಅಥವಾ ಇಲ್ಲದಿರಲಿ ವಾಸಿಸುವ ಹಕ್ಕನ್ನು ಈ ಕಾನೂನು ನೀಡುತ್ತದೆ. ಸಂರಕ್ಷಣಾ ಆದೇಶ ಅಥವಾ ತಾತ್ಕಾಲಿಕ ಸಂರಕ್ಷಣಾ ಆದೇಶವನ್ನು ಪ್ರತಿವಾದಿ ಉಲ್ಲಂಘಿಸುವುದನ್ನು ಕಾನೂನು ಶಿಕ್ಷಾರ್ಹ, ಜಾಮೀನು ರಹಿತ ಅಪರಾಧವನ್ನಾಗಿ ಮಾಡಿದೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಸೆರೆವಾಸ ಹಾಗೂ/ ಅಥವಾ 20,000 ರೂಪಾಯಿಗಳವರೆಗಿನ ದಂಡವನ್ನು ವಿಧಿಸಬಹುದು. ನಿಂದಕ ಪ್ರತಿವಾದಿಯು ಯಾವುದೇ ಕೌಟುಂಬಿಕ ಹಿಂಸಾಚಾರ ಎಸಗದಂತೆ, ಅಂತಹ ಕೃತ್ಯಕ್ಕೆ ನೆರವಾಗದಂತೆ ಅಥವಾ ಇಂತಹ ಬೇರೆ ಯಾವುದೇ ನಿರ್ದಿಷ್ಟ ಕೃತ್ಯ ಎಸಗುವುದು, ಕೆಲಸದ ಜಾಗ ಅಥವಾ ಇತರ ಸ್ಥಳಕ್ಕೆ ಪ್ರವೇಶಿಸುವುದು, ಸಂಪರ್ಕ ಸಾಧಿಸಲು ಯತ್ನಿಸುವುದು, ಉಭಯ ಕಕ್ಷಿದಾರರ ಯಾವುದೇ ಆಸ್ತಿಪಾಸ್ತಿಯನ್ನು ಪ್ರತ್ಯೇಕಿಸುವುದು ಇತ್ಯಾದಿ ಕೃತ್ಯಗಳನ್ನು ಎಸಗದಂತೆ ನಿಂದಕ ಪ್ರತಿವಾದಿಯನ್ನು ಪ್ರತಿಬಂಧಿಸಿ ಸಂರಕ್ಷಣಾ ಆದೇಶ ಹೊರಡಿಸುವ ಅಧಿಕಾರವನ್ನೂ ಕಾಯ್ದೆ ನ್ಯಾಯಾಲಯಕ್ಕೆ ನೀಡಿತು.

2006: ಮೈಸೂರು ಹೊರವಲಯದ ವಿಜಯನಗರ ವರ್ತುಲ ರಸ್ತೆ ಬಳಿ ಹಿಂದಿನ ರಾತ್ರಿ ಗುಂಡಿನ ಚಕಮಕಿ ಬಳಿಕ ಪೊಲೀಸರು ಇಬ್ಬರು ಪಾಕಿಸ್ತಾನಿ ಉಗ್ರಗಾಮಿಗಳನ್ನು ಬಂಧಿಸಿದರು.

2006: ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಗಿರೀಶ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಚಿತ್ರ ಆಯ್ಕೆಯಾಯಿತು. `ಸಯನೈಡ್' ಮತ್ತು ಬರಗೂರು ರಾಮಚಂದ್ರಪ್ಪ ನಿರ್ದೇಶನದ `ತಾಯಿ' ಸೇರಿದಂತೆ ಕನ್ನಡದ 4 ಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು.

2006: ಸೂರ್ಯನ ಕಿರಣದ ಮೂಲಕ ಹೊರಸೂಸುವ ವಿಕರಣಗಳಿಂದ ಬಾಹ್ಯಾಕಾಶ ನೌಕೆ, ಸಂಪರ್ಕ ವ್ಯವಸ್ಥೆ ಮತ್ತು ಗಗನಯಾನಿಗಳ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡಲು ಕೇಪ್ ಕೆನವರಾಲ್ ವಾಯು ನೆಲೆಯಿಂದ ಎರಡು ಬಾಹ್ಯಾಕಾಶ ನೌಕೆಗಳನ್ನು ಬಾನಿಗೆ ಹಾರಿ ಬಿಡಲಾಯಿತು.

2006: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗುರುಜ್ಯೋತಿ ಕಲಾ ಸಂಘವು 2005ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಮರದ ಮೇಲೆ ಪ್ರದರ್ಶಿಸಿದ್ದ `ನೆಲೆ' ನಾಟಕ ಲಿಮ್ಕಾ ದಾಖಲೆಗೆ ಸೇರ್ಪಡೆಯಾಯಿತು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ
2005ರ ಜೂನ್ 5ರಂದು ರಂಗಭೂಮಿ ಕಲಾವಿದ ಮತ್ತು ನಿರ್ದೇಶಕ ನಾಗರಾಜ ಕೋಟೆ ತಾವೇ ನಾಟಕ ರಚಿಸಿ ನಿರ್ದೇಶಿಸಿದ್ದ ಈ ನಾಟಕ ಮರದ ಮೇಲೆ ಪ್ರದರ್ಶಿತವಾದ ಪ್ರಥಮ ನಾಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. 40 ನಿಮಿಷಗಳ ಅವದಿಯಲ್ಲಿ 11 ಕಲಾವಿದರು ಅಭಿನಯಿಸಿದ ಈ ನಾಟಕಕ್ಕೆ ಮರದ ಮೇಲೆ ಯಾವುದೇ ರಂಗಸಜ್ಜಿಕೆ, ಕೃತಕ ವಿದ್ಯುತ್ ದೀಪ ಇತ್ಯಾದಿ ಪರಿಕರ ಬಳಸಿರಲಿಲ್ಲ. ಕೇವಲ ಬೆಳದಿಂಗಳಲ್ಲೇ ಅದನ್ನು ನಡಸಿದ್ದು ಜನ ಮೆಚ್ಚುಗೆ ಗಳಿಸಿತ್ತು.

2006: ಬಾಲಿವುಡ್ ತಾರೆಯರಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಫೆಬ್ರವರಿಯಲ್ಲಿ ಹಸೆಮಣೆ ಏರುವುದು ಖಚಿತವಾಗಿದೆ ಎಂದು ಬೆಂಗಳೂರಿನ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ದೃಢಪಡಿಸಿದರು.

2006: ಖ್ಯಾತ ಬಾಲಿವುಡ್ ನಟಿ, ರಾಜ್ಯಸಭಾ ಸದಸ್ಯೆ ಶಬಾನಾ ಆಜ್ಮಿ ಅವರಿಗೆ ಲಂಡನ್ನಿನ ಹೌಸ್ ಆಫ್ ಕಾಮನ್ಸಿನಲ್ಲಿ ಪ್ರಸ್ತುತ ವರ್ಷದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಗಾಂಧಿ ಪ್ರತಿಷ್ಠಾನ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಮುಂಬೈಯ ಕೊಳಚೆ ಪ್ರದೇಶದ ಜನರ ಮೂಲಭೂತ ಹಕ್ಕುಗಳಿಗಾಗಿ `ನಿವಾರ ಹಕ್' ಸಂಘಟನೆ ಸ್ಥಾಪಿಸಿ ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದ ಹೋರಾಟವನ್ನು ಗುರುತಿಸಿ ಈ ಗೌರವ ನೀಡಲಾಯಿತು.

1990: ಚಿತ್ರ ನಿರ್ಮಾಪಕ, ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಪ್ರ್ರಶಸ್ತಿ ಪುರಸ್ಕೃತ ವಿ. ಶಾಂತಾರಾಮ್ (90) ನಿಧನ.

1981: ಕಾವ್ಯವನ್ನೇ ತಮ್ಮ ಜೀವನ ಧರ್ಮವಾಗಿ ಸ್ವೀಕರಿಸಿ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ವಿಜೃಂಭಿಸಿದ ಜ್ಞಾನಪೀಠ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವರಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ. ಬೇಂದ್ರೆ) ಈದಿನ ನಿಧನರಾದರು.

1972: ರಷ್ಯ ಸಂಜಾತ ಅಮೆರಿಕನ್ ವೈಮಾನಿಕ ಎಂಜಿನಿಯರ್ ಇಗೊರ್ ಸಿಕ್ರೊಸ್ಕಿ ತಮ್ಮ 83ನೇ ವಯಸ್ಸಿನಲ್ಲಿ ಕನೆಕ್ಟಿಕಟ್ ನ ಈಸ್ಟನ್ನಿನಲ್ಲಿ ಮೃತರಾದರು. 1939ರಲ್ಲಿ ಅವರು ಮೊತ್ತ ಮೊದಲ ಹೆಲಿಕಾಪ್ಟರನ್ನು ಯಶಸ್ವಿಯಾಗಿ ನಿರ್ಮಿಸಿದ್ದರು.

1962: ರಾಷ್ಟ್ರದ ಮೇಲೆ ಚೀನಾವು ನಡೆಸಿದ ದಾಳಿಯನ್ನು ಅನುಸರಿಸಿ ಭಾರತದ ರಾಷ್ಟ್ರಪತಿಗಳು `ತುರ್ತುಪರಿಸ್ಥಿತಿ' ಘೋಷಣೆ ಮಾಡಿದರು. ಭಾರತದ ಇತಿಹಾಸದಲ್ಲಿ ಈ ರೀತಿ `ತುರ್ತು ಪರಿಸ್ಥಿತಿ' ಘೋಷಣೆ ಆದದ್ದು ಇದೇ ಪ್ರಥಮ.

1959: ಸಾಹಿತಿ ಶಶಿಕಲಾ ಶಿವಶಂಕರ ಜನನ.

1940: ಸಾಹಿತಿ ಶಚಿದೇವಿ ಟಿ. ಜನನ.

1933: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಜನನ.

1931: ಸಾಹಿತಿ ತ.ಪು. ವೆಂಕಟರಾವ್ ಜನನ.

1919: ಮಹಮ್ಮದ್ ರೇಝಾ ಶಹ ಪಹ್ಲವಿ (1919-1980) ಜನ್ಮದಿನ. 1941ರಿಂದ 1979ರವರೆಗೆ ಇರಾನಿನ ಶಹಾ ಆಗಿದ್ದ ಇವರು ಅಯತೊಲ್ಲ ಖೊಮೇನಿಯಿಂದ ಪದಚ್ಯುತರಾದರು.

1917: ಸಾಹಿತಿ ಬೈಕಾಡಿ ವೆಂಕಟಕೃಷ್ಣರಾಯರ ಜನನ.

1906: ಇಟೆಲಿಯ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಪ್ರಿಮೊ ಕಾರ್ನೆರಾ (1906-1967) ಜನ್ಮದಿನ. ಇವರು 1933 ರ ಜನವರಿಯಿಂದ 1934ರ ಜೂನ್ ವರೆಗೆ ವಿಶ್ವ ಹೆವಿ ವೇಯ್ಟ್ ಚಾಂಪಿಯನ್ ಆಗಿದ್ದರು. 1933ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ಪಂದ್ಯದಲ್ಲಿ ಜ್ಯಾಕ್ ಶಾರ್ಕಿಯನ್ನು ಪರಾಜಿತಗೊಳಿಸಿ ಇವರು ವಿಶ್ವ ಚಾಂಪಿಯನ್ ಶಿಪ್ ಗಳಿಸಿದರು.

1902: ಅಮೆರಿಕದ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಜ್ಯಾಕ್ ಶಾರ್ಕಿ (1902-1994) ಜನ್ಮದಿನ. 1932ರಲ್ಲಿ ನ್ಯೂಯಾರ್ಕಿನ ಲಾಂಗ್ ಐಲ್ಯಾಂಡ್ ಸಿಟಿಯಲ್ಲಿ ನಡೆದ ಪಂದ್ಯದಲ್ಲಿ ಮ್ಯಾಕ್ಸ್ ಶಿಮೆಲಿಂಗ್ ಅವರನ್ನು ಪರಾಭವಗೊಳಿಸಿ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದ ಜ್ಯಾಕ್ ಶಾರ್ಕಿ 1933ರ ಜೂನಿನಲ್ಲಿ ಪ್ರಿಮೊ ಕಾರ್ನೆರಾ ಅವರಿಂದ ಪರಾಜಿತರಾದರು.

1868: ಸಂಸ್ಕೃತ ಹಾಗೂ ಕನ್ನಡ ಪಂಡಿತರಾಗಿದ್ದ ಸಾಹಿತಿ ಸೀತಾರಾಮ ಶಾಸ್ತ್ರಿಗಳು (26-10-1868ರಿಂದ 20-12-1933) ಗುಂಡಾವಧಾನಿಗಳು- ಪಾರ್ವತಮ್ಮ ದಂಪತಿಯ ಮಗನಾಗಿ ಮೈಸೂರಿನ ಹಳ್ಳದಕೇರಿಯಲ್ಲಿ ಜನಿಸಿದರು.

1846: ಬ್ರಿಟಿಷ್ ಪತ್ರಕರ್ತ ಚಾರ್ಲ್ಸ್ ಪ್ರಸ್ಟ್ ವಿಕ್ ಸ್ಕಾಟ್ (1846-1932) ಜನ್ಮದಿನ. ಇವರು 1959ರಿಂದ 57 ವರ್ಷಗಳ ಕಾಲ `ಮ್ಯಾಂಚೆಸ್ಟರ್ ಗಾರ್ಡಿಯನ್' (ದಿ ಗಾರ್ಡಿಯನ್) ಪತ್ರಿಕೆಯನ್ನು ಸಂಪಾದಿಸಿದರು.

ಕ್ರಿ.ಪೂ. 4004: ಕ್ರಿಸ್ತಪೂರ್ವ 4004ರಲ್ಲಿ ಈದಿನ ಬೆಳಗ್ಗೆ 9 ಗಂಟೆಗೆ ಭೂಮಿಯ ಸೃಷ್ಟಿಯಾಯಿತು ಎಂಬ ಲೆಕ್ಕಾಚಾರ ಇದೆ. ಐರ್ಲೆಂಡಿನ ಇಗರ್ಜಿಯೊಂದರ ಬಿಷಪ್ ಜೇಮ್ಸ್ ಉಷರ್ ಅವರು ಕಿ.ಶ. 1650ರಲ್ಲಿ ಈ ತೀರ್ಮಾನಕ್ಕೆ ಬಂದರು. ಅವರ ತರ್ಕಕ್ಕೆ ಬೈಬಲ್ ಆಧಾರವಾಗಿತ್ತು. ಅಧುನಿಕ ವಿಶ್ವವಿದ್ಯಾಲಯದ ಭೂಗೋಳ ವಿಭಾಗದಲ್ಲಿ ಈ ದಿನವನ್ನು ಭೂಮಿಯ ಜನ್ಮದಿನ ಎಂಬುದಾಗಿ ಆಚರಿಸಲಾಗುತ್ತದೆ. ಭೂಮಿಯ ಸದ್ಯದ ನಿಖರವಾದ ವಯಸ್ಸು 4.5 ಶತಕೋಟಿ ವರ್ಷಗಳು. ಆದರೆ ಜನ್ಮದಿನದ ಬಗ್ಗೆ ಸ್ಪಷ್ಟ ಆಧಾರವೇನೂ ಇಲ್ಲ.

Wednesday, October 28, 2009

ಇಂದಿನ ಇತಿಹಾಸ History Today ಅಕ್ಟೋಬರ್ 25

ಇಂದಿನ ಇತಿಹಾಸ

ಅಕ್ಟೋಬರ್ 25

ಅಮೆರಿಕದಲ್ಲಿ ಆರ್ಥಿಕ ಹಿನ್ನಡೆ ಇನ್ನೂ ಮುಂದುವರಿದು, ಜಾರ್ಜಿಯಾದ ಅಲ್ಫಾ ಬ್ಯಾಂಕ್ ಕೂಡಾ ನಷ್ಟದ ದವಡೆಗೆ ಸಿಲುಕಿತು. ಹಣಕಾಸು ಬಿಕ್ಕಟ್ಟಿಗೆ ತುತ್ತಾದ ಅಮೆರಿಕದ ಹಣಕಾಸು ಸಂಸ್ಥೆಗಳಲ್ಲಿ ಇದು 16ನೆಯದಾಗಿದ್ದು, ಇದೇ ವೇಳೆಗೆ ಸ್ಟೀಮ್ಸ್ ಬ್ಯಾಂಕ್ ಮುಂದೆ ಬಂದು ಅಲ್ಫಾ ಬ್ಯಾಂಕನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿ ಪ್ರಕಟಿಸಿತು.

2008: ಬಾಹ್ಯಾಕಾಶ ಇಲಾಖೆ ಹಾಗೂ ಸೇನಾ ವಿಭಾಗದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದನ್ನು ಕೇಂದ್ರ ಮಹಾಲೇಖಪಾಲರ ವರದಿ ಪತ್ತೆಹಚ್ಚಿತು. 1986ರ ನಂತರ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಇಲಾಖೆಯ ವ್ಯವಹಾರಗಳ ಬಗ್ಗೆ ಲೆಕ್ಕಪರಿಶೋಧನೆ ಮಾಡಿದ ಈ ವಿಸ್ತೃತ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಜಗತ್ತಿನ ಅತಿ ಎತ್ತರದ ಯುದ್ಧಭೂಮಿಗಳ ಪೈಕಿ ಒಂದಾಗಿರುವ ಹಿಮಾಚ್ಛಾದಿತ ಸಿಯಾಚಿನ್ ಪ್ರದೇಶದಲ್ಲಿ ಗಡಿ ಕಾಯುವ ಯೋಧರಿಗೆ ಚಳಿ ತಡೆದುಕೊಳ್ಳಲು ನೀಡಲಾಗುವ ವಿಶೇಷ ಬಟ್ಟೆಗಳು `ಭಾಗಶಃ ಹರಿದುಹೋಗಿರುವಂತಹವು ಹಾಗೂ ಬಳಕೆ ಮಾಡಿರುವಂತಹವು' ಎಂದು ಇನ್ನೊಂದು (ಸಿಎಜಿ) ವರದಿ ಹೇಳಿತು. ಹಿಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಿಗೆ ಸಮರ್ಪಕವಾದ ವಿಶೇಷ ಬಟ್ಟೆ ಹಾಗೂ ಬೆಟ್ಟಗುಡ್ಡಗಳನ್ನು ಹತ್ತಲು ಬಳಸುವ ವಿಶೇಷ ಸಲಕರಣೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವಲ್ಲಿ ಸೇನೆ ವಿಫಲವಾಗಿದೆ ಎಂದು ವರದಿ ತಿಳಿಸಿತು.

2008: ಅಮೆರಿಕದಲ್ಲಿ ಆರ್ಥಿಕ ಹಿನ್ನಡೆ ಇನ್ನೂ ಮುಂದುವರಿದು, ಜಾರ್ಜಿಯಾದ ಅಲ್ಫಾ ಬ್ಯಾಂಕ್ ಕೂಡಾ ನಷ್ಟದ ದವಡೆಗೆ ಸಿಲುಕಿತು. ಹಣಕಾಸು ಬಿಕ್ಕಟ್ಟಿಗೆ ತುತ್ತಾದ ಅಮೆರಿಕದ ಹಣಕಾಸು ಸಂಸ್ಥೆಗಳಲ್ಲಿ ಇದು 16ನೆಯದಾಗಿದ್ದು, ಇದೇ ವೇಳೆಗೆ ಸ್ಟೀಮ್ಸ್ ಬ್ಯಾಂಕ್ ಮುಂದೆ ಬಂದು ಅಲ್ಫಾ ಬ್ಯಾಂಕನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿ ಪ್ರಕಟಿಸಿತು.

2008: ತಿರುಪತಿ-ತಿರುಮಲ ದೇವಸ್ಥಾನದ ಬೆಟ್ಟಕ್ಕೆ `ರೋಪ್ ವೇ' ನಿರ್ಮಿಸಲು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿತು. ಇದರಿಂದ ದೇವಸ್ಥಾನಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತಾದಿಗಳಿಗೆ ಅನುಕೂಲವಾಗುವುದು. ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ಪೀಠ `ರೋಪ್ ವೇ' ನಿರ್ಮಿಸಲು ಸಮ್ಮತಿ ನೀಡಿತು. ರೋಪ್ ವೇ ಕುರಿತಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯು ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಸ್ಪಷ್ಟೀಕರಣವನ್ನು ಸುಪ್ರೀಂಕೋರ್ಟಿನಿಂದ ಬಯಸಿತ್ತು. ಈ ವಿಷಯವನ್ನು ಕೋರ್ಟ್ ಕೇಂದ್ರ ಸಬಲೀಕರಣ ಸಮಿತಿ ಗಮನಕ್ಕೆ ತಂದಿತ್ತು.

2008: ಗುತ್ತಿಗೆ ಕಾಮಗಾರಿ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇರೆಗೆ ಸಿಬಿಐ ನ್ಯಾಯಾಲಯವೊಂದು ಸಿಕ್ಕಿಮಿನ ಮಾಜಿ ಮುಖ್ಯಮಂತ್ರಿ ನರ ಬಹಾದ್ದೂರ್ ಭಂಡಾರಿ ಮತ್ತು ಐಎಎಸ್ ಅಧಿಕಾರಿ ಪಿ. ಕೆ. ಪ್ರಧಾನ್ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತು. 1984ರಲ್ಲಿ ದಾಖಲಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಧೀಶ ಎಸ್. ಡಬ್ಲ್ಯು. ಲೆಪಚ ಅವರು ಇತರ 8 ಮಂದಿ ಗುತ್ತಿಗೆದಾರರಿಗೆ ತಲಾ 5 ತಿಂಗಳ ಜೈಲು ಶಿಕ್ಷೆ ವಿಧಿಸಿದರು. ಅಂದಿನ ಬಿ. ಬಿ. ಗುರುಂಗ್ ಸರ್ಕಾರದ ಅವದಿಯಲ್ಲಿ ಭಂಡಾರಿ ಮತ್ತು ಅಂದಿನ ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿ ಪ್ರಧಾನ್ ಅವರು ತಮ್ಮ ಹುದ್ದೆಯ ಘನತೆ ಬದಿಗಿಟ್ಟು ತಮಗೆ ಇಷ್ಟಬಂದ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ರಾಜ್ಯದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ್ದರು.

2008: ಯೂರೋಪಿನ ಮುಂಚೂಣಿ ಮರುಸಂಸ್ಕರಣಾ ಕಂಪೆನಿ ಬಕ್ಷಿಯ ಒಡೆಯ ಅನಿವಾಸಿ ಭಾರತೀಯ ರಂಜಿತ್ ಸಿಂಗ್ ಬಕ್ಷಿ ಅವರು ಈ ಬಾರಿಯ ಪ್ರತಿಷ್ಠಿತ `ಏಷ್ಯಾ ವರ್ಷದ ವ್ಯಕ್ತಿ' ಪ್ರಶಸ್ತಿಗೆ ಆಯ್ಕೆಯಾದರು. `ಜೆ ಅಂಡ್ ಎಚ್ ಸೇಲ್ಸ್ ಇಂಟರ್ ನ್ಯಾಷನಲ್' ಸಂಸ್ಥೆಯ ಅಧ್ಯಕ್ಷರೂ ಆದ ಬಕ್ಷಿ ಇತ್ತೀಚೆಗೆ ಬ್ರಷೆಲ್ಸಿನಲ್ಲಿರುವ ಅಂತಾರಾಷ್ಟ್ರೀಯ ಪಿಡಿಬಿಯ ಅಧ್ಯಕ್ಷರಾಗಿ ನೇಮಕವಾದರು. ಇದು ಪುನರ್ ಸಂಸ್ಕರಣಾ ರಂಗದ 70 ರಾಷ್ಟ್ರಗಳ ಸದಸ್ಯತ್ವ ಹೊಂದಿದೆ.

2008: ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಆರ್.ವಿ. ಭಂಡಾರಿ (72) ದೀರ್ಘ ಕಾಲದ ಅಸ್ವಸ್ಥತೆಯ ನಂತರ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಚಿರಪರಿಚಿತರಾಗಿದ್ದ ಇವರು ಬಂಡಾಯ ಸಾಹಿತ್ಯದ ಆರಂಭದ ಚಳವಳಿಯ ದಿನಗಳಲ್ಲಿ ಅದರ ಮುಂಚೂಣಿಯಲ್ಲಿದ್ದ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಕಣ್ಣೇಕಟ್ಟೆ ಕಾಡೆಗೂಡೆ (ಕವನ ಸಂಕಲನ), ಬೆಂಕಿಯ ಮಧ್ಯೆ, ಬಿರುಗಾಳಿ, ಯಶವಂತನ ಯಶೋಗೀತೆ (ಮೂರೂ ಕಾದಂಬರಿ), ಯಾನ, ಬೆಳಕಿನೆಡೆಗೆ (ಮಕ್ಕಳ ನಾಟಕಗಳು), ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್é್ (ವೈಚಾರಿಕ ವಿಮರ್ಶಾ ಸಂಕಲನ) ಮೊದಲಾದ ಕೃತಿಗಳನ್ನು ರಚಿಸಿದ್ದ ಭಂಡಾರಿಯವರಿಗೆ 2005ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತ್ತು. ಅವರು ಜೊಯಿಡಾದಲ್ಲಿ ನಡೆದ 12ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

2007: ಪ್ರಯಾಣಿಕರ ಅತಿ ದೊಡ್ಡ 'ಜಂಬೋ ವಿಮಾನ' ಏರ್ಬಸ್ ಎ380 ಈದಿನ ಸಿಂಗಪುರದಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆರಂಭಿಸಿತು. ಸಿಂಗಪುರ ಏರ್ ಲೈನ್ಸಿಗೆ ಸೇರಿದ ಈ ವಿಮಾನದ ಮೊದಲ ಐತಿಹಾಸಿಕ ಹಾರಾಟದಲ್ಲಿ ಪ್ರಯಾಣಿಸಲು ಜನರು ಮುಗಿಬಿದ್ದು ಟಿಕೆಟುಗಳನ್ನು ಖರೀದಿಸಿದರು. ಬ್ರಿಟನ್ ನಾಗರಿಕನೊಬ್ಬ ಒಂದು ಲಕ್ಷ ಡಾಲರ್ (40 ಲಕ್ಷ ರೂಪಾಯಿ) ಹಣ ಕೊಟ್ಟು ಟಿಕೆಟ್ ಖರೀದಿಸಿದ್ದು ದಾಖಲೆಯಾಯಿತು. ಆನ್ ಲೈನ್ ಹರಾಜು ಮೂಲಕ ಟಿಕೆಟ್ ಮಾರಾಟ ಮಾಡಲಾಯಿತು. ಎಲ್ಲ 455 ಪ್ರಯಾಣಿಕರಿಗೆ ಸಿಂಗಪುರ ಏರ್ ಲೈನ್ಸ್ ಶಾಂಪೇನ್ ಕಾಣಿಕೆಯಾಗಿ ನೀಡಿತು. ಮಾನವ ನಿರ್ಮಿತ ಅತಿ ದೊಡ್ಡ ಹಾರಾಟದ ವಸ್ತು ಇದಾಗಿದೆ ಎಂಬ ಹೆಗ್ಗಳಿಕೆ ಹೊತ್ತಿರುವ ಎರಡು ಅಂತಸ್ತಿನ ಈ ವಿಮಾನದಲ್ಲಿ 853 ಜನರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.

2007: ವಿವಾಹ ನೋಂದಣಿಯನ್ನು ಎಲ್ಲ ಧರ್ಮದವರಿಗೂ ಕಡ್ಡಾಯಗೊಳಿಸುವ ಆದೇಶವನ್ನು ಸುಪ್ರೀಂಕೋರ್ಟ್ ಹೊರಡಿಸಿತು. ವಿವಾಹ ನೋಂದಣಿ ಕಡ್ಡಾಯ ಎಂಬುದಾಗಿ ಹಿಂದೆ ನೀಡಿದ್ದ ಆದೇಶವು ಸರ್ವ ಧರ್ಮೀಯರಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆದೇಶ ನೀಡಿದರು. ವಿವಾಹ ನೋಂದಣಿ ಕಾಯ್ದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವೂ ಸೇರಿದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿತು.

2007: ಬಳ್ಳಾರಿ ಜಿಲ್ಲೆಯ ಜೆಎಸ್ ಡಬ್ಲು ಸ್ಟೀಲ್ಸ್ ಲಿಮಿಟೆಡ್ ಕಂಪೆನಿಯು ಪ್ರಸ್ತುತ ಹಣಕಾಸು ಸಾಲಿನ ಅರ್ಧ ವರ್ಷದ ಅಂತ್ಯಕ್ಕೆ 511.23 ಕೋಟಿ ರೂಪಾಯಿಗಳ ಲಾಭ ಗಳಿಸುವ ಮೂಲಕ ದಾಖಲೆ ನಿರ್ಮಿಸಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಈ ಬಾರಿ ಶೇ 48ರಷ್ಟು ಪ್ರಗತಿಯಾಗಿದೆ. ಜಾಗತಿಕ ಮಾರುಕಟ್ಟೆ ಹಾಗೂ ಭಾರತದಲ್ಲಿ ಉಕ್ಕು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದದ್ದರಿಂದ ಈ ಸಾಧನೆ ಸಾಧ್ಯವಾಯಿತು ಎಂದು ಕಂಪೆನಿಯ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದರು.

2007: ಬಿಜೆಪಿ ನಾಯಕ ಎಲ್. ಕೆ. ಆಡ್ವಾಣಿ ಅವರನ್ನು ಸರಣಿ ಬಾಂಬ್ ಸ್ಫೋಟಿಸಿ ಕೊಲ್ಲಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಯಮತ್ತೂರಿನ ವಿಶೇಷ ನ್ಯಾಯಾಲಯವು ಈದಿನ ಮತ್ತೆ ಒಂಬತ್ತು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತು. ಇದರಿಂದಾಗಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರ ಸಂಖ್ಯೆ 40ಕ್ಕೆ ಏರಿತು. ನ್ಯಾಯಾಧೀಶ ಕೆ. ಉದಿರಪತಿ ಅವರು ಬಾಂಬ್ ಸ್ಫೋಟದ ರೂವಾರಿ ಅಲ್ ಉಮ್ಮಾ ಸಂಘಟನೆ ಸಂಸ್ಥಾಪಕ ಎಸ್. ಎ. ಬಾಷಾ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ ಸೇರಿದಂತೆ 31 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಆಡ್ವಾಣಿ ಅವರು 1998ರ ಫೆಬ್ರುವರಿ 14ರಂದು ಕೊಯಮತ್ತೂರಿಗೆ ಭೇಟಿ ನೀಡಿದ್ದಾಗ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ರೂಪಿಸಲಾಗಿದ್ದ `ಆಪರೇಶನ್ ಅಲ್ಲ್ಲಾಹೋ ಅಕ್ಬರ್' ಹೆಸರಿನ ಸರಣಿ ಬಾಂಬ್ ಸ್ಫೋಟಗಳಿಂದಾಗಿ ಒಟ್ಟು 58 ಜನರು ಸತ್ತು 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಾಂಬುಗಳನ್ನು ಇಟ್ಟದ್ದಕ್ಕಾಗಿ ವಜೀರ್ ಉರುಫ್ ಅಬ್ದುಲ್ ವಜೀರ್ ಎಂಬಾತನಿಗೆ ಅತಿ ಹೆಚ್ಚು, ಅಂದರೆ ನಾಲ್ಕು ಜೀವಾವಧಿ ಶಿಕ್ಷೆ ಹಾಗೂ ಇತರ ಅಪರಾಧಗಳಿಗೆ 124 ವರ್ಷ ಅವಧಿಯ ಶಿಕ್ಷೆ ಪ್ರಕಟಿಸಲಾಯಿತು.

2007: ಮಂಡ್ಯದಲ್ಲಿ ನವೆಂಬರ್ 24 ಮತ್ತು 25ರಂದು ನಡೆಯುವ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ, ಸಾಹಿತಿ ನೀಳಾದೇವಿ ಆಯ್ಕೆಯಾದರು.

2007: ಗುಜರಾತಿನ ಜಾಮ್ನಗರದ ಅಂತಾರಾಷ್ಟ್ರೀಯ ಆಯುರ್ವೇದ ವೈದ್ಯರ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ಒಟ್ಟು 21 ಜನ ಖ್ಯಾತ ವೈದ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಅಹಮ್ಮದಾಬಾದಿನ ಡಾ. ತಪನ್ ಕುಮಾರ್ ವೈದ್ಯ ಆಯುರ್ವೇದ ಭೂಷಣ ಪ್ರಶಸ್ತಿಗೆ ಬಾಜನರಾದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ: ಡಾ. ಪ್ರಸನ್ನ ಎನ್. ರಾವ್ (ಆಯುರ್ವೇದ ಚಾಣಕ್ಯ), ಕೊಟ್ಟಕ್ಕಲ್ಲಿನ ಡಾ. ಈ. ಸುರೇಂದ್ರನ್ (ಪಂಚಕರ್ಮ ರತ್ನ), ಉಡುಪಿಯ ಡಾ. ಯು. ಶ್ರೀಕಾಂತ್ (ಪಂಚಕರ್ಮ ಭೂಷಣ), ಅಹಮದಾಬಾದಿನ ಡಾ.ತಪನ್ ಕುಮಾರ್ ವೈದ್ಯ (ಆಯುರ್ವೇದ ಭೂಷಣ 2007), ಡಾ. ಭೀಮಸೇನ್ ಬೆಹರಾ (ಆಯುರ್ವೇದ ಭೂಷಣ 2006), ಮಣಿಪಾಲದ ಡಾ.ಕೆ.ಜೆ. ಮಳಗಿ (ಆಯುರ್ವೇದ ಭೂಷಣ 2005), ಡಾ. ಸಂಜಯ್ (ಆಯುರ್ವೇದ ಭೂಷಣ 2004), ಕೋಲ್ಕತ್ತದ ಡಾ. ಬಿ.ಪಿ. ವಾ (ಸಂಸ್ಥೆಯ ಶ್ರೇಷ್ಠ ಮುಖ್ಯಸ್ಥ), ಹಾಸನದ ಡಾ. ಮುರಳೀಧರ್ ಪೂಜಾರ್ (ಶ್ರೇಷ್ಠ ಶಿಕ್ಷಕ 2005), ಹಾಸನದ ಡಾ. ನಾರಾಯಣ ಪ್ರಕಾಶ್ (ಶ್ರೇಷ್ಠ ಮಾನಸಿಕ ರೋಗ ತಜ್ಞ), ಕೇರಳದ ಡಾ. ಸಂತೋಷ್ ನಾಯರ್ (ಆಯುರ್ವೇದ ಭೂಷಣ ಸಿದ್ಧಾಂತ), ಡಾ. ಶ್ರೀನಿವಾಸ್ ಸಾಹಿ (ಶ್ರೇಷ್ಠ ಸಂಶೋಧನಾ ಅಧಿಕಾರಿ 2007), ಜಾಮ್ನಗರದ ಡಾ. ಸಂತೋಷ್ ಭಟ್ಟದ್ (ಶ್ರೇಷ್ಠ ಪಂಚಕರ್ಮ ವೈದ್ಯ 2005), ಡಾ. ಎಂ. ಅಶ್ವಿನಿಕುಮಾರ್ (ಶ್ರೇಷ್ಠ ಪಂಚಕರ್ಮ ವೈದ್ಯ 2006), ಮೂಡುಬಿದರೆಯ ಡಾ. ಪ್ರಸನ್ನ ಐತಾಳ್ (ಶ್ರೇಷ್ಠ ಜಾಗತಿಕ ಪಂಚಕರ್ಮ ಶಿಕ್ಷಕ), ಬೆಂಗಳೂರಿನ ಡಾ. ಬಿ.ಎನ್. ಶ್ರೀಧರ್ (ಶ್ರೇಷ್ಠ ಸಂಶೋಧನಾ ಅಧಿಕಾರಿ), ಸುಳ್ಯದ ಡಾ.ಎಚ್. ಗುರುರಾಜ್ (ಶ್ರೇಷ್ಠ ಪಂಚಕರ್ಮ ವೈದ್ಯ 2007). ಇದೇ ಸಂದರ್ಭದಲ್ಲಿ ಡಾ. ಬಿ.ಕೆ. ಶೋಭಾ, ಡಾ. ಬಿ.ಎ. ಲೋಹಿತ್, ಡಾ. ಪಿ.ಕೆ. ಪಂಡ ಅವರು ಅಕಾಡೆಮಿ ಫೆಲೋಶಿಪ್ ಪಡೆದರು.

2007: ವಿದ್ಯುನ್ಮಾನ ಸರಕು ಅಭಿವೃದ್ಧಿ, ತಯಾರಿಕೆ ಮತ್ತು ಮಾರಾಟದ ಜಾಗತಿಕ ಸಂಸ್ಥೆ ಕೂಕ್ಸನ್ ಎಲೆಕ್ಟ್ರಾನಿಕ್ಸ್, ಬೆಂಗಳೂರಿನಲ್ಲಿ ತನ್ನ ಹೊಸ ಸಂಶೋಧನಾ ಕೇಂದ್ರ ಆರಂಭಿಸಿತು.

2006: ಮರೆಯಾಗಿ ಹೋಗುತ್ತಿರುವ ಸಾಂಪ್ರದಾಯಿಕ `ಎಂಬ್ರಾಯಿಡರಿ ಕಲೆ'ಗೊಂದು ಪುಟ್ಟ ಉದ್ಯಮದ ರೂಪ ಕೊಟ್ಟು ಅಂತಾರಾಷ್ಟ್ರೀಯ ಗಮನ ಸೆಳೆದ ಗುಜರಾತಿನ ಕಛ್ ನ 73ರ ಹರೆಯದ ಗೃಹಿಣಿ ಚಂದಾ ಶ್ರಾಫ್ ಅವರು 1ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ `ರೋಲೆಕ್ಸ್ ಅವಾರ್ಡ್ ಫಾರ್ ಎಂಟರ್ ಪ್ರೈಸ್' ಗೆ ಆಯ್ಕೆಯಾದರು.. ಈಕೆ ಈ ಪ್ರಶಸ್ತಿ ಪಡೆದ ಮೊತ್ತ ಮೊದಲ ಭಾರತೀಯ ಪ್ರಜೆ. 117 ದೇಶಗಳ ಸುಮಾರು 1700 ಅಭ್ಯರ್ಥಿಗಳ ಪೈಕಿ ಪ್ರಶಸ್ತಿಗೆ ಆಯ್ಕೆಯಾದ ಐವರಲ್ಲಿ ಚಂದಾ ಒಬ್ಬರು. ಭುಜ್ ನ ವಾಸಿಯಾಗಿರುವ ಈಕೆ ಕಛ್ ನಲ್ಲಿ ಸೃಜನ್ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಾ ಕಳೆದ 38 ವರ್ಷಗಳಿಂದ ಗ್ರಾಮೀಣ ಮಹಿಳೆಯರಿಗೆ ಕಲಿಸುವ ಮುಖಾಂತರ ಅಳಿದು ಹೋಗುತ್ತಿರುವ ಎಂಬ್ರಾಯಿಡರಿ ಕಲೆಗಳನ್ನು ಉಳಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. `ಎಂಬ್ರಾಯಿಡರಿ ಉತ್ಪನ್ನ ತಯಾರಿ' ಬಗ್ಗೆ ವಿಶೇಷ ಡಿಪ್ಲೋಮಾ ಪದವಿ ಪಡೆದಿರುವ ಚಂದಾ ಶ್ರಾಫ್ ಅವರು ಎಂಬ್ರಾಯಿಡರಿ ಉತ್ಪನ್ನಗಳ ತಯಾರಿಗೆ ಉದ್ಯಮದ ರೂಪ ಕೊಡುವುದಕ್ಕಾಗಿ ಗ್ರಾಮೀಣ ಮಹಿಳೆಯರನ್ನೊಳಗೊಂಡ ಪುಟ್ಟ ಸ್ವಸಹಾಯ ಗುಂಪುಗಳನ್ನು ಹುಟ್ಟು ಹಾಕಿ, ಉತ್ಪನ್ನಗಳನ್ನು ವಿವಿಧೆಡೆಗೆ ಕೊಂಡೊಯ್ದು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಿದ್ದಾರೆ. ಈಗ ಈ ಉತ್ಪನ್ನಗಳು ದೇಶ ವಿದೇಶಗಳಲ್ಲೂ ಪ್ರಸಿದ್ಧಿಗೆ ಬರುತ್ತಿದ್ದು, ಕಛ್ ಸುತ್ತಮುತ್ತಲಿನ 120 ಗ್ರಾಮದ ಸುಮಾರು 22,000 ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗಿದೆ.

2006: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಇಂಡೋನೇಷ್ಯದ ಉತ್ತರ ಸುಮಾತ್ರ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5ರಷ್ಟು ಇತ್ತು.

2006: ಬೆಂಗಳೂರಿನಲ್ಲಿ ಪಾಸುದಾರರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರಿನ 10 ಮಾರ್ಗಗಳಲ್ಲಿ ಹಸಿರು ಬಣ್ಣದ `ಪಾಸುದಾರರ ಬಸ್ಸು ಸೇವೆ' ಆರಂಭಿಸಿತು.

2006: ಭಾರತೀಯ ಗೋವು ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ಸಲುವಾಗಿ 2007ರ ಏಪ್ರಿಲ್ 21ರಿಂದ 29ರವರೆಗೆ ಹೊಸನಗರದಲ್ಲಿ ಒಂಬತ್ತು ದಿನಗಳ ವಿಶ್ವ ಗೋ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಬೆಂಗಳೂರಿನಲ್ಲಿ ಪ್ರಕಟಿಸಿದರು. ಗೋವು ಎಂದರೆ ಬರೀ ಹಾಲು ಮಾತ್ರ ಅಲ್ಲ, ಗೋವಿನ ಮೂತ್ರಕ್ಕೆ 80 ರೂಪಾಯಿ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ಗೋವುಗಳು ಹೇಗೆ ಆರ್ಥಿಕವಾಗಿ ಲಾಭ ತರಬಲ್ಲವು ಎಂಬ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಮತ್ತು ಗೋವಿನಿಂದ ಲಭಿಸುವ ವಿವಿಧ ಉತ್ಪನ್ನಗಳ ಬಗ್ಗೆ ಸಂಶೋಧನಾ ಮಾಹಿತಿ ಸಂಗ್ರಹಿಸುವ ಸಲುವಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

1955: ಹಿಚಿ. ಬೋರಲಿಂಗಯ್ಯ ಜನನ.

1950: ಸಾಹಿತಿ ಪರಿಮಳಾಬಾಯಿ ಜನನ.

1949: ಸಾಹಿತಿ ಭಾಷ್ಯಂ ತನುಜೆ ಜನನ.

1944: ಅಮೆರಿಕದ ಮೂರನೇ ಮತ್ತು ಏಳನೇ ನೌಕಾಪಡೆಗಳು ದ್ವಿತೀಯ ಜಾಗತಿಕ ಸಮರಕಾಲದಲ್ಲಿ ನಡೆದ ಗಲ್ಫ್ ಯುದ್ಧದಲ್ಲಿ ಜಪಾನಿನ ಮುಖ್ಯ ನೌಕಾಪಡೆಯನ್ನು ಸೋಲಿಸಿದವು. ಇದರೊಂದಿಗೆ ಜಪಾನಿನ ಸಮುದ್ರ ಶಕ್ತಿ ಪತನಗೊಂಡಿತು.

1943: ಲೇಖಕ ಪ್ರಕಾಶಕ ಅನಂತರಾಮು ಅವರು ಎನ್. ಎಸ್. ಕೃಷ್ಣಪ್ಪ- ಸುಬ್ಬಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದಲ್ಲಿ ಜನಿಸಿದರು.

1930: ಸಾಹಿತಿ ಡಿ.ಎಂ. ನಂಜುಂಡಪ್ಪ ಜನನ.

1883: ಭಾರತದ ಖ್ಯಾತ ಭೂಗರ್ಭ ತಜ್ಞ ದಾರಾಶಾ ನೊಶೆರ್ ವಾನ್ ವಾಡಿಯಾ (1883-1969) ಜನ್ಮದಿನ. 1957ರಲ್ಲಿ ಇವರು ಫೆಲೋ ಆಫ್ ರಾಯಲ್ ಸೊಸೈಟಿ ಗೌರವಕ್ಕೆ ಆಯ್ಕೆಯಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1881: ಪಾಬ್ಲೊ ಪಿಕಾಸೊ (1881-1973) ಜನ್ಮದಿನ. ಸ್ಪೇನಿನ ವರ್ಣಚಿತ್ರಗಾರ, ಶಿಲ್ಪಿ, ರಂಗಸ್ಥಳ ವಿನ್ಯಾಸಕಾರನಾದ ಈತ 20ನೇ ಶತಮಾನದ ಪ್ರಮುಖ ಕಲಾವಿದರಲ್ಲಿ ಒಬ್ಬನೆಂದು ಖ್ಯಾತಿ ಗಳಿಸಿದ ವ್ಯಕ್ತಿ.

1839: ಬ್ರಾಡ್ ಶಾ ಅವರ `ರೈಲ್ವೇ ಕಂಪಾನಿಯನ್' ಮೊತ್ತ ಮೊದಲ ಪ್ರಕಟಿತ ರೈಲ್ವೇ ಟೈಮ್-ಟೇಬಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದು ಮ್ಯಾಂಚೆಸ್ಟರಿನಲ್ಲಿ ಪ್ರಕಟಗೊಂಡಿತು.

1825: ಎರೀ ಕಾಲುವೆ ಸಂಚಾರಕ್ಕೆ ಮುಕ್ತವಾಯಿತು. ಅದು ನ್ಯೂಯಾರ್ಕಿನ ಗ್ರೇಟ್ ಲೇಕ್ಸ್ ನ್ನು ಹಡ್ಸನ್ ನದಿಯ ಮುಖಾಂತರವಾಗಿ ಸಂಪರ್ಕಿಸಿತು. ಅದರ ಉದ್ದ 365 ಮೈಲುಗಳು, ಅಗಲ 40 ಅಡಿಗಳು ಮತ್ತು ಆಳ 1.2 ಮೀಟರುಗಳು.

1605: ಮೊಘಲ್ ಚಕ್ರವರ್ತಿಗಳ ಪೈಕಿ ಅತ್ಯಂತ ಹೆಚ್ಚು ಖ್ಯಾತಿ ಪಡೆದ ಅಕ್ಬರ್ ಆಗ್ರಾದಲ್ಲಿ ತನ್ನ 63ನೇ ವಯಸ್ಸಿನಲ್ಲಿ ಮೃತನಾದ. ಆಗ್ರಾ ಬಳಿಯ ಸಿಕಂದ್ರಾದಲ್ಲಿ ಆತನ ಅಂತ್ಯಕ್ರಿಯೆ ನೆರವೇರಿಸಲಾಯಿತು. 1691ರಲ್ಲಿ ಜಾಟರು ಸಮಾಧಿಯನ್ನು ಹಾನಿ ಪಡಿಸಿ ಎಲುಬುಗಳನ್ನು ಸುಟ್ಟು ಹಾಕಿದರು.

Tuesday, October 27, 2009

ಇಂದಿನ ಇತಿಹಾಸ History Today ಅಕ್ಟೋಬರ್ 24

ಇಂದಿನ ಇತಿಹಾಸ

ಅಕ್ಟೋಬರ್ 24

ವಿಶ್ವದ ಅತ್ಯಂತ ಪರಿಣಾಮಕಾರಿ ಸಿಲಿಕಾನ್ ಸೋಲಾರ್ ಸೆಲ್ ಗಳನ್ನು ಅಭಿವೃದ್ಧಿ ಪಡಿಸಿರುವುದಾಗಿ ಆಸ್ಟ್ರೇಲಿಯಾದ ವಿಜ್ಞಾನಿಗಳು ಸಿಡ್ನಿಯಲ್ಲಿ ಪ್ರಕಟಿಸಿದರು. ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಫೊಟೋವೊಲ್ಟಾಯಿಕ್ ಸೆಂಟರ್ ಆಫ್ ಎಕ್ಸಲೆನ್ಸ್ ವಿಶ್ವದಾಖಲೆಯ ಶೇ 24.7ರಷ್ಟು ಪರಿಣಾಮಕಾರಿಯಾದ ಈ ಸಿಲಿಕಾನ್ ಸೋಲಾರ್ ಸೆಲ್ ಹೊಂದಿದೆ.

ಇಂದು ವಿಶ್ವಸಂಸ್ಥೆ ದಿನ. 1947ರಲ್ಲಿ ವಿಶ್ವ ಸಂಸ್ಥೆಯು ಅಕ್ಟೋಬರ್ 24ರ ದಿನವನ್ನು ವಿಶ್ವಸಂಸ್ಥೆ ದಿನವಾಗಿ ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು 1945ರಲ್ಲಿ ಈ ದಿನ ವಿಶ್ವಸಂಸ್ಥೆ ಔಪಚಾರಿಕವಾಗಿ ಅಸ್ತಿತ್ವಕ್ಕೆ ಬಂದದ್ದರಿಂದ ಈ ದಿನವನ್ನು ವಿಶ್ವಸಂಸ್ಥೆ ದಿನವಾಗಿ ಆಚರಿಸಲು ಆಯ್ಕೆ ಮಾಡಲಾಯಿತು. (ವಿಶ್ವಸಂಸ್ಥೆ ಚಾರ್ಟರನ್ನು 1945ರ ಜೂನ್ 26ರಂದು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.)

2008:ದೀಪಾವಳಿ ಬೆಳಕಿನ ಪ್ರಭಾವಳಿಯಲ್ಲಿ ಮೀಯಬೇಕಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಹಬ್ಬದ ಮುಂಚೆಯೇ ವಾರಾಂತ್ಯ 1071 ಅಂಶಗಳ ಭಾರಿ ಕುಸಿತ ದಾಖಲಿಸಿ ಬೆಳಕಿನ ಸುಳಿವೇ ಕಾಣದಂತೆ ಮಾಡಿತು. 9000ಕ್ಕೂ ಕೆಳಗೆ ಕುಸಿದ ಸೆನ್ಸೆಕ್ಸ್ 8,701ರಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ (ಆರ್ ಬಿ ಐ) ಪ್ರಕಟಿಸಿದ ಸಾಲನೀತಿಯಲ್ಲಿ, ಮುಖ್ಯ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿ ಕಾಯ್ದುಕೊಂಡದ್ದು ಷೇರುಪೇಟೆಯನ್ನು ಪಾತಾಳಕ್ಕೆ ತಳ್ಳಿತು.

2008: ರಷ್ಯಾದ ಗಗನಯಾನಿಗಳು ಮತ್ತು ಅಮೆರಿಕದ ಬಾಹ್ಯಾಕಾಶ ಪ್ರವಾಸಿಯನ್ನು ಒಳಗೊಂಡ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆ ಭೂಮಿಗೆ ಸುರಕ್ಷಿತವಾಗಿ ಹಿಂತಿರುಗಿತು. ನಾಸಾ ಖಗೋಳ ವಿಜ್ಞಾನಿ ಓವನ್ ಗಾರಿಯಟ್ ಅವರ ಮಗ ಹಾಗೂ ಕಂಪ್ಯೂಟರ್ ಗೇಮ್ ಗಳ ವಿನ್ಯಾಸಕ ರಿಚರ್ಡ್ ಗಾರಿಯಟ್ (ತಮ್ಮ ತಂದೆಯ ಹಾದಿ ತುಳಿಯಲು 3 ಕೋಟಿ ಡಾಲರುಗಳನ್ನು ನೀಡಿದ್ದ) ಕಝಕ್ ಬಯಲು ಪ್ರದೇಶದಲ್ಲಿ ಜಿಎಂಟಿ 3.30ರ ಸಮಯಕ್ಕೆ ಸುರಕ್ಷಿತವಾಗಿ ಇಳಿದರು.

2008: ಹಿಂದೂ ಬಲಪಂಥೀಯ ಸಂಘಟನೆಯೊಂದಿಗೆ ಸಂಬಂಧ ಹೊಂದಿ, ಮಾಲೆಗಾಂವ್ ಮತ್ತು ಮೊಡಸಾ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ಯುವ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಮತ್ತು ಇನ್ನೂ ಇಬ್ಬರನ್ನು ಮುಂಬೈ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬಂಧಿಸಿದರು. ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಶಾಂಲಾಲ್ ಸಾಹು ಮತ್ತು ಶಿವನಾರಾಯಣ ಸಿಂಗ್ ಅವರನ್ನು ಪೊಲೀಸರು ನಾಸಿಕ್ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ನ್ಯಾಯಾಧೀಶರು ಆಪಾದಿತರನ್ನು ನವೆಂಬರ್ ಮೂರರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದರು.

2008: ಉತ್ತರ ಚೀನಾದ ಹೆಬಿ ಪ್ರಾಂತ್ಯದಲ್ಲಿ ಸುಮಾರು 3 ತಿಂಗಳ ಕಾಲ ಗುಟ್ಟಾಗಿಡಲಾಗಿದ್ದ ಕಲ್ಲಿದ್ದಲು ಗಣಿ ದುರಂತದಲ್ಲಿ 35 ಜನರು ಪ್ರಾಣ ಕಳೆದುಕೊಂಡದ್ದು ದೃಢಪಟ್ಟಿತು. ಲಿಜಿಯಾವ ಎಂಬ ಗಣಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸ್ಫೋಟಕಗಳು ಜುಲೈ 14ರಂದು ಸ್ಫೋಟಿಸಿ ಒಬ್ಬ ರಕ್ಷಣಾ ಕಾರ್ಯಕರ್ತ ಮತ್ತು 34 ಗಣಿ ಕಾಮರ್ಿಕರು ಮೃತರಾಗಿದ್ದರು. ಆದರೆ ವಿಷಯ ಹೊರಬೀಳದಂತೆ ಎಚ್ಚರ ವಹಿಸಿದ ಗಣಿ ಮಾಲೀಕರು ಮೃತರ ಕುಟುಂಬಗಳಿಗೆ ಪರಿಹಾರ ನೀಡಿ ಹೊರಗೆಲ್ಲೂ ಹೇಳದಂತೆ ಬೆದರಿಕೆ ಒಡ್ಡ್ದಿದರು. ಗ್ರಾಮದ ಕೆಲ ಮುಖ್ಯಸ್ಥರು , ಪೊಲೀಸರು ಇದರ್ಲಲಿ ಶಾಮೀಲಾಗಿದ್ದರು. ಸಂತ್ರಸ್ತರು ಅಂತರ್ಜಾಲದ ಮೂಲಕ ವಿಷಯವನ್ನು ಬಹಿರಂಗಪಡಿಸಿ ನ್ಯಾಯಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದಾಗ ಅಕ್ಟೋಬರ್ 7ರಂದು ಈ ಸ್ಫೋಟಕ ಸುದ್ದಿ ಬಹಿರಂಗಗೊಂಡಿತ್ತು.

2008: ವಿಶ್ವದ ಅತ್ಯಂತ ಪರಿಣಾಮಕಾರಿ ಸಿಲಿಕಾನ್ ಸೋಲಾರ್ ಸೆಲ್ ಗಳನ್ನು ಅಭಿವೃದ್ಧಿ ಪಡಿಸಿರುವುದಾಗಿ ಆಸ್ಟ್ರೇಲಿಯಾದ ವಿಜ್ಞಾನಿಗಳು ಸಿಡ್ನಿಯಲ್ಲಿ ಪ್ರಕಟಿಸಿದರು. ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಫೊಟೋವೊಲ್ಟಾಯಿಕ್ ಸೆಂಟರ್ ಆಫ್ ಎಕ್ಸಲೆನ್ಸ್ ವಿಶ್ವದಾಖಲೆಯ ಶೇ 24.7ರಷ್ಟು ಪರಿಣಾಮಕಾರಿಯಾದ ಈ ಸಿಲಿಕಾನ್ ಸೋಲಾರ್ ಸೆಲ್ ಹೊಂದಿದೆ. ಸೂರ್ಯನ ಬೆಳಕನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವುದು ಆರು ನೂತನ ವಿಶ್ವ ದಾಖಲೆಗಳಲ್ಲಿ ಒಂದಾಗಿದ್ದು ಸಿಲಿಕಾನ್ ಸೋಲಾರ್ ತಾಂತ್ರಿಕತೆ ವಿಶ್ವವಿದ್ಯಾಲಯದ ದಾಖಲೆಯಾಗಿದೆ.

2007: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಕ್ಟೋಬರ್ 20ರಂದು ಹೊತ್ತಿಕೊಂಡ ಕಾಳ್ಗಿಚ್ಚಿನ ಜ್ವಾಲೆಗಳನ್ನು ಹತೋಟಿಗೆ ತರಲು ಸ್ಥಳೀಯ ಆಡಳಿತ ನಾಲ್ಕನೇ ದಿನವೂ ವಿಫಲವಾಗಿ, 5 ಲಕ್ಷ ಜನ ಸಾನ್ ಡಿಯಾಗೊ ಪ್ರಾಂತ್ಯವನ್ನು ತೊರೆದರು. ಕಾಳ್ಗಿಚ್ಚು ಉಗ್ರ ಸ್ವರೂಪ ತಾಳಿ, 1,220 ಚದರ ಕಿ.ಮೀ. ದೂರಕ್ಕೆ ವ್ಯಾಪಿಸಿತು. ಅಗ್ನಿ ಪ್ರತಾಪ ಸಾನ್ ಡಿಯಾಗೊ ಪ್ರದೇಶದಲ್ಲಿ ಹೆಚ್ಚಾಗಿತ್ತು. ಪರ್ವತದ ಮೇಲಿರುವ ಸಾನ್ ಡಿಯಾಗೊ ಪಟ್ಟಣವನ್ನು ಅಗ್ನಿಯ ಜ್ವಾಲೆಗಳಿಂದ ರಕ್ಷಿಸಲು 10,000ದಷ್ಟ ಅಗ್ನಿಶಾಮಕ ಸಿಬ್ಬಂದಿ ಅಹೋರಾತ್ರಿ ಶ್ರಮಿಸಿದರು. ಕಾಳ್ಗಿಚ್ಚಿಗೆ ಐವರು ಬಲಿಯಾಗಿ 36 ಜನ ಗಾಯಗೊಂಡರು. 1500ಕ್ಕೂ ಹೆಚ್ಚು ಮನೆಗಳು, ಕಟ್ಟಡಗಳು ಬೆಂಕಿಗೆ ಆಹುತಿಯಾದವು. ರಸ್ತೆಯ ಮೇಲೆಲ್ಲ ಬೂದಿ, ಪಟ್ಟಣದ ತುಂಬೆಲ್ಲ ಕಪ್ಪು ಹೊಗೆ ಆವರಿಸಿತು. ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜನರನ್ನು ಸ್ಥಳಾಂತರಗೊಳಿಸಿದ ಮೊದಲ ಘಟನೆ ಇದು. 2005ರ ಕತ್ರಿನಾ ಚಂಡಮಾರುತದ ನಂತರ ಅಮೆರಿಕದಲ್ಲಿ ಸಂಭವಿಸಿದ ಬಹುದೊಡ್ಡ ನೈಸರ್ಗಿಕ ವಿಕೋಪ ಇದು. ಕತ್ರಿನಾ ಚಂಡಮಾರುತ ಅಪಾರ ಪ್ರಮಾಣದ ನಾಶಕ್ಕೆ ಕಾರಣವಾಗಿತ್ತು.

2007: ಬಾಬರಿ ಮಸೀದಿ ಧ್ವಂಸ ನಂತರ ದೇಶದ ವಿವಿಧೆಡೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕಾನ್ಪುರದ ಸ್ಥಳೀಯ ನ್ಯಾಯಾಲಯವೊಂದು 15 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಶಿಕ್ಷೆಗೆ ಗುರಿಯಾದ ಆರೋಪಿಗಳು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸವಾದ ಮೇಲೆ ನಡೆದ ಕೋಮು ಗಲಭೆಯಲ್ಲಿ ಭಾಗವಹಿಸಿ ಹತ್ಯಾಕಾಂಡ ಮಾಡಿದ್ದರು ಎನ್ನಲಾಗಿತ್ತು. ಈ ಘಟನೆಯಲ್ಲಿ 11 ಮಂದಿ ಮೃತರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್. ಎಂ. ಹಾಸೆಬ್ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

2007: ಭಾರತೀಯ ಜನತಾ ಪಕ್ಷದ ಮುಖಂಡ ಎಲ್. ಕೆ .ಅಡ್ವಾಣಿ ಅವರು 1998ರ ಫೆಬ್ರುವರಿ 14ರಂದು ಕೊಯಮತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಅಲ್-ಉಮ್ಮಾ ಸಂಘಟನೆಯ ಅಧ್ಯಕ್ಷ ಎಸ್. ಎ. ಬಾಷಾ ಮತ್ತು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ ಸೇರಿದಂತೆ 31 ಮಂದಿಗೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಅಡ್ವಾಣಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿ ಈ ಸರಣಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಸ್ಫೋಟದಲ್ಲಿ 58 ಜನ ಮೃತರಾಗಿ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸ್ಫೋಟ ಸಲುವಾಗಿ ಕ್ರಿಮಿನಲ್ ಸಂಚು ರೂಪಿಸಿದ್ದಕ್ಕಾಗಿ ಬಾಷಾ ಮತ್ತು ಅನ್ಸಾರಿ ಅವರಿಗೆ ಶಿಕ್ಷೆ ವಿಧಿಸಲಾಯಿತು. ನ್ಯಾಯಾಧೀಶ ಕೆ. ಉತ್ತರಾಪತಿ ಅವರು ಈ ಪ್ರಕರಣದ 70 ಜನ ಅಪರಾಧಿಗಳಲ್ಲಿ 35 ಮಂದಿಗೆ ಶಿಕ್ಷೆ ಪ್ರಕಟಿಸಿದರು.

2007: ಕವಯಿತ್ರಿ ಮಧುಮಿತಾ ಶುಕ್ಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸಮಾಜವಾದಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಅಮರಮಣಿ ತ್ರಿಪಾಠಿ, ಅವರ ಪತ್ನಿ ಮಧುಮಣಿ ಹಾಗೂ ಇತರ ಇಬ್ಬರಿಗೆ ಡೆಹ್ರಾಡೂನಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಅಮರಮಣಿ ಸೋದರ ಸಂಬಂಧಿ ರೋಹಿತ್ ಚತುರ್ವೇದಿ ಹಾಗೂ ಸುಪಾರಿ ಹಂತಕ ಸಂತೋಷ ರೈ ಅವರು ಕೂಡಾ ಜೀವಾವಧಿ ಶಿಕ್ಷೆಗೀಡಾದರು. ಸಾಕ್ಷ್ಯಾಧಾರದ ಕೊರತೆಯಿಂದ ರೈ ಸಹಚರ ರಾಕೇಶ್ ಪಾಂಡೆಯನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ಸಮಾಜವಾದಿ ಪಕ್ಷದ ಪ್ರಭಾವಿ ಸಚಿವರಾಗಿದ್ದ ಅಮರಮಣಿ ತ್ರಿಪಾಠಿ ಅವರು ಕವಯಿತ್ರಿ ಮಧುಮಿತಾ ಅವರೊಂದಿಗೆ ಸಂಬಂಧವಿರಿಸಿಕೊಂಡದ್ದಕ್ಕೆ ತ್ರಿಪಾಠಿ ಅವರ ಪತ್ನಿ ಮಧುಮಣಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕವಯಿತ್ರಿಯ ಹತ್ಯೆಗಾಗಿ ಸಂತೋಷ ರೈಗೆ ಅವರು ಸುಪಾರಿ ನೀಡಿದ್ದರು. ಏಳು ತಿಂಗಳ ಗರ್ಭಿಣಿ ಮಧುಮಿತಾ ಶವ ನಂತರ 2003ರ ಮೇ 9ರಂದು ಲಖನೌ ನಿವಾಸದಲ್ಲಿ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ ಆರೋಪಿಗಳಿಗೆ ಮರಣ ದಂಡನೆ ವಿಧಿಸುವಂತೆ ವಾದಿಸಿತ್ತು. ಆದರೆ ಪ್ರಕರಣ ತೀರ ಅಪರೂಪದ್ದಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಎಲ್ಲ ನಾಲ್ವರೂ ಆಪಾದಿತರಿಗೆ ತಲಾ ರೂ 50,000 ದಂಡವನ್ನೂ ವಿಧಿಸಲಾಯಿತು.

2007: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಐದು ಪ್ರಭೇದದ ಕೀಟಗಳು ಸೇರಿದಂತೆ ಒಂದು ಸಿಹಿ ನೀರಿನ `ಕ್ಯಾಟ್ ಫಿಷ್' ಹೊಸದಾಗಿ ಪತ್ತೆಯಾಗಿವೆ ಎಂದು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷಾ ಸಂಸ್ಥೆ ಪ್ರಕಟಿಸಿತು. ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಈ ಪ್ರಭೇದಗಳು ಬೆಳಕಿಗೆ ಬಂದವು. ಪಶ್ಚಿಮ ಘಟ್ಟದ ಪರ್ವತಗಳ ನಡುವೆ ಹರಿಯುವ ನದಿ ಹಾಗೂ ಅವುಗಳ ತಪ್ಪಲಿನಲ್ಲಿ ಈ ಹೊಸ ಪ್ರಭೇದಗಳು ಕಂಡು ಬಂದವು. ಉದ್ಯಾನದ ಮುಡುಬಾ ಪ್ರದೇಶದಲ್ಲಿ ಹರಿಯುವ ತುಂಗಾ ನದಿಯಲ್ಲಿ ಹೊಸ ಬಗೆಯ `ಕ್ಯಾಟ್ ಫಿಷ್' ದೊರೆತಿದ್ದು, ಇದಕ್ಕೆ `ಗ್ಲೈಪಟೋಥ್ರಾಕ್ಸ್ ಕುದುರೆಮುಖ್ ಜೆನ್ಸಿಸ್' ಎಂದು ನಾಮಕರಣ ಮಾಡಲಾಗಿದೆ ಎಂದು ಭಾರತ ಪ್ರಾಣಿಶಾಸ್ತ್ರ ಸಮೀಕ್ಷಾ ಸಂಸ್ಥೆಯ ನಿರ್ದೇಶಕ ಡಾ. ರಾಮಕೃಷ್ಣ ತಿಳಿಸಿದರು. ರಾಜ್ಯ ಅರಣ್ಯ ಇಲಾಖೆ ಬೆಂಗಳೂರಿನ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ `ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಬಿಳಿಗಿರಿ ರಂಗನಬೆಟ್ಟದಲ್ಲಿರುವ ವನ್ಯಜೀವಿಗಳ' ಕುರಿತ ಸಮೀಕ್ಷಾ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ವಿವರ ಬಹಿರಂಗಪಡಿಸಿದರು. ಹೊಸ ಸಂಶೋಧನೆಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿ ಪ್ರಭೇದದ ಸಂಖ್ಯೆ 522ಕ್ಕೆ ಏರಿದಂತಾಯಿತು.

2007: ಬಾಹ್ಯಾಕಾಶದಲ್ಲಿ ಗರ್ಭ ಧರಿಸಿದ ಮೊತ್ತಮೊದಲ ಜಿರಲೆಯೊಂದು ಮರಿಗಳನ್ನು ಹಾಕಿದ್ದು ರಷ್ಯಾ ವಿಜ್ಞಾನಿಗಳಲ್ಲಿ ಸಂಭ್ರಮವನ್ನು ಉಂಟು ಮಾಡಿತು. 2007ರ ಸೆಪ್ಟೆಂಬರ್ 14ರಂದು ಬಾಹ್ಯಾಕಾಶಕ್ಕೆ ಉಡಾಯಿಸಿದ್ದ ಫೊಟಾನ್-ಎಂ ಜೈವಿಕ ಉಪಗ್ರಹದಲ್ಲಿ ಜಿರಲೆಗಳನ್ನು ಕಳುಹಿಸಲಾಗಿತ್ತು. ಈ ಉಪಗ್ರಹ ಸೆಪ್ಟೆಂಬರ್ 26ರಂದು ಭೂಮಿಗೆ ಮರಳಿತ್ತು. ಬಾಹ್ಯಾಕಾಶದ ಗುರುತ್ವರಹಿತ ಸ್ಥಿತಿಯಲ್ಲಿ ಗರ್ಭ ಧರಿಸಿದ 33 ಜಿರಲೆಗಳು ನಮ್ಮ ಬಳಿ ಇವೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಅಟ್ಯಾಕ್ಶಿನ್ ಹೇಳಿದರು. ಹೊಸದಾಗಿ ಹುಟ್ಟಿದ ಜಿರಲೆ ಮರಿಗಳು ಚೆನ್ನಾಗಿ ತಿನ್ನುತ್ತಿವೆ. ಆದರೆ, ಗುರುತ್ವರಹಿತ ಸ್ಥಿತಿ ಅವುಗಳ ಚರ್ಮದ ಮೇಲೆ ಪರಿಣಾಮ ಬೀರಿದಂತೆ ಕಾಣುತ್ತಿದ್ದು ಅವುಗಳ ಹೊರಮೈ ಬಹುಬೇಗ ಕಪ್ಪಗಾಗಿದೆ ಎಂದು ಅವರು ತಿಳಿಸಿದರು. ಜಿರಲೆ ಮರಿಗಳು ಹುಟ್ಟಿದಾಗ ತಿಳಿ ವರ್ಣದಲ್ಲಿದ್ದು, ಕ್ರಮೇಣ ದಟ್ಟ ಬಣ್ಣಕ್ಕೆ ತಿರುಗುತ್ತವೆ.

2007: ದೇಶದ ಬಾಹ್ಯಾಕಾಶ ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ ಚೀನಾವು, ಚಂದ್ರ ಕಕ್ಷೆಯಲ್ಲಿ ಸುತ್ತುವ `ಚಾಂಗ್-1' ಉಪಗ್ರಹವನ್ನು ಕ್ಸಿಚಾಂಗ್ ಉಡಾವಣಾ ಕೇಂದ್ರದಿಂದ ಸ್ಥಳೀಯ ಕಾಲಮಾನ ಸಂಜೆ 6.05 ಗಂಟೆಗೆ ಗಗನಕ್ಕೆ ಹಾರಿಸಿತು. ಉಪಗ್ರಹವನ್ನು 'ಲಾಂಗ್ ಮಾರ್ಚ್ 3ಎ' ವಾಹಕದ ರಾಕೆಟ್ ಮೂಲಕ ಹಾರಿ ಬಿಡಲಾಯಿತು. ಚೀನಾದ ಪೌರಾಣಿಕ ದೇವತೆಯಾದ `ಚಾಂಗ್' ಹೆಸರನ್ನು ಉಪಗ್ರಹಕ್ಕೆ ನೀಡಲಾಗಿದೆ.

2007: ವಿವಾದಿತ ಸೇತು ಸಮುದ್ರಂ ಯೋಜನೆಯನ್ನು ತಜ್ಞರ ಸಮಿತಿ ಪುನರ್ರಚಿಸಿ, ಪರಿಶೀಲಿಸುವಂತೆ ಕೋರಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. `ಸಮಿತಿಯಲ್ಲಿ ಕೋರ್ಟ್ ಶಾಮೀಲಾಗಲು ಸಾಧ್ಯವಿಲ್ಲ. ತಜ್ಞರ ಸಮಿತಿಯನ್ನು ಕೋರ್ಟ್ ನಿಯೋಜಿಸಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿತು. `ಸೇತು ಸಮುದ್ರಂ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಸಮಿತಿ ನೀಡುತ್ತಿಲ್ಲ' ಎಂದು ಆರೋಪಿಸಿ ಸ್ವಾಮಿ ಅರ್ಜಿ ಸಲ್ಲಿಸಿದ್ದರು.

2007: ಲಂಡನ್ನಿನಲ್ಲಿ ನಡೆದ ಹರಾಜಿನಲ್ಲಿ 13ನೇ ಶತಮಾನದ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ವಿಶ್ವ ದಾಖಲೆ ಬೆಲೆಗೆ (2,320,917 ಅಮೆರಿಕನ್ ಡಾಲರ್) ಮಾರಾಟವಾಯಿತು. ಇಸ್ಲಾಮ್ ಮತ್ತು ಭಾರತೀಯ ಕಲೆಗಳ ಹರಾಜು ನಡೆಯುತ್ತಿದ್ದ ಸಂದರ್ಭದಲ್ಲಿ 250,000 ರಿಂದ 300,000 ಪೌಂಡುಗಳಿಗೆ ಮಾರಾಟವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ನಿರೀಕ್ಷೆ ಮೀರಿದ ಬೆಲೆ ಅದಕ್ಕೆ ಬಂತು. ಇಲ್ಲಿ ಮಾರಾಟವಾದ ಕೃತಿ, ಕಲಾಕೃತಿಗಳಿಂದ 5.9 ದಶಲಕ್ಷ ಪೌಂಡ್ ಸಂಗ್ರಹವಾಯಿತು. ಈ ಕುರಾನನ್ನು ಸಂಪೂರ್ಣವಾಗಿ ಚಿನ್ನದಿಂದ ಬರೆಯಲಾಗಿದ್ದು, ಬೆಳ್ಳಿಯ ಅಕ್ಷರಗಳ ಅಡಿಟಿಪ್ಪಣಿ ಇದೆ. ಈ ಗ್ರಂಥ ಎಲ್ಲಾ ಇಸ್ಲಾಮೀ ಗ್ರಂಥಗಳ ಮಾರಾಟ ಬೆಲೆಯ ದಾಖಲೆಯನ್ನೂ ಮುರಿಯಿತು.

2006: ಅಮೆರಿಕದ ಪ್ರತಿಷ್ಠಿತ ಎನ್ರಾನ್ ಕಂಪನಿಗೆ ವ್ಯಾಪಕ ವಂಚನೆ ಮಾಡಿ, ದಿವಾಳಿಯಾಗಲು ಸಂಚು ರೂಪಿಸಿದ ಆರೋಪದ ಮೇಲೆ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಜೆಫ್ರಿ ಕೆ. ಸಿಲ್ಲಿಂಗ್ ಅವರಿಗೆ ಅವರಿಗೆ ಹ್ಯೂಸ್ಟನ್ನಿನಲ್ಲಿ ನ್ಯಾಯಾಧೀಶ ಸೈಮನ್ ಟಿ. ಲೇಕ್ ಥರ್ಡ್ ಅವರು 24 ವರ್ಷ ಮತ್ತು ನಾಲ್ಕು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿದರು. ಈವರೆಗೆ ಅತಿ ದೀರ್ಘಾವಧಿಯ ಜೈಲುಶಿಕ್ಷೆಗೆ ಒಳಗಾದವರಲ್ಲಿ ವರ್ಲ್ಡ್ಡ್ ಕಾಮ್ ಸಂಸ್ಥೆಯ ಮಾಜಿ ಮುಖ್ಯ ಕಾರ್ಯ ನಿರ್ವಾಹಕ ಬರ್ನಾರ್ಡ್ ಜೆ. ಎಬ್ಬರ್ಸ್ ಅವರು ಪ್ರಮುಖರಾಗಿದ್ದು ಇವರಿಗೆ ಕಳೆದ ವರ್ಷ 11 ಶತಕೋಟಿ ಡಾಲರುಗಳ ವಂಚನೆ ಪ್ರಕರಣದಲ್ಲಿ ಕಂಪನಿ ಸಂಪೂರ್ಣವಾಗಿ ಕುಸಿಯಲು ಕಾರಣರಾದ ಆರೋಪದ ಮೇಲೆ 25 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು. 52 ವರ್ಷದ ಜೆಫ್ರಿ ಸಿಲ್ಲಿಂಗ್ ಅವರಿಗೆ ಇದು ಇನ್ನು ಬಹುತೇಕ ಜೀವಾವಧಿ ಶಿಕ್ಷೆಯಾಗಿದೆ. ಇವರು ಒಂದೇ ದಶಕದಲ್ಲಿ ಸಾಮಾನ್ಯ ಪೈಪ್ ಲೈನ್ ಕಂಪನಿಯಾಗಿದ್ದ ಎನ್ರಾನನ್ನು ವಿದ್ಯುತ್ ವ್ಯಾಪಾರ ಕಂಪನಿಯಾಗಿ ಮಾರ್ಪಡಿಸಿದರು. ಕಂಪೆನಿಯಲ್ಲಿ ಜೆಫ್ರಿ ಸಿಲ್ಲಿಂಗ್ ಅವರು ಅಪಾರ ಸಾಲ ಮತ್ತು ಹಣಕಾಸಿನ ಸೋರಿಕೆಗೆ ಅವಕಾಶ ನೀಡಿದ ಪರಿಣಾಮ ಅಂತಿಮವಾಗಿ ದಿವಾಳಿಯಾಯಿತು. ಒಂದು ಕಾಲದಲ್ಲಿ ದೇಶದ ಏಳನೇ ಅತಿ ದೊಡ್ಡ ಕಂಪೆನಿಯಾಗಿದ್ದ ಎನ್ರಾನಿನಲ್ಲಿ ಷೇರು ಮತ್ತು ನಿವೃತ್ತಿ ಉಳಿತಾಯದಲ್ಲಿ ಶತಕೋಟಿಗಟ್ಟಲೆ ಡಾಲರ್ ತೊಡಗಿಸಿ, ಕಳೆದುಕೊಂಡ ಷೇರುದಾರರು ಅತಿ ಸಂಕಷ್ಟಕ್ಕೆ ಸಿಲುಕಿದರು.

2006: ಖ್ಯಾತ ವೈದ್ಯ ವಿಜ್ಞಾನಿ ಡಾ. ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ (ಡಾ. ಸ.ಜ. ನಾಗಲೋಟಿಮಠ) (66) (20-7-1940ರಿಂದ 24-10-2006) ಅಲ್ಪ ಕಾಲದ ಅಸ್ವಸ್ಥತೆಯ ಬಳಿಕ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನರಗುಂದ ತಾಲ್ಲೂಕು ಶಿರೋಳದ ಜಂಬಯ್ಯ ಅವರ ಮಗನಾಗಿ ಗದುಗಿನಲ್ಲಿ 20-7-1940ರಲ್ಲಿ ಜನಿಸಿದರು. ಬಡತನದಲ್ಲೇ ವಿದ್ಯಾಭ್ಯಾಸ ಮಾಡಿ ಮುಂದಕ್ಕೆ ಬಂದ ನಾಗಲೋಟಿಮಠ ಅಖಿಲ ಭಾರತ ಮೈಕ್ರೊ ಬಯಾಲಜಿ ಮತ್ತು ಪೆಥಾಲಜಿ ಸಂಸ್ಥೆ ಖಜಾಂಚಿ, ಅಂತಾರಾಷ್ಟ್ರೀಯ ಸಂಸ್ಥೆಗಳ ಅಧ್ಯಕ್ಷ, ಹುಬ್ಬಳ್ಳಿ ಕಿಮ್ಸ್ ನ ಪ್ರಥಮ ನಿರ್ದೇಶಕ, ಜೀವನಾಡಿ ವೈದ್ಯಕೀಯ ಮಾಸಿಕದ ಗೌರವ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ಬೆಳಗಾಗಿ ಪೆಥಾಲಜಿ ಮ್ಯೂಸಿಯಂ, ವಿಜಾಪುರ ವೈದ್ಯಕೀಯ ಕಾಲೇಜಿನ ದೇಹದ ಹರಳುಗಳ ಮ್ಯೂಸಿಯಂ ಸ್ಥಾಪಿಸಿದವರು. ಇಂಗ್ಲಿಷಿನಲ್ಲಿ 14, ಕನ್ನಡದಲ್ಲಿ 41 ಗ್ರಂಥಗಳನ್ನು ರಚಿಸಿದ ಅವರು ಡಾ. ಬಿ.ಸಿ. ರಾಯ್, ಹರಿ ಓಂ, ಡಾ. ಬಿ.ಕೆ. ಆಯ್ಕಟ್ ಸೇರಿದಂತೆ 12 ರಾಷ್ಟ್ರೀಯ ಪ್ರಶಸ್ತಿಗಳು, ಚಾಲುಕ್ಯ, ಡಾ. ಹಳಕಟ್ಟಿ, ಕುವೆಂಪು, ಮ್ಲಲಿಕಾರ್ಜುನ ಮನ್ಸೂರ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 22 ಪ್ರಶಸ್ತಿ ಪುರಸ್ಕೃತರು.

2006: ಪಾಲೆಸ್ಟೈನಿ ದಂಗೆಕೋರರಿಂದ ಅಪಹರಣಕ್ಕೊಳಗಾಗಿದ್ದ ಸ್ಪೇನ್ ಮೂಲದ ಎಪಿ ಛಾಯಾಗ್ರಾಹಕ ಎಮಿಲಿಯೊ ಮೊರೆನಟ್ಟಿ (37) ಅವರನ್ನು ಈದಿನ ರಾತ್ರಿ ತಡವಾಗಿ ಬಿಡುಗಡೆ ಮಾಡಲಾಯಿತು. ಎಮಿಲಿಯೊ ಮೊರೆನಟ್ಟಿ ಅವರು ಎಪಿ ಸುದ್ದಿ ಸಂಸ್ಥೆಯ ಜೆರುಸಲೇಂ ಬ್ಯೂರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ದುಷ್ಕರ್ಮಿಗಳು 23-10-2006ರ ರಾತ್ರಿ ಬಂದೂಕು ತೋರಿಸಿ ಬೆದರಿಸಿ ಗಾಜಾದಿಂದ ಅವರನ್ನು ಅಪಹರಿಸಿದ್ದರು.

2000: ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೀತಾರಾಮ್ ಕೇಸರಿ ನಿಧನ.

1984: ಭಾರತದ ಮೊತ್ತ ಮೊದಲ ಭೂಗತ ಸಮೂಹ ಕ್ಷಿಪ್ರ ಸಾರಿಗೆ ವ್ಯವಸ್ಥೆ `ದಿ ಮೆಟ್ರೋ' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಉದ್ಘಾಟನೆಗೊಂಡಿತು. ಎಸ್ ಪ್ಲನೇಡಿನಿಂದ ಭವಾನಿಪುರದವರೆಗಿನ 3.4 ಕಿ.ಮೀ. ವ್ಯಾಪ್ತಿಯಲ್ಲಿ ಅದು ಭಾಗಶಃ ಸೇವೆ ಒದಗಿಸಿತು. ಡಮ್ ಡಮ್ಮಿನಿಂದ ಟೋಲಿಗಂಜ್ ವರೆಗಿನ 16.45 ಕಿ.ಮೀ. ದೂರದ ಪೂರ್ಣಮಾರ್ಗವು ಹಂತ ಹಂತಗಳಲ್ಲಿ 1995ರ ಸೆಪ್ಟೆಂಬರ್ 27ರ ವೇಳೆಗೆ ಪೂರ್ಣಗೊಂಡಿತು.

1968: ಸಾಹಿತಿ ಡಾ. ವಿನಯಾ ಜನನ.

1964: ಉತ್ತರ ರೊಡೇಸಿಯಾವು `ರಿಪಬ್ಲಿಕ್ ಆಫ್ ಝಾಂಬಿಯಾ' ಆಗಿ ಪರಿವರ್ತನೆಗೊಂಡಿತು. ಕೆನ್ನೆತ್ ಕೌಂಡಾ ಅದರ ಪ್ರಥಮ ಅಧ್ಯಕ್ಷರಾದರು.

1956: ಭಾರತ ಸರ್ಕಾರದ ಅಧಿಕೃತ ಕಾರ್ಯಗಳಿಗಾಗಿ ಈಗ ಅನುಸರಿಸುತ್ತಿರುವ ಗ್ರೆಗೋರಿಯನ್ ಪಂಚಾಂಗದ ಜೊತೆಗೆ ಶಾಲಿವಾಹನ ಶಕೆಯಂತೆ ಭಾರತೀಯ ಪಂಚಾಂಗವನ್ನೂ 1957ರ ಮಾರ್ಚ್ 20ರಿಂದ (ಸ್ರತ್ರ ಪ್ರಥಮ ಶಾಲಿವಾಹನ ಶಕೆ 1879) ಅಧಿಕೃತ ಕಾರ್ಯಗಳಿಗಾಗಿ ಅನುಸರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿತು..

1951: ಸಾಹಿತಿ ಯು.ವಿ. ತಾರಿಣಿರಾವ್ ಜನನ.

1949: `ಅಭಿಯಾನ' ಪ್ರತಿಷ್ಠಾನದ ಮೂಲಕ ಮಹಿಳೆಯರ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಿದ ಕಥೆ, ಕಾದಂಬರಿಗಾರ್ತಿ ಶಾರದಾ ಭಟ್ ಅವರು ಕೆ. ವಿಠಲ ಭಟ್- ಕಾವೇರಿಯಮ್ಮ ದಂಪತಿಯ ಮಗಳಾಗಿ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ ಜನಿಸಿದರು.

1939: ಡ್ಯುಪಾಂಟ್'್ಸ ವಿಲ್ಲ್ಮಿಂಗ್ ಟನ್ನಿನ ದೆಲವಾರೆ ನೈಲಾನ್ ಫ್ಯಾಕ್ಟರಿಯ್ಲಲಿ ನೌಕರರಿಗೆ ನೈಲಾನ್ ದಾಸ್ತಾನು ಮಾರಾಟ ಮಾಡುವ ಮೂಲಕ ಅಮೆರಿಕದಲ್ಲಿ ನೈಲಾನ್ ಮಾರಾಟ ಆರಂಭವಾಯಿತು. ಡ್ಯುಪಾಂಟ್ ತನ್ನ ನೈಲಾನ್ ಉತ್ಪನ್ನವನ್ನು ವಾಣಿಜ್ಯೀಕರಣ ಮಾಡುವ ಮೂಲಕ 1938ರಲ್ಲಿ ಲವಣ ಸಂಪನ್ಮೂಲಗಳಿಂದ ನಿರ್ಮಿಸಲಾದ ಈ ಪ್ರಥಮ ಮಾನವ ನಿರ್ಮಿತ ಫೈಬರ್ ಉತ್ಪನ್ನದಲ್ಲಿ ಕ್ರಾಂತಿ ಆರಂಭವಾಯಿತು.

1930: ಸಾಹಿತಿ ಹಾಲಾಡಿ ಮಾರುತಿರಾವ್ ಜನನ.

1904: ಖ್ಯಾತ ಉದ್ಯಮಿ ಲಾಲ್ ಚಂದ್ ಹೀರಾಚಂದ್ ಜನನ.

1881: ಖ್ಯಾತ ಕಲಾವಿದ ಪಾಬ್ಲೋ ಪಿಕಾಸೋ ಜನ್ಮದಿನ.

1851: ಯುರೇನಸ್ ಗ್ರಹದ ಏರಿಯಲ್ ಮತ್ತು ಅಂಬ್ರಿಯಲ್ ಉಪಗ್ರಹಗಳನ್ನು ವಿಲಿಯಂ ಲಾಸ್ಸೆಲ್ ಪತ್ತೆ ಹಚ್ಚಿದ. `ಏರಿಯಲ್' ಅಂದರೆ ಷೇಕ್ಸ್ ಪೀಯರ್ನ ನಾಟಕ `ದಿ ಟೆಂಪೆಸ್ಟ್' ನಲ್ಲಿ ಬರುವ ದಿಗ್ಬಂಧಿತ `ದೆವ್ವ'. `ಅಂಬ್ರಿಯಲ್' ಹೆಸರು ಅಲೆಗ್ಸಾಂಡರ್ ಪೋಪ್ ನ `ದಿ ರೇಪ್ ಆಫ್ ದಿ ಲಾಕ್'ನಿಂದ ಬಂದಿದೆ.

1827: ವೈಸ್ ರಾಯ್ ಲಾರ್ಡ್ ರಿಪ್ಪನ್ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, October 24, 2009

ಇಂದಿನ ಇತಿಹಾಸ History Today ಅಕ್ಟೋಬರ್ 23

ಇಂದಿನ ಇತಿಹಾಸ

ಅಕ್ಟೋಬರ್ 23


ಎಲ್ಟಿಟಿಇ ಚಟುವಟಿಕೆಗಳಿಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಎಂಡಿಎಂಕೆ ನಾಯಕ ವೈಕೊ (ವಿ.ಗೋಪಾಲಸ್ವಾಮಿ) ಅವರನ್ನು ಚೆನ್ನೈ ನಗರದ ವಾಯವ್ಯ ಭಾಗದಲ್ಲಿನ ಅವರ ನಿವಾಸದಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ಬಂಧಿಸಲಾಯಿತು. ಪ್ರತ್ಯೇಕತಾವಾದ, ನಿಷೇಧಿತ ಸಂಘಟನೆಗೆ ಬೆಂಬಲ ನೀಡಿದ ಆರೋಪದ ಅನ್ವಯ ಪ್ರಕರಣ ದಾಖಲಾಯಿತು.


2014: ಜೈಪುರ: ರಾಜಸ್ಥಾನದ ಬರ್ಮೇರ್ ಜಿಲ್ಲೆಯ ಪಟಾಕಿ ಅಂಗಡಿಯೊಂದರಲ್ಲಿ ನಸುಕಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 7 ಜನ ಮೃತರಾದರು.  ರಾಜಧಾನಿ ಜೈಪುರದಿಂದ 430 ಕಿ.ಮೀ. ದೂರದಲ್ಲಿರುವ ಬರ್ಮೇರ್ ಜಿಲ್ಲೆಯ ಬಲೋಟ್ರದ ಅಂಗಡಿಯೊಂದರಲ್ಲಿ ನಸುಕಿನ 1 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿತು. ದುರಂತ ಸ್ಥಳದಲ್ಲಿ ನಾವು ಈವರೆಗೆ 7 ಶವಗಳನ್ನು ಪತ್ತೆ ಹಚ್ಚಿದ್ದೇವೆ’ ಎಂದು ಬರ್ಮೇರ್ ಜಿಲ್ಲಾ ಪೊಲೀಸ್​ವರಿಷ್ಠಾಧಿಕಾರಿ ಹೇಮಂತ್ ಶರ್ಮಾ ತಿಳಿಸಿದರು. 'ಅಗ್ನಿ ದುರಂತ ಸಂಭವಿಸಿದಾಗ ಈ ಏಳುಮಂದಿ ಅಂಗಡಿಯ ಒಳಗೆ ಸಿಕ್ಕಿಹಾಕಿಕೊಂಡಿದ್ದರೆಂದು ಕಾಣುತ್ತದೆ' ಎಂದು ಶರ್ಮಾ ನುಡಿದರು.

2014: ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ನಿಗದಿಯಾಗಿದ್ದ ತಮ್ಮ ಜಮ್ಮು ಮತ್ತು ಕಾಶ್ಮೀರದ ಪ್ರವಾಹ
ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಬೆಳಗ್ಗೆ ಸಿಯಾಚಿನ್ ನೀರ್ಗಲ್ಲು- ಸಾಲ್ಟೋರೊ ರಿಜ್ ಪ್ರದೇಶದಲ್ಲಿನ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ ಸಮರಭೂಮಿ ಕಾಯುವ ಯೋಧರ ಜೊತೆಗೆ ದೀಪಾವಳಿ ಆಚರಿಸಿದರು. 'ಈ ವಿಶೇಷ ದಿನದಂದು ನಮ್ಮ ಸಾಹಸೀ ಯೋಧರ ಜೊತೆಗೆ ಕಾಲ ಕಳೆಯುವ ಅವಕಾಶ ನನಗೆ ಲಭಿಸಿರುವುದು ನನ್ನ ಸುಯೋಗ' ಎಂದು ಮೋದಿ ಬೆಳಗ್ಗೆಯೇ ಟ್ವೀಟ್ ಮಾಡಿದರು. 'ಎಷ್ಟೇ ಎತ್ತರ ಇರಲಿ, ಎಷ್ಟೇ ಚಳಿ ಇರಲಿ ಅದು ನಮ್ಮ ಯೋಧರನ್ನು ಕಂಗೆಡಿಸುವುದಿಲ್ಲ. ಅವರು ಅಲ್ಲಿ ನಿಂತುಕೊಂಡು ರಾಷ್ಟ್ರದ ಸೇವೆ ಮಾಡುತ್ತಿದ್ದಾರೆ. ನಾವು ನಿಜವಾಗಿಯೂ ಹೆಮ್ಮೆ ಪಡುವಂತೆ ಅವರು ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ನಿಮ್ಮ ಜೊತೆಗಿದ್ದಾರೆ' ಎಂದು ಮೋದಿ ಬರೆದರು. ಅಂದಾಜು 16,000ದಿಂದ 22,000 ಅಡಿಗಳಷ್ಟು ಎತ್ತರದಲ್ಲಿ ಇರುವ ಸಿಯಾಚಿನ್ ನೀರ್ಗಲ್ಲು-ಸಾಲ್ಟೋರೊ ರಿಜ್ ಪ್ರದೇಶವನ್ನು ಭಾರತೀಯ ಸೈನಿಕರು ಪ್ರತಿನಿತ್ಯವೂ ರಕ್ಷಣೆ ಮಾಡುತ್ತಿದ್ದಾರೆ. ವಿರೋಧಿಗಳ ಗುಂಡಿನ ದಾಳಿಗಿಂತಲೂ ಹೆಚ್ಚಾಗಿ ಇಲ್ಲಿನ ಪ್ರತಿಕೂಲ ಹವಾಮಾನ, ನೀರ್ಗಲ್ಲ ಪ್ರವಾಹಕ್ಕೆ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ. 1984ರಿಂದ ಇಲ್ಲಿಯವರೆಗೆ ಅಂದಾಜು 900 ಮಂದಿ ಭಾರತೀಯ ಯೋಧರು ಇಲ್ಲಿ ಅಸು ನೀಗಿದ್ದಾರೆ. ಭಾರತ ಉತ್ತಮ ಮೂಲಸವಲತ್ತು ವ್ಯವಸ್ಥೆ ಮಾಡುತ್ತಿರುವುದರಿಂದ ಈಚಿನ ದಿನಗಳಲ್ಲಿ ಯೋಧರ ಸಾವಿನ ಸಂಖ್ಯೆ ಕ್ಷೀಣಿಸಿದೆ. ವಿಶ್ವದಲ್ಲೇ ಅತ್ಯಂತ ಎತ್ತರದ ಸಮರಭೂಮಿ ಎಂದೇ ಖ್ಯಾತಿ ಪಡೆದಿರುವ ಸಿಯಾಚಿನ್, ಅತ್ಯಂತ ಶೀತ ಹಾಗೂ ದುಬಾರಿ ಸಮರಭೂಮಿ ಕೂಡಾ. ಪಾಕಿಸ್ತಾನದ ಜೊತೆಗೆ ಸಂಯುಕ್ತ ಮಾತುಕತೆ ಪ್ರಕ್ರಿಯೆಗೆ ಅಡ್ಡಿಯಾಗುವ ಎಂಟು ಅಂಶಗಳಲ್ಲಿ ಇದೂ ಒಂದು ಅಂಶವಾಗಿದೆ. ಈ ಎತ್ತರದ ಪ್ರದೇಶದಲ್ಲಿ ಪಾಕಿಸ್ತಾನೀಯರು ಅತಿಕ್ರಮಿಸಿ ಕುಳಿತಲ್ಲಿ ಅವರನ್ನು ಹೊರದಬ್ಬುವುದು ಅತ್ಯಂತ ತ್ರಾಸದ ಕೆಲಸ. ಲಡಾಖ್ ಕಡೆಗೆ ಕಾರಾಕೋರಂ ಕಣಿವೆ ಮೂಲಕ ಮುನ್ನುಗ್ಗಲು ಪಾಕಿಸ್ತಾನ ಪಶ್ಚಿಮದ ಕಡೆಯಿಂದ ಹಾಗೂ ಚೀನಾ ಪೂರ್ವ ಕಡೆಯಿಂದ ಮಾಡುವ ಯತ್ನಗಳನ್ನು ತಡೆಯಲು ಭಾರತದ ಈ ಪ್ರದೇಶದಲ್ಲಿ ತನ್ನ ಸೈನಿಕರನ್ನು ನಿರಂತರವಾಗಿ ನೆಲೆಗೊಳಿಸಿದೆ.
ಮತ್ತೆ ಪಾಕ್ ದಾಳಿ: ಈ ಮಧ್ಯೆ ಪ್ರಧಾನಿ ಅವರ ಸಿಯಾಚಿನ್ ಮತ್ತು ಶ್ರೀನಗರ ಭೇಟಿಗೆ ಮುನ್ನವೇ ಪಾಕಿಸ್ತಾನಿ ಪಡೆಗಳು ಅಂತಾರಾಷ್ಟ್ರೀಯ ಗಡಿಯಾಚೆಯಿಂದ ಮತ್ತೆ ಗುಂಡು ಹಾರಿಸಿದ ಘಟನೆ ಘಟಿಸಿತು. ಪಾಕಿಸ್ತಾನಿ ರೇಂಜರ್​ಗಳು ಸಣ್ಣ ಶಸ್ತ್ರಾಸ್ತ್ರಗಳಿಂದ ಸಾಂಬಾ ಜಿಲ್ಲೆಯ ರಾಮಗಢ ವಿಭಾಗದಲ್ಲಿನ ಬಿಎಸ್​ಎಫ್ ನೆಲೆಯತ್ತ ಗುಂಡು ಮುಂಜಾನೆ 4.10 ಸುಮಾರಿಗೆ ಗುಂಡು ಹಾರಿಸಿದರು ಎಂದು ವರದಿಗಳು ತಿಳಿಸಿದವು.

2014: ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಭೇಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಆಗಮಿಸಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ನರೇಂದ್ರ ಮೋದಿ ಅವರ ರಾಜಭವನ ಕಾರ್ಯಕ್ರಮಗಳಿಂದ ದೂರ ಉಳಿದರು. ಆದರೆ ಶ್ರೀನಗರ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಮೋದಿಯವರಿಗೆ ಅಧಿಕಾರಿಗಳು ನೀಡಿದ ವಿವರಣೆ ಸಂದರ್ಭದಲ್ಲಿ ಅಬ್ದುಲ್ಲಾ ಹಾಜರಿದ್ದರು. ಮೋದಿ ಮತ್ತು ರಾಜ್ಯಪಾಲ ಎನ್.ಎನ್. ವೋಹ್ರಾ ಅವರು ರಾಜಭವನಕ್ಕೆ ತೆರಳಿದಾಗ ಮುಖ್ಯಮಂತ್ರಿ ಒಮರ್ ಅವರು ಗುಪ್ಕರ್ ರಸ್ತೆಯ ತಮ್ಮ ಅತಿ ಭದ್ರತೆಯ ಅಧಿಕೃತ ನಿವಾಸಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿದವು. ಪ್ರಧಾನಿಯವರು ರಾಜಭವನದಲ್ಲಿ ಇತ್ತೀಚಿನ ಪ್ರವಾಹ ಸಂತ್ರಸ್ಥ ಕುಟುಂಬಗಳು ಮತ್ತು ಪ್ರಮುಖ ರಾಜಕೀಯ ಪಕ್ಷಗಳು, ಸಂಘಟನೆಗಳ ನಿಯೋಗಗಳನ್ನು ಭೇಟಿ ಮಾಡಿದರು.
2014: ಮಂಗಳೂರು: ನವಮಂಗಳೂರಿನ ತನ್ನ ಮೂರು ಹಡಗುಗಳ ಜೊತೆಗೆ ಭಾರತೀಯ ಕರಾವಳಿ ಕಾವಲುಪಡೆ ಇನ್ನೊಂದು ಹಡಗು ‘’ಅಮರ್ತ್ಯ’ವನ್ನು ಸೇರ್ಪಡೆ ಮಾಡಿಕೊಂಡಿತು. ಇದರೊಂದಿಗೆ ಕರಾವಳಿ ಕಣ್ಗಾವಲು ಮತ್ತು ಪ್ರಾದೇಶಿಕ ಭದ್ರತೆಗೆ ಇನ್ನಷ್ಟು ಬಲ ಬಂದಿತು. ಕೊಚ್ಚಿ ಶಿಪ್​ಯಾರ್ಡ್ ಲಿಮಿಟೆಡ್​ನಲ್ಲಿ ನಿರ್ಮಿಸಲಾದ 'ಅಮರ್ತ್ಯ’ ಹಡಗು ಅಕ್ಟೋಬರ್ 19ರಂದು ನವಮಂಗಳೂರು ಬಂದರಿಗೆ ಬಂದಿತ್ತು ಎಂದು ಬಂದರು ಟ್ರಸ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿತು.. 50 ಮೀಟರ್ ಉದ್ದದ ಅಮರ್ತ್ಯನೌಕೆಯು 297 ಟನ್ ಸಾಗಣಾ ಸಾಮರ್ಥ್ಯಹೊಂದಿದ್ದು, 35 ಕಿ.ಮೀ. ವೇಗದಲ್ಲಿ ಸಾಗಬಲ್ಲುದು.

2014: ಕ್ವೆಟ್ಟಾ: ಪಾಕಿಸ್ತಾನದ ಕ್ವೆಟ್ಟಾದ ಹಝಾರಾ ಗಂಜಿ ಪ್ರದೇಶದಲ್ಲಿ ಪ್ರಯಾಣಿಕ ಬಸ್ಸೊಂದರ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 9 ಮಂದಿ ಹತರಾದರು. ಅಪರಿಚಿತ ಶಸ್ತ್ರಧಾರಿಗಳು ಪ್ರಯಾಣಿಕ ಬಸ್ಸಿನ ಮೇಲೆ ಗುಂಡು ಹಾರಿಸಿದಾಗ 9 ಮಂದಿ ಗಾಯಗೊಂಡರು. ಅವರ ಪೈಕಿ ಆರು ಮಂದಿ ಆಸ್ಪತ್ರೆಗೆ ಒಯ್ಯುತ್ತಿದ್ದಾಗ ದಾರಿಯಲ್ಲೇ ಮೃತರಾದರು. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತರಾದರು ಎಂದು ಜಿಲ್ಲಾ ಸರಾಯಿಬ್ ಪೊಲೀಸ್ ವರಿಷ್ಠಾಧಿಕಾರಿ ಇಮ್ರಾನ್ ಖುರೇಷಿ ತಿಳಿಸಿದರು. ಬಸ್ಸಿನಲ್ಲಿದ್ದ ಪ್ರಯಾಣಿಕರು ಹಣ್ಣು ಮತ್ತು ತರಕಾರಿ ಖರೀದಿಸಿದ ಬಳಿಕ ಕ್ವೇಟ್ಟಾಕ್ಕೆ ವಾಪಸ್ ಹೊರಟಿದ್ದರು. ಬಸ್ಸಿನಲ್ಲಿ ಇದ್ದವರು ಷಿಯಾ ಮುಸ್ಲಿಮರು ಎಂದು ಅಧಿಕಾರಿಗಳು ತಿಳಿಸಿದರು.
2014: ನವದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ತಾನು ಸ್ಪರ್ಧೆಯಲ್ಲಿ ಇಲ್ಲ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ನವದೆಹಲಿಯಲ್ಲಿ ಪುನರುಚ್ಚರಿಸಿದರು. 'ನನಗೆ ಆಸಕ್ತಿ ಇಲ್ಲ ಎಂದು ನಾನು ಈಗಾಗಲೇ ಸ್ಪಷ್ಟ ಪಡಿಸಿದ್ದೇನೆ. ನಾನು ದೆಹಲಿಯಲ್ಲಿ ಉಳಿಯಲು ಆಸಕ್ತನಾಗಿದ್ದೇನೆ' ಎಂದು ಗಡ್ಕರಿ ಮಾಧ್ಯಮಗಳಿಗೆ ತಿಳಿಸಿದರು. ಭಾರತೀಯ ಜನತಾ ಪಕ್ಷದ ಶಾಸಕರ ಒಂದು ವರ್ಗ ಗಡ್ಕರಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿರುವುದಾಗಿ ಬಂದ ವರದಿಗಳ ಬಗ್ಗೆ ಪ್ರಶ್ನಿಸಿದಾಗ ಗಡ್ಕರಿ ಈ ಪ್ರತಿಕ್ರಿಯೆ ನೀಡಿದರು. ಮಾಜಿ ಸಚಿವ ಸುಧೀರ್ ಮುಂಗಾಂತಿವಾರ ಅವರು ಗಡ್ಕರಿ ಹೆಸರನ್ನು ತೇಲಿಬಿಟ್ಟಿದ್ದರು. 288 ಸದಸ್ಯಬದಲ ಮಹಾರಾಷ್ಟ್ರ ವಿಧಾನಸಭೆಯಲ್ಲಿ 112 ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ್ದು, ಸರ್ಕಾರ ರಚನೆಯ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

2014: ಇಸ್ಲಾಮಾಬಾದ್: ಭಾರತೀಯ ಪಡೆಗಳು ಅಪ್ರಚೋದಿತ ದಾಳಿಯ 'ಮುಸುಕಿನಲ್ಲಿ' ಗಡಿಯಿಂದ 500 ಮೀಟರ್ ಒಳಗಿನ ಸ್ಥಳಗಳಲ್ಲಿ ಬಂಕರ್​ಗಳನ್ನು ನಿರ್ಮಿಸುತ್ತಿವೆ ಎಂದು ಪಾಕಿಸ್ತಾನಿ ವಿದೇಶಾಂಗ ಕಚೇರಿ ಆಪಾದಿಸಿತು. ಇಸ್ಲಾಮಾಬಾದಿನಲ್ಲಿ ವಾರದ ವಿವರಣೆ ಸಂದರ್ಭದಲ್ಲಿ ಮಾಧ್ಯಮ ಮಂದಿಯೊಂದಿಗೆ ಮಾತನಾಡುತ್ತಿದ್ದ ವಿದೇಶಾಂಗ ಕಚೇರಿ ವಕ್ತಾರೆ ತಸ್ನೀಮ್​ ಅಸ್ಲಂ ಅವರು 'ಈ ರೀತಿ ಬಂಕರ್​ಗಳನ್ನು ನಿರ್ಮಿಸುವುದು 2010ರ ಭಾರತ - ಪಾಕ್ ಒಪ್ಪಂದಕ್ಕೆ ವಿರುದ್ಧ' ಎಂದು ಹೇಳಿದುದಾಗಿ ಡಾನ್ ಆನ್​ಲೈನ್ ವರದಿ ಮಾಡಿತು. ಪಾಕಿಸ್ತಾನವು ಈ ರೀತಿ ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿ ಬಂಕರ್ ನಿರ್ಮಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಅಸ್ಲಂ ಹೇಳಿದುದಾಗಿ ವರದಿ ತಿಳಿಸಿತು. 'ಕಾಶ್ಮೀರಿ ಮಂದಿ ಗಡಿ ನಿಯಂತ್ರಣ ರೇಖೆಯ ಆಚೆಗೂ ವಾಸಿಸುತ್ತಿದ್ದಾರೆ. ಪಾಕಿಸ್ತಾನಿ ಪಡೆಗಳು ಯಾವಾಗಲೂ ಅವರ ಸುರಕ್ಷತೆ ಕಡೆಗೆ ಗಮನ ಇಟ್ಟಿರುತ್ತದೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಕಡೆಯಿಂದ ಗುಂಡಿನ ದಾಳಿ ನಡೆದಾಗ ಸೂಕ್ತ ಉತ್ತರ ನೀಡುತ್ತವೆ' ಎಂದು ಗಡಿ ನಿಯಂತ್ರಣ ರೇಖೆಯ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ ಅವರು ಹೇಳಿದರು.

2014: ನಾಗಪುರ: ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಆರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಆತ್ಮಹತ್ಯೆಗೆ ಅಧಿಕಾರಿಗಳ ತಾತ್ಸಾರವೇ ಕಾರಣ ಎಂದು ಸಾಮಾಜಿಕ ಕಾರ್ಯಕರ್ತರು ದೂರಿದರು. ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಪೈಕಿ ನಾಲ್ವರು ಯಾವತ್ಮಲ್ ಜಿಲ್ಲೆಯವರಾಗಿದ್ದರೆ, ತಲಾ ಒಬ್ಬರು ಅಕೋಲ ಮತ್ತು ಅಮರಾವತಿ ಜಿಲ್ಲೆಯವರು ಎಂದು ವಿದರ್ಭ ಜನ ಆಂದೋಲನ ಸಮಿತಿ ಅಧ್ಯಕ್ಷ ಕಿಶೋರ ತಿವಾರಿ ಹೇಳಿದರು. ಈ ಆರೂ ರೈತರ ಆತ್ಮಹತ್ಯೆಗಳು ಅಕ್ಟೋಬರ್ 22ರಂದು ಘಟಸಿವೆ. ತಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ಆಶಯದೊಂದಿಗೆ ಈ ರೈತರು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅತ್ಯುತ್ಸಾಹದಿಂದ ಬಿಜೆಪಿಗೆ ಮತ ನೀಡಿದ್ದರು ಎಂದು ತಿವಾರಿ ನುಡಿದರು. ಸಾಲ, ಹತ್ತಿ ಮತ್ತು ಸೋಯಾಬೀನ್​ಗೆ ಮಾರುಕಟ್ಟೆ ದರ, ಬೆಳೆ ವೈಫಲ್ಯಕ್ಕೆ ಪರಿಹಾರ ಇತ್ಯಾದಿ ವಿಷಯಗಳನ್ನು ಕೈಗೆತ್ತಿಕೊಳ್ಳುವುದಾಗಿ ಭಾರತೀಯ ಜನತಾ ಪಕ್ಷ ಚುನಾವಣಾ ಪ್ರಚಾರ ಕಾಲದಲ್ಲಿ ಭರವಸೆ ನೀಡಿತ್ತು. ಆದರೆ ಅಧಿಕಾರಿಗಳ ತಾತ್ಸಾರ ಮುಂದುವರಿಕೆ ರೈತರನ್ನು ಆತ್ಮಹತ್ಯೆಯತ್ತ ತಳ್ಳಿತು ಎಂದು ತಿವಾರಿ ಹೇಳಿದರು. ವಿದರ್ಭಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಿವಾರಿ ಆಗ್ರಹಿಸಿದರು. ಮುಂಗಾರು ಎರಡು ತಿಂಗಳು ವಿಳಂಬವಾದರೆ, ಸೆಪ್ಟೆಂಬರ್ 15ರ ಬಳಿಕ ಕಡುಬಿಸಿಲು ಬೆಳೆಗಳನ್ನು ತೀವ್ರವಾಗಿ ಬಾಧಿಸಿತು ಎಂದು ಅವರು ವಿವರಿಸಿದರು.
2014: ನವದೆಹಲಿ: ಪರುಪ್ಪಲ್ಲಿ ಕಶ್ಯಪ್ ಮತ್ತು ಕಿಡಂಬಿ ಶ್ರೀಕಾಂತ್ ಅವರು ಈದಿನ ಬಿಡುಗಡೆ ಮಾಡಲಾದ ವಿಶ್ವ ರಾಂಕಿಂಗ್ ಪಟ್ಟಿಯಲ್ಲಿ ತಲಾ ಏಳು ಸ್ಥಾನಗಳನ್ನು ಪಡೆದುಕೊಂಡರು.  ಇದೇ ವೇಳೆಯಲ್ಲಿ ಮಹಿಳಾ ಆಟಗಾರ್ತಿ ಸೈನಾ ನೆಹ್ವಾಲ್ 6ನೇ ಸ್ಥಾನಕ್ಕೆ ಜಿಗಿದರು. ಶ್ರೀಕಾಂತ್ ಈಗ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 16ನೇ ರಾಂಕ್ ಪಡೆದಿದ್ದು, ಸ್ವರ್ಣ ಪದಕ ವಿಜೇತ ಕಶ್ಯಪ್ 21ನೇ ಸ್ಥಾನ ಗಳಿಸಿದರು. ಮಹಿಳಾ ಕ್ರೀಡಾಪಟು ಪಿ.ವಿ. ಸಿಂಧು ಹಿಂದಿನ ದಿನ ಪ್ಯಾರಿಸ್ನಲ್ಲಿ ಫ್ರೆಂಚ್ ಓಪನ್ ಸೂಪರ್ಸೀರೀಸ್ ಓಪನಿಂಗ್ ಪಂದ್ಯದಲ್ಲಿ ಸೋತಬಳಿಕ 10ನೇ ಸ್ಥಾನದಲ್ಲಿ ಉಳಿದರು.

2008: ಶ್ರೀಹರಿಕೋಟಾದಿಂದ ಅಕ್ಟೋಬರ್ 22ರಂದು ಉಡಾವಣೆಗೊಂಡ ದೇಶದ ಮಾನವರಹಿತ ಗಗನನೌಕೆ `ಚಂದ್ರಯಾನ-1' ಉತ್ತಮವಾಗಿ ಕಾರ್ಯನಿರ್ವಹಿಸಿ, ಭೂಮಿಯ ಸುತ್ತಲಿನ ಕಕ್ಷೆಗಳಲ್ಲಿ ಪರಿಭ್ರಮಣ ಪೂರ್ಣಗೊಳಿಸಿತು ಎಂದು ಹಿರಿಯ ಬಾಹ್ಯಾಕಾಶ ಅಧಿಕಾರಿಯೊಬ್ಬರು ಬೆಂಗಳೂರಿನಲ್ಲಿ ಪ್ರಕಟಿಸಿದರು. `ಗಗನನೌಕೆಯು ಉತ್ತಮ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಇದು ಪ್ರತಿ ಆರೂವರೆ ಗಂಟೆಗಳಿಗೊಮ್ಮೆ ದೀರ್ಘ ವೃತ್ತಾಕಾರದ ಕಕ್ಷೆಗಳಲ್ಲಿ ಸುತ್ತುತ್ತಿದ್ದು ಈಗಾಗಲೇ ನಾಲ್ಕು ಸುತ್ತುಗಳನ್ನು ಮುಗಿಸಿದೆ'' ಎಂದು ಅವರು ಹೇಳಿದರು.

2008: ರಾಜಸ್ಥಾನದ ಭರತ್ ಪುರದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಮಕ್ಕಳು, ಆರು ಮಹಿಳೆಯರು ಸೇರಿದಂತೆ 27 ಮಂದಿ ಮೃತರಾದರು.

2008: ಎಲ್ಟಿಟಿಇ ಚಟುವಟಿಕೆಗಳಿಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಎಂಡಿಎಂಕೆ ನಾಯಕ ವೈಕೊ (ವಿ.ಗೋಪಾಲಸ್ವಾಮಿ) ಅವರನ್ನು ಚೆನ್ನೈ ನಗರದ ವಾಯವ್ಯ ಭಾಗದಲ್ಲಿನ ಅವರ ನಿವಾಸದಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ಬಂಧಿಸಲಾಯಿತು. ಪ್ರತ್ಯೇಕತಾವಾದ, ನಿಷೇಧಿತ ಸಂಘಟನೆಗೆ ಬೆಂಬಲ ನೀಡಿದ ಆರೋಪದ ಅನ್ವಯ ಪ್ರಕರಣ ದಾಖಲಾಯಿತು.

2008: ಕಾರ್ಮಿಕ ಹಾಗೂ ಸಾಮಾಜಿಕ ವ್ಯವಹಾರಗಳ ಸಚಿವ ಮಹಮೂದ್ ಮೊಹಮ್ಮದ್ ಅಲ್-ರಧಿ ಅವರನ್ನು ಗುರಿಯಾಗಿಟ್ಟು ಬಾಗ್ದಾದಿನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 13ಕ್ಕೂ ಹೆಚ್ಚು ಜನರು ಮೃತರಾದರು. ಕೂದಲೆಳೆಯಷ್ಟು ಅಂತರದಲ್ಲಿ ಸಚಿವರು ಪಾರಾದರು.

2007: ಡೊಳ್ಳು ಕುಣಿತ, ಕೋಲಾಟ, ವೈವಿಧ್ಯಮಯ ರೂಪಕ ವಾಹನಗಳನ್ನು ಒಳಗೊಂಡ ಆಕರ್ಷಕ ಮೆರವಣಿಗೆಯೊಂದಿಗೆ ಐತಿಹಾಸಿಕ ಕಿತ್ತೂರಿನಲ್ಲಿ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಾಯಿತು. ಬೈಲಹೊಂಗಲದ ವೀರರಾಣಿ ಚನ್ನಮ್ಮನ ಸಮಾಧಿಯಿಂದ ಹೊರಟು ಕಿತ್ತೂರು ತಲುಪಿದ ವಿಜಯ ಜ್ಯೋತಿಯನ್ನು ಜನಸಾಗರದ ಮಧ್ಯೆ ಸಂಸದ ಸುರೇಶ ಅಂಗಡಿ ಬರಮಾಡಿಕೊಂಡರು. ಬೆಳಗ್ಗೆ ಚನ್ನಮ್ಮನ ತವರೂರಾದ ಕಾಕತಿ ಗ್ರಾಮದಲ್ಲಿ ಸಹ ಚನ್ನಮ್ಮ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.

2007: ಉನ್ನತ ಶಿಕ್ಷಣದಲ್ಲಿ ಖಾಸಗಿ ವಲಯದ ಮುಕ್ತ ಪ್ರವೇಶಕ್ಕಾಗಿ ರಾಜಸ್ಥಾನ ಸರ್ಕಾರವು ಜೈಪುರ ರಾಷ್ಟ್ರೀಯ ವಿಶ್ವವಿದ್ಯಾಲಯ, ಅಮಿಥಿ ವಿಶ್ವವಿದ್ಯಾಲಯ ಜೈಪುರ, ಸಿಂಘಾನಿಯಾ ವಿಶ್ವ ವಿದ್ಯಾಲಯ ಝುಂಝುನು ಮತ್ತು ಸರ್ ಪದ್ಮಪತ್ ವಿಶ್ವವಿದ್ಯಾಲಯ ಉದಯಪುರ- ಈ ನಾಲ್ಕು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡಿತು.

2007: ಸರ್ಕಾರಿ ನೌಕರರು ನಿವೃತ್ತಿ ವೇತನ ಪಡೆಯಲು ಇರುವ ಕನಿಷ್ಠ ಅರ್ಹತಾ ಸೇವೆ ಹಾಗೂ ಪಿಂಚಣಿ ಸೌಲಭ್ಯಗಳನ್ನು ಲೆಕ್ಕ ಹಾಕಲು ಜಾರಿ ಇರುವ ನಿಯಮವನ್ನು ಪರಿಷ್ಕರಿಸಿ ಸರ್ಕಾರವು ಆದೇಶ ಹೊರಡಿಸಿತು. ಅದರಂತೆ ನಿವೃತ್ತಿ ಸೌಲಭ್ಯ ಪಡೆಯಲು ಅಗತ್ಯವಿರುವ ಕನಿಷ್ಠ ಅರ್ಹತಾ ಸೇವೆಯ ನಿಬಂಧನೆಯನ್ನು 15 ವರ್ಷಗಳಿಂದ 10 ವರ್ಷಗಳಿಗೆ ಇಳಿಸಲಾಯಿತು. ಈ ಮೊದಲು ಜಾರಿಯಲ್ಲಿದ್ದ ಇದೇ ಪದ್ಧತಿಯನ್ನು ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಬದಲಾಯಿಸಿತ್ತು. ಇದನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿತ್ತು.

2007: ಭಾರತ-ಭೂತಾನ್ ಗಡಿ ಬಳಿಯ ತಮಲ್ಪುರ ಸೇನಾ ಶಿಬಿರದಲ್ಲಿ ಒಟ್ಟು 33 ಉಗ್ರಗಾಮಿಗಳು ಸೇನಾ ಮತ್ತು ಪೊಲೀಸ್ ಆಡಳಿತದ ಮುಂದೆ ಶರಣಾಗತರಾದರು. ಶರಣಾಗತರಲ್ಲಿ 31 ಉಲ್ಫಾ ಮತ್ತು ಇಬ್ಬರು ಕರ್ಬಿ ಉಗ್ರಗಾಮಿಗಳು. ಮೂರು ವರ್ಷಗಳಲ್ಲಿ ನಡೆದ ಅತಿ ಹೆಚ್ಚಿನ ಉಗ್ರರ ಶರಣಾಗತಿ ಇದು. ಕೇಂದ್ರ ಮತ್ತು ದಕ್ಷಿಣ ಅಸ್ಸಾಮಿನಲ್ಲಿ ಪ್ರಬಲರಾಗಿದ್ದ ಈ ಉಗ್ರರ ಶರಣಾಗತಿಯಿಂದ ಉಲ್ಫಾ ಸಂಘಟನೆಗೆ ದೊಡ್ಡ ಹೊಡೆತ ಬಿದ್ದಿತು.

2007: ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿ, ಶಿಕ್ಷಣ ತಜ್ಞ ಹಾಗೂ ದಕ್ಷ ಆಡಳಿತಗಾರ ಎಂಬ ಕಾರಣಕ್ಕೆ ಬ್ರಿಟನ್ನಿನ ವೊಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯವು ಡಾ. ಅಬ್ದುಲ್ ಕಲಾಂ ಅವರಿಗೆ ವಿಜ್ಞಾನ ಕ್ಷೇತ್ರದ ಗೌರವ ಡಾಕ್ಟರೇಟ್ ನೀಡಿತು. ಈದಿನ ಸಂಜೆ ಲಂಡನ್ನಿನ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕುಲಪತಿ, ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರು 76 ವರ್ಷ ವಯಸ್ಸಿನ ಕಲಾಂ ಅವರನ್ನು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ಇದು ಕಲಾಂ ಅವರಿಗೆ ದೊರಕಿದ 33ನೇ ಗೌರವ ಡಾಕ್ಟರೇಟ್ ಪದವಿ. ಇದುವರೆಗೆ ಭಾರತ ಮತ್ತು ಇತರ ಅನೇಕ ದೇಶಗಳ ವಿಶ್ವವಿದ್ಯಾಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಅವರ ಜ್ಞಾನ ಮತ್ತು ಸೇವೆಯನ್ನು ಗೌರವಿಸಿವೆ.

2007: ಬಾಂಡ್ ಕಾದಂಬರಿಯ ಲೇಖಕ ಇಯಾನ್ ಫ್ಲೆಮಿಂಗ್ ಅವರ ನೂರನೇ ಜನ್ಮ ದಿನಾಚರಣೆ (1908-2008) ಅಂಗವಾಗಿ ಹೊಸ ಅಂಚೆ ಚೀಟಿಗಳನ್ನು ಈದಿನ ಬಿಡುಗಡೆ ಮಾಡಲಾಯಿತು. ಬ್ರಿಟನ್ನಿನ ಪತ್ರಗಳ ಮೇಲೆ ಇನ್ನು ಮುಂದೆ ಬಾಂಡ್ ಕಾದಂಬರಿಯ ಪ್ರಮುಖ ಕಥೆಗಳ ನಾಯಕನ ಚಿತ್ರ ರಾರಾಜಿಸುವುದು.

2007: ಬೆಂಗಳೂರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿ ಚಿಟ್ಟೆ ಉದ್ಯಾನ ನಿರ್ಮಾಣಕ್ಕೆ ಜಮೀನು ಸ್ವಾಧೀನ ಪಡಿಸಿಕೊಂಡ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿಯಿತು. ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಜಿಗಣಿಯ ಬೈರಪ್ಪನಹಳ್ಳಿ ಗ್ರಾಮದ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ವಜಾ ಮಾಡಿದರು.

2006: ಹಿರಿಯ ಸಾಹಿತಿ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರ ಕಯ್ಯಾರ ಕಿಂಞಣ್ಣ ರೈ ಅವರ ಪತ್ನಿ ಕುಂಞ್ಞೆಕ್ಕ (80) ಅವರು ಬದಿಯಡ್ಕ ಸಮೀಪದ ಪೆರಡಾಲದ ತಮ್ಮ ಸ್ವಗೃಹ `ಕವಿತಾ ಕುಟೀರ'ದಲ್ಲಿ ನಿಧನರಾದರು. ಕುಂಞ್ಞೆಕ್ಕ ಅವರು ಪತಿ ಕಯ್ಯಾರ ಕಿಂಞ್ಞಣ್ಣ ರೈ, ಆರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದರು. ಕಯ್ಯಾರರಿಗೆ ಈ ದಿನವೇ ಕರ್ನಾಟಕ ಸರ್ಕಾರದ `ಏಕೀಕರಣ ಪ್ರಶಸ್ತಿ' ಘೋಷಣೆಯಾಗಿದ್ದು, ಈ ಸಂತೋಷದ ದಿನವೇ ಅವರಿಗೆ ಪತ್ನಿ ವಿಯೋಗದ ದುಃಖ ಎರಗಿ ಬಂದ್ದದು ವಿಪರ್ಯಾಸವೆನಿಸಿತು.

2006: ಕಯ್ಯಾರ ಕಿಂಞಣ್ಣ ರೈ, ಪಾಟೀಲ ಪುಟ್ಟಪ್ಪ ಸೇರಿದಂತೆ ಕರ್ನಾಟಕ ಏಕೀಕರಣ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ 36 ಮಹನೀಯರು ಮತ್ತು ನಾಲ್ಕು ಸಂಘ ಸಂಸ್ಥೆಗಳಿಗೆ `ಏಕೀಕರಣ ಪ್ರಶಸ್ತಿ' ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 48 ಗಣ್ಯರು ಹಾಗೂ ಎರಡು ಸಂಸ್ಥೆಗಳಿಗೆ 2006ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನಿಸಿತು.

1996: ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಶಂಕರ ಸಿಂಗ್ ವಘೇಲ ಅಧಿಕಾರ ಸ್ವೀಕಾರ.

1992: ಕರ್ನಾಟಕದಲ್ಲಿ ಬಂಗಾರಪ್ಪ ನೇತೃತ್ವದ ಸರ್ಕಾರದ ಬಂಡಾಯ ಸಚಿವರ ರಾಜೀನಾಮೆ.

1983: ತಂಬಾಕು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಅರಕಲಗೂಡು ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ರಸ್ತೆಗಳಿಗೆ ತಡೆ ಒಡ್ಡಿದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

1983: ಜಾರ್ಜಿಯಾದಲ್ಲಿ ಅಧ್ಯಕ್ಷ ರೇಗನ್ ಅವರು ಗಾಲ್ಫ್ ಆಡುತ್ತಿದ್ದ ಮೈದಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಐವರನ್ನು ಸೆರೆ ಹಿಡಿದಿದ್ದ ಬಂದೂಕುಧಾರಿ ಶರಣಾಗತನಾದ. ಬಂದೂಕುಧಾರಿಯು ರೇಗನ್ ಅವರನ್ನು ಕೊಲ್ಲುವ ಬೆದರಿಕೆ ಹಾಕಿದ್ದ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದರು.

1980: ಅನಾರೋಗ್ಯ ಕಾರಣ ಸೋವಿಯತ್ ಪ್ರಧಾನಿ ಅಲೆಕ್ಸಿ ಕೊಸಿಗಿನ್ ರಾಜೀನಾಮೆ.

1947: ವಾಷಿಂಗ್ಟನ್ ಯುನಿವರ್ಸಿಟಿ ಮೆಡಿಕಲ್ ಸ್ಕೂಲಿನ ದಂಪತಿ ಕಾರ್ಲ್ ಮತ್ತು ಗೆರ್ಟಿ ಗೋರಿ ಜಂಟಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು. ಈ ಪ್ರಶಸ್ತಿಯನ್ನು ಅವರು ಅರ್ಜೆಂಟೀನಾದ ಬರ್ನಾರ್ಡೊ ಹೌಸ್ಸೆ ಅವರ ಜೊತೆಗೆ ಹಂಚಿಕೊಂಡರು. ಸಕ್ಕರೆಯನ್ನು ಗ್ಲೈಕೋಜೆನ್ ಆಗಿ ಪರಿವರ್ತಿಸುವುದಕ್ಕೆ ಸಂಬಂಧಿಸಿದಂತೆ ಮಾಡಿದ ಸಂಶೋಧನೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತು. ವೈದ್ಯಕೀಯ ಕ್ಷೇತ್ರ ಸಾಧನೆಗೆ ನೀಡಲಾಗುವ ನೊಬೆಲ್ ಪ್ರಶಸ್ತಿಗೆ ಪಾತ್ರರಾದ ಮೊತ್ತ ಮೊದಲ ದಂಪತಿ ಜೋಡಿ ಇದು. ಭೌತ ವಿಜ್ಞಾನದಲ್ಲಿ ಕ್ಯೂರಿ ದಂಪತಿ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ದಂಪತಿ ಜೋಡಿ.

1934: ಅಖಿಲ ಭಾರತ ಕಾಂಗ್ರೆಸ್ ನಾಯಕತ್ವಕ್ಕೆ ಗಾಂಧೀಜಿ ರಾಜೀನಾಮೆ.

1920: ಜಪಾನಿ ಸಂಜಾತೆ ಸಂಶೋಧಕಿ ಟೆಟ್ಸುಯಾ `ಟೆಡ್' ಫ್ಯೂಜಿತಾ (1920-98) ಜನ್ಮದಿನ. ಈಕೆ ಸುಂಟರಗಾಳಿಗಳ ತೀವ್ರತೆಯನ್ನು ಅವುಗಳು ಉಂಟುಮಾಡುವ ಹಾನಿಯ ಆಧಾರದಲ್ಲಿ ಅಳೆಯುವ `ಫ್ಯೂಜಿತಾ ಸ್ಕೇಲ್' ಸಂಶೋಧಿಸಿದವರು.

1900: ಖ್ಯಾತ ಕ್ರಿಕೆಟ್ ಆಟಗಾರ ಡಗ್ಲಾಸ್ ಜಾರ್ಡಿನ್ ಅವರು ಬಾಂಬೆಯ (ಈಗಿನ ಮುಂಬೈ) ಮಲಬಾರ್ ಹಿಲ್ನಲ್ಲಿ ನಿಧನರಾದರು.

1906: ಗೆರ್ ಟ್ರೂಡ್ ಕರೋಲಿನ್ ಎಡೆರ್ಲೆ ಜನ್ಮದಿನ. ಈಕೆ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊತ್ತ ಮೊದಲ ಮಹಿಳೆ.
1920ರ ದಶಕದಲ್ಲಿ ಅಮೆರಿಕದ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಖ್ಯಾತಿ ಪಡೆದಿದ್ದವರು.

1883: ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ (1883-1959) ಜನನ.

Advertisement